Tuesday | June 9, 2026 |

ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗ ವಿರೋಧ; ಪದ್ದತಿ ಸಂಪೂರ್ಣವಾಗಿ ತೆಗೆದು ಹಾಕದೇ ವರದಿಯನ್ನೇ ಮೂಲೆಗುಂಪು ಮಾಡಿತೇ ಸರ್ಕಾರ?

ಬೆಂಗಳೂರು; ‘ರಾಜ್ಯದಲ್ಲಿ   ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿಯಿಂದಾಗಿ  ವೃತ್ತಿಪರತೆಯ ಕೊರತೆ ಕಾಣುತ್ತಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆ ಮತ್ತು ಅತಿಥಿ ಶಿಕ್ಷಕರನ್ನು ನೇಮಿಸುವ ತಾತ್ಕಾಲಿಕ ನೀತಿಯು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಅವಶ್ಯವಿರುವ ಶಿಕ್ಷಕರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವಾರ್ಷಿಕ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ನಡೆಸಬೇಕು,’ ಎಂದು  ರಾಜ್ಯ ಶಿಕ್ಷಣ ನೀತಿ ಆಯೋಗವು ಮಾಡಿದ್ದ ಶಿಫಾರಸ್ಸನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಬದಿಗೊತ್ತಿದೆ.!

ಸುಖ್‌ ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಈಗಾಗಲೇ ತನ್ನ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಎಲ್ಲಾ ಸಂಪುಟಗಳನ್ನೂ ಸಚಿವ ಸಂಪುಟದ ಎಲ್ಲಾ ಸದಸ್ಯರಿಗೂ ಕಳಿಸಲಾಗಿದೆ. ಈ ವರದಿ ಮತ್ತು ವರದಿಯಲ್ಲಿನ ಶಿಫಾರಸ್ಸುಗಳ ಕುರಿತು ಸಚಿವ ಸಂಪುಟದ ಸದಸ್ಯರ್‍ಯಾರು ಇನ್ನೂ ವಿಮರ್ಶೆ ಅಥವಾ ಅಭಿಪ್ರಾಯಗಳನ್ನೇ ನೀಡಿಲ್ಲ. ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸಹ ಈ ವರದಿಯತ್ತ ಕಣ್ಣಾಡಿಸಿಲ್ಲ!

ಈ ಮಧ್ಯೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪ್ರೌಢಶಾಲೆಗಳಿಗೆ 9,730 ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಲು ಮುಂದಾಗಿರುವುದು, ಆಯೋಗದ ವರದಿ ಶಿಫಾರಸ್ಸುಗಳನ್ನು ಕಸದ ಬುಟ್ಟಿಗೆ ಎಸೆದಂತಾಗಿದೆ.

ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸಲ್ಲಿಸಿರುವ ವರದಿಗಳ ಎಲ್ಲಾ ಸಂಪುಟಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ವೆಚ್ಚವನ್ನು ಸರಿದೂಗಿಸುವ ಅಥವಾ ಕಡಿಮೆ ಮಾಡುವ ಹೆಸರಿನಲ್ಲಿ ಹಲವಾರು ಅನಪೇಕ್ಷಿತ ಕ್ರಮಗಳನ್ನು ಪರಿಚಯಿಸಲಾಗಿದೆ. ಉದಾಹರಣೆಗೆ ಅಲ್ಪಾವಧಿ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ನೇಮಕವೂ ಒಂದು.  ಈಗಾಗಲೇ ಅಸ್ತಿತ್ವದಲ್ಲಿರುವ ಶಿಕ್ಷಕ ವೃಂದಕ್ಕೆ ಇನ್ನಷ್ಟು ಸೇರ್ಪಡೆಗೊಳಿಸಲು ಮತ್ತು ತಕ್ಷಣದ ಅವಶ್ಯಕತೆ ಪೂರೈಸುವುದಕ್ಕೆ ಮಾಡಿಕೊಂಡ ವ್ಯವಸ್ಥೆಯು ನಂತರದ ದಿನಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳಿಗೂ ಪರ್ಯಾಯವಾಗಲಾರಂಭಿಸಿತು. ಇದರಿಂದಾಗಿ ಶಿಕ್ಷಕ ಸಮೂಹದಲ್ಲಿ ವೃತ್ತಿಪರತೆಯ ಕೊರತೆ ತಲೆದೋರತೊಡಗಿತು ಎಂದು ವಿಶ್ಲೇಷಿಸಿರುವುದು  ಆಯೋಗವು ನೀಡಿರುವ ವರದಿಯಿಂದ ಗೊತ್ತಾಗಿದೆ.

ಬಜೆಟ್‌ನಲ್ಲಿ ಶಿಕ್ಷಣಕ್ಕೆ ಮೀಸಲಿರಿಸಿದ ಅನುದಾನವನ್ನು ದುರ್ಬಲಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಪದ್ಧತಿ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂದರೇ ರಾಜ್ಯವು ಇದರಿಂದ ಹೊರಬರುವುದಕ್ಕೂ ಇಂದಿಗೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವುದು  ಆಯೋಗವು ನೀಡಿರುವ ವರದಿಯಿಂದ ಗೊತ್ತಾಗಿದೆ.

ಅತಿಥಿ ಶಿಕ್ಷಕರ ನೇಮಕ- ಜಟಿಲಗೊಳಿಸಿದ ತಾತ್ಕಾಲಿಕ ನೀತಿ

ಖಾಲಿ ಇರುವ ಶಿಕ್ಷಕರ ಹುದ್ದೆಗಳ ಸಂಖ್ಯೆ ಮತ್ತು ಅತಿಥಿ ಶಿಕ್ಷಕರನ್ನು ನೇಮಿಸುವ ತಾತ್ಕಾಲಿಕ ನೀತಿಯು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿವೆ. ಆದ್ದರಿಂದ ಮುಂಬರುವ ಕಲಿಕಾ ಬಿಕ್ಕಟ್ಟಿಗೆ ಸ್ಪಂದಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಮೂಲಸೌಕರ್ಯಗಳಲ್ಲಿ ಸಾಕಷ್ಟು ಅಂತರವಿದೆ. ರಾಜ್ಯದ ಬೇರೆ ಬೇರೆ ಪ್ರದೇಶಳಲ್ಲೂ ಈ ಅಸಮಾನತೆ ಇದೆ. ಕರ್ನಾಟಕದಲ್ಲಿನ ಶಿಕ್ಷಕರು ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಗ್ರಾಮೀಣ ಶಿಕ್ಷಕರು ಬೇರೆ ಬೇರೆ ತರಗತಿಗಳಲ್ಲಿ ಬೋಧನೆ, ಇತರ ಭಾಷಿಕ ವಲಸಿಗ ಜನಸಂಖ್ಯೆ, ಬಹುಭಾಷಿಕ ಪ್ರದೇಶದಲ್ಲಿ ಸ್ಥಳೀಯ ಭಾಷಣೆಯ ನೈಪುಣ್ಯತೆಗೆ ಆದ್ಯತೆ ನೀಡಿಲ್ಲ ಎಂದು ಆಯೋಗವು ಗಮನಸೆಳೆದಿದೆ.

ಅತಿಥಿ ಶಿಕ್ಷಕರ ನೇಮಕ ಪದ್ಧತಿ ಸಂಪೂರ್ಣವಾಗಿ ತೆಗೆದು ಹಾಕಿ

ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪದ್ಧತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಅವಶ್ಯವಿರುವ ಶಿಕ್ಷಕರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವಾರ್ಷಿಕ ಆಧಾರದ ಮೇಲೆ ಶಿಕ್ಷಕರ ನೇಮಕಾತಿ ನಡೆಸಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

 

ಅಲ್ಲದೇ ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣಕ್ಕೆ ಪುಷ್ಠಿ ನೀಡುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಹಂತಹಮತವಾಗಿ ಖಾಯಂ ಶಿಕ್ಷಕರ ನೇಕಾತಿ ನಡೆಸಲು ರಾಜ್ಯವು ಒಂದು  ಮಾರ್ಗಸೂಚಿ ಸಿದ್ಧಪಡಿಸಬೇಕು.ಪ್ರಾಥಮಿಕ ಶಾಲಾ ಶಿಕ್ಷಕರಿಗೆ 50,000 ರು., ಪ್ರೌಢಶಾಲಾ ಶಿಕ್ಷಕರಿಗೆ 60,000 ರು ನಂತೆ ಒಟ್ಟಾರೆ ಶಿಕ್ಷಕರ ವೇತನಕ್ಕಾಗಿ ವರ್ಷಕ್ಕೆ ಒಟ್ಟು ಹೂಡಿಕೆಯು ಸರಿಸುಮಾರು 317.71 ಕೋಟಿ ರು ಎಂದು ಆಯೋಗವು  ಅಂದಾಜಿಸಿದೆ.

ದೀರ್ಘಾವಧಿಯಲ್ಲಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಈ ಹೂಡಿಕೆ ಅಗತ್ಯವೆಂದು ಆಯೋಗವು ಭಾವಿಸಿದೆ. ಆದ್ದರಿಂದ ಎಲ್ಲಾ ಶಿಕ್ಷಕರ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಬೇಕು ಎಂದು ಆಯೋಗವು ಬಲವಾಗಿ ಶಿಫಾರಸ್ಸು ಮಾಡಿದೆ.

ರಾಜ್ಯ ಶಿಕ್ಷಣ ನೀತಿ ಆಯೋಗವು ನೀಡಿರುವ ಈ ವರದಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಚರ್ಚೆ ನಡೆಸಿಲ್ಲ. ಬದಲಿಗೆ 2026-27ನೇ ಸಾಲಿನ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆ ಆಗಲಿದೆ. ಶಿಕ್ಷಕರ ಕೊರತೆಯೂ ಇದೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದೆ. ಅಲ್ಲದೇ ಕಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಅಥವಾ 2026-27ನೇ ಸಾಲಿನ ಶೈಕ್ಷಣಿಕ ವರ್ಷವು ಮುಗಿಯುವವರೆಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು ಎಂದೂ ನಿರ್ದೇಶಿಸಿದೆ.

ಶಿಕ್ಷಕರ ಅರ್ಹತೆ ಮತ್ತು ಬೋಧನಾ ವಿಷಯದ ನಡುವೆ ಹೊಂದಾಣಿಕೆಯೇ ಇಲ್ಲ

ಉನ್ನತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸಾಕಷ್ಟು ಅರ್ಹತೆಯುಳ್ಳ ಮತ್ತು ನಿರ್ದಿಷ್ಟ ಬೋಧನಾ ವಿಷಯಗಳಲ್ಲಿ ವೃತ್ತಿಪರ ತರಬೇತಿ ಪಡೆದ ಶಿಕ್ಷಕರು ಬೇಕಾಗುತ್ತಾರೆ. ಬಹಳಷ್ಟು ಶಾಲೆಗಳಲ್ಲಿ ಶಿಕ್ಷಕರ ಅರ್ಹತೆ ಮತ್ತು ಬೋಧನಾ ವಿಷಯದ ನಡುವೆ ಹೊಂದಾಣಿಕೆಯೇ ಇಲ್ಲ. ಇದು ಗಂಭೀರ ಕಳವಳಕಾರಿ ವಿಷಯವಾಗಿದೆ. ಬೋಧನಾ ವಿಷಯದಲ್ಲಿ ಶಿಕ್ಷಕರ ಪರಿಣಿತಿಯ ಕೊರತೆಯು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುವುದಲ್ಲದೇ ಅವರು ಆ ವಿಷಯವನ್ನು ತಪ್ಪಾಗಿ ಇಲ್ಲವೇ ವ್ಯತಿರಿಕ್ತವಾಗಿ ಅರ್ಥೈಯಿಸಿಕೊಳ್ಳುವಂತೆ ಮಾಡುವ ಅಪಾಯವಿದೆ ಎಂದು ಆಯೋಗವು ಎಚ್ಚರಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಶಿಕ್ಷಕರ ಕಾರ್ಯಕ್ಷಮತೆಯು ನೇರವಾಗಿ ಅವರ ನಿರಂತರ ವೃತ್ತಿಪರ ಅಭಿವೃದ್ಧಿಯನ್ನು ಅವಲಂಬಿಸಿರುತ್ತದೆ. ಶಿಕ್ಷಣ ಕ್ಷೇತ್ರವು ಅತೀ ಹೆಚ್ಚು ಗಮನ ಬಯಸುವ ಕ್ಷೇತ್ರವಾಗಿದೆ. ವೇಗವಾಗಿ ಬದಲಾಗುತ್ತಿರುವ ಜ್ಞಾನ ಮತ್ತು ಸಂವಹನ ಕೌಶಲ್ಯಗಳ ಜಗತ್ತಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಜೀವಮಾನವಿಡಿ ಕಲಿಕೆಗೆ ತೆರೆದುಕೊಂಡಿರಬೇಕು. ಪ್ರಸ್ತುತ ಸಮಗ್ರ ಶಿಕ್ಷಣ ಯೋಜನೆಯು ಶಿಕ್ಷಕರಿಗೆ ಅಲ್ಪಾವಧಿ ತರಬೇತಿಯನ್ನು ನೀಡುತ್ತದೆ. ವೃತ್ತಿಪರ ಅಭಿವೃದ್ದಿಗಾಗಿ ಶಿಕ್ಷಕರನ್ನು ದೀರ್ಘಕಾಲಿಕ ಕಲಿಕೆಯಲ್ಲಿ ತೊಡಗಿಸಬೇಕೆಂದಾದರೇ ಇಂತಹ ಅಲ್ಪಾವಧಿಯ ಯೋಜನೆಗಳನ್ನು ಮೀರಿ ನೋಡುವುದು ಅವಶ್ಯಕ. ಅಲ್ಲದೇ ಮಾಧ್ಯಮಿಕ, ಉನ್ನತ ಮಾಧ್ಯಮಿಕ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಇರುವ ಅವಕಾಶಗಳ ಬಹಳ ಸೀಮಿತ ಅಥವಾ ಬಹುತೇಕ ಶೂನ್ಯ ಎಂದು ಆಯೋಗವು ವಿವರಿಸಿದೆ.

 

ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ಹೆಚ್ಚು

ಏಕೋಪಾಧ್ಯಾಯ ಶಾಲೆಗಳು ಮತ್ತು ಹೆಚ್ಚಿನ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಹೊಂದಿರುವ ಶಾಲೆಗಳು ಬೋಧನೆ-ಕಲಿಕೆ ಪ್ರಕ್ರಿಯೆ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡುತ್ತದೆ. ಅಲ್ಲದೇ ನಿರ್ದಿಷ್ಟ ಸವಾಲವನ್ನು ಒಡ್ಡುತ್ತವೆ. ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಅಂತಹ ಶಾಲೆಗಳ ಶೇಕಡವಾರು ಪ್ರಮಾಣ ಹೆಚಚಾಗಿದೆ. ಈ ಜಿಲ್ಲೆಗಳತ್ತ ವಿಶೇಷವಾಗಿ ಗಮನ ಹರಿಸುವ ಅಗತ್ಯವಿದೆ. ಈ ಪರಿಸ್ಥಿತಿ ಶಾಲಾ ಶಿಕ್ಷಣ ಇಲಾಖೆ ನಡೆಸುತ್ತಿರುವ ಶಾಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇತರೆ ಇಲಾಖೆಗಳು ನಡೆಸುತ್ತಿರುವ , ನಿರ್ವಹಿಸುತ್ತಿರುವ ದುರ್ಗಮ ಮತ್ತು ಬುಡಕಟ್ಟು ಪ್ರದೇಶಗಳ ಶಾಲೆಗಳಲ್ಲೂ ಇದೇ ಬಗೆಯ ಪರಿಸ್ಥಿತಿ ಮತ್ತು ಇದೇ ಸವಾಲಗಳನ್ನು ಎದುರಿಸುತ್ತಿವೆ ಎಂದು ವಿವರಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಕುಗ್ಗುತ್ತಿರುವ ಮಕ್ಕಳ ಸಂಖ್ಯೆ-  ಶಾಲೆ ಮುಚ್ಚುವುದರಿಂದ ಪ್ರಯೋಜವಾಗದು

ಜನಸಂಖ್ಯೆಯಲ್ಲಿನ ವ್ಯತ್ಯಾಸ ಮತ್ತು ಶಾಲಾ ವ್ಯವಸ್ಥೆಯೊಳಗೆ ಪ್ರವೇಶಿಸುವ ಮಕ್ಕಳ ಸಂಖ್ಯೆ ಕುಗ್ಗುತ್ತಿರುವ ಕಾರಣದಿಂದ ಸಣ್ಣ ಶಾಲೆಗಳು ಮತ್ತು ಬಹು ತರಗತಿಯ ಬೋಧನೆ ಅನಿವಾರ್ಯವಾಗಬಹುದು. ಆದರೆ ಈ ಸಮಸ್ಯೆಗೂ ಕೂಡ ಒಂದೇ ಬಗೆಯ ಪರಿಹಾರ ನೀಡಲು ಸಾಧ್ಯವಿಲ್ಲ. ಶಾಲೆಗಳನ್ನು ಮುಚ್ಚುವುದು ಅಥವಾ ಶಾಲೆಗಳನ್ನು ಪರ್ಯಾಯ ವ್ಯವಸ್ಥೆ ಮಾಡದೇ ವಿಲೀನಗೊಳಿಸುವುದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದು ಆಯೋಗವು ವರದಿಯಲ್ಲಿ ತಿಳಿಸಿದೆ.

 

 

ಶಾಲೆಗಳಿಗೆ ತಕ್ಕಂತೆ ಮತ್ತು ಸ್ಥಳಗಳಿಗೆ ತಕ್ಕಂತೆ ಪರಿಹಾರಗಳನ್ನು ವಿನ್ಯಾಸಗೊಳಿಸಬೇಕು. ಭೌಗೋಳಿಕ ಪರಿಸ್ಥಿತಿ ಅನುಕೂಲವಾಗಿದ್ದರೇ, ಮಕ್ಕಳನ್ನು ಅತಿ ಸಣ್ಣ ಶಾಲೆಗಳಿಂದ ಸಮೀಪದ ದೊಡ್ಡ ಶಾಲೆಗಳಿಗೆ ವರ್ಗಾಯಿಸಲು ಅವಕಾಶವಾಗಬಹುದು. ಇದು ಸಾಧ್ಯವಿರದ ಕಡೆಗಳಲ್ಲಿ ಕಲಿಕಾ ಅವಧಿಯ ಅನಿವಾರ್ಯ ನಷ್ಟವನ್ನು ಸರಿದೂಗಿಸುವ ಸಲುವಾಗಿ ಶಾಲೆಯೊಳಗೆ ಪೂರಕ ಕಲಿಕಾ ಸಂಪನ್ಮೂಲಗಳನ್ನು ಬಲಪಡಿಸುವ ಮೂಲಕ ಸಣಣ ಶಾಲೆಗಳನ್ನು ಉಳಿಸಿಕೊಳ್ಳುವ ಅಗತ್ಯ ಬೀಳಬಹುದು. ಹಲವು ದೇಶಗಳಲ್ಲಿ ರೂಢಿಗಳಲ್ಲಿರುವಂತೆ ಪೋಷಕ ಶಾಲೆಗಳ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವುದು ಯೋಗ್ಯ. ಮತ್ತು  ಶೈಕ್ಷಣಿಕ ಒತ್ತಡಗಳಿಂದಾಗಿ ಶಾಲೆ ತೊರೆಯುವ ಮಕ್ಕಳನ್ನು ವಾಸ್ತವ ಪ್ರಜ್ಞೆಯಿಂದ ನಿಭಾಯಿಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಸಲಹೆ ನೀಡಿರುವುದು ಗೊತ್ತಾಗಿದೆ.

ಆರ್‍‌ಟಿಇ ಕಾಯ್ದೆಯಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಅಂದರೆ ಎಂಟನೇ ತರಗತಿಯವರೆಗೆ ಮಗುವನ್ನು ಹೊರಹಾಕಬಾರದು. ಅಥವಾ ಕೂಡಿ ಹಾಕಬಾರದು. ಕಾಯ್ದೆಯ ಈ ನಿರ್ದೇಶನವನ್ನು ಎಂಟನೇ ತರಗತಿವರೆಗೆ ಪರೀಕ್ಷೆಗಳಿರುವುದಿಲ್ಲ ಎಂದು ವ್ಯಾಖ್ಯಾನಿಸಲಾಗಿದೆ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ಕೊನೆಯಲ್ಲಿ ಮಕ್ಕಳ ಕಲಿಕೆ ಮಟ್ಟವನ್ನು ನಿರ್ಣಯಿಸಲು ಕರ್ನಾಟಕವು ಕೆಲವು ಸುಧಾರಣೆಗಳನ್ನು ತಂದಿದೆ.

 

 

ಡಿಜಿಟಲ್‌ ಸಂಪನ್ಮೂಲಗಳ ಲಭ್ಯತೆ, ಬಳಕೆಯು ತಾತ್ಕಾಲಿಕ,  ಅಸಮಾನ

ಶಾಲೆಗಳಲ್ಲಿ ಡಿಜಿಟಲ್‌ ಸಂಪನ್ಮೂಲಗಳ ಲಭ್ಯತೆ ಮತ್ತು ಬಳಕೆಯು ತಾತ್ಕಾಲಿಕ ಮತ್ತು ಅಸಮಾನವಾಗಿದೆ. ಶಾಲಾ ವ್ಯವಸ್ಥೆಯೊಳಗೆ ಡಿಜಿಟಲ್ ಅಂತರವನ್ನು ವಿಸ್ತರಿಸುತ್ತಿದೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತಿದೆ. ಹಾರ್ಡ್‌ವೇರ್‍‌ ಮತ್ತು ಸಾಫ್ಟ್‌ವೇರ್ ಹಾಗೂ ಮುಕ್ತ ಮೂಲ ಕಲಿಕಾ ಸಾಮಗ್ರಿಗಳ ವಿಷಯದಲ್ಲಿ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನದ ಪೂರೈಕೆ ಮತ್ತು ಬಳಕೆ ಕುರಿತು ಎಚ್ಚರಿಕೆಯಿಂದ ರಚಿಸಲಾದ ನೀತಿ ಮಾರ್ಗಸೂಚಿಗಳನ್ನು ರಾಜ್ಯವು ತುರ್ತಾಗಿ ಅಳವಡಿಸಿಕೊಳ್ಳಬೇಕಿದೆ.

ಲಾಕ್‌ -ಇನ್ ಮತ್ತು ದತ್ತಾಂಶ ಕಳ್ಳತನ

ಶಾಲೆಗಳಲ್ಲಿ ಮಾರಾಟಗಾರರ ಲಾಕ್‌ -ಇನ್ ಮತ್ತು ದತ್ತಾಂಶ ಕಳ್ಳತನಕ್ಕೆ ಕಾರಣವಾಗುವುದರ ಜತೆಗೆ ಮಾರಾಟಗಾರರಿಗೆ ದೀರ್ಘಕಾಲಿನ ರಾಯಧನ ವಿಧಿಸುವ ವ್ಯವಹಾರಿಕ ಡಿಜಿಟಲ್ ತಂತ್ರಜ್ಞಾನಗಳನ್ನು ನಿಷೇಧಿಸಬೇಕು. ವಿಮರ್ಶಾತ್ಮಕ ಡಿಜಿಟಲ್ ಸಾಕ್ಷರತೆಯು ಶಿಕ್ಷಕರ ಶಿಕ್ಷಣದ ಕಡ್ಡಾಯ ಭಾಗವಾಗಿರಬೇಕು. ಇದರಿಂದ ಅವರು ತಮ್ಮನ್ನು ತಾವು ಕೇವಲ ತಂತ್ರಜ್ಞಾನದ ಬಳಕೆದಾರರಂತೆ ನೋಡಿಕೊಳ್ಳುವುದಿಲ್ಲ. ಬದಲಿಗೆ ತಮ್ಮ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಂಪನ್ಮೂಲಗಳು ಮತ್ತು ವಿಧಾನಗಳನ್ನು ಯಾವಾಗ ಬಳಸಬೇಕು ಮತ್ತು ಹೇಗೆ ಬಳಸಬೇಕು ಎಂಬುದನ್ನು ನಿರ್ಧರಿಸುವ ಪಾತ್ರ ವಹಿಸುತ್ತಾರೆ.

 

 

ಕಲಿಕಾ ಫಲಿತಾಂಶಗಳ ಮೌಲ್ಯಮಾಪನ, ಸಾಧನೆ ಸಮೀಕ್ಷೆಗಳು ಮತ್ತು ಸಾರ್ವಜನಿಕ ಪರೀಕ್ಷೆಗಳು ಎಷ್ಟು ವ್ಯಾಪಕವಾಗಿ ಹರಡಿವೆ ಎಂದರೇ ಅವು ಶಾಲಾ ಶಿಕ್ಷಣದ ಹೃದಯ ಭಾಗವಾಗಿರುವ ಪಠ್ಯ ಕ್ರಮ ಮತ್ತು ಬೋಧನೆಯ ಮಹತ್ವವನ್ನೇ ಮರೆಮಾಚಿ ಸಮಕಾಲೀನ ಶಿಕ್ಷಣ ಸಂವಾದದ ರೂಪುರೇಷೆಗಳನ್ನು ವ್ಯಾಖ್ಯಾನಿಸುವಷ್ಟು ಪ್ರಬಲವಾಗಿವೆ. ಆದರೂ ವಿರೋಧಾಭಾಸವೆಂದರೇ ಪರೀಕ್ಷಾ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆಯು ನಿರಂತರವಾಗಿ ಕ್ಷೀಣಿಸುತ್ತಿವೆ. ವಿದ್ಯಾರ್ಥಿಗಳ ಮೌಲ್ಯಮಾಪನ ಪದ್ಧತಿಗಳು ಮತ್ತು ಸಾರ್ವಜನಿಕ ಪರೀಕ್ಷೆಗಳು ಹೆಚ್ಚು ಹೆಚ್ಚು ಟೀಕೆಗೆ ಒಳಗಾಗುತ್ತಿದೆ. ಶಾಲಾ ಶಿಕ್ಷಣನ್ನು ಸುಧಾರಿಸುವಲ್ಲಿ ಅವುಗಳ ವಿಶ್ವಾಸಾರ್ಹತೆ ಮತ್ತು ಮೌಲ್ಯವರ್ಧನೆಯ ಬಗ್ಗೆ ಪ್ರಶ್ನೆಗಳು ಏಳುತ್ತಿವೆ.

ಮೌಲ್ಯಮಾಪನ- ಶಿಕ್ಷಕರ ವಿಶ್ವಾಸಾರ್ಹತೆ ಬಗ್ಗೆ ಅಪನಂಬಿಕೆ

ಕರ್ನಾಟಕವು ಕಳೆದ ಎರಡು ದಶಕಗಳಿಂದ ರಾಜ್ಯಮಟ್ಟದ ಸಾಧನೆ ಸಮೀಕ್ಷೆಗಳನ್ನು ನಡೆಸುತ್ತಿದೆ. ಇದು ಎನ್‌ಸಿಆರ್‍‌ಟಿಇ ನಿಯತಕಾಲಿಕವಾಗಿ ನಡೆಸುವ ರಾಷ್ಟ್ರೀಯ ಸಾಧನೆ ಸಮೀಕ್ಷೆಗಳ ಜೊತೆಗೆ ಹೆಚ್ಚುವರಿ ಸೇರ್ಪಡೆಯಾಗಿದೆ. ಈ ಸಾಧನೆ ಸಮೀಕ್ಷೆಗಳು ವಿಪರೀತ ಸಮಯ ಬೇಡುತ್ತವೆ. ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಬಳಸುತ್ತವೆ. ಇದು ಶಿಕ್ಷಕರು ಮತ್ತು ಸ್ಥಳೀಯ ಆಡಳಿತಗಾರರ ಅಮೂಲ್ಯ ಸಮಯವನ್ನು ಕಸಿಯುವುದರ ಜತೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕವನ್ನು ಉಂಟು ಮಾಡುತ್ತವೆ. ಮತ್ತು ಮೌಲ್ಯಮಾಪನ ನಡೆಸುವ ಶಿಕ್ಷಕರ ವಿಶ್ವಾಸಾರ್ಹತೆಯ ಬಗ್ಗೆ ಅಪನಂಬಿಕೆ ಹೆಚ್ಚಿಸುತ್ತದೆ ಎಂದು ಆಯೋಗವು ವಿವರಿಸಿದೆ.

 

 

‘ಅದರಲ್ಲೂ ಬಹಳ ಮುಖ್ಯವಾಗಿ ಇಂತಹ ಕಾಲಕಾಲಕ್ಕೆ ನಡೆಸುವ ಬಾಹ್ಯ ಸಾಧನೆ ಸಮೀಕ್ಷೆಗಳು ಶಾಲೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಪ್ರಮುಖ ಉದ್ದೇಶವನ್ನು ಸಾಧಿಸಿರುವ ಬಗ್ಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆದ್ದರಿಂದ ಇಂತಹ ರಾಜ್ಯಮಟ್ಟದ ಸಮೀಕ್ಷೆಗಳನ್ನು ನಡೆಸುವ ಕ್ರಮ ಕೈಬಿಡಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ. ಇದರಿಂದ ಉಳಿಯುವ ಸಂಪನ್ಮೂಲಗಳನ್ನು ಶಾಲಾಧಾರಿತ ಪರೀಕ್ಷೆಯನ್ನು ಬಲಪಡಿಸಲು ಮತ್ತು ಸಾರ್ವಜನಿಕ ಪರೀಕ್ಷೆಗಳನ್ನು ಸುಧಾರಿಸಲು ಬಳಸಬಹುದು,’ ಎಂದು ಆಯೋಗವು ತನ್ನ ವರದಿಯಲ್ಲಿ  ಸಲಹೆ ನೀಡಿದೆ.

Hot this week

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

ಈಗಲ್‌ಟನ್‌ ರೆಸಾರ್ಟ್‌ನಿಂದ ಸರ್ಕಾರಿ ಜಮೀನು ಒತ್ತುವರಿ; 29 ವರ್ಷಗಳಾದರೂ ಪ್ರಕರಣ ಇತ್ಯರ್ಥವಾಗಿಲ್ಲ, 982 ಕೋಟಿಯೂ ವಸೂಲಾಗಿಲ್ಲ

ಬೆಂಗಳೂರು; ರಾಮನಗರ ತಾಲೂಕು ಬಿಡದಿ ಹೋಬಳಿ ಶ್ಯಾನುಮಂಗಲ, ಬಿಲ್ಲಕೆಂಪನಹಳ್ಳಿ, ಬಾನಂದೂರು ಗ್ರಾಮದ...

ಘನತ್ಯಾಜ್ಯ ವಿಲೇವಾರಿ; 39,437 ಕೋಟಿ ರು ಮೌಲ್ಯದ ಟೆಂಡರ್ ಪರಿಶೀಲನೆಗೆ ಕೇವಲ 7 ದಿನ ಗಡುವು, ಸಿದ್ದು ಅವಧಿಯಲ್ಲಿ ರಚಿಸಿದ್ದ ತಂಡಕ್ಕೆ ಕೊಕ್‌ ಕೊಟ್ಟು ಹೊಸ ತಂಡ ರಚಿಸಿದ್ದೇಕೆ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ...
Please Scan to make Your Contribution

Topics

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

ಈಗಲ್‌ಟನ್‌ ರೆಸಾರ್ಟ್‌ನಿಂದ ಸರ್ಕಾರಿ ಜಮೀನು ಒತ್ತುವರಿ; 29 ವರ್ಷಗಳಾದರೂ ಪ್ರಕರಣ ಇತ್ಯರ್ಥವಾಗಿಲ್ಲ, 982 ಕೋಟಿಯೂ ವಸೂಲಾಗಿಲ್ಲ

ಬೆಂಗಳೂರು; ರಾಮನಗರ ತಾಲೂಕು ಬಿಡದಿ ಹೋಬಳಿ ಶ್ಯಾನುಮಂಗಲ, ಬಿಲ್ಲಕೆಂಪನಹಳ್ಳಿ, ಬಾನಂದೂರು ಗ್ರಾಮದ...

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

ಬೆಂಗಳೂರು;  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾಗಿದ್ದ...

ಎಂಎಸ್‌ಐಎಲ್‌ನಲ್ಲಿ ಅಕ್ರಮ; ನಿವೃತ್ತ ಐಎಎಸ್‌ ಜಿ ಸಿ ಪ್ರಕಾಶ್‌ ಸೇರಿ 7 ಮಂದಿ ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಬೆಂಗಳೂರು; ಮೈಸೂರು ಸೇಲ್ಸ್‌ ಇಂಟರ್ ನ್ಯಾ‍ಷನಲ್‌ ಲಿಮಿಟೆಡ್‌ನಲ್ಲಿ ನಡೆದಿದೆ ಎನ್ನಲಾದ ವಿವಿಧ...

ಮತದಾರರ ಪಟ್ಟಿ ಪರಿಷ್ಕರಣೆ; ಹಲವು ಜಿಲ್ಲೆಗಳಲ್ಲಿ ವರ್ಷವಾದರೂ ನೇಮಕವಾಗದ ಬಿಎಲ್‌ಒ, ಕಾಲಕಸವಾಯಿತೇ ಆಯೋಗದ ಪತ್ರ?

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ...

Related Articles

Popular Categories

error: Content is protected !!