Sunday | April 19, 2026 |

ಹಾರೋಹಳ್ಳಿ ಭೂ ಹಗರಣ; ದಿ ಫೈಲ್ ವರದಿ ಬೆನ್ನಲ್ಲೇ 108 ಕೋಟಿ ಮೌಲ್ಯದ ಜಮೀನು ಸರ್ಕಾರದ ಹೆಸರಿಗೆ ದಾಖಲು

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತವರು ಕ್ಷೇತ್ರದಲ್ಲಿಯೇ  ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದ ಪ್ರಕರಣದ ಕುರಿತು ದಿ ಫೈಲ್‌ ದಾಖಲೆ ಸಹಿತ ಸರಣಿ ವರದಿಗಳ ಪ್ರಕಟಿಸಿದ ಬೆನ್ನಲ್ಲೇ  ಖಾಸಗಿ ವ್ಯಕ್ತಿ ಹೆಸರಿನಲ್ಲಿದ್ದ ಜಮೀನನ್ನು ಸರ್ಕಾರ ಎಂದು ಪಹಣಿಯಲ್ಲಿ ನಮೂದಿಸಬೇಕು ಎಂದು   ಬೆಂಗಳೂರು ದಕ್ಷಿಣ ಜಿಲ್ಲೆಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು  ಆದೇಶಿಸಿದೆ.

ತಹಶೀಲ್ದಾರ್ ಹರ್ಷವರ್ಧನ ಅವರು ಹೂಡಿದ್ದ ದಾವೆಯನ್ನು ಆಲಿಸಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಉಪ ವಿಭಾಗಾಧಿಕಾರಿ ನ್ಯಾಯಾಲಯವು ವಿವಾದಿತ ಜಮೀನಿನ ಖಾತೆ ನಡವಳಿಯನ್ನು ರದ್ದುಪಡಿಸಿದೆ. ಅಲ್ಲದೇ ಕಂದಾಯ ದಾಖಲಾತಿಗಳಲ್ಲಿ ಸರ್ಕಾರ ಎಂದು ಪಹಣಿಯಲ್ಲಿ ನಮೂದಿಸಲು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದೆ.

2026ರ ಏಪ್ರಿಲ್‌ 16ರಂದು ಈ ಆದೇಶ ಹೊರಬಿದ್ದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅದೇ ರೀತಿ ಸರ್ಕಾರಿ ಜಮೀನಿಗೆ ಖೊಟ್ಟಿ ದಾಖಲೆ ಸೃಷ್ಟಿಸಲು ಕಾರಣರಾಗಿರುವ ಮತ್ತು ಅದನ್ನು ಸೃಷ್ಟಿಸಲು ಸಹಕರಿಸಿದವರು, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಅಡಿಯಲ್ಲಿ ಅನ್ವಯವಾಗುವ ನಿಯಮಗಳ ಪ್ರಕಾರ ಎಫ್‌ಐಆರ್ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಉಪವಿಭಾಗಾಧಿಕಾರಿಗಳ ನ್ಯಾಯಾಲಯವು ತಹಶೀಲ್ದಾರ್‍‌ಗೆ ಆದೇಶಿಸಿದೆ.

ಆದೇಶದಲ್ಲೇನಿದೆ?

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಸಲ್ಲಿಸಿದ್ದ ವರದಿಯನ್ನು ಉಪ ವಿಭಾಗಾಧಿಕಾರಿಗಳ ನ್ಯಾಯಾಲವು ಪುರಸ್ಕರಿಸಿದೆ. ಹಾರೋ ಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ, ಹಾರೋಹಳ್ಳಿ ಗ್ರಾಮದ ಸ.ನಂ 478 ಹೊಸ ಸ.ನಂ 887ರಲ್ಲಿ 2-00 ಎ/ಗುಂ ಜಮೀನಿಗೆ ಸಂಬಂಧಿಸಿದಂತೆ ವಿವಾದಿತ (ಎಂ .ಆರ್ .ಹೆಚ್ 183/2023-24 ಎಂ .ಆರ್ ಹೆಚ್ 52/2025-26ರ) ಖಾತಾ ನಡವಳಿಯನ್ನು ಹಾಗೂ ತದ ನಂತರದ ಎಲ್ಲಾ ವಹಿವಾಟು ಗಳನ್ನು ಕರ್ನಾ ಟಕ ಭೂಕಂದಾಯ ಕಾಯ್ದೆ 1964ರ ಕಲಂ 136(2)ರಡಿಯಲ್ಲಿ ರದ್ಧುಪಡಿಸಿದೆ. ಕಂದಾಯ ದಾಖಲಾತಿಗಳಲ್ಲಿ “ಸರ್ಕಾ ರ” ಎಂಬುದಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 128 ರಡಿಯಲ್ಲಿ ಪಹಣಿ ಇಂಡೀಕರಿಸಲು ಆದೇಶಿಸಿರುವುದು ಗೊತ್ತಾಗಿದೆ.

ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಲು ಕಾರಣರಾಗಿರುವ ಹಾಗೂ ಸೃಷ್ಟಿಸಲು ಸಹಕರಿಸಿರುವವರ ಮೇಲೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 192ಎ ಮತ್ತು 192ಬಿ ರಡಿ ಕ್ರಮ ಜರುಗಿಸಲು ಹಾ ಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿಯಲ್ಲಿ ಅನ್ವಯವಾಗುವ ಮತ್ತು ಭಾರತೀಯ ನ್ಯಾಯಸಂಹಿತೆ 2023 ರಡಿಯಲ್ಲಿ ಅನ್ವಯವಾಗುವ ನಿಯಮಗಳನ್ವಯ ಎಫ್‌ಐಆರ್ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಾರೋಹಳ್ಳಿ ತಹಶೀಲ್ದಾರ್‍‌ಗೆ ಸೂಚಿಸಿದೆ.

 

ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶದ ಪ್ರತಿ

 

ಅಲ್ಲದೇ ಈ ಜಮೀನನ್ನು ಎಲ್ಲಾ ಋಣಭಾರಗಳಿಂದ ಮುಕ್ತಗೊಳಿಸಿ, ಜಮೀನನ್ನು ಭೌತಿಕವಾಗಿ ನಿಯಮಾನುಸಾರ ಸರ್ಕಾರದ ವಶಕ್ಕೆ ಪಡೆದು ಒತ್ತುವರಿ ತೆರವುಗೊಳಿಸಬೇಕು. ಕಂದಾಯ ದಾಖಲಾತಿಗಳು ಮತ್ತು ಗ್ರಾಮಸ್ಥರ ಮಹಜರ್ ನೊಂದಿಗೆ ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸಬೇಕು. ಹಾಗೂ ದಾವಾ ಸ್ವತ್ತಿಗೆ ಸಂಬಂಧಿಸಿದಂತೆ ಹೊಸ ಸ.ನಂ 887ರ ದುರಸ್ತಿ ಮತ್ತು ಭೂಪರಿವರ್ತನೆ ಆದೇಶವನ್ನು ರದ್ಧುಪಡಿಸಲು ಅಗತ್ಯ ದಾಖಲೆಗಳೊಂ ದಿಗೆ ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಹಶೀಲ್ದಾರ್‍‌ಗೆ ಆದೇಶಿಸಿರುವುದು ತಿಳಿದು ಬಂದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ, ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಗ್ರಾ ಮದ ಸ.ನಂ 478ರಲ್ಲಿ 2-00 ಎ/ಗುಂ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ನಕಲಿ ಮಂಜೂರಿ ದಾಖಲೆಗಳ ಆಧಾರದಲ್ಲಿ ಖಾತೆ, ಪೋಡಿ, ಭೂ ಪರಿವರ್ತನೆ ಮಾಡಿ ಅಕ್ರಮವೆಸಗಲಾಗಿತ್ತು. ಮೂಲ ದಾಖಲೆಗಳನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಜಮೀನಿನ ಪೋಡಿ ದುರಸ್ತಿಪಡಿಸಲು ನಮೂನೆ 1 ರಿಂದ 5ಕ್ಕೆ ಮೇಲು ಸಹಿ ಮಾಡಿರುವುದನ್ನು ಹಿಂಪಡೆಯಬೇಕು.  ಮತ್ತು ಸದರಿ ಜಮೀನು ಮೂಲತಃ ಸರ್ಕಾರಿ ಜಮೀನಾಗಿದೆ. ಮಂಜೂರಿದಾರರಿಗೆ ಮಂಜೂರಾಗಿರುವುದಕ್ಕೆ 1969ರಿಂದ 2023 ರವರೆಗಿನ ಪಹಣಿಯಲ್ಲಿ ಯಾವುದೇ ನಮೂದುಗಳು ಇರಲಿಲ್ಲ. ಹೀಗಾಗಿ ಖಾತಾ ನಡವಳಿಕೆಯನ್ನು ರದ್ಧುಪಡಿಸಲು ಕ್ರಮಕೈಗೊಳ್ಳಬೇಕು. ಹಾಗೂ ಈ ಬಗ್ಗೆ  ವರದಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರು 2025ರ ಡಿಸೆಂಬರ್ 1ರಂದು ಸೂಚಿಸಿದ್ದ ಅಂಶಗಳನ್ನು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108ಕೆರಡಿ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು ಈ ಪ್ರಕರಣ (ಸಂಖ್ಯೆ: ಎಲ್ ಎನ್ ಡಿ/ ಆರ್ ಯು ಸಿ/3/2026) ದಾಖಲಿಸಿಕೊಂಡಿತ್ತು. 2026ರ ಮಾರ್ಚ್‌ 13ರಿಂದ 2026ರ ಎಪ್ರಿಲ್‌ 1ರವರೆಗೂ ವಿಚಾರಣೆ ನಡೆಸಿತ್ತು. ಪ್ರಕರಣ ದಾಖಲಿಸಿದ್ದ ತಹಶೀಲ್ದಾರ್ ಮತ್ತು ಖಾಸಗಿ ವ್ಯಕ್ತಿಗಳು ಮತ್ತು ಅವರ ವಕೀಲರಿಂದ ಲಿಖಿತ ಆಕ್ಷೇಪಣೆ ಹಾಗೂ ದಾಖಲಾತಿಗಳನ್ನು ಸಲ್ಲಿಸಲು ಸಾಕಷ್ಟು ಕಾಲಾವಕಾಶ ನೀಡಿತ್ತು. 2026ರ ಏಪ್ರಿಲ್‌ 1ರಂದು ನಡೆದ ವಿಚಾರಣೆಯಲ್ಲಿ ದಾಖಲೆಗಳನ್ನು ಸಲ್ಲಿಸಲು ಮತ್ತು ಅಗತ್ಯವಿದ್ದಲ್ಲಿ 2026ರ ಏಪ್ರಿಲ್ 6ರೊಳಗೆ ಸಲ್ಲಿಸಲು ಸೂಚಿಸಿದ್ದ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿತ್ತು.

ಪ್ರಸ್ತಾಪಿತ ಜಮೀನು ಕೆ.ಐ.ಎ.ಡಿ.ಬಿಗೆ ಭೂಸ್ವಾಧೀನವಾಗಿರುವ ಬಗ್ಗೆ ಸೆಕ್ಷನ್ 28(1), ಸೆಕ್ಷನ್ 28(4)ರಡಿ ಅಂತಿಮ ಅಧಿಸೂಚನೆ ಮತ್ತು ಜೆಎಂಸಿ ಸ್ಕೆಚ್ ಹಾಗೂ ಇತರೆ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸಬೇಕು ಎಂದು ಉಪ ವಿಭಾಗಾಧಿಕಾರಿಗಳ ಕಚೇರಿಯು ಕೆಐಎಡಿಬಿಯ ವಿಶೇ ಷ ಭೂಸ್ವಾಧೀನಾಧಿಕಾರಿಗೆ 2026ರ ಏಪ್ರಿಲ್‌ 12ರಂದೇ ಪತ್ರ ಬರೆದಿತ್ತು.

ಈ ಪ್ರಕರಣದ ಕುರಿತು 2026ರ ಏಪ್ರಿಲ್ 1ರಂದು ನಡೆದಿದ್ದ ವಿಚಾರಣೆಯಲ್ಲಿ 1 ಮತ್ತು 2ನೇ ಪ್ರತಿವಾದಿಗಳ ಪರ ವಕೀಲರು ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು. ಹಾ ರೋ ಹಳ್ಳಿ ಗ್ರಾಮದ ಸ.ನಂ 478 ರಲ್ಲಿ 2-00 ಎ/ಗುಂ ಜಮೀನು ಅಧಿಕೃತ ಜ್ಞಾಪನ ಪತ್ರ (ಸಂಖ್ಯೆ:ಬಿಡಿಸ್.ಎಎಲ್ಎನ್ .ಡಿಎಸ್ ಆರ್ (3)345/1968-69 ದಿನಾಂ ಕ:06-08-1968 ರಂತೆ )ಸಣ್ಣಪ್ಪ ಅವರಿಗೆ ಮಂಜೂರಾಗಿದೆ. 1968ರ ನವೆಂಬರ್‍‌ 16ರಂದೇ ದಿನಾಂ ಕ: ಸಾಗುವಳಿ ಚೀಟಿ ನೀಡಲಾಗಿದೆ. (ಎಂ .ಆರ್ .ಹೆಚ್ 183/2023-24) ಖಾತೆ ದಾಖಲಾಗಿದೆ.

ಹಾಗೆಯೇ ಈ ಜಮೀನು ಪೋಡಿ ದುರಸ್ತಿಯಾಗಿ ಹೊಸ ಸರ್ವೆ ನಂ (887) ನೀಡಿದೆ. ನಂತರ ನೋಂದಣಿ ಕ್ರಯಪತ್ರದ (ಸಂಖ್ಯೆ: ಕೆಎನ್ ಕೆ-1-08718-2025-26 ದಿನಾಂಕ: 10-09-2025)ದಂತೆ ಸಣ್ಣಪ್ಪರವರಿಂದ ರವಿ ಎಂಬುವರಿಗೆ ಕ್ರಯವಾಗಿದೆ. ಕ್ರಯಪತ್ರದಂತೆ (ಎಂ .ಆರ್ ಹೆಚ್ 52/2025-26) ಖಾತೆ ದಾಖಲಾಗಿದೆ. ಹಾಗೂ ಈ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೂ ಸಹ ಆದೇಶ ಹೊರಡಿಸಿದ್ದಾರೆ. ಈ ಜಮೀನುಗಳಿಗೆ ಸಂಬಂಧಿಸಿದಂತೆ ಯಾವುದೇ ನಡವಳಿಗಳನ್ನು ನಡೆಸಬಾರದು ಎಂದು ಲಿಖಿತ ಆಕ್ಷೇಪಣೆಯಲ್ಲಿ ಕೋರಿದ್ದರು.

ಪ್ರಕರಣದ 3ನೇಪ್ರತಿವಾದಿಯಾಗಿದ್ದ ಕೆಎಐಡಿಬಿಯ 0 ವಿಶೇಷ ಭೂಸ್ವಾಧೀನಾಧಿಕಾ ರಿ ದಾಖಲೆ ಸಮೇತ ಈ ಪ್ರಕರಣದ ಕುರಿತು ವಿವರಿಸಿದ್ದರು. ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ, ಹಾರೋಹಳ್ಳಿ ಗ್ರಾಮದ ಸ.ನಂ 478 ರಲ್ಲಿ ಒಟ್ಟು 23-00 ಎ/ಗುಂ ಜಮೀನನ್ನು ವಿಧಿ 28(1)ರ ಪ್ರಕಾರ ಪ್ರಾಥಮಿಕ ಅಧಿಸೂಚನೆ (ಸಂ : ಸಿಐ 221 ಎಸ್ ಪಿಕ್ಯೂ 2006 ದಿನಾಂಕ: 22-07-2006) ಹೊರಡಿಸಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದರು.

ನಂತರ ವಿಧಿ 28(4)ರ ಅಂತಿಮ ಅಧಿಸೂಚನೆ ಪ್ರಕಾರ ಹಾ ರೋ ಹಳ್ಳಿ ಗ್ರಾ ಮದ ಸ.ನಂ 478ರಲ್ಲಿ ಒಟ್ಟು 16-28 ಎ/ಗುಂ , ಖರಾಬು 12-38 ಎ/ಗುಂ ಉಳಿಕೆ 3-30 ಎ/ಗುಂ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಸ್ವಾಧೀನಪಡಿಸಿಕೊಂಡ ಹಾರೋಹಳ್ಳಿ ಗ್ರಾಮದ ಸ.ನಂ 478ರ ಜೆಎಂಸಿ ತಖ್ತೆ ಪ್ರಕಾರ ಯಲ್ಲಪ್ಪ ತಿಮ್ಮಯ್ಯರವರಿಗೆ 0-10 ಎ/ಗುಂ , ತಿರುಮಳಪ್ಪಗೆ 0-11 ಗುಂಟೆ, ನಾಗಪ್ಪಗೆ 1-00 ಎ/ಗು, ಯಶವಂತಕುಮಾರ್ ರವರಿಗೆ 0-20 ಎ/ಗುಂ , ಮಲ್ಲೇಶಯ್ಯರಿಗೆ 1-00 ಎ/ಗುಂ ಜಮೀನು ಒಟ್ಟು 3-29 ಎ/ಗುಂ ವಿಸ್ತೀರ್ಣ ಮಂಜೂರಾಗಿರುವಂತೆ ಉಳಿಕೆ 12-39 ಎ/ಗುಂ ಖರಾ ಬು ಎಂದು ನಮೂದಾಗಿದೆ ಎಂದು ವಿವರಿಸಿದ್ದರು.

ಭೂ ಸ್ವಾಧೀನಪಡಿಸಿಕೊಂಡ ಜಮೀನುಗಳ ಪೈಕಿ ಮಂಜೂರಾಗಿ ಖಾತೆಯಾಗಿರುವ ಜಮೀನುಗಳ ಭೂಮಾಲೀಕರಿಗೆ ಕೆಐಎಡಿಬಿ ಕಾಯ್ದೆ ವಿಧಿ 29(2) ರಂತೆ ಪರಿಹಾರ ಪಡೆಯಲು ನೋ ಟಿಸ್ ನೀಡಲಾಗಿತ್ತು. ಈ ನೋಟಿಸ್ ಪಡೆದಿದ್ದ ಭೂಮಲೀಕ ನಾಗಪ್ಪ ಯಶವಂತಕುಮಾ ರ್ ಮತ್ತು ನರಸಿಂಹಯ್ಯ (0- 20 ಎ/ಗುಂ ) ರವರು ಕಂದಾಯ ದಾಖಲೆಗಳನ್ನು ಹಾಜರುಪಡಿಸಿದ್ದರು.

ಭೂಪರಿಹಾರದ ಬದಲು ಅಭಿವೃದ್ಧಿಪಡಿಸಿದ ಜಮೀನನ್ನು ಕೋರಿದ್ದರು. ಹಾಗೆಯೇ ತಿರುಮಳಪ್ಪ, (0-11 ಗುಂ ಟೆ), ಯಲ್ಲಪ್ಪ (0-10 ಎ/ಗುಂ ) ಮಲ್ಲೇಶಯ್ಯ (1-00 ಎ/ಗುಂ ) ವಿಸ್ತೀರ್ಣಕ್ಕೆ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತು ತಿಮ್ಮಕ್ಕ ಎಂಬುವರು (0-20 ಎ/ಗುಂ ) ಯಾ ವು ದೇ ದಾಖಲೆಗಳನ್ನು ಹಾಜರುಪಡಿಸಿರಲಿಲ್ಲ. ಹೀಗಾಗಿ ಈ ಜಮೀನುಗಳಿಗೆ ಸಾಮಾನ್ಯ ಐತೀರ್ಪು ರಚಿಸಿ, ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿತ್ತು.

ಅದೇ ರೀತಿ ಹಾರೋಹಳ್ಳಿಯ ಉಪತಹಶೀಲ್ದಾರ್ ಪತ್ರದ ಪ್ರಕಾರ )ಸಂಖ್ಯೆ: ಎಲ್ ಎಕ್ಯೂ / ಸಿಆರ್ /625/2015-16 ದಿನಾಂ ಕ: 18-01-2016)ಈ ಸನಂ 478 ರಲ್ಲಿ 12-38 ಎ/ಗುಂ ಜಮೀನನ್ನು ಕೆಐಎಡಿಬಿ ರವರಿಗೆ ಹಸ್ತಾಂತರ ಮಾಡಲಾಗಿತ್ತು. ಹಸ್ತಾಂತರಗೊಂಡ ಸರ್ಕಾರಿ ಗೋಮಾಳ ಜಮೀನನ್ನು (21-1-2016) ಕೆ.ಐ.ಎ.ಡಿ.ಬಿ ಕಾಯ್ದೆ ವಿಧಿ 28(8)ರನ್ವಯ ಅಭಿವೃದ್ಧಿ ಅಧಿಕಾ ರಿಗಳವರಿಗೆ ಹಸ್ತಾಂತರಿಸಿತ್ತು.

ಭೂ ಸ್ವಾಧೀನಪಡಿಸಿಕೊಂಡಿರುವ ಈ ಜಮೀನುಗಳಿಗೆ ಪಹಣಿ ಕಾ ಲಂ 9 ರಲ್ಲಿ ಕೆಐಎಡಿಬಿ ಗೆ ಭೂ ಸ್ವಾಧೀನ ಎಂದು ಇಂಡೀಕರಣ ಮಾಡಿಕೊಡಲು ತಹಶೀಲ್ದಾರ್‍‌ಗೆ ಪತ್ರ ಬರೆದಿತ್ತು. ಈ ಮಧ್ಯೆ ತಹಶೀಲ್ದಾರ್ ರವರ ಪತ್ರದ ಪ್ರಕಾರ (ಸಂಖ್ಯೆ: ಎಲ್ ಎನ್ ಡಿ.ಸಿಆರ್.320/23-24 ದಿನಾಂ ಕ: 20-11-2023) ಹಾರೋ ಹಳ್ಳಿ ಗ್ರಾ ಮದ ಸ.ನಂ 478 ರಲ್ಲಿ ಸಣ್ಣಪ್ಪ ಮಂಜೂರಾಗಿರುವ 2-00 ಎ/ಗುಂ ಜಮೀನು ಕೆ.ಐ.ಎ.ಡಿ.ಬಿ ಗೆ ಭೂ ಸ್ವಾಧೀನವಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ನೀಡಲು ಕೋರಿದ್ದರು.

 

 

ಭೂ ಮಾಪಕರು ಈ ಬಗ್ಗೆ ವರದಿ ಸಲ್ಲಿಸಿದ್ದರು. ಈ ವರದಿ ಪ್ರಕಾರ ಹಾರೋಹಳ್ಳಿ ಗ್ರಾಮದ ಸ.ನಂ 478 ಸರ್ಕಾ ರಿ ಗೋಮಾಳದ ಪೈಕಿ ಸಣ್ಣಪ್ಪ ಹೆಸರಿನಲ್ಲಿದ್ದ 2-00 ಎ/ಗುಂ ಜಮೀನು ಹಾಲಿ ಸಣ್ಣಪ್ಪರವರು ಅನುಭವ ತೋರಿಸಿದಂತೆ ಈ ಪ್ರದೇಶವು ಹಾರೋಹಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಒಳಗಡೆ ಬರುತ್ತದೆ ಎಂದು ವರದಿಯಲ್ಲಿ ವಿವರಿಸಿದ್ದರು. ಈ ವರದಿ ಕುರಿತೂ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಹಾರೋಹಳ್ಳಿ ಗ್ರಾಮದ ಸ.ನಂ 478 ಹೊಸ ಸರ್ವೆ ನಂ 887 ರಲ್ಲಿ 2-00 ಎ/ಗು ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಖಾತೆ ಮಾಡಿರುವ ಬಗ್ಗೆ ದಲಿತ ಸಂಘಟನೆಗಳ ಒಕ್ಕೂ ಟವು ಕಂದಾಯ ಸಚಿವರಿಗೆ ಮತ್ತು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿತ್ತು.

ಪ್ರಸ್ತಾಪಿತ ಜಮೀನಿಗೆ ನಕಲಿ ದಾಖಲೆಗಳ ಆಧಾರದ ಮೇಲೆ ಮ್ಯುಟೇಷನ್/ಪೋಡಿ ಮಾಡಿರುವುದನ್ನು ವಜಾಗೊಳಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆ ನಂತರ ಬೆಂಗಳೂರು ದಕ್ಷಿಣ ಜಿಲ್ಲೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶ (ಸಂಖ್ಯೆ: ಆರ್ ಆರ್ ಟಿ/ಸಿಆರ್/165/2025 ದಿನಾಂಕ: 09/01/2025) ಹಾಗೂ ತಹಶೀಲ್ದಾರ್ ರವರ ಆದೇಶ (ಸಂಖ್ಯೆ: ಆರ್ ಆರ್ ಟಿ/ಡಿ10/2024 ದಿನಾಂ ಕ: 04/07/2024) ಹಾಗೂ ಖಾತಾ ನಡವಳಿ (ಆದೇಶ : ಎಂ .ಆರ್ ಟಿ47/2024-25 ಎಂ .ಆರ್ ಟಿ73/2025-26, ಎಂ .ಆರ್ :89/2025-26, ಎಂ ಆರ್ ಹೆಚ್ 52/2025-26) ವಿರು ದ್ಧ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 136(3) ರಡಿಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸ್ವಯಂ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಹಾರೋಹಳ್ಳಿ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ, ಹಾರೋಹಳ್ಳಿ ಗ್ರಾಮದ ಸ.ನಂ . 478 ರಲ್ಲಿ ಸಣ್ಣಪ್ಪ ಎಂಬುವರ ಹೆಸರಿಗೆ ಖಾತೆ ದಾಖಲಾಗಿದ್ದ 2-00 ಎ/ಗು ಜಮೀನು ಹಾರೋಹಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶದ ವ್ಯಾ ಪ್ತಿಯ ಒಳಗಡೆ ಬರುತ್ತದೆ ಎಂದು ಕೆಐಎಡಿಬಿಯ ವಿಶೇಷ ಭೂ ಸ್ವಾಧೀನಾಧಿಕಾರಿಗಳು ತಿಳಿಸಿದ್ದರು. ಆದರೂ ಇದನ್ನು ಖಚಿತಪಡಿಸಿಕೊಳ್ಳದೆ ಈ ಜಮೀನನ್ನು ಪೋಡಿ ದುರಸ್ತಿಪಡಿಸಿ ಹೊಸ ಸರ್ವೆ ನಂ : 887 ನೀಡಲಾಗಿತ್ತು. ಹಾಗೆಯೇ ಈ ಜಮೀನನ್ನು ಸಣ್ಣಪ್ಪ ಎಂಬುವರು ರವಿ ಎಂ .ಆರ್. ಬಿನ್ ಮರೀಗೌಡರವರಿಗೆ ನೋಂದಣಿ ಕ್ರಯ ಮಾಡಿಕೊಟ್ಟಿದ್ದರು. ಈ ಕ್ರಯದಂತೆ ರವಿ ಎಂ . ಆರ್ ಹೆಸರು ಪಹಣಿಯಲ್ಲಿ ಮುಂದುವರೆದಿತ್ತು.

ಈ ಪ್ರಶ್ನಿತ ಜಮೀನು ಕೆಐಎಡಿಬಿಗೆ ಭೂ ಸ್ವಾಧೀನವಾದ ನಂತರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಹಂಚಿಕೆಯಾಗಿತ್ತು. ಈ ಬಗ್ಗೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಯು ಪ್ರಶ್ನಿತ ಸ.ನಂ .478 ರ ಜಮೀನು ಕೆಐಎಡಿಬಿ ಗೆ ಭೂ ಸ್ವಾಧೀನವಾಗಿರುವ ಬಗ್ಗೆ ಅಂ ತಿಮ ಅಧಿಸೂಚನೆ ಪ್ರತಿ ಮತ್ತು ಜಿಎಂಸಿ ಸ್ಕೆಚ್ ಪಡೆದುಕೊಂಡಿದ್ದರು.

ಅಲ್ಲದೇ ಭೂ ದಾಖಲೆಗಳ ಸಹಾಯಕ ನಿರ್ದೇಶಕರೊಂದಿಗೆ ಮತ್ತೊಮ್ಮೆ ಸ್ಥಳ ಪರಿಶೀಲಿಸಿದ್ದರು. ಪ್ರಶ್ನಿತ ಜಮೀನು ಕೆಐಎಡಿಬಿ ಗೆ ಭೂಸ್ವಾಧೀನವಾಗಿರುವುದನ್ನು ಖಚಿತಪಡಿಸಿಕೊಂಡಿದ್ದರು. ಸರ್ವೆ ನಂಬರ್ 887 ರ 2-00 ಎಕರೆ ವಿಸ್ತೀರ್ಣದ ಜಮೀನನ್ನು ಕೆಐಎಡಿಬಿಗೆ ಪಹಣಿ ಇಂಡೀಕರಿಸಲು ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ವರದಿ ಮಾಡಿದ್ದರು. ಅಲ್ಲದೇ ಈ ಪ್ರಕರಣದಲ್ಲಿ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು 2025ರ ನವೆಂಬರ್‍‌ 12ರಂದು ಆದೇಶಿಸಿದ್ದರು.

ಪ್ರಶ್ನಿತ ಜಮೀನನ್ನು ಭೂ ದಾ ಖಲೆಗಳ ಸಹಾಯಕ ನಿರ್ದೇಶಕರೊಂ ದಿಗೆ ಸ್ಥಳ ತನಿಖೆಯೂ ನಡೆದಿತ್ತು. ಅದರಂತೆ ಹಾ ರೋ ಹಳ್ಳಿ, ತಾ ಲ್ಲೂ ಕು , ಹಾ ರೋ ಹಳ್ಳಿ ಹೋಬಳಿ, ಹಾರೋಹಳ್ಳಿ, ದೇವರಕಗ್ಗಲಹಳ್ಳಿ ಹಾಗೂ ಇತರೆ ಗ್ರಾಮದ ಸ.ನಂ ನಲ್ಲಿ ಹಾರೋಹಳ್ಳಿ 1 ನೇ ಹಾಗೂ 2ನೇ ಹಂತದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರ್ಕಾ ರವು ಹೊರಡಿಸಿದ್ದ ಅಂತಿಮ ಅಧಿಸೂಚನೆ (ಸಂಖ್ಯೆ: ಸಿಐ34 ಎಸ್ ಪಿಕ್ಯೂ 2007 ಬೆಂ ಗಳೂ ರು ದಿನಾಂಕ:15/06/2010 ರನ್ವಯ ವಿಧಿ 28(4) ರಡಿ) ಯನ್ನು ಪರಿಶೀಲಿಸಿತ್ತು.

ಈ ಸ್ವತ್ತು ಮೂಲತಃ ಸರ್ಕಾರಿ ಜಮೀನಾಗಿದ್ದು, ಅತ್ಯಂತ ಮೌಲ್ಯವುಳ್ಳ ಜಮೀನಾಗಿರುತ್ತದೆ. ಜಮೀನು ಮಂಜೂರಾಗಿರುವುದಕ್ಕೆ 1969 ರಿಂದ 2023 ರವರೆಗಿನ ಪಹಣಿಯಲ್ಲಿ ಯಾವುದೇ ನಮೂದುಗಳು ಇರುವುದಿಲ್ಲ. ಕೆ.ಐ.ಎ.ಡಿ.ಬಿ ಗೆ ಈಗಾಗಲೇ ಭೂಸ್ವಾಧೀನವಾಗಿರುವ ಜಮೀನಿನಲ್ಲಿ 2023-24 ನೇ ಸಾಲಿನಲ್ಲಿ ಖಾತೆ ಹಾಗೂ ದುರಸ್ತಿಯಾಗಿರುವುದು ಕಂಡು ಬಂದಿದೆ. ಲಭ್ಯ ವಿರು ವ ಎಲ್ಲಾ ದಾಖಲಾತಿಗಳು ಅನುಮಾನಸ್ಪದವಾಗಿದೆ. ಈ ದಾಖಲೆಗಳು ಸೃಷ್ಟಿತ ದಾ ಖಲಾತಿಗಳು ಎಂದು ಕಂಡು ಬಂದಿದೆ.

 

 

ಹಾಗೆಯೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ ಈ ದಾಖಲೆಗಳು ನಕಲಿಗಳೆಂದು ದೃಢಪಟ್ಟಿದೆ. ಹೀಗಾಗಿ ಈ ಜಮೀನುಗಳ ಖಾತಾ ನಡವಳಿಗಳನ್ನು ರದ್ಧುಪಡಿಸುವುದು ಸೂಕ್ತ ಎಂದು ನ್ಯಾಯಾಲಯವು ಅಭಿಪ್ರಾಯಿಸಿರುವುದು ಆದೇಶದಿಂದ ಗೊತ್ತಾಗಿದೆ.

 

 

 

ನ್ಯಾಯಾಲಯದ ಆದೇಶದಂತೆ ಪಹಣಿ ಮತ್ತು ಮ್ಯುಟೇಷನ್‌ನಲ್ಲಿ ಸರ್ಕಾರ ಎಂದು ಸೇರಿಸಿದೆ.

 

ಡಿಸಿಎಂ ತವರು ಕ್ಷೇತ್ರದಲ್ಲೇ ಭೂ ಅಕ್ರಮ; 108 ಕೋಟಿ ಮೌಲ್ಯದ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ

 

ಈ ಪ್ರಕರಣದ ಕುರಿತು ದಿ ಫೈಲ್‌ ಮಾರ್ಚ್‌ 2ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ; ಅಧಿಕಾರಿಗಳ ವಿರುದ್ಧ ದಾಖಲಾಗದ ಎಫ್‌ಐಆರ್, ವರದಿ ಸಲ್ಲಿಸಲು ಸೂಚನೆ

 

ಈ ಪ್ರಕರಣದಲ್ಲಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿರಲಿಲ್ಲ. ಈ ಕುರಿತು ದಿ ಫೈಲ್‌ 2026ರ ಏಪ್ರಿಲ್‌ 10ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

Hot this week

ಸರ್ಕಾರದ ಪೂರ್ವಾನುಮೋದನೆ ಇಲ್ಲದಿದ್ದರೂ ದಲಿತರ ಜಮೀನು ಭೂಪರಿವರ್ತನೆಗೆ ಶಿಫಾರಸ್ಸು; ತಹಶೀಲ್ದಾರ್ ಭಾಗಿ!

ಬೆಂಗಳೂರು; ಪಿಟಿಸಿಎಲ್ ಕಾಯ್ದೆ,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ...

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ

ಬೆಂಗಳೂರು; ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಿಂದಿನ ಕಾಂಗ್ರೆಸ್‌...

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ  ಪುರಾತತ್ವ...

Topics

ಸರ್ಕಾರದ ಪೂರ್ವಾನುಮೋದನೆ ಇಲ್ಲದಿದ್ದರೂ ದಲಿತರ ಜಮೀನು ಭೂಪರಿವರ್ತನೆಗೆ ಶಿಫಾರಸ್ಸು; ತಹಶೀಲ್ದಾರ್ ಭಾಗಿ!

ಬೆಂಗಳೂರು; ಪಿಟಿಸಿಎಲ್ ಕಾಯ್ದೆ,  ಸರ್ಕಾರಿ ಗೋಮಾಳ ಮತ್ತು ಅರಣ್ಯ ಪ್ರದೇಶದ ಜಮೀನುಗಳ...

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ

ಬೆಂಗಳೂರು; ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಿಂದಿನ ಕಾಂಗ್ರೆಸ್‌...

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ  ಪುರಾತತ್ವ...

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ,...

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

Related Articles

Popular Categories

error: Content is protected !!