Wednesday | July 29, 2026 |

ಕಲ್ಬುರ್ಗಿ ಸಂಸದ ರಾಧಾಕೃಷ್ಣ ಖರ್ಗೆ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ  ಬಂಧನದಲ್ಲಿರುವ ಪಂಜಾಬ್‌ನ ಸ್ವತಂತ್ರ ಸಂಸದ ಅಮೃತ್‌ಪಾಲ್ ಸಿಂಗ್ ಅವರ ಗೈರುಹಾಜರಾತಿ ಗರಿಷ್ಠ  59 ದಿನಗಳನ್ನು ಮೀರಿದೆ  ಎಂದು ಗೈರುಹಾಜರಾತಿ ಸಮಿತಿ ವರದಿ ಮಾಡಿದೆ.

ಲೋಕಸಭೆಯ ಕಲಾಪಗಳಿಗೆ ದೀರ್ಘಾವಧಿ ಗೈರಾಗಿದ್ದ 10 ಸಂಸದರ ಅರ್ಜಿಗಳನ್ನು ಪರಿಶೀಲಿಸಿರುವ ಗೈರುಹಾಜರಾತಿ ಕುರಿತ ಸಮಿತಿಯು  ಸದನದ ಸಭೆಗಳಿಗೆ ಗೈರಾಗಿರುವ  ಸದಸ್ಯರ ಕುರಿತಾಗಿ   ತನ್ನ ಮೂರನೇ ವರದಿಯನ್ನು ಲೋಕಸಭೆಗೆ ಸಲ್ಲಿಸಿದೆ.  2026ರ ಜುಲೈ 23ರಂದು ಈ ವರದಿಯನ್ನು ಸದನಲ್ಲಿ ಮಂಡಿಸಿದೆ.

 

 

ಕಲಬುರ್ಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾಯಿತ ಪ್ರತಿನಿಧಿ ರಾಧಾಕೃಷ್ಣ ದೊಡ್ಡಮನಿ ಅವರು 2025ರ ಡಿಸೆಂಬರ್‌ನಿಂದ
2026ರ ಏಪ್ರಿಲ್‌ವರೆಗೆ ವಿವಿಧ ಹಂತಗಳಲ್ಲಿ ಒಟ್ಟು 64 ದಿನಗಳ ರಜೆ ಕೋರಿ ನಾಲ್ಕು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ತಮ್ಮ ಗೈರುಹಾಜರಿಗೆ ಸ್ವಯಂ ಅನಾರೋಗ್ಯ ಕಾರಣ ಎಂದು ಅವರು ತಿಳಿಸಿದ್ದರು.

ಆದರೆ, ಸಮಿತಿಯ ನಿಯಮದ ಪ್ರಕಾರ ಒಂದೇ ಬಾರಿ 59 ದಿನಗಳಿಗಿಂತ ಹೆಚ್ಚು ಅವಧಿಗೆ ರಜೆ ಶಿಫಾರಸು ಮಾಡಲು ಅವಕಾಶ
ಇಲ್ಲ. ಹೀಗಾಗಿ ರಾಧಾಕೃಷ್ಣ ಅಲರು 64 ದಿನಗಳ ರಜೆಗಾಗಿ ಮನವಿ ಮಾಡಿದ್ದು, ಅವರಿಗೆ ಮೊದಲ ಹಂತದಲ್ಲಿ  59 ದಿನಗಳ
ರಜೆ ಮಾತ್ರ ಶಿಫಾರಸು ಮಾಡಲಾಗಿದೆ.  ಉಳಿದ 5 ದಿನಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

ವರದಿಯ ಪ್ರಕಾರ ರಾಧಾಕೃಷ್ಣ ಅವರಿಗೆ ಕಳೆದ ಡಿಸೆಂಬರ್ 1ರಿಂದ 19ರವರೆಗೆ 19 ದಿನ, ಜನವರಿ 28ರಿಂದ ಫೆಬ್ರುವರಿ
13ರವರೆಗೆ 17 ದಿನ ಹಾಗೂ ಮಾರ್ಚ್ 9ರಿಂದ ಮಾರ್ಚ್ 31ರವರೆಗೆ 23 ದಿನಗಳ ಗೈರುಹಾಜರಿಗೆ ಸಮಿತಿಯ ಅನುಮೋದನೆ
ಶಿಫಾರಸು ಮಾಡಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿ  ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯನಾಗಿರುವ ರಾಧಾಕೃಷ್ಣ ದೊಡ್ಡಮನಿ 2024ರಲ್ಲಿ ಚುನಾವಣೆಯಲ್ಲಿ  ಗೆದ್ದು  ಜೂನ್ 24ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.  ಅನಂತರ ಕೆಲವು ಕಲಾಪಗಳಲ್ಲಿ ಭಾಗವಹಿಸಿ 2025ರ
ಚಳಿಗಾಲದ ಅಧಿವೇಶನ ನಂತರ ಅನರಾಗ್ಯದ ಕಾರಣ ಸತತ ಗೈರು ಹಾಜರಾಗಿರುವುದು ವರದಿಯಿಂದ ಕಂಡು ಬಂದಿದೆ.

ರಾಧಾಕೃಷ್ಣ ದೊಡ್ಡಮನಿ ಅವರು ಹಿಂದಿನಕಲಾಪಗಳಲ್ಲಿ ಹಾಜರಾಗಿ ಮೂರು ಚರ್ಚೆಯಲ್ಲಿ ಭಾಗವಹಿಸಿ 35 ಪ್ರಶ್ನೆಗಳನ್ನು
ಕೇಳಿದ್ದರು. ಕಲ್ಬುರ್ಗಿ ರೈಲ್ವೇ ವಿಭಾಗೀಯ ಕಚೇರಿ ಸೇರಿದಂತೆ ರೈಲ್ವೇ ಮೂಲಸೌಕರ್ಯ, ಜವಳಿ ಪಾರ್ಕ್, ಸಾರಿಗೆ, ಬೌದ್ಧಿಕ ಆಸ್ತಿ
ಹಕ್ಕು, ಕಲಬುರಗಿಯ ಸಮಗ್ರ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡಕೊಂಡಿದ್ದರು.

ಕಳೆದ ಒಂದೂವರೆ ವರ್ಷದಿಂದ ಅನಾರೋಗ್ಯ ಕಾರಣದಿಂದ ಗೈರು ಹಾಜರಾಗಿದ್ದಾರೆ. ಅವರು ಇತ್ತೀಚೆಗೆ ವಿದೇಶದಲ್ಲಿ ಶಸ್ತ್ರಚಿಕಿತ್ಸೆ
ಪಡೆದು ವಾಪಾಸ್ಸಾಗಿದ್ದಾರೆ ಎಂದು ತಿಳಿದುಬಂದಿದೆ.  ಕಾಂಗ್ರೆಸ್ ಅದ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ  ಸರಾಸರಿ ಶೇಕಡ 42 ಹಾಜರಾತಿ ಹೊಂದಿದ್ದಾರೆ.

ಲೋಕಸಭಾ ಸದಸ್ಯನೊಬ್ಬ ದೀರ್ಘ ಕಾಲ ಅಧಿವೇಶನಕ್ಕೆ ಗೈರು ಹಾಜರಾದರೆ ಆತನ ಲೋಕಸಭಾ ಸ್ಥಾನ ಖಾಲಿ ಆಗಿದೆ ಎಂದು
ಘೋಷಿಸಲು ಕಾನೂನಿನಲ್ಲಿ ಅವಕಾಶ ಇದೆ. ಸಂವಿಧಾನ ವಿಧಿ 101 ರ ಪ್ರಕಾರ ಲೋಕಸಭಾ ಸ್ಥಾನ ಖಾಲಿ ಆಗಿದೆ ಎಂದು ಘೋಷಿಸಲು
ಅವಕಾಶ ಇದೆ. ಅನುಮತಿ ಪಡೆಯದೇ 60 ದಿನಗಳಿಗಿಂತ ಹೆಚ್ಚು ದಿನ ಸತತ ಗೈರು ಹಾಜರಾದಾಗ ಇಂತಹ ಪರಿಸ್ಠಿತಿ ನಿರ್ಮಾಣ
ಆಗುತ್ತದೆ. ಲೋಕಸಭಾ ಸ್ಥಾನ ತನ್ನಿಂಗ ತಾನೇ (automatically) ಖಾಲಿ ಆಗುವುದಿಲ್ಲ. ಸದನ ಈಗ್ಗೆ ತೀರ್ಮಾನ
ಕೈಗೊಳ್ಳಬೇಕು. ಈ ಬಗ್ಗೆ, ಅನಿವಾರ್ಯವಾದರೆ ಮತದಾನ ಕೂಡ ನಡೆಸಬಹುದು. ಸ್ಛಾನ ಖಾಲಿ ಆದ ಆರು ತಿಂಗಳೊಳಗೆ
ಮರು ಚುನಾವಣೆ ನಡೆಸಬಹುದು.

 

ಇದೇ ವರದಿಯಲ್ಲಿ ಪಂಜಾಬ್ ರಾಜ್ಯದ ಖಡೂರ್ ಸಾಹಿಬ್ ಲೋಕಸಭಾ ಕ್ಷೇತ್ರದ ಸಂಸದ ಅಮೃತ್‌ಪಾಲ್ ಸಿಂಗ್ ಅವರ
ಅರ್ಜಿಯೂ ಉಲ್ಲೇಖಗೊಂಡಿದೆ. ಅವರು ಒಟ್ಟು 60 ದಿನಗಳ ರಜೆ ಕೋರಿದ್ದು, ಅದರಲ್ಲಿ 2025ರ ಆಗಸ್ಟ್‌ನಲ್ಲಿ ಜೈಲು
ಬಂಧನ (Detention) ಹಾಗೂ ನಂತರದ ಅವಧಿಯಲ್ಲಿ ಕಲಾಪಗಳಿಗೆ ಗೈರಾಗಿದ್ದುದನ್ನು ಕಾರಣವಾಗಿ ತಿಳಿಸಿದ್ದಾರೆ.

ಸಮಿತಿಯು ನಿಯಮಾನುಸಾರ ಅವರಿಗೆ ಸಹ ಮೊದಲ ಹಂತದಲ್ಲಿ 59 ದಿನಗಳ ರಜೆ ಮಾತ್ರ ಶಿಫಾರಸು ಮಾಡಿದೆ.  ಉಳಿದ
ಒಂದು ದಿನಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದೆ. ಖಡೂರ್ ಸಾಹಿಬ್ ಲೋಕಸಭಾ ಕ್ಷೇತ್ರದ ಸ್ವತಂತ್ರ ಸಂಸದ ಹಾಗೂ ವಾರಿಸ್ ಪಂಜಾಬ್ ದೇ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಪ್ರಸ್ತುತ ಅಸ್ಸಾಂ ರಾಜ್ಯದ ಡಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

2023ರಿಂದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಅಸ್ಸಾಂ ರಾಜ್ಯದಲ್ಲಿ ಬಂಧನದಲ್ಲಿದ್ದ ಅವರ ಎನ್‌ಎಸ್‌ಎ ಅವಧಿ
2026ರ ಏಪ್ರಿಲ್‌ನಲ್ಲಿ ಮುಕ್ತಾಯಗೊಂಡ ಬಳಿಕ, ಪಂಜಾಬ್ ಪೊಲೀಸರು 2023ರ ಅಜ್ನಾಲಾ ಪೊಲೀಸ್ ಠಾಣೆ ದಾಳಿ ಪ್ರಕರಣದಲ್ಲಿ
ಅವರನ್ನು ಮರುಬಂಧಿಸಿದ್ದರು. ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಪ್ರಕರಣದ  ವಿಚಾರಣೆ ಮುಂದುವರಿದಿದೆ.

ಅಮೃತ್‌ಪಾಲ್ ಸಿಂಗ್ ವಿರುದ್ಧ ಅಜ್ನಾಲಾ ಪೊಲೀಸ್ ಠಾಣೆ ದಾಳಿ ಪ್ರಕರಣದಲ್ಲಿ ಕೊಲೆ ಯತ್ನ, ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ
ಅಡ್ಡಿ, ಅಪರಾಧ ಸಂಚು, ಸರ್ಕಾರಿ ಆಸ್ತಿಗೆ ಹಾನಿ ಮತ್ತು ಜೀವ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ನ್ಯಾಯಾಲಯ
ಆರೋಪಗಳನ್ನು ಹೊರಿಸಿದೆ.ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ನಡುವೆ, ಸೆರೆಮನೆಯಲ್ಲಿ ಬಂಧಿಯಾಗಿ ಲೋಕಸಭೆ ಕಲಾಪಗಳಿಗೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಮೃತ್‌ಪಾಲ್ ಸಿಂಗ್ ರಜೆ ಕೋರಿದ್ದರು.

ಜೈಲು ಬಂಧನವನ್ನು ಪರಿಗಣಿಸಿದ ಲೋಕಸಭೆಯ ಸದನದ ಸಭೆಗಳಿಗೆ ಸದಸ್ಯರ ಗೈರುಹಾಜರಾತಿ ಕುರಿತ ಸಮಿತಿ ಅವರಿಗೆ 60 ದಿನಗಳ ಮನವಿಯಲ್ಲಿ ನಿಯಮಾನುಸಾರ ಮೊದಲ ಹಂತದಲ್ಲಿ 59 ದಿನಗಳ ರಜೆ ಶಿಫಾರಸು ಮಾಡಿದೆ. ಜಾಮೀನು ಮತ್ತುಪರೊಲ್ ಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ನ್ಯಾಯಾಲಯ ಮನವಿಯನ್ನು ಪುರಸ್ಕಾರ ಮಾಡಿಲ್ಲ.

ಗೈರುಹಾಜರಾತಿ ಸಮಿತಿಯ ವರದಿಯಲ್ಲಿ ಅನಾರೋಗ್ಯ, ಕ್ಷೇತ್ರದ ಉಪಚುನಾವಣೆ ಹಾಗೂ ಇತರೆ ಕಾರಣಗಳಿಂದ ಗೈರಾಗಿದ್ದ
ಒಟ್ಟು 10 ಸಂಸದರ ಅರ್ಜಿಗಳನ್ನು ಪರಿಶೀಲಿಸಿದೆ. ರಾಧಾಕೃಷ್ಣ ಮತ್ತು ಅಮೃತ್‌ಪಾಲ್ ಸಿಂಗ್ ಅವರ ಪ್ರಕರಣಗಳಲ್ಲಿ,
ನಿಯಮಾನುಸಾರ 59 ದಿನಗಳ ಗರಿಷ್ಠ ಮಿತಿಯನ್ನು ಅನ್ವಯಿಸಿರುವುದು ಗಮನಾರ್ಹವಾಗಿದೆ.

ಸಹಕಾರ ಹಾಗೂ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ ಮೊಹೋಲ್ ಅವರಿಗೆ ಅನಾರೋಗ್ಯ ಕಾರಣಕ್ಕಾಗಿ 23
ದಿನಗಳ ರಜೆ ಮಂಜೂರಾಗಿದೆ.ಅನಾರೋಗ್ಯ ಕಾರಣಕ್ಕಾಗಿ ಕಿರಣ್ ನಾಮದೇವ್ ಅವರಿಗೆ 36 ದಿವಸ, ಸುದೀಫ್ ಬಂಡೋಪಾದ್ಯಾಯ ಮತ್ತು ಡಾ. ಶಿವಪಾಲ್ ಸಿಂಗ್ ಪಟೇಲ್ ಅವರಿಗೆ ತಲಾ 19 ದಿವಸ ರಜೆ ಮಂಜೂರಾಗಿದೆ.

ಲೋಕಸಭೆಯ ನಿಯಮಗಳ ಪ್ರಕಾರ, ಯಾವುದೇ ಸದಸ್ಯರು ದೀರ್ಘಾವಧಿ ಕಲಾಪಗಳಿಗೆ ಗೈರಾಗಬೇಕಾದರೆ ಸದನದ ಅನುಮತಿ
ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಸದಸ್ಯರ ಅರ್ಜಿಗಳನ್ನು ಪರಿಶೀಲಿಸಿ ಶಿಫಾರಸು ಮಾಡುವ ಹೊಣೆಗಾರಿಕೆಯು ಗೈರುಹಾಜರಾತಿ ಸಮಿತಿ ಮೇಲಿದೆ.

Hot this week

ಪ್ರವಾಸೋದ್ಯಮ ಆದಾಯ; ಲಕ್ಷಾಂತರ ರುಪಾಯಿ ಜಿಎಸ್‌ಟಿ ಕಟಾಯಿಸದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಸಾರ್ವಜನಿಕವಾಗಿ ನಿಧಿ ಬಹಿರಂಗವಾಗಿಲ್ಲವೇಕೆ?

ಬೆಂಗಳೂರು; ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ 2018-19ನೇ ಸಾಲಿನಲ್ಲಿ ಪ್ರವಾಸೋದ್ಯಮದಿಂದ...

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...
Please Scan to make Your Contribution

Topics

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

15ನೇ ಹಣಕಾಸು ಆಯೋಗ; ಗುಜರಾತ್‌ಗೆ ಅತೀ ಕಡಿಮೆ, ಕರ್ನಾಟಕಕ್ಕೆ ಅತೀ ಹೆಚ್ಚು ಮೊತ್ತ ಬಿಡುಗಡೆಗೆ ಬಾಕಿ

ಬೆಂಗಳೂರು; ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ 28 ರಾಜ್ಯಗಳಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ...

ಪೋಕ್ಸೋ; ಕರ್ನಾಟಕದಲ್ಲಿ 21,436 ಪ್ರಕರಣಗಳು ವಿಚಾರಣೆಗೆ ಬಾಕಿ, ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.48ರಷ್ಟು ಹೆಚ್ಚಳ

ಬೆಂಗಳೂರು:  ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೋ...

Related Articles

Popular Categories

error: Content is protected !!