Tuesday | May 26, 2026 |

ಸಿದ್ದರಾಮಯ್ಯ ವೈಮಾನಿಕ ಪ್ರಯಾಣ; ಎರಡೂವರೆ ವರ್ಷದಲ್ಲಿ 47.38 ಕೋಟಿ ಖರ್ಚು

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನದಿಂದ ಇದುವರೆಗೆ ನಡೆಸಿದ್ದ ವೈಮಾನಿಕ ಪ್ರಯಾಣಕ್ಕಾಗಿ  ಒಟ್ಟಾರೆ 47.38 ಕೋಟಿ ರು ಖರ್ಚಾಗಿದೆ.

 

ವಿಶೇಷವೆಂದರೇ ಅಧಿಕಾರಕ್ಕೆ ಬಂದಿದ್ದ ಕೇವಲ  ಹದಿನಾರು ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ ಸರ್ಕಾರಿ ಬೊಕ್ಕಸದಿಂದ 25.60 ಕೋಟಿ ರು. ವೆಚ್ಚವಾಗಿತ್ತು. ಮತ್ತೊಂದು  ವಿಶೇಷವೆಂದರೇ ಹೊರ ರಾಜ್ಯಗಳಿಗಿಂತಲೂ ರಾಜ್ಯದ ಒಳಗೇ ಅತೀ ಹೆಚ್ಚಿನ ಬಾರಿ ವಿಮಾನ/ಹೆಲಿಕಾಪ್ಟರ್‌  ಮೂಲಕ ಪ್ರಯಾಣ ಮಾಡಿದ್ದಾರೆ. ಈ ಪೈಕಿ ಮೈಸೂರಿನ ಪ್ರಯಾಣವೇ ಸಿಂಹಪಾಲು ಪಡೆದಿದೆ.

 

ಸಿದ್ದರಾಮಯ್ಯ ಅವರು ಜಿಎಂಪಿ ಏರ್‍‌ ಚಾರ್ಟರ್‍‌ ಮೂಲಕವೇ ಅತೀ ಹೆಚ್ಚು ಬಾರಿ ವೈಮಾನಿಕ ಪ್ರಯಾಣ ಬೆಳೆಸಿದ್ದಾರೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನ ಪರಿಷತ್‌ಗೆ ಮಾಹಿತಿ ಒದಗಿಸಿದ್ದಾರೆ.

 

ವಿಧಾನ ಪರಿಷತ್‌ ಸದಸ್ಯ ಎನ್‌ ರವಿಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಎರಡೂವರೆ ವರ್ಷದ ವೈಮಾನಿಕ ಪ್ರಯಾಣದ ವಿವರಗಳನ್ನು ಉತ್ತರದಲ್ಲಿ ಒದಗಿಸಿದ್ದಾರೆ.

 

 

ರಾಜ್ಯಪಾಲರು, ಮುಖ್ಯಮಂತ್ರಿಗಳು, ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಅಧಿಕೃತ ಪ್ರವಾಸಕ್ಕಾಗಿ ವಿಶೇಷ ವಿಮಾನ, ಹೆಲಿಕಾಪ್ಟರ್‍ ಸೇವೆ ಪಡೆಯಲು ಕೆಟಿಪಿಪಿ ಕಾಯ್ದೆಯಿಂದ 4 ಜಿ ವಿನಾಯಿತಿ ನೀಡಲಾಗಿದೆ. ಇದರ ಅನ್ವಯ ಖಾಸಗಿ ಏರ್‍‌ ಚಾರ್ಟ್‌ರ್‍‌ ಸಂಸ್ಥೆಯಾಗಿರುವ ಜಿಎಂಪಿ ಏರ್‍‌ ಚಾರ್ಟರ್ಸ್‌ ಪ್ರೈ ಲಿ ಸೇವೆ ಪಡೆಯಲಾಗಿದೆ ಎಂದು ಸಿದ್ದರಾಮಯ್ಯ ಅವರು ಉತ್ತರ ಒದಗಿಸಿದ್ದಾರೆ.

 

2023-24ರಲ್ಲಿ 12.23 ಕೋಟಿ ರು,

 

 

 

 

2024-25ನೇ ಸಾಲಿನಲ್ಲಿ 21.11 ಕೋಟಿ

 

 

 

 

 

 

 

 

ಮತ್ತು 2025ರ ಏಪ್ರಿಲ್‌ ನಿಂದ ನವೆಂಬರ್‍‌ 2025ರವರೆಗೆ 14.03 ಕೋಟಿ ರು ವೆಚ್ಚವಾಗಿದೆ.

 

 

 

 

 

 

ಸಿದ್ದರಾಮಯ್ಯ ಅವರು  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 16 ತಿಂಗಳಲ್ಲಿ  25.60 ಕೋಟಿ ರು ವೆಚ್ಚವಾಗಿತ್ತು. ಈ ಕುರಿತು ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ದಾಖಲೆ ಪಡೆದು 2025ರ ಫೆಬ್ರುವರಿ 17ರಂದೇ  ವರದಿ ಪ್ರಕಟಿಸಿತ್ತು.

 

ಸಿದ್ದರಾಮಯ್ಯ ವೈಮಾನಿಕ ಹಾರಾಟ; 16 ತಿಂಗಳಲ್ಲಿ 25.60 ಕೋಟಿ ವೆಚ್ಚ, ಮೈಸೂರಿಗೆ 20 ಬಾರಿ ವಿಮಾನದಲ್ಲಿ ಪ್ರಯಾಣ

 

ಬೆಂಗಳೂರಿನಿಂದ ಸರಿಸುಮಾರು 143 ಕಿ ಮೀ ದೂರದಲ್ಲಿರುವ ಮೈಸೂರಿಗೂ ಸಹ 16 ತಿಂಗಳಲ್ಲಿ  20 ಬಾರಿ ವಿಮಾನದಲ್ಲೇ ಪ್ರಯಾಣ ಬೆಳೆಸಿದ್ದರು.

 

 

ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದ ಆರಂಭದ 7 ತಿಂಗಳಲ್ಲೇ 12.16 ಕೋಟಿ ರು.ಗಳನ್ನು ವೈಮಾನಿಕ ಪ್ರಯಾಣಕ್ಕೆ ವೆಚ್ಚವಾಗಿದೆ. 2023ರ ಮೇ 24ರಿಂದ 2023ರ ನವೆಂಬರ್‍‌ 11ರವರೆಗೆ ಒಟ್ಟು 48 ಬಾರಿ ವಿಮಾನ ಬಳಸಿದ್ದಾರೆ.

 

 

 

ನವದೆಹಲಿ, ಗೋವಾ,  ಮೈಸೂರು, ಸುತ್ತೂರು, ಕೊಲ್ಹಾಪುರ, ಬಾರಾಮತಿ, ಹಾಸನ, ಹುಬ್ಬಳ್ಳಿ, ಗುಲ್ಬರ್ಗ, ಬೆಳಗಾವಿ, ಆಲಮಟ್ಟಿ, ಬೇಗಂಪೇಟೆ,  ಪುಣೆ, ದಾವಣಗೆರೆ,  ಚಿತ್ರದುರ್ಗ, ಹಿರಿಯೂರು, ಹೈದರಾಬಾದ್‌, ಕೊಪ್ಪಳ, ಚೆನ್ನೈ, ಬಿಜಾಪುರ, ಬಾಗಲಕೋಟೆ, ಬೀದರ್, ಭಾಲ್ಕಿ, ಕೋಲಾರ, ಶಿರಡಿ, ನರಸೀಪುರ, ಚಿಕ್ಕಬಾಸೂರು, ತಿಂತಿಣಿ, ಕೂಡಲ ಸಂಗಮ, ತಿರುಪತಿ, ಶಿವಮೊಗ್ಗಕ್ಕೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಒಟ್ಟಾರೆ 12,16,69, 365 ರು. ವೆಚ್ಚವಾಗಿದೆ.

 

ಅದೇ ರೀತಿ 2024ರ ಏಪ್ರಿಲ್‌ ನಿಂದ ಆಗಸ್ಟ್‌ ವರೆಗೆ ಕೇವಲ ನಾಲ್ಕೇ ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಮಾನಿಕ ಪ್ರಯಾಣ ಬೆಳೆಸಿದ್ದರು.

 

 

ನಾಲ್ಕು ತಿಂಗಳ ವಿಮಾನ  ಹಾರಾಟಕ್ಕೆ 13.43 ಕೋಟಿ ರು. ವೆಚ್ಚವಾಗಿದೆ.

 

 

 

ಬೆಂಗಳೂರಿನಿಂದ ಮೈಸೂರು, ಮೈಸೂರಿನಿಂದ ಸುತ್ತೂರು, ಮಂಗಳೂರಿನಿಂದ ಮೈಸೂರು, ಚೆನ್ನೈ, ಮಳವಳ್ಳಿ ಮೂಲಕ ಮೈಸೂರು, ಮೈಸೂರಿನಿಂದ ಹುಬ್ಬಳ್ಳಿ, ಹಾಸನದಿಂದ ಮೈಸೂರು, ಮೈಸೂರಿನಿಂದ ಕನಕಗಿರಿ, ಬೈಲಕುಪ್ಪ, ಪಿರಿಯಾಪಟ್ಟಣ ಮಾರ್ಗವಾಗಿ ಮೈಸೂರಿಗೆ ತೆರಳಲು 5,45,33,466 ರು ಖರ್ಚು ಮಾಡಲಾಗಿದೆ.

 

 

 

ಅದೇ ರೀತಿ ವಿಮಾನ ಪ್ರಯಾಣ ರದ್ದಾಗಿದ್ದ ಸಂದರ್ಭದಲ್ಲಿಯೂ ಲಕ್ಷಾಂತರ ರುಪಾಯಿ  ಖರ್ಚಾಗಿದೆ.

 

ಹಿಂದಿನ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರೊಬ್ಬರೇ  18 ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ  ಸರ್ಕಾರಿ ಬೊಕ್ಕಸದ  23.67 ಕೋಟಿ ರು. ಖರ್ಚು ಮಾಡಿದ್ದರು.  ಕಳೆದ 10 ವರ್ಷದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು, ಸಚಿವರ ವೈಮಾನಿಕ ಹಾರಾಟಕ್ಕೆ ಒಟ್ಟಾರೆ 96.65 ಕೋಟಿ ರು. ವೆಚ್ಚವಾಗಿತ್ತು.

 

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 2017-18ರ (ಚುನಾವಣೆ ವರ್ಷ)ಲ್ಲಿ 17,73, 25,113 ರು.ಗಳನ್ನು ವೈಮಾನಿಕ ಹಾರಾಟಕ್ಕೆ ಖರ್ಚು ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರು 2022-23ರ (ಚುನಾವಣೆ ವರ್ಷ)ಲ್ಲಿ 23.67 ಕೋಟಿ ರು. ಖರ್ಚು ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಚುನಾವಣೆ ವರ್ಷದಲ್ಲಿ ವೈಮಾನಿಕ ಹಾರಾಟಕ್ಕೆ ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ 7.25 ಕೋಟಿ ಹೆಚ್ಚಿಗೆ ಖರ್ಚು ಮಾಡಿದ್ದರು.

 

ಅಲ್ಲದೇ ಬಸವರಾಜ ಬೊಮ್ಮಾಯಿ ಅವರು ಹೊರರಾಜ್ಯಗಳಿಗಿಂತಲೂ ರಾಜ್ಯದೊಳಗೇ ಅತಿ ಹೆಚ್ಚು ಬಾರಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು. ಬೆಂಗಳೂರಿನಿಂದ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದಾದ ತುಮಕೂರಿಗೂ ಹೆಲಿಕಾಪ್ಟರ್‌ನಲ್ಲಿ ತೆರಳಿದ್ದರು.

 

ಸಿದ್ದರಾ­ಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 18 ತಿಂಗಳ ಅವಧಿಯಲ್ಲಿ  ವೈಮಾನಿಕ ಹಾರಾಟಕ್ಕೆ 13.07 ಕೋಟಿ ಖರ್ಚು ಮಾಡಿದ್ದರೇ ಬಸವರಾಜ ಬೊಮ್ಮಾಯಿ ಅವರು 18 ತಿಂಗಳಲ್ಲಿ  23.67 ಕೋಟಿ ರು. ವೆಚ್ಚ ಮಾಡಿದ್ದರು.    2019-20ರಲ್ಲಿ 5,80,5,600.00, 2020-21ರಲ್ಲಿ 6,99,89,732.00 ರು, 2021-22ರಲ್ಲಿ 4,31,2,508.00 ರು, 2022-23ರಲ್ಲಿ 24,99,14, 796.00 ರು. ಸೇರಿದಂತೆ ಒಟ್ಟು  38,02,2,730.36 ರು. ಖರ್ಚಾಗಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ. ಈ ಅವಧಿಯಲ್ಲಿ ಬಿ ಎಸ್‌ ಯಡಿಯೂರಪ್ಪ ಅವರೂ ಮುಖ್ಯಮಂತ್ರಿಯಾಗಿದ್ದರು.

 

ಬೆಳಗಾವಿ, ಹುಬ್ಬಳ್ಳಿ, ಗುಲ್ಬರ್ಗಾ, ಮೈಸೂರು, ಕಬಿನಿ, ಕೆಆರ್‌ಎಸ್‌, ಗಜೇಂದ್ರಗಢ, ತಿರುಪತಿ, ಹೊನ್ನಾಳಿ, ವಿಜಯವಾಡ, ಚೆನ್ನೈ, ಹೈದರಾಬಾದ್‌, ಶಿಕಾರಿಪುರ, ರಾಣೆಬೆನ್ನೂರು, ಹಿರೇಕೆರೂರು, ಅಹಮದಾಬಾದ್‌, ಬೀದರ್‌, ಶಿವಮೊಗ್ಗ, ದಾವಣಗೆರೆ, ತುಮಕೂರು, ಶಂಶಬಾದ್‌, ನರಗುಂದ, ಶೃಂಗೇರಿ, ಹರಿಹರಪುರ, ಚಿಕ್ಕನಾಯಕನಹಳ್ಳಿ, ದಾವಣಗೆರೆ, ಬದಾಮಿ, ಮುಧೋಳ, ಮೂಡಬಿದರೆ, ಮುಂಬೈ, ಬೆಳಗಾವಿ, ಆದಿಚುಂಚನಗಿರಿ, ತುಮಕೂರು, ನವದೆಹಲಿ, ಹೊಸದುರ್ಗ, ಹಿರಿಯೂರು, ಚಿತ್ರದುರ್ಗ, ಆನೆಗುಂದಿ, ಗೋವಾ, ಕೊಯಮತ್ತೂರು, ಮಳವಳ್ಳಿ, ಸಿರಿಗೆರೆ, ವಿಜಯಪುರ, ಆಲಮಟ್ಟಿ, ಹೊಸದುರ್ಗ, ಔರಾದ್‌, ಹುಣಸಗಿ, ಕಮಲಾಪುರ, ಕೊಚ್ಚೀನ್‌, ಕೆಆರ್‌ ಪೇಟೆ, ತಿರುಪತಿ, ಮಂಗಳೂರು, ಉಡುಪಿ, ಸಾಣೆಹಳ್ಳಿ, ರಾಯಭಾಗ, ಕೊಪ್ಪಳ, ಬಳ್ಳಾರಿ, ಭದ್ರಾವತಿ, ಜೈಪುರ, ಪಾಂಡವಪುರ, ಮದ್ದೂರು, ಬಿಜಾಪುರ, ಕಾರ್ಕಳ, ಹಂಪಿ, ಹೊಳೆನರಸೀಪುರ, ಮಡಿಕೇರಿಗೆ ವಿಶೇಷ ವಿಮಾನದಲ್ಲಿ ಹಿಂದಿನ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣ ಬೆಳೆಸಿದ್ದರು.

 

ಮುಖ್ಯಮಂತ್ರಿ ವಿಶೇಷ ವಿಮಾನ ಹಾರಾಟ ; 18 ತಿಂಗಳಲ್ಲಿ 23.67 ಕೋಟಿ ಖರ್ಚು

 

2013-14ರಲ್ಲಿ 9,69,50,098 ರು., 2014-15ರಲ್ಲಿ 6,10,40,773 ರು., 2015-16ರಲ್ಲಿ 6,89,45,646 ರು., 2016-17ರಲ್ಲಿ 8,29,04,994 ರು., 2017-18ರಲ್ಲಿ 17,73,25,113 ರು., 2018-19ರಲ್ಲಿ 5,83,14,951 ರು. ಸೇರಿ 5 ವರ್ಷದಲ್ಲಿ ಒಟ್ಟು 54,54,81, 575.00 ರು., ವೆಚ್ಚವಾಗಿತ್ತು.

 

ಬಿಜೆಪಿ ಸರಕಾರದ ಕೊನೆ ಅವಧಿಯಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಸಹ  ಕೇವಲ  ಎಂಟು ತಿಂಗಳಲ್ಲಿ  ವೈಮಾನಿಕ ಹಾರಾಟಕ್ಕೆ  12.77 ಕೋಟಿ ರೂ. ಖರ್ಚು ಮಾಡಿದ್ದರು.  ಚುನಾವಣೆ ಘೋಷಣೆಯಾಗುವ ಮುನ್ನ  ಪಕ್ಷದ ಕಾರ್ಯಕ್ರಮಗಳಿಗಾಗಿ 2013 ಮಾರ್ಚ್‌ನಲ್ಲಿ  ವಿಶೇಷ ವಿಮಾನಕ್ಕಾಗಿ 42,66,815ರೂ. ಪಾವತಿಸಿದ್ದನ್ನು ಸ್ಮರಿಸಬಹುದು.

Hot this week

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...
Please Scan to make Your Contribution

Topics

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!