Thursday | October 15, 2026 |

ಸ್ಟೀಲ್‌ ಫರ್ನಿಚರ್‍‌ ಸಂಸ್ಥೆಯಿಂದ 2,500 ಆಕ್ಸಿಮೀಟರ್‍‌ ಖರೀದಿ; ಕುನ್ಹಾ ಆಯೋಗಕ್ಕೂ ಸಲ್ಲಿಕೆಯಾಗಿಲ್ಲ ಟೆಂಡರ್‌ ಕಡತ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಟೀಲ್‌ ಫರ್ನಿಚರ್‍‌ ಕಂಪನಿಯಿಂದ ಫಿಂಗರ್‍‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‍‌ ಖರೀದಿಸಿದ್ದ ಅಧಿಕಾರಿಗಳು, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಅವರ ನೇತೃತ್ವದ ವಿಚಾರಣೆ ಆಯೋಗಕ್ಕೆ ಈ ಸಂಬಂಧ ಟೆಂಡರ್‍‌ ದಾಖಲೆಗಳ ಕಡತವನ್ನೇ ಒದಗಿಸಿಲ್ಲ.

 

ವೈದ್ಯಕೀಯ ಸಲಕರಣೆಗಳ ಸರಬರಾಜಿನಲ್ಲಿ ಯಾವುದೇ ಅನುಭವವಿಲ್ಲದ ಮತ್ತು ಇದಕ್ಕೆ ಸಂಬಂಧವೇ ಇಲ್ಲದ ಸ್ಟೀಲ್‌ ಫರ್ನಿಚರ್‍‌ನಿಂದ 2,500 ಸಂಖ್ಯೆಯ ಪಲ್ಸ್‌ ಆಕ್ಸಿಮೀಟರ್‍‌ಗಳನ್ನು ಖರೀದಿಸಿತ್ತು. ಆದರೂ  ಕುನ್ಹಾ ವಿಚಾರಣೆ ಆಯೋಗವು ತನ್ನ ವರದಿಯಲ್ಲಿ ಈ ಅಂಶವನ್ನು ದಾಖಲಿಸಿರುವುದು ಕಂಡು ಬಂದಿಲ್ಲ.

 

ಮೈಕಲ್‌ ಕುನ್ಹಾ  ಅವರ ನೇತೃತ್ವದ ವಿಚಾರಣೆ ಆಯೋಗವು ಸಲ್ಲಿಸಿದ್ದ ಮಧ್ಯಂತರ ವರದಿ ಕುರಿತು ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ಸರ್ಕಾರವು  ವಿಶೇಷ ತನಿಖಾ ತಂಡ ರಚಿಸಿರುವ ಹೊತ್ತಿನಲ್ಲೇ ಪಲ್ಸ್‌ ಆಕ್ಸಿಮೀಟರ್‍‌ ಖರೀದಿ ಟೆಂಡರ್‍‌ ದಾಖಲೆಗಳ ಕಡತವನ್ನು ಆಯೋಗಕ್ಕೇ ನೀಡಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಕುನ್ಹಾ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸುವ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿಲ್ಲ ಎಂದು ಗೊತ್ತಾಗಿದೆ.

 

ಟೆಂಡರ್‍‌ ದಾಖಲೆಗಳ ಕಡತವನ್ನು ಸಲ್ಲಿಸಿಲ್ಲ ಎಂದು  ಖುದ್ದು ಆಯೋಗವು ನೀಡಿರುವ ವರದಿಯಲ್ಲೇ  ಉಲ್ಲೇಖವಾಗಿದೆ. ಹಾಗೆಯೇ ಈ ಫರ್ನಿಚರ್‍‌ ಕಂಪನಿಯು ನಿಗದಿತ ದಿನದೊಳಗೆ 2,500 ಪಲ್ಸ್ ಆಕ್ಸಿಮೀಟರ್‍‌ಗಳನ್ನು ಸರಬರಾಜು ಮಾಡಿರಲಿಲ್ಲ. ಆಗಿರುವ ವಿಳಂಬಕ್ಕಾಗಿ ಕಂಪನಿಯಿಂದ ದಂಡ ವಸೂಲಿ ಮಾಡಬೇಕು  ಎಂದು ಆಯೋಗವು ಶಿಫಾರಸ್ಸು ಮಾಡಿದೆ.

 

 

ಪ್ರಕರಣದ ಹಿನ್ನೆಲೆ

 

ದುಪ್ಟಟ್ಟು ದರದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ಅವ್ಯವಹಾರಗಳಿಗೆ ದಾರಿಮಾಡಿಕೊಟ್ಟಿದ್ದ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ವೇರ್‌ ಹೌಸಿಂಗ್‌ ಸೊಸೈಟಿಯು ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳ ಖರೀದಿಯಲ್ಲಿಯೂ ಅಕ್ರಮ ನಡೆದಿತ್ತು.  ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್ ಖರೀದಿಸಿದ್ದ ಕೆಡಿಎಲ್‍ಡಬ್ಲ್ಯೂಎಸ್, ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಉಪಕರಣಗಳನ್ನು ಸ್ಟೀಲ್ ಫರ್ನಿಚರ್ಸ್ ಕಂಪನಿಯಿಂದ ಖರೀದಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು.

 

ಸ್ಟೀಲ್ ಫರ್ನಿಚರ್ಸ್ ಕಂಪನಿಯಿಂದಲೂ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಖರೀದಿ; ಪೂರ್ವ ನಿರ್ಧರಿತ ಒಪ್ಪಂದವೇ?

2020ರ ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ಖರೀದಿಸಿದ್ದ  ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳ ದರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು.  ಮಾರ್ಚ್‌ ತಿಂಗಳಲ್ಲಿ ಉಪಕರಣವೊಂದಕ್ಕೆ 2,200 ರು. ದರದಲ್ಲಿ ಖರೀದಿಸಿದ್ದರೆ ಜುಲೈ ತಿಂಗಳಲ್ಲಿ 1,100 ರು ದರದಲ್ಲಿ ಖರೀದಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಉಪಕರಣವೊಂದಕ್ಕೆ 450 ರು. ದರವಿದ್ದರೂ ಹೆಚ್ಚಿನ ದರದಲ್ಲಿ ಖರೀದಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

 

2.27 ಕೋಟಿ ನಷ್ಟ

 

ಉಪಕರಣವೊಂದಕ್ಕೆ ಅಮೆಜ್ಹಾನ್, ವಾಲ್‍ಡೆಂಟ್, ಶೇಕ್ ಡೀಲ್, ಫ್ಲಿಪ್ ಕಾರ್ಟ್ ಸೇರಿದಂತೆ ಮುಕ್ತ ಮತ್ತು ಆನ್‍ಲೈನ್‍ನಲ್ಲಿ ಉಪಕರಣವೊಂದಕ್ಕೆ ಗರಿಷ್ಠ 450 ರು.ದರವಿದೆ. ಆದರೆ ಕೆಡಿಎಲ್‍ಡಬ್ಲ್ಯೂಎಸ್ ಖರೀದಿಸಿರುವ ಉಪಕರಣ ದರದಲ್ಲಿ 650 ರು. ವ್ಯತ್ಯಾಸವಿದೆ. ಇದರ ಪ್ರಕಾರ 35,000 ಉಪಕರಣಗಳಿಗೆ 2.27 ಕೋಟಿ ರು. ವ್ಯತ್ಯಾಸವಿತ್ತು.

 

ವಿವಿಧ ನಿರ್ದಿಷ್ಟತೆಗಳುಳ್ಳ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ಗಳನ್ನು ಒಟ್ಟು 35 ಲಕ್ಷ ರು. ದರದಲ್ಲಿ (ತಲಾ ಸಾಧನಕ್ಕೆ 2,200) ಖರೀದಿಸಿದ್ದರೆ, ಮೇ ತಿಂಗಳಲ್ಲಿ 15,000 ಉಪಕರಣಗಳನ್ನು (ತಲಾ 1,100 ರು. ದರ) ದರದಲ್ಲಿ ಖರೀದಿಸಿತ್ತು.

 

ಮಾರ್ಚ್ ತಿಂಗಳಲ್ಲಿ ಹೋಂ ಮೆಡಿಕ್ಸ್, ತ್ರಿಲೋಕ್ ಲ್ಯಾಬ್ಸ್, ಲತಾ ಸ್ಟೀಲ್ ಫರ್ನಿಚರ್ಸ್, ಆನಂದ್ ಏಜೆನ್ಸಿ, ಜುಲೈ ತಿಂಗಳಲ್ಲಿ ವರುಣ್‌ ಸರ್ಜಿಕಲ್ಸ್‌ನಿಂದ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳನ್ನು ಖರೀದಿಸಿತ್ತು ಎಂದು ಗೊತ್ತಾಗಿದೆ. ಲತಾ ಸ್ಟೀಲ್ ಫರ್ನಿಚರ್ಸ್‍ನಿಂದ 61.60 ಲಕ್ಷ ರು.ಮೌಲ್ಯದ 2,500 ಉಪಕರಣಗಳನ್ನು ಖರೀದಿಸಿತ್ತು.

 

 

ದರಪಟ್ಟಿ ಆಹ್ವಾನ, ಉಪಕರಣದ ವಿಶಿಷ್ಟತೆ ನಿಗದಿಯಲ್ಲೂ ನಡೆದಿದೆಯೇ ಅಕ್ರಮ?

 

ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳ ಖರೀದಿ ಸಂಬಂಧ ಕೆಡಿಎಲ್‌ಡಬ್ಲ್ಯೂಎಸ್‌ 2020ರ ಮೇ 11ರಂದು ಸೊಸೈಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ದರ ಪಟ್ಟಿ ಆಹ್ವಾನಿಸಲಾಗಿತ್ತು. ಕೇವಲ 3 ದಿನಗಳ ಅಂತರದಲ್ಲೇ ಅಂದರೆ ಮೇ 14ರಂದು ತಿದ್ದುಪಡಿಗೊಳಿಸಿರುವ ಅಧಿಕಾರಿಗಳು ದರ ಪಟ್ಟಿ ಸಲ್ಲಿಸಲು ಮೇ 22ರಂದು ಕಡೆ ದಿನಾಂಕ ಎಂದು ಗೊತ್ತುಪಡಿಸಿದ್ದರು.

 

 

ಅಲ್ಲದೆ ಉಪಕರಣದ ನಿರ್ದಿಷ್ಟತೆಯಲ್ಲಿಯೂ ಬದಲಾವಣೆ ತಂದಿದ್ದ ಅಧಿಕಾರಿಗಳು ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ನಲ್ಲಿ ಪಲ್ಸ್‌ ರೇಟ್‌ ಆಕ್ಸಿಜನ್‌ ರೆಸ್ಪರೇಟರಿ ರೇಟ್‌(Breaths per Minute) ಮಾನಿಟರ್‌ ಮಾಡುವ ವಿಶಿಷ್ಟತೆಯನ್ನೂ ಸೇರ್ಪಡೆಗೊಳಿಸಿ ತಿದ್ದುಪಡಿಗೊಳಿಸಿದ್ದರು ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಕಡೆ ದಿನಾಂಕವನ್ನು ಮೇ 26ಕ್ಕೆ ವಿಸ್ತರಿಸಿ ದರಪಟ್ಟಿಯನ್ನು ತಿದ್ದುಪಡಿಗೊಳಿಸಿದ್ದ ಅಧಿಕಾರಿಗಳು, ತಿದ್ದುಪಡಿ ಅಧಿಸೂಚನೆಯನ್ನು ಸಂಜೆ 5 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.

 

 

ಸರಬರಾಜಾಗಿದ್ದ ಸಾಧನಗಳಲ್ಲಿ ವಿಶಿಷ್ಟತೆಗಳಿರಲಿಲ್ಲ?

 

 

ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನ ಕೇವಲ ಪಲ್ಸ್‌ ರೇಟ್‌, ರಕ್ತದಲ್ಲಿ ಆಮ್ಲಜನಕ ಎಷ್ಟಿದೆ ಎಂಬುದನ್ನು ಶೇಕಡವಾರು ಪ್ರಮಾಣವನ್ನು ತೋರಿಸುತ್ತದೆ. ಆದರೆ ಸರಬರಾಜಾಗಿದ್ದ ಉಪಕರಣಗಳು ರೆಸ್ಪರೇಟರಿ ರೇಟ್ ಮಾನಿಟರ್‍‌ನ  ವಿಶಿಷ್ಟತೆಯನ್ನು ಒಳಗೊಂಡಿರಲಿಲ್ಲ. ಆದರೂ ಅಧಿಕಾರಿಗಳೂ ಇಲ್ಲಿ ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಕಂಪನಿ, ಏಜೆನ್ಸಿಗೆ ನೀಡುವ ಸಲುವಾಗಿ ಉಪಕರಣದ ವಿಶಿಷ್ಟತೆಯನ್ನು ಬದಲಾವಣೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ವಿಶಿಷ್ಟತೆಯಲ್ಲಿ ನಿರ್ದಿಷ್ಟತೆ ನಿಗದಿಗೊಳಿಸಿದ್ದರೂ ಸರಬರಾಜಾಗಿದ್ದ ಉಪಕರಣಗಳಲ್ಲಿ ವಿಶಿಷ್ಟತೆಗಳು ಇರಲಿಲ್ಲ ಎಂದು ಹೇಳಲಾಗಿತ್ತು.

 

ಮಾರ್ಚ್‌, ಮೇ ತಿಂಗಳಲ್ಲಿ ನಡೆದಿದ್ದ ಅಕ್ರಮಗಳು ಜುಲೈನಲ್ಲೂ ಮುಂದುವರೆದಿದ್ದವು. ಜುಲೈನಲ್ಲಿಯೂ 35,000 ಪ್ರಮಾಣದ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಖರೀದಿಸಲು ದರಪಟ್ಟಿ ಆಹ್ವಾನಿಸಿದ್ದ ಕೆಡಿಎಲ್‌ಡಬ್ಲ್ಯೂಎಸ್‌ ಅಧಿಕಾರಿಗಳು ಮೇ ತಿಂಗಳಲ್ಲಿ ನಿಗದಿಪಡಿಸಿದ್ದ ವಿಶಿಷ್ಟತೆಗಳನ್ನೇ ಜುಲೈನಲ್ಲಿಯೂ ನಿಗದಿಪಡಿಸಿದ್ದರು. ಆದರೆ ರೆಸ್ಪರೇಟರಿ ರೇಟ್‌ ಮಾನಿಟರ್‌ಗೆ ನಿಗದಿಪಡಿಸಿದ್ದ ವಿಶಿಷ್ಟತೆಯಲ್ಲಿ ದೋಷವಿದೆ ಎಂದು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಆದರೆ ಅಧಿಕಾರಿಗಳು ಆಕ್ಷೇಪಣೆಗಳಿಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿರಲಿಲ್ಲ.

 

35,000 ಉಪಕರಣಗಳನ್ನು ಕೇವಲ 5 ದಿನದಲ್ಲಿ ತಯಾರಿಸಿ ಸರಬರಾಜು ಮಾಡಲು ಸಾಧ್ಯವಿಲ್ಲ. ಏಜೆನ್ಸಿಯೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಂತಿದೆ. ಫಿಂಗರ್‌ಟಿಪ್‌ ಪಲ್ಸ್‌ ಆಕ್ಸಿಮೀಟರ್‌ಗಳನ್ನು ದಾಸ್ತಾನು ಹೊಂದಿರುವ ಏಜೆನ್ಸಿಯೊಂದಿಗೆ ಪೂರ್ವ ನಿಯೋಜಿತವಾಗಿಯೇ ಒಪ್ಪಂದ ಮಾಡಿಕೊಂಡಿದ್ದ ಅಧಿಕಾರಿಗಳು  ಅವ್ಯವಹಾರ ನಡೆಸಿದ್ದರು ಎಂಬ ಆಪಾದನೆಯೂ ಕೇಳಿ ಬಂದಿತ್ತು.

 

ದರಪಟ್ಟಿ ಕರೆದಾಗ ಭದ್ರತಾ ಠೇವಣಿ ಮತ್ತು ಇಎಂಡಿಯನ್ನು ಕೇಳಲಾಗುತ್ತದೆ. ಆದರೆ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಖರೀದಿ ಸಂಬಂಧ ಭದ್ರತಾ ಠೇವಣಿಯನ್ನಾಗಲೀ, ಇಎಂಡಿಯನ್ನಾಗಲಿ ಕೇಳಿಲ್ಲ. ಒಂದು ವೇಳೆ ಉಪಕರಣಗಳಲ್ಲಿ ದೋಷ ಕಂಡು ಬಂದರೆ ಸರಬರಾಜುದಾರರಿಂದ ಮೊತ್ತವನ್ನು ವಸೂಲಿ ಮಾಡಲು ಕಷ್ಟಸಾಧ್ಯ ಎಂದು ಹೇಳಲಾಗಿದೆ.

Hot this week

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...
Please Scan to make Your Contribution

Topics

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು...

Related Articles

Popular Categories

error: Content is protected !!