Monday | June 8, 2026 |

ಎಸ್‌ಸಿ, ಎಸ್‌ಟಿ, ಒಬಿಸಿ, ಮುಸ್ಲಿಂ ಸಮುದಾಯ ಮಕ್ಕಳ ದಾಖಲಾತಿ ಕಡಿಮೆ; ಶೇ. 30ರಷ್ಟು ಶಾಲೆಗಳಲ್ಲಷ್ಟೇ ಇಂಟರ್ನೆಟ್‌ ಸೌಲಭ್ಯ, ಶಾಲೆ ಬಿಡುವ ದರ ಕಲ್ಬುರ್ಗಿಯಲ್ಲೇ ಹೆಚ್ಚು

ಬೆಂಗಳೂರು; ರಾಜ್ಯದ  ಶಾಲೆಗಳಲ್ಲಿ   ಕಡಿಮೆ ಆದಾಯದ ವರ್ಗಗಳು, ಪರಿಶಿಷ್ಟ ಜಾತಿ ಪಂಗಡಗಳು, ಪರಿಶಿಷ್ಟ ಜಾತಿಯ ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳು ಮತ್ತು ಮುಸ್ಲೀಂರ ದಾಖಲಾತಿ ಪ್ರಮಾಣ ಕಡಿಮೆ ಇದೆ. ಎಸ್‌ಸಿ, ಎಸ್‌ ಟಿ ಮತ್ತು ಮುಸ್ಲಿಂ ಸಮುದಾಯಗಳ ಹೆಣ್ಣು ಮಕ್ಕಳು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹಿಂದುಳಿದಿದ್ದಾರೆ. ಅದೇ ರೀತಿ ಶಾಲೆ ಬಿಡುವ ದರವು ಕಲ್ಬುರ್ಗಿಯಲ್ಲಿಯೇ ಹೆಚ್ಚಿದೆ.

ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಹಾಸ್ಟೆಲ್‌ ವಿದ್ಯಾರ್ಥಿ ವೇತನ ನೀಡುತ್ತಿದ್ದರೂ  ಕಡಿಮೆ ಆದಾಯದ ಗುಂಪುಗಳಿಗೆ (ವಿಭಿನ್ನ ಆದಾಯ ಮಿತಿಯೊಂದಿಗೆ) ಮತ್ತು ಎಸ್‌ ಸಿ, ಎಸ್‌ ಟಿ ಒಬಿಸಿ ಮತ್ತು ಮುಸ್ಲೀಂರ ದಾಖಲಾತಿ ದರವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಹಾಗೂ ಉನ್ನತ ಜಾತಿಗಳು ಮತ್ತಿತರರ ನಡುವಣ ಅಂತರವನ್ನು ಕಡಿಮೆ ಮಾಡುವಲ್ಲಿ  ವಿಫಲವಾಗಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಬಯಲು ಮಾಡಿದೆ.

ಅಲ್ಲದೇ ರಾಜ್ಯದ ಸರ್ಕಾರಿ ಶಾಲೆಗಳ ಪೈಕಿ   ಕೇವಲ ಶೇ. 30ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್‌ ಸೌಲಭ್ಯವಿದೆ. ಶೇ. 56ಷ್ಟು ಕಂಪ್ಯೂಟರ್‍‌ಗಳಿವೆ. ಆದರೆ  ಶೇ. 70ಕ್ಕಿಂತ ಅನುದಾನ ರಹಿತ ಶಾಲೆಗಳು ಇಂಟರ್ನೆಟ್‌ ಸೌಲಭ್ಯವನ್ನು ಹೊಂದಿವೆ. ಆದರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಟರ್ನೆಟ್‌   ಸೌಲಭ್ಯ ಇರುವುದು ಕೇವಲ ಶೇ. 5ರಷ್ಟು ಮಾತ್ರ.  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್‍‌ ಮತ್ತು ಇಂಟರ್ನೆಟ್‌ ಸೌಲಭ್ಯಗಳ ಕೊರತೆ ಇದೆ.

ರಾಜ್ಯ ಶಿಕ್ಷಣ ನೀತಿ ಆಯೋಗವು ವಿಸ್ತರಣೆ-ಸಮತೆ-ಗುಣಮಟ್ಟ- ಆಡಳಿತ-ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣ ನೀತಿಯ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ನೀಡಿರುವ ವರದಿಯು ಸಾಮಾಜಿಕ ಮತ್ತು ಶೈಕ್ಷಣಿಕ ಆಯಾಮದಲ್ಲಿ  ಶಿಕ್ಷಣದ ಗುಣಮಟ್ಟ,, ಶಾಲಾ ದಾಖಲಾತಿ, ಡ್ರಾಪ್‌ ಔಟ್‌ ಸಮಸ್ಯೆಯನ್ನು ಚರ್ಚಿಸಿದೆ.

ಈಗಾಗಲೇ ಈ ವರದಿಯನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿನ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ವರದಿಯ ಎಲ್ಲಾ ಸಂಪುಟಗಳನ್ನು ಸಚಿವರುಗಳಿಗೆ ನೀಡಿತ್ತು. ಆಯೋಗವು ನೀಡಿರುವ ವರದಿಯ ಎಲ್ಲಾ ಸಂಪುಟಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಸಾರ್ವತ್ರಿಕ ದಾಖಲಾತಿ ಮತ್ತು ಶಿಕ್ಷಣದಲ್ಲಿ ಭಾಗವಹಿಸುವಿಕೆಯಲ್ಲಿನ ಸಮಾನತೆ ಕುರಿತಾದ ಅಧ್ಯಾಯದಲ್ಲಿ  ಹಲವು ಸಂಗತಿಗಳ ಕುರಿತು ಚರ್ಚಿಸಿದೆ. ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಎದುರಿಸುತ್ತಿರುವ ತಾರತಮ್ಯ, ಶಾಲೆಗಳ ಮೂಲಸೌಕರ್ಯಗಳ ಕುರಿತೂ ಈ ಆಯೋಗವು ಚರ್ಚಿಸಿದೆ.

ಸರ್ಕಾರಿ ಕಟ್ಟಡದಲ್ಲಿವೆ ಶೇ.64ರಷ್ಟು ಶಾಲೆಗಳು 

ಕರ್ನಾಟದಲ್ಲಿ ಶೇ. 64ರಷ್ಟು ಶಾಲೆಗಳು ಮಾತ್ರ ಸರ್ಕಾರಿ ಕಟ್ಟಡಗಳಲ್ಲಿವೆ. ಶೇ.29ರಷ್ಟು ಶಾಲೆಗಳು ಖಾಸಗಿ ಕಟ್ಟಡಗಳಲ್ಲಿವೆ. ನಗರ ಪ್ರದೇಶಗಳಲ್ಲಿ ಶೇ. 55ಕ್ಕಿಂತ ಹೆಚ್ಚು ಶಾಲೆಗಳು ಖಾಸಗಿ ಕಟ್ಟಡಗಳಲ್ಲಿವೆ. ಅವುಗಳಲ್ಲಿ ಹಲವು ಬಾಡಿಗೆ ವಸತಿಗಳಲ್ಲಿವೆ. ನಗರ ಪ್ರದೇಶಗಳಲ್ಲಿನ ಕೆಲವು ಮಾಧ್ಯಮಿಕ ಶಾಲೆಗಳು ಶೇ. 21ರಷ್ಟು ಬಾಡಿಗೆ ಕಟ್ಟಡಗಳಲ್ಲಿವೆ.

 

 

ಶೇ. 30ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್‌ ಸೌಲಭ್ಯ

ಕೇವಲ ಶೇ.50ರಷ್ಟು ಶಾಲೆಗಳಲ್ಲಿ ಮಾತ್ರ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ಕೊಠಡಿಗಳಿವೆ. ಕೇವಲ ಶೇ. 13ರಷ್ಟು ಶಾಲೆಗಳಲ್ಲಿ ಮಾತ್ರ ಗ್ರಂಥಪಾಲಕರಿದ್ದಾರೆ. ಸುಮಾರು  ಶೇ. 72ರಷ್ಟು ಶಾಲೆಗಳು ದಿನಪತ್ರಿಕೆಗಳನ್ನಿಡುತ್ತಿವೆ. ಶೇ. 34 ಶಾಲೆಗಳಲ್ಲಿ ಮಳೆ ಕೊಯ್ಲು ಸೌಲಭ್ಯವಿದೆ. ಶೇ. 33ರಷ್ಟು ಶಾಲೆಗಳಲ್ಲಿ ಹಿತ್ತಲು ಕೈ ತೋಟಗಳಿವೆ. ಕೇವಲ ಶೇ. 30ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್ನೆಟ್‌ ಸೌಲಭ್ಯವಿದೆ. ಶೇ. 56ಷ್ಟು ಕಂಪ್ಯೂಟರ್‍‌ಗಳಿವೆ.

ಶಾಲಾ ಮೂಲಸೌಕರ್ಯಗಳು ಶಾಲೆಯಿಂದ ಶಾಲೆಗೆ ಭಿನ್ನವಾಗಿವೆ, ಬದಲಾಗುತ್ತಿರುತ್ತವೆ. ಶೇ. 70ಕ್ಕಿಂತ ಅನುದಾನ ರಹಿತ ಶಾಲೆಗಳು ಇಂಟರ್ನೆಟ್‌ ಸೌಲಭ್ಯವನ್ನು ಹೊಂದಿವೆ. ಆದರೆ ಕೇವಲ ಶೇ. 40ರಷ್ಟು ರಾಜ್ಯ ಸರ್ಕಾರಿ ಶಾಲೆಗಳು ಮಾತ್ರ ಈ ಸೌಲಭ್ಯ ಹೊಂದಿವೆ. ಕಿರಿಯ ಪ್ರಾಥಮಿಕ ಹಂತದಲ್ಲಿ ಖಾಸಗಿ ಶಾಲೆಗಳಲ್ಲಿ ಇಂಟರ್ನೆಟ್‌ ಲಭ್ಯತೆ ಇದೆ, ಆಧರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಟನೆರ್ಠ್ ಸೌಲಭ್ಯ ಇರುವುದು ಕೇವಲ ಶೇ. 5ರಷ್ಟು ಮಾತ್ರ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್‍‌ ಮತ್ತು ಇಂಟರ್ನೆಟ್‌ ಸೌಲಭ್ಯಗಳ ಕೊರತೆ ಇದೆ.

 

 

ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್‌ ಮೂಲಸೌಕರ್ಯದ ಲಭ್ಯತೆಯೂ ಇಲ್ಲ- ಶೇ. 6ರಷ್ಟು ಶಾಲೆಗಳಲ್ಲಿ  ಐಸಿಟಿ ಲ್ಯಾಬ್‌ 

ನಗರದ ಶಾಲೆಗಳು ಇಂಟರ್ನೆಟ್‌, ಡೆಸ್ಕ್‌ ಟಾಪ್‌, ಪ್ರಿಂಟರ್‍‌, ಲ್ಯಾಪ್‌ ಟಾಪ್‌ ಮತ್ತು ಪ್ರೊಜೆಕ್ಟರ್‍‌ನಂತಹ ಡಿಜಿಟಲ್‌ ಮೂಲಸೌಕರ್ಯಗಳನ್ನು ಹೊಂದಿವೆ. ಕೆಲವು ಶಾಲೆಗಳು ಡಿಜಿಟಲ್‌ ಬೋರ್ಡ್‌ ಮತ್ತು ಐಸಿಟಿ ಲ್ಯಾಬ್‌ ಹೊಂದಿವೆ. ಆದರೆ ಕೇವಲ ಶೇ. 6ರಷ್ಟು ಶಾಲೆಗಳು ಮಾತ್ರ ಐಸಿಟಿ ಲ್ಯಾಬ್‌ ಹೊಂದಿವೆ. ಈ ಸೌಲಭ್ಯವು ಗ್ರಾಮೀಣ ಪ್ರದೇಶಗಳಲ್ಲಿ ಶೇ. 4ರಷ್ಟಿದ್ದರೇ ಶೇ. 10ರಷ್ಟು ನಗರ ಪ್ರದೇಶಗಳಲ್ಲಿ ಈ ಸೌಲಭ್ಯವಿದೆ.
ಶಾಲಾ ಮೂಲಸೌಕರ್ಯಗಳ ಲಭ್ಯತೆಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸಗಳಿವೆ. ಬೆಂಗಳೂರು ನಗರ ಜಿಲ್ಲೆಯ ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳ ಲಭ್ಯತೆ ಉಳಿದ ಜಿಲ್ಲೆಗಳಿಗಿಂತ ಉತ್ತಮವಾಗಿವೆ ಎಂದು ವರದಿಯಲ್ಲಿ ವಿವರಿಸಿದೆ.

ಉತ್ತರ ಕರ್ನಾಟಕದಲ್ಲಿ  ಯಶಸ್ಸಿನ ಪ್ರಮಾಣ ಕಡಿಮೆ

ಯಾದಗಿರಿಯಂತಹ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಇಬ್ಬರು ವಯಸ್ಕರಲ್ಲಿ ಒಬ್ಬರು ಅನಕ್ಷರಸ್ಥರಿದ್ದಾರೆ. ನೆರೆಹೊರೆಯಲ್ಲಿ ಶಾಲೆಗಳ ಲಭ್ಯತೆ, ದಾಖಲಾತಿಯಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ವಿವಿಧ ಹಂತಗಳಲ್ಲಿ ಶಾಲೆಗಳನ್ನು ಬಿಡುವ ಅಂಕಿ ಅಂಶಗಳು ಹಾಗೂ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಸಾರ್ವಜನಿಕ ಪರೀಕ್ಷೆಯಲ್ಲಿ ಯಶಸ್ಸಿನ ಪ್ರಮಾಣವು ಈ ಪ್ರದೇಶಗಳಲ್ಲಿ ಕಡಿಮೆಯಾಗಿದೆ.

ಕಲ್ಬುರ್ಗಿಯಲ್ಲಿ  ಶಾಲೆ ಬಿಡುವ ದರ ಹೆಚ್ಚು

ಉದಾಹರಣೆಗೆ ಕಲಬುರಗಿ ಪ್ರದೇಶವು ಅತೀ ಹೆಚ್ಚು ಶಾಲೆ ಬಿಡುವ ದರಗಳನ್ನು ಹೊಂದಿರುವ ಬ್ಲಾಕ್‌ಗಳ ಸಾಂದ್ರತೆಯನ್ನು ಹೊಂದಿದೆ. ವಿಶೇಷವಾಗಿ ಯಾದಗಿರಿ ಮತ್ತು ಬೀದರ್ ನಂತಹ ಜಿಲ್ಲೆಗಳಲ್ಲಿ ಇದು ಹೆಚ್ಚಾಗಿದೆ. ಹೀಗಾಗಿ ಶಾಲಾ ದಾಖಲಾತಿ ಮತ್ತು ಕಲಿಕಾ ಫಲಿತಾಂಶಗಳ ಅಂಕಿ ಅಂಶಗಳಿಂದ ತಿಳಿದು ಬರುವಂತೆ ಈ ಅಸಮಾನತೆಗಳನ್ನು ನಿವಾರಿಸಲು ತೆಗೆದುಕೊಂಡ ಕ್ರಮಗಳು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇದು ಹಲವಾರು ಬ್ಲಾಕ್‌ಗಳು ಮತ್ತು ಜಿಲ್ಲೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಗಣನೀಯವಾಗಿ ಕಡಿಮೆ ಇದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.

 

 

ಕೆಲವು ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ವಯಸ್ಕರ ಸಾಕ್ಷರತೆ ಇನ್ನೂ ಶೇ. 50ಕ್ಕಿಂತಲೂ ಕಡಿಮೆ ಇದೆ. ಹೀಗಾಗಿ ಶಿಕ್ಷಣ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಬ್ಲಾಕ್‌ಗಳು ಮತ್ತು ಜಿಲ್ಲೆಗಳಲ್ಲಿ ಉದ್ದೇಶಿತ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಬೇಕು.ಪ್ರಾಥಮಿಕ ಹಂತದಿಂದ ಮೇಲೆ ಹೋಗುತ್ತಿದ್ದಂತೆ ದಾಖಲಾತಿ ಕಡಿಮೆಯಾಗುತ್ತದೆ. ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಮಟ್ಟದಲ್ಲಿ ದಾಖಲಾತಿ ಗಣನೀಯವಾಗಿ ಕುಸಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ದಾಖಲಾತಿ ಪ್ರಮಾಣವು ಪ್ರಾಥಮಿಕ ಹಂತದಲ್ಲಿ ಕಾಣುವ ಶೇ. 103ರಿಂದ ಮಾಧ್ಯಮಿಕ ಮಟ್ಟದಲ್ಲಿ ಶೇ. 90ಕ್ಕೆ ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಶೇ. 62.70ಕ್ಕೆ ಇಳಿದಿದೆ.

ಮುಸ್ಲೀಂರ ದಾಖಲಾತಿ ಪ್ರಮಾಣ ಕಡಿಮೆ

ಕಡಿಮೆ ಆದಾಯದ ವರ್ಗಗಳು, ಪರಿಶಿಷ್ಟ ಜಾತಿ ಪಂಗಡಗಳು, ಪರಿಶಿಷ್ಟ ಜಾತಿಯ ಸಾಮಾಜಿಕ ಮತ್ತು ಧಾರ್ಮಿಕ ಗುಂಪುಗಳು ಮತ್ತು ಮುಸ್ಲೀಂರ ದಾಖಲಾತಿ ಪ್ರಮಾಣ ಕಡಿಮೆ ಇದೆ.

 

 

ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಮಟ್ಟದಲ್ಲಿ ಕಡಿಮೆ ದಾಖಲಾತಿ ಪ್ರಮಾಣ ಕಾಣುತ್ತದೆ. ಪ್ರಾಥಮಿಕ ಶಿಕ್ಷಣ ಉಚಿತವಾಗಿದ್ದು ನಂತರದ ಹಂತದಲ್ಲಿ ಈ ಆರ್ಥಿಕ ಮತ್ತು ಸಾಮಾಜಿಕ ಗುಂಪುಗಳ ಭಾಗವಹಿಸುವಿಕೆಯಲ್ಲಿ ಕುಸಿತ ಪ್ರಾರಂಭವಾಗುತ್ತದೆ. ಎಸ್‌ ಸಿ, ಎಸ್‌ಟಿ ಮತ್ತು ಮುಸ್ಲಿಂ ಮಹಿಳೆಯರು ಇತರ ಮಹಿಳೆಯರಿಗೆ ಹೋಲಿಸಿದರೇ ಕಡಿಮೆ ದಾಖಲಾತಿಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಎಸ್‌ ಸಿ ಎಸ್‌ ಟಿ ಮುಸ್ಲಿಂ ಮಹಿಳೆಯರ ಶೈಕ್ಷಣಿಕ ಸಾಧನೆ ಕಡಿಮೆ ಇರುವುದನ್ನು ರಾಜ್ಯ ಸರ್ಕಾರವು ಗಮನಿಸಬೇಕು ಎಂದು ಆಯೋಗವು ಸಲಹೆ ನೀಡಿದೆ.

 

ಡ್ರಾಪ್‌ ಔಟ್‌ ಸಮಸ್ಯೆ ಗಂಭೀರ ಸಮಸ್ಯೆ

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳು ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಶಾಲೆಗಳಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಡ್ರಾಪ್‌ ಔಟ್‌ ದರದಿಂದ ಬಳಲುತ್ತಿದೆ. ಇದು ಅವರಲ್ಲಿ ಕಡಿಮೆ ದಾಖಲಾತಿಗೆ ಕಾರಣವಾಗಿದೆ. 2017-18ರ ಎನ್‌ಎಸ್‌ಎಸ್‌ ಸಮೀಕ್ಷೆಯ ದತ್ತಾಂಶ ಮತ್ತು ರಾಜ್ಯದ ದತ್ತಾಂಶ ಹೆಚ್ಚಿನ ಶಾಲೆ ತೊರೆಯುವಿಕೆಯನ್ನು ಸೂಚಿಸುತ್ತವೆ.

 

 

ಡ್ರಾಪ್‌ ಔಟ್‌ ಸಮಸ್ಯೆ ಗಂಭೀರ ಸಮಸ್ಯೆಯಾಗಿದೆ. ವಿಶೇಷವಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ಸೌಲಭ್ಯವಂಚಿತ ಎಸ್‌ ಸಿ ಎಸ್‌ ಟಿ ಮತ್ತು ಮುಸ್ಲಿಂರಲ್ಲಿ ಇದು ಕಂಡು ಬರುತ್ತಿದೆ. ಎಡಿಬಿ ವರದಿ ಪ್ರಕಾರ ಮಾಧ್ಯಮಿಕ ಹಂತಗಳಲ್ಲಿ (9-10) ಡ್ರಾಪ್‌ ಔಟ್‌ ಶೇ. 22.1ರಷ್ಟು ಆಗಿದೆ.

ವಿದ್ಯಾರ್ಥಿಗಳಿಗೆ ತಲುಪದ ವಿದ್ಯಾರ್ಥಿ ವೇತನ

ಕಡಿಮೆ ದಾಖಲಾತಿ, ಡ್ರಾಪ್ ಔಟ್, ಮುಂದುವರಿಕೆಯ ಮತ್ತು ತೇರ್ಗಡೆ ಪ್ರಮಾಣ ಕಡಿಮೆ ಇದೆ. ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಹಂತದಲ್ಲಿ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ ಸೌಲಭ್ಯ ಸಾಕಷ್ಟು ಪ್ರಮಾಣದಲ್ಲಿ ತಲುಪದೇ ಇರುವುದು ಇದಕ್ಕೆ ಕಾರಣ.

 

 

ಕಡಿಮೆ ಆದಾಯದ ಗುಂಪುಗಳಿಗೆ (ವಿಭಿನ್ನ ಆದಾಯ ಮಿತಿಯೊಂದಿಗೆ) ಮತ್ತು ಎಸ್‌ ಸಿ, ಎಸ್‌ ಟಿ ಒಬಿಸಿ ಮತ್ತು ಮಹಿಳೆಯರಿಗೆ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ, ಹಾಸ್ಟೆಲ್‌ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆದರೂ ಈ ಯೋಜನೆಗಳು ಕಡಿಮೆ ಕಡಿಮೆ ಆದಾಯದ ಗುಂಪುಗಳಿಗೆ (ವಿಭಿನ್ನ ಆದಾಯ ಮಿತಿಯೊಂದಿಗೆ) ಮತ್ತು ಎಸ್‌ ಸಿ, ಎಸ್‌ ಟಿ ಒಬಿಸಿ ಮತ್ತು ಮುಸ್ಲೀಂರ ದಾಖಲಾತಿ ದರವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಹಾಗೂ ಉನ್ನತ ಜಾತಿಗಳು ಮತ್ತಿತರರ ನಡುವಣ ಅಂತರವನ್ನು ಕಡಿಮೆ ಮಾಡುವಲ್ಲಿ ಸಮರ್ಥವಾಗಲಿಲ್ಲ ಎಂದು ಕಂಡು ಬರುತ್ತದೆ ಎಂದು ಆಯೋಗವು ವರದಿಯಲ್ಲಿ ಹೇಳಿದೆ.

 

 

2017-18ರಲ್ಲೇ ಕಡಿಮೆ ಅದಾಯದ ವರ್ಗಗಳ ಸುಮಾರು ಶೇ. 56ರಿಂದ ಶೇ. 62ರಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ದೊರೆತಿಲ್ಲ. ಅದೇ ರೀತಿ ಎಸ್‌ ಟಿ ಸುಮಾರು ಶೇ.30 ರಷ್ಟು ವಿದ್ಯಾರ್ಥಿಗಳು ಮತ್ತು ಎಸ್‌ ಸಿ ಶೇ. 57ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವಿಲ್ಲದೇ ಉಳಿದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಬೋಧನೆ ಗುಣಮಟ್ಟ ಕಡಿಮೆ- ಮನೆ ಪಾಠಕ್ಕೆ ಆಶ್ರಯ

ಸರ್ಕಾರಿ ಸಂಸ್ಥೆಯಲ್ಲಿ ಬೋಧನೆಯ ಗುಣಮಟ್ಟ ಕಡಿಮೆ ಇದೆ. ಶಾಲೆಗಳಲ್ಲಿನ ಬೋಧನೆಯ ಜೊತೆಜೊತೆಗೆ ವಿದ್ಯಾರ್ಥಿಗಳು ಖಾಸಗಿ ಮನೆಪಾಠವನ್ನು ಆಶ್ರಯಿಸುತ್ತಾರೆ. 2018-19ರಲ್ಲಿ ರಾಜ್ಯದಮಟ್ಟದಲ್ಲಿ ಸುಮಾರು ಶೇ. 57ರಷ್ಟು ವಿದ್ಯಾರ್ಥಿಗಳು ಶಾಲಾ ಕಲಿಕೆಯ ಜೊತೆಗೆ ಮನೆಪಾಠಕ್ಕಾಗಿ ಹಣ ವ್ಯಯಿಸಿದ್ದಾರೆ. ಅದೇ ರೀತಿ ಎಸ್‌ಟಿ ಶೇ. 54, ಎಸ್‌ ಸಿ ಶೇ. 45.52ರಷ್ಟು ವಿದ್ಯಾರ್ಥಿಗಳು ಮನೆಪಾಠಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಒಬಿಸಿಯಲ್ಲಿ ಶೇ. 58ರಷ್ಟಿದೆ. ಮೇಲ್ಜಾತಿಯ ವಿದ್ಯಾರ್ಥಿಗಳ (ಶೇ.73) ಪ್ರಮಾಣ ಕಡಿಮೆ ಇದೆ. ಮುಸ್ಲೀಂರಲ್ಲಿ ಅಂತಹ ವಿದ್ಯಾರ್ಥಿಗಳ ಶೇಕಡವಾರು ಪ್ರಮಾಣ ಕಡಿಮೆ ಇದೆ.

 

 

ಶೈಕ್ಷಣಿಕ ಸಾಧನೆಯಲ್ಲಿ ಹಿಂದುಳಿದ ಪರಿಶಿಷ್ಟ ಪಂಗಡಗಳು

ಶೈಕ್ಷಣಿಕ ಸಾಧನೆಯಲ್ಲಿ ಪರಿಶಿಷ್ಟ ಪಂಗಡಗಳು ಕೆಳಭಾಗದಲ್ಲಿ ಉಳಿದಿವೆ. ಬುಡಕಟ್ಟು ಉಪ ಯೋಜನೆಯ ಮೂಲಕ ಅವರ ಶೈಕ್ಷಣಿಕ ಅಭಿವೃದ್ಧಿ ಮೇಲೆ ವಿಶೇಷ ಗಮನ ನೀಡಲಾಗಿದೆ. ಆದರೂ ದಾಖಲಾತಿ ಪ್ರಮಾಣ ಮತ್ತು ಡ್ರಾಪ್‌ ಔಟ್‌ ಪ್ರಮಾಣ ಎರಡರಲ್ಲೂ ಅವರು ಹಿಂದುಳಿದಿದ್ದಾರೆ.

 

 

ಆದ್ದರಿಂದ ಸರ್ಕಾರವು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಸಾಧನೆಯ ದುಸ್ಥಿತಿ ಮತ್ತು ಅವರ ವಿಶೇಷ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವೇಗವಾಗಿ ಮುಂದುವರೆಯುವಂತೆ ಶಿಫಾರಸ್ಸು ಮಾಡಲು ಸಮಿತಿ ರಚಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.

 

 

ಎಸ್‌ಸಿ, ಎಸ್‌ ಟಿ ಮತ್ತು ಮುಸ್ಲಿಂ ಸಮುದಾಯಗಳ ಹೆಣ್ಣು ಮಕ್ಕಳು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹಿಂದುಳಿದಿದ್ದಾರೆ. ಹಿರಿಯ ಮಾಧ್ಯಮಿಕ ಹಂತದಲ್ಲಿ ಎಸ್‌ ಟಿ ಹೆಣ್ಣು ಮಕ್ಕಳ ದಾಖಲಾತಿ ದರವು ಶೇ. 50.7 ಇದೆ. ಎಸ್‌ ಸಿ ಮಹಿಳೆಯರ ಪ್ರಮಾಣವು ಶೇ. 72.7 ಮತತು ಮುಸ್ಲಿಂ ಮಹಿಳೆಯರ ಪ್ರಮಾಣವು ಶೇ. 65.4ರಷ್ಟು ಇದೆ.

 

 

ಶಾಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಾಗ ಮತ್ತು ಎಸ್‌ ಸಿ ವಿದ್ಯಾರ್ಥಿಗಳು ಜಾತಿ ತಾರತಮ್ಯವನ್ನು ಎದುರಿಸುತ್ತಾರೆ. ಇದು ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಅನೇಕ ಬಾರಿ ಶಾಲೆಯಿಂದ ಹೊರಗುಳಿಯುವಿಕೆಗೆ ಕಾರಣವಾಗುತ್ತದೆ. ಡ್ರಾಪ್‌ ಔಟ್‌ ಪ್ರಮಾಣ ಕುರಿತಾದ ಎನ್‌ ಎಸ್‌ ಎಸ್‌ ಸಮೀಕ್ಷೆಯಲ್ಲಿ ಎಸ್‌ ಸಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಶಾಲೆ ಬಿಡಲು ಮತ್ತು ಶಾಲೆಗಳಲ್ಲಿ ದಾಖಲಾಗದಿರಲು ಶಿಕ್ಷಣದಲ್ಲಿ ಆಸಕ್ತಿ ಇಲ್ಲದಿರುವುದು ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಿದೆ.

Hot this week

ಘನತ್ಯಾಜ್ಯ ವಿಲೇವಾರಿ; 39,437 ಕೋಟಿ ರು ಮೌಲ್ಯದ ಟೆಂಡರ್ ಪರಿಶೀಲನೆಗೆ ಕೇವಲ 7 ದಿನ ಗಡುವು, ಸಿದ್ದು ಅವಧಿಯಲ್ಲಿ ರಚಿಸಿದ್ದ ತಂಡಕ್ಕೆ ಕೊಕ್‌ ಕೊಟ್ಟು ಹೊಸ ತಂಡ ರಚಿಸಿದ್ದೇಕೆ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ...

ಎಂಎಸ್‌ಐಎಲ್‌ನಲ್ಲಿ ಅಕ್ರಮ; ನಿವೃತ್ತ ಐಎಎಸ್‌ ಜಿ ಸಿ ಪ್ರಕಾಶ್‌ ಸೇರಿ 7 ಮಂದಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಬೆಂಗಳೂರು; ಮೈಸೂರು ಸೇಲ್ಸ್‌ ಇಂಟರ್ ನ್ಯಾ‍ಷನಲ್‌ ಲಿಮಿಟೆಡ್‌ನಲ್ಲಿ ನಡೆದಿದೆ ಎನ್ನಲಾದ ವಿವಿಧ...

ಮತದಾರರ ಪಟ್ಟಿ ಪರಿಷ್ಕರಣೆ; ಹಲವು ಜಿಲ್ಲೆಗಳಲ್ಲಿ ವರ್ಷವಾದರೂ ನೇಮಕವಾಗದ ಬಿಎಲ್‌ಒ, ಕಾಲಕಸವಾಯಿತೇ ಆಯೋಗದ ಪತ್ರ?

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ...
Please Scan to make Your Contribution

Topics

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ...

ಎಂಎಸ್‌ಐಎಲ್‌ನಲ್ಲಿ ಅಕ್ರಮ; ನಿವೃತ್ತ ಐಎಎಸ್‌ ಜಿ ಸಿ ಪ್ರಕಾಶ್‌ ಸೇರಿ 7 ಮಂದಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಬೆಂಗಳೂರು; ಮೈಸೂರು ಸೇಲ್ಸ್‌ ಇಂಟರ್ ನ್ಯಾ‍ಷನಲ್‌ ಲಿಮಿಟೆಡ್‌ನಲ್ಲಿ ನಡೆದಿದೆ ಎನ್ನಲಾದ ವಿವಿಧ...

ಮತದಾರರ ಪಟ್ಟಿ ಪರಿಷ್ಕರಣೆ; ಹಲವು ಜಿಲ್ಲೆಗಳಲ್ಲಿ ವರ್ಷವಾದರೂ ನೇಮಕವಾಗದ ಬಿಎಲ್‌ಒ, ಕಾಲಕಸವಾಯಿತೇ ಆಯೋಗದ ಪತ್ರ?

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ...

ಆರ್‍‌ಬಿಎಸ್‌ಎಸ್ಎನ್‌ ಗಣಿ ಕಂಪನಿಗೆ 64.50 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು; 3 ಬಾರಿ ಪ್ರಸ್ತಾವ ತಿರಸ್ಕೃತವಾದರೂ ಸಚಿವ ಸಂಪುಟಕ್ಕೆ ಮಂಡಿಸಲು ಸಿಎಂ ನಿರ್ದೇಶನ

ಬೆಂಗಳೂರು; ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಆರ್‍‌ಬಿಎಸ್‌ಎನ್‌...

Related Articles

Popular Categories

error: Content is protected !!