Thursday | September 3, 2026 |

ಮೃತ ಫಲಾನುಭವಿಗಳ ಖಾತೆಗಳಿಂದ ಹಣ ವಾಪಸ್; ಹೇಳಿಕೆಯಲ್ಲಿನ ಅಂಕಿ, ಸರ್ಕಾರಿ ಲೆಕ್ಕದ ಮಧ್ಯೆ 9 ಕೋಟಿ ವ್ಯತ್ಯಾಸ, ನಿಜಕ್ಕೂ ವಾಪಸ್‌ ಪಡೆದಿದ್ದು ಎಷ್ಟು?

ಬೆಂಗಳೂರು; ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪೈಕಿ ಮೃತಪಟ್ಟ ಮಹಿಳೆಯರ ಖಾತೆಗೂ ಜಮೆ ಆಗಿದೆ ಎನ್ನಲಾಗಿದ್ದ ಒಟ್ಟು 117 ಕೋಟಿ ರು ಪೈಕಿ ಒಟ್ಟಾರೆ 39.70 ಕೋಟಿ ವಾಪಸ್‌ ಬಂದಿದ್ದರೂ ಸಹ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್ ಎಂ ರೇವಣ್ಣ ಅವರು 30 ಕೋಟಿ ಮಾತ್ರ ವಾಪಸ್‌ ಬಂದಿದೆ ಎಂದು ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.

ಗೃಹಲಕ್ಷ್ಮಿ ಯೋಜನೆಯೊಂದರಲ್ಲೇ 5,000 ಕೋಟಿ ರು ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ವಾಪಸ್ ಬಂದಿರುವ ಮೊತ್ತಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ನೀಡಿರುವ ಹೇಳಿಕೆಯಲ್ಲಿನ ಅಂಕಿ ಅಂಶಗಳಿಗೂ ಸರ್ಕಾರಿ ಲೆಕ್ಕ ಶೀರ್ಷಿಕೆಯಲ್ಲಿನ ಅಂಕಿ ಅಂಶಗಳ ಮಧ್ಯೆ ವ್ಯತ್ಯಾಸ ಕಂಡು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಸರ್ಕಾರಿ ಅಂಕಿ ಅಂಶ ಮತ್ತು ಜಿಲ್ಲಾವಾರು ಎಷ್ಟೆಷ್ಟು ಹಣ ವಾಪಸ್‌ ಬಂದಿದೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ.

ಸರ್ಕಾರದ ಲೆಕ್ಕ ಶೀರ್ಷಿಕೆ ಪ್ರಕಾರ 2026ರ ಆಗಸ್ಟ್‌ 8ರ ಅಂತ್ಯಕ್ಕೆ ಒಟ್ಟಾರೆ 39,70,64,699 ರು ವಾಪಸ್‌ ಬಂದಿದೆ. ಲೆಕ್ಕ ಶೀರ್ಷಿಕೆ 2235-02-911-0-140364ರ ಪ್ರಕಾಋ 34,61,29,245 ರು ಬಂದಿದ್ದರೇ ಹಳೆಯ ಲೆಕ್ಕ ಖಾತೆಯಲ್ಲಿ 5,09,35,454 ರು ಇತ್ತು. ಒಟ್ಟಾರೆ 39,70,64,699 ರು ವಾಪಸ್‌ ಬಂದಿದೆ.

ಆದರೆ  30 ಕೋಟಿ ಮಾತ್ರ ವಾಪಸ್‌ ಬಂದಿದೆ ಎಂದು ಎಚ್‌ ಎಂ ರೇವಣ್ಣ ಅವರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

 

 

ಸರ್ಕಾರದ ಲೆಕ್ಕ ಶೀರ್ಷಿಕೆಗಳಲ್ಲಿ  ಜಮೆಯಾಗಿರುವ ಮೊತ್ತ ಮತ್ತು  ರೇವಣ್ಣ ಅವರು ನೀಡಿದ್ದ ಅಂಕಿ ಅಂಶದ ಮಧ್ಯೆ 9 ಕೋಟಿಯಷ್ಟು ವ್ಯತ್ಯಾಸವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಜಿಲ್ಲಾವಾರು ವಾಪಸ್‌ ಬಂದಿರುವ ಮೊತ್ತದ ವಿವರ

ಬಳ್ಳಾರಿ ಜಿಲ್ಲೆಯಲ್ಲಿ 23,57,185.00 ರು., ಬೆಂಗಳೂರು ದಕ್ಷಿಣದಿಂದ 7,10,000 ರು., ಬೆಂಗಳೂರು ನಗರ ಜಿಲ್ಲೆಯಿಂದ 9,22,000.00 ರು., ಬೆಳಗಾವಿ ಜಿಲ್ಲೆಯಿಂದ 40,94,000 ರು ವಾಪಸ್ ಬಂದಿದೆ. ಬೀದರ್‍‌ನಿಂದ 11,07,000 ರು., ಚಿಕ್ಕಬಳ್ಳಾಪುರದಿಂದ 5,21,000 ರು., ಚಿಕ್ಕಮಗಳೂರು ಜಿಲ್ಲೆಯಲ್ಲಿ 6,78,000 ರು., ಚಿತ್ರದುರ್ಗದಿಂದ 3,46,700 ರು., ಧಾರವಾಡ ಜಿಲ್ಲೆಯಿಂದ 64,90,000 ರು ವಾಪಸ್ ಬಂದಿರುವುದು ತಿಳಿದು ಬಂದಿದೆ.

ಗದಗ್‌ ಜಿಲ್ಲೆಯಿಂದ 2,38,000 ರು., ಕಲ್ಬುರ್ಗಿ ಜಿಲ್ಲೆಯಿಂದ 6,35,000 ರು., ಹಾಸನ ಜಿಲ್ಲೆಯಿಂದ 21,55,378 ರು., ಹಾವೇರಿಯಿಂದ 34,977 ರು., ಕೋಲಾರ ಜಿಲ್ಲೆಯಿಂದ 1,70,000 ರು., ಮಂಗಳೂರಿನಿಂದ 60,83,200 ರು., ಮೈಸೂರಿನಿಂದ 39,73,351 ರು., ರಾಯಚೂರು ಜಿಲ್ಲೆಯಿಂದ 3,82,952 ರು., ಶಿವಮೊಗ್ಗ ಜಿಲ್ಲೆಯಿಂದ 3,15,952 ರು., ತುಮಕೂರು ಜಿಲ್ಲೆಯಿಂದ 17,25,910 ರು., ಉಡುಪಿಯಿಂದ 4,10, 000 ರು., ಉತ್ತರ ಕನ್ನಡದಿಂದ 18,04,484 ರು., ಯಾದಗಿರಿ ಜಿಲ್ಲೆಯಿಂದ 14,000 ರು ವಾಪಸ್‌ ಬಂದಿರುವುದು ಗೊತ್ತಾಗಿದೆ.

 

 

ಗೊತ್ತಿಲ್ಲದ ಜಿಲ್ಲೆಗಳಿಂದ 31,09,60,945.00 ರು ವಾಪಸ್‌ ಬಂದಿದೆ. 2235-02-911-0-140364 ಲೆಕ್ಕ ಶೀರ್ಷಿಕೆ ಪ್ರಕಾರ ಒಟ್ಟಾರೆ 34,61,29,245 ರು ವಾಪಸ್‌ ಬಂದಿದೆ. ಹಳೆಯ ಲೆಕ್ಕ ಶೀರ್ಷಿಕೆ ಪ್ರಕಾರ 5,09,35,454 ರು ಸೇರಿ ಒಟ್ಟಾರೆ ಸರ್ಕಾರದ ಲೆಕ್ಕ ಶೀರ್ಷಿಕೆಗೆ 39,70,64,699 ರು ವಾಪಸ್‌ ಬಂದಿರುವುದು ತಿಳಿದು ಬಂದಿದೆ.

ಅಫಜಲಪೂರ, ಅಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಲ್ಬುರ್ಗಿ, ಕಾಳಗಿ, ಕಮಲಾಪೂರ, ಸೇಡಂ, ಶಹಾಬಾದ, ಯಡ್ರಾಮಿಯಲ್ಲಿ ಈ ಯೋಜನೆಯಡಿ ಒಟ್ಟಾರೆ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ 9,156 ಮಂದಿ ಮೃತಪಟ್ಟಿದ್ದರು. ಮರಣ ಹೊಂದಿದ ನಂತರವೂ ಈ ತಾಲೂಕುಗಳಲ್ಲಿ 3,820 ಮಂದಿ ಹೆಸರಿನ ಖಾತೆಗೆ ಹಣ ಪಾತಿಯಾಗಿತ್ತು. ಒಟ್ಟು 21,362 ಕಂತುಗಳಲ್ಲಿ ಒಟ್ಟಾರೆ 4.27 ಕೋಟಿಯಷ್ಟು ಹಣ ಪಾವತಿಯಾಗಿರುವುದು ಗೊತ್ತಾಗಿದೆ.

 

 

1,869 ಖಾತೆಗಳಿಂದ 2.14 ಕೋಟಿಯಷ್ಟು ಹಣವನ್ನು ವಾಪಸ್‌ ಪಡೆಯಲಾಗಿದೆ. ಈ ಪೈಕಿ 1,769 ಖಾತೆಗಳಿಂದ 2.45 ಕೋಟಿ ರು. ಕೆ 2 ಮೂಲಕ ಸರ್ಕಾರದ ಖಜಾನೆಗೆ ಜಮೆಯಾಗಿದೆ.1,948 ಖಾತೆಗಳಲ್ಲಿರುವ ಇನ್ನು 2.12 ಕೋಟಿಯಷ್ಟು ಜಮೆ ಮಾಡಲು ಬಾಕಿ ಇದೆ. 850 ಖಾತೆಗಳನ್ನು ಮುಕ್ತಾಯಗೊಳಿಸಿದೆ. ಇದರಲ್ಲಿ 81,50,000 ರು ಇತ್ತು. 694 ಖಾತೆಗಳಲ್ಲಿ ಶೂನ್ಯ ಬಾಕಿ ಇದೆ. 404 ಖಾತೆಗಳಿಂದ ಇನ್ನೂ 46.74 ಲಕ್ಷ ರು ವಾಪಸ್‌ ಪಡೆಯಬೇಕಿರುವುದು ತಿಳಿದು ಬಂದಿದೆ.

 

 

ಕರ್ನಾಟಕ ಗ್ರಾಮೀಣ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಜನರಲ್ ಪೋಸ್ಟ್‌ ಆಫೀಸ್‌, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್, ಕೆನರಾ, ಯೂನಿಯನ್‌, ಇಂಡಸ್‌, ಬ್ಯಾಂಕ್‌ ಆಫ್‌ ಬರೋಡ, ಕಲ್ಬುರ್ಗಿ ಯಾದಗಿರಿ ಡಿಸಿಸಿ, ಬ್ಯಾಂಕ್ ಆಫ್‌ ಮಹಾರಾಷ್ಟ್ರ, ಪಂಜಾಬ್‌ ನ್ಯಾಷನಲ್‌, ಏರ್‍‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌, ಇಂಡಿಯನ್‌, ಎಚ್‌ಡಿಎಫ್‌ಸಿ, ಫಿನೋ ಪೇಮೆಂಟ್ಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಆಕ್ಸಿಸ್‌, ಕೋಟಕ್‌ ಮಹೀಂದ್ರಾ, ಬೀದರ್ ಡಿಸಿಸಿ, ಯುಕೋ, ಸುಕೋ, ದಿ ಕ್ಯಾಥೋಲಿಕ್ ಸಿರಿಯಾನ್‌ ಬ್ಯಾಂಕ್‌ಗಳಲ್ಲಿ ಫಲಾನುಭವಿಗಳು ಖಾತೆ ಹೊಂದಿರುವುದು ಗೊತ್ತಾಗಿದೆ.

 

 

ಕಲ್ಬುರ್ಗಿ ಜಿಲ್ಲೆಯೊಂದರಲ್ಲೇ 2023ರ ಆಗಸ್ಟ್‌ನಿಂದ 2026ರ ಮೇ ತಿಂಗಳ ಅಂತ್ಯಕ್ಕೆ ಒಟ್ಟಾರೆ 3,186.06 ಕೋಟಿಯಷ್ಟು ಹಣ ಪಾವತಿಯಾಗಿರುವುದು ತಿಳಿದು ಬಂದಿದೆ.

 

ಗೃಹಲಕ್ಷ್ಮಿ; ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ, ಬ್ಯಾಂಕ್‌ನ ತಾಂತ್ರಿಕ ದೋಷವೇ ಕಾರಣ, ಸಿಎಜಿ ಆಕ್ಷೇಪಣೆ ತಳ್ಳಿ ಹಾಕಿದ ಸರ್ಕಾರ

 

ಒಂದೇ ತಿಂಗಳಲ್ಲಿ ಒಂದೇ ಫಲಾನುಭವಿಗೆ ಒಂದಕ್ಕಿಂತ ಹೆಚ್ಚು  ಖಾತೆಗೆ ಹಣ ಜಮೆಯಾಗಿಲ್ಲ ಎಂದು ಸರ್ಕಾರವು ಸಿಎಜಿಗೆ ಸ್ಪಷ್ಟೀಕರಣ ನೀಡಿತ್ತು.

 

ಮೃತರಿಗೂ ಗೃಹಲಕ್ಷ್ಮಿ ಹಣ ಪಾವತಿ; ಪತ್ರಿಕಾ ಹೇಳಿಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಸ್‌ಎಲ್‌ಬಿಸಿಯಲ್ಲಿನ ಅಂಕಿ ಅಂಶ, ಮೃತ ಫಲಾನುಭವಿಗಳ ಸಂಖ್ಯೆಯಲ್ಲಿ 52,207ರಷ್ಟು ವ್ಯತ್ಯಾಸ!

 

ಗೃಹ ಲಕ್ಷ್ಮಿ ಯೋಜನೆಗೆ ಆರ್ಹರಾಗಿದ್ದ ಒಟ್ಟು ಫಲಾನುಭವಿಗಳಲ್ಲಿ ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿದೆ ಎಂಬ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು ನೀಡಿರುವ ಅಂಕಿ ಅಂಶಗಳಿಗೂ ರಾಜ್ಯಮಟ್ಟದ ಬ್ಯಾಂಕ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ತುಸು ವ್ಯತ್ಯಾಸ ಕಂಡುಬಂದಿತ್ತು.

 

‘ಬೂಟ್‌ಲ್ಲಿ ಹೊಡೀಬೇಕು, ಆ…ಬೋ..ಮಗನಿಗೆ,….ಎ ಜಿ ಯವನಿಗೆ, ದಾವಣಗೆರೆ ಎಲೆಕ್ಷನ್‌ ಇರದಿದ್ರೆ 2 ತಿಂಗ್ಳ ಹಣವೂ ಸಿಗ್ತಿರಲಿಲ್ಲ,’; ಗೃಹಲಕ್ಷ್ಮಿ ಪ್ರಕರಣದಲ್ಲಿ ನಾಲಿಗೆ ಹರಿಬಿಟ್ಟ ನಿಗಮದ ಎಂ ಡಿ ಮಹೇಶ್‌ಬಾಬು

 

ಮೃತ ಫಲಾನುಭವಿಗಳಿಗೂ ಹಣ ಪಾವತಿಯಾಗಿರುವುದನ್ನು ಪತ್ತೆ ಹಚ್ಚಿದ್ದ ಸಿಎಜಿಯನ್ನೂ ಮಹಿಳಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಡಿದ್ದ ಮಾತುಗಳು ಚರ್ಚೆಗೆ ಗ್ರಾಸವಾಗಿತ್ತು.  ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಹೆಣ್ಣುಮಕ್ಕಳ ಮಾರಾಟ ಜಾಲದ ವಿರುದ್ಧ ಪ್ರಕರಣ ದಾಖಲು, ಆದರೂ ಹೆಣ್ಣು ಮಕ್ಕಳ ಮಾರಾಟ ಜಾಲವಿಲ್ಲವೆಂದ ಸಚಿವ; 3 ವರ್ಷವಾದರೂ ಪತ್ತೆಯಾಗಿಲ್ಲ 3,509 ಮಂದಿ ಮಹಿಳೆ, ಅಪ್ರಾಪ್ತರು

ಬೆಂಗಳೂರು; ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದರೂ...

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...
Please Scan to make Your Contribution

Topics

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

ಬೇನಾಮಿ ಆಸ್ತಿ ಹೊಂದಿದ ಆರೋಪ; ವಿಟಿಯು ಕುಲಪತಿ ವಿದ್ಯಾಶಂಕರ್ ಗೆ ಆದಾಯ ತೆರಿಗೆ ಇಲಾಖೆ ನೋಟೀಸ್‌

ಬೆಂಗಳೂರು;  ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕುರಿತು ಆದಾಯ...

‘ಅದಾನಿ ಕಂಪನಿಯಿಂದಲೇ ವಿವಾದ, 850 ಕೋಟಿ ರು ಪಾವತಿಸುವ ಲಕ್ಷಣಗಳೂ ಗೋಚರಿಸುತ್ತಿಲ್ಲ, ಅಧಿಕಾರಿಗಳ ಕೈ ಕಟ್ಟಿ ಹಾಕಿದೆ’; ಸರ್ಕಾರದ ಅಸಹಾಯಕತೆ ಬಹಿರಂಗ

ಬೆಂಗಳೂರು;  'ಕಲ್ಬುರ್ಗಿಯ ವಾಡಿಯಲ್ಲಿ  ಸುಣ್ಣದ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಗಣಿಗಾರಿಕೆ...

Related Articles

Popular Categories

error: Content is protected !!