Thursday | October 29, 2026 |

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನವನ್ನು ಬಿಡುಗಡೆ ಮಾಡಿದೆ. ಅಲ್ಲದೇ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಒದಗಿಸಿದ್ದ ಒಟ್ಟು ಅನುದಾನದ ಪೈಕಿ ಶೇ. 56.2ರಷ್ಟು ವೆಚ್ಚ ಮಾಡಿರುವುದು ಇದೀಗ ಬಹಿರಂಗವಾಗಿದೆ.

2026ರ ಅಕ್ಟೋಬರ್‍‌ 27ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ  ನಡೆದಿದ್ದ ಕರ್ನಾಟಕ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯಲ್ಲಿ ಕೇಂದ್ರ ಪುರಸ್ಕೃತವಾರು ಯೋಜನೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದೆ. ಒಟ್ಟು 28 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ವಿಶ್ಲೇಷಿಸಿದೆ.

ಕೇಂದ್ರ ಪುರಸ್ಕೃತ ಯೋಜನೆ ಅಡಿಯಲ್ಲಿ ಒದಗಿಸಿದ್ದ ಅನುದಾನ ಮತ್ತು  ವೆಚ್ಚದ ಪ್ರಗತಿ ಕುರಿತು ಆಡಳಿತ ಮತ್ತು ಪ್ರತಿಪಕ್ಷ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ 2026-27ನೇ ಸಾಲಿನ ಕೇಂದ್ರ ಪುರಸ್ಕೃತವಾರು ಯೋಜನೆಗಳಿಗೆ ಸಂಬಂಧಿಸಿದ ಆರ್ಥಿಕ ಪ್ರಗತಿಯ ವಾಸ್ತವ ಚಿತ್ರಣವು ಮುನ್ನೆಲೆಗೆ ಬಂದಿದೆ.

ಇಲಾಖೆಗಳು ಈ ಸಭೆಗೆ ಮಂಡಿಸಿರುವ ಅಂಕಿ ಅಂಶಗಳ ಸಮಗ್ರ ವಿವರಗಳು ದಿ ಫೈಲ್‌ ಗೆ ಲಭ್ಯವಾಗಿವೆ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರದ ಪಾಲು 2025-26ರಲ್ಲಿ 26,653.33 ಕೋಟಿಯಷ್ಟಿತ್ತು.

 

2026-27ರಲ್ಲಿ 24,569.14 ಕೋಟಿಯಷ್ಟಿತ್ತು.  ಕಳೆದ ವರ್ಷಕ್ಕೆ ಹೋಲಿಸಿದರೇ ಪ್ರಸಕ್ತ ಸಾಲಿನಲ್ಲಿ  2,084.19 ಕೋಟಿಯಷ್ಟು ಕಡಿಮೆ ಇದೆ. ಹಾಗೆಯೇ ರಾಜ್ಯದ ಪಾಲು 2025-26ರಲ್ಲಿ 21,540.33 ಕೋಟಿಯಷ್ಟಿದ್ದರೇ 2026-27ರಲ್ಲಿ 23,533.61 ಕೋಟಿಯಷ್ಟಿದೆ. ಕಳೆದ ವರ್ಷಕ್ಕೆ  ಹೋಲಿಸಿದರೇ ಪ್ರಸಕ್ತ ಸಾಲಿನಲ್ಲಿ ರಾಜ್ಯವು ತನ್ನ ಪಾಲುದಾರಿಕೆಯಲ್ಲಿ 1,993.28 ಕೋಟಿಯಷ್ಟು ಹೆಚ್ಚಳ ಮಾಡಿಕೊಂಡಿದೆ.

2026-27ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರವು 24,569.14 ಕೋಟಿ ರು ಅನುದಾನ ಒದಗಿಸಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ  ರಾಜ್ಯದ ಅನುದಾನವು 23,533.61 ಕೋಟಿ ರು ಪಾಲು ಹೊಂದಿದೆ. ಪ್ರಾಥಮಿಕ ಶಿಲ್ಕು ಸೇರಿ ಒಟ್ಟಾರೆ 49, 535.69 ಕೋಟಿ ರು ಅನುದಾನ ಲಭ್ಯವಿದೆ. ಇದರಲ್ಲಿ  ಕೇಂದ್ರ ಸರ್ಕಾರದ ಪಾಲಿನ 23,533.61 ಕೋಟಿ ರು ಪೈಕಿ ಕೇವಲ 8,782.73 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ರಾಜ್ಯವು ತನ್ನ ಪಾಲಿನ 23,533.61 ಕೋಟಿ ರು ನಲ್ಲಿ 12,327.14 ಕೋಟಿ ರು ಬಿಡುಗಡೆ ಮಾಡಿದೆ.

ರಾಜ್ಯವು ತನ್ನ ಪಾಲುದಾರಿಕೆಯ 23,533.61 ಕೋಟಿ ರುನಲ್ಲಿ  ಇನ್ನೂ 11,206.47 ಕೋಟಿ ರು, ಕೇಂದ್ರವು 15,786.41 ಕೋಟಿ ರುಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ.  2026ರ ಅಕ್ಟೋಬರ್‍‌ 19ರ ಅಂತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಒಟ್ಟಾರೆ 21,109.87 ಕೋಟಿ ರು ಬಿಡುಗಡೆ ಮಾಡಿದೆ. ಈ ಪೈಕಿ 12,677.64 ಕೋಟಿ ರು ಮಾತ್ರ ಖರ್ಚು ಮಾಡಿದೆ. ಇದು ಲಭ್ಯ ಅನುದಾನಕ್ಕೆ ಶೇ.56.2ರಷ್ಟಿರುವುದು ಗೊತ್ತಾಗಿದೆ.

ಅದೇ ರೀತಿ ಅಕ್ಟೋಬರ್‍‌ 19ರ ಅಂತ್ಯಕ್ಕೆ 9,865.18 ಕೋಟಿ ರು ವೆಚ್ಚವಾಗದೇ ಬಾಕಿ ಉಳಿಸಿಕೊಂಡಿದೆ. ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವು ಒದಗಿಸಿಕೊಂಡಿದ್ದ 1,706.50 ಕೋಟಿ ರುಪಾಯಿ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ 19.93 ಕೋಟಿ ರುಪಾಯಿನಲ್ಲಿ ಬಿಡಿಗಾಸನ್ನೂ ನೀಡಿಲ್ಲದಿರುವುದು ತಿಳಿದು ಬಂದಿದೆ.

 

 

ಗ್ರಾಮೀಣಾಭಿವೃದ್ಧಿ,  ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೃಷಿ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ತೋಟಗಾರಿಕೆ, ಸಣ್ಣ ನೀರಾವರಿ, ಅರಣ್ಯ, ಪಶು ಸಂಗೋಪನೆ, ಹಿಂದುಳಿದ ವರ್ಗ, ವಾಣಿಜ್ಯ ಕೈಗಾರಿಕೆ (ಸಣ್ಣ), ಮೀನುಗಾರಿಕೆ, ಜಲಸಂಪನ್ಮೂಲ, ಮೂಲಭೂತ ಸೌಕರ್ಯ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರದ ಬಿಡುಗಡೆ ಪ್ರಮಾಣವು ಶೇ. 50ಕ್ಕಿಂತ ಕಡಿಮೆ ಇದೆ.

2025-26ನೇ ಸಾಲಿನಲ್ಲಿ ಇದೇ ಹೊತ್ತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿನಲ್ಲಿ ಒಟ್ಟಾರೆ 50,604.04 ಕೋಟಿ ರು ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ 18,511.78 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 14,880.73 ಕೋಟಿ ರು ವೆಚ್ಚ ಮಾಡಿತ್ತು. ಅನುದಾನ ಹಂಚಿಕೆಯಲ್ಲಿಯೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1,068.35 ಕೋಟಿ ರು ಕಡಿಮೆ ಅನುದಾನ ಒದಗಿಸಿಕೊಂಡಿದೆ. ಪ್ರಸಕ್ತ ಸಾಲಿನ  ವೆಚ್ಚದಲ್ಲಿಯೂ ಸಹ 2,203.09 ಕೋಟಿ ಯಷ್ಟು ಕಡಿಮೆ ವೆಚ್ಚವಾಗಿದೆ. ಕಳೆದ ವರ್ಷ ಲಭ್ಯ ಅನುದಾನಕ್ಕೆ ಶೇ. 69.6ರಷ್ಟು ವೆಚ್ಚವಾಗಿದ್ದರೇ ಪ್ರಸಕ್ತ ಸಾಲಿನಲ್ಲಿ ಲಭ್ಯ ಅನುದಾನಕ್ಕೆ ಶೇ. 56.2ರಷ್ಟಿದೆ.

 

 

ಗ್ರಾಮೀಣಾಭಿವೃದ್ಧಿಗೆ ರಾಜ್ಯವು ಒದಗಿಸಿಕೊಂಡಿರುವ 6,942.81 ಕೋಟಿ ರುಪಾಯಿನಲ್ಲಿ  4,117.29 ಕೋಟಿ ರು,  ಕೇಂದ್ರವು ಒದಗಿಸಿಕೊಂಡಿರುವ 9,393.08 ಕೋಟಿ ರುಪಾಯಿನಲ್ಲಿ  3,480.06 ಕೋಟಿ ರು ಬಿಡುಗಡೆ ಮಾಡಿದೆ.  ಕಂದಾಯ (ವಿಪತ್ತು ನಿರ್ವಹಣೆ) ಇಲಾಖೆಗೆ  ರಾಜ್ಯವು 6,357.99 ಕೋಟಿ ರುಪಾಯಿನಲ್ಲಿ 4,469.06 ಕೋಟಿ ರು ಬಿಡುಗಡೆ ಮಾಡಿದ್ದರೇ ಕೇಂದ್ರವು ಒದಗಿಸಿಕೊಂಡಿರುವ 1,706.50 ಕೋಟಿ ರುಪಾಯಿನಲ್ಲಿ ಒಂದೇ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.  ಶಾಲಾ ಶಿಕ್ಷಣ ಸಾಕ್ಷರತೆಗೆ ರಾಜ್ಯವು 2,675.96 ಕೋಟಿ ರು ಪೈಕಿ 560.64 ಕೋಟಿ ರು., ಕೇಂದ್ರವು 1,655.23 ಕೋಟಿ ರುಪಾಯಿನಲ್ಲಿ  644.44 ಕೋಟಿ ರು., ವಸತಿ ಇಲಾಖೆಗೆ ರಾಜ್ಯವು 683.36 ಕೋಟಿ ರು ಪೈಕಿ  263.37 ಕೋಟಿ, ಕೇಂದ್ರವು  866.25 ಕೋಟಿ ರು ನಲ್ಲಿ 499.73 ಕೋಟಿ ರುಪಾಯಿ ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.

ಪೌರಾಡಳಿತ ನಿರ್ದೇಶನಾಲಕ್ಕೆ ರಾಜ್ಯವು  976.19 ಕೋಟಿ ರು ಒದಗಿಸಿಕೊಂಡಿತ್ತು. ಈ ಪೈಕಿ  881.51 ಕೋಟಿ ರು ಬಿಡುಗಡೆ ಮಾಡಿದೆ. ಕೇಂದ್ರವು ಇದೇ ಇಲಾಖೆಗೆ ಒದಗಿಸಿಕೊಂಡಿರುವ 1,136.30 ಕೋಟಿ ರು ಅನುದಾನದಲ್ಲಿ  982.14 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಗೆ  ರಾಜ್ಯವು 1,216.97 ಕೋಟಿ ರುಪಾಯಿನಲ್ಲಿ  544.45 ಕೋಟಿ, ಕೇಂದ್ರವು  1,451.96 ಕೋಟಿ ರು ನಲ್ಲಿ  721.35 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ  ರಾಜ್ಯವು 1,160.22 ಕೋಟಿ ಪೈಕಿ  346.45 ಕೋಟಿ, ಕೇಂದ್ರವು  1,492.79 ಕೋಟಿ ರುನಲ್ಲಿ  349.39 ಕೋಟಿ ರು., ಕೃಷಿ ಇಲಾಖೆಗೆ ರಾಜ್ಯವು  551.01 ಕೋಟಿ ರು ಪೈಕಿ  248.81 ಕೋಟಿ, ಕೇಂದ್ರವು  837.48 ಕೋಟಿ ರು ನಲ್ಲಿ  371.26 ಕೋಟಿ ರು ಬಿಡುಗಡೆ ಮಾಡಿದೆ.

ಪಿಡಬ್ಲ್ಯೂಡಿಗೆ ರಾಜ್ಯವು 70 ಕೋಟಿ ರು ನಲ್ಲಿ  64.67 ಕೋಟಿ, ಕೇಂದ್ರವು  605.00 ಕೋಟಿ ರು ನಲ್ಲಿ  479.25 ಕೋಟಿ ರು ಬಿಡುಗಡೆ ಮಾಡಿದೆ. ಅದೇ ರೀತಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ  ರಾಜ್ಯವು 60.05 ಕೋಟಿ ರು ನಲ್ಲಿ  48.44 ಕೋಟಿ, ಕೇಂದ್ರವು  451.25 ಕೋಟಿ ರು ನಲ್ಲಿ  210.19 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯವು  188.19 ಕೋಟಿ ರು ಪೈಕಿ  63.33 ಕೋಟಿ, ಕೇಂದ್ರವು  269.77 ಕೋಟಿ ರು ನಲ್ಲಿ  95.00 ಕೋಟಿ, ಕೌಶಲ್ಯಾಭಿವೃದ್ಧಿಗೆ  ರಾಜ್ಯವು 268.81 ಕೋಟಿ ರು ಪೈಕಿ  203.61 ಕೋಟಿ, ಕೇಂದ್ರವು  408.04 ಕೋಟಿ ರುನಲ್ಲಿ  310.47 ಕೋಟಿ ರು ಬಿಡುಗಡೆ ಮಾಡಿದೆ.

ಸಮಾಜ ಕಲ್ಯಾಣಕ್ಕೆ ರಾಜ್ಯ ಸರ್ಕಾರವು ಒದಗಿಸಿಕೊಂಡಿರುವ 464.05 ಕೋಟಿ ರು ಪೈಕಿ  ಕೇವಲ 3.00 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಕೇಂದ್ರವು  435.50 ಕೋಟಿ ರುನಲ್ಲಿ  127.32 ಕೋಟಿ ರು ಬಿಡುಗಡೆ ಮಾಡಿದೆ. ತೋಟಗಾರಿಕೆಗೆ ರಾಜ್ಯವು 394.66 ಕೋಟಿ ರು ನಲ್ಲಿ  166.29 ಕೋಟಿ ರು., ಕೇಂದ್ರವು  442.15 ಕೋಟಿ ರು ನಲ್ಲಿ  212.01 ಕೋಟಿ ರು ಬಿಡುಗಡೆ ಮಾಡಿದೆ. ವಿಶೇಷವೆಂದರೇ ಉನ್ನತ ಶಿಕ್ಷಣದಲ್ಲಿ  ರಾಜ್ಯವು 38.19 ಕೋಟಿ ರು ಅನುದಾನ ಒದಗಿಸಿಕೊಂಡಿದೆಯಾದರೂ ಹೆಚ್ಚುವರಿಯಾಗಿ 2 ಕೋಟಿ ಸೇರಿಸಿ 4-.00 ಕೋಟಿ ರು ಬಿಡುಗಡೆ ಮಾಡಿದೆ. ಕೇಂದ್ರವು  ಉನ್ನತ ಶಿಕ್ಷಣಕ್ಕೆ 65.80 ಕೋಟಿ ರುಪಾಯಿ ಪೈಕಿ  61.50 ಕೋಟಿ ರು ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

ಸಹಕಾರ ಇಲಾಖೆಗೆ ರಾಜ್ಯವು 9.77 ಕೋಟಿ ರುಪಾಯಿನಲ್ಲಿ   9.33 ಕೋಟಿ, ಕೇಂದ್ರವು 16.20 ಕೋಟಿ ರುನಲ್ಲಿ  14.00 ಕೋಟಿ ರು ಬಿಡುಗಡೆ ಮಾಡಿದೆ. ಸಣ್ಣ ನೀರಾವರಿಯಲ್ಲಿ ರಾಜ್ಯವು 460.00 ಕೋಟಿ ರು ಪೈಕಿ  ಕೇವಲ 7.33 ಕೋಟಿ ರು ಬಿಡುಗಡೆ ಮಾಡಿದೆ. ಕೇಂದ್ರವು ಇದೇ ಇಲಾಖೆಗೆ 689.00 ಕೋಟಿ ರುಪಾಯಿನಲ್ಲಿ  11.26 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆಗೆ ರಾಜ್ಯವು 62.16 ಕೋಟಿ ರುಪಾಯಿನಲ್ಲಿ  8.40 ಕೋಟಿ, ಕೇಂದ್ರವು 82.74 ಕೋಟಿ ರುಪಾಯಿನಲ್ಲಿ  12.60 ಕೋಟಿ, ಪಶು ಸಂಗೋಪನೆಗೆ ರಾಜ್ಯವು 52.76 ಕೋಟಿ ರು ಪೈಕಿ 15.58 ಕೋಟಿ, ಕೇಂದ್ರವು 91.66 ಕೋಟಿ ರುನಲ್ಲಿ  19.53 ಕೋಟಿ ರು ಬಿಡುಗಡೆ ಮಾಡಿದೆ.

ವೈದ್ಯಕೀಯ ಶಿಕ್ಷಣಕ್ಕೆ ರಾಜ್ಯವು 15.06 ಕೋಟಿ ರು ನಲ್ಲಿ ಬಿಡಿಗಾಸನ್ನೂ  ಬಿಡುಗಡೆ ಮಾಡಿಲ್ಲ. ಕೇಂದ್ರವೂ ಸಹ 19.93 ಕೋಟಿ ರು ಒದಗಿಸಿದೆಯಾದರೂ ಇದರಲ್ಲಿಯೂ ನಯಾಪೈಸೆಯನ್ನೂ ಕೊಟ್ಟಿಲ್ಲ. ಹಿಂದುಳಿದ ವರ್ಗಗಳಿಗೆ ರಾಜ್ಯವು 140.01 ಕೋಟಿ ರು ಪೈಕಿ  63.67 ಕೋಟಿ ರು ಬಿಡುಗಡೆ ಮಾಡಿದ್ದರೇ ಕೇಂದ್ರವು ತನ್ನ ಪಾಲಿನ 210.01 ಕೋಟಿ ರುಪಾಯಿನಲ್ಲಿ  96.78 ಕೋಟಿ ರುಪಾಯಿ ನೀಡಿದೆ. ವಾಣಿಜ್ಯ ಕೈಗಾರಿಕೆ (ಸಣ್ಣ)  ರಾಜ್ಯವು 20.85 ಕೋಟಿ ರುಪಾಯಿನಲ್ಲಿ  ಕೇವಲ 4.46 ಕೋಟಿ ರು ಬಿಡುಗಡೆ ಮಾಡಿದ್ದರೇ ಕೇಂದ್ರವು 99.05 ಕೋಟಿ ರುಪಾಯಿನಲ್ಲಿ  ಬಿಡಿಗಾಸನ್ನೂ ಕೊಟ್ಟಿಲ್ಲ.

 

 

ಮೀನುಗಾರಿಕೆಗೆ ರಾಜ್ಯವು 68.34 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ  17.48 ಕೋಟಿ ರು ಮಾತ್ರ ಬಿಡುಗಡೆ ಮಾಡಿದೆ. 106.01 ಕೋಟಿ ರು ಒದಗಿಸಿಕೊಂಡಿರುವ  ಕೇಂದ್ರವು 24.72 ಕೋಟಿ ರು ನೀಡಿದೆ. ಒಳಾಡಳಿತ ಇಲಾಖೆಗೆ ರಾಜ್ಯವು  15.39 ಕೋಟಿ ರು ಪೈಕಿ  7.28 ಕೋಟಿ ರು ನೀಡಿದ್ದರೇ ಕೇಂದ್ರವು 113.21 ಕೋಟಿ ರು ಪೈಕಿ  22.87 ಕೋಟಿ ರು ಬಿಡುಗಡೆ ಮಾಡಿದೆ.

ಜಲಸಂಪನ್ಮೂಲಕ್ಕೆ ರಾಜ್ಯವು ಒದಗಿಸಿಕೊಂಡಿರುವ  597.89 ಕೋಟಿ ರು ಪೈಕಿ  162.70 ಕೋಟಿ ರು., ಕೇಂದ್ರವು ಒದಗಿಸಿಕೊಂಡಿರುವ 1,352.11 ಕೋಟಿ ರು ನಲ್ಲಿ   ಕೇವಲ 19.05 ಕೋಟಿ ರು ಕೊಟ್ಟಿದೆ. ಮೂಲಭೂತ ಸೌಕರ್ಯಕ್ಕೆ ರಾಜ್ಯವು 36.15 ಕೋಟಿ ರು ಅನುದಾನ ಒದಗಿಸಿಕೊಂಡಿದೆ. ಈ ಪೈಕಿ ರಾಜ್ಯವು  9.99 ಕೋಟಿ, ಕೇಂದ್ರವು ಒದಗಿಸಿಕೊಂಡಿರುವ 36.15 ಕೋಟಿ ರು ನಲ್ಲಿ ಕೇವಲ 1.59 ಕೋಟಿ ರು ಮಾತ್ರ ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

Hot this week

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌)...

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...
Please Scan to make Your Contribution

Topics

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌)...

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

Related Articles

Popular Categories

error: Content is protected !!