ಬೆಂಗಳೂರು; ಎಐಸಿಟಿಇ ಮತ್ತು ಯುಜಿಸಿ ನಿಯಮಗಳ ಉಲ್ಲಂಘನೆ ಮಾಡುವ ಮೂಲಕ ನಿಯಮಬಾಹಿರ ಹಾಗೂ ಅಕ್ರಮವಾಗಿ ಸೀಟುಗಳನ್ನು ಹಂಚಿಕೆ ಮಾಡಿ ಪ್ರವೇಶಾತಿ ಮಾಡಿಕೊಂಡಿರುವ ಆರೋಪದ ಮೇರೆಗೆ ಪ್ರತಿಷ್ಠಿತ ಬಿಎಂಎಸ್ ಎಜುಕೇಷನ್ ಟ್ರಸ್ಟ್ ಮತ್ತು ಇದರ ಅಧ್ಯಕ್ಷರು ಮತ್ತು ಟ್ರಸ್ಟಿಯಾಗಿರುವ ರಾಗಿಣಿ ನಾರಾಯಣ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಿಯಮಗಳ ಉಲ್ಲಂಘನೆ ಮಾಡಿ ಅಕ್ರಮವಾಗಿ ಸೀಟು ಹಂಚಿಕೆ ಮಾಡಿ ಕೋಟ್ಯಂತರ ರುಪಾಯಿ ಶುಲ್ಕ ವಸೂಲು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ವಕೀಲ ರಮೇಶ್ ನಾಯಕ್ ಎಂಬುವರು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ನ್ಯಾಯಾಲಯದ ಸೂಚನೆಯಂತೆ ಇದೀಗ ವಿ ವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಎಫ್‌ಐಆರ್‍ನಲ್ಲೇನಿದೆ?
ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‌ಗೆ ಒಳಪಡುವ ಸರ್ಕಾರದ ಅನುದಾನಿತ ಮತ್ತು ಅನುದಾನೇತರ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಬಿಎಂಎಸ್ ಎಸ್ ಶೈಕ್ಷಣಿಕ ಟ್ರಸ್ಟ್‌ನ ಮುಖ್ಯಸ್ಥರು ಮತ್ತು ರಾಗಿಣಿ ನಾರಾಯಣ್ ಅವರು ನಿಯಮಗಳ ಉಲ್ಲಂಘನೆ ಮಾಡಿ ಪ್ರವೇಶ ನೀಡುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯದ (ಸಿವಿಲ್ ನಂಬರ್ 5041/2005) ರಲ್ಲಿ ಆದೇಶವನ್ನು ಪಾಲನೆ ಮಾಡಿಲ್ಲ.
2009ನೇ ಸಾಲಿನಿಂದ ಈ ನಾಲ್ಕುಕಾಲೇಜುಗಳಲ್ಲಿ ನಿಯಮಾವಳಿಗಳ ಪ್ರಕಾರ ಅರ್ಹತಾ ಪಟ್ಟಿಗಳನ್ನು ಪ್ರಕಟಿಸುತ್ತಿಲ್ಲ. ಮತ್ತು ನಿಯಮಗಳನ್ನು ಪಾಲಿಸುತ್ತಿಲ್ಲ. ಮತ್ತು ಪ್ರವೇಶ ಶುಲ್ಕ ಮತ್ತು ಟ್ಯೂಷನ್ ಶುಲ್ಕಗಳ ಕುರಿತು ಈಗಾಗಲೇ ಹೊರಡಿಸಿರುವ ನಿಯಮಗಳ ಪಾಲನೆ ಮಾಡಿಲ್ಲ. ಬಿಎಂಎಸ್ ಶೈಕ್ಷಣಿಕ ಟ್ರಸ್ಟ್‌ಗೆ ಒಳಪಡುವ ನಾಲ್ಕು ಕಾಲೇಜುಗಳು 2021, 2022 ಮತ್ತು 2023ರಲ್ಲಿ ಬಿಇ, ಬಿಇ ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿಯ ಪ್ರಕ್ರಿಯೆ ಮತ್ತು ಟ್ಯೂಷನ್ ಫೀ ಸಂಗ್ರಹಮಾಡಿದೆ. ಎನ್ ಆರ್‍ಐ, ಗಲ್ಫ್, ಮತ್ತು ಫಾರಿನ್ ನ್ಯಾಷನಲ್ ಕೋಟಾಡಗಳಡಿಯಲ್ಲಿ ಸೀಟು ಹಂಚಿಕೆಯ ನಿಯಮಗಳ ಉಲ್ಲಂಘನೆ ಮಾಡಿರುತ್ತಾರೆ ಎಂದು ಎಫ್‌ಐಆರ್‍ನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಬಿಎಂಎಸ್ ಶೈಕ್ಷಣಿಕ ಟ್ರಸ್ಟ್, ಎಐಸಿಟಿಇ ಮತ್ತು ಯುಜಿಸಿ ನಿಯಮಗಳ ಉಲ್ಲಂಘನೆ 2021-22ರಲ್ಲಿ ಅಧಿಸೂಚನೆ ಹೊರಡಿಸಿದೆ. ಯಾವುದೇ ಪ್ರಟಕೆಣೆಗಳನ್ನು ಹೊರಡಿಸದೇ ಅಕ್ರಮವಾಗಿ ಸೀಟುಗಳ ಹಂಚಿಕೆ ಮಾಡಿದೆ. ಮತ್ತು ಕೋಟ್ಯಂತರ ರುಪಾಯಿ ಹಣ ಶುಲ್ಕ ಸಂಗ್ರಹಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಉಚ್ಚ ನ್ಯಾಯಾಲಯವು 2009ರಲ್ಲಿ ಆದೇಶಿಸಿತ್ತು. ಆದರೂ ಸಹ ಆರೋಪಿಗಳು ನಿಯಮಗಳ ಉಲ್ಲಂಘನೆ ಮಾಡಿ ಅಕ್ರಮವಾಗಿ ಪ್ರವೇಶಾತಿ ಮಾಡಿಕೊಂಡಿದ್ದಾರೆ ಎಂದು ಎಫ್‌ಐಆರ್‍ನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಐಪಿಸಿ 1860ರ ಸೆಕ್ಷನ್ 415, 418 ಮತ್ತು 420 ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿರುವುದು ಗೊತ್ತಾಗಿದೆ.
ಬೆಂಗಳೂರಿನ ಪ್ರತಿಷ್ಟಿತ ಬಿಎಂಎಸ್ ಶಿಕ್ಷಣ ದತ್ತಿಯ ನಾಲ್ಕು ಶಿಕ್ಷಣ ಸಂಸ್ಥೆಗಳು, ಇಂಜಿನಿಯರಿಂಗ್ ಸೀಟುಗಳನ್ನು ಅರ್ಹತೆ (ಮೆರಿಟ್) ಆಧಾರದ ಮೇಲೆ ವಿತರಿಸದೇ ಏಜೆಂಟರ ಮೂಲಕ ಅಪಾರ ಪ್ರಮಾಣದಲ್ಲಿ ಹಣ ಪಡೆದು ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಜಿ ಕೆ ಅಸೋಸಿಯೇಟ್ಸ್ ವರ್ಷಗಳ ಹಿಂದೆಯೇ ಪುರಾವೆಗಳ ಸಮೇತ ದೂರು ನೀಡಿತ್ತು.
ಈ ಸಂಬಂಧ ಏಜೆಂಟರುಗಳು ಮತ್ತು ಪ್ರವೇಶಾತಿ ಆಕಾಂಕ್ಷಿಗಳೊಂದಿಗೆ ನಡೆದಿದೆ ಎನ್ನಲಾಗಿರುವ ಸಂಭಾಷಣೆಯ ಧ್ವನಿಮುದ್ರಣ ಮತ್ತು ಶಿಕ್ಷಣ ಸಂಸ್ಥೆಯು ಕಾನೂನುಬಾಹಿರವಾಗಿ ನೀಡಿರುವ ತಾತ್ಕಾಲಿಕ ಪ್ರವೇಶಾತಿ ಪತ್ರವನ್ನೂ ಸಿಸಿಬಿ ಪೊಲೀಸರಿಗೆ ದೂರು ನೀಡಿತ್ತು.
ಎಂಜಿನಿಯರಿಂಗ್ ಸೀಟುಗಳು ಮಾರಾಟ; ಸಾಕ್ಷ್ಯ, ಪುರಾವೆ ಸಮೇತ ದೂರಿದ್ದರೂ ಕ್ರಮಕೈಗೊಳ್ಳದ ಸರ್ಕಾರ
ಅಲ್ಲದೇ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಎಐಸಿಟಿಇ ನಿಗದಿಪಡಿಸಿದ್ದ ಕೊನೆ ದಿನಾಂಕದ ನಂತರ ಸುಮಾರು 85 ವಿದ್ಯಾರ್ಥಿಗಳಿಗೆ ಹಿಂದಿನ ದಿನಾಂಕವನ್ನು (2021ರ ಡಿಸೆಂಬರ್ 31)ದಿನಾಂಕವನ್ನು ನಮೂದಿಸಲಾಗಿತ್ತು.
ಹಾಗೆಯೇ ಪಾರದರ್ಶಕವಾಗಿ ಅರ್ಹತಾ ಪಟ್ಟಿಯನ್ನು ತಯಾರಿಸದೆಯೇ ಗುಪ್ತವಾಗಿ 2022ರ ಫೆಬ್ರುವರಿ-ಮಾರ್ಚ್‌ನಲ್ಲಿ ಅಕ್ರಮವಾಗಿ ಪ್ರವೇಶಾತಿ ನೀಡಲಾಗಿದೆ ಎಂಬ ಕುರಿತು ಪುರಾವೆಗಳನ್ನು ಸಿಸಿಬಿಗೆ ನೀಡಿತ್ತು. ‘ಸರ್ಕಾರ ಅನುಮೋದನೆ ಮತ್ತು ಅನುಮತಿ ಇಲ್ಲದೆಯೇ ಅಪಾರ ಪ್ರಮಾಣದಲ್ಲಿ ವಸೂಲು ಮಾಡುತ್ತಿರುವ ಬೋಧನಾ ಶುಲ್ಕವನ್ನು ಬಿಎಂಎಸ್ ಸಂಸ್ಥೆಯು ಶಿಕ್ಷಣ ದತ್ತಿಯ ಲೆಕ್ಕದಲ್ಲಿ ಕಾನೂನುಬಾಹಿರವಾಗಿ ತೆಗೆದುಕೊಳ್ಳುತ್ತಿದೆ. ಸೀಟು ಹಂಚಿಕೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪುಗಳು, ಎಐಸಿಟಿಯು,ಯುಜಿಸಿ ನಿಯಮಗಳನ್ನು ಪಾಲನೆ ಮಾಡದೇ ಅಪರಾಧ ಎಸಗಲಾಗಿದೆ,’ ಎಂದು ಜಿ ಕೆ ಅಸೋಸಿಯೇಟ್ಸ್ ದೂರಿನಲ್ಲಿ ವಿವರಿಸಿತ್ತು.
ಕ್ಯಾಪಿಟೇಷನ್ ಶುಲ್ಕ ವಸೂಲಿ ಆರೋಪ; ಬಿಎಂಎಸ್‌ಗೆ ನೋಟೀಸ್ ಜಾರಿಗೊಳಿಸಿದ ಶುಲ್ಕ ನಿಯಂತ್ರಣ ಸಮಿತಿ
ಅಲ್ಲದೆ ‘ಇಲ್ಲಿ ಸಾರ್ವಜನಿಕರ ಶೋಷಣೆ ಹಾಗೂ ಮೋಸವಾಗುತ್ತಿದೆ. ಯಾವದೇ ಅರ್ಜಿ ಸಂಖ್ಯೆ,, ಅರ್ಜಿ ಕೊಟ್ಟ ಬಗ್ಗೆ ಹಾಗೂ ಸ್ವೀಕೃತಿ ದಿನಾಂಕ, ಪ್ರವೇಶ ಸಮಿತಿಯ ಅನುಮೋದನೆ ಸಂಖ್ಯೆ, ಮೆರಿಟ್ ಲಿಸ್ಟ್ ಸಂಖ್ಯೆಯನ್ನು ನಮೂದಿಸುತ್ತಿಲ್ಲ. ಹಾಗೆಯೇ ಗುಪ್ತವಾಗಿ , ಕಾನೂನು ಬಾಹಿರವಾಗಿ, ತಾತ್ಕಾಲಿಕ ಪ್ರವೇಶ ಪತ್ರಗಳನ್ನು,, ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಹಾಗೂ ಬೇರೆ ಬೇರೆ ವಿದ್ಯಾರ್ಥಿಗಳಿಂದ, ವಿಭಿನ್ನ ಬೋಧನಾ ಶುಲ್ಕ ವನ್ನು ವಸೂಲಿ ಮಾಡಲಾಗುತ್ತಿದೆ,’ ಎಂದೂ ದೂರಿನಲ್ಲಿ ಆಪಾದಿಸಿತ್ತು.
ಬಿಎಂಎಸ್ ಶಿಕ್ಷಣ ದತ್ತಿ; ಹೆಚ್‌ಡಿಕೆ ತಿರಸ್ಕರಿಸಿದ್ದ ಟ್ರಸ್ಟ್‌ಡೀಡ್ ತಿದ್ದುಪಡಿ ಪ್ರಸ್ತಾವನೆಗೆ ಅನುಮೋದನೆ
ಜೂನ್ 2022 ರಿಂದ ಈ ಶಿಕ್ಷಣ ಸಂಸ್ಥೆಯ ನಾಲ್ಕು ಕಾಲೇಜು ಗಳಲ್ಲಿ ಮಾಡಿದ ಪ್ರವೇಶಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಳ್ಳಬೇಕಿದ್ದ ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಮುಂದಾಗಿಲ್ಲ. ಈ ಪ್ರವೇಶಗಳ ವಿಷಯದಲ್ಲಿ ಕಾನೂನು ಪಾಲನೆಯಾಗದಿದ್ದಲ್ಲಿ ಅಕ್ಷಮ್ಯ ಅಪರಾಧಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ ಎಂದು ದೂರಿನಲ್ಲಿ ಆರೋಪಿಸಿತ್ತು.
ಬಿಎಂಎಸ್ ಟ್ರಸ್ಟ್‌ಡೀಡ್ ತಿದ್ದುಪಡಿ; ಅಧಿವೇಶನದಲ್ಲಿ ಬಹಿರಂಗಗೊಳ್ಳುವ ಮುನ್ನವೇ ಹೊರಗೆಳೆದಿದ್ದು ‘ದಿ ಫೈಲ್’
ಅಕ್ರಮ ಸೀಟು ಮಾರಾಟ ಅಪರಾಧ ಎಸಗಿದ್ದಾರೆ ಎಂದು ದೂರಿರುವ ಜಿ ಕೆ ಅಸೋಸಿಯೇಟ್ಸ್ ಸಂಸ್ಥೆಯು ಪ್ರೊ.ಹೆಚ್ ಎಸ್ ಜಗದೀಶ್, ಬಿಎಂಎಸ್‌ನ ಟ್ರಸ್ಟಿ ರಾಗಿಣಿ ನಾರಾಯಣ, ಅವಿರಾಮ್ ಶರ್ಮಾ, ರವಿವೆಂಕಟೇಸಮ್, ದಯಾನಂದ ಪೈ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಐಎಎಸ್ ಅಧಿಕಾರಿ ಪ್ರದೀಪ್ ಪ್ರಭಾಕರ್, ಸರ್ಕಾರದ ನಾಮನಿರ್ದೇಶಿತ ಟ್ರಸ್ಟಿ, ಬಿಎಂಎಸ್‌ನ ಇಂಜಿನಿಯರಿಂಗ್, ಬಿಎಂಎಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್, ಬಿಎಂಎಸ್ ಆರ್ಕಿಟೆಕ್ಚರ್ ಕಾಲೇಜಿನ ಪ್ರಾಂಶುಪಾಲರನ್ನೂ ಹೆಸರಿಸಿತ್ತು.
ಬಿಎಂಎಸ್ ಖಾಸಗಿ ವಿವಿ; ಮಸೂದೆ ಹಿಂದೆ ನೀತಿ ಭ್ರಷ್ಟಾಚಾರ ಆರೋಪ 3 ತಿಂಗಳಾದರೂ ನಡೆಯದ ಲೋಕಾ ವಿಚಾರಣೆ
ಬಿಎಂಎಸ್ ಟ್ರಸ್ಟ್‌ನ ಜಮೀನುಗಳ ದಾಖಲೆ ನೈಜತೆ ಕುರಿತಾಗಿ ಪರಿಶೀಲನೆಯೂ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರಲಿಲ್ಲ.
ಬಿಎಂಎಸ್ ಟ್ರಸ್ಟ್ ಜಮೀನುಗಳ ದಾಖಲೆ ನೈಜತೆ ಪರಿಶೀಲನೆ; 2 ತಿಂಗಳಾದರೂ ಪಾಲನೆಯಾಗದ ನಿರ್ದೇಶನ
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಇದೀಗ ಬಿಎಂಎಸ್ ಶೈಕ್ಷಣಿಕ ಟ್ರಸ್ಟ್, ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮಹತ್ವ ಪಡೆದುಕೊಂಡಿದೆ.