Monday | October 5, 2026 |

ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 1,227 ಸೀಟು ಮರಳಿಸಿದ ಬಿಜೆಪಿ ಸರ್ಕಾರ

ಬೆಂಗಳೂರು; ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಉಳಿಯುವ ವೈದ್ಯಕೀಯ ಸೀಟುಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಹಿಂತಿರುಗಿಸುವಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಮುಂದುವರೆದಿದೆ. 2019-20 ಮತ್ತು 2020-21ನೇ ಸಾಲಿನಲ್ಲಿ ನಡೆದಿದ್ದ ವೈದ್ಯಕೀಯ ಸೀಟು ಹಂಚಿಕೆಯ ಕೌನ್ಸೆಲಿಂಗ್‌ ಪ್ರಕ್ರಿಯೆ ಮುಕ್ತಾಯವಾದ ನಂತರ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ, ಆದಿಚುಂಚನಗಿರಿ, ಮುರುಘಾ ಮಠ ಸೇರಿದಂತೆ ಪ್ರಭಾವಿ ಖಾಸಗಿ ಮೆಡಿಕಲ್‌ ಕಾಲೇಜುಗಳಿಗೆ 1,227 ಸೀಟುಗಳನ್ನು ಹಿಂದಿರುಗಿಸಲಾಗಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಉಳಿಯುವ ವೈದ್ಯಕೀಯ ಸೀಟುಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಹಿಂತಿರುಗಿಸುವಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಹಿಂದಿನ ಸರ್ಕಾರದ ವಿರುದ್ಧ ಆರೋಪಿಸಿದ್ದರು. ಆದರೀಗ ಬಿಜೆಪಿ ಸರ್ಕಾರದ 2 ವರ್ಷದ ಅವಧಿಯಲ್ಲಿಯೇ 27 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 1,227 ಸೀಟುಗಳನ್ನು ಹಿಂದಿರುಗಿಸಲಾಗಿರುವುದು ಮುನ್ನೆಲೆಗೆ ಬಂದಿದೆ.

2018-19ರಲ್ಲಿಯೂ ಉಳಿಕೆ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಿಂದಿರುಗಿಸಿದ್ದನ್ನು ಸಿಒಡಿ ತನಿಖೆ ನಡೆಸಬೇಕು ಎಂದು ಎನ್‌ ರವಿಕುಮಾರ್‌ ಅವರು 2019ರ ಆಗಸ್ಟ್‌ 14ರಂದು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಯಡಿಯೂರಪ್ಪ ಅವರು ತನಿಖೆ ಕೈಗೊಂಡು ವರದಿ ಸಲ್ಲಿಸಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೀಟು ಹಿಂದಿರುಗಿಸುವ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನೂ ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಈ ಬಾರಿಯೂ ಹೊರಗೆಳೆದಿದ್ದಾರೆ. 2018-19ರ ಅವಧಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಪತ್ರ ಬರೆದಿದ್ದ ರವಿಕುಮಾರ್‌ ಅವರು ತನಿಖೆ ಸಂಬಂಧ ದನಿ ಎತ್ತದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರ ವಾಪಸ್‌ ಪಡೆದು ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರದ ಕೋಟಾದಲ್ಲಿ ಕೌನ್ಸಲಿಂಗ್‌ ಮೂಲಕ ಹಂಚಿಕೆಯ ಆಯ್ಕೆ ಮಾಡಿಕೊಡುವ ಕುರಿತು ಬಿಜೆಪಿ ಸರ್ಕಾರ ತನ್ನ ನಿಲುವನ್ನು ವ್ಯಕ್ತಪಡಿಸಿಲ್ಲ.

ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ನೀಡಿರುವ ಉತ್ತರದಲ್ಲಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ 1,227 ಸೀಟುಗಳನ್ನು ಹಿಂದಿರುಗಿಸಿರುವ ಮಾಹಿತಿ ಒದಗಿಸಿದ್ದಾರೆ.

ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಡಾ ಶಾಮನೂರು ಶಿವಶಂಕರಪ್ಪ ಅವರ ಹೆಸರಿನಲ್ಲಿರುವ ಮೆಡಿಕಲ್‌ ಕಾಲೇಜು, ಚಿತ್ರದುರ್ಗ ಮುರುಘಾ ಮಠ ನಡೆಸುವ ಬಸವೇಶ್ವರ ಮೆಡಿಕಲ್‌ ಕಾಲೇಜು, ಆದಿಚುಂಚನಗಿರಿ ಮೆಡಿಕಲ್‌ ಕಾಲೇಜೂ ಸೇರಿದಂತೆ ಹಲವು ಖಾಸಗಿ ವೈದ್ಯಕೀಯ ಕಾಲೇಜುಗಳೂ ಈ ಪಟ್ಟಿಯಲ್ಲಿವೆ.

ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹಿಂದಿರುಗಿಸಿರುವ ಪಟ್ಟಿ

ಡಾ ಬಿ ಆರ್‌ ಅಂಬೇಡ್ಕರ್‌ ಮೆಡಿಕಲ್ ಕಾಲೇಜು – 40 ಸೀಟು

ಖ್ವಾಜಾ ಬಂದೇ ನವಾಜ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಗುಲ್ಬರ್ಗಾ- 31

ಎಂವಿಜೆ ಮೆಡಿಕಲ್ ಕಾಲೇಜು ರೀಸರ್ಚ್‌ ಆಸ್ಪತ್ರೆ ಚನ್ನಸಂದ್ರ, ಬೆಂಗಳೂರು- 59

ವೈದೇಹಿ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಅಂಡ್‌ ರೀಸರ್ಚ್‌ ಸೆಂಟರ್‌ ಬೆಂಗಳೂರು- 59

ಎ ಜೆ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌, ಮಂಗಳೂರು- 39

ಶ್ರೀ ಬಸವೇಶ್ವರ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ, ಚಿತ್ರದುರ್ಗ- 21

ಆದಿಚುಂಚನಗಿರಿ ಇನ್ಸಿಟಿಟ್ಯೂಟ್‌ ಮೆಡಿಕಲ್ ಸೈನ್ಸ್‌ಸ್‌ ಬೆಳ್ಳೂರು, ಮಂಡ್ಯ- 27

ಅಲ್‌ ಅಮೀನ್‌ ಮೆಡಿಕಲ್‌ ಕಾಲೇಜು, ವಿಜಯಪುರ- 25

ಎಸ್‌ ನಿಜಲಿಂಗಪ್ಪ ಮೆಡಿಕಲ್‌ ಕಾಲೇಜು ರೀಸರ್ಚ್‌ ಸೆಂಟರ್, ಬಾಗಲಕೋಟೆ- 80

ಎಸ್‌ಡಿಎಂ ಕಾಲೇಜು ಆಫ್‌ ಮೆಡಿಕಲ್‌ ಸೈನ್ಸ್‌ಸ್‌ ಅಂಡ್‌ ಆಸ್ಪತ್ರೆ, ಧಾರವಾಡ – 14

ಮಹಾದೇವಪ್ಪ ರಾಂಪುರೆ ಮೆಡಿಕಲ್‌ ಕಾಲೇಜು, ಕಲ್ಬುರ್ಗಿ – 60

ನವೋದಯ ಮೆಡಿಕಲ್ ಕಾಲೇಜು, ರಾಯಚೂರು – 60

ವೆಂಕಟರಮಣ ಗೌಡ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆ ದಕ್ಷಿಣ ಕನ್ನಡ – 27

ಜಗದ್ಗುರು ಮುರುಘರಾಜೇಂದ್ರ ಮೆಡಿಕಲ್ ಕಾಲೇಜು, (ಜೆಜೆಎಂ) ದಾವಣಗೆರೆ – 98

ಶಾಮನೂರು ಶಿವಶಂಕರಪ್ಪ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌ ದಾವಣಗೆರೆ – 60

ಸಪ್ತಗಿರಿ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್ಸ್‌ , ಬೆಂಗಳೂರು – 59

ಶ್ರೀನಿವಾಸ ಇನ್ಸಿಟಿಟ್ಯೂಟ್‌ ಆಫ್ ಮೆಡಿಕಲ್‌ ರೀಸರ್ಚ್‌ ಸೆಂಟರ್‌, ಮಂಗಳೂರು – 58

ಸುಬ್ಬಯ್ಯ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌, ಶಿವಮೊಗ್ಗ -59

ಬಿಜಿಎಸ್‌ ಗ್ಲೋಬಲ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌ ಕೆಂಗೇರಿ, ಬೆಂಗಳೂರು- 22

ಶ್ರೀದೇವಿ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮ್ತು ರೀಸರ್ಚ್‌ ಆಸ್ಪತ್ರೆ ತುಮಕೂರು- 55

ದಿ ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು, ಆಸ್ಪತ್ರೆ ಮತ್ತು ರೀಸರ್ಚ್ ಕೇಂದ್ರ, ಬೆಂಗಳೂರು- 52

ಆಕಾಶ್‌ ಮೆಡಿಕಲ್‌ ಸೈನ್ಸ್‌ಸ್‌ ಅಂಡ್‌ ರೀಸರ್ಚ್‌ ಸೆಂಟರ್‌, ಬೆಂಗಳೂರು- 60

ಕಣಚೂರು ಇನ್ಸಿಟಿಟ್ಯೂಟ್‌ ಅಫ್‌ ಮೆಡಿಕಲ್‌ ಸೈನ್ಸ್‌ ರೀಸರ್ಚ್ ಸೆಂಟರ್‌, ಮಂಗಳೂರು-59

ಈಸ್ಟ್‌ ಪಾಯಿಂಟ್‌ ಕಾಲೇಜು ಆರ್ಪ್ ಮೆಡಿಕಲ್‌ ಸೈನ್ಸ್‌ಸ್‌ ರೀಸರ್ಚ್ ಸೆಂಟರ್‌, ಬೆಂಗಳೂರು- 58

ಡಾ ಚಂದ್ರಮ್ಮ ದಯಾನಂದ ಸಾಗರ್‌ ಇನ್ಸಿಟಿಟ್ಯೂಟ್‌ ಅಫ್‌ ಮೆಡಿಕಲ್‌ ಎಜುಕೇಷನ್, ರಾಮನಗರ- 23

2019-20ನೇ ಸಾಲಿನ ವೈದ್ಯಕೀಯ ಸೀಟುಗಳು ಹಂಚಿಕೆಯಾಗದೇ ಮಾಪ್‌ಅಪ್‌ ರೌಂಡ್‌ ಸುತ್ತಿನ ನಂತರ ಇತರೆ ಕೋಟಾದಡಿ ಒಟ್ಟು 530 ಸೀಟುಗಳು ಬಾಕಿ ಉಳಿದಿರುತ್ತವೆ. 2020-21ನೇ ಸಾಲಿನ ವೈದ್ಯಕೀಯ ಸೀಟುಗಳು ಹಂಚಿಕೆಯಾಗದೇ ಮಾಪ್‌ ಅಪ್‌ ರೌಂಡ್‌ ಸುತ್ತಿನ ನಂತರ ಇತರೆ ಕೋಟಾದಡಿ ಒಟ್ಟು 697 ಸೀಟುಗಳು ಬಾಕಿ ಉಳಿದಿರುವುದು ಸಚಿವ ಸುಧಾಕರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

2091-20 ಮತ್ತು 2020-21ನೇ ಶೈಕ್ಷಣಿಕ ವರ್ಷದಲ್ಲಿ 1,227 ಸರ್ಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಖಾಸಗಿಯವರಿಗೆ ಹಿಂತಿರುಗಿಸಿರುವುದು ಮತ್ತು 2021-22ರ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರ ವಾಪಸ್‌ ಪಡೆದು ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರದ ಕೋಟಾದಲ್ಲಿ ಕೌನ್ಸಲಿಂಗ್‌ ಮೂಲಕ ಹಂಚಿಕೆಯ ಆಯ್ಕೆ ಮಾಡಿಕೊಡುವ ಕುರಿತು ಕೇಳಿದ್ದ ಪ್ರಶ್ನೆಗೆ ಸಚಿವ ಸುಧಾಕರ್‌ ಅವರು ಯಾವುದೇ ಉತ್ತರವನ್ನೂ ನೀಡಿಲ್ಲ.

ಎಂಬಿಬಿಎಸ್‌ ಸೀಟ್‌ಗೆ ಕನಿಷ್ಠ 1 ಕೋಟಿ ಗರಿಷ್ಠ 1.60 ಕೋಟಿ ಇದೆ. ಸ್ನಾತಕೋತ್ತರ ತರಗತಿಯ ಒಂದು ಸೀಟ್‌ಗೆ ಗರಿಷ್ಠ 3 ಕೋಟಿ ಕನಿಷ್ಠ 2 ಕೋಟಿ ರು.ಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ವಸೂಲು ಮಾಡುತ್ತವೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಅಲ್ಲದೆ ಸರ್ಕಾರ ಹಿಂದಿರುಗಿಸಿರುವ ಸೀಟುಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ದುಬಾರಿ ದರಕ್ಕೆ ಬಿಕರಿ ಮಾಡುತ್ತವೆ ಎಂಬ ಆಪಾದನೆಯೂ ಇದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ. ಈ ಖಾಸಗಿ ಕಾಲೇಜುಗಳು ವಿಧಿಸಿರುವ ಶುಲ್ಕ ಭರಿಸಲು ಶಕ್ತರಾಗದ ವಿದ್ಯಾರ್ಥಿಗಳು ಆ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದಿಲ್ಲ. ಹೀಗಾಗಿ ಸರ್ಕಾರಿ ಸೀಟುಗಳು ಅಲ್ಲಿಯೇ ಉಳಿಯುತ್ತವೆ. ಆ ನಂತರ ಈ ಸೀಟುಗಳನ್ನು ಕೋಟ್ಯಂತರ ರುಪಾಯಿಗೆ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಶಕ್ತರಾಗಿರುವ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Hot this week

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...
Please Scan to make Your Contribution

Topics

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

Related Articles

Popular Categories

error: Content is protected !!