ರಾಜ್ಯಪಾಲರ ಹುದ್ದೆ ಆಮಿಷ; ಯುವರಾಜಸ್ವಾಮಿ, ಇಂದ್ರಕಲಾ ಪ್ರಕರಣ ನೆನಪಿಸಿದ ಸಿಬಿಐ

photo credit; thehindu

ಬೆಂಗಳೂರು; ರಾಜ್ಯಪಾಲರ ಹುದ್ದೆ ಹಾಗೂ ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಸುಳ್ಳು ಭರವಸೆ ನೀಡುವ ಮೂಲಕ ಜನರಿಗೆ 100 ಕೋಟಿ ವಂಚಿಸಲು ಮುಂದಾಗಿತ್ತು ಎನ್ನಲಾದ ಅಂತರ ರಾಜ್ಯ ಜಾಲವೊಂದನ್ನು ಸಿಬಿಐ ಭೇದಿಸಿರುವ ಪ್ರಕರಣವು ಕರ್ನಾಟಕದಲ್ಲಿಯೂ ನಿವೃತ್ತ ನ್ಯಾಯಾಧೀಶರೊಬ್ಬರೂ ಸೇರಿದಂತೆ ಹಲವರನ್ನು ಸಂಘ ಪರಿವಾರದ ಹಿನ್ನೆಲೆಯ ಯುವರಾಜಸ್ವಾಮಿ ಎಂಬಾತ ವಂಚಿಸಿದ್ದ ಪ್ರಕರಣವನ್ನೂ ನೆನಪಿಸಿದೆ.

 

ಬಿಜೆಪಿಯ ರಾಷ್ಟ್ರೀಯ ಘಟಕದ ಹಲವು ಧುರೀಣರ ಹೆಸರು ಮತ್ತು ಸ್ನೇಹವನ್ನು ಬಳಸಿಕೊಂಡಿದ್ದ ಯುವರಾಜಸ್ವಾಮಿ ಎಂಬಾತ ಹಾಲಿ ರಾಜ್ಯ ಬಿಜೆಪಿ ಸರ್ಕಾರದ ಹಲವು ಸಚಿವರು ಮತ್ತು ನಿಗಮ ಮಂಡಳಿ ಆಕಾಂಕ್ಷಿಗಳಿಗೂ ಆಮಿಷವೊಡ್ಡಿ ವಂಚಿಸಿದ್ದ ಪ್ರಕರಣವು ಸಿಬಿಐ ಬಂಧಿಸಿರುವ ಜಾಲದ ಮಾದರಿಯಲ್ಲಿಯೇ ಇದೆ.

 

ದೆಹಲಿಯಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಪ್ರಕಾರ ಕರ್ನಾಟಕದ ಬೆಳಗಾವಿಯಲ್ಲಿ ವಾಸವಿರುವ ರವೀಂದ್ರ ವಿಠಲ ನಾಯ್ಕ ಎಂಬಾತನ ಹೆಸರೂ ಇದೆ. ಉಳಿದಂತೆ ಮಹಾರಾಷ್ಟ್ರ ಲಾತೂರಿನ ಕಮಲಾಕರ ಪ್ರೇಮಕುಮಾರ್ ಬಾಂದಗರ, ದೆಹಲಿಯ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಹಾಗೂ ಮೊಹಮ್ಮದ್ ಏಜಾಜ್ ಖಾನ್‌ ಎಂಬುವವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

 

‘ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುವುದು, ರಾಜ್ಯಸಭಾ ಸೀಟು ಕೊಡಿಸಲಾಗುವುದು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಡಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಲಾಗುವುದು ಎಂಬುದಾಗಿ ಸುಳ್ಳು ಭರವಸೆಗಳನ್ನು ನೀಡಿ, ಜನರಿಂದ ಕೋಟ್ಯಂತರ ರೂಪಾಯಿ ಪಡೆಯುವ ಸಂಚು ರೂಪಿಸಿದ್ದರು’ ಎಂಬ ಅಂಶವನ್ನು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

 

ಥೇಟ್‌ ಇದೇ ಮಾದರಿಯಲ್ಲಿಯೇ ಯುವರಾಜಸ್ವಾಮಿ ಎಂಬಾತನು ಹೈಕೋರ್ಟ್‌ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ಇಂದ್ರಕಲಾ ಅವರಿಗೂ ರಾಜ್ಯಪಾಲರ ಹುದ್ದೆ ಕೊಡಿಸುವುದಾಗಿ ನಂಬಿಸಿ ಅವರಿಂದ 8.25 ಕೋಟಿ ರು. ಪಡೆದು ಆ ನಂತರ ವಂಚಿಸಿದ್ದ. ಈ ಕುರಿತು ಇಂದ್ರಕಲಾ ಅವರು ದೂರು ದಾಖಲಿಸಿದ್ದರು.

 

‘ಜನರನ್ನು ನಂಬುವಂತೆ ಮಾಡುವ ಸಲುವಾಗಿ ಆರೋಪಿಗಳು ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳ ಹೆಸರುಗಳನ್ನು ಬಳಕೆ ಮಾಡುತ್ತಿದ್ದರು. ಇಲ್ಲವೇ, ತಮ್ಮ ಈ ಕಾರ್ಯದಲ್ಲಿ ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್‌ ಬೂರಾ ಮೂಲಕ ಈ ಹೆಸರುಗಳನ್ನು ಬಳಸುತ್ತಿದ್ದರು.’ ಎಂಬ ಬಗ್ಗೆ ಸಿಬಿಐಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಜಾಡನ್ನು ಹಿಡಿದು ಶೋಧ ನಡೆಸಿದ ಅಧಿಕಾರಿಗಳು, ಈ ವಂಚನೆಯ ಜಾಲವನ್ನು ಭೇದಿಸಿದ್ದಾರೆ ಎಂದು ಮೂಲಗಳು ಹೇಳಿವೆ.

 

ಇದೇ ರೀತಿಯಲ್ಲಿಯೇ ರಾಜ್ಯದಲ್ಲಿಯೂ ಯುವರಾಜಸ್ವಾಮಿ ಎಂಬಾತನೂ ಸಂಘಪರಿವಾರದ ಹಲವರು, ಕೇಂದ್ರದ ಹಲವು ಸಚಿವರುಗಳ ಹೆಸರುಗಳನ್ನು ಬಳಕೆ ಮಾಡಿದ್ದ. ಈ ಕುರಿತು ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು. ಈ ಸಂಬಂಧ ‘ದಿ ಫೈಲ್‌’ 10 ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿತ್ತು.

 

ಸಿಬಿಐ ಬಂಧಿಸಿರುವ ಪ್ರಕರಣದ ಮಾದರಿಯಲ್ಲಿಯೇ ಯುವರಾಜಸ್ವಾಮಿ ಪ್ರಕರಣವು ಹೋಲುವುದರಿಂದ ಆ ಎಲ್ಲಾ ವರದಿಗಳನ್ನು ಇಲ್ಲಿ ಕೊಡಲಾಗಿದೆ.

 

ಆಮಿಷ; ಜಸ್ಟೀಸ್‌ ಇಂದ್ರಕಲಾ ಸೇರಿ 5 ಮಂದಿಗೆ ಯುವರಾಜಸ್ವಾಮಿ ವಂಚಿಸಿದ್ದು 18.32 ಕೋಟಿ

ವಂಚಕ ಯುವರಾಜಸ್ವಾಮಿ ಮನೆಯಲ್ಲಿದ್ದವು ನಿರಾಣಿ ಹೆಸರಿನ ಲೆಟರ್‌ಹೆಡ್‌ಗಳು; ಕಲ್ಪವೃಕ್ಷದ ಗುಟ್ಟೇನು?

ಯುವರಾಜಸ್ವಾಮಿ ಮನೆಯಲ್ಲಿದ್ದವು ನಿರಾಣಿ ಹೆಸರಿನ ಲೆಟರ್‌ಹೆಡ್‌ಗಳು; ಕಲ್ಪವೃಕ್ಷದ ಗುಟ್ಟೇನು?

 

 

ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್‌ಲೈನ್‌ ವೆಂಕಟೇಶ್‌ರಿಂದಲೂ 50 ಲಕ್ಷ ನೆರವು

ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್‌ಲೈನ್‌ ವೆಂಕಟೇಶ್‌ರಿಂದಲೂ 50 ಲಕ್ಷ ನೆರವು

 

ಯುವರಾಜಸ್ವಾಮಿ ಬಳಿ ಕತ್ತಿ, ಶ್ರೀರಾಮುಲು, ಪ್ರಮೋದ್‌ ಮಧ್ವರಾಜ್‌ ಬಯೋಡೇಟಾ ಪತ್ತೆ

ಯುವರಾಜಸ್ವಾಮಿ ಬಳಿ ಕತ್ತಿ, ಶ್ರೀರಾಮುಲು, ಪ್ರಮೋದ್‌ ಮಧ್ವರಾಜ್‌ ಬಯೋಡೇಟಾ ಪತ್ತೆ

ಯುವರಾಜಸ್ವಾಮಿಯಿಂದ ಶ್ರೀರಾಮುಲು ಖಾತೆಗೆ 18 ಲಕ್ಷ ರು. ವರ್ಗಾವಣೆ

ಯುವರಾಜಸ್ವಾಮಿಯಿಂದ ಶ್ರೀರಾಮುಲು ಖಾತೆಗೆ 18 ಲಕ್ಷ ರು. ವರ್ಗಾವಣೆ

ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ

 

ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ

ಪ್ರಮೋದ್‌ ಮಧ್ವರಾಜ್‌ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು. ಸಂದಾಯ

ಪ್ರಮೋದ್‌ ಮಧ್ವರಾಜ್‌ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು. ಸಂದಾಯ

ಮಾಸ್ಟರ್‌ ಬೆಡ್‌ ರೂಂ ರಹಸ್ಯ; ವಾರ್ಡ್‌ರೂಬ್‌ನಲ್ಲಿದ್ದವು 90 ಕೋಟಿ ರು. ನಮೂದಿಸಿದ್ದ ಚೆಕ್‌ ಹಾಳೆಗಳು

ಬೆಡ್‌ ರೂಂ ರಹಸ್ಯ; ವಾರ್ಡ್‌ರೂಬ್‌ನಲ್ಲಿದ್ದವು 90 ಕೋಟಿ ರು. ನಮೂದಿಸಿದ್ದ ಚೆಕ್‌ ಹಾಳೆಗಳು

ಆರ್‌ಎಸ್‌ಎಸ್‌ ಒಡನಾಟದ ಬಗ್ಗೆ ಬಾಯ್ಬಿಟ್ಟ ಯುವರಾಜ್‌; ಹೇಳಿಕೆಯಲ್ಲಿದೆ ಹೆಸರುಗಳ ಪಟ್ಟಿ

ಆರ್‌ಎಸ್‌ಎಸ್‌ ಒಡನಾಟದ ಬಗ್ಗೆ ಬಾಯ್ಬಿಟ್ಟ ಯುವರಾಜ್‌; ಹೇಳಿಕೆಯಲ್ಲಿದೆ ಹೆಸರುಗಳ ಪಟ್ಟಿ

ಯುವರಾಜಸ್ವಾಮಿ ಹೆಸರಿಗೆ ಡಿ ಎಸ್‌ ವೀರಯ್ಯರಿಂದಲೂ 50 ಲಕ್ಷ ಮೊತ್ತದ ಚೆಕ್‌

ಯುವರಾಜಸ್ವಾಮಿ ಹೆಸರಿಗೆ ಡಿ ಎಸ್‌ ವೀರಯ್ಯರಿಂದಲೂ 50 ಲಕ್ಷ ಮೊತ್ತದ ಚೆಕ್‌

 

ಆರೋಪಿ ಯುವರಾಜಸ್ವಾಮಿಯ ಆಮಿಷಕ್ಕೆ ಒಳಗಾಗಿ ಕೋಟ್ಯಂತರ ರುಪಾಯಿ ನೀಡಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ಇಂದ್ರಕಲಾ ವಿರುದ್ದ ಭ್ರಷ್ಟಾಚಾರ ತಡೆ ಕಾಯ್ದೆ (ತಿದ್ದುಪಡಿ) ಅನ್ವಯ ಜನಾಧಿಕಾರ ಸಂಘರ್ಷ ಪರಿಷತ್‌ ಎಸಿಬಿಯಲ್ಲಿ ದೂರು ದಾಖಲಿಸಿತ್ತು. ಆದರೆ ಈ ಪ್ರಕರಣವನ್ನು ಎಸಿಬಿಯು ಸಿಬಿಐಗೆ ವರ್ಗಾಯಿಸಿತ್ತು. ಆದರೆ ಇನ್ನುಳಿದ ಪ್ರಕರಣದಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts