Wednesday | July 15, 2026 |

ಪ್ರವಾಹ ನಿರ್ವಹಣೆಯಲ್ಲಿ ವಿಫಲ; ಟೆಲಿ ಮೆಟ್ರಿಕ್‌ ಉಪಕರಣ, ಟಿವಿ ಸೆಟ್‌ಗಳು ನಿಷ್ಕ್ರೀಯ, ಬಹುಕೋಟಿ ವ್ಯರ್ಥ

ಬೆಂಗಳೂರು;  ಪ್ರವಾಹವನ್ನು ಎದುರಿಸಲು ಮತ್ತು  ನಿರ್ವಹಣೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನೀಡಿದ್ದ ಒಟ್ಟು  ಅನುದಾನದಲ್ಲಿ 1.61 ಕೋಟಿ ರು ಖರ್ಚು ಮಾಡಿದ್ದರೂ ಸಹ ಬೆಂಗಳೂರು ನಗರದಲ್ಲಿ ಪ್ರವಾಹ ಮುನ್ಸೂಚನೆ ಎಚ್ಚರಿಕೆ ಮಾದರಿಯ ಸಿದ್ಧತೆಯನ್ನೇ ಕೈಗೊಂಡಿರಲಿಲ್ಲ.

 

ಅಲ್ಲದೇ ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿಗಳ ಅಡಿಯಲ್ಲಿಯೂ ಸಹ 2022ರ ಫೆಬ್ರುವರಿಯಲ್ಲಿ ಅಳವಡಿಸಿದ್ದ ಟೆಲಿಮೆಟ್ರಿಕ್‌ ನೀರಿನ ಮಟ್ಟದ ಸಂವೇದಕಗಳೂ ಸಹ ಕಾರ್ಯನಿರ್ವಹಿಸುತ್ತಿಲ್ಲ. ಹಾಗೆಯೇ ಮಳೆ ನೀರಿನ ಚರಂಡಿಗಳ ನೀರಿನ ಮಟ್ಟ ಪ್ರದರ್ಶಿಸಲು 65 ಇಂಚಿನ ಟಿ ವಿ ಸೆಟ್‌ಗಳೂ ಸಹ ನಿಷ್ಕ್ರೀಯವಾಗಿದ್ದವು. ಹೀಗಾಗಿ ಒಟ್ಟಾರೆ 5.42 ಕೋಟಿ ರುಪಾಯಿ ವ್ಯರ್ಥವಾಗಿದೆ.

 

2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು ಮಂಡಿಸಿದ್ದ ಕರ್ನಾಟಕ ವಿಪತ್ತು ನಿರ್ವಹಣೆ ಕಾರ್ಯನಿರ್ವಹಣೆ ವರದಿಯು, ಸ್ಮಾರ್ಟ್ ಸಿಟಿಗಳು ಮಳೆ ಪ್ರವಾಹವನ್ನು ಎದುರಿಸಲು ಮುನ್ನೆಚ್ಚರಿಕೆ ವಹಿಸಿರಲಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ.

 

ಈ ವರದಿ ಮಂಡನೆಯಾಗಿ ಮೂರ್ನಾಲ್ಕು ತಿಂಗಳಾದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೃಷ್ಣಬೈರೇಗೌಡ ಅವರು ಚರ್ಚಿಸಿಲ್ಲ ಎಂದು ತಿಳಿದು ಬಂದಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ವ್ಯರ್ಥವಾಯಿತೇ 1.61 ಕೋಟಿ?

 

ಬೆಂಗಳೂರು ನಗರ ಪ್ರವಾಹ ಮಾದರಿ ತಯಾರಿಕೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಧನ ಸಹಾಯ ನೀಡಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಕ ಈ ಯೋಜನೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರಕ್ಕೆ 2019ರಲ್ಲಿ ವಹಿಸಿತ್ತು.  2018-19ರಲ್ಲಿ 2.30 ಕೋಟಿ ಮತ್ತು 2019-20ರಲ್ಲಿ 1.74 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು.

 

ಬಿಬಿಎಂಪಿ ವ್ಯಾಪ್ತಿಯಲ್ಲಿ 16.69 ಲಕ್ಷ ರು. ವೆಚ್ಚದಲ್ಲಿ 25 ಟೆಲಿ ಮೆಟ್ರಿಕ್‌ ಹವಾಮಾನ ಕೇಂದ್ರಗಳು ಮತ್ತು 04 ಅಲ್ಟ್ರಾಸಾನಿಕ್ ನೀರಿನ ಮಟ್ಟದ ಸಂವೇದಕಗಳನ್ನು ಅಳವಡಿಸಿತ್ತು. 2023ರ ಡಿಸೆಂಬರ್‍‌ ಹೊತ್ತಿಗೆ ಈ ಅನುದಾನದ ಪೈಕಿ ಶೇ. 90ರಷ್ಟು ಅಂದರೇ 1.61 ಕೋಟಿಯು ಸಂಬಳಕ್ಕಾಗಿ  ವೆಚ್ಚವಾಗಿದೆ.

 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು ಅನುಷ್ಠಾನ ಮ್ತು ಮೇಲ್ವಿಚಾರಣೆ ಸಂಸ್ಥೆಯಾಗಿದ್ದರೂ ಸಹ ಉಪಕರಣಗಳ ಸ್ಥಾಪನೆಯ ಸ್ಥಳದ ವಿವರಗಳು ಮತ್ತು ಸ್ಥಾಪನೆ ನಂತರ ಉಪಕರಣಗಳ ಮೂಲಕ ಪಡೆದ ದತ್ತಾಂಶಗಳನ್ನು ಹೊಂದಿರಲಿಲ್ಲ. ಈ ಸಂಗತಿಯನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ. ‘ಹೀಗಾಗಿ ಸಂಬಳಕ್ಕಾಗಿ 1.61 ಕೋಟಿ ರು ಖರ್ಚು ಮಾಡಲಾಗಿದ್ದರೂ ಸಹ ಪ್ರವಾಹ ಮುನ್ಸೂಚನೆ ಎಚ್ಚರಿಕೆ ಮಾದರಿಯ ಸಿದ್ಧತೆ ಆಗಿಲ್ಲ. ಈ ಲೋಪಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಬೇಕು,’ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸ್ಸು  ಮಾಡಿದೆ.

 

 

ಹಾಗೆಯೇ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಅನುದಾನದಿಂದ 2.36 ಕೋಟಿ ರು ವೆಚ್ಚದಲ್ಲಿ ನೀರಿನ ಮಟ್ಟ ಸಂವೇದಕಗಳನ್ನು ಸ್ಥಾಪಿಸುವ ಯೋಜನೆಯನ್ನು 2021ರಲ್ಲಿ ಕೈಗೆತ್ತಿಕೊಂಡಿತ್ತು.  1.03 ಕೋಟಿ ರು.ಗಳ ವೆಚ್ಚದಲ್ಲಿ ವಿವಿಧ ಸ್ಥಳಗಳಲ್ಲಿ 105 ನೀರಿನ ಮಟ್ಟದ ಸಂವೇದಕಗಳನ್ನು ಸ್ಥಾಪಿಸಿದೆ.

 

2021ರಲ್ಲಿ ಕಾರ್ಯಾದೇಶ ಪಡೆದಿದ್ದ ಏಜೆನ್ಸಿಗಳು, 2022ರಲ್ಲಿ ನೀರಿನ ಮಟ್ಟ ಸಂವೇದಕಗಳನ್ನು ಸ್ಥಾಪಿಸಿತ್ತು. ಇದಕ್ಕಾಗಿ 0.98 ಕೋಟಿ ಪಾವತಿಸಲಾಗಿತ್ತು ಎಂದು ತೋರಿಸಿದೆ. ಈ ದಾಖಲೆಗಳನ್ನು ಸಿಎಜಿಯು ಪರಿಶೀಲನೆ ಮಾಡುವ ವೇಳೆಯಲ್ಲಿ 2023ರ ಡಿಸೆಂಬರ್‍‌ ಹೊತ್ತಿಗೆ 100 ನೀರಿನ ಮಟ್ಟದ ಸಂವೇದಕಗಳಲ್ಲಿ 49 ಘಟಕಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಅಲ್ಲದೇ ಪ್ರವಾಹ ಪೀಡಿತ ಬೀದಿಗಳಲ್ಲಿ ಸ್ಥಾಪಿಸಲಾದ 5 ನೀರಿನಮಟ್ಟದ ಸಂವೇದಕಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ದತ್ತಾಂಶವು ಲಭ್ಯವಿರಲಿಲ್ಲ ಎಂದು ಸಿಎಜಿ ಪರಿಶೀಲನೆಯ ವೇಳೆ ಬಹಿರಂಗವಾಗಿದೆ.

 

ಹಾಗೆಯೇ ವಾಚ್‌ ಮತ್ತು ವಾರ್ಡ್‌ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಕೆಲವು ಡಬ್ಲ್ಯೂಎಲ್‌ಎಸ್‌ಗಳನ್ನು ಬಿಬಿಎಂಪಿಯು ತೆಗೆದು ಹಾಕಿತ್ತು. ಮತ್ತು ಕೆಲವು ಕಳ್ಳತನವಾಗಿದ್ದವು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದ ನಿರ್ದೇಶಕರು ಸಿಎಜಿಗೆ ಉತ್ತರ ನೀಡಿರುವುದು ಗೊತ್ತಾಗಿದೆ.

 

‘ಇದು ಪ್ರವಾಹದ ಮುನ್ನೆಚ್ಚರಿಕೆ ವ್ಯವಸ್ಥೆ ಬಲಪಡಿಸುವ ಉದ್ದೇಶದ ಮೇಲೆ ಪರಿಣಾಮ ಬೀರಿತು. ಮತ್ತು ಕಾರ್ಯನಿರ್ವಹಿಸದ ಡಬ್ಲ್ಯುಎಲ್‌ಎಸ್‌ ಮೇಲಿನ ವೆಚ್ಚವನ್ನು ನಿಷ್ಫಲವಾಗಿಸಿತು,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ.

 

ಟಿವಿಗಳೆಲ್ಲಿ?

 

ಮಳೆ ನೀರಿನ ಚರಂಡಿಗಳ ನೀರಿನ ಮಟ್ಟವನ್ನು ಪ್ರದರ್ಶಿಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರವು 65 ಇಂಚಿನ  ಒಟ್ಟು 25 ಟಿ ವಿ ಸೆಟ್‌ಗಳನ್ನು 32.66 ಲಕ್ಷ ರು ವೆಚ್ಚದಲ್ಲಿ ಖರೀದಿಸಿತ್ತು.  ಬೆಳಗಾವಿ, ಮಂಗಳೂರು, ಹುಬ್ಬಳ್ಳಿ ಧಾರವಾಡದ  ಸ್ಮಾರ್ಟ್‌ ಸಿಟಿಗಳ ಕಾರ್ಪೋರೇಷನ್‌ಗಳಿಗೆ  3 ಟಿ ವಿ ಗಳು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಧಾರವಾಡ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಸ್ಮಾರ್ಟ್‌ ಸಿಟಿಗಳ ಜಿಲ್ಲಾಧಿಕಾರಿಗಳಿಗೆ 6 ಟಿ ವಿ.ಗಳು, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರ ಕೊಠಡಿಯಲ್ಲಿ 2 ಟಿವಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದಲ್ಲಿ 4 ಟಿ ವಿ ಗಳನ್ನು ಬಳಸಲಾಗುತ್ತಿತ್ತು.

 

 

ಉಳಿದ 10 ಟಿ ವಿ ಘಟಕಗಳು ನಿಷ್ಕ್ರೀಯವಾಗಿ ಬಿದ್ದಿದ್ದವು.  ಹೀಗಾಗಿ 13.06 ಲಕ್ಷ ನಿಷ್ಪಲ ವೆಚ್ಚವಾಗಿದೆ ಎಂದು ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ. ಅಲ್ಲದೇ ಈ ಯೋಜನೆಯು ಬೆಂಗಳೂರು, ಬಿಬಿಎಂಪಿಗೆ ಮೀಸಲಾಗಿದ್ದರೂ ಸಹ ಇತರ ಸ್ಮಾರ್ಟ್‌ ಸಿಟಿಗಳಿಗೆ ಪ್ರದರ್ಶನ ಯುನಿಟ್‌ಗಳನ್ನು ಪೂರೈಸಲು ಕಾರಣಗಳೇನು ಎಂಬ ಬಗ್ಗೆ ಯಾವುದೇ ದಾಖಲೆಗಳಿಂದಲೂ ಕಂಡು ಬಂದಿಲ್ಲ.

 

ವಿಶೇಷ ಎಂದರೇ ಬೆಂಗಳೂರು ಸ್ಮಾರ್ಟ್‌ ಸಿಟಿಗಾಗಿ ಹೊಸ ವೆಬ್‌ ಪೋರ್ಟಲ್‌ ಅಭಿವೃದ್ಧಿಪಡಿಸಿದ ನಂತರ ಬಿಬಿಎಂಪಿಯಲ್ಲಿ ಈ 8 ಪ್ರದರ್ಶನ ಘಟಕಗಳನ್ನು ಸ್ಥಾಪಿಸಲಾಗುವುದು ಮತ್ತು ಸ್ಥಳಾವಕಾಶ, ಇತರ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು  ಬಿಬಿಎಂಪಿಗೆ ಪತ್ರ  ಬರೆದಿದೆ ಎಂದು 2023ರ ಡಿಸೆಂಬರ್‍‌ನಲ್ಲಿ   ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರ ನಿರ್ದೇಶಕರು, ಸಿಎಜಿಗೆ ತಿಳಿಸಿದ್ದಾರೆ.

 

ಕಾರ್ಯನಿರ್ವಹಿಸದ 69 ಉಪಕರಣಗಳು

 

ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿಗಳ ಅಡಿಯಲ್ಲಿ ಕೆಎಸ್‌ಎನ್‌ಡಿಎಂಸಿ ಒಟ್ಟು 1.45 ಕೋಟಿ ವೆಚ್ಚದಲ್ಲಿ 75 ಟೆಲಿ ಮೆಟ್ರಿಕ್‌ ಮಳೆ ಮಾಪಕಗಳನ್ನು ಸ್ಥಾಪಿಸಿದೆ. ಅದೇ ರೀತಿ 29 ಟೆಲಿ ಮೆಟ್ರಿಕ್ ಹವಾಮಾನ ಕೇಂದ್ರಗಳು, 50 ಟೆಲಿ ಮೆಟ್ರಿಕ್ ನೀರಿನ ಸಂವೇದಕಗಳು, 30 ಐ ಪಿ ಕ್ಯಾಮರಾಗಳನ್ನು ಸ್ಥಾಪಿಸಿದೆ. ಆದರೆ ಸಿಎಜಿ ದಾಖಲೆಗಳ ಪರಿಶೀಲನೆ ಪ್ರಕಾರ 184 ಉಪಕರಣಗಳಲ್ಲಿ 69 ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ.

 

ಉಪಕರಣಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಖುದ್ದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ನಿರ್ದೇಶಕರು ಸಹ ಒಪ್ಪಿಕೊಂಡಿದ್ದರು. ಆದರೆ ವಿಪತ್ತು ಸ್ಮಾರ್ಟ್‌ ಸಮಿಟಿಗಳನ್ನು ರಚಿಸುವ ಉದ್ದೇಶಿತ ಗುರಿಯನ್ನು ಸಾಧಿಸಲು ದೋಷಗಳನ್ನು ಸರಿಪಡಿಸಲು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಕೈಗೊಂಡ ಕ್ರಮಗಳ ಕುರಿತು ಸಿಎಜಿಗೆ ವಿವರಿಸಿಲ್ಲ ಎಂದು  ತಿಳಿದು ಬಂದಿದೆ.

 

‘ಯೋಜನೆಗಳ ಅನುಷ್ಠಾನ, ಸ್ಥಾಪಿಸಲಾದ ಉಪಕರಣಗಳ ನಿರ್ವಹಣೆ, ಈ ಉಪಕರಣದಿಂದ ದತ್ತಾಂಶ ಪಡೆಯದಿರುವುದು, ಇವುಗಳು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂದ್ರದ ಅಧಿಕಾರಿಗಳ ನಿರ್ಲಕ್ಷ್ಯವನ್ನು ಇದು ಎತ್ತಿ ತೋರಿಸುತ್ತದೆ. ಇದಲ್ಲದೇ ಈ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಿಲ್ಲ, ನಿರೀಕ್ಷಿತ ಫಲಿತಾಂಶವನ್ನು ಪಡೆದಿಲ್ಲ. ವಿಪತ್ತು ನಿರ್ವಹಣಾ ಚಟುವಟಿಕೆಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಡಿಯಲ್ಲಿ ಹಣವನ್ನು ಮಂಜೂರು ಮಾಡುವುದು, ಬಿಡುಗಡೆ ಮಾಡುವಲ್ಲಿ ಉದಾಸೀನತೆ ಮತ್ತು ನಿರಾಸಕ್ತಿಯನ್ನು ತೋರಿಸುತ್ತದೆ,’ ಎಂದು ಸಿಎಜಿಯು ಅವಲೋಕಿಸಿರುವುದು ಗೊತ್ತಾಗಿದೆ.

 

ಸರ್ಕಾರದ ಮೌನ

 

ಉಪಕರಣಗಳ ವಾರ್ಷಿಕ ನಿರ್ವಹಣಾ ಒಪ್ಪಂದ 2022ರಿಂದ ಪ್ರಾರಂಭವಾಗಿತ್ತು. ಆದರೂ ವಾರ್ಷಿಕ ನಿರ್ವಹಣಾ ಒಪ್ಪಂದ ಅವಧಿಯಲ್ಲಿಯೂ ನೀರಿನ ಮಟ್ಟ ಸಂವೇದಕಗಳು ನಿಷ್ಕ್ರೀಯವಾಗಿದ್ದವು. ಆದರೂ ಸಹ ಸರ್ಕಾರವು ಸಮಯೋಚಿತ ಕ್ರಮ ಕೈಗೊಂಡಿಲ್ಲ.

 

 

ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದಡಿ ಖರ್ಚು ವೆಚ್ಚ ಮಾಡುತ್ತಿದ್ದರೂ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಹೆಚ್ಚಿನ ಸಂಖ್ಯೆಯ ಸೆನ್ಸಾರ್‍‌ಗಳು ಭೌತಿಕವಾಗಿ ಇರಲಿಲ್ಲ. ಆದರೂ ಸಹ ಸರ್ಕಾರದ ಪ್ರತಿಕ್ರಿಯೆಯು ಮೌನವಾಗಿದೆ ಎಂದು ಸಿಎಜಿ ವರದಿಯಲ್ಲಿ ದಾಖಲಿಸಿದೆ.

Hot this week

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!