Thursday | July 9, 2026 |

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ನೀಡುತ್ತಿರುವ ಮನವಿಗಳ ಪೈಕಿ 2026ರ ಏಪ್ರಿಲ್‌ ಅಂತ್ಯಕ್ಕೆ ಒಟ್ಟಾರೆ 37,782 ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ.

2026ರ ಜನವರಿಯಲ್ಲಿಯೇ ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ಸಲ್ಲಿಕೆಯಾಗಿರುವ ದೂರುಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದರು. ಆದರೆ 5 ತಿಂಗಳಾದರೂ ಸಹ ಸಾರ್ವಜನಿಕರ ದೂರುಗಳ ವಿಲೇವಾರಿಯಲ್ಲಿ ಪ್ರಗತಿ ಕಂಡುಬಂದಿಲ್ಲ.

ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು ಎಂದು ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಘೋಷಿಸಿದ್ದರ ಬೆನ್ನಲ್ಲೇ ಸಾರ್ವಜನಿಕರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳ ಸಂಖ್ಯೆಯು ಮುನ್ನೆಲೆಗೆ ಬಂದಿದೆ.

ವಿಶೇಷವೆಂದರೆ ಸಕಾಲದಲ್ಲಿಯೇ ಅತೀ ಹೆಚ್ಚು ಅರ್ಜಿಗಳು ಬಾಕಿ ಇವೆ. ಮತ್ತೊಂದು ವಿಶೇಷವೆಂದರೇ ಸಕಾಲದಲ್ಲಿ ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚು ಎಂದರೇ 9,465 ಅರ್ಜಿಗಳು ಇತ್ಯರ್ಥಕ್ಕೆ ಕಾದು ಕುಳಿತಿವೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2026ರ ಏಪ್ರಿಲ್‌ 6ರಂದು ನಡೆದಿದ್ದ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಸಭೆಯಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಚರ್ಚೆ ಆಗಿದೆ.

 

 

 

ಈ ಸಭೆಗೆ ವಿವಿಧ ಇಲಾಖೆಗಳು ಬಾಕಿ ಇರುವ ಅರ್ಜಿಗಳ ಸಂಖ್ಯೆಯನ್ನು ನೀಡಿದೆ. ಇದರ ಸಮಗ್ರ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳು ಮತ್ತು ದೂರುಗಳನ್ನು ನೇರವಾಗಿ ಸಲ್ಲಿಸಲು ಮತ್ತು ಪರಿಹರಿಸಿಕೊಳ್ಳಲು ರೂಪಿಸಿರುವ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯ ಡಿಜಿಟಲ್ ವೇದಿಕೆಯಾಗಿರುವ ಐಪಿಜಿಆರ್‍‌ಎಸ್‌ನಲ್ಲಿ ಒಟ್ಟು 1,462 ಅರ್ಜಿಗಳು ಬಾಕಿ ಇವೆ.

 

 

ಇದರಲ್ಲಿ ಕಂದಾಯ ಇಲಾಖೆಯಲ್ಲಿ 359, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 117, ಒಳಾಡಳಿತದಲ್ಲಿ 114, ವಸತಿ ಇಲಾಖೆಯಲ್ಲಿ 104, ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯಲ್ಲಿ 90ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದವು.

 

 

 

ಸಿಪಿ ಗ್ರಾಮ್ಸ್‌ನಲ್ಲಿ 6,369 ಅರ್ಜಿಗಳು ಬಾಕಿ ಇವೆ.

 

 

ಇಲ್ಲಿಯೂ ಸಹ ಒಳಾಡಳಿತ ಇಲಾಖೆಗೆ ಸಂಬಂಧಿಸಿದಂತೆ 1,963, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಸಂಬಂಧಿಸಿದ 514, ಕಂದಾಯ 570, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ 415, ಆರ್ಥಿಕ ಇಲಾಖೆ 519 ಅರ್ಜಿಗಳು ವಿಲೇವಾರಿ ಆಗಿಲ್ಲ. ಮುಖ್ಯಮಂತ್ರಿ ಜನಸ್ಪಂದನದಲ್ಲಿ ಸಲ್ಲಿಕೆಯಾಗಿದ್ದ ಒಟ್ಟು ಅರ್ಜಿಗಳ ಪೈಕಿ 39 ಅರ್ಜಿಗಳು ಇತ್ಯರ್ಥವಾಗಿಲ್ಲ. ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಲ್ಲಿಕೆಯಾಗಿದ್ದ ಒಟ್ಟು ಅರ್ಜಿಗಳ ಪೈಕಿ 1,246 ಅರ್ಜಿಗಳು ಬಾಕಿ ಇವೆ.

ಸಕಾಲದಲ್ಲೇ 27,951 ಅರ್ಜಿಗಳು ಬಾಕಿ

ಇಂದು, ನಾಳೆ, ಇನ್ನಿಲ್ಲ ಹೇಳಿದ ದಿನ ತಪ್ಪೋಲ್ಲ ಎಂಬ ಘೋಷವಾಕ್ಯ ಹೊಂದಿರುವ ಸಕಾಲ ಸೇವೆಗಳ ಮೂಲಕ 1,446 ಸೇವೆಗಳನ್ನು ಪೂರೈಸಲಾಗುತ್ತಿದೆ. ಆದರೆ ಸಕಾಲದಲ್ಲಿಯೇ ಅತೀ ಹೆಚ್ಚು ಎಂದರೇ 27,951 ಅರ್ಜಿಗಳು ವಿಲೇವಾರಿ ಆಗದೇ ಬಾಕಿ ಇವೆ. ಬಾಕಿ ಉಳಿದಿರುವ 27,951 ಅರ್ಜಿಗಳ ಪೈಕಿ ಕಂದಾಯ ಇಲಾಖೆಯಲ್ಲಿಯೇ ಅತೀ ಹೆಚ್ಚು ಎಂದರೇ 9,465 ಅರ್ಜಿಗಳು ಬಾಕಿ ಇವೆ.

 

 

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 6,988, ಕಂದಾಯ (ವಿಪತ್ತು ನಿರ್ವಹಣೆ) 2,597,

 

 

ಒಳಾಡಳಿತ 1,622, ಇಂಧನದಲ್ಲಿ 1,338 ಮತ್ತು ಕಾರ್ಮಿಕ ಇಲಾಖೆಯಲ್ಲಿ 989, ಆರೋಗ್ಯ ಕುಟುಂಬ ಕಲ್ಯಾಣದಲ್ಲಿ 699, ಸಾರಿಗೆ 657, ನಗರಾಭಿವೃದ್ಧಿ 649 ಅರ್ಜಿಗಳು ಬಾಕಿ ಇರುವುದು ಗೊತ್ತಾಗಿದೆ.

 

 

ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ, ವಿಲೇವಾರಿಗೆ ಬಾಕಿ ಇರುವ ಕಡತಗಳ ಕುರಿತೂ ಚರ್ಚೆಯಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಪ್ರವಾಸೋದ್ಯಮ, ಸಮಾಜ ಕಲ್ಯಾಣ, ವಸತಿ ಮತ್ತು ಅರರ್ಣಯ ಇಲಾಖೆಗಳಲ್ಲಿ ಕಡಿಮೆ ಪ್ರಗತಿ ಸಾಧಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

2,636 ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ

ಸಿಸಿಎಂಎಸ್‌ನಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣಗಳು, ತೀರ್ಪುಗಳ ಅನುಷ್ಟಾನದ ಅಂಕಿ ಅಂಶಗಳ ಕುರಿತು ಚರ್ಚೆಯಾಗಿದೆ.

 

 

 

ಸಿಸಿಎಂಎಸ್‌ ಪ್ರಕಾರ ಒಟ್ಟು 2,636 ನ್ಯಾಯಾಂಗ ನಿಂದನೆ ಪ್ರಕರಣಗಳು ಬಾಕಿ ಇವೆ. ಅಲ್ಲದೇ ಅಂತಿಮ ಆದೇಶವಾಗಿರುವ ಒಟ್ಟು 25,942 ಪ್ರಕರಣಗಳಲ್ಲಿ ಅನುಪಾಲನಾ ವರದಿ ಸಲ್ಲಿಸಲು, ಮೇಲ್ಮನವಿ ಸಲ್ಲಿಸಲು ಬಾಕಿ ಇವೆ. 273 ಪ್ರಕರಣಗಳಲ್ಲಿ ಯಾವುದೇ ಕ್ರಮವಹಿಸಿಲ್ಲ. ಅಂತಿಮ ಪ್ರಮಾಣ ಪತ್ರ ಸಲ್ಲಿಸಲು 997 ಪ್ರಕರಣಗಳು ಬಾಕಿ ಇವೆ. ಸಚಿವಾಲಯದ ವ್ಯಾಪ್ತಿಯಲ್ಲಿಯೇ 462 ಪ್ರಕರಣಗಳು ಬಾಕಿ ಇವೆ.

 

 

 

ಕರ್ನಾಟಕ ಆಡಳಿತ ಸುಧಾರಣೆ ಆಯೋಗ-2 ಒಟ್ಟಾರೆ 6,031 ಶಿಫಾರಸ್ಸುಗಳನ್ನು ಮಾಡಿತ್ತು. ಈ ಪೈಕಿ 2,014 ಶಿಫಾರಸ್ಸುಗಳಷ್ಟೇ ಅನುಷ್ಠಾನಗೊಂಡಿವೆ. 186 ಶಿಫಾರಸ್ಸುಗಳು ಭಾಗಶಃ ಅನುಷ್ಟಾನಗೊಂಡಿವೆ. 839 ಶಿಫಾರಸ್ಸುಗಳು ಅನುಷ್ಠಾನದ ಹಂತದಲ್ಲಿವೆ. 2,628 ಶಿಫಾರಸ್ಸುಗಳು ಪರಿಶೀಲನೆ ಹಂತದಲ್ಲಿವೆ. ಒಟ್ಟಾರೆ 364 ಶಿಫಾರಸ್ಸುಗಳನ್ನು ಮಾತ್ರ ಒಪ್ಪಿಕೊಂಡಿವೆ.

2026ರ ಜನವರಿ 12ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ 6,474 ಸಾರ್ವಜನಿಕರ ಮನವಿಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದವು. ಇತ್ಯರ್ಥವಾಗದೇ ಬಾಕಿ ಇರುವ 6,474 ಮನವಿಗಳ ಪೈಕಿ ಗೃಹ ಇಲಾಖೆಯಲ್ಲಿಯೇ ಅತೀ ಹೆಚ್ಚು ಎಂದರೇ 1,729 ಮನವಿಗಳು ಇತ್ಯರ್ಥಕ್ಕಾಗಿ ಬಾಕಿ ಇದ್ದವು. ಅಲ್ಲದೇ ಉಳಿದ ಇಲಾಖೆಗಳಿಗಿಂತಲೂ ಗೃಹ ಇಲಾಖೆಯಲ್ಲಿಯೇ ಅತೀ ಹೆಚ್ಚು ಬಾಕಿ ಇತ್ತು.

 

 

 

ಇತ್ಯರ್ಥವಾಗದ ಮನವಿಗಳ ಸಂಖ್ಯೆ (ಜನವರಿ ಅಂತ್ಯ)

ಕಂದಾಯ ಇಲಾಖೆಯಲ್ಲಿ 654, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 592, ನಗರಾಭಿವೃದ್ಧಿಯಲ್ಲಿ 461, ಆರೋಗ್ಯ ಕುಟುಂಬ ಕಲ್ಯಾಣದಲ್ಲಿ 411, ಸಾರಿಗೆಯಲ್ಲಿ 252, ಕೃಷಿಯಲ್ಲಿ 226, ಶಾಲಾ ಶಿಕ್ಷಣ, ಸಾಕ್ಷರತೆಯಲ್ಲಿ 212, ಉನ್ನತ ಶಿಕ್ಷಣದಲ್ಲಿ 194, ಕಾರ್ಮಿಕ ಇಲಾಖೆಯಲ್ಲಿ 159, ಕೈಗಾರಿಕೆ ವಾಣಿಜ್ಯದಲ್ಲಿ 143, ಲೋಕೋಪಯೋಗಿಯಲ್ಲಿ 140, ಸಹಕಾರದಲ್ಲಿ 121, ಇಂಧನದಲ್ಲಿ 120, ಆರ್ಥಿಕ ಇಲಾಖೆಯಲ್ಲಿ 82 ಮನವಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿದ್ದವು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯಲ್ಲಿ 79, ವಸತಿಯಲ್ಲಿ 75, ಅರಣ್ಯ, ಜೀವಿ ಪರಿಸರದಲ್ಲಿ 55, ಸಮಾಜ ಕಲ್ಯಾಣದಲ್ಲಿ 47, ವೈದ್ಯಕೀಯ ಶಿಕ್ಷಣದಲ್ಲಿ 31, ಕಾನೂನು ಇಲಾಖೆಯಲ್ಲಿ 29, ಕೌಶಲ್ಯ, ಜೀವನೋಪಾಯ ಇಲಾಖೆಯಲ್ಲಿ 28, ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ 24, ಪಶುಸಂಗೋಪನೆ ಇಲಾಖೆಯಲ್ಲಿ 22, ಡಿಪಿಎಆರ್‍‌ನಲ್ಲಿ 14, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 11, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ 11 ಮನವಿಗಳು ಇತ್ಯರ್ಥಕ್ಕೆ ಕಾದು ಕುಳಿತಿದ್ದವು.

 

 

ತೋಟಗಾರಿಕೆಯಲ್ಲಿ 10, ಅಲ್ಪಸಂಖ್ಯಾತರ ಇಲಾಖೆಯಲ್ಲಿ 9, ಕನ್ನಡ ಸಂಸ್ಕೃತಿಯಲ್ಲಿ 8, ಡಿಪಿಎಆರ್ ( ಇ ಆಡಳಿತ) ನಲ್ಲಿ 8, ಡಿಪಿಎಆರ್‍‌ ಆಡಳಿತ ಸುಧಾರಣೆಯಲ್ಲಿ 7, ಯುವ ಸಬಲೀಕರಣ ಕ್ರೀಡಾ ಇಲಾಖೆಯಲ್ಲಿ 6, ಸಾರ್ವಜನಿಕ ಉದ್ದಿಮೆಗಳ ಇಲಾಖೆಯಲ್ಲಿ 5, ಪ್ರವಾಸೋದ್ಯಮದಲ್ಲಿ 4, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ 4, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 3, ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 1, ಸಣ್ಣ ನೀರಾವರಿಯಲ್ಲಿ 3 ಮನವಿಗಳು ಇತ್ಯರ್ಥವಾಗಿರಲಿಲ್ಲ.

ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಸಾರಿಗೆ ಸಂಪರ್ಕ, ವಿದ್ಯುತ್‌ ದೀಪ, ಕಸ ವಿಲೇವಾರಿ, ಒಳ ಚರಂಡಿ ನಿರ್ವಹಣೆ ಹಾಗೂ ಇತರೆ ಸಂಬಂಧಿತ ಸಮಸ್ಯೆಗಳ ಕುರಿತು ದೂರು ನೀಡಬಹುದು. ಕರ್ನಾಟಕ ಸರ್ಕಾರದ 3,000 ಕ್ಕೂ ಹೆಚ್ಚಿನ ಸಂಭವನೀಯ ಕುಂದುಕೊರತೆಗಳನ್ನು ಮತ್ತು ಕ್ಷೇತ್ರದ ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದೆ. 45 ಸರ್ಕಾರಿ ಇಲಾಖೆಗಳ ಸುಮಾರು 1300 ಕ್ಕೂ ಹೆಚ್ಚು ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಐಪಿಜಿಎಆರ್‍‌ಸ್‌ ನಲ್ಲಿ ಅಳವಡಿಸಲಾಗಿದೆ. ಇಲ್ಲಿಯವರೆಗೆ 45 ಇಲಾಖೆಗಳ 270 ಉಪ ಇಲಾಖೆಗಳನ್ನು iಐಪಿಜಿಎಆರ್‍‌ಸ್‌ನಲ್ಲಿ ಆನ್‌ಬೋರ್ಡ್ ಮಾಡಿದೆ.

ನಾಗರಿಕರು ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಉಪಯೋಗಿಸಿ ಒಮ್ಮೆ ಆತನ/ಆಕೆಯ ಮೊಬೈಲ್ ಗೆ ಒಂದು ಬಾರಿ ಬರುವ ಓ.ಟಿ.ಪಿ ಉಪಯೋಗಿಸಿ ನೋಂದಾಯಿಸಿಕೊಳ್ಳಬಹುದು. ನಂತರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು/ಕುಂದುಕೊರತೆಗಳನ್ನು ದಾಖಲಿಸಬಹುದು.

ದೂರು/ಕುಂದುಕೊರತೆಗಳ ನಿವಾರಣೆ ನಂತರ ನಾಗರಿಕರಿಗೆ ಕರೆ ಮಾಡುವ ಮೂಲಕ ಪ್ರತಿಕ್ರಿಯೆ ಪಡೆದ ನಂತರವೇ ದೂರನ್ನು ಅಂತಿಮವಾಗಿ ಮುಕ್ತಾಯಗೊಳಿಸಲಾಗುವುದು. ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನಾಗರಿಕರು ಸಹಾಯವಾಣಿ ಸಂಖ್ಯೆ 1902 ಅನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿದೆ.

Hot this week

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...
Please Scan to make Your Contribution

Topics

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

Related Articles

Popular Categories

error: Content is protected !!