ಬೆಂಗಳೂರು; ಸಿದ್ದರಾಮಯ್ಯ ಅವರ ಮೊದಲ ಅವಧಿ, ಆ ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೊಂಡಿದ್ದ ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಗಳು ಪರಿಶಿಷ್ಟ ಸಮುದಾಯದ ರೈತ ಫಲಾನುಭವಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ತಲುಪಿರಲಿಲ್ಲ. ಅಲ್ಲದೇ ಈ ಯೋಜನೆಗೆ ಫಲಾನುಭವಿಗಳಾಗಿ ಆಯ್ಕೆಯಾಗಲು ಸಾಮಾನ್ಯ ವರ್ಗದವರಿಗಿಂತಲೂ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು.
ಈ ಯೋಜನೆಗಳಿಗೆ ಆಯ್ಕೆ ಮಾಡಲು ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಗಿಂತಲೂ ಸಾಮಾನ್ಯ ವರ್ಗದ ಫಲಾನುಭವಿಗಳ ಪರವಾಗಿ ಹೆಚ್ಚಿನ ಸಂಖ್ಯೆಯ ಚುನಾಯಿತ ಜನಪ್ರತಿನಿಧಿಗಳು ಪ್ರಭಾವ ಬೀರಿದ್ದರು ಎಂಬ ಸಂಗತಿಯನ್ನು ಕೃಷಿ ತಂತ್ರಜ್ಞರ ಸಂಸ್ಥೆಯ ಮೌಲ್ಯಮಾಪನ ವರದಿಯು ಬಹಿರಂಗಪಡಿಸಿದೆ.
ಕರ್ನಾಟಕದಲ್ಲಿ 2017-18ರಿಂದ 2019-20ರವರೆಗಿನ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಬುಡಕಟ್ಟು ಉಪ ಯೋಜನೆಗಳ (ಟಿಎಸ್‌ಪಿ) ಚಟುವಟಿಕೆಗಳಡಿಯಲ್ಲಿ ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆ, ಹೊಸ ಬೆಳೆ ವಿಮಾ ಯೋಜನೆ ಕೃಷಿ ಯಾಂತ್ರೀಕರಣ, ಪಾಲಿಹೌಸ್ ಮತ್ತು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಯೋಜನೆಗಳ ಅನುಷ್ಠಾನದಿಂದ ರೈತರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಮೇಲಾದ ಪರಿಣಾಮಗಳ ಮೌಲ್ಯಮಾಪನ ಕುರಿತು ಕೃಷಿ ತಂತ್ರಜ್ಞರ ಸಂಸ್ಥೆಯು ಮೌಲ್ಯಮಾಪನ ನಡೆಸಿತ್ತು.

ಈ ವರದಿಯನ್ನು 2026ರ ಮಾರ್ಚ್‌ನಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರಕ್ಕೆ ಸಲ್ಲಿಸಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಯ ಚಟುವಟಿಕೆಗಳ ಕುರಿತು ರಾಜ್ಯದ ಹಲವೆಡೆ ಮೌಲ್ಯಮಾಪನ, ಫಲಾನುಭವಿಗಳ ಸಂದರ್ಶನ ಮತ್ತು ಯೋಜನೆ ಅನುಷ್ಠಾನಗೊಂಡಿರುವ ಸ್ಥಳಗಳಿಗೆ ಭೌತಿಕ ತಪಾಸಣೆ ನಡೆಸಿದ ನಂತರ ಈ ವರದಿಯನ್ನು ಕೃಷಿ ತಂತ್ರಜ್ಞರ ಸಂಸ್ಥೆಯು ಸಿದ್ಧಡಿಸಿತ್ತು.
ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಗಳ ಘಟಕಗಳನ್ನು ಫಲಾನುಭವಿಗಳಿಗೆ ಮಂಜೂರಾತಿಯ ಪ್ರಕ್ರಿಯೆಯಲ್ಲಿ ಶಾಸಕರು, ಜಿಲ್ಲಾ ಪಂಚಾಯ್ತಿ ಸದಸ್ಯರು ಸ್ಥಳೀಯ ಸರ್ಕಾರದ ಮೇಲೆ ಹೆಚ್ಚಿನ ಪ್ರಭಾವ (ಶೇ.27.43) ಬೀರಿದ್ದಾರೆ. ಅದರಲ್ಲೂ ಸಾಮಾನ್ಯ ವರ್ಗದ ಫಲಾನುಭವಿಗಳ ಪರವಾಗಿಯೇ (ಶೇ. 43.00) ಅತ್ಯಧಿಕ ಪ್ರಭಾವ ಬೀರಿದ್ದರು.

ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುಂಪುಗಳಲ್ಲಿನ ಫಲಾನುಭವಿಗಳ ಪರವಾಗಿ ಶೇ.22.82 ಮತ್ತು ಶೇ. 19.26 ಪ್ರಭಾವ ಬೀರಿದ್ದರು ಮೌಲ್ಯಮಾಪನ ವರದಿಯಿಂದ ತಿಳಿದು ಬಂದಿದೆ.

ಅದೇ ರೀತಿ ಶಾಸಕರು ಸಹ ಶೇ. 20.11ರಷ್ಟು ಫಲಾನುಭವಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಈ ಪೈಕಿ ಸಾಮಾನ್ಯ ವರ್ಗದ ಶೇ. 36.80, ಎಸ್‌ಟಿ ಗುಂಪಿನ ಮೇಲೆ ಶೇ. 16.94, ಎಸ್ ಸಿ ಗುಂಪಿನ ಮೇಲೆ ಶೇ. 10.36ರಷ್ಟು ಪ್ರಭಾವ ಬೀರಿದ್ದಾರೆ. ಸ್ಥಳೀಯ ನಾಯಕರು ಒಟ್ಟಾರೆ ಶೇ. 14.71ರಷ್ಟು ಪ್ರಭಾವ ಬೀರಿದ್ದರು ಎಂದು ಮೌಲ್ಯಮಾಪನ ವರದಿಯಲ್ಲಿ ವಿವರಿಸಿದೆ.

ಚುನಾಯಿತ ಜನಪ್ರತಿನಿಧಿಗಳು ಪ್ರಭಾವ ಬೀರಿದ ನಂತರವೂ ಫಲಾನುಭವಿಗಳು ಅನುಷ್ಠಾನ ಇಲಾಖೆಗಳಿಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಅದರಲ್ಲಿಯೂ ಪರಿಶಿಷ್ಟ ಪಂಗಡದ ಫಲಾನುಭವಿಗಳು ಅತೀ ಹೆಚ್ಚು ಎಂದರೇ ಶೇ. 66.59ರಷ್ಟು ಇದೆ. ಪರಿಶಿಷ್ಟ ಜಾತಿ ಫಲಾನುಭವಿಗಳು ಶೇ. 50.22ರಷ್ಟಿದೆ. ಇವರು ನಾಲ್ಕಕ್ಕೂ ಹೆಚ್ದು ಬಾರಿ ಭೇಟಿ ನೀಡಿದ್ದರು ಎಂದು ಮೌಲ್ಯಮಾಪನ ತಂಡವು ಅಧ್ಯಯನ ವೇಳೆ ಕಂಡುಕೊಂಡಿರುವುದು ವರದಿಯಿಂದ ತಿಳಿದು ಬಂದಿದೆ.

ಹಾಗೆಯೇ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸುಧಾರಿತ ಬೀಜಗಳು ಲಭ್ಯವಾಗಿರಲಿಲ್ಲ. ಇದು ಶೇ. 73.00 ರಷ್ಟು ಫಲಾನುಭವಿಗಳ ಮೇಲೆ ಪರಿಣಾಮ ಬೀರಿತ್ತು. ಸಾಮಾನ್ಯ ವರ್ಗದ ಶೇ. 65, ಪರಿಶಿಷ್ಟ ಪಂಗಡದ ಶೇ. 62.65ರಷ್ಟು ಫಲಾನುಭವಿಗಳಿಗೆ ಸುಧಾರಿತ ಬೀಜಗಳು ಲಭ್ಯವಾಗಿರಲಿಲ್ಲ. ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸುಧಾರಿತ ಬೆಳೆ ಮಾದರಿಗಳ ಬಗ್ಗೆ ಜ್ಞಾನದ ಕೊರತೆಯಿದೆ. ಶೆ. 65.25ರಷ್ಟು ಫಲಾನುಭವಿಗಳಿಗೆ ಹಣಕಾಸಿನ ನಿರ್ಬಂಧವೂ ಎದುರಾಗಿತ್ತು ಎಂದು ಅಧ್ಯಯನ ತಂಡವು ಮೌಲ್ಯಮಾಪನ ವರದಿಯಲ್ಲಿ ವಿವರಿಸಿದೆ.

ಅಂತರ್ಜಲ ಮಟ್ಟ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸಾಕಷ್ಟು ಹಣದ ಕೊರತೆಯನ್ನು ಎದುರಿಸಿದ್ದರು. ಈ ಪ್ರಮಾಣವು ಪರಿಶಿಷ್ಟ ಜಾತಿ ಫಲಾನುಭವಿಗಳಲ್ಲಿ ಶೇ. 41.32ರಷ್ಟಿತ್ತು. ಹಾಗೆಯೇ ಪರಿಶಿಷ್ಟ ಸಮುದಾಯದ ಫಲಾನುಭವಿಗಳು ಆರಂಭಿಕ ಷೇರು ಮೊತ್ತವನ್ನೂ ಹೊಂದಿಸಲು ಸಶಕ್ತರಾಗಿರಲಿಲ್ಲ. ಇದಕ್ಕೆ ವಿಭಜಿತ ಭೂ ಹಿಡುವಳಿಗಳ ಕೊರತೆಯೂ ಕಾರಣವಾಗಿತ್ತು. ಸಬ್ಸಿಡಿ ಮೊತ್ತಗಳು ತಡವಾಗಿ ವಿತರಣೆಯಾಗಿವೆ. ಈ ವಿಚಾರದಲ್ಲಿ ಸಾಮಾನ್ಯ ವರ್ಗಕ್ಕಿಂತಲೂ ಹೆಚ್ಚಿನ ಸಮಸ್ಯೆಗಳನ್ನು ಪರಿಶಿಷ್ಟ ಸಮುದಾಯದ ಫಲಾನುಭವಿಗಳು ಎದುರಿಸಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅನಿಯಮಿತ ವಿದ್ಯುತ್ ಪೂರೈಕೆ, ನಂತರದಲ್ಲಿ ನೀರಿನ ಇಳುವರಿಯಲ್ಲಿ ಕುಂಠಿತ, ಕಡಿಮೆ ನೀರಿನ ಒತ್ತಡ, ಡ್ರಿಪ್ಪರ್‍ಗಳು, ಸ್ಪ್ರಿಂಕ್ಲರ್ ಘಟಕಗಳಲ್ಲಿನ ಅಡಚಣೆಗಳು, ಕಾರ್ಮಿಕರ ಕೊರತೆಯಂತಹ ಸಮಸ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಮಾನ್ಯ ವರ್ಗದವರಿಗಿಂತಲೂ ಪರಿಶಿಷ್ಟ ಸಮುದಾಯದ ಫಲಾನುಭವಿಗಳು ಎದುರಿಸಿದ್ದರು.

ಈ ಯೋಜನೆಯಡಿ ವಿತರಿಸಿದ್ದ ವಸ್ತುಗಳ ಗುಣಮಟ್ಟವೂ ಮಧ್ಯಮ ಗುಣಮಟ್ಟದಿಂದ ಕೂಡಿದ್ದವು. ಶೇ. 13.45ರಷ್ಟು ಮಂದಿ ಫಲಾನುಭವಿಗಳು ಕಡಿಮೆ ಗುಣಮಟ್ಟದ ಶ್ರೇಣಿಯಿಂದ ಕೂಡಿದ್ದವು ಎಂದು ಮೌಲ್ಯಮಾಪಕರಿಗೆ ವಿವರಿಸಿದ್ದರು.

ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಗೆ ಮಾರ್ಜಿನ್ ಹಣವನ್ನು ಸರಿ ಹೊಂದಿಸಲು ಸಾಲ ಅಥವಾ ಅನುದಾನವನ್ನು ನೀಡಿರಲಿಲ್ಲ. ಇದರಿಂದಾಗಿ ಈ ಯೋಜನೆಯ ಲಾಭವನ್ನು ಪಡೆದವರ ಸಂಖ್ಯೆ ಕಡಿಮೆ ಇದೆ. ಅದೇ ರೀತಿ ಈ ಸಮುದಾಯದ ಕುಟುಂಬಗಳಿಗೆ ವಿಶೇಷವಾಗಿ ನೀರಾವರಿ ಸೌಲಭ್ಯಗಳನ್ನು ವಿಸ್ತರಿಸಲು ನಿರೀಕ್ಷಿತ ಪ್ರಮಾಣದಲ್ಲಿ ಹೂಡಿಕೆ ಇರಲಿಲ್ಲ.
ಕೃಷಿ ಯಾಂತ್ರೀಕರಣ ಯೋಜನೆಯ ಎಸ್‌ಸಿಎಸ್‌ಪಿ ಟಿಎಸ್‌ಪಿ ಮೌಲ್ಯಮಾಪನ
ಕೃಷಿ ಚಟುವಟಿಕೆಗಳಲ್ಲಿ ಪುರುಷ ಫಲಾನುಭವಿಗಳು ಹೆಚ್ಚಿನ ಪ್ರಾಬಲ್ಯ ಹೊಂದಿದ್ದಾರೆ. ಮಹಿಳೆಯರ ಪ್ರಮಾಣ ಶೇ. 13.23ರಷ್ಟಿದೆ. ಹೀಗಾಗಿ ಈ ಯೋಜನೆಯಲ್ಲಿ ಮಹಿಳಾ ಫಲಾನುಭವಿಗಳು ಸೀಮಿತ ಭಾಗವಹಿಸಿಕೆ ಕಂಡು ಬಂದಿದೆ.

ಸಾಲ ಮರುಪಾವತಿಯು ಫಲಾನುಭವಿಗಳೀಗೆ ಮತ್ತು ಫಲಾನುಭವಿಗಳಲ್ಲದವರಿಗೆ ದೊಡ್ಡ ವೆಚ್ಚವಾಗಿತ್ತು. ಪರಿಶಿಷ್ಟ ಸಮುದಾಯದ ಫಲಾನುಭವಿಗಳು ಸಾಲ ಮರುಪಾವತಿಗೆ ಶೇ. 32.11ರಷ್ಟು ಹೆಚ್ಚು ಖರ್ಚು ಮಾಡಿದ್ದರು. ಕೃಷಿ ಯಾಂತ್ರೀಕರಣದಲ್ಲಿ ಲಿಂಗ ಸಮಾನತೆ ಅಷ್ಟಾಗಿ ಕಂಡು ಬಂದಿಲ್ಲ. ಪರಿಶಿಷ್ಟ ಸಮುದಾಯದ ರೈತರಿಗೆ ಕೃಷಿ ಯಾಂತ್ರೀಕರಣ ತರಬೇತಿ ಹೆಚ್ಚಿಸಿಲ್ಲ. ಹೀಗಾಗಿ ಕೌಶಲ್ಯ ಅಭಿವೃದ್ದಿ ಮತ್ತು ಉತ್ಪಾದಕತೆಯೂ ಹೆಚ್ಚಿರಲಿಲ್ಲ. ಸುಧಾರಿತ ತಂತ್ರಜ್ಞಾನ ಅಳವಡಿಸಲು ಸರ್ಕಾರದ ಯಾಂತ್ರೀಕರಣದ ಯೋಜನೆಗಳ ಬಗೆಗೆ ಹೆಚ್ಚಿನ ಅರಿವು ಮೂಡಿಸಿರಲಿಲ್ಲ.

ಹಾಗೆಯೇ ಪರಿಶಿಷ್ಟ ಸಮುದಾಯದ ಸಣ್ಣ ಹಿಡುವಳಿದಾರ ರೈತರಿಗೆ ಅಗತ್ಯವಾದ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಹಣಕಾಸಿನ ಬೆಂಬಲವು ಅಷ್ಟಾಗಿ ಇರಲಿಲ್ಲ.

ಹೊಸ ಬೆಳೆ ವಿಮೆ
ಈ ಯೋಜನೆಗೆ ಸಂಬಂಧಿಸಿದಂತೆ ಮೌಲ್ಯಮಾಪನ ತಂಡವು 2017-18, 2018-19, 2019-20 ಈ ಮೂರು ವರ್ಷಗಳಲ್ಲಿ ರಾಜ್ಯದ 10 ಕೃಷಿ ಹವಾಮಾನ ವಲಯಗಳ 10 ಜಿಲ್ಲೆಗಳಲ್ಲಿ ಮೌಲ್ಯಮಾಪನ ನಡೆಸಿತ್ತು.

ಇದರಲ್ಲಿ ಎಸ್‌ಸಿಪಿ ಅಡಿಯಲ್ಲಿ 1,04,669 ಫಲಾನುಭವಿಗಳು ಮತ್ತು ಇವರಿಗೆ 3,473.53 ಲಕ್ಷ ವೆಚ್ಚವಾಗಿತ್ತು. ಹಾಗೆಯೇ ಟಿಎಸ್‌ಪಿ ಅಡಿಯಲ್ಲಿ 88,529 ಫಲಾನುಭವಿಗಳೀಗೆ 3,190.69 ಲಕ್ಷ ವೆಚ್ಚ ಮಾಡಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಹಾಲು ಉತ್ಪಾದಕರ ಪ್ರೋತ್ಸಾಹ ಧನ ಯೋಜನೆ- ಪರಿಶಿಷ್ಟರಿಗೆ ಗೌಣ
ಪರಿಶಿಷ್ಟ ಸಮುದಾಯಗಳಿಗೆ ಈ ಯೋಜನೆಯ ಬಗ್ಗೆ ತಿಳಿವಳಿಕೆ ಇರಲಿಲ್ಲ. ಕೃಷಿ ನೀರಾವರಿ ಮತ್ತು ಆದಾಯ ಉತ್ಪಾದಿಸುತ್ತಿರುವ ಯೋಜನೆಗಳು ಎಸ್ ಸಿ ಮತ್ತು ಎಸ್ ಟಿ ಫಲಾನುಭವಿಗಳಿಗೆ ಕಡಿಮೆ ತಲುಪಿದ್ದವು.

ಪಶು ಸಂಗೋಪನಾ ಇಲಾಖೆಯಲ್ಲಿ 2020-21ರಲ್ಲಿ ಎಸ್‌ಸಿಪಿ ಹಂಚಿಕೆ ಪ್ರಕಾರ ಕನಿಷ್ಟ ಅಂದರೇ 99.66 ಕೋಟಿ ಮತ್ತು 2018-19ರಲ್ಲಿ ಗರಿಷ್ಠ 239.31 ಕೋಟಿ, ಅದೇ ಅವಧಿಯಲ್ಲಿ ವೆಚ್ಚವು 2020-21ರಲ್ಲಿ ಕನಿಷ್ಟ 91.89 ಕೋಟಿ ಮತ್ತು 2018-19ರಲ್ಲಿ ಗರಿಷ್ಠ 235.83 ಕೋಟಿ ವೆಚ್ಚ ಹಂಚಿಕೆ ಅನುಪಾತವು 0.88ರಿಂದ 0.98ರ ಮಧ್ಯೆ ಬದಲಾಗಿತ್ತು.

2016-17ರಿಂದ 2020-21ರವರೆಗಿನ ವಿಶೇಷ ಘಟಕ ಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅಡಿಯಲ್ಲಿ ಪಶು ಸಂಗೋಪನೆ ಇಲಾಖೆಯಲ್ಲಿ ಹಣಕಾಸಿನ ಪ್ರವೃತ್ತಿಗಳ ಪೈಕಿ ಅನುದಾನ ಹಂಚಿಕೆ ಮತ್ತು ಹಣದ ಬಿಡುಗಡೆ ಮತ್ತು ವೆಚ್ಚದ ಏರಿಳಿತಳನ್ನು ಕಂಡಿದ್ದವು.

2016-17ರಿಂದ ಟಿಎಸ್‌ಪಿ ಹಂಚಿಕೆಯು 59.25 ಕೋಟಿಗೆ ಏರಿಕೆಯಾಗಿತ್ತು. 2018-19ರಲ್ಲಿ 115.8 ಕೋಟಿಗೆ ಇಳಿಕೆಯಾಗಿತ್ತು. 2020-21ರಲ್ಲಿ 54.57 ಕೋಟಿ ಅಂದರೇ ಕನಿಷ್ಟ 0.92ರಷ್ಟು ಬೆಳವಣಿಗೆ ಹೊಂದಿತ್ತು.

ರಾಜ್ಯದಲ್ಲಿ ಹಾಲು ಉತ್ಪಾದಕರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಎಸ್‌ಸಿಪಿ ಅಡಿಯಲ್ಲಿ 2018-19ರಲ್ಲಿ ಗರಿಷ್ಠ ಹಂಚಿಕೆಯಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಹಂಚಿಕೆಯಲ್ಲಿಯೇ ಕುಸಿತವಾಗಿತ್ತು. ಟಿಎಸ್‌ಪಿ ಯೋಜನೆಯೂ ಸಹ ಇದೇ ಮಾದರಿಯಲ್ಲಿತ್ತು. ಅದೇ ರೀತಿ ಹಾಲು ಪ್ರೋತ್ಸಾಹ ಧನ ಫಲಾನುಭವಿಗಳ ಪ್ರವೃತ್ತಿಯು 2017-18ನೇ ಸಾಲಿನಲ್ಲಿ 7,080.98 ರೈತರು ಹೆಚ್ಚಿನ ಪ್ರಯೋಜನ ಪಡೆದಿದ್ದರೇ 2018-19ರಲ್ಲಿ ಇದು 6,77,066ಕ್ಕೆ ಇಳಿದಿತ್ತು. ಇದುದ ಫಲಾನುಭವಿಗಳಲ್ಲಿ ಶೆ. 4.3ರಷ್ಟು ಕುಸಿತವನ್ನು ಸೂಚಿಸಿದೆ ಎಂದು ವರದಿಯಲ್ಲಿ ವಿವರಿಸಿದೆ.

2017-18ಕ್ಕೆ ಹೋಲಿಸಿದರೇ 2018-19 ಮತ್ತು 2019-20ರಲ್ಲಿ 14 ಮತ್ತು 16 ಜಿಲ್ಲೆಗಳಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. 2018-19ರ ಹಿಂಗಾರಿನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿರುವ 156 ತಾಲೂಕುಗಳಲ್ಲಿ ಬರಗಾಲವಿತ್ತು. ಹೀಗಾಗಿ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಕೆ ಆಗಿರಬಹುದು. ಆದ್ದರಿಂದ ಫಲಾನುಭವಿಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತ್ತು.

ಟಿಎಸ್‌ಪಿಯಲ್ಲಿ ಎಸ್‌ಸಿಪಿಗೆ ಹೋಲಿಸಿದರೆ ಫಲಾನುಭವಿಗಳ ಸಂಖ್ಯೆಯಲ್ಲಿ ಬಹಳ ಕಡಿಮೆ ಇಳಿಕೆ ಕಂಡುಬಂದಿದೆ. ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ ಸಹ 16 ಮತ್ತು 14 ಜಿಲ್ಲೆಗಳು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ಹೊಂದಿದೆ. ಆದರೂ ಒಟ್ಟಾರೆ ಕೊರತೆ ಕಂಡು ಬಂದಿತ್ತು.
2017-18ರಲ್ಲಿ 4,23,445 ಫಲಾನುಭವಿಗಳಿದ್ದರೇ 2018-19 ಮತ್ತು 2019-20ರಲ್ಲಿ ಇದು 4,22,626 ಮತ್ತು 4,15,266 ಇತ್ತು. 2018-19ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಡಿಮೆ ಹೆಚ್ಚಳ (ಶೇ 0.24) ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಅಂಧರೇ ಶೆ. 206.45ರಷ್ಟು ಹೆಚ್ಚಳವಾಗಿತ್ತು. 2019-20ರಲ್ಲಿ ಬೀದರ್ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕ್ರಮವಾಗಿ ಶೆ. 0.84 ಮತ್ತು ಶೇ. 70ರಷ್ಟು ಹೆಚ್ಚಳ ದಾಖಲಾಘಿದೆ. ಎಸ್‌ಸಿ ಜನಸಂಖ್ಯೆಗಿಂತ ಎಸ್ ಟಿ ಜನಸಂಖ್ಯೆಯಲ್ಲಿ ಕಂಡು ಬರುವ ಉನ್ನತ ಶಿಕ್ಷಣ ಮಟ್ಟಗಳಿಂದಾಗಿ ಎಸ್‌ಸಿಪಿಯಲ್ಲಿ ಬಹಳ ಕಡಿಮೆ ವ್ಯತ್ಯಾಸ ಇರಬಬಹುದು ಎಂದು ಮೌಲ್ಯಮಾಪನ ತಂಡವು ವರದಿಯಲ್ಲಿ ವಿವರಿಸಿದೆ.
ಪಾಲಿಹೌಸ್ ಯೋಜನೆ ಭೌತಿಕ ಮತ್ತು ಆರ್ಥಿಕ ಪ್ರಗತಿ
ಪಾಲಿಹೌಸ್ ಯೋಜನೆಯಡಿ 2016-17ರಲ್ಲಿ 41.64 ಕೋಟಿ ರು ನೀಡಿದ್ದರೇ 2018-19ರಲ್ಲಿ 88.52 ಕೋಟಿಗೆ ಏರಿತ್ತು. ಆದರೆ ನಂತರದ ವರ್ಷಗಳಲ್ಲಿ ಹಂಚಿಕೆಯು ತೀವ್ರ ಕುಸಿತ ಕಂಡಿದೆ. 2020-21ರಲ್ಲಿ ಶೇ. 33.31ರಷ್ಟು ಕುಗ್ಗಿತ್ತು.
ಟಿಎಸ್‌ಪಿ ವೆಚ್ಚವು ಸಹ ಆರಂಭದಲ್ಲಿ ಬೆಳವಣಿ ಮಾದರಿಯಲ್ಲಿತ್ತು. 2016-17ರಲ್ಲಿ 38.52 ಕೋಟಿ ಯಿಂಧ 2018-19ರಲ್ಲಿ 63.11 ಕೋಟಿಗೆ ಏರಿತ್ತು. ಇದು ಶೇ.63.84ರಷ್ಟು ಏರಿಕೆ ಕಂಡು ಬಂದಿತ್ತು.

ಆದರೂ 2019-20ರಿಂದ ವೆಚ್ಚವು ಇಳಿಕೆ ಪ್ರವೃತ್ತಿ ಕಂಡುಬಂದಿತ್ತು. ಇದುಇ ಶೇ. 40.65ರಷ್ಟು ಇಳಿಕೆಯಾಗಿತ್ತು. ನಂತರದ ವರ್ಷಗಳಲ್ಲಿಲ ನಿಯೋಜಿಸಿದ್ದ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕಡಿಮೆ ಸಾಮರ್ಥ್ಯ ಹೊಂದಿತ್ತು ಎಂದು ಇದು ಸೂಚಿಸಿದೆ.

ಮೀಸಲಿಟ್ಟ ಬಜೆಟ್‌ಗೆ ಖರ್ಚು ಮಾಢಿದ ಮೊತ್ತವನ್ನು ಹೋಲಿಸುವ ವೆಚ್ಚ ಹಂಚಿಕೆ ಅನುಪಾತವು ವಿಶೇಷ ಘಟಕ ಯೋಜನೆಗೆ ಹೋಲಿಸಿದರೆ ಟಿಎಸ್‌ಪಿಯಲ್ಲಿ ತುಲನಾತ್ಮಕವಾಗಿ ಕಡಿಮೆಯಾಗಿತ್ತು.




