Saturday | March 28, 2026 |

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

Support THE-FILE

spot_img

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು  ಹಂಚಿಕೆ ಮಾಡುತ್ತಾರೆ ಎಂದು ಅಳಂದ ಶಾಸಕ ಬಿ ಆರ್ ಪಾಟೀಲ್ ಅವರು ಮಾಡಿದ್ದ ಆರೋಪವು  ಇದೀಗ ಲೋಕಾಯುಕ್ತ ತನಿಖೆಯಲ್ಲಿಯೂ ಸಾಬೀತಾಗಿದೆ.

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫ್‌ರಾಜ್‌ ಖಾನ್ ಮತ್ತು ಬಿ ಆರ್ ಪಾಟೀಲ್ ಅವರ ನಡುವೆ ನಡೆದಿದ್ದ ಸಂಭಾಷಣೆಯ ಆಧರಿಸಿ ತೀರ್ಥಹಳ್ಳಿಯ ಹಾರೋಗುಳಿಗೆಯ ಹೆಚ್‌ ಎಂ ವೆಂಕಟೇಶ್‌ ಅವರು ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಿರುವ ಲೋಕಾಯುಕ್ತ ತನಿಖಾ ತಂಡವು ವಿವಿಧ ವಸತಿ ಯೋಜನೆಗಳಲ್ಲಿ ಮನೆ ಹಂಚಿಕೆ  ಮತ್ತು ಈ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರಗಳು ನ್ಯೂನತೆಗಳನ್ನು ಪ್ರಾಥಮಿಕ ಹಂತದ ತನಿಖೆಯಲ್ಲಿ ದೃಢಪಡಿಸಿದೆ.

ಈ ಸಂಬಂಧ ಲೋಕಾಯುಕ್ತ ತನಿಖಾ ತಂಡವು ಎಸ್ಪಿಗೆ 2025ರ ಡಿಸೆಂಬರ್ 6ರಂದೇ ತನಿಖಾ ವರದಿ ಸಲ್ಲಿಸಿದೆ. ಈ  ತನಿಖಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲೋಕಾಯುಕ್ತ ತನಿಖಾ ತಂಡದ ಶೋಧನಾಧಿಕಾರಿ ಹೆಚ್‌ ಜೆ ತಿಪ್ಪೇಸ್ವಾಮಿ ಅವರು 2025ರ ನವೆಂಬರ್‍‌ 25ರಂದೇ ರಾಜೀವ್ ಗಾಂಧಿ ವಸತಿ ನಿಗಮದದಲ್ಲಿ ಶೋಧನಾ ಕಾರ್ಯ ಕೈಗೆತ್ತಿಕೊಂಡಿದ್ದರು.

 

 

ಈ ವೇಳೆ ವಿವಿಧ ವಸತಿ ಯೋಜನೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿವರ, ನಿವೇಶನ ರಹಿತರ ಪಟ್ಟಿ ನಿರ್ವಹಣೆ, ವಾರ್ಷಿಕ ಪರಿಷ್ಕರಣೆ, ಯೋಜನೆಯ ಮಾರ್ಗಸೂಚಿಗಳೂ, ಫಲಾನುಭವಿಗಳ ಉಳಿತಾಯ ಖಾತೆಗೆ ಹಣ ಬಿಡುಗಡೆ ಕುರಿತಾದ ಸಮಗ್ರ ಮಾಹಿತಿಯನ್ನು  ಕಲೆ ಹಾಕಿರುವುದು ತನಿಖಾ ವರದಿಯಿಂದ ತಿಳಿದು ಬಂದಿದೆ.

 

 

 

ವಿಶೇಷವಾಗಿ ದೂರಿನ ಪ್ರಮುಖ ಕೇಂದ್ರ ಬಿಂದುವಾದ ಕಲ್ಬುರ್ಗಿ ಜಿಲ್ಲೆಯ ಅಳಂದ ತಾಲೂಕಿಗೆ ಸಂಬಂಧಿಸಿದಂತೆ ಸಮಗ್ರ ದಾಖಲಾತಿಗಳನ್ನು ಶೋಧಿಸಿದ್ದಾರೆ. 2023-24ನೇ ಸಾಲಿನಲ್ಲಿ ಅಳಂದ ತಾಲೂಕಿಗೆ ಯಾವುದೇ ಗುರಿ ನಿಗದಿಯಾಗಿರಲಿಲ್ಲ. 2022-23 ಮತ್ತು 2024-25ನೇ ಸಾಲಿನಲ್ಲಿ ಅಳಂದ ತಾಲೂಕಿಗೆ ಸಂಬಂಧಿಸಿದ ಗ್ರಾಮ ಪಂಚಾಯ್ತಿಗಳಿಗೆ ಗುರಿ ನೀಡಲಾಗಿತ್ತು.  ಇದರ ಪ್ರಕಾರ 2022-23ನೇ ಸಾಲಿನಲ್ಲಿ 188 ಮನೆಗಳ ಹಂಚಿಕೆಗೆ ಗುರಿ ನಿಗದಿಪಡಿಸಿತ್ತು.  2024-25ನೇ ಸಾಲಿನಲ್ಲಿ 758 ಮನೆಗಳ ಗುರಿ ನಿಗದಿಪಡಿಸಿತ್ತು.

 

 

ಈ ಪೈಕಿ ರಾಜೀವ್‌ ಗಾಂಧಿ ವಸತಿ ನಿಗಮವು 76 ಮನೆಗಳನ್ನು ಮಾತ್ರ ಮಂಜೂರು ಮಾಡಿತ್ತು. ಇನ್ನೂ 225 ಬಾಕಿ ಉಳಿಸಿಕೊಂಡಿತ್ತು. ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 193, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 57 ಮನೆಗಳ ಗುರಿ ನಿಗದಿಪಡಿಸಿತ್ತು. ಈ ಪೈಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 189 ಮನೆಗಳ ಆಯ್ಕೆಗೆ ಬಾಕಿ ಇತ್ತು ಎಂಬುದು ಲೋಕಾಯುಕ್ತ ತನಿಖಾ ತಂಡದ ತನಿಖಾ ವರದಿಯಿಂದ ತಿಳಿದು ಬಂದಿದೆ.

ದರ್ಗ ಶಿರೂರ್, ದಂಗಾಪುರ, ಕವಲಗ, ಮಡಿಯಾಳ, ಮುನ್ನಹಳ್ಳಿ ಗ್ರಾಮ ಪಂಚಾಯ್ತಿಗಳಿಗೆ 682 ಮನೆಗಳ ಗುರಿ ನಿಗದಿಪಡಿಸಿತ್ತು. ನಂತರ ಜಿಡಗ ಗ್ರಾಮ ಪಂಚಾಯ್ತಿಗೆ 2024ರ ಡಿಸೆಂಬರ್‍‌ 4ರಂದು 76 ಮನೆಗಳ ಗುರಿ ನಿಗದಿಪಡಿಸಿರುವುದು ಕಂಡು ಬಂದಿರುತ್ತದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ ಅಳಂದ ತಾಲೂಕಿನ ದರ್ಗ ಶಿರೂರ್, ದಂಗಾಪುರ, ಕವಲಗ, ಮಡಿಯಾಳ, ಮುನ್ನಹಳ್ಳಿ ಗ್ರಾಮ ಪಂಚಾಯ್ತಿಗಳಿಗೆ ಒಟ್ಟಾರೆ 292 ಮನೆಗಳ ಗುರಿ ನಿಗದಿಪಡಿಸಿತ್ತು. ಈ ಪೈಕಿ 24 ಮನೆಗಳಿಗೆ ಮಾತ್ರ ಅನುಮೋದನೆ ದೊರೆತಿತ್ತು.

 

 

ಈ ಪೈಕಿ ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ 62 ಅರ್ಜಿಗಳು ಬಾಕಿ ಇದ್ದವು. ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ 81, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 30 ಮನೆಗಳ ಗುರಿ ನಿಗದಿಪಡಿಸಿತ್ತು. ಈ ಪೈಕಿ ಆಯ್ಕೆಯಲ್ಲಿಯೇ 95 ಅರ್ಜಿಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಬಾಕಿ ಇದ್ದವು. ಮತ್ತು ಜಿಡಗ ಗ್ರಾಮ ಪಂಚಾಯ್ತಿಗೆ 2024ರ ಡಿಸೆಂಬರ್‍‌ 4ರಂದು 24 ಮನೆಗಳ ಗುರಿ ನಿಗದಿಯಾಗಿತ್ತು.

 

 

ಈ ಪಂಚಾಯ್ತಿಗಳಲ್ಲಿ  ಮನೆಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2025ರ ಆಗಸ್ಟ್‌ 8ರಂದೇ ತನಿಖಾ ವರದಿ ಸಲ್ಲಿಸಿದ್ದರು. ಈ ಪೈಕಿ ಮುನ್ನಳ್ಳಿ, ಕಡಗಂಚಿ, ಮಾಡ್ಯಾಳು ಗ್ರಾಮ ಪಂಚಾಯ್ತಿಗಳಲ್ಲಿ  ಸರ್ಕಾರದ ಮಾನದಂಡಗಳಂತೆ ವಸತಿ ಹಂಚಿಕೆ ಮಾಡಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತನಿಖಾ ವರದಿ ಪ್ರಕಾರ ದರ್ಗಾ ಶಿರೂರು ಗ್ರಾಮ ಪಂಚಾಯ್ತಿಯಲ್ಲಿ  ಗ್ರಾಮ ಸಭೆ ನಡೆಸಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿಲ್ಲ. ಕವಲಗ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮನೆಗಳನ್ನು ನಿಯಮಾನುಸಾರ ಹಂಚಿಕೆ ಮಾಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಅವರೂ ಸ್ಪಷ್ಟ ಆಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ.

ಉಳಿದಂತೆ ದಂಗಾಪುರ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದಂತೆ ಪಿಡಿಒ ಅವರ ಹೇಳಿಕೆ, ಗ್ರಾಮ ಪಂಚಾಯ್ತಿ ಸದಸ್ಯರ ಲಿಖಿತ ದೂರು, ಗ್ರಾಮ ಸಭೆ ನಡೆದ ವಿಡಿಯಿಓ ಚಿತ್ರೀಕರಣವು ಅಸ್ಪಷ್ಟತೆಯಿಂದ ಕೂಡಿದೆ. ಹೀಗಾಗಿ ಸರ್ಕಾರದಿಂದ ಮಂಜೂರಾದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ನಿಯಮಾನುಸಾರ ಹಂಚಿಕೆ ಮಾಡಲಾಗಿದೆ ಎಂದು ನಿರ್ಧರಿಸುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಲೋಕಾಯುಕ್ತ ತನಿಖಾಧಿಕಾರಿಗಳ ಶೋಧನೆಯಲ್ಲಿ ಕಂಡು ಬಂದಿದ್ದೇನು?

ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‍‌ ವಿಜಯಕೃಷ್ಣ ಅವರು ಕವಲಗಾ ಗ್ರಾಮ ಪಂಚಾಯ್ತಿಯಲ್ಲಿ 2025ರ ನವೆಂಬರ್‍‌ 25ರಂದು ಶೋಧನಾ ಕಾರ್ಯ ನಡೆಸಿದ್ದರು. ಈ ವೇಳೆಯಲ್ಲಿ ಹಲವು ನ್ಯೂನತೆಗಳನ್ನು ಪತ್ತೆ ಹಚ್ಚಿದ್ದರು. ಕವಲಗಾ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದಂತೆ  2023-24ರಲ್ಲಿ ಬಸವ ವಸತಿ ಮತ್ತು ಡಾ ಅಂಬೇಡ್ಕರ್ ವಸತಿ ಯೋಜನೆಗೆ ಮನೆಗಳು ಮಂಜೂರಾಗಿರಲಿಲ್ಲ. 2024-25ರಲ್ಲಿ ಬಸವ ವಸತಿ ಯೋಜನೆಗೆ ಮನೆಗಳು ಮಂಜೂರಾಗಿಲ್ಲ. ಆದರೆ ಡಾ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಹೆಚ್ಚುವರಿಯಾಗಿ 200 ಮನೆಗಳು ಮಂಜೂರಾಗಿದ್ದವು.

 

 

ಮನೆಗಳ ಹಂಚಿಕೆ ಮಾಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲುವಾಗಿ 2025ರ ನವೆಂಬರ್‍‌ 21ರಂದು ಝಳಕಿ ಕೆ ಗ್ರಾಮದ ಭೀಮಾಶಂಕರ್ ಗುಡಿ ಬಳಿ ಗ್ರಾಮ ಸಭೆ ನಡೆಸಲಾಗಿತ್ತ. ಈ ಸಭೆಯಲ್ಲಿ 82 ಅರ್ಜಿಗಳು ಸ್ವೀಕೃತವಾಗಿದ್ದವು. ಈ ಸಭೆಯಲ್ಲಿ ಒಟ್ಟು 71 ಅರ್ಜಿಗಳನ್ನು ಆಯ್ಕೆ ಮಾಡಿ ಇನ್ನೂ 11 ಅರ್ಜಿಗಳನ್ನು ಆಯ್ಕೆಗೆ ಬಾಕಿ ಇರಿಸಿಕೊಂಡಿದ್ದನ್ನು ಶೋಧನೆ ವೇಳೆಯಲ್ಲಿ ಪತ್ತೆಯಾಗಿದೆ.

ಅದೇ ರೀತಿ 2025ರ ನವೆಂಬರ್ 24ರಂದು ಕವಲಗಾ ಗ್ರಾಮದಲ್ಲಿ ನಡೆದಿದ್ದ ಗ್ರಾಮ ಸಭೆಯಲ್ಲಿ 118 ಅರ್ಜಿಗಳು ಸ್ವೀಕೃತವಾಗಿದ್ದವು. ಆದರೆ ಯಾರೊಬ್ಬರನ್ನೂ ಆಯ್ಕೆ ಮಾಡಿರಲಿಲ್ಲ. ಹೀಗಾಗಿ 118 ಅರ್ಜಿಗಳೂ ಆಯ್ಕೆಗೆ ಬಾಕಿ ಇದ್ದವು. ಒಟ್ಟಾರೆ 200 ಅರ್ಜಿಗಳು ಸ್ವೀಕೃತವಾಗಿದ್ದರೇ ಈ ಪೈಕಿ 71 ಅರ್ಜಿಗಳನ್ನು ಮಾತ್ರ ಆಯ್ಕೆ ಮಾಡಿದ್ದ ಗ್ರಾಮ ಸಭೆಯು ಆಯ್ಕೆಗೆ ಇನ್ನೂ 129 ಅರ್ಜಿಗಳನ್ನು ಬಾಕಿ ಇರಿಸಿಕೊಂಡಿದ್ದವು.

2025ರ ನವೆಂಬರ್‍‌ 24ರಂದು ಕವಲಗಾ ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ ಬಳಿ ಗ್ರಾಮ ಸಭೆ ನಡೆಸಲಾಗಿದೆ ಎಂದು ಪಿಡಿಒ ಹೇಳಿದ್ದರು. ಈ ಸಂಬಂಧ ಲೋಕಾಯುಕ್ತ ತನಿಖಾಧಿಕಾರಿಗಳು ಗ್ರಾಮಸಭೆ ಪುಸ್ತಕವನ್ನು ಪರಿಶೀಲಿಸಿದ್ದಾರೆ. ಆದರೆ ಗ್ರಾಮ ಸಭೆಗಳ ನಡವಳಿಯನ್ನೇ ಬರೆದಿರಲಿಲ್ಲ ಎಂಬ ಸಂಗತಿಯನ್ನು  ಶೋಧನೆಯಿಂದ ಪತ್ತೆ ಹಚ್ಚಿದ್ದಾರೆ. ಆದರದೂ ಪಿಡಿಒ ಮತ್ತು ಅಧ್ಯಕ್ಷರು ಸಹಿ ಮಾಡಿದ್ದರು. 1ರಿಂದ 118ರವರೆಗೆ ಕ್ರಮ ಸಂಖ್ಯೆಗಳನ್ನು ಬರೆಯಲಾಗಿತ್ತು. ಆದರೆ ಯಾವುದೇ ಫಲಾನುಭವಿಗಳ ಹೆಸರುಗಳನ್ನು ಬರೆದಿರಲಿಲ್ಲ. ಅಲ್ಲದೇ ಮುಂದುವರೆದ ಗ್ರಾಮ ಸಭೆಗೆ ಹಾಜರಾದಂತೆ ಗ್ರಾಮಸ್ಥರ ಸಹಿಗಳನ್ನು ಪಡೆದಿರುವುದನ್ನು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಹಾಗೆಯೇ ಝಳಕಿ ಕೆ ಗ್ರಾಮದಲ್ಲಿ ನಡೆದಿದ್ದ ಗ್ರಾಮ ಸಭೆಯಲ್ಲಿನ ಹಲವು ನ್ಯೂನತೆಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತನಿಖಾಧಿಕಾರಿಗಳು ಶೋಧನೆ ಸಮಯದಲ್ಲಿ ಪಿಡಿಒ ಅವರು ತಡವಾಗಿ ಪಂಚಾಯ್ತಿಗೆ ಹಾಜರಾಗಿದ್ದರು. ಅಲ್ಲದೇ ಗ್ರಾಮ ಸಭೆಯ ನಡವಳಿಗಳನ್ನು ಬರೆದು ಗ್ರಾಮ ಸಭೆ ಪುಸ್ತಕಕ್ಕೆ ಪಿಡಿಒ ಮತ್ತು ಆಧ್ಯಕ್ಷರು ಮಾತ್ರ ಸಹಿ ಮಾಡಿದ್ದರು. ನೋಡಲ್‌ ಆಫೀಸರ್ ಸಹಿ ಮಾಡಿರಲಿಲ್ಲ.

ಈ ಪುಸ್ತಕದಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರುಗಳನ್ನು ಬರೆಯಲು ಕ್ರಮ ಸಂಖ್ಯೆ 83ರವರೆಗೆ ಮಾತ್ರ ನಂಬರ್‍‌ಗಳನ್ನು ಹಾಕಲಾಗಿತ್ತು. ಇದರಲ್ಲಿ ಕ್ರಮ ಸಂಖ್ಯೆ 01ರಿಂದ 30ರವರೆಗೆ ಫಲಾನುಭವಿಗಳ ಹೆಸರುಗಳನ್ನು ಬರೆಯಲಾಗಿತ್ತು. ನಂತರ ಕ್ರಮ ಸಂಖ್ಯೆ 31ರಿಂದ 41ರವರೆಗೆ ಮತ್ತು ಕ್ರಮ ಸಂಖ್ಯೆ 47ರಲ್ಲಿ ಫಲಾನುಭವಿಗಳ ಹೆಸರುಗಳನ್ನು ಬರೆಯದೇ ಖಾಲಿ ಸ್ಥಳ ಬಿಡಲಾಗಿತ್ತು. ಹಾಗೆಯೇ ಕ್ರಮ ಸಂಖ್ಯೆ 42ರಿಂದ 46 ಮತ್ತು 48ರಿಂದ 83ವರೆಗೆ ಫಲಾನುಭವಿಗಳ ಹೆಸರು ಮತ್ತು ಜಾತಿಗಳನ್ನು ಬರೆದಿರುವುದು ಕಂಡು ಬಂದಿದೆ.

ಅಲ್ಲದೇ ತನಿಖಾಧಿಕಾರಿಗಳು ಫಲಾನುಭವಿಗಳ ಹೇಳಿಕೆಗಳನ್ನು ಪಡೆದಿದ್ದಾರೆ. ಈ ಪೈಕಿ ಶಾಂತಯ್ಯ ಎಂಬುವರು ಗ್ರಾಮ ಪಂಚಾಯ್ತಿ ಸದಸ್ಯರಾದ ಶಂಕರೇಗೌಡ ಎಂಬುವರು ನಿಮಗೆ ಮನೆ ಹಂಚಿಕೆ ಆಗುತ್ತದೆ. ಅದಕ್ಕಾಗಿ ನೀವು 15,000 ರುಪಾಯಿ ನೀಡಬೇಕು ಎಂದು ಬೇಡಿಕೆ ಇರಿಸಿದ್ದರು. ಈ ಬೇಡಿಕೆಯಂತೆ ಶಾಂತಯ್ಯ ಅವರು 15,000 ರು.ಗಳನ್ನು ಸಂದಾಯ ಮಾಡಿದ್ದರು ಎಂದು ಹೇಳಿಕೆಯಲ್ಲಿ ವಿವರಿಸಿದ್ದರು.

ಅದೇ ರೀತಿ ಶಶಿಕಲಾ ಎಂಬುವರು ಸಹ ಗ್ರಾಮ ಪಂಚಾಯ್ತಿಯ ಹಿಂದಿನ ಸದಸ್ಯರಾದ ನಂದರಗಿ ರಾಜು ಸಾಹುಕಾರ್ ಎಂಬುವರು ಮನೆ ಹಂಚಿಕೆ ಮಾಡಲು 15,000 ರು ಬೇಡಿಕೆ ಇರಿಸಿದ್ದರು. ಈ ಹಣವನ್ನು ಶಶಿಕಲಾ ಅವರು ಪಂಚಾಯ್ತಿ ಸದಸ್ಯ ನಂದರಗಿ ರಾಜು ಸಾಹುಕಾರ್ ಅವರಿಗೆ ಸಂದಾಯ ಮಾಡಿದ್ದರು.

 

 

ಇನ್ನು ಈ ಗ್ರಾಮ ಪಂಚಾಯ್ತಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಲ್ಲ. ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸೂಚನಾಫಲಕದಲ್ಲಿ ಹಾಕಬೇಕು. ಆದರೆ ಪಿಡಿಒ ಅವರು ಸೂಚನಾಫಲಕದಲ್ಲಿ ಆಯ್ಕೆಯಾದ ಯಾವೊಬ್ಬ ಫಲಾನುಭವಿಯ ಹೆಸರಿನ ಪಟ್ಟಿಯನ್ನೇ ಹಾಕಿರಲಿಲ್ಲ. ಮತ್ತೊಂದು ವಿಶೇಷವೆಂದರೇ 2025ರ ನವೆಂಬರ್‍‌ 21ರಂದು ಗ್ರಾಮ ಸಭೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮನೆ ಹಂಚಿಕೆಗೆ ಆಯ್ಕೆ ಆಗಿರುವ ವಿಷಯವೇ ಗೊತ್ತಿರಲಿಲ್ಲ. ಹಾಗೂ ಗ್ರಾಮ ಸಭೆ ನಡವಳಿ ಪುಸ್ತಕಕ್ಕೆ ಫಲಾನುಭವಿಗಳು ಸಹಿ ಮಾಡಿರಲಿಲ್ಲ.

 

 

 

ಈ ಗ್ರಾಮ ಸಭೆಯಲ್ಲಿ (ಕ್ರಮ ಸಂಖ್ಯೆ 76)  ನಮೂದಿಸಿದ್ದ ಸುಜಾತ, ತುಳಜಮ್ಮ (76), ವಿಠಲ (78) ಐಶ್ವರ್ಯ, ಸಿದ್ದಮ್ಮ (65)  ಅವರುಗಳಿಗೆ ಸ್ವಂತ ಮನೆ ಇದ್ದರೂ ಸಹ ಮತ್ತೆ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ಗ್ರಾಮ ಸಭೆ ನಡೆಸಲು ಪಿಡಿಒ ಅವರು ಡಂಗೂರ ಸಹ ಸಾರಿಸಿರಲಿಲ್ಲ. ಈ ಬಗ್ಗೆ ಪಿಡಿಒ ಅವರು ತನಿಖಾಧಿಕಾರಿಗಳಿಗೆ ಸರಿಯಾದ ಮಾಹಿತಿಯನ್ನೇ ನೀಡಿರಲಿಲ್ಲ. ಹಾಗೆಯೇ ನಿಯಮಗಳ ಪ್ರಕಾರ ತಾಲೂಕು ನೋಡಲ್ ಅಧಿಆರಿ ವಿಜಯಲಕ್ಷ್ಮಿ ಅವರನ್ನೂ ಗ್ರಾಮಸಭೆಗೆ ಕರೆದಿರಲಿಲ್ಲ. ಗ್ರಾಮ ಸಭೆ ಬಗ್ಗೆ ಪ್ರಕಟಣೆಯನ್ನು ಹೊರಡಿಸಿರಲಿಲ್ಲ ಮತ್ತು ಪ್ರಕಟಣೆಯನ್ನು ಎಲ್ಲಿಯೂ ಸಹ ಗ್ರಾಮಸ್ಥರಿಗೆ ಕಾಣುವಂತೆ ಅಂಟಿಸಿರಲಿಲ್ಲ. ಫಲಾನುಭವಿಗಳನ್ನು ಆಯ್ಕೆ ಮಾಡಲು ಇರುವ ಯಾವುದೇ ನಿಬಂಧನೆಗಳನ್ನು ಪಾಲಿಸದೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

‘ಮೇಲ್ಕಂಡ ಪಂಚಾಯ್ತಿಯ ಶೋಧನೆಯಿಂದ ದೂರು ಅರ್ಜಿಗೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ವಸತಿ ನಿಗಮದಿಂದ ದೀನ ದುರ್ಬಲರಿಗೆ, ವಸತಿ ಹೀನರಿಗೆ ಸರ್ಕಾರ ಹಂಚಿಕೆ ಮಾಡುವ ಮನೆಗಳನ್ನು ಪಡೆದುಕೊಳ್ಳಲು ಪಂಚಾಯ್ತಿ ಸದಸ್ಯರು ಹಣ ವಸೂಲು ಮಾಡಿರುವುದು ಆಯ್ಕೆಯಾದ ಫಲಾನುಭವಿಗಳ ವಿಚಾರಣೆಯಿಂದ ಕಂಡು ಬಂದಿರುತ್ತದೆ. ಮತ್ತು ಪಂಚಾಯ್ತಿ ಪಿಡಿಒ ಅವರು ನಿಯಮಾನಸುಆರ ಆಯ್ಕೆ ಪ್ರಕ್ರಿಯೆ ನಡೆಸದಿರುವುದು ದಾಖಲಾತಿಗಳ ಪರಿಶೀಲನೆಯಿಂದ ಕಂಡು ಬಂದಿದೆ. ಇದರಿಂದ ಕವಲಗಾ ಗ್ರಾಮ ಪಂಚಾಯ್ತಿಯಲ್ಲಿ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ,’ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಹಾಗೆಯೇ ಅಳಂದ ತಾಲೂಕಿನ  ಮುನ್ನಳ್ಳಿ ಗ್ರಾಮಪಂಚಾಯ್ತಿಯಲ್ಲಿಯೂ  ವಸತಿ ಯೋಜನೆಯಲ್ಲಿ ಹಲವು ನ್ಯೂನತೆಗಳನ್ನು ತನಿಖಾಧಿಕಾರಿ ಪತ್ತೆ ಹಚ್ಚಿದ್ದಾರೆ.

 

 

ಈ ಪಂಚಾಯ್ತಿಯಲ್ಲಿಯೂ ಆಯ್ಕೆಯಾಗಿರುವ ಫಲಾನುಭವಿಗಳು 05 ವರ್ಷ ಒಳಗಿನ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಆದರೆ ಫಲಾನುಭವಿಗಳು 05 ಮೀರಿದ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿರುವುದು ಕಂಡು ಬಂದಿತ್ತು. ಪಿಡಿಓ ಅವರು ಫಲಾನುಭವಿಗಳಿಂದ ಸರಿಯಾದ ದಾಖಲೆಗಳನ್ನು ಪಡೆಯದೇ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿದ್ದರು ಎಂದು ತನಿಖಾಧಿಕಾರಿಗಳು ಮೇಲ್ನೋಟಕ್ಕೆ  ಪತ್ತೆ ಹಚ್ಚಿದ್ದಾರೆ.

 

 

ಮತ್ತೊಂದು ವಿಶೇಷವೆಂದರೇ ಈ ಪಂಚಾಯ್ತಿಯ ಹಿಂದಿನ ಪಿಡಿಒ ನಾಗೇಶ್‌ ಮೂರ್ತಿ ಎಂಬುವರು ವರ್ಗಾವಣೆ ಆಗಿದ್ದರೂ ಸರ್ಕಾರಿ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.  ಈ ಪಂಚಾಯ್ತಿಗೆ ವರ್ಗಾವಾಗಿ ಬಂದಿದ್ದ ಭೀಮರಾವ್ ಕಟ್ಟಿಮನಿ ಅವರಿಗೆ ಪ್ರಭಾರ ನೀಡಿರಲಿಲ್ಲ.

 

 

ಕಡಗಂಜಿ,  ಮಾಡಿಯಾಳದಲ್ಲಿಯೂ ತನಿಖೆ ನಡೆಸಿರುವ ತನಿಖಾಧಿಕಾರಿಗಳು, ಮಾಡಿಯಾಳದಲ್ಲಿ ಆಯ್ಕೆಯಾಗಿದ್ದ ಫಲಾನುಭವಿ ದ್ರೋಪದಿ ಎಂಬುವರಿಂದ ಗ್ರಾಮ ಪಂಚಾಯ್ತಿ ಸದಸ್ಯ ಸೈಪನ್ ಸಾಬ್ ಶೇಖರ್ ಅವರು 5,000 ರು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂಬುದನ್ನು ಪತ್ತೆ ಹಚ್ಚಿದ್ದಾರೆ. ರತ್ನಾಬಾಯಿ ಎಂಬುವರ ಬಳಿಯೂ ಗ್ರಾಮ ಪಂಚಾಯ್ತಿ ಸದಸ್ಯ ಈರಣ್ಣ ನಿಂಬಾರ್ ಅವರು 25,000 ರು ಹಣಕ್ಕೆ ಬೇಡಿಕೆ ಇರಿಸಿದ್ದರು.

 

 

ಹಾಗೆಯೇ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಅಂಟಿಸಿರಲಿಲ್ಲ. ತಾಲೂಕು ನೋಡಲ್ ಅಧಿಕಾರಿಯಾದ ರಿಷಿಕೇಶ್ ದಂತಕಾಳೆ ಅವರಿಲ್ಲದೇ  ಗ್ರಾಮ ಸಭೆ ನಡೆಸಲಾಗಿತ್ತು ಎಂದು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.

 

 

ದಂಗಾಪುರ ಗ್ರಾಮ ಪಂಚಾಯ್ತಯಲ್ಲಿ  ವಸತಿ ಯೋಜನೆಗೆ ಸಂಬಂಧಿಸಿದಂತೆ  ಚಲನವಲನ ವಹಿ ನಿರ್ವಹಿಸಿಲ್ಲ.  2025ರ ನವೆಂಬರ್‍‌ 17ರಂದು ಪಿಡಿಒ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರಲಿಲ್ಲ. ಗ್ರಾಮಸಭೆ ಪುಸ್ತಕದಲ್ಲಿ 04 ಹಾಳೆಗಳನ್ನು ಬಿಟ್ಟು ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರ ಸಹಿಗಳನ್ನು ಮಾಡಿಸಿದ್ದರು ಎಂದು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

 

ದರ್ಗಾ ಶಿರೂರು ಗ್ರಾಮ ಪಂಚಾಯ್ತಿಯಲ್ಲಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾಮ ಸಭೆಯ ಪುಸ್ತಕವನ್ನು ಸರಿಯಾಗಿ  ನಿರ್ವಹಣೆ ಮಾಡಿಲ್ಲ.

 

 

 

‘ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಿಗೆ ಇರುವ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿಲ್ಲ.

 

 

ಸರ್ಕಾರದಿಂದ ಬರುವ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿರುವುದು, ಕಂದಾಯವನ್ನು ಸರಿಯಾಗಿ ವಸೂಲಿ ಮಾಡದೇ ಇರುವುದು, ಗ್ರಾಮಸ್ಥರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಇರುವುದು, ಗ್ರಾಮಸ್ಥರಿಗೆ ಸರ್ಕಾರದಿಂದ ಮಂಜೂರಾಗುವ ಶೌಚಾಲಯಗಳ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಗ್ರಾಮದಲ್ಲಿ ಸರಿಯಾದ ಬೀದಿ ದೀಪಗಳನ್ನು ಅಳವಡಿಸಿಲ್ಲ. ಕಾಲಕಾಲಕ್ಕೆ ಗ್ರಾಮಸಭೆಗಳನ್ನು ನಡೆಸಿಲ್ಲ. ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿಲ್ಲ. ಈ ಎಲ್ಲ ಸಂಗತಿಗಳನ್ನು ಶೋಧನಾ ಕಾಲದಲ್ಲಿ ಗ್ರಾಮಸ್ಥರ ಗೌಪ್ಯ ವಿಚಾರಣೆಯಿಂದ ತಿಳಿದು ಬಂದಿದೆ,’ ಎಂದು ವರದಿಯಿಲ್ಲಿ ವಿವರಿಸಿರುವುದು ಗೊತ್ತಾಗಿದೆ.

Hot this week

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

Topics

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

ಪ್ರಚೋದನಕಾರಿ ಭಾಷಣ, ಕೋಮು ಗಲಭೆ; 3 ವರ್ಷದಲ್ಲಿ 50 ಪ್ರಕರಣಗಳು ದಾಖಲು, ಪಟ್ಟಿ ಬಹಿರಂಗ

ಬೆಂಗಳೂರು; ರಾಜ್ಯದ  ಕರಾವಳಿ ಭಾಗ ಸೇರಿದಂತೆ ವಿವಿಧೆಡೆ ಪ್ರಚೋದನಾಕಾರಿ ಭಾಷಣ ಮಾಡಿದವರು...

ನರೇಗಾ ವಸತಿ ಕಾಮಗಾರಿಗಳಲ್ಲಿ ಮೋಸದ ಪಾವತಿ; ಚೆಕ್ ಡ್ಯಾಂ ಕಾಮಗಾರಿಯೇ ಇಲ್ಲ, ಆದರೂ ಹಣ ಪಾವತಿ

ಬೆಂಗಳೂರು; 847 ಸಂಖ್ಯೆ ವಸತಿ  ಕಾಮಗಾರಿಗಳಲ್ಲಿ  ಮೋಸದ ಪಾವತಿಗಳಾಗಿರುವುದನ್ನು ಭಾರತದ ಲೆಕ್ಕ...

42,750 ಕೋಟಿ ದೀರ್ಘಾವಧಿ ಸಾಲ, 4,516 ಕೋಟಿ ಆದಾಯ ಕೊರತೆ; ಎಸ್ಕಾಂಗಳ ಆರ್ಥಿಕ ಸ್ಥಿತಿ ಅನಾವರಣ

ಬೆಂಗಳೂರು; ವಿದ್ಯುತ್ ಸರಬರಾಜು ಕಂಪನಿಗಳು ಇದುವರೆಗೆ ಒಟ್ಟಾರೆ 42,750 ಕೋಟಿಗಳಷ್ಟು ದೀರ್ಘಾವಧಿ...

ಹಿಂದುಳಿದ ವರ್ಗ ವಸತಿ ಶಾಲೆ ಕಟ್ಟಡಗಳು ಶಿಥಿಲ; ಕಟ್ಟಡಗಳ ದುರಸ್ತಿಗೂ ಅನುದಾನವಿಲ್ಲ, ‘ಕೈ’ ಎತ್ತಿದ ಸರ್ಕಾರ

ಬೆಂಗಳೂರು;  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ಶಾಲೆಗಳು ಶಿಥಿಲಗೊಂಡಿದ್ದರೂ...

ನರೇಗಾ ಕಾಮಗಾರಿಗಳ ಆರಂಭದ ದಿನಾಂಕವೂ ಇಲ್ಲ, ದತ್ತಾಂಶವೂ ಇಲ್ಲ; 1,007.83 ಕೋಟಿ ರು. ವೆಚ್ಚದ ಕಾಮಗಾರಿಗಳು ಅಪೂರ್ಣ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳ ಪೈಕಿ ಒಂದು ವ‍ರ್ಷಕ್ಕಿಂತಲೂ ಹೆಚ್ಚು...

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

ಬೆಂಗಳೂರು; ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಖಿಲ ಭಾರತ...

ನರೇಗಾ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಿಯಮ ಉಲ್ಲಂಘನೆ; 86.67 ಕೋಟಿ ರು ಅಕ್ರಮ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ನರೇಗಾ ಯೋಜನೆಯಡಿಯಲ್ಲಿ ಮಾನವ ಸಂಪನ್ಮೂಲ ಬಳಕೆಗಾಗಿ ಮಾಡಿಕೊಂಡಿದ್ದ ಹೊರಗುತ್ತಿಗೆ ಒಪ್ಪಂದಗಳಲ್ಲಿ ನಡೆದಿದ್ದ...

Related Articles

Popular Categories

error: Content is protected !!