ಪ್ರಮೋದ್‌ ಮಧ್ವರಾಜ್‌ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು. ಸಂದಾಯ

ಬೆಂಗಳೂರು; ಗಣ್ಯಾತಿಗಣ್ಯರಿಗೆ ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿ ಜೈಲಿನಲ್ಲಿರುವ ಯುವರಾಜಸ್ವಾಮಿ ಹೊಂದಿರುವ ಬ್ಯಾಂಕ್‌ ಖಾತೆಗೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ  ಖಾತೆಯಿಂದ ಒಟ್ಟು 90 ಲಕ್ಷ ರು. ಸಂದಾಯವಾಗಿರುವುದು ತಿಳಿದು ಬಂದಿದೆ.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್‌ ಗಾರ್ಡನ್‌ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ ಖಾತೆಯ ವಹಿವಾಟಿನ ದಾಖಲೆಯಲ್ಲಿ ಹಣ ಸಂದಾಯವಾಗಿರುವುದು ನಮೂದಾಗಿದೆ. ದೋಷಾರೋಪಣೆ ಪಟ್ಟಿಯ ದೃಢೀಕೃತ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮಾಜಿ ಸಚಿವ ಬಿ ಶ್ರೀರಾಮುಲು ಅವರು ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗೆ ಯುವರಾಜಸ್ವಾಮಿಯು 18 ಲಕ್ಷ ರು. ಸಂದಾಯ ಮಾಡಿರುವ ವಿಚಾರ ಬಹಿರಂಗವಾದ ಬೆನ್ನಲ್ಲೇ ಪ್ರಮೋದ್‌ ಮಧ್ವರಾಜ್‌ ಅವರ ಖಾತೆಯಿಂದ 90 ಲಕ್ಷ ರು. ಸಂದಾಯವಾಗಿರುವ ಬ್ಯಾಂಕ್‌ ವಹಿವಾಟಿನ ದಾಖಲೆಗಳು ಮುನ್ನೆಲೆಗೆ ಬಂದಿವೆ.

2020ರ ಜನವರಿ 10, 13, 17 ಮತ್ತು 2020ರ ಫೆಬ್ರುವರಿ 24ರಂದು ಪ್ರಮೋದ್‌ ಮಧ್ವರಾಜ್‌ ಅವರ ಖಾತೆಯಿಂದ (ಖಾತೆ ಸಂಖ್ಯೆ; SYNBH20010144813, SYNBH20010155024, SYNBH200131192232, SYNBH20017250240, SYNBH20055752271) ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗೆ (ಖಾತೆ ಸಂಖ್ಯೆ; 5502000100052301) ಒಟ್ಟು 90 ಲಕ್ಷ ರು., ಆರ್‌ಟಿಜಿಎಸ್‌ ಮೂಲಕ ಸಂದಾಯವಾಗಿರುವುದು ಬ್ಯಾಂಕ್‌ ಖಾತೆಯ ವಹಿವಾಟಿನಿಂದ ಗೊತ್ತಾಗಿದೆ.

2020ರ ಜನವರಿ 10ರಂದು SYNBH20010144813 ಖಾತೆಯಿಂದ 25 ಲಕ್ಷ ಮತ್ತು SYNBH20010155024 ಖಾತೆಯಿಂದ 10 ಲಕ್ಷ ರು. ವರ್ಗಾವಣೆಯಾಗಿದೆ.

 

2020ರ ಜನವರಿ 13ರಂದು SYNBH200131192232 ಖಾತೆಯಿಂದ 25 ಲಕ್ಷ, 2020ರ ಜನವರಿ 17ರಂದು SYNBH20017250240 ಖಾತೆಯಿಂದ 20 ಲಕ್ಷ ರು. ವರ್ಗಾವಣೆಯಾಗಿದೆ.

2020ರ ಫೆಬ್ರುವರಿ 24ರಂದು SYNBH20055752271 ಖಾತೆಯಿಂದ 10 ಲಕ್ಷ ರು. ಯುವರಾಜಸ್ವಾಮಿ ಖಾತೆಗೆ ಸಂದಾಯವಾಗಿರುವುದು ಬ್ಯಾಂಕ್‌ ಖಾತೆಯ ವಹಿವಾಟಿನಿಂದ ತಿಳಿದು ಬಂದಿದೆ.

ಪ್ರಮೋದ್‌ ಮಧ್ವರಾಜ್‌ ಅವರನ್ನು ‘ದಿ ಫೈಲ್‌’ ಸಂಪರ್ಕಿಸಲಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದಾಗ  ಈ ವಿಷಯ ಸಬ್‌ ಜುಡಿಸ್‌ ಆಗಿರುತ್ತದೆ ಎಂದು ಪ್ರಮೋದ್‌ ಮಧ್ವರಾಜ್ ಅವರು ತಿಳಿಸಿರುತ್ತಾರೆ. ಫೈಲ್‌ ಪರವಾಗಿ ಯಾವ ವಿಷಯದ ಬಗ್ಗೆ ಕೇಳುತ್ತಿದ್ದೀರಿ ಎಂದು ನನಗೆ ಗೊತ್ತಿದೆ, ವಿಷಯ ಸಬ್‌ ಜುಡಿಸ್‌ ಎಂದಷ್ಟೇ ಪ್ರತಿಕ್ರಿಯಿಸಿದರು.

36 ಸೆಕೆಂಡಿನ ಸಂಭಾಷಣೆಯಲ್ಲೇನಿದೆ?
(ಆಗಸ್ಟ್‌ 2, 2021ರ ರಾತ್ರಿ 10.20ಕ್ಕೆ)

ದಿ ಫೈಲ್‌; ನಾನ್‌ ಮಹಂತೇಶ್‌ ಅಂತ್ಹೇಳಿ ದಿ ಫೈಲ್‌ ವೆಬ್‌ಸೈಟಿಂದ ಮಾತಾಡ್ತಿರೋದು

ಪ್ರಮೋದ್‌ ಮಧ್ವರಾಜ್‌; ಎಲ್ಲಿಂದ?

ದಿ ಫೈಲ್‌; ದಿ ಫೈಲ್‌ ವೆಬ್‌ಸೈಟಿಂದ

ಪ್ರಮೋದ್‌ ಮಧ್ವರಾಜ್‌; ಹೂಂ

ದಿ ಫೈಲ್‌; ಒಂದು ಸ್ಟೋರಿಗೆ ಒಪಿನಿಯನ್‌ ಬೇಕಾಗಿತ್ತು, ಅದಕ್ಕೆ ನಿಮ್ಮನ್ನೇ ಕೇಳ್ಕೊಂಡು ಬರೆಯೋಣ ಅಂತ ಕಾಲ್‌ ಮಾಡಿದ್ದು ನಿಮಗೆ…

ಪ್ರಮೋದ್‌ ಮಧ್ವರಾಜ್‌; ಅದು ಸಬ್‌ ಜುಡಿಸ್‌ ಇದೆ, ಐ ಡೋಂಟ್‌ ವಾಟ್‌ ಟು ಕಮೆಂಟ್‌

ದಿ ಫೈಲ್‌; ಯಾವ ವಿಚಾರ ಹೇಳಿ ಸಾರ್‌

ಪ್ರಮೋದ್‌ ಮಧ್ವರಾಜ್‌; ಫೈಲ್‌ನವರು ಏನ್‌ ಮಾಡ್ತೀರಿ ಅಂತ ಗೊತ್ತಿದೆ. ಅದ್ರ ಬಗ್ಗೆ ಹೇಳ್ತೀದಿನಿ

ದಿ ಫೈಲ್‌; ನಿಮಗೆ ವಿಷಯಾನೇ ಹೇಳಿಲ್ಲ ಸಾರ್‌ ನಿಮಗೀಗ…

ಪ್ರಮೋದ್‌ ಮಧ್ವರಾಜ್‌; ನನಗೆ ಗೊತ್ತಿದೆ…ನೀವ್‌ ಏನ್ ಕೇಳ್ತೀರಿ ಅಂತ ಅದಕ್ಕೆ ಐ ಡೋಂಟ್‌ ವಾಂಟ್‌ ಟು ಕಮೆಂಟ್‌

ದಿ ಫೈಲ್‌; ಯುವರಾಜಸ್ವಾಮಿ ಅವರಿಗೆ..

ಪ್ರಮೋದ್‌ ಮಧ್ವರಾಜ್‌; ಈ ಡೋಂಟ್‌ ವಾಂಟ್‌ ಟು ಕಮೆಂಟ್‌……. ಥ್ಯಾಂಕ್ಯು ಯು

ಇನ್ನು, ಬಿ ಶ್ರೀರಾಮುಲು ಅವರ ಖಾತೆಗೆ ಯುವರಾಜಸ್ವಾಮಿ ಖಾತೆಯಿಂದ ಒಟ್ಟು 13 ಲಕ್ಷ ರು. ಸಂದಾಯವಾಗಿದ್ದನ್ನು ಸ್ಮರಿಸಬಹುದು. ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್‌ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ನ ವಹಿವಾಟಿನ ದಾಖಲೆಯಿಂದ ತಿಳಿದು ಬಂದಿತ್ತು.

the fil favicon

SUPPORT THE FILE

Latest News

Related Posts