Monday | August 10, 2026 |

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ ನಾಗರಾಜ್ ಅವರ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ.

ಡಾ ಬೂವನಹಳ್ಳಿ ನಾಗರಾಜ್ ಅವರು ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಹೊಂದಿದ್ದಾರೆ ಎಂಬ ಸುಳಿವಿನ ಮೇರೆಗೆ ಲೋಕಾಯುಕ್ತ ಪೊಲೀಸರು 2023ರ ಆಗಸ್ಟ್‌ 17ರಂದು ದಾಳಿ ನಡೆಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು. ಈ ವೇಳೆ  ಅಕ್ರಮ ಗಳಿಕೆ ಆಸ್ತಿಯನ್ನು ಪತ್ತೆ ಹಚ್ಚಲಾಗಿತ್ತು. ಈ ಪ್ರಕರಣದ ಕುರಿತು 3 ವರ್ಷ  ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಇದೀಗ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ.

ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್‌ನ್ನು ನ್ಯಾಯಾಲಯವೂ ಅಂಗೀಕರಿಸಿದೆ. ಹೀಗಾಗಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಅರೋಪದಿಂದ ಡಾ ಬೂವನಹಳ್ಳಿ ನಾಗರಾಜ್ ಅವರು ಆರೋಪ ಮುಕ್ತರಾಗಿರುವುದು ಆದೇಶದಿಂದ ತಿಳಿದು ಬಂದಿದೆ.

ಏನಿದು ಪ್ರಕರಣ?

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್‌ನ ಬೆಂಗಳೂರು ನಗರ ವಿಭಾಗವು ಸ್ವಯಂ ಪ್ರೇರಿತ ಪ್ರಕರಣವನ್ನು (ಅಪರಾಧ ಸಂಖ್ಯೆ 37/2023 ) ದಾಖಲಿಸಿಕೊಂಡಿತ್ತು.

 

 

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಬೂವನಹಳ್ಳಿ ನಾಗರಾಜ್‌ ಅವರ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ಕೆ ಎಂ ಪ್ರದೀಪ್ ಕುಮಾರ್ ಅವರು ತನಿಖೆ ನಡೆಸಿದ್ದರು. 2023ರ ಆಗಸ್ಟ್‌ 14ರಂದು ಮೂಲ ವರದಿ ಸಲ್ಲಿಸಿದ್ದರು. ಈ ವರದಿಯಲ್ಲಿ ಆರೋಪ ಮಾಡಲಾಗಿತ್ತು.
‘ಆರೋಪಿ ಸರ್ಕಾರಿ ನೌಕರನಾಗಿದ್ದು, ಪರಿಶೀಲನಾ ಅವಧಿಯಲ್ಲಿ ತನ್ನ ತಿಳಿದಿರುವ ಆದಾಯದ ಮೂಲಗಳಿಗೆ ಹೋಲಿಸಿದರೆ ಸುಮಾರು ಶೇ.  20 ರಷ್ಟು ಆದಾಯಕ್ಕೂ ಮೀರಿದ   (Disproportionate) ಆಸ್ತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. 2023ರ ಆಗಸ್ಟ್‌ 17ರಂದು ಹಿಂದಿನ ಎಸಿಬಿ ಪೊಲೀಸರು ಮಹಜರ್‌ ಮಾಡಿದ್ದರು. ಆ ಮೂಲಕ ಅವರ ಮನೆ, ಕಚೇರಿ ಹಾಗೂ ಇತರೆ ಸ್ಥಳಗಳಲ್ಲಿ ಶೋಧ (ರೇಡ್) ನಡೆಸಿದ್ದರು,’ ಎಂದು ಮೂಲ ವರದಿಯಲ್ಲಿ ಹೇಳಲಾಗಿತ್ತು.

 

 

ಅದರೀಗ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಎಚ್. ಎಂ. ಆನಂದ್ ಅವರು ತನಿಖೆಯನ್ನು ಪೂರ್ಣಗೊಳಿಸಿದ್ದಾರೆ. ಹಾಗೆಯೇ ನ್ಯಾಯಾಲಯಕ್ಕೆ ‘ಬಿ’ ಅಂತಿಮ ವರದಿ ಸಲ್ಲಿಸಿದ್ದಾರೆ. ಈ ‘ಬಿ’ ಅಂತಿಮ ವರದಿಯನ್ನು ನ್ಯಾಯಾಲಯವೂ ಸ್ವೀಕರಿಸಿದೆ. ಅಲ್ಲದೇ ತನಿಖಾಧಿಕಾರಿಗೆ ನ್ಯಾಯಾಲಯವು ನೋಟೀಸ್‌ ಜಾರಿ ಮಾಡಿತ್ತು. ಆ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಮಾಹಿತಿ ನೀಡಿದ್ದ ತನಿಖಾಧಿಕಾರಿಯು 2026ರ ಮಾರ್ಚ್‌ 3ರಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಅಲ್ಲದೇ ‘ಬಿ’ ವರದಿಯನ್ನು ಅಂಗೀಕರಿಸಲು ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ಮೌಖಿಕವಾಗಿ ತಿಳಿಸಿದ್ದರು.

ನಂತರ ತನಿಖಾಧಿಕಾರಿ ಎಚ್. ಎಂ. ಆನಂದ್ ಅವರನ್ನು ಮತ್ತೊಮ್ಮೆ 2026ರ ಮೇ 25ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.  ಅವರ ವಾದವನ್ನು ನ್ಯಾಯಾಧೀಶರು ಆಲಿಸಿದ್ದರಲ್ಲದೇ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ್ದರು. ತನಿಖಾಧಿಕಾರಿಯವರು ‘ಬಿ’ ಅಂತಿಮ ವರದಿಯನ್ನು ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ ತೀರ್ಮಾನ ಹಾಗೂ ವರದಿಯ ಭಾಗ–VIರ 297ನೇ ಪುಟದಲ್ಲಿ ನೀಡಿರುವ ಕಾರಣಗಳು ಸಂಪೂರ್ಣವಾಗಿ ಸಮರ್ಥನೀಯವಾಗಿರುವುದು ಕಂಡುಬಂದಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಒಟ್ಟಾರೆ ದಾಖಲೆಗಳ ಮೌಲ್ಯಮಾಪನದಿಂದ, ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ (Charge Sheet) ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂಬ ತನಿಖಾಧಿಕಾರಿಯ ತೀರ್ಮಾನದಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ,’ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.

 

 

ಆರೋಪಿ ಡಾ. ಬೂವನಹಳ್ಳಿ ನಾಗರಾಜ್ ಅವರ ವಿರುದ್ಧದ ಪ್ರಕರಣದ ಮುಂದಿನ ಎಲ್ಲಾ ಕ್ರಮಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಕೆ. ಎಂ. ರಾಧಾಕೃಷ್ಣ ಅವರು ತೀರ್ಪು ನೀಡಿರುವುದು ಗೊತ್ತಾಗಿದೆ.

ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಡಾ ಬೂವನಹಳ್ಳಿ ನಾಗರಾಜ್ ಅವರು ಮನೆಯಲ್ಲಿ ಇರಲಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕ ನಂತರ ಪುತ್ರನ ಮೂಲಕ ಲೋಕಾಯುಕ್ತ ಪೊಲೀಸರು ಮನೆಯನ್ನು ಸೀಜ್‌ ಮಾಡಿದ್ದರು. ಲೋಕಾಯುಕ್ತ ಎಸ್ ಪಿ ಅಶೋಕ್ ನೇತೃತ್ವದಲ್ಲಿ ದಾಳಿ ಮುಂದುವರೆಸಿದ್ದರು . ಓರ್ವ ಎಸ್ ಪಿ, ಓರ್ವ ಡಿವೈಎಸ್ ಪಿ, ಹಾಗೂ ಮೂವರು ಇನ್ ಸ್ಪೆಕ್ಟರ್ ಗಳ ನೇತೃತ್ವದಲ್ಲಿ ದಾಳಿ ನಡೆದಿತ್ತು.

ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅಡಿಯಲ್ಲಿ ಶೋಧನೆಗೆ ಒಳಪಡಿಸಿತ್ತು. ಈ ವೇಳೆ ಸುಮಾರು 12,26,70, 444 ರು ಅಕ್ರಮ ಗಳಿಕೆ ಆಸ್ತಿಯನ್ನು ಪತ್ತೆ ಹಚ್ಚಲಾಗಿತ್ತು. ವಿಚಾರಣೆಯು ಪೂರ್ಣಗೊಂಡಿರಲಿಲ್ಲ. ಹೀಗಾಗಿ ಆರೋಪಿತರಾಗಿದ್ದ ಡಾ ಬೂವನಹಳ್ಳಿ ನಾಗರಾಜ್ ಅವರು ಸದರಿ ಹುದ್ದೆಯಲ್ಲಿ ಮುಂದುವರೆದಲ್ಲಿ ತಮ್ಮ ಹುದ್ದೆ ಪ್ರಭಾವವನ್ನು ಬಳಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಕ್ಷಿಗಳನ್ನು ನಾಶ ಮಾಡುವ ಹಾಗ ಪ್ರಮುಖ ಸಾಕ್ಷ್ಯಾಧಾರವಾಗುವ ದಾಖಲಾತಿಗಳನ್ನು ತಿರುಚುವ ಸಾಧ್ಯತೆ ಇದೆ ಎಂದು ಅವರನ್ನು ಅಮಾನತುಗೊಳಿಸಲಾಗಿತ್ತು.

 

 

ಲೋಕಾಯುಕ್ತವು ಈ ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಸಿತ್ತು. ಇದನ್ನು ನ್ಯಾಯಾಲಯವೂ ಅಂಗೀಕರಿಸಿತ್ತು. ಹೀಗಾಗಿ ಬೆಂಗಳೂರು ವಿಭಾಗದ ಜಿಲ್ಲಾ ಪಂಚಾಯ್ತಿಯ ಕುಂದುಕೊರತೆ ನಿವಾರಣಾ ಪ್ರಾಧಿಕಾರ ಅವರ ಹುದ್ದೆಯಲ್ಲಿ ಮುಂದುವರೆಯವುದನ್ನು ನಿರ್ಬಂಧಿಸಿದ್ದ ಆದೇಶವನ್ನೂ ಸರ್ಕಾರ ಇದೀಗ ತೆರವುಗೊಳಿಸಿದೆ. 2026ರ ಜುಲೈ 17ರಂದು ಈ ಆದೇಶ ಹೊರಡಿಸಿದೆ.

 

 

ವಿಶೇಷವೆಂದರೇ ಕುಂದುಕೊರತೆ ನಿವಾರಣೆ ಪ್ರಾಧಿಕಾರದಲ್ಲಿ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ  ಡಾ ಬೂವನಹಳ್ಳಿ ನಾಗರಾಜ್ ಅವರು ತುಮಕೂರು ತಾಲೂಕಿನ ಊರುಕೆರೆ ಗ್ರಾಮ ಪಂಚಾಯ್ತಿ, ಮಧುಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ , ಚಿಕ್ಕನಾಯಕನಹಳ್ಳಿ ತಾಲೂಕಿನ ಕೋರಗೆರೆ ಪಂಚಾಯ್ತಿಗಳಿಗೆ ಸಂಬಂಧಿಸಿದ ಮೂರ ಪ್ರತ್ಯೇಕ ದೂರುಗಳ ದೂರರ್ಜಿಗಳನ್ನು ವಿಚಾರಣೆ ನಡೆಸಿದ್ದರೂ ಸಹ ತೀರ್ಪು ನೀಡಿರಲಿಲ್ಲ. ಲೋಕಾಯುಕ್ತ ಶೋಧನೆ ಆರಂಭವಾಗುತ್ತಿದ್ದಂತೆ  ಜಿಲ್ಲಾ ಪಂಚಾಯ್ತಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿ ಹುದ್ದೆಯಿಂದ ಸ್ವಯಂ ಪ್ರೇರಿತವಾಗಿ ದೂರ ಉಳಿದಿದ್ದರು.

ಆ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದರಿಂದ ಅವರು ಪ್ರಾಧಿಕಾರಿಯಾಗಿ  ವಿಚಾರಣೆ ನಡೆಸಿದ್ದರೂ ಸಹ  ತೀರ್ಪನ್ನು ಬಾಕಿ ಇರಿಸಿದ್ದರು. ದಾಳಿ ನಡೆದ ನಂತರ ಸರ್ಕಾರದ ಹಂತದಲ್ಲಿ ಇವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿರಲಿಲ್ಲ. ಅಲ್ಲದೇ ಹಾಲಿ ಇದ್ದ ಅರೆ ನ್ಯಾಯಾಧೀಕರಣದ ಹುದ್ದೆಯಿಂದ ಅಮಾನತು ಕೂಡ ಆಗಿರಲಿಲ್ಲ. ಆದರೂ ಸಹ ನೈತಿಕತೆಯಿಂದ ವರ್ತಿಸಿದ್ದರು. ಇವರ ನಡೆಗೆ ಅಧಿಕಾರಿ ವರ್ಗದಲ್ಲಿಯೂ ಮೆಚ್ಚುಗೆಗೆ ಕಾರಣವಾಗಿತ್ತು.

‘ಲೋಕಾಯುಕ್ತ ಸಂಸ್ಥೆಯ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ನ್ಯಾಯಾಲಯಕ್ಕೆ ಹೋಗಿ ತನಿಖೆಗೆ ಯಾವುದೇ ತಡೆಯಾಜ್ಞೆ ತಂದಿಲ್ಲ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇನೆ. ತನಿಖೆಗೆ ಪ್ರತಿ ಹಂತದಲ್ಲೂ ಸಹಕರಿಸಿದ್ದೇನೆ. ಸತ್ಯಕ್ಕೆ ಕಾಲ ಬೇಕು. ಆದರೆ ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವೂ ನನ್ನಲ್ಲಿತ್ತು. ಹೀಗಾಗಿಯೇ ನಾನು ಯಾವುದೇ ತಡೆಯಾಜ್ಞೆ ತರದೆಯೇ ಲೋಕಾಯುಕ್ತ  ತನಿಖೆ ಎದುರಿಸಿದ್ದೇನೆ,’ ಎನ್ನುತ್ತಾರೆ ಡಾ ಬೂವನಹಳ್ಳಿ ನಾಗರಾಜ್.

Hot this week

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

‘ಅಕ್ರಮ ಗಣಿಗಾರಿಕೆ ಮಾಡಿರುವುದು ಗಮನಕ್ಕೆ ಬಂದಿರಲಿಲ್ಲವೇ?; ಅದಾನಿ ಎಸಿಸಿ ಸಿಮೆಂಟ್ ಪ್ರಕರಣದಲ್ಲಿ ಮಾಹಿತಿ ಕೋರಿದ ಆರ್ಥಿಕ ಇಲಾಖೆ

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ನ ಗಣಿ ಗುತ್ತಿಗೆ ಅವಧಿ...
Please Scan to make Your Contribution

Topics

80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲದ ಹೊರ ಬಾಕಿ; ವಸೂಲಾತಿಯಲ್ಲಿ ವಿಫಲ

ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ...

15ನೇ ಹಣಕಾಸು ಆಯೋಗ;1,764.83 ಕೋಟಿ ಬಳಕೆ ಮಾಡದ ಪಂಚಾಯ್ತಿಗಳು, ನರೇಗಾ ಅನುದಾನವೂ ಅನ್ಯ ಉದ್ದೇಶಕ್ಕೆ ಬಳಕೆ

ಬೆಂಗಳೂರು; ಪ್ರಿಯಾಂಕ್‌ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌  ಸಚಿವರಾಗಿದ್ದ ಸಂದರ್ಭದಲ್ಲೇ ಅದೂ...

ಐಎಎಸ್‌ ಅಧಿಕಾರಿಗಳ ಸಂಘಕ್ಕೆ ಕೋಟಿ ಕೋಟಿ ಅನುದಾನ; ನಿಯಮಬಾಹಿರ ಬಳಕೆ, 9.50 ಕೋಟಿ ವೆಚ್ಚಕ್ಕೆ ದಾಖಲೆಗಳೇ ಇಲ್ಲವೆಂದ ಎಜಿ

ಬೆಂಗಳೂರು; ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳ ಸಂಘಕ್ಕೆ ನೀಡಲಾಗಿದ್ದ ಅನುದಾನವನ್ನು ನಿಯಮಬಾಹಿರವಾಗಿ...

54 ತಾಲೂಕುಗಳಲ್ಲಿ ತೀವ್ರ, 40 ತಾಲೂಕುಗಳಲ್ಲಿ ಮಧ್ಯಮ ಬರ; ಇನ್ನೂ ರಚನೆಯಾಗದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪ ಸಮಿತಿ

ಬೆಂಗಳೂರು; ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಜಿಲ್ಲಾವಾರು, ಪ್ರದೇಶವಾರು...

Related Articles

Popular Categories

error: Content is protected !!