Monday | June 1, 2026 |

ತುಮಕೂರಿನಲ್ಲಿ ಗ್ಯಾರಂಟಿ ಸಮಾವೇಶ; ವೇದಿಕೆ ಸಜ್ಜುಗೊಳಿಸಲು 4 ಕೋಟಿ, 1.40 ಲಕ್ಷ ಜನರಿಗೆ ಊಟಕ್ಕೆ 1.10 ಕೋಟಿ ಸೇರಿ 12.79 ಕೋಟಿ ರು ವೆಚ್ಚದ ಅಂದಾಜು ಪಟ್ಟಿ ಬಹಿರಂಗ

ಬೆಂಗಳೂರು;   ತುಮಕೂರಿನಲ್ಲಿ ಕಳೆದ ತಿಂಗಳು  ಮೇ 19 ರಂದು ನಡೆದಿದ್ದ “ಪ್ರಗತಿಯತ್ತ ಕರ್ನಾಟಕ” ಮೂರು ವರ್ಷದ ಸಾಧನೆ – ಸೇವೆಯ ಸಮರ್ಪಣೆ ಕಾರ್ಯಕ್ರಮ ಮತ್ತು ಸಮಾವೇಶಕ್ಕೆ  ಒಟ್ಟಾರೆ 12.79 ಕೋಟಿ ರು ಕೋರಿದ್ದ ತುಮಕೂರು ಜಿಲ್ಲಾಡಳಿತ ಸಲ್ಲಿಸಿದ್ದ ಅಂದಾಜು ಪಟ್ಟಿಯು ಇದೀಗ ಬಹಿರಂಗವಾಗಿದೆ.

ಈ ಸಮಾವೇಶಕ್ಕೆ ತಗಲಿರುವ ವೆಚ್ಚವನ್ನು ಹೇಗೆ ಭರಿಸಬೇಕು ಎಂದು ಆರ್ಥಿಕ ಇಲಾಖೆಯು ತಲೆ ಮೇಲೆ ಕೈಹೊತ್ತು ಕುಳಿತಿರುವ ಬೆನ್ನಲ್ಲೇ 12.79 ಕೋಟಿ ರು ವೆಚ್ಚದ ಅಂದಾಜು ಪಟ್ಟಿಯು ಮುನ್ನೆಲೆಗೆ ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಡಳಿತವು ಸಲ್ಲಿಸಿದ್ದ ಅಂದಾಜು ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಕಾಲಿಕ ದಾಖಲೀಕರಣ ಮತ್ತು ಪರಿಶೀಲನೆ ಹಾಗೂ ಮುಂಗಡವಾಗಿ ಪಾವತಿಸಬೇಕಿರುವ ನಿಗದಿತ ಶುಲ್ಕ ಪಾವತಿಗಾಗಿ 65 ಲಕ್ಷ ಮತ್ತು ಈ ಕಾರ್ಯಕ್ರಮದ ಆರಂಭಿಕ ಪೂರ್ವ ಸಿದ್ಧತೆಗಾಗಿ 35 ಲಕ್ಷ ರು ಸೇರಿ ಒಟ್ಟಾರೆ 1 ಕೋಟಿ ರು ಅನುದಾನವನ್ನು ಸರ್ಕಾರದಿಂದ ಮುಂಗಡವಾಗಿ ಬಿಡುಗಡೆ ಮಾಡಬೇಕು ಎಂದು ತುಮಕೂರು ಜಿಲ್ಲಾಡಳಿತವು ಕೋರಿತ್ತು.

‘ಮೇ 2026ರ ತಿಂಗಳಲ್ಲಿ ತುಮಕೂರು ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳ ಗ್ಯಾರಂಟಿ ಯೋಜನೆಯ ಸವಲತ್ತುಗಳನ್ನು ಫಲಾನುಭವಿಗಳನ್ನು ವಿತರಿಸುವ ಬೃಹತ್ ಸಮಾವೇಶಕ್ಕೆ ಅಗತ್ಯವಿರುವ 12,79,00,000 ರು.ಗಳನ್ನು ಬಿಡುಗಡೆ ಮಾಡಬೇಕು. ಹಾಗೂ ಈ ಮೊತ್ತಕ್ಕೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಕರಿಗೆ ಮುಂಗಡವಾಗಿ 1 ಕೋಟಿ ರು.ಗಳನ್ನು ನೀಡಬೇಕು,’ ಎಂದು ತುಮಕೂರು ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಅಂದಾಜು ಪಟ್ಟಿಯಲ್ಲೇನಿದೆ?

ಹಕ್ಕುಪತ್ರ ವಿತರಣಾ ಸಮಾವೇಶದ ಕಾರ್ಯಕ್ರಮದ ವೇದಿಕೆ, ಜರ್ಮನ್ ಟೆಂಟ್‌ ಶೆಲ್ಟರ್‍‌, ಎಲ್‌ಇಡಿ, ಧ್ವನಿವರ್ಧಕ, ಬ್ಯಾಕ್‌ ಡ್ರಾಪ್‌ ಊಟದ ಶಾಮಿಯಾನ, ವಿವಿಐಪಿ ಊಟದ ಹಾಲ್‌, ಗ್ರೀನ್‌ ರೂಂ ನಿರ್ಮಾಣ ಮತ್ತು ಕೌಂಟರ್‍‌ ಅಳವಡಿಕೆಗೆ 4.00 ಕೋಟಿ ರು, ಹಕ್ಕುಪತ್ರ ವಿತರಣಾ ಸಮಾವೇಶದ ಕಾರ್ಯಕ್ರಮಕ್ಕಾಗಿ ಹೆಲಿಪ್ಯಾಡ್‌ ನಿರ್ಮಾಣ, ಬ್ಯಾರಿಕೇಡ್‌, ವೇದಿಕೆಯ ಸುತ್ತಮುತ್ತ ಪಾರ್ಕಿಂಗ್‌ ಸ್ಥಳಗಳಲ್ಲಿ ಮತ್ತು ರಸ್ತೆಗಳಲ್ಲಿ ಸೈನ್ ಬೋರ್ಡ್‌ ಇತರೆ ಕೆಲಸಗಳಿಗೆ 10 ಲಕ್ಷ, ಸಾರ್ವಜನಿಕರಾಗಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆಗಾಗಿ 25 ಲಕ್ಷ, ಬೆಸ್ಕಾಂ ಇಲಾಖೆಯಿಂಧ ವಿದ್ಯುತ್‌ ಪೂರೈಕೆಗೆ 10 ಲಕ್ಷ ರು ಅನುದಾನ ಕೋರಿತ್ತು.

ಹಕ್ಕುಪತ್ರ ವಿತರಣೆ ಸಮಾವೇಶಕ್ಕೆ ಅಂದಾಜು 70 ಸಾವಿರ ಫಲಾನುಭವಿಗಳು ಮತ್ತು ಇವರ ಸಂಗಡಿಗರು ಸೇರಿ 1,40,000 ಜನರಿಗೆ ಊಟದ ವ್ಯವಸ್ಥೆ ಮಾಡಲು 1.10 ಕೋಟಿ ರು., ಗಣ್ಯ ಮಾನ್ಯರಿಗೆ, ಮಾಧ್ಯಮದವರಿಗೆ ಮತ್ತು ಕಲಾವಿದರಿಗೆ ಊಟ, ವಸತಿ ವ್ಯವಸ್ಥೆಗಾಗಿ 15 ಲಕ್ಷ, ಪೊಲೀಸ್‌ ಸಿಬ್ಬಂದಿಗಳಿಗೆ 3 ದಿನದ ಉಪಹಾರ ಹಾಗೂ ಊಟದ ವ್ಯವಸ್ಥೆಗೆ 20 ಲಕ್ಷ ರು ಅಂದಾಜಿಸಿರುವುದು ಗೊತ್ತಾಗಿದೆ.

ಹಕ್ಕುಪತ್ರ ವಿತರಣಾ ಸಮಾವೇಶ ಕಾರ್ಯಕ್ರಮ ತಾತ್ಕಾಲಿಕ ಬಸ್‌ ಸ್ಟ್ಯಾಂಡ್‌ ಹಾಗೂ ಮೈಕ್‌ ಸೆಟ್‌ಗಳ ವ್ಯವಸ್ಥೆಗೆ 5 ಲಕ್ಷ, ಶಿಷ್ಟಾಚಾರ ವಾಹನಗಳಿಗೆ ಹಾಗೂ ಇತರೆ ಖಾಸಗಿ ವಾಹನಗಳಿಗೆ ಇಂಧನ ವ್ಯವಸ್ಥೆಗೆ 15 ಲಕ್ಷ, ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತರಲು ಕೆಎಸ್‌ಆರ್‍‌ಟಿಸಿ ಬಸ್‌ಗಳ ವ್ಯವಸ್ಥೆಗಾಗಿ 3 ಕೋಟಿ ರು., ಖಾಶಗಿ ಬಸ್‌ಗಳ ವ್ಯವಸ್ಥೆ (ಮ್ಯಾಕ್ಸಿಕ್ಯಾಬ್‌ 200) 10 ಲಕ್ಷ, ಪೊಲೀಸ್‌ ಭದ್ರತೆ, ವಿಐಪಿ ಭದ್ರತೆಗೆ ಬಾಡಿಗೆ ರೂಪದಲ್ಲಿ ಬೊಲೋರೋ, ಇನ್ನೋವಾ ವಾಹನಗಳ ವ್ಯವಸ್ಥೆಗೆ 5 ಲಕ್ಷ , ಫಲಾನುಭವಿಗಳಿಗೆ ಪ್ರವಾಸ ಸಮಯದಲ್ಲಿ ಉಪಹಾರದ ವ್ಯವಸ್ಥೆಗಾಗಿ 50 ಲಕ್ಷ, ಬಸ್‌ಗಳಿಗೆ ಬ್ಯಾನರ್‍‌ ಮತ್ತು ಸ್ಟಿಕರ್‍ಸ್‌ ಗಳಿಗೆ 1 ಲಕ್ಷ, ರಾಜ್ಯಮಟ್ಟದ ಪತ್ರಿಕೆಗಳಿಗೆ ಜಾಹೀರಾತು ಮತ್ತು ಪ್ರಚಾರ ಪ್ರಕಟಣೆಗೆ 1 ಕೋಟಿ, ಫೈಲ್‌ ಫೋಲ್ಡರ್‍‌ಗಳಿಗೆ 48 ಲಕ್ಷ ರು ಸೇರಿ ಒಟ್ಟಾರೆ 12.79 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜು ಪಟ್ಟಿ ಸಲ್ಲಿಸಿರುವುದು ತಿಳಿದು ಬಂದಿದೆ.

ತುಮಕೂರಿನಲ್ಲಿ ಕಳೆದ ವರ್ಷದ ಹಿಂದೆಯಷ್ಟೇ ಗ್ಯಾರಂಟಿ ಸಮಾವೇಶಕ್ಕೆ 2 ಕೋಟಿ ರು ಖರ್ಚಾಗಿತ್ತು.   ಗ್ಯಾರಂಟಿ ಯೋಜನೆ ಅನುಷ್ಠಾನಗೊಂಡ ಆರಂಭಿಕ ವರ್ಷದಲ್ಲೇ ಸರ್ಕಾರವು  30 ಕೋಟಿ ರುಪಾಯಿಗಳನ್ನು  ಖರ್ಚು ಮಾಡಿತ್ತು.  ಸಮಾವೇಶಗಳಿಗಾಗಿ ಪ್ರತ್ಯೇಕ ಅನುದಾನವನ್ನು ಯಾವುದೇ ಲೆಕ್ಕ ಶೀರ್ಷಿಕೆಯಲ್ಲಿ ಒದಗಿಸಿರಲಿಲ್ಲ. ಆದರೂ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬಳಕೆಯಾಗದೇ ಉಳಿದಿದ್ದ ಹಣವನ್ನು ಬಳಸಿತ್ತು. ಈ ಹಣವನ್ನು ಮಾರ್ಗಪಲ್ಲಟಗೊಳಿಸಲು ಅಧಿಕಾರಿಗಳು ಹೈರಾಣರಾಗಿದ್ದರು.

 

ತುಮಕೂರು ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾ ಜಿ ಪರಮೇಶ್ವರ್‍‌ ಆಹ್ವಾನಿಸಿದರು.

12 ಕೋಟಿ ರುಪಾಯಿ ಹೊಂದಿಸಲು ತಿಣುಕಾಡುತ್ತಿರುವ ಕಂದಾಯ ಇಲಾಖೆಯು ಇದಕ್ಕಾಗಿ ತುಮಕೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ವಿಶೇಷ ಭೂ ಸ್ವಾಧೀನ ವಿಭಾಗದಲ್ಲಿ ಠೇವಣಿ ಇರಿಸಿದ್ದ ಮೊತ್ತದ ಮೇಲೆ ಆಕರಿಸಿರುವ ಬಡ್ಡಿ ಮೊತ್ತವನ್ನು ಸಮಾವೇಶದ ವೆಚ್ಚ ಭರಿಸಲು ಮಾರ್ಗಪಲ್ಲಟ ಮಾಡಲು  ಚಿಂತಿಸಿದೆ. ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಸಮಾಲೋಚನೆ ನಡೆಸಬೇಕಿದೆ. ಇನ್ನೂ ಈ ಬಗ್ಗೆ ಇತ್ಯರ್ಥವಾಗಿಲ್ಲ   ಎಂದು ಕಂದಾಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌”ಗೆ ಖಚಿತಪಡಿಸಿದ್ದಾರೆ.

 

ತುಮಕೂರು ಸಮಾವೇಶಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

 

2023-24ರಲ್ಲಿ 30.92 ಕೋಟಿ ಖರ್ಚು

ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಅನ್ನಭಾಗ್ಯ, ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕಾಗಿ 2023-24ರಲ್ಲಿ ರಾಜ್ಯ ಸರ್ಕಾರವು ಬರೋಬ್ಬರಿ 30.92 ಕೋಟಿ ರುಪಾಯಿ  ಒಟ್ಟು ಖರ್ಚು ಮಾಡಿದೆ. ಗ್ಯಾರಂಟಿ ಯೋಜನೆಗಳ   ಅನುಷ್ಠಾನಗೊಂಡು ವರ್ಷ ಕಳೆಯುವರಷ್ಟರಲ್ಲಿ ಗ್ಯಾರಂಟಿ ಸಮಾವೇಶಗಳನ್ನೂ ಹಮ್ಮಿಕೊಂಡಿತ್ತು. ಈ ಸಮಾವೇಶಕ್ಕೆ 2023-24ರಲ್ಲೇ   ಒಟ್ಟಾರೆ 30.92 ಕೋಟಿ ರು ಖರ್ಚು ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ರಾಜ್ಯದ ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿದ್ದ ಹಣಕ್ಕೂ ಸರ್ಕಾರವು ಕೈ ಹಾಕಿತ್ತು. ಅಲ್ಲದೆ 2023ರ ಆರ್ಥಿಕ ವರ್ಷ ಮುಕ್ತಾಯಗೊಂಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು 64,48, 55, 913 ರು.ಗಳ ಅನುದಾನವನ್ನು ಕೋರಿದ್ದರು. ಈ ಅನುದಾನದ ಪೈಕಿ 36 ಕೋಟಿ 95 ಲಕ್ಷ 43 ಸಾವಿರ 982 ರು.ಗಳನ್ನು ಗ್ಯಾರಂಟಿ ಸಮಾವೇಶ ನಡೆಸಲು ಅನುದಾನ ಬಿಡುಗಡೆ ಮಾಡಿತ್ತು.

ಗ್ಯಾರಂಟಿ ಸಮಾವೇಶಗಳಿಗಾಗಿ ಬಿಡುಗಡೆ ಮಾಡಿದ್ದ ಅನುದಾನವನ್ನು 23 ಜಿಲ್ಲೆಗಳಲ್ಲಿ ಖರ್ಚು ಮಾಡಲಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಅನುದಾನವನ್ನು ಬಳಕೆ ಮಾಡದ ಕಾರಣ ಲ್ಯಾಪ್ಸ್‌ ಆಗಿತ್ತು. ಇದರ ಮೊತ್ತ 6 ಕೋಟಿ 1 ಲಕ್ಷ 55 ಸಾವಿರ 727 ರು ಗಳಷ್ಟಿತ್ತು. ಅಲ್ಲದೇ 33 ಕೋಟಿ 67 ಲಕ್ಷ 57 ಸಾವಿರ 841 ರು ಅನುದಾನ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳು ಹೆಚ್ಚುವರಿ ಮನವಿ ಮತ್ತು ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

ಜಿಲ್ಲಾಧಿಕಾರಿಗಳ ಕೋರಿಕೆಯಂತೆ ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳ ಆಯೋಜನೆಗಾಗಿ 33 ಕೋಟಿ 67 ಲಕ್ಷ 57 ಸಾವಿರ 841 ರು.ಗಳ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆಗೆ ಕೋರಿತ್ತು. ಈ ಪೈಕಿ 36 ಕೋಟಿ 95 ಲಕ್ಷ 43 ಸಾವಿರ 982 ರು.ಗಳನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 30 ಕೋಟಿ 92 ಲಕ್ಷ 98 ಸಾವಿರ 072 ರು.ಗಳನ್ನು ಖರ್ಚು ಮಾಡಿತ್ತು. ಇದಾದ ಮೇಲೂ ಜಿಲ್ಲಾಧಿಕಾರಿಗಳು ಇನ್ನೂ 33 ಕೋಟಿ 67 ಲಕ್ಷ 57 ಸಾವಿರ 841 ರು.ಗಳನ್ನು ಕೋರಿತ್ತು.

ಶಿವಮೊಗ್ಗ ಜಿಲ್ಲಾಧಿಕಾರಿಗಳು 3,64,41,642 ರು ಅನುದಾನ ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 2,39,14,548 ರು ಖರ್ಚಾಗಿತ್ತು. 13,96,605 ರು ಲ್ಯಾಪ್ಸ್‌ ಆಗಿತ್ತು. ಆದರೂ ಹೆಚ್ಚುವರಿಯಾಗಿ 1,25,27,094 ರು ಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು. ಮಂಡ್ಯ ಜಿಲ್ಲಾಧಿಕಾರಿಗಳು 5,00,00,000 ರು ಕೋರಿದ್ದರು. ಇದರಲ್ಲಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. 2,53,11,153 ರು ಖರ್ಚು ಮಾಡಿದ್ದರು. ಹೆಚ್ಚುವರಿಯಾಗಿ 2,46,88,847 ರು ಗಳಿಗೆ ಪ್ರಸ್ತಾವ ಸಲ್ಲಿಸಿದ್ದರು.

ಕೋಲಾರ ಜಿಲ್ಲಾಧಿಕಾರಿಗಳು 3,24,00,000 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 2,53,11,153 ರು.ಗಳನ್ನು ವೆಚ್ಚ ಮಾಡಲಾಗಿತ್ತು. ಇನ್ನೂ 70,88,847 ರು ಒದಗಿಸಿ ಎಂದು ಹೆಚ್ಚುವರಿ ಪ್ರಸ್ತಾವ ಸಲ್ಲಿಸಿದ್ದರು. ಕಲಬುರಗಿ ಜಿಲ್ಲಾಧಿಕಾರಿಗಳು 12,50, 00,000 ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಮಾಡಿದ್ದ 2,53,11,15 ರು ಖರ್ಚಾಗಿತ್ತು. ಆದರೂ 9,96,88,847 ರು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದ್ದರು.

ಹಾಸನ ಜಿಲ್ಲಾಧಿಕಾರಿ 3,06,00,000 ಕೋಟಿ ರು ಬಿಡುಗಡೆಗೆ ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಆಗಿತ್ತು. ಖರ್ಚಿನ ಬಾಬತ್ತಿನಲ್ಲಿ ಶೂನ್ಯ ಎಂದು ತೋರಿಸಲಾಗಿದೆ. ಆದರೆ 3,06,00,000 ರು ಹೆಚ್ಚುವರಿ ಅನುದಾನ ಕೋರಿದ್ದರು. ಆದರೂ ಈ ಅನುದಾನವನ್ನು ಡ್ರಾ ಮಾಡಿರಲಿಲ್ಲ.

ಧಾರವಾಡ ಜಿಲ್ಲಾಧಿಕಾರಿಯು 4,90,60,665 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಅಗಿತ್ತು ಬಿಡುಗಡೆಯಾಗಿದ್ದ ಅನುದಾನ ಪೈಕಿ 2,53,09,885 ರು ಖರ್ಚಾಗಿತ್ತು. 1,268 ರು ಲ್ಯಾಪ್ಸ್‌ ಆಗಿತ್ತು. ಇದಾದ ನಂತರವೂ 2,37,50,780 ರು ಹೆಚ್ಚುವರಿಯಾಗಿ ಕೋರಿದ್ದರು.

ಬೀದರ್ ಜಿಲ್ಲಾಧಿಕಾರಿಯು 5,41,55,000 ರು ಕೋರಿದ್ದರು. ಈ ಪೈಕಿ 2,53,11,153 ರು ಬಿಡುಗಡೆ ಆಗಿತ್ತು. ಬಿಡುಗಡೆ ಆಗಿದ್ದ 2,53,11,153 ರು.ಗಳನ್ನು ಖರ್ಚು ಮಾಡಿದ್ದರು. ಆದರೂ ಹೆಚ್ಚುವರಿಯಾಗಿ 2,88,43,847 ಕೋರಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯು 4,25,00,000 ರು ಕೋರಿದ್ದರು. 2,53,11,153 ರು ಬಿಡುಗಡೆಯಾಗಿತ್ತು. 1,40,00,001 ರು ಖರ್ಚಾಗಿತ್ತು. 1,13,11,152 ರು ಲ್ಯಾಪ್ಸ್‌ ಅಗಿತ್ತು. ಆದರೂ 2,84,99,999 ರು ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ವಿಜಯಪುರ ಜಿಲ್ಲಾಧಿಕಾರಿಯು 80,00,000 ರು ಕೋರಿದ್ದರು. ಕೋರಿಕೆಯಂತೆ 80,00,000 ರು ಬಿಡುಗಡೆಯಾಗಿತ್ತು. ಇದರಲ್ಲಿಯೂ 18,30,00 ಖರ್ಚಾಗಿತ್ತು. 61,70,000 ರು ಲ್ಯಾಪ್ಸ್‌ ಆಗಿತ್ತು. ಹೀಗಾಗಿ 61,70,000 ರು.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಬೇಕು ಎಂದು ಪ್ರಸ್ತಾವ ಸಲ್ಲಿಸಿದ್ದರು.

ವಿಜಯನಗರ ಜಿಲ್ಲಾಧಿಕಾರಿಯು 9,35,000 ರು ಕೋರಿದ್ದರು. 9,35,000 ಬಿಡುಗಡೆ ಮಾಡಲಾಗಿತ್ತಾದರೂ 2,74,550 ರು ಖರ್ಚು ಮಾಡಿದ್ದರು. ಹೀಗಾಗಿ 6,60,450 ರು ಲ್ಯಾಪ್ಸ್‌ ಆಗಿತ್ತು. ಹೀಗಾಗಿ 6,60,450 ರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

 

 

ಉತ್ತರ ಕನ್ನಡ (ಕಾರವಾರ) ಜಿಲ್ಲಾಧಿಕಾರಿಯು 1,35,00,000 ರು ಕೋರಿದ್ದರು. 1,35,00,000 ರು ಬಿಡುಗಡೆಯಾಗಿತ್ತು. ಇದರಲ್ಲಿ 99,96,382 ರು ಖರ್ಚಾಗಿತ್ತು. 35,03,618 ಲ್ಯಾಪ್ಸ್‌ ಆಗಿತ್ತು. ಹೀಗಾಗಿ 35,03,618 ರುಗಳನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಯು ಪ್ರಸ್ತಾವ ಸಲ್ಲಿಸಿದ್ದರು.

ರಾಮನಗರ ಜಿಲ್ಲಾಧಿಕಾರಿ 68,92,065 ರು ಗೆ ಕೋರಿದ್ದರು. 68,92,065 ರು ಬಿಡುಗಡೆಯಾಗಿತ್ತು. ಬಿಡುಗಡೆ ಆಗಿದ್ದ 68,92,-065 ರು ಅನುದಾನವನ್ನು ಸೆಳೆದಿರಲಿಲ್ಲ. ಮೈಸೂರು ಜಿಲ್ಲಾಧಿಕಾರಿಯು 2,40,65,037 ರು ಕೋರಿದ್ದರು. 2,40,65,037 ರು ಬಿಡುಗಡೆಯಾಗಿತ್ತು. ಈ ಪೈಕಿ 2,40,10,776 ರು ಖರ್ಚಾಗಿತ್ತು. 54,261 ರು ಲ್ಯಾಪ್ಸ್‌ ಆಗಿತ್ತು. ಹೀಗಾಗಿ 54,261 ರು ಮಂಜೂರು ಮಾಡಬೇಕು ಎಂದು ಕೋರಿದ್ದರು. ಗದಗ ಜಿಲ್ಲಾಧಿಕಾರಿಯು 1,29,90,000 ರು ಅನುದಾನ ಕೋರಿದ್ದರು. 1,29,90,000 ರು ಬಿಡುಗಡೆ ಆಗಿತ್ತು. ಇಷ್ಟೂ ಅನುದಾನವನ್ನು ಖರ್ಚು ಮಾಡಲಾಗಿತ್ತು.

ಚಾಮರಾಜನಗರ ಜಿಲ್ಲಾಧಿಕಾರಿಯು 84,01,829 ರು ಅನುದಾನ ಕೋರಿದ್ದರು. 84,01,829 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ -84,01,829 ರು ಖರ್ಚು ಮಾಡಿದ್ದರು. ಆದರೂ ಹೆಚ್ಚುವರಿಯಾಗಿ 12,00,000 ರು ಕೋರಿದ್ದರು.

ಬಳ್ಳಾರಿ ಜಿಲ್ಲಾಧಿಕಾರಿಯು 49,24,855 ರು ಅನುದಾನ ಕೋರಿದ್ದರು. ಈ ಪೈಕಿ 48,55,155 ರು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಡ್ರಾ ಮಾಡಿರಲಿಲ್ಲ. ಹೀಗಾಗಿ ಲ್ಯಾಪ್ಸ್‌ ಆಗಿತ್ತು. ಇದೇ ಅನುದಾವನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲು ಕೋರಿದ್ದರು. ಉಡುಪಿ ಜಿಲ್ಲಾಧಿಕಾರಿಯು 95,31,500 ರು ಅನುದಾನ ಕೋರಿದ್ದರು. 95,31,500 ರು ಬಿಡುಗಡೆಯಾಗಿತ್ತು. 94,50,282 ರು ಖರ್ಚಾಗಿತ್ತು. ಆದರೂ 81,218 ರು.ಗಳನ್ನು ಹೆಚ್ಚುವರಿಯಾಗಿ ಕೋರಿದ್ದರು. ಹಾವೇರಿ ಜಿಲ್ಲಾಧಿಕಾರಿಯು 71,08,920 ರು ಕೋರಿದ್ದರು. 71,08,920 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯು 1,77,50,252 ರು ಕೋರಿದ್ದರು. ಈ ಪೈಕಿ 1,77,50,252 ರು ಬಿಡುಗಡೆ ಆಗಿತ್ತು. ಇದರಲ್ಲಿ 1,77,50,252 ರು ಖರ್ಚಾಗಿತ್ತು. ಚಿತ್ರದುರ್ಗ ಜಿಲ್ಲಾಧಿಕಾರಿಯು 94,00,000 ರು ಅನುದಾನ ಕೋರಿದ್ದರು. 94,00,000 ರು ಬಿಡುಗಡೆ ಆಗಿತ್ತು. ಈ ಪೈಕಿ 93,98,192 ರು ಖರ್ಚಾಗಿತ್ತು. ಹೆಚ್ಚುವರಿಯಾಗಿ 1,808 ರು ಕೋರಿದ್ದರು.

 

 

ಚಿಕ್ಕಮಗಳೂರು ಜಿಲ್ಲಾಧಿಕಾರಿಯು 1,37,25,000 ರು ಕೋರಿದ್ದರು. 1,37,25,000 ರು ಬಿಡುಗಡೆಯಾಗಿತ್ತು. ಈ ಪೈಕಿ 1,37,17,843 ರು ಖರ್ಚಾಗಿತ್ತು. 7,157 ರು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಕೋರಿದ್ದರು.

ತುಮಕೂರು ಜಿಲ್ಲಾಧಿಕಾರಿಯು 2,00,00,000 ರು ಕೋರಿದ್ದರು. ಕೋರಿಕೆಯಂತೆ 2,00,000,000 ರು.ಗಳನ್ನು ಬಿಡುಗಡೆ ಮಾಡಿತ್ತು. ಇಷ್ಟೂ ಅನುದಾನವನ್ನೂ ಖರ್ಚು ಮಾಡಲಾಗಿತ್ತು.  ದಾವಣಗೆರೆ ಜಿಲ್ಲಾಧಿಕಾರಿಯು 99,00,000 ರು ಕೋರಿದ್ದರು. ಇಷ್ಟೂ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತಲ್ಲದೇ ಈ ಹಣವೂ ಸಂಪೂರ್ಣವಾಗಿ ಖರ್ಚು ಮಾಡಲಾಗಿತ್ತು. ಕೊಪ್ಪಳ ಜಿಲ್ಲಾಧಿಕಾರಿಯು 75,74,148 ರು ಕೋರಿದ್ದರು. ಆದರೆ ಅನುದಾನವನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ 75,74,148 ರು ಒದಗಿಸಬೇಕು ಎಂದು ಎಂದು ಹೊಸ ಪ್ರಸ್ತಾವನೆ ಸಲ್ಲಿಸಿದ್ದರು.

 

 

ಅದೇ ರೀತಿ ರಾಯಚೂರು ಜಿಲ್ಲಾಧಿಕಾರಿಯು 3,00,00,000, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ 2,00,00,000 ಅನುದಾನ ಕೋರಿದ್ದರು. ಆದರೆ ಈ ಅನುದಾನವು ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಈ ಇಬ್ಬರೂ ಜಿಲ್ಲಾಧಿಕಾರಿಗಳು ಕ್ರಮವಾಗಿ 3 ಕೋಟಿ ಮತ್ತು 2 ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಹೊಸ ಪ್ರಸ್ತಾವ ಸಲ್ಲಿಸಿದ್ದರು.

ಒಟ್ಟಾರೆಯಾಗಿ ಈ 26 ಜಿಲ್ಲಾಧಿಕಾರಿಗಳು 64,48,55,913 ರು ಕೋರಿದ್ದರು. ಈ ಪೈಕಿ 35,95,43,982 ರು ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಈ ಅನುದಾನದಲ್ಲಿ 30,92,98,072 ರು ಖರ್ಚಾಗಿತ್ತು. ಉಳಿದ 6,01,55,727 ರು ಲ್ಯಾಪ್ಸ್‌ ಅಗಿತ್ತು. ಹೀಗಾಗಿ ಇನ್ನೂ 33,67,57,841 ರು ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.

Hot this week

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

39,437 ಕೋಟಿ ರು ಸಾರ್ವಜನಿಕ ವೆಚ್ಚ; ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಯೋಜನೆಯಲ್ಲಿ ಅಕ್ರಮ ಆರೋಪ, ಸಿಬಿಐ ತನಿಖೆಗೆ ಕೇಂದ್ರ ಸಚಿವೆ ಪತ್ರ

ಬೆಂಗಳೂರು; 39,437 ಕೋಟಿ ಸಾರ್ವಜನಿಕ ವೆಚ್ಚವನ್ನು ಒಳಗೊಂಡಿರುವ ಸಮಗ್ರ ಘನ ತ್ಯಾಜ್ಯ...

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...
Please Scan to make Your Contribution

Topics

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

Related Articles

Popular Categories

error: Content is protected !!