Friday | April 3, 2026 |

ಬಿಜೆಪಿ ಶಾಸಕ ಕೃಷ್ಣಪ್ಪರಿಂದ ಕಿರುಕುಳ ಆರೋಪ; ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಲಿತ ಕುಟುಂಬ

ಬೆಂಗಳೂರು; ಎರಡು ಎಕರೆ ಜಮೀನಿನಲ್ಲಿ ಕಲ್ಯಾಣ ಮಂಟಪ ಮತ್ತು ಕಚೇರಿ ನಿರ್ಮಾಣಕ್ಕೆ ಜಾಗ ನೀಡಲು ನಿರಾಕರಿಸಿದ ಕಾರಣಕ್ಕೆ ಬಿಜೆಪಿ ಶಾಸಕ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು ದೌರ್ಜನ್ಯ ಮತ್ತು ನಿರಂತರವಾಗಿ ಕಿರುಕುಳಕ್ಕೆ ಬೇಸತ್ತ ದಲಿತ ಕುಟುಂಬವೊಂದು ದಯಾಮರಣಕ್ಕೆ ಮೊರೆ ಹೋಗಿದೆ.

 

ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿಯಿ ಪಿಲ್ಲಗಾನಹಳ್ಳಿ ಗ್ರಾಮದ ದಿವಂಗತ ನಾರಾಯಣಪ್ಪ ಅವರ ಕುಟುಂಬ ಸದಸ್ಯರ ಪೈಕಿ ಎಸ್‌ ಮಂಜುಳ ಎಂಬುವರು ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ದಯಾಮರಣ ನೀಡಬೇಕು ಎಂದು ಕೋರಿ ಮನವಿ ಸಲ್ಲಿಸಿದ್ದಾರೆ. 2022ರ ನವೆಂಬರ್‌ 19ರಂದು ಈ ಕುಟುಂಬದ ಸದಸ್ಯರು ಸಲ್ಲಿಸಿರುವ ಮನವಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಕಳೆದ 90 ವರ್ಷಗಳಿಂದ ನಮ್ಮ ಕುಟುಂಬದವರು ಮೂರು ತಲೆಮಾರುಗಳಿಂದ ಈ ಜಾಗದಲ್ಲಿ ವಾಸ ಮಾಡುತ್ತಿದ್ದೇವೆ. ಕಳೆದ 4 ವರ್ಷಗಳಿಂದ ಶಾಸಕ ಎಂ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರು, ಸ್ಥಳೀಯ ಭೂಗಳ್ಳರು, ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್‌ ರಾಮಲಕ್ಷ್ಮಣಯ್ಯ, ಮತ್ತು ದಿನೇಶ್‌, ಕಿರುಕುಳ, ದೌರ್ಜನ್ಯ ಸಹಿಸಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಅತ್ಮಹತ್ಯೆ ಮಾಡಿಕೊಳ್ಳುವುದು ಕಾನೂನಿಗೆ ವಿರುದ್ಧವೆಂದು ತಮಗೆ ಈ ಮೂಲಕ ದಯಾಮರಣಕ್ಕೆ ಮನವಿ ಸಲ್ಲಿಸುತ್ತಿದ್ದೇವೆ,’ ಎಂದು ಅಳಲು ತೋಡಿಕೊಂಡಿದ್ದಾರೆ.

 

ವಾಸ ಮಾಡುತ್ತಿರುವ ಜಾಗದಲ್ಲಿ ಪೆಟ್ರೋಲ್‌ ಬಂಕ್‌, ಕಲ್ಯಾಣ ಮಂಟಪ ಮತ್ತು ಕಚೇರಿ ನಿರ್ಮಾಣ ಮಾಡಲು ಜಾಗ ನೀಡಬೇಕು ಎಂದು ಶಾಸಕ ಕೃಷ್ಣಪ್ಪ ಮತ್ತು ಅವರ ಬೆಂಬಲಿಗರಾದ ಸಂಪಂಗಿ ಎಂಬುವರು ನಿರಂತರವಾಗಿ ಒತ್ತಾಯ ಮಾಡುತ್ತಿದ್ದಾರೆ ಎಂದು ದೂರಿರುವ ಮಂಜುಳ ಎಂಬುವರು ಅವರ ಬೇಡಿಕೆಯನ್ನು ಒಪ್ಪದಿದ್ದಾಗ ಅವರ ಮೇಲೆ ದೌರ್ಜನ್ಯ, ಕಿರುಕುಳ ನೀಡಿದರು ಎಂಬುದನ್ನು ಮನವಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 

‘ನಮ್ಮ ಆಸ್ತಿಯನ್ನು ಕಬಳಿಸಿ ನಮ್ಮನ್ನು ಬೀದಿಪಾಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಈ ಆಸ್ತಿ ಬಿಟ್ಟರೆ ಬೇರೆ ಯಾವುದೇ ಆಸ್ತಿ ಇರುವುದಿಲ್ಲ. 10ರಿಂದ 15 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಅಲೆಯತ್ತಿದ್ದೇವೆ. ಅದರ ಸಲುವಾಗಿ ಸಾಲ ಮಾಡಿಕೊಂಡು ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗದೇ ಅಲೆದಿದ್ದೇವೆ. ನ್ಯಾಯಾಲಯದ ಮೂಲಕ ಆಸ್ತಿಯನ್ನು ನಮ್ಮಂತೆ ಪಡೆದುಕೊಂಡಿರುತ್ತೇವೆ. ಇವರುಗಳು ನಮ್ಮಂಥ ದಲಿತರನ್ನು ಬೆದರಿಸಿ ಆಸ್ತಿಯನ್ನೂ ಕಿತ್ತುಕೊಂಡು ನಮ್ಮನ್ನೇ ಭೂಗಳ್ಳರು ಎಂದು ಪಟ್ಟ ಕಟ್ಟಿದ್ದಾರೆ,’ ಎಂದು ಗೋಳು ತೋಡಿಕೊಂಡಿದ್ದಾರೆ.

 

ಆ ಸ್ಥಳದ ಮೇಲೆ ಸಿವಿಲ್ ಮೊಕದ್ದಮೆಗಳು ನಡೆಯುತ್ತಿವೆ ಎಂದು ಉಲ್ಲೇಖಿಸಿರುವ ಮನವಿದಾರರು ‘ ಕಳೆದ 2 ವರ್ಷಗಳಿಂದ ಸಿವಿಲ್‌ ನ್ಯಾಯಾಲಯಗಳಿಗೆ ಅಲೆದಾಡುತ್ತಿದ್ದೇವೆ. (ಪ್ರಕರಣಗಳು ಸಂಖ್ಯೆಗಳು ;306/2021, 308/2021, 310/2021, 493/2021, 978/2021) ಈ ದಾವೆಗಳನ್ನು ಪರಿಗಣಿಸದೇ ಇವರುಗಳು ನಮ್ಮ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ನಮಗೆ ನೀಡುತ್ತಿರುವ ಕಿರುಕುಳ , ಹಿಂಸೆಯಿಂದ ನಮ್ಮ ಇಡೀ ಕುಟುಂಬವು ಮನೆಯಿಂದ ಹೊರಗಡೆ ಬರಲುಸಾಧ್ಯವಾಗದೇ ಮನೆಯೊಳಗೂ ಇರಲು ಸಾಧ್ಯವಾಗದೇ ನೋವಿನಿಂದ ಬೆಂದು ಹೋಗಿದ್ದೇವೆ. ನಮಗೂ ಸಹ ಜೀವ ಬೆದರಿಕೆ ಇದೆ,’ ಎಂದು ವಿವರಿಸಿದ್ದಾರೆ.

 

2020ರಲ್ಲಿ ಈ ಸ್ಥಳದಲ್ಲಿ ಪೆಟ್ರೋಲ್‌ ಬಂಕ್‌ ಮಾಡಲು ನೀಡಬೇಕು ಎಂದು ಕೃಷ್ಣಪ್ಪ ಅವರ ಬೆಂಬಲಿಗರಾದ ಸಂಪಂಗಿ ಎಂಬುವರು ಕೇಳಿದ್ದನ್ನು ಈ ಕುಟುಂಬವು ನಿರಾಕರಿಸಿತ್ತು. ಕೋವಿಡ್‌ ನೆಪವಾಗಿರಿಸಿಕೊಂಡು ಸ್ಥಳೀಯ ಕಾರ್ಪೋರೇಟರ್‌ನೊಂದಿಗೆ ಸೇರಿ ಈ ಸ್ಥಳದಲ್ಲಿ ಮೂರು ದಿನಗಳ ಮಟ್ಟಿಗೆ ತರಕಾರಿ ಮಾರುಕಟ್ಟೆ ಹಾಕಿಸಿ ಕುಟುಂಬದ ಸದಸ್ಯರನ್ನು ಹೆದರಿಸಲಾಗಿತ್ತು ಎಂಬ ಅಂಶವು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

 

ಮನವಿದಾರರಾದ ಮಂಜುಳ ಅವರ ತಾತನವರಿಗೆ 1950ರಲ್ಲಿ 2 ಎಕರೆ ಜಮೀನು ಮಂಜರಾಗಿತ್ತು. ಈ ಜಾಗದಲ್ಲಿ 45 ವರ್ಷಗಳ ಕಾಲ ವ್ಯವಸಾಯ ಮಾಡಲಾಗುತ್ತಿತ್ತು. ಕಾರಣಾಂತರಗಳಿಂದ 1992ರಲ್ಲಿ ಪರಮಾನಂದ ಹಾಗೂ ಗಜೇಂದ್ರನ್‌ ಎಂಬುವರಿಗೆ ವರ್ಗಾವಣೆಯಾಗಿದೆ. ಈ ವ್ಯಕ್ತಿಗಳಿಂದ 1995-96ರಲ್ಲಿ ಪುಟ್ಟರಾಜು ಮತ್ತು ಅಶೋಕ್‌ ಕುಮಾರ್‌ ಎಂಬುವರಿಗೆ ತಲಾ 1 ಎಕರೆಯಂತೆ ವರ್ಗಾವಣೆಯಾಗಿತ್ತು. ಇದೇ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಪಿಲ್ಲಗಾನಹಳ್ಳಿ ಗ್ರಾಮದಲ್ಲಿ 1998-99ರಲ್ಲಿ ಕೆಐಎಡಿಬಿಗೆ ಕೆಲವು ಭೂಮಿಗಳು ಸ್ವಾಧೀನಕ್ಕೆ ಒಳಪಟ್ಟಿದ್ದವು.

 

ಸರ್ವೆ ನಂಬರ್‌ 2ರಲ್ಲಿ ಆಕಾರ್‌ ಬಂದ್‌ನಂತೆ 32.19 ಎಕರೆ ಇದೆ. ಇದರ ಪೈಕಿ 28.19 ಎಕರೆ ಭೂ ಸ್ವಾಧೀನಕ್ಕೆ ಒಳಪಟ್ಟಿದೆ. ಇದರಲ್ಲಿ ಮಂಜುಳ ಅವರಿಗೆ ಸೇರಿದ ಜಮೀನು ಸರ್ವೇ ನಂಬರ್‌ 2 ಹಿಸ್ಸಾ ನಂಬರ್‌ 15 ಇದೆ. ಇದು ಭೂ ಸ್ವಾಧೀನಕ್ಕೆ ಒಳಪಟ್ಟಿರುವುದಿಲ್ಲ. ಸ್ಥಳ ಮತ್ತು ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 2005ರಲ್ಲಿ ಪಿಟಿಸಿಎಲ್‌ ಪ್ಕರರಣವನ್ನು ದಾಖಲಿಸಿದ ಕಾರಣ 2016ರವರೆಗೂ ದಾವೆ ನಡೆದಿತ್ತು ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

 

2016ರಲ್ಲಿ ಮಂಜುಳ ಅವರ ಪರವಾಗಿ ಆದೇಶ ಹೊರಬಿದ್ದಿದೆ. ಆದೇಶದ ನಂತರ 2 ಎಕರೆ ಜಮೀನಿಗೆ ಪಹಣಿ ಮಾಡದೇ ಅಧಿಕಾರಿಗಳು ಕೇವಲ ಒಂದು ಎಕರೆಗೆ ಮಾತ್ರ ಪಹಣಿ ಮಾಡಿಕೊಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದ ಮಂಜುಳ ಅವರಿಗೆ ‘ ನೀವು ಉಚ್ಛ ನ್ಯಾಯಾಲಯಕ್ಕೆ ಹೋಗಿ ಬಗೆಹರಿಸಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡಿದರು. ಮತ್ತೆ ಕೋರ್ಟ್‌ಗೆ ಅಲೆಯುವ ಶಕ್ತಿ ಇಲ್ಲದ ಕಾರಣ 1 ಎಕರೆ ಜಮೀಣಿಗೆ ಪಹಣಿ ಮಾಡಿಸಿಕೊಂಡೆವು. ಕೋರ್ಟ್‌ ಆದೇಶದಂತೆ ಸರ್ವೇ ಮಾಡಿ ಪೋಡಿ ಮಾಡಿ ಸ್ವಾಧೀನಕ್ಕೆ ಬಿಟ್ಟುಕೊಡುವಂತೆ ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸಿದೆವು,’ ಎಂದು ವಿವರಿಸಿದ್ದಾರೆ.

Hot this week

ಕೆಎಎಸ್ 2011ರ ನೇಮಕಾತಿ ಅಕ್ರಮದ ತನಿಖಾ ವರದಿಗೆ ಕೊನೆ ಮೊಳೆ; ವಿಚಾರಣೆಯಿಲ್ಲದೇ ಪ್ರಕರಣ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು; 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ...

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು...

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ...

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ; ವರ್ಷವಾದರೂ ಇಲಾಖೆಗಳಿಂದ ಬಾರದ ಮಾಹಿತಿ, ಅಧಿಸೂಚನೆಗೂ ಕಿಮ್ಮತ್ತಿಲ್ಲ, ನೆನಪೋಲೆಯ ಕಾಲಹರಣ

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು...

Topics

ಕೆಎಎಸ್ 2011ರ ನೇಮಕಾತಿ ಅಕ್ರಮದ ತನಿಖಾ ವರದಿಗೆ ಕೊನೆ ಮೊಳೆ; ವಿಚಾರಣೆಯಿಲ್ಲದೇ ಪ್ರಕರಣ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು; 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ...

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು...

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ...

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174...

1,094.81 ಕೋಟಿಯಷ್ಟು ಭೂ ಕಂದಾಯ ಬಾಕಿ; ವಸೂಲಾತಿಗೆ ರೇರಾ ಮೀನಮೇಷ

ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ...

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

Related Articles

Popular Categories

error: Content is protected !!