ಬೆಂಗಳೂರು; ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು ಇನ್ನೂ 631.75 ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಲು ಬಾಕಿ ಉಳಿಸಿಕೊಂಡಿದೆ.
ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ನೀಡಿರುವ ಉತ್ತರದಲ್ಲಿ ಈ ಮಾಹಿತಿ ಇದೆ.
ಸಕಾfರವು ಪ್ರತಿ ತಿಂಗಳೂ ಸಹಾಯಧನ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಮುಂಗಡವಾಗಿ ಬಿಡುಗಡೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ ಜೆ ಜಾರ್ಜ್ ಅವರು ಹಲವು ಬಾರಿ ಹೇಳುತ್ತಲೇ ಬಂದಿದ್ದಾರೆ. ಆದರೆ ವಿಧಾನ ಪರಿಷತ್‌ನಲ್ಲಿ ನೀಡಿರುವ ಉತ್ತರದ ಪ್ರಕಾರ ವಿದ್ಯುತ್ ಸರಬರಾಜು ಕಂಪನಿಗಳಿಗೆ ಇನ್ನೂ 631.75 ಕೋಟಿಯಷ್ಟು ಸಹಾಯ ಧನ ಬಿಡುಗಡೆ ಮಾಡಲು ಬಾಕಿ ಉಳಿಸಿಕೊಂಡಿದೆ.
2023ರ ಆಗಸ್ಟ್ ನಿಂದ 2026ರ ಜನವರಿವರೆಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ 23,386.52 ಕೋಟಿ ರು ಮೊತ್ತದ ಸಹಾಯಧನ ಬೇಡಿಕೆ ಇದೆ. ಈ ಪೈಕಿ 22.754.77 ಕೋಟಿಯಷ್ಟು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಲು ಇನ್‌ನೂ 631.75 ಕೋಟಿ ಬಾಕಿ ಇದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ 10,953.53 ಕೋಟಿ ರು ಬೇಡಿಕೆ ಇದ್ದರೇ ಸರ್ಕಾರವು 10,625.15 ಕೋಟಿ ಬಿಡುಗಡೆ ಮಾಡಿದೆ. ಬೆಸ್ಕಾಂಗೆ ಇನ್ನೂ 328.38 ಕೋಟಿ ಬಿಡುಗಡೆ ಮಾಡಬೇಕಿದೆ.

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ 2,598.91 ಕೋಟಿ ರು ಬೇಡಿಕೆ ಪೈಕಿ 2,523.06 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 75.85 ಕೋಟಿ ರು ಬಾಕಿ ಇದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಗೆ 2,720.53 ಕೋಟಿ ರು ಬೇಡಿಕೆ ಪೈಕಿ 2,649.49 ಕೋಟಿ ರು ಬಿಡುಗಡೆ ಮಾಡಿರುವ ಇಂಧನ ಇಲಾಖೆಯು ಬಿಡುಗಡೆಗೆ ಇನ್ನೂ 71.04 ಕೋಟಿ ರು ಬಾಕಿ ಉಳಿಸಿಕೊಂಡಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಗೆ 4,098.26 ಕೋಟಿ ರುಪಾಯಿ ಬೇಡಿಕೆ ಪೈಕಿ 4,014.34 ಕೋಟಿ ರುಪಾಯಿ ಬಿಡುಗಡೆ ಮಾಡಿರುವ ಸರ್ಕಾರವು ಇನ್ನೂ 83.92 ಕೋಟಿ ರುಪಾಯಿ ಬಿಡುಗಡೆ ಮಾಡಬೇಕಿದೆ.

ಅದೇ ರೀತಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗೆ 3,015.29 ಕೋಟಿ ರುಪಾಯಿ ಬೇಡಿಕೆ ಪೈಕಿ 2,942.73 ಕೋಟಿ ರು ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 72.56 ಕೋಟಿ ರುಪಾಯಿ ಬಾಕಿ ಇದೆ.

ಬೆಸ್ಕಾಂ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ 2026ರ ಜನವರಿ ಅಂತ್ಯಕ್ಕೆ ಒಟ್ಟಾರೆ 76,58,275 ಗ್ರಾಹಕರು ಗೃಹಜ್ಯೋತಿಗೆ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 69,46,558 ಗ್ರಾಹಕರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. 2023-24ನೇ ಸಾಲಿನಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ 2718.25 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ಅವಧಿಯಲ್ಲಿ 2,633.83 ಕೋಟಿ ರು ಬೇಡಿಕೆ ಇತ್ತು.

2024-25ನೇ ಸಾಲಿನಲ್ಲಿ 4487.83 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದ್ದರೇ 4,293.83 ಕೊಟಿ ರು ಬೇಡಿಕೆ ಇತ್ತು. 2025-26ನೇ ಸಾಲಿನಲ್ಲಿ 3,696.86 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ಅವಧಿಯಲ್ಲಿ 4,025.90 ಕೋಟಿ ರುಪಾಯಿ ಬೇಡಿಕೆ ಇತ್ತು.
ಅದೇ ರೀತಿ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ 2026ರ ಜನವರಿ ಅಂತ್ಯಕ್ಕೆ 16,34,670 ಗ್ರಾಹಕರು ನೋಂದಣಿಯಾಗಿದ್ದರೇ ಈ ಪೈಕಿ 15,89,669 ಮಂದಿ ಮಾತ್ರ ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆದಿದ್ದರು. 2023-24ನೇ ಸಾಲಿನಲ್ಲಿ ಈ ವ್ಯಾಪ್ತಿಯಲ್ಲಿ 780.15 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದ್ದರೇ 631.89 ಕೋಟಿ ರು ಬೇಡಿಕೆ ಇತ್ತು. 2024-25ನೇ ಸಾಲಿನಲ್ಲಿ 1,185.22 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. 1,035.73 ಕೋಟಿ ರು ಬೇಡಿಕೆ ಇತ್ತು. 2025-26ನೇ ಸಾಲಿನ ಜನವರಿ 2026ರ ಅಂತ್ಯ್ಕ್ಕೆ 1,143.06 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಈ ಅವಧಿಯಲ್ಲಿ 931.29 ಕೋಟಿ ರು ಬೇಡಿಕೆಯಿತ್ತು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಹಾಸನದಲ್ಲಿ 24,61,742 ಮಂದಿ ನೋಂದಣಿಯಾಗಿದ್ದರು. ಈ ಪೈಕಿ 23,63,570 ಮಂದಿ ಉಚಿತ ವಿದ್ಯುತ್ ಪಡೆದಿದ್ದರು. 2023-24ರಲ್ಲಿ 691.99 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಈ ಅವಧಿಯಲ್ಲಿ 615.95 ಕೋಟಿ ರು ಬೇಡಿಕೆ ಇತ್ತು.

2024-25ನೇ ಸಾಲಿನಲ್ಲಿ 1,100.13 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಈ ಸಂಬಂಧ 1,090.58 ಕೋಟಿ ರು ಬೇಡಿಕೆ ಇತ್ತು. 2025-26ನೇ ಸಾಲಿನ ಜನವರಿ 2026ರ ಅಂತ್ಯಕ್ಕೆ 877.11 ಮಿಲಿಯನ್ ಯೂನಿಟ್ ಬಳಕೆಯಾಗಿದ್ದರೇ 1,014.00 ಕೋಟಿ ರುಪಾಯಿ ಬೇಡಿಕೆ ಇರಿಸಿತ್ತು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ್,ಹಾವೇರಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಯಲ್ಲಿ 34,58,140 ಗ್ರಾಹಕರು ನೋಂದಣಿಯಾಗಿದ್ದರೇ 34,29,447 ಗ್ರಾಹಕರು ಉಚಿತ ವಿದ್ಯುತ್ ಪಡೆದಿದ್ದರು. 2023-24ರಲ್ಲಿ 973.01 ಮಿಲಿಯನ್ ಯೂನಿಟ್ ಬಳಕೆಯಾಗಿದ್ದರೇ 994.38 ಕೋಟಿ ರುಪಾಯಿ ಬೇಡಿಕೆ ಇರಿಸಿತ್ತು.
2024-25ನೇ ಸಾಲಿನಲ್ಲಿ 1,601.70 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದ್ದರೇ 1,645.72 ಕೋಟಿ ಬೇಡಿಕೆ ಇರಿಸಿತ್ತು. 2025-26ನೇ ಸಾಲಿನ ಜನವರಿ 2026ರ ಅಂತ್ಯಕ್ಕೆ 1,335.19 ಮಿಲಿಯನ್ ಯೂನಿಟ್ ಬಳಕೆಯಾಗಿದ್ದರೇ 1,458.17 ಕೋಟಿ ರುಪಾಯಿ ಬೇಡಿಕೆ ಇರಿಸಿತ್ತು.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಬಳ್ಳಾರಿ, ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 22,59,207 ಗ್ರಾಹಕರು ನೋಂದಣಿಯಾಗಿದ್ದರು. ಈ ಪೈಕಿ 21,71,708 ಮಂದಿ ಉಚಿತ ವಿದ್ಯುತ್ ಪಡೆದಿದ್ದರು. 2023-24ನೇ ಸಾಲಿನಲ್ಲಿ 724.85 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಈ ಪೈಕಿ 678.75 ಕೋಟಿಯಷ್ಟು ಬೇಡಿಕೆ ಇರಿಸಿತ್ತು.

2024-25ನೇ ಸಾಲಿನಲ್ಲಿ 1,377.64 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದ್ದರೇ 1,222.23 ಕೋಟಿ ಬೇಡಿಕೆ ಇರಿಸಿತ್ತು. 2025-26ನೇ ಸಾಲಿನ ಜನವರಿ 2026ರ ಅಂತ್ಯಕ್ಕೆ 1,130.07 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದ್ದರೇ 1,114.32 ಕೋಟಿ ರುಪಾಯಿ ಬೇಡಿಕೆ ಇರಿಸಿತ್ತು.
ಒಟ್ಟಾರೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ 1,74,72, 034 ಮಂದಿ ಗ್ರಾಹಕರು ನೋಂದಾಯಿಸಿದ್ದರೇ ಈ ಪೈಕಿ 1,65,00,952 ಮಂದಿ ಗ್ರಾಹಕರು ಉಚಿತ ವಿದ್ಯುತ್ ಪಡೆದಿದ್ದರು. 2023-24ನೇ ಸಾಲಿನಲ್ಲಿ ಒಟ್ಟಾರೆ 5,888.25 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಈ ಅವಧಿಯಲ್ಲಿ 5,554.8 ಕೋಟಿ ರು ಬೇಡಿಕೆ ಇರಿಸಿತ್ತು.
2024-25ನೇ ಸಾಲಿನಲ್ಲಿ 9,752.52 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿದ್ದರೇ 9,288.09 ಕೋಟಿ ರು ಬೇಡಿಕೆ ಇರಿಸಿತ್ತು. . 2025-26ನೇ ಸಾಲಿನ ಜನವರಿ 2026ರ ಅಂತ್ಯ್ಕೆ 8,192.29 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆಯಾಗಿತ್ತು. ಒಟ್ಟಾರೆ 8,543.68 ಕೋಟಿ ರುಪಾಯಿ ಬೇಡಿಕೆ ಇರಿಸಿತ್ತು ಎಂದು ಅಂಕಿ ಅಂಶ ಒದಗಿಸಿರುವುದು ತಿಳಿದು ಬಂದಿದೆ.







