Tuesday | May 12, 2026 |

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು ಕಂಪನಿಗಳು ಭರಿಸುತ್ತಿರುವ ಸರಾಸರಿ ವಾಸ್ತವಿಕ ವೆಚ್ಚವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ. ಹೀಗಾಗಿ ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ತಳ್ಳಲ್ಪಟ್ಟಿವೆ. ಇದರಿಂದ ಮತ್ತಷ್ಟು ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ಇಂಧನ ಇಲಾಖೆಯು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಇಲಾಖೆಯನ್ನು ಅಲವತ್ತುಕೊಂಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ   ಕೊಳವೆ ಬಾವಿಗಳ ಪ್ರತಿ ಪಂಪ್‌ಸೆಟ್‌ ವಿದ್ಯುದ್ದೀಕರಣಕ್ಕಾಗಿ 50,000 ರು.ಬಿಡುಗಡೆಯಾಗುತ್ತಿತ್ತು.  ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸರಾಸರಿ 1.60 ಲಕ್ಷ ರು.ವೆಚ್ಚವಾಗುತ್ತಿತ್ತು. ಹೀಗಾಗಿ ಈ ಮೊತ್ತವನ್ನು 1.60 ಲಕ್ಷ ರು.ಗಳಿಗೆ ಹೆಚ್ಚಿಸಬೇಕು ಎಂಬ ಪ್ರಸ್ತಾವನೆಯನ್ನು ಇಂಧನ ಇಲಾಖೆಗೆ  ವಿವಿಧ ಇಲಾಖೆಗಳು ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇಂಧನ ಇಲಾಖೆಯು ನೇರವಾಗಿ ಇಲಾಖೆಗಳಿಗೆ  ಪತ್ರ ಬರೆದಿದೆ.

ಗಂಗಾ ಕಲ್ಯಾಣ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಾ ಹೆಚ್ ಸಿ ಮಹದೇವಪ್ಪ, ಬಿ ಝಡ್ ಜಮೀರ್ ಅಹ್ಮದ್‌ ಖಾನ್ ಅವರೊಂದಿಗೆ ಇಂಧನ ಇಲಾಖೆ ಸಚಿವ ಕೆ ಜೆ ಜಾರ್ಜ್‌ ಅವರು ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಗಂಗಾ ಕಲ್ಯಾಣ ಯೋಜಜನೆಯ ಕೊಳವೆ ಬಾವಿಗಳಿಗೆ ಆಯಾ ಇಲಾಖೆಗಳೇ ಟನ್ ಕೀ ಆಧಾರದ  ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಅಥವಾ ವಿದ್ಯುತ್‌ ಸರಬರಾಜು ಕಂಪನಿಗಳ ವಾಸ್ತವಿಕ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಗಳೇ ಪೂರ್ಣವಾಗಿ ಭರಿಸಬೇಕೇ ಬೇಡವೇ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು.

ಆದರೆ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಆದರೀಗ ಇಂಧನ ಇಲಾಖೆಯು ತನ್ನ ತೀರ್ಮಾವನ್ನು ಪ್ರಕಟಿಸಿದೆ. 2026ರ ಮಾರ್ಚ್ 26ರಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದೆ. ಪ್ರತಿ ಕೊಳವೆ ಬಾವಿಗೆ ಬಿಡುಗಡೆಗೊಳಿಸುತ್ತಿರುವ ಮೊತ್ತವನ್ನು 1.50 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಬೇಕು ಎಂದು ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಪತ್ರ ಬರೆದಿದ್ದಾರೆ.

ಈ ಪತ್ರದ ಪ್ರತಿಯು ‘ದಿ ಫೈಲ್’ ಗೆ ಲಭ್ಯವಾಗಿದೆ.

ವಿದ್ಯುದ್ದೀಕರಣಕ್ಕೆ ಸಾಲ ಪಡೆದ ಎಸ್ಕಾಂಗಳು

ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯುತ್ತಿರುವ ಕೊಳವೆ ಬಾವಿಗಳ ವಿದ್ಯುದ್ದೀಕರಣಕ್ಕೆ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗಳ ವ್ಯಾಪ್ತಿಯಲ್ಲಿರುವ ಅಭಿವೃದ್ಧಿ  ನಿಗಮಗಳು ಎಸ್ಕಾಂಗಳಲ್ಲಿ ನೋಂದಾಯಿಸುತ್ತಿವೆ. ಪ್ರಸ್ತುತ ಪ್ರತಿ ಕೊಳವೆ ಬಾವಿ ವಿದ್ಯುದ್ದೀಕರಣಕ್ಕೆ 75,000 ರು ಮೊತ್ತವನ್ನು ಮಾತ್ರ ಎಸ್ಕಾಂಗಳಿಗೆ ಬಿಡುಗಡೆ ಮಾಡುತ್ತಿವೆ. ಉಳಿದ ವೆಚ್ಚವನ್ನು ಎಸ್ಕಾಂಗಳು ತಮ್ಮ ಸ್ವಂತ ಬಂಡವಾಳ ಹೂಡಿಕೆಯಲ್ಲಿ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆದು ಭರಿಸುತ್ತಿವೆ ಎಂದು ವಾಸ್ತವ ಆರ್ಥಿಕ ಸ್ಥಿತಿಗತಿಯನ್ನು ಗೌರವ್ ಗುಪ್ತಾ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಆರ್ಥಿಕ ಸಂಕಷ್ಟದಲ್ಲೂ ಆರ್ಥಿಕ ಹೊರೆ

ಗಂಗಾ ಕಲ್ಯಾಣ ಯೋಜನೆಯುಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣಕ್ಕೆ ವಿದ್ಯುತ್ ಸರಬರಾಜು ಕಂಪನಿಗಳು ಭರಿಸುತ್ತಿರುವ ಸರಾಸರಿ ವಾಸ್ತವಿಕ ವೆಚ್ಚವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಪ್ರಸ್ತುತ ಕೊಳವೆ ಬಾವಿ ಒಂದಕ್ಕೆ ಸರಾಸರಿ 2.5 ಲಕ್ಷ ರು ವೆಚ್ಚವಾಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮತ್ತಷ್ಟು ಆರ್ಥಿಕ ಹೊರೆ ಉಂಟಾಗುತ್ತಿದೆ. ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಅನುಕೂಲವಾಗುತ್ತಿಲ್ಲ. ಅಲ್ಲದೇ ವಿದ್ಯುತ್ ಜಾಲ ಬಲವರ್ಧನೆಯ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ  ಎಂದು ಪತ್ರದಲ್ಲಿ  ವಿವರಿಸಿರುವುದು ತಿಳಿದು ಬಂದಿದೆ.

 

 

ಈ ಕುರಿತು 2023ರ ಡಿಸೆಂಬರ್‍‌ 21ರಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ಆಯಾ ಇಲಾಖೆಗಳೇ ಟರ್ನ್‌ ಕೀ ಆಧಾರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಅಥವಾ ವಿದ್ಯುತ್ ಸರಬರಾಜು ಕಂಪನಿಗಳ ವಾಸ್ತವಿಕ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಗಳು ಪೂರ್ಣವಾಗಿ ಭರಿಸಬೇಕು ಎಂದು ಚರ್ಚಿಸಲಾಗಿತ್ತು.

ಅದರಂತೆ 2026ರ-27ನೇ ಸಾಲಿನ ಆಯವ್ಯಯದ ಕಂಡಿಕೆ 196ರಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದರು. ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದ್ದೀಕರಣಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸುತ್ತಿರುವ 75,000 ರು ಮೊತ್ತವನ್ನು 1.50 ಲಕ್ಷ ರು ಹೆಚ್ಚಿಸಬೇಕು ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಳವೆ ಬಾವಿಯ ವಿದ್ಯುದ್ದೀಕರಣಕ್ಕೆ ಬಿಡುಗಡೆಯಾಗುತ್ತಿರುವ ಮೊತ್ತವನ್ನು 1.50 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಬೇಕು ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ  ಕುಡಿಯುವ ನೀರಿನ ಯೋಜನೆಗಳ ವಿದ್ಯುದ್ದೀಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿತ್ತು. 2021ರ ಅಕ್ಟೋಬರ್‌ ಅಂತ್ಯಕ್ಕೆ 836 ಅರ್ಜಿಗಳು ಬಾಕಿ ಇದ್ದವು. ಈ ಪೈಕಿ ಸ್ಥಳೀಯ ಸಂಸ್ಥೆಗಳಿಮದ ನಿಯಮಗಳನ್ನು ಪಾಲಿಸಲು  539 ಅರ್ಜಿಗಳು ಬಾಕಿ ಇದ್ದವು.  ವಿದ್ಯುತ್‌ ಸರಬರಾಜು ಕಂಪನಿಗಳಿಂದಲೇ 297 ಅರ್ಜಿಗಳು ಬಾಕಿ ಇದ್ದವು. ಹೀಗಾಗಿ ಕುಡಿಯುವ ನೀರಿನ ಯೋಜನೆ ವಿದ್ಯುದ್ದೀಕರಣ ಯೋಜನೆಯನ್ನು ಆದ್ಯತೆ ಮೇಲೆ ಪರಿಗಣಿಸಿರಲಿಲ್ಲ .

ಕುಡಿಯುವ ನೀರಿನ ಸ್ಥಾವರ ವಿದ್ಯುದ್ದೀಕರಣದ ಮೂಲ ಸೌಕರ್ಯ ರಚನೆ ಸಂಬಂಧ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳು ಭರಿಸಿರುವ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಯಿಂದ 125 ಕೋಟಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ 10.93 ಕೋಟಿ ರು.ಗಳು ಬಾಕಿ ಇದ್ದವು. ಹಾಗೆಯೇ ಫೀಡರ್‌ ಮಾಪಕಗಳ ಅಳವಡಿಕೆಯಲ್ಲಿಯೂ ಹಿಂದುಳಿದಿತ್ತು. 

ಕೆಪಿಟಿಸಿಎಲ್‌ನಿಂದ 16,800 ಸಂಖ್ಯೆಯ ಮಾಪಕಗಳ ಖರೀದಿಗೆ ಆದೇಶ ನೀಡಲಾಗಿದ್ದರೂ ಈವರೆಗೆ 14,285 ಮಾಪಕಗಳನ್ನು ಮಾತ್ರ ಅಳವಡಿಸಲಾಗಿದೆ. ಇನ್ನೂ 2,515 ಮಾಪಕಗಳನ್ನು ಅಳವಡಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ವಿದ್ಯುತ್‌ ಖರೀದಿ ಶುಲ್ಕಕ್ಕೆ ಸಂಬಂಧಿಸಿದಂತೆ ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ನ್ನು ವಿದ್ಯುತ್‌ ಸರಬರಾಜು ಕಂಪನಿಗಳು ತಡವಾಗಿ ಪಾವತಿಸುತ್ತಿರುವ ಕಾರಣ ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಇದರ ಮೊತ್ತವು ಅಂದಾಜು 1,000 ಕೋಟಿ ರು. ಗೆ ತಲುಪಲಿದೆ ಎಂದು ಅಧಿಕಾರಿಗಳು  ಅಂದಾಜಿಸಿದ್ದರು. 

ಈಗಾಗಲೇ ನಷ್ಟ ಅನುಭವಿಸುತ್ತಿರುವ ಮಧ್ಯೆಯೇ ಲೇಟ್‌ ಪೇಮೆಂಟ್‌ ಸರ್ಚಾಜ್‌ ಮೊತ್ತವು 1,000 ಕೋಟಿ ತಲುಪಲಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದರು. ಈ  ಅಂದಾಜು,  ವಿದ್ಯುತ್‌ ಸರಬರಾಜು ಕಂಪನಿಗಳ ನಷ್ಟದ ಮೊತ್ತವನ್ನು ಏರಿಕೆ ಮಾಡಲಿದೆ ಎಂಬುದನ್ನು ಸೂಚಿಸಿತ್ತು.

2017-18ರಿಂದ 2021-22ರ ಸಾಲಿನ 2021ರ ನವೆಂಬರ್‌ 15ರವರೆಗೆ ವಿದ್ಯುತ್‌ ಖರೀದಿ ಶುಲ್ಕಕ್ಕೆ ಸಂಬಂಧಿಸಿದಂತೆ ವಿದ್ಯುತ್‌ ಸರಬರಾಜು ಕಂಪನಿಗಳು ಪಾವತಿಸಿರುವ ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ ಮೊತ್ತದ ಅಂಕಿ ಅಂಶಗಳನ್ನು ಸಭೆಯು ಪರಿಶೀಲಿಸಿತ್ತು.. 2020-21ರ ಸಾಲಿನಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು ಲೇಟ್‌ ಪೇಮೆಂಟ್‌ ಸರ್ಚಾರ್ಜ್ ನ ಒಟ್ಟು ಮೊತ್ತ 649.24 ಕೋಟಿ ರು.ಇತ್ತು. 2021-22ರ ಸಾಲಿನಲ್ಲಿ 2021ರ ನವೆಂಬರ್‌ 15ರ ಅಂತ್ಯಕ್ಕೆ 449.17 ಕೋಟಿಗಳ ಮೊತ್ತವನ್ನು ಪಾವತಿಸಿತ್ತು. ಇದನ್ನು ಪರಿಗಣಿಸಿದರೆ ಈ ಆರ್ಥಿಕ ವರ್ಷದ ಅಂತ್ಯಕ್ಕೆ ಲೇಟ್‌ ಪೇಮೆಂಟ್‌ ಸರ್ಚಾರ್ಜ್‌ ಮೊತ್ತವು ಅಂದಾಜು 1,000 ಕೋಟಿ ಗಳವರೆಗೆ ತಲುಪುವ ಸಾಧ್ಯತೆ ಇದೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದರು.  

 

2019-20ನೇ ಸಾಲಿನಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು 366.63 ಕೋಟಿ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯು 682.21 ಕೋಟಿ ಮತ್ತು ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಯು 992.77 ಕೋಟಿಗಳಷ್ಟು ನಷ್ಟ ಅನುಭವಿಸಿವೆ. ವಿದ್ಯುತ್‌ ಬೇಡಿಕೆ ಪೂರೈಸಲು ಹೊಸ ಉಷ್ಣ ಕೇಂದ್ರ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್‌ ಖರೀದಿಸಬೇಕಾಗಿರುವುದರಿಂದ ವಿದ್ಯುತ್‌ ಖರೀದಿಯ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಅಲ್ಲದೆ ದೀರ್ಘ ಕಾಲದ ವಿದ್ಯುತ್‌ ಖರೀದಿ ಒಪ್ಪಂದಗಳಿಂದಾಗಿ ವಿದ್ಯುತ್‌ ಸರಬರಾಜು ಕಂಪನಿಗಳು ಉಷ್ಣಕೇಂದ್ರಗಳಿಗೆ ಪ್ರತಿ ತಿಂಗಳು ನಿಗದಿತ ವೆಚ್ಚವನ್ನು ಭರಿಸಬೇಕಾಗಿತ್ತು.  ಅದಲ್ಲದೆ ವಿದ್ಯುತ್‌ ಖರೀದಿ ವೆಚ್ಚ ಮತ್ತು ವಿದ್ಯುತ್‌ ಮಾರಾಟದಿಂದ ಬರುತ್ತಿರುವ ಆದಾಯದ ವ್ಯತ್ಯಾಸವು ಹೆಚ್ಚಾಗುತ್ತಿತ್ತು.  ವಿದ್ಯುತ್‌ ಸರಬರಾಜು ಕಂಪನಿಗಳ ನಷ್ಟಕ್ಕೆ ಇದು ಕೂಡ ಒಂದು ಕಾರಣ ಎಂದು ಇಂಧನ ಖಾತೆ ಸಚಿವರಾಗಿದ್ದ  ವಿ ಸುನೀಲ್‌ಕುಮಾರ್‌ ಅವರು ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್‌ನ ಸದಸ್ಯ ಎನ್‌ ರವಿಕುಮಾರ್‌ ಅವರಿಗೆ 2021ರ ಡಿಸೆಂಬರ್‌ 13ರಂದು ಉತ್ತರಿಸಿದ್ದರು.

ಹೆಸ್ಕಾಂ, ಸೆಸ್ಕಾಂ ಮತ್ತು ಜೆಸ್ಕಾಂಗಳು ಕಳೆದ ಮೂರು ವರ್ಷಗಳಲ್ಲಿ (2018-19ರಿಂದ 2021-22ರ ಅಕ್ಟೋಬರ್‌ 21 ಅಂತ್ಯಕ್ಕೆ) ವಿದ್ಯುತ್‌ ಬಿಲ್‌ ಮೂಲಕ ಒಟ್ಟು 55,706.09 ಕೋಟಿಯಷ್ಟು ಸಂಗ್ರಹಿಸಿದೆ. ಈ ಪೈಕಿ ಸೆಸ್ಕಾಂ ಮೂರು ವರ್ಷಗಳಲ್ಲಿ 13,976.34 ಕೋಟಿ, ಹೆಸ್ಕಾಂ ಕಂಪನಿಯು 23,337.82 ಕೋಟಿ, ಜೆಸ್ಕಾಂ 18,391.93 ಕೋಟಿ ರು.ಗಳನ್ನು ಸಂಗ್ರಹಿಸಿತ್ತು.  

 

 

ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗಳ ವಿದ್ಯುದ್ದೀಕರಣದ ಪ್ರಗತಿ ಕುರಿತು ಚರ್ಚಿಸಲಾಗಿದೆ. ಈ ಯೋಜನೆಗಾಗಿ ಡಾ ಬಿ ಆರ್‌ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸಿದ್ಧಪಡಿಸಲಾದ ತಂತ್ರಾಂಶವು ಹಳೆಯದಾಗಿದೆ. ತಂತ್ರಾಂಶ ಅಭಿವೃದ್ಧಿದಾರರು ಲಭ್ಯವಿಲ್ಲದ ಕಾರಣ ಸಮಾಲೋಚಕರ ಸೇವೆಯೂ ಇಲ್ಲವಾಗಿದೆ. ಇರುವ ತಂತ್ರಾಂಶದಲ್ಲಿ ನ್ಯೂನತೆಗಳಿರುವ ಕಾರಣ ಅರ್ಜಿ ನೋಂದಣಿ ಕಾರ್ಯದಲ್ಲಿ ವಿಳಂಬವಾಗಿದ್ದನ್ನು ಸ್ಮರಿಸಬಹುದು.

Hot this week

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...

ನಕಲಿ ಶಿಕ್ಷಕರಿಗೆ ವೇತನ ಪಾವತಿ; ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಬಿಟ್ಟ ಸರ್ಕಾರ!

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ  2011ರಿಂದ 2014ರವರೆಗೆ ಹೆಚ್‌ಆರ್‍ಎಂಎಸ್‌ ಮೂಲಕ ನಕಲಿ ಶಿಕ್ಷಕರ...

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...
Please Scan to make Your Contribution

Topics

ಘನತ್ಯಾಜ್ಯ ವಿಲೇವಾರಿ ಟಿಪ್ಪಿಂಗ್ ಶುಲ್ಕ; ರಾಮ್ಕಿ ಗ್ರೂಪ್‌ಗೆ ಅನುಕೂಲಕರ, ರಾಜ್ಯ ಸರ್ಕಾರವನ್ನು ಆರ್ಥಿಕ ದಿವಾಳಿತನದತ್ತ ತಳ್ಳಲಾಗಿದೆಯೇ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಟಿಪ್ಪಿಂಗ್ ಶುಲ್ಕದ ಆಧಾರದ ಮೇಲೆ...

ಶಾಂತಿನಗರ ಹೌಸಿಂಗ್‌ ಸೊಸೈಟಿ ಅಕ್ರಮ; 2,900 ಕೋಟಿ ಅಧಿಕ ಮೊತ್ತದ ಹಗರಣ ಕೆದಕಿದರೇ ಸತೀಶ್ ಜಾರಕಿಹೊಳಿ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ತಳಕು ಹಾಕಿಕೊಂಡಿದ್ದ...

ಎಲ್‌ 1 ತಿರಸ್ಕೃತವಾದರೂ ನಡೆಯದ ಮರು ಟೆಂಡರ್, ಎಲ್ 2 ಗೆ ನೇರವಾಗಿ ಗುತ್ತಿಗೆಗೆ ಪರಿಗಣನೆ; 2,477.90 ಕೋಟಿ ರು ಹಗರಣ!

ಬೆಂಗಳೂರು; ಮಾಲೂರು-ಹೊಸಕೋಟೆ ವ್ಯಾಪ್ತಿಯನ್ನೂ ಸೇರಿದಂತೆ ಒಟ್ಟಾರೆ 123 ಕಿ ಮೀ ರಸ್ತೆಯನ್ನು ...

ನಕಲಿ ಶಿಕ್ಷಕರಿಗೆ ವೇತನ ಪಾವತಿ; ಆರೋಪಿತ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ಕೈಬಿಟ್ಟ ಸರ್ಕಾರ!

ಬೆಂಗಳೂರು; ರಾಮನಗರ ಜಿಲ್ಲೆಯಲ್ಲಿ  2011ರಿಂದ 2014ರವರೆಗೆ ಹೆಚ್‌ಆರ್‍ಎಂಎಸ್‌ ಮೂಲಕ ನಕಲಿ ಶಿಕ್ಷಕರ...

120 ಎಕರೆ ಗೋಮಾಳ ಕಬಳಿಕೆ ಪ್ರಕರಣ; ಕಂದಾಯ ನಿರೀಕ್ಷಕರ ವರದಿಯನ್ನೇ ಮುಚ್ಚಿಟ್ಟ ತಹಶೀಲ್ದಾರ್, ಸಚಿವರ ಒತ್ತಡ?

ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು...

ಪಿಟಿಸಿಎಲ್, ಗೋಮಾಳ, ಅರಣ್ಯ ಜಮೀನು ಸ್ವರೂಪ ಮರೆಮಾಚಿ ಪರಿವರ್ತನೆ; ದಿ ಫೈಲ್ ವರದಿ ಬೆನ್ನಲ್ಲೇ ಸರ್ಕಾರದ ಮೆಟ್ಟಿಲೇರಿದ ಕೆಆರ್‍‌ಎಸ್‌

ಬೆಂಗಳೂರು; ಪಿಟಿಸಿಎಲ್,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ ಸ್ವರೂಪವನ್ನೇ...

30 ವರ್ಷಗಳ ನಂತರ ಎಲ್‌ಎಸಿ ಪ್ರಕರಣ ದಾಖಲು; ಸರ್ಕಾರದ ಬೊಕ್ಕಸಕ್ಕೆ 80 ಕೋಟಿ ಆರ್ಥಿಕ ಹೊರೆ

ಬೆಂಗಳೂರು; ಮಂಡ್ಯ ತಾಲೂಕು ಕೊತ್ತತ್ತಿ ಹೋಬಳಿಯ ಗುತ್ತಲು ಗ್ರಾಮದಲ್ಲಿ 30 ವರ್ಷಗಳ...

Related Articles

Popular Categories

error: Content is protected !!