Wednesday | April 1, 2026 |

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

Support THE-FILE

spot_img

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ ಬಿ ಆರ್ ಅಂಬೇಡ್ಕರ್ ಮತ್ತು ಡಾ ಬಾಬುಜಗಜೀವನ ರಾಂ ಪ್ರಶಸ್ತಿಗಳಿಗೆ ಲಾಬಿ ಶುರುವಾಗಿದೆ. ಆಕಾಂಕ್ಷಿಗಳ ಹೆಸರಿನಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳು, ದಲಿತ ಸಮುದಾಯಕ್ಕೆ ಸೇರಿದ ವಿವಿಧ ಸಂಘಟನೆಗಳು, ಮುಖಂಡರು ಮತ್ತು ಆಕಾಂಕ್ಷಿಗಳೇ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸೇರಿದಂತೆ ಹಲವರಿಗೆ ವೈಯಕ್ತಿಕವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಹಲವರು ತೆರೆಮರೆಯಲ್ಲಿ ಲಾಬಿ ಆರಂಭಿಸಿದ್ದಾರೆ.

ಈ ಪೈಕಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಹಿರಿಯ ಸಾಹಿತಿ ಡಾ ಸರಜೂ ಕಾಟ್ಕರ್ ಅವರಿಗೆ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದೆ. ಅಲ್ಲದೇ ದಲಿತ ಸಮುದಾಯದ ವಿಠಲ್ ವಗ್ಗನ್ ಸೇರಿದಂತೆ 13 ಮಂದಿಗೆ ಪ್ರಶಸ್ತಿ ಕೊಡಿಸಲು ವಿವಿಧ ಮುಖಂಡರು ಸರ್ಕಾರದ ಕದ ತಟ್ಟಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾಗಿರುವ ಈ ಎಲ್ಲಾ ಅರ್ಜಿಗಳನ್ನು ಕ್ರೋಢೀಕರಿಸಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2026ರ ಮಾರ್ಚ್‌ 31ರಂದು ಇಲಾಖೆಯ ಆಯುಕ್ತರಿಗೆ ಕಳಿಸಿದ್ದಾರೆ. ಈ ಪತ್ರ ಮತ್ತು ವಿವಿಧ ಮುಖಂಡರು ಸಲ್ಲಿಸಿರುವ ಶಿಫಾರಸ್ಸು ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.

ಸರಜೂ ಕಾಟ್ಕರ್ ಅವರಿಂದ ಅರ್ಜಿ ಸಲ್ಲಿಕೆ

ಡಾ ಸರಜೂ ಕಾಟ್ಕರ್ ಅವರು ಡಾ ಅಂಬೇಡ್ಕರ್ ಪ್ರಶಸ್ತಿಗಾಗಿ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಜತೆ ತಮ್ಮ ಸ್ವವಿವರಗಳನ್ನೂ ಸಲ್ಲಿಸಿದ್ದಾರೆ.

 

 

‘ಕರ್ನಾಟಕ ಸರ್ಕಾರವು ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿ ಅವರ ವಿಚಾರಗಳಿಗೆ ಗೌರವ ನೀಡಿದೆ. ಈ ಪ್ರಶಸ್ತಿಗೆ ಭಾಜನನಾಗಬೇಕು ಎಂದು ನಾನು ಆಕಾಂಕ್ಷಿಯಾಗಿದ್ದೇನೆ,’ ಎಂದು ವೈಯಕ್ತಿಕ ಸಾಧನೆಯ ವಿವರಗಳನ್ನೂ ಸಲ್ಲಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಸರಜೂ ಕಾಟ್ಕರ್ ಅವರ ಪರವಾಗಿ ಬೆಳಗಾವಿಯ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಅನಂತಕುಮಾರ್ ಬ್ಯಾಕೂಡ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಿರಿಯ ಸಾಹಿತಿ ಮತ್ತು ಸಮಾಜ ಚಿಂತಕ ಡಾ ಸರಜೂ ಕಾಟ್ಕರ್ ಅವರಿಗೆ 2026ನೇ ಸಾಲಿನ ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಬೇಕು ಕೋರಿರುವುದು ತಿಳಿದು ಬಂದಿದೆ.

 

 

ಈ ಮನವಿಯನ್ನು ಪರಿಶೀಲಿಸಿರುವ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ ವೆಂಕಟೇಶಯ್ಯ ಅವರು ಈ ಕೋರಿಕೆಯನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಮಾರ್ಚ್‌ 13ರಂದೇ ಟಿಪ್ಪಣಿ ಹೊರಡಿಸಿದ್ದಾರೆ.

 

 

ಡಾ ಸರಜೂ ಕಾಟ್ಕರ್ ಅವರು ಹಿಂದುಳಿದ ಮರಾಠ ಜಾತಿಗೆ ಸೇರಿದವರಾಗಿದ್ದಾರೆ. ಬಸವಲಿಂಗಪ್ಪ ಅವರು ನೀಡಿದ್ದ ಬೂಸಾ ಹೇಳಿಕೆ ಪರವಾಗಿ ಹುಬ್ಬಳ್ಳಿಯಲ್ಲಿ ವಿಚಾರ ಸಂಕಿರಣ ಏರ್ಪಡಿಸಿದ್ದರು. ಮರಾಠಿ ಭಾಷೆಯಲ್ಲಿ ಪ್ರಕಟಗೊಂಡಿದ್ದ ಅಂಬೇಡ್ಕರ್ ಸಾಹಿತ್ಯ ಅಥವಾ ದಲಿತ ಸಾಹಿತ್ಯ ಅಭ್ಯಸಿಸಿ ಅಮರಶೇಖ, ಉತ್ತಮ ಕಾಂಬಳೆ ಮುಂತಾದವರ ಕವಿತೆಗಳನ್ನು ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಅನುವಾದಿಸಿದ್ದಾರೆ ಎಂದು ಪಟ್ಟಿಯನ್ನು ನೀಡಿರುವುದು ಗೊತ್ತಾಗಿದೆ.

 

 

ಮರಾಠಿ ದಲಿತ ಕಾವ್ಯ ಕೃತಿ, ದಸಂಸದ ಜತೆಗೆ ಆತ್ಮೀಯ ಸಂಬಂಧ ಮತ್ತು ಡಿಎಸ್‌ಎಸ್‌ ಹೋರಾಟಗಳಲ್ಲಿ ಭಾಗಿಯಾಗಿರುವುದು, ಕೋರೆಗಾಂವ ಯುದ್ದದ ಬಗ್ಗೆ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಜಾಗೃತಿ ಮೂಡಿಸಿರುವುದು, ಅಲ್ಲದೇ ಕೋರೆಗಾಂವ ಕೃತಿ ಪ್ರಕಟಿಸಿರುವುದು, ಬೆಂಡಿಗೇರಿ ಎಂಬ ಗ್ರಾಮದಲ್ಲಿ ದಲಿತ ಯುವಕರಿಗೆ ಮಲ ತಿನ್ನಿಸಿದ ಪ್ರಕರಣವನ್ನು ಮೊಟ್ಟಮೊದಲ ಬಾರಿಗೆ ಭೇದಿಸಿರುವುದು ಸೇರಿದಂತೆ ಹಲವು ಕೃತಿಗಳ ಪಟ್ಟಿಯನ್ನು ಮನವಿಯಲ್ಲಿ ಗಮನ ಸೆಳೆದಿರುವುದು ತಿಳಿದು ಬಂದಿದೆ.

ವಿಠಲ ವಗ್ಗನ್ ಎಂಬುವರು ಸಹ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

 

 

‘ಇಲ್ಲಿಯವರೆಗೆ 8 ಕೃತಿಗಳನ್ನು ರಚನೆ ಮಾಡಿದ್ದು ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರ ಕುರಿತು ದಾಖಲೆ ಸಹಿತ ವಿಷಯ ಮಂಡಿಸುವ ಸಮರ್ಥ ಹೊಂದಿದ್ದೇನೆ. ಇಡೀ ರಾಜ್ಯಾದ್ಯಂತ ಈಗಲೂ ಎಲ್ಲಾ ಜಿಲ್ಲೆಗಳಿಗೂ ಮುಖ್ಯ ಭಾಷಣಕಾರನಾಗಿ ಹೋಗಿ ವಿಷಯಗಳನ್ನು ಮಂಡಿಸಿ ಬಂದಿದ್ದೇನೆ. ಈಗಲೂ ಕೂಡ ನಾಲ್ಕು ಸಂಶೋಧನಾ ಕೃತಿಗಳು ಮುದ್ರಣದ ಹಂತದಲ್ಲಿವೆ. ನನ್ನ ಸಾಮಾಜಿಕ ಸೇವೆಯನ್ನು ಪರಿಗಣಿಸಿ 2025-26ನೇ ಸಾಲಿನ ಡಾ ಅಂಬೇಡ್ಕರ್ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಬೇಕು,’ ಎಂದು ಕೋರಿರುವುದು ಗೊತ್ತಾಗಿದೆ.

ಅದೇ ರೀತಿ ಮಾಜಿ ದೇವದಾಸಿ ಮಹಿಳೆ ಐರಾವತಿ ರಾಮಪ್ಪ ಮಾಂಗ, ಸಿ ಕೆ ಶಿವರತ್ನ, ಹಾಸನ ಜಿಲ್ಲೆಯ ಜಾನಪದ ಕಲಾವಿದ ಶಿವಣ್ಣ ಎಸ್, ಪದ್ಮಶ್ರೀ ಪುರಸ್ಕೃತೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಪರಶುರಾಮ ಮಾರುತಿ ಕರನಿಂಗ, ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ ಸಿ ಎಸ್‌ ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ ಶಿವಶಂಕರ್ ಅವರು ಸಹ ಅಂಬೇಡ್ಕರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ.

 

 

 

ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯು ಸಾಮಾಜಿಕ ಸಮಾನತೆ, ನ್ಯಾಯ ಮತ್ತು ರಾಷ್ಟ್ರೀಯ ಏಕತೆಗಾಗಿ ಶ್ರಮಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನೀಡಲಾಗುವ ಪ್ರತಿಷ್ಠಿತ ಗೌರವವಾಗಿದೆ. ಭಾರತ ಸರ್ಕಾರವು 1992 ರಲ್ಲಿ ಸ್ಥಾಪಿಸಿದ ಈ ರಾಷ್ಟ್ರೀಯ ಪ್ರಶಸ್ತಿಯು ₹10 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಇದಲ್ಲದೆ, ಕರ್ನಾಟಕ ಸರ್ಕಾರವು ಪ್ರತಿವರ್ಷ ರಾಜ್ಯ ಮಟ್ಟದ ಅಂಬೇಡ್ಕರ್ ಪ್ರಶಸ್ತಿಗಳನ್ನು ಸಾಧಕರಿಗೆ ನೀಡುತ್ತದೆ.

ಈ ಪ್ರಶಸ್ತಿಯು ತಲಾ 5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ಮತ್ತು ಫಲಕವನ್ನು ಹೊಂದಿದೆ. 2023ನೇ ಸಾಲಿನಲ್ಲಿ ಹರಿಹರನಂದ ಸ್ವಾಮಿ, ಇಂಧೂದರ ಹೊನ್ನಾಪುರ, ರುದ್ರಪ್ಪ ಹನಗವಾಡಿ, ಸೀತವ್ವ ಜೋಡಟ್ಟಿ, ಕೆ ಪುಂಡಲೀಕರರಾವ್ ಶೆಟ್ಟಿ ಬಾ ಅವರಿಗೆ ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು.

2024ನೇ ಸಾಲಿನಲ್ಲಿ ಶ್ರೀಧರ ಕಲಿವೀರ, ಮಲ್ಲಾಜಮ್ಮ, ರಾಮದೇವ ರಾಕೆ, ವೈ ಬಿ ಹಿಮ್ಮಡಿ, ಲಕ್ಷ್ಮೀಪತಿ ಕೋಲಾರ ಇವರು ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾಗಿದ್ದರು. 2025ನೇ ಸಾಲಿನಲ್ಲಿ ದತ್ತಾತ್ರೈ ಇಕ್ಕಳಗಿ, ಮಾವಳ್ಳಿ ಶಂಕರ್, ಎಫ್ ಎಚ್‌ ಜಕ್ಕಪ್ಪನವರ್, ಹೊನ್ನೂರು ಗೌರಮ್ಮ, ಈರಪ್ಪ ಇವರನ್ನು ಅಂಬೇಡ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಬಾಬು ಜಗಜೀವನ್ ರಾಂ ಪ್ರಶಸ್ತಿಗೆ  ಕೆ ಶಿವಲಿಂಗಪ್ಪ, ಕಾರ್ಮಿಕ ಖಾತೆಯ ಮಾಜಿ ಸಚಿವ ಎಸ್‌ ಕೆ ಕಾಂತಾ ಅವರು ಭೀಮರಾಯ ಅವರಿಗೆ ನೀಡಬೇಕು ಎಂದು ಶಿಫಾರಸ್ಸು ಪತ್ರ ನೀಡಿದ್ದಾರೆ.

Hot this week

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ; ವರ್ಷವಾದರೂ ಇಲಾಖೆಗಳಿಂದ ಬಾರದ ಮಾಹಿತಿ, ಅಧಿಸೂಚನೆಗೂ ಕಿಮ್ಮತ್ತಿಲ್ಲ, ನೆನಪೋಲೆಯ ಕಾಲಹರಣ

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174...

1,094.81 ಕೋಟಿಯಷ್ಟು ಭೂ ಕಂದಾಯ ಬಾಕಿ; ವಸೂಲಾತಿಗೆ ರೇರಾ ಮೀನಮೇಷ

ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ...

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

Topics

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174...

1,094.81 ಕೋಟಿಯಷ್ಟು ಭೂ ಕಂದಾಯ ಬಾಕಿ; ವಸೂಲಾತಿಗೆ ರೇರಾ ಮೀನಮೇಷ

ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ...

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

Related Articles

Popular Categories

error: Content is protected !!