ಬೆಂಗಳೂರು; ಯೂ ಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಪ್ರಭಾವಿ ವ್ಯಕ್ತಿಗಳು ಶೋಷಣೆ ನಡೆಸಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದ ‘ಹನಿಟ್ರ್ಯಾಪ್’ ಪ್ರಕರಣದ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆ ಅಥವಾ ತನಿಖೆ ನಡೆಸಬೇಕು ಎಂದು ನೈಜ ಹೋರಾಟಗಾರರ ವೇದಿಕೆಯು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಬಾಲ ನ್ಯಾಯಮಂಡಳಿ, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಹಾಗೂ ರಾಜೀನಾಮೆ ನೀಡುವಂತೆ ಒತ್ತಡ ಹೇರಲು ಸ್ಟಿಂಗ್ ಆಪರೇಷನ್ (Sting operation) ಬಳಸಲಾಗಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಈಚೆಗಷ್ಟೇ ಆರೋಪಿಸಿದ್ದರು. ಈ ಕುರಿತಂತೆ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಅವರು ಪರೋಕ್ಷ ಹಾಗೂ ನೇರ ಆರೋಪಗಳನ್ನು ಮಾಡಿದ್ದರು.
ಈ ಬೆಳವಣಿಗೆ ನಡುವೆಯೇ ನೈಜ ಹೋರಾಟಗಾರರ ವೇದಿಕೆಯು ಸಲ್ಲಿಸಿರುವ ಮನವಿಯು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಪ್ರಸಾರವಾಗಿದ್ದ ವಿಡಿಯೋದ ತುಣುಕನ್ನೂ ಸಹ ಪೆನ್ ಡ್ರೈವ್‌ನಲ್ಲಿರಿಸಿ 2026ರ ಅಕ್ಟೋಬರ್ 9ರಂದೇ ನೀಡಿರುವುದು ಮನವಿಯಿಂದ ತಿಳಿದು ಬಂದಿದೆ. ಈ ಮನವಿಯನ್ನು ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರು ಮಾಧ್ಯಮದ ವಾಟ್ಸಾಪ್ ಗ್ರೂಪ್‌ಗಳಲ್ಲಿಯೂ ಹಂಚಿಕೆಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ವಿಡಿಯೋ ಪ್ರಸಾರ ಮಾಡಬಾರದು ಎಂದು ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ತಡೆಯಾಜ್ಞೆ ತರಲು ನ್ಯಾಯಾಲಯದ ಮೊರೆ ಹೊಕ್ಕಿರುವ ನಡುವೆಯೇ ನೈಜ ಹೋರಾಟಗಾರರ ವೇದಿಕೆಯು ನೀಡಿರುವ ಮನವಿಯು ಮಹತ್ವ ಪಡೆದುಕೊಂಡಿದೆ.
‘ಅಪ್ರಾಪ್ತ ವಯಸ್ಸಿನ ಬಾಲಕಿಯ ಶೋಷಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತೆಗೆ ದೊರೆಯಬೇಕಾದ ರಕ್ಷಣೆ ಮತ್ತು ನ್ಯಾಯಕ್ಕೆ ಸಂಬಂಧಿಸಿದ ಅತ್ಯಂತ ಕಳವಳಕಾರಿ ವಿಷಯವೊಂದನ್ನು ತಮ್ಮ ತಕ್ಷಣದ ಗಮನಕ್ಕೆ ತರಲು ಈ ಮನವಿಯನ್ನು ಸಲ್ಲಿಸುತ್ತಿದ್ದೇನೆ,’ ಎಂದು ನೈಜ ಹೋರಾಟಗಾರರ ವೇದಿಕೆಯ ಎಚ್ ಎಂ ವೆಂಕಟೇಶ್ ಎಂಬುವರು ಗಮನಸೆಳೆದಿರುವುದು ಮನವಿಯಿಂದ ಗೊತ್ತಾಗಿದೆ.

ಯೂ ಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕ ಹನಿಟ್ರ್ಯಾಪ್” ಶೀರ್ಷಿಕೆಯ ವಿಡಿಯೋದಲ್ಲಿ ಪತ್ರಕರ್ತರೊಬ್ಬರು, ಮಹಿಳಾ ರಾಜಕಾರಣಿ ಸಂಭಾಷಣೆ ನಡೆಸಿದ್ದಾರೆ. ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಕರ್ನಾಟಕದ ಪ್ರಭಾವಿ ರಾಜಕಾರಣಿ ಹೆಸರನ್ನೂ ಸಹ ಹಲವು ಬಾರಿ ಪ್ರಸ್ತಾಪಿಸಲಾಗಿದೆ. ಪ್ರಸ್ತಾಪವಾಗಿರುವ ರಾಜಕಾರಣಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಶೋಷಣೆ ಮಾಡಿದ್ದಾರೆ ಎಂಬ ಆರೋಪದ ಮಾತುಗಳೂ ಸಹ ಇವೆ ಎಂದು ಮನವಿಯಲ್ಲಿ ನೈಜ ಹೋರಾಟಗಾರರ ವೇದಿಕೆಯು ಗಮನಸೆಳೆದಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಡೆದಿತ್ತೇ ಶೋಷಣೆ?
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋದಲ್ಲಿ ಪತ್ರಕರ್ತರೊಬ್ಬರು, ಮಹಿಳಾ ರಾಜಕಾರಣಿ, ಅಪ್ರಾಪ್ತ ವಯಸ್ಸಿನ ಬಾಲಕಿ ಜೊತೆ ಮಾತನಾಡುತ್ತಿರುವ ದೃಶ್ಯ ಸಂಭಾಷಣೆಗಳಿವೆ.
‘ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಆಪಾದಿತನಿಂದ ಶೋಷಣೆ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಬಂಧಿಸಿದ ‘ಹನಿಟ್ರ್ಯಾಪ್’ ಪ್ರಕರಣದ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದ / ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆ ಅಥವಾ ತನಿಖೆ ನಡೆಸಬೇಕು,’ ಎಂದು ಮನವಿಯಲ್ಲಿ ಕೋರಿರುವುದು ಗೊತ್ತಾಗಿದೆ.

ವಿಡಿಯೋದಲ್ಲಿನ ವಿಷಯವೇನು?
ಈ ವಿಡಿಯೋದಲ್ಲಿನ ಸಂಭಾಷಣೆಗಳು, ಘಟನೆಯ ಸಮಯದಲ್ಲಿ 14 ವರ್ಷದ ಬಾಲಕಿಯಾಗಿದ್ದರು. ಯುವತಿಯ ಮೇಲಿನ ಗಂಭೀರ ಶೋಷಣೆ ಅಥವಾ ದೌರ್ಜನ್ಯದ ಪ್ರಕರಣವೊಂದಕ್ಕೆ ಸಂಬಂಧಿಸಿವೆ ಎಂದು ಆರೋಪಿಸಲಾಗಿದೆ. ಈ ಘಟನೆ ಸುಮಾರು 2011ರಲ್ಲಿ ನಡೆದಿರಬಹುದೆಂದು ಸಂಭಾಷಣೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ನೈಜ ಹೋರಾಟಗಾರರ ವೇದಿಕೆಯು ಗಮನಸೆಳೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಅಥವಾ ಇತ್ಯರ್ಥ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸುವುದು, ಒಪ್ಪಂದಕ್ಕೆ ಬರುವ ಪ್ರಯತ್ನ ಮಾಡುವುದು, ಪ್ರಕರಣವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಬಗ್ಗೆ ಚರ್ಚಿಸುವುದು ಅಥವಾ ಅದರ ಕಾನೂನು ನಿರ್ವಹಣೆಯ ಕುರಿತು ವಾದಿಸುವುದರಲ್ಲಿ ಸಂಬಂಧಪಟ್ಟ ವ್ಯಕ್ತಿಗಳು ತೊಡಗಿರುವಂತೆ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ.
ಸಂಭಾಷಣೆಯ ಸಂದರ್ಭದಲ್ಲಿ ಸಂತ್ರಸ್ತೆಯು ಈಗ ವಿವಾಹಿತಳಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾಳೆ ಎಂಬುದನ್ನೂ ಉಲ್ಲೇಖಿಸಲಾಗಿದೆ. ಇದಲ್ಲದೆ, ಈ ವಿಡಿಯೋದಲ್ಲಿ ಕೆಲವು ಪ್ರಮುಖ ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾನೂನು ವೃತ್ತಿಪರರ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಅಥವಾ ಮಾಜಿ ಅಧಿಕಾರಿಯಾಗಿದ್ದರೆಂದು ಶಂಕಿಸಲಾಗಿರುವ ಮಹಿಳೆಯೊಬ್ಬರು ದೃಶ್ಯದಲ್ಲಿ ಕಾಣಿಸಿಕೊಳ್ಳುವುದನ್ನೂ ವಿಡಿಯೋದಲ್ಲಿ ಗಮನಿಸಬಹುದು ಎಂದು ತಿಳಿಸಲಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಯ ಹಕ್ಕುಗಳ ರಕ್ಷಣೆ
ಈ ಘಟನೆಯು 2011ರಲ್ಲಿ ನಡೆದಿದ್ದರೂ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಲೈಂಗಿಕ ಶೋಷಣೆ ಅಥವಾ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಅಪರಾಧದ ಸ್ವರೂಪ, ಅನ್ವಯಿಸುವ ಕಾನೂನು ಮತ್ತು ಪ್ರಕರಣದ ಸಂದರ್ಭಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಇಂತಹ ಪ್ರಕರಣವನ್ನು ಮುಚ್ಚಿಹಾಕಲು, ರಾಜಿ ಮಾಡಿಕೊಳ್ಳಲು ಅಥವಾ ‘ಹನಿಟ್ರ್ಯಾಪ್’ ಅಥವಾ ಸುಲಿಗೆಗೆ ಬಳಸಿಕೊಳ್ಳಲು ಪ್ರಯತ್ನಿಸುವುದು ಕಾನೂನಿನ ಗಂಭೀರ ಉಲ್ಲಂಘನೆಗೆ ಕಾರಣವಾಗಬಹುದು ಎಂದು ನೈಜ ಹೋರಾಟಗಾರರ ವೇದಿಕೆಯು ತನ್ನ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಇಂತಹ ಕೃತ್ಯಗಳು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ / ಭಾರತೀಯ ನ್ಯಾಯ ಸಂಹಿತೆ ಸೇರಿದಂತೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಪರಿಶೀಲನೆಗೆ ಒಳಪಡಬೇಕಾಗಿವೆ.
‘ಜನಪ್ರತಿನಿಧಿಗಳು, ಕಾನೂನಿನ ರಕ್ಷಕರಾಗಿರುವ ವಕೀಲರು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಪರಿಗಣಿಸಲ್ಪಡುವ ಪತ್ರಕರ್ತರ ಹೆಸರುಗಳು ಈ ಆರೋಪದಲ್ಲಿ ಕೇಳಿಬರುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ. ಇಂತಹ ಆರೋಪಗಳಲ್ಲಿ ಸತ್ಯಾಂಶವಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. ಇವು ಕರ್ನಾಟಕದ ನೈತಿಕ ಮತ್ತು ಕಾನೂನು ವ್ಯವಸ್ಥೆಗೆ ಅಪಾಯವನ್ನುಂಟುಮಾಡಬಹುದಾದ ಸಂಘಟಿತ ‘ಹನಿಟ್ರ್ಯಾಪ್’ ಜಾಲ ಅಥವಾ ವ್ಯವಸ್ಥಾತ್ಮಕ ಭ್ರಷ್ಟಾಚಾರದ ಸಾಧ್ಯತೆಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ,’ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ವಿಡಿಯೋ ಸಾರ್ವಜನಿಕವಾಗಿ ಪ್ರಸಾರವಾಗುತ್ತಿದೆ. ಸಾರ್ವಜನಿಕರಲ್ಲಿ ಗಂಭೀರ ಆತಂಕಗಳನ್ನು ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ, ವಿಡಿಯೋದ ನೈಜತೆ, ಮೂಲ, ಸಂದರ್ಭ ಮತ್ತು ಅದರಲ್ಲಿ ಮಾಡಲಾಗಿರುವ ಆರೋಪಗಳ ಸತ್ಯಾಸತ್ಯತೆಯನ್ನು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆಯ ಮೂಲಕ ಪರಿಶೀಲಿಸುವುದು ಅತ್ಯಗತ್ಯವಾಗಿದೆ.
ಆರೋಪಗಳಲ್ಲಿ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಸಾಮಾನ್ಯ ಸ್ಥಳೀಯ ಪೊಲೀಸ್ ತನಿಖೆಯ ಮೇಲೆ ವ್ಯವಸ್ಥಾತ್ಮಕ ಒತ್ತಡಗಳು ಉಂಟಾಗುವ ಸಾಧ್ಯತೆಯ ಬಗ್ಗೆ ಆತಂಕವಿದೆ. ಆದ್ದರಿಂದ, ಸಂಪೂರ್ಣ ನಿಷ್ಪಕ್ಷಪಾತ ತನಿಖೆಯನ್ನು ಖಚಿತಪಡಿಸಬೇಕು. ನ್ಯಾಯದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸುವ ಉದ್ದೇಶದಿಂದ, ತಮ್ಮ ಗೌರವಾನ್ವಿತ ಕಚೇರಿಯು ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದೆ.
ಅದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ವಿಡಿಯೋ ಮತ್ತು ಅದಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಪರಿಗಣಿಸಿ, ಸ್ವಯಂಪ್ರೇರಿತವಾಗಿ (Suo Motu) ಪ್ರಕರಣದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಹೊರತರುವ ಉದ್ದೇಶದಿಂದ, ಭಾರತದ ಸರ್ವೋಚ್ಚ ನ್ಯಾಯಾಲಯದ ನೇರ ಮೇಲ್ವಿಚಾರಣೆಯಲ್ಲಿ ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸಲು ಅಥವಾ ಸ್ವತಂತ್ರ ನ್ಯಾಯಾಂಗ ಆಯೋಗದ ಮೂಲಕ ತನಿಖೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಅಥವಾ ಸೂಕ್ತ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದೆ.
ಮೂಲ ವಿಡಿಯೋವನ್ನು ಸುರಕ್ಷಿತವಾಗಿ ಸಂಗ್ರಹಿಸಬೇಕು. ಅದರ ನೈಜತೆ ಮತ್ತು ಸತ್ಯಾಸತ್ಯತೆಯನ್ನು ವೈಜ್ಞಾನಿಕ ಹಾಗೂ ತಾಂತ್ರಿಕ ವಿಧಾನಗಳ ಮೂಲಕ ಪರಿಶೀಲಿಸಬೇಕು. ಇದಕ್ಕೆ ಸಂಬಂಧಪಟ್ಟ ಸೈಬರ್ ಅಪರಾಧ ತನಿಖಾ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕಾನೂನಿನ ಅನ್ವಯ ಸಂತ್ರಸ್ತೆ ಮತ್ತು ಅವರ ಕುಟುಂಬದವರ ಗೌಪ್ಯತೆ, ಸುರಕ್ಷತೆ ಹಾಗೂ ಅಗತ್ಯ ಕಾನೂನು ನೆರವನ್ನು ಖಚಿತಪಡಿಸಲು ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದೆ.
‘ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಸತ್ಯಾಂಶಗಳನ್ನು ನಿಷ್ಪಕ್ಷಪಾತವಾಗಿ ಹೊರತರುವ ಹಾಗೂ ಸಂತ್ರಸ್ತೆಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು,’ ಎಂದು ಕೋರಿರುವುದು ಗೊತ್ತಾಗಿದೆ.
ಈ ಮನವಿ ಜೊತೆಗೇ ವಿಡಿಯೋದಲ್ಲಿರುವ ಸಂಭಾಷಣೆಯನ್ನು ಅಕ್ಷರ ರೂಪದಲ್ಲಿ ನೀಡಲಾಗಿದೆ.
ಮಹಿಳೆ: ಫಸ್ಟ್ ಟೈಮ್ ನಾನು ಮೀಟ್ ಆದಾಗ ಪೂರಾ ಬಂದು ಹೇಳಿದ್ದೆ.
ಮಹಿಳೆ: ಮೊನ್ನೆ ಊರ ಬ್ರಹ್ಮಕಲಶ, ಅದಕ್ಕಾಗಿ ನಾನು ಡಿಸ್ಟರ್ಬ್ ಆಗಿದ್ದೆ. ಇವತ್ತು ನಾನು ಚೀಫ್ ಗೆಸ್ಟ್ ಅಲ್ಲಿ.
ರಾಕೇಶ್: ಅದನ್ನೇ ನಾನು ನೋಡ್ತಿರೋದು, ನಿಮಗೆ ಅರ್ಜೆಂಟ್ ಇತ್ತಾ?
ಮಹಿಳೆ: ಹೂಂ.
ಮಹಿಳೆ: ಇವತ್ತು ಎಲ್ಲರೂ ಬ್ರಹ್ಮಕಲಶಕ್ಕೆ ಹೋಗಿದ್ದಾರೆ.
ರಾಕೇಶ್: ನಾವು ರವಿ ಅವರ ಹತ್ರ ಇದ್ದೀವಿ.
ಬಾಲರಾಜ್: ರವಿ ಅವರ ಹತ್ರ ಡ್ರಾಪ್ ಮಾಡಿಕೊಳ್ಳಿ.
ರಾಕೇಶ್: ಅವಳು ತುಂಬಾ ಮುಗ್ಧ ಹುಡುಗಿ.
ಮಹಿಳೆ: ಲಾಸ್ಟ್ ಟೈಮ್ ಸಿಕ್ಕಿದಾಗ ಎಲ್ಲ ಹೇಳಿದೆ, ಇವಾಗ ನಾನು ಹೇಳ್ತಾ ಇರೋದು ಕರೆಕ್ಟ್ ಆಗಿ ಬರ್ತಾ ಇಲ್ಲ.
ರಾಕೇಶ್: ನಾವು ಗಂಡಸರು ಅಲ್ವಾ? ನಮ್ಮ ಹತ್ರ ಅವಳು ಹೇಗೆ ಇದೆಲ್ಲ ನೇರವಾಗಿ ಹೇಳ್ತಾಳೆ?
ಮಹಿಳೆ: ಅವಳು ಫಸ್ಟ್ ಮೀಟ್ ಆದಾಗ ಹೇಳಿದ್ಲು, ಅವನು ಹೇಗೆ ಬಂದ? ಹೇಗೆ ಶಾಲು ತೆಗೆದ ಅಂತ.
ರಾಕೇಶ್: ಅವನನ್ನು ನಾವೇ ಇಲ್ಲಿಗೆ ಕರೆದುಕೊಂಡು ಬಂದರೆ ಒಳ್ಳೆಯದು.
ಮಹಿಳೆ: ಅವನು ಬಂದರೂ ಏನು ಪ್ರಯೋಜನ ಇಲ್ಲ.
ರಾಕೇಶ್: ಯಾಕೆ ಪ್ರಯೋಜನ ಆಗಲ್ಲ? ನೀವು ಏನು ಮಾಡಬೇಕು ಗೊತ್ತಾ — ಅವರ ಹತ್ತಿರ ಎಲ್ಲದಕ್ಕೂ ಒಪ್ಪಿಸಿ ಆಮೇಲೆ ಇಲ್ಲಿಗೆ ಕರೆಯಬೇಕು. ಎಲ್ಲ ಮಾಡಿ, ಅರ್ಥ ಆಯ್ತಾ?
ರಾಕೇಶ್: ಅವಳದೊಂದು ಫೋಟೋ ಮಾತ್ರ ನನಗೆ ಕಳಿಸಿ. ನಾನು ಅವರಿಗೆ ತೋರಿಸ್ತೀನಿ. ಬೇರೆ ಏನೂ ತೋರಿಸಬೇಡಿ.
ಮಹಿಳೆ: ಯಾಕೆಂದರೆ ಅವಳು ಮೈನರ್ ಹುಡುಗಿ ಅಲ್ವಾ, ಅವನು ಸಿಕ್ಕಿಬಿದ್ದರೆ ಅರೆಸ್ಟ್ ಆಗ್ತಾನೆ. ಮರ್ಯಾದೆ ಹಾಳು ಮಾಡೋದು ಬಿಡಿ. ಕೂಡಲೇ ಒಳಗೆ ಹಾಕಿ ಇದನ್ನ ಮೈನರ್ ವಿಷಯ ಮಾಡಿದರೆ ಅದು 100%.
ರಾಕೇಶ್: ನೋಡಲು ಚೆನ್ನಾಗಿದ್ದಾಳಾ ಅವಳು?
ಮಹಿಳೆ: ಹೌದು ಹೌದು.
ರಾಕೇಶ್: ಅದರ ಬಗ್ಗೆ ಮಾತಾಡಬೇಡಿ. ನಾನು ಪ್ರಭಾಕರ್ ಅವರಿಗೆ ಫೋನ್ ಮಾಡಿ ಯಾವಾಗ ಮೀಟ್ ಆಗಬಹುದು ಅಂತ ಕೇಳ್ತೀನಿ. ಸುಮ್ಮನೆ ಅಪಾಯಿಂಟ್‌ಮೆಂಟ್ ಕೇಳ್ತೀನಿ. ಈ ತರ ಒಂದು ವಿಷಯ ಆಗಿದೆ, ಯಾರೋ ಬಂದು ನಮ್ಮವರು ತಡೆದಿದ್ದಾರೆ ಅಂತ ಹೇಳ್ತೀನಿ. ಅರ್ಥ ಆಯ್ತಾ?
ರಾಕೇಶ್: ಮೊದಲು ನಾನು ಯಾರ ಹೆಸರನ್ನೂ ಹೇಳಲ್ಲ, ಅರ್ಥ ಆಯ್ತಾ? ಮೊದಲು ನಾನು ಅವರ ರಿಯಾಕ್ಷನ್ ನೋಡ್ತೀನಿ. ಆಮೇಲೆ ಫೋಟೋ ತೋರಿಸ್ತೀನಿ. ಯಾರು ಅಂತ ಗೊತ್ತಾಗುತ್ತೆ. ನಿಮ್ಮ ಹೆಸರನ್ನೂ ಹೇಳಲ್ಲ. ರಿಯಾಕ್ಷನ್ ನೋಡಿ ಆಮೇಲೆ ಹೇಳ್ತೀನಿ, ‘ಸರ್, ಈ ತರ ಆಗಿದೆ, ಇದನ್ನ ಮಾಡಿಕೊಡಬೇಕು’ ಅಂತ.
ರಾಕೇಶ್: ಆಮೇಲೆ ಅವರು ಏನು ಮಾಡಬೇಕು ಅಂತ ಕೇಳ್ತಾರೆ. ಅದಕ್ಕೂ ಮುಂಚೆ ನಿಮ್ಮ ಮ್ಯಾಟರ್ ಹೇಳಬಾರದು, ಅವರ ರಿಯಾಕ್ಷನ್ ಮೊದಲು ನೋಡೋಣ.
ರಾಕೇಶ್: ಆಮೇಲೆ ನಾವು ಮೂರು ವಿಷಯ ಕೇಳೋಣ.
ರಾಕೇಶ್: ಒಂದು ಎಲೆಕ್ಷನ್ ಟಿಕೆಟ್ ಕೊಡಬೇಕು. ಎಲೆಕ್ಷನ್ ಕಂಟೆಸ್ಟ್ ಮಾಡೋಕೆ ನಮಗೆ ದುಡ್ಡು ಕೊಡಬೇಕು. ಆಮೇಲೆ ಬಂದು ಅವಳ ಹತ್ರ ಮಾತಾಡಿ ಅವಳಿಗೆ ಬರಬೇಕಾದದ್ದನ್ನು ಅವಳಿಗೆ ಕೊಡಬೇಕು. ಅರ್ಥ ಆಯ್ತಾ?
ರಾಕೇಶ್: ಅವನು ಒಂದು ಸಾರಿ ಇಲ್ಲಿ ಬರಲಿ. ಯಾಕೆಂದರೆ ಇದು ಪರ್ಮನೆಂಟ್ ಆಗಿ ಸಾಲ್ವ್ ಆಗಬೇಕು. ವಾಪಸ್ ತಗೊಂಡು ಮತ್ತೆ ಶುರು ಮಾಡಿದರೆ ನಾವಿಲ್ಲಿ ಮಧ್ಯ ಬರೋದು, ಇದು ಮುಗಿಯದ ಸಮಸ್ಯೆಯಾಗುತ್ತೆ.
ರಾಕೇಶ್: ಅವನ ಹೆಸರೇನು? ನಿಮ್ಮ ಕಡೆಯಿಂದ ಇನ್ನೊಬ್ಬ ಬಂದಿದ್ದನಲ್ಲ?
ಮಹಿಳೆ: ಬಾಲರಾಜ್.
ರಾಕೇಶ್: ಅವನು ಹಿಂದೂನಾ?
ರಾಕೇಶ್: ಈಗ ಅದನ್ನ ಬಿಡಿ. ಅವಳು ಮೀಟ್ ಮಾಡೋಕೆ ರೆಡಿ ಇದ್ದಾಳೆ ಅಲ್ವಾ? ನನಗೆ ಬಿಡಿ. ನಾನು ಅವಳಿಗೆ ಕೇಳಿದ್ದೆ, ‘ನೀನು ಅವನನ್ನ ಭೇಟಿಯಾಗ್ತೀಯಾ?’ ಅಂತ.
ಮಹಿಳೆ: ಅವಳು ಒಂದು ಚೂರು ಯೋಚನೆಯೇ ಮಾಡಲಿಲ್ಲ.
ರಾಕೇಶ್: ಅಶೋಕ್ ರೈ ಅವರ ಇನ್ಫ್ಲುಯೆನ್ಸ್ ಹೇಗಿದೆ?
ಮಹಿಳೆ: ಅವರಿಗೆ ತುಂಬಾ ಇನ್ಫ್ಲುಯೆನ್ಸ್ ಇದೆ. ಅದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.
ರಾಕೇಶ್: ಕೇರಳ ಅಕ್ಕ.
ಮಹಿಳೆ: ನಮ್ಮನ್ನು ನೋಡಿ ನಗ್ತಾರಂತೆ. ಎಂಥ ಹುಚ್ಚು ಜನ ಇವರು!
ರಾಕೇಶ್: ದುಡ್ಡು ಖರ್ಚು ಮಾಡ್ತಾರೆ ಅಷ್ಟೇ. ಅವರಿಗೆ ಸುಮ್ಮನೆ ಅಡ್ಡಾಡೋಕೆ ಬರಲ್ಲ. ಈ ಹುಚ್ಚರಿಗೆ ನಾವೇ ಗೆಲ್ತೀವಿ ಅಂತ ಅನ್ಸುತ್ತೆ.
(ಹೋಟೆಲ್ ರೂಮ್ ರಿಸೆಪ್ಷನ್ ಮತ್ತು ಲಿಫ್ಟ್ ಸಂಭಾಷಣೆ)
ಮಹಿಳೆ: ಸಿದ್ದರಾಮಯ್ಯ ಅವರಿಗೆ ಇವಾಗ ಮಾಡೋಕೆ ಆಗಲ್ವಾ?
ರಾಕೇಶ್: ಅವಳು ಯಾವಾಗ ಬೇಕಾದರೂ ಮೀಟ್ ಮಾಡೋಕೆ ರೆಡಿ ಅಂತ ಹೇಳಿದ್ಲು ಅಲ್ವಾ? ಅದಾದ ಮೇಲೆ 100% ಆಗುತ್ತೆ. ಅಲ್ಲಿಯವರೆಗೂ ನಾನು ಅವಳಿಗೆ ಕೇಳ್ತಿದ್ದೆ — ‘ಮೀಟ್ ಮಾಡ್ತೀಯಾ? ನಿನಗೇನು ಬೇಕು?’ ಅಂತ. ಅವಳು ತುಂಬಾ ಮುಗ್ಧೆ, 100% ಸರಿ ಇದ್ದಾಳೆ.
ಮಹಿಳೆ: ಅವಳು ಮೊದಲ ಸಾರಿ ಭೇಟಿಯಾದಾಗ ಯಾವ ಸ್ಟೈಲ್‌ನಲ್ಲಿ ಹೇಳ್ತಾಳೆ ಅಂತ ನಾನು ನೋಡಬೇಕು.
ರಾಕೇಶ್: ಬನ್ನಿ ಅಕ್ಕ.
ಮಹಿಳೆ: ರೂಮ್ ತುಂಬಾ ಚೆನ್ನಾಗಿದೆ.
ರಾಕೇಶ್: ಅದಕ್ಕೇ ಇಲ್ಲಿ ಮೀಟ್ ಮಾಡಿ ಆರಾಮಾಗಿ ಮಾತಾಡೋಣ ಅಂತ ಹೇಳಿದ್ದು.
ಮಹಿಳೆ: ಅವಳು ಇಲ್ಲಿಗೆ ಬರಬೇಕಲ್ವಾ? ನಾನು ಬಾತ್‌ರೂಮ್‌ಗೆ ಹೋಗಿ ಬರ್ತೀನಿ.
ರಾಕೇಶ್: ಬನ್ನಿ, ಬನ್ನಿ ಪ್ಲೀಸ್. ಹೌದು, ಇದು ತುಂಬಾ ದೊಡ್ಡ ರೂಮ್.
(ಫೋನ್‌ನಲ್ಲಿ ಮೆಸೇಜ್ ಸೂಚನೆ / ರೂಮ್ ಒಳಗೆ)
ರಾಕೇಶ್: ನಾನು ಹೋದ ಮೇಲೆ ಹೇಳ್ತೀನಿ ಮೇಲೆ ಬಂದಿರು ಅಂತ. ನಾನು ರೂಮ್‌ಗೆ ಬಂದಿದ್ದೀನಿ. ಚೆಕ್-ಇನ್ ಮಾಡೋದು ಬೇಡ, ನಾನು ತಗೊಂಡಿದ್ದೀನಿ, ಮೇಲೆ ಬಾ.
ರಾಕೇಶ್: ಅಕ್ಕ, ನೀವು ಹೋಗುವಾಗ ಊಟ ಸಿಗದೇ ಇರಬಹುದು, ಬ್ಯಾಗ್‌ನಲ್ಲಿ ಗೋಡಂಬಿ (ಕ್ಯಾಶ್ಯೂ) ಇಟ್ಟುಕೊಳ್ಳಿ.
ಮಹಿಳೆ: ಇಲ್ಲ ಇಲ್ಲ, ಬೇಡ.
ರಾಕೇಶ್: ನನಗೆ ಈಗ ಒಂದು ಫೋಟೋ ಕಳಿಸಿ, ನಾನು ಇವತ್ತು ರಾತ್ರಿ ಅವರನ್ನ ಮೀಟ್ ಮಾಡ್ತೀನಿ.
ಮಹಿಳೆ: ಅವರು ಇವತ್ತು ಸಿಗಲಿಲ್ಲ ಅಲ್ವಾ?
ರಾಕೇಶ್: ನಾಳೆ ಆದ್ರೂ ಸರಿ, ನಾನು ಅರೇಂಜ್ ಮಾಡ್ತೀನಿ. ನೀವು ಅದನ್ನ ಬಿಡಿ. ಒಂದೇ ಫೋಟೋ ಕಳಿಸಿ ಸಾಕು, ಬೇರೇನೂ ಬೇಡ.
ಮಹಿಳೆ: ಸರಿ, ಎರಡು ಫೋಟೋ ಕಳಿಸ್ತೀನಿ.
ರಾಕೇಶ್: ಹೌದು, ಆ ಎರಡು ಫೋಟೋ ಕಳಿಸಿ ಸಾಕು.
ಮಹಿಳೆ: ಅವಳು ಚಿಕ್ಕವಳಿದ್ದಾಗಿನ ಫೋಟೋ ಇದೆ. ನಿಮಗೆ ಧೈರ್ಯ ಇದೆ ಅಲ್ವಾ?
ರಾಕೇಶ್: ಅಕ್ಕ, ನನಗೆ ಧೈರ್ಯ ಇಲ್ಲ ಅಂದಿದ್ದರೆ ನಾನು ಎಲ್ಲ ಕೆಲಸ ಬಿಟ್ಟು ನಿಮ್ಮ ಜೊತೆ ನಿಲ್ತಿರಲಿಲ್ಲ. ನಾನು ನಿಮ್ಮ ಜೊತೆ ನಿಲ್ಲಬೇಕು ಅಂದ್ರೆ ನಿಲ್ತೀನಿ. ನಾನು ಅವನಿಗೆ ಹೇಳ್ತೀನಿ — ‘ಸರ್ ಬನ್ನಿ, ಫ್ಲೈಟ್‌ನಲ್ಲಿ ಹೋಗೋಣ’ ಅಂತ ಕರೆದುಕೊಂಡು ಬರ್ತೀನಿ.
ಮಹಿಳೆ: ಅವನನ್ನು ಕರೆತರೋದು ಬೇಡ, ಪಾಪ ಅವಳಿಗೆ ಮುಜುಗರ ಆಗಬಹುದು.
ರಾಕೇಶ್: ಅಕ್ಕ, ಅವಳು ‘ಬನ್ನಿ’ ಅಂತಿದ್ದಾಳೆ ಅಲ್ವಾ? ಅವರನ್ನ ಕರೆದುಕೊಂಡು ಬಂದರೆ ನಮ್ಮ ಕೈ ಮೇಲಾಗುತ್ತೆ. ನೀವು ಅಲ್ಲಿ ಕೂತು, ‘ಇನ್ನು ಮೇಲೆ ಇವರನ್ನ ಡಿಸ್ಟರ್ಬ್ ಮಾಡಬೇಡಿ’ ಅಂತ ಹೇಳಿ. ಅವರ ಮುಂದೆಯೇ ‘ನಾನು ಇಷ್ಟನ್ನು ಕೊಡ್ತೀನಿ’ ಅಂತ ಅವಳ ಹತ್ತಿರ ಹೇಳಿಸಿ, ಅವಳು ಕೊಡೋ ಹಾಗೆ ಮಾಡಿ. ನೀವು ಮ್ಯಾಟರ್ ಸೆಟಲ್ ಮಾಡ್ತಿರೋ ತರ ಹ್ಯಾಂಡಲ್ ಮಾಡಬೇಕು.
ರಾಕೇಶ್: ನಾನು ಬರಲ್ಲ, ಚಿಂಟುಗೆ ಹೇಳ್ತೀನಿ. ಈ ಊರಿನ ಡೊನೇಶನ್ ವಿಚಾರ…

ಮಹಿಳೆ: ನೀವು ನಿಮ್ಮ ಪರಿಸ್ಥಿತಿ ಹೇಳ್ತಿದ್ದೀರಾ, ಆದರೆ ನನ್ನ ಪರಿಸ್ಥಿತಿ ಏನು?
ರಾಕೇಶ್: ಫೋಟೋ ಕಳಿಸೋಕೆ ಹೇಳಿದ್ಲು ಅಕ್ಕ. ಪಾಪ, ಅವಳ ಹಸ್ಬೆಂಡ್ ನೋಡಿದ್ರೆ ಸಪೋರ್ಟ್ ಮಾಡ್ತಾನಂತೆ ನೋಡಿ.
ಮಹಿಳೆ: ನಾನು ಫೋಟೋ ಕಳಿಸಿದ್ದೀನಿ.
ರಾಕೇಶ್: ಹೌದು, ಕಳಿಸಿದ್ದೀರಾ, ನೋಡಿದೆ. ಇವಳು ನನ್ನ ಮಕ್ಕಳಿಗಿಂತಲೂ ಚಿಕ್ಕವಳು, ನನ್ನ ಮಗಳಿಗಿಂತ ಚಿಕ್ಕವಳು.
ರಾಕೇಶ್: ಈ ಸಾರಿಯ ಎಲೆಕ್ಷನ್ ಅಷ್ಟು ಸುಲಭ ಇಲ್ಲ ಅಕ್ಕ, ಯಾರಿಗೂ ಸುಲಭವಲ್ಲ.
ಮಹಿಳೆ: ಯೋಚನೆ ಮಾಡಿದರೇ ಭಯ ಆಗುತ್ತೆ, ನಾನು ನಿಲ್ಲಬೇಕೋ ಬೇಡವೋ ಅಂತ.
ರಾಕೇಶ್: ಆದರೆ ಪುತ್ತೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ಮಾತಿದೆ ಅಲ್ವಾ? ಕಾಪು ಕೂಡ ಸೋಲುತ್ತೆ ಅಂತಿದ್ದಾರೆ. ಕಾಂಗ್ರೆಸ್ ಸರ್ವೆಯಲ್ಲಿ ಕಾಪುವಿನಲ್ಲಿ ರಮಾನಾಥ ರೈ ಇಲ್ಲ, ಆದರೆ ಪುತ್ತೂರು ಇದೆ.
ಮಹಿಳೆ: ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸಿದರೆ ನಮಗೆ ಅಷ್ಟೇ ಸಾಕು.
ರಾಕೇಶ್: ಅದೇ, ಅದೇ.
ಮಹಿಳೆ: ಟಿಕೆಟ್ ಸಿಗೋದು ದೊಡ್ಡ ವಿಚಾರ ಅಲ್ಲ.
ರಾಕೇಶ್: ಟಿಕೆಟ್ ಕೊಡೋದು ದೊಡ್ಡ ವಿಷಯ ಅಲ್ಲ, ಎಲ್ಲರೂ ಕೊಡ್ತಾರೆ. ಅವರು ದುಡ್ಡು ಕೊಟ್ಟು ಗೆಲ್ಲಿಸಬೇಕು. ಅವರು ಒಮ್ಮೆಯಲ್ಲ, ಎರಡು ಸಾರಿ ಬರಬೇಕು. ಎರಡು ಸಾರಿ ಬಂದು ಶಕುಂತಳಾ ಅಕ್ಕನಿಗೆ ಪ್ರಾಮಿಸ್ ಮಾಡಬೇಕು.
ಮಹಿಳೆ: ಪ್ರಾಮಿಸ್ ಮಾಡಬೇಕು. ‘ನಾನು ಸಿದ್ದರಾಮಯ್ಯ ಅವರಿಗೆ ಈಗಲೇ ಫೋನ್ ಮಾಡಿದ್ರೆ ನಾಳೆಯೇ ಟಿಕೆಟ್ ಕೊಡುಸ್ತೀನಿ’ ಅಂತ ಅವಳು ಹೇಳ್ತಿದ್ದಳು. ನನಗೆ ಹೇಳಿದ್ದಲ್ಲ, ಬೇರೆಯವರಿಗೆ ಹೇಳಿದ್ದು. ನಾನೇನು ಟ್ರೈ ಮಾಡಿಲ್ಲ.
ಮಹಿಳೆ: ನಮ್ಮ ಕಡೆ ಇನ್ನೊಬ್ಬ ನಗ್ತಾ ಇದ್ದಾನೆ.
ರಾಕೇಶ್: ಯಾರು?
ಮಹಿಳೆ: ಅಶೋಕ್ ರೈ.
ರಾಕೇಶ್: ಅವನು ಹುಚ್ಚ, ಅವನದೆಲ್ಲಾ ಹುಚ್ಚುತನ.
ಮಹಿಳೆ: ಕೊನೆ ಗಳಿಗೆಯಲ್ಲಿ ಡಿ.ಕೆ. ಅವರನ್ನು ತಿರುಗಿಸಿದ್ರೂ, ಕೆಲವರನ್ನು ತಿರುಗಿಸಲು ದೇವರಿಂದಲೂ ಸಾಧ್ಯವಿಲ್ಲ.
ಮಹಿಳೆ: ‘ಮಕ್ಕಳ ಹಕ್ಕುಗಳ ಆಯೋಗ ಇತ್ತು ಅಂತ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆಯಿಂದ ಬಂದಿದ್ದು’ ಅಂತ ಅವರಿಗೆ ಹೇಳಿ.
ರಾಕೇಶ್: ಅದು ಆಮೇಲೆ ಬರೋದು. ಈಗ ನಿಮ್ಮ ಹೆಸರು ಹೇಳಬೇಡಿ ಅಕ್ಕ.
ಮಹಿಳೆ: ಇಲ್ಲ ಇಲ್ಲ, ನನ್ನ ಹೆಸರು ಈಗ ಹೇಳಬೇಡಿ. ಎಲ್ಲರ ರಿಯಾಕ್ಷನ್ ನೋಡಿ ಆಮೇಲೆ ಹೇಳ್ತೀನಿ ಅಂದಿದ್ರಲ್ವಾ?
ರಾಕೇಶ್: ಹೌದು, ನಿಮ್ಮ ಹೆಸರು ಆಮೇಲೆ ಹೇಳೋಣ, ಈಗ ಬೇಡ.
ಮಹಿಳೆ: ನಾನು ಬರ್ತೀನಿ, ಥ್ಯಾಂಕ್ ಯು, ಥ್ಯಾಂಕ್ ಯು.
ರಾಕೇಶ್: ಓಕೆ ಅಕ್ಕ, ಓಕೆ.
(ಡ್ರೈವರ್ ಜೊತೆ ಸಂಭಾಷಣೆ)
ರಾಕೇಶ್: ನಿಮ್ಮ ಹೆಸರು ಏನು?
ಡ್ರೈವರ್: ಶಿಜು.
ರಾಕೇಶ್: ನೀವು ಇಲ್ಲಿ ಏನು ಕೆಲಸ ಮಾಡ್ತಿರೋದು?
ಡ್ರೈವರ್: ರೆಡಿಮೇಡ್ ಶಾಪ್.
ರಾಕೇಶ್: ರೆಡಿಮೇಡ್ ಶಾಪ್? ಎಲ್ಲಿ?
ಡ್ರೈವರ್: ಮಾಂಗಾವು.
ರಾಕೇಶ್: ಗಾರ್ಮೆಂಟ್ಸ್ ಆ?
ಡ್ರೈವರ್: ಗಾರ್ಮೆಂಟ್ಸ್. ಮುಂಚೆ ಕೋರಮಂಗಲದಲ್ಲಿ ಇದ್ದೆ, ಆಮೇಲೆ ಜೆ.ಪಿ. ನಗರ.
ರಾಕೇಶ್: ಬೆಂಗಳೂರಿಗೆ ಬಂದರೆ ಫೋನ್ ಮಾಡಿ.
ಡ್ರೈವರ್: ಸರ್ ನಿಮ್ಮ ಹೆಸರು?
ರಾಕೇಶ್: ರಾಕೇಶ್. ನಿಮ್ಮ ನಂಬರ್ ಕೊಡಿ.
ಡ್ರೈವರ್: 85… 89… 00… 66… 88.
ರಾಕೇಶ್: ಬಾಲರಾಜ್ ಏನು ಮಾಡ್ತಾರೆ?
ಡ್ರೈವರ್: ಬಾಲರಾಜ್.
(ವಿಡಿಯೋದ ಕೊನೆಯಲ್ಲಿ)
ವ್ಯಕ್ತಿ (ಸೆಲ್ಫಿ ಕ್ಯಾಮೆರಾ): ರೂಮ್ ಚೆಕ್-ಇನ್ ಮಾಡೋದು ಗೊತ್ತಿಲ್ಲ… ಆಗಿದೆ ಇಲ್ಲೋ ಗೊತ್ತಿಲ್ಲ ನೋಡಿ.
ಸರಿ. ಕುಟುಂಬದವರು, ಸ್ನೇಹಿತರು, ಸಂಬಂಧಿಕರು ಎಲ್ಲ ಇರ್ತಾರೆ. ರಿಸ್ಕ್ ತಗೊಳ್ಳೋದು ಬೇಡ ಅಂತ ನಾನೇ ಒಂದು ರೂಮ್ ಬುಕ್ ಮಾಡಿದೆ.
ಅಲ್ಲಿ ಕುಳಿತು ಮಾತನಾಡೋಣ ಅಂದುಕೊಂಡೆ. ಯಾಕಂದ್ರೆ ಇದು ಹುಡುಗಿ ವಿಷಯ. ಬೇರೆಯವರು ಯಾರಾದರೂ ನೋಡಿದರೆ ಕಷ್ಟ. ಆಕೆಗೆ ಬಹಳ ಭಯವಿತ್ತು, ಬುರ್ಖಾ ಹಾಕಿಕೊಂಡು ಬಂದಿದ್ದಳು. ಯಾರಾದರೂ ಗುರುತು ಹಿಡಿಯುತ್ತಾರೆ ಎಂಬ ಭಯ ಆಕೆಗಿತ್ತು.
ಆಕೆ ಮುಸ್ಲಿಂ ಹುಡುಗಿ. ಇದು ನಡೆದದ್ದು ಸುಮಾರು 10 ವರ್ಷಗಳ ಹಿಂದೆ. ಆ ಸಮಯದಲ್ಲಿ ಆಕೆಗೆ ವಯಸ್ಸು ತೀರಾ ಚಿಕ್ಕದಿತ್ತು, ಮೈನರ್ ಆಗಿದ್ದಳು.
ಆಕೆ ನೋಡಲು ತುಂಬಾ ಚೆನ್ನಾಗಿದ್ದಳು. ಯಾವುದೋ ಒಂದು ದೊಡ್ಡ ಜಾಲ ಅಥವಾ ಗ್ಯಾಂಗ್ ಆಕೆಯನ್ನು ಈ ಸೆಕ್ಸ್ ರಾಕೆಟ್‌ಗೆ ಬಲಿ ಪಡೆದಿತ್ತು.
ಆಕೆಗೆ ಸುಮಾರು 14 ವರ್ಷ ವಯಸ್ಸಿದ್ದಾಗ, ಪದವಿ ಓದುತ್ತಿದ್ದಾಗ ಈ ರೀತಿ ದೌರ್ಜನ್ಯಕ್ಕೊಳಗಾಗಿದ್ದಳು.
ದುರದೃಷ್ಟವಶಾತ್ ಅಥವಾ ಅದೃಷ್ಟವಶಾತ್, ಇದನ್ನು ಮಾಡಿದ ವ್ಯಕ್ತಿ ಕನ್ಯತ್ವ (ವರ್ಜಿನ್) ಹುಡುಕುತ್ತಿದ್ದನಂತೆ.
ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ಒಬ್ಬ ಉದ್ಯಮಿ ಇದ್ದ. ಆತ ಈ ರಾಜಕೀಯ ಪಕ್ಷಕ್ಕೆ ಹತ್ತಿರದವನು. ಆತನೇ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ.
ಆಕೆಗೆ ಇಂದಿಗೂ ಆ ಜಾಗ ನೆನಪಿದೆ. ಮಣಿಪಾಲ್ ಆಸ್ಪತ್ರೆ ಎದುರುಗಡೆ ಇರುವ ಒಂದು ಮಲ್ಟಿ-ಸ್ಟೋರಿ ಕಟ್ಟಡದ 4ನೇ ಮಹಡಿಯಲ್ಲಿ ಈ ಘಟನೆ ನಡೆದಿತ್ತು.
ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ನಂತರ ಆ ನಾಯಕನ ಪ್ರತಿನಿಧಿ ಮತ್ತು ಒಬ್ಬ ವಕೀಲ ಮಧ್ಯಸ್ಥಿಕೆ ವಹಿಸಿದ್ದರು.
ರಾಕೇಶ್; ನಿಮಗೆ ಯಾವ ಭಾಷೆ ಗೊತ್ತು? ಇಂಗ್ಲಿಷ್? ಬನ್ನಿ ಸರ್, ಮುಂದೆ ಬನ್ನಿ, ಏನಾಯಿತು ಹೇಳಿ
ಸಂತ್ರಸ್ತೆ; ನನಗೆ 13-141 ವರ್ಷ ಇದ್ದಾಗ ನಾನು ಬೆಂಗಳೂರಿಗೆ ಬಂದೆ. ಮಣಿಪಾಲ್ ಆಸ್ಪತ್ರೆ ಹತ್ತಿರ ಒಂದು ಅಪಾರ್ಟ್‌ಮೆಂಟ್ ಇದೆ. ಅಲ್ಲಿಗೆ ಒಬ್ಬ ಮಧ್ಯವರ್ತಿ ಬಂದಿದ್ದ, ಆತ ಬಂದಿರುವ ವ್ಯಕ್ತಿ ಒಬ್ಬ ದೊಡ್ಡ ರಾಜಕಾರಣಿ ಎಂದು ಹೇಳಿದ.
ರಾಕೇಶ್; ನೋಡಿ, ಆತ ನನಗೆ ಎಲ್ಲವನ್ನೂ ಹೇಳಿದ್ದಾನೆ. ಆದರೆ ನಾನು ನಿಮ್ಮಿಂದಲೇ ಸತ್ಯ ಕೇಳಬೇಕು. ಇದು ಸಣ್ಣ ವಿಷಯವಲ್ಲ. ನಾವು ನಿಮಗೆ ಸಹಾಯ ಮಾಡಲು ಬಯಸುತ್ತೇವೆ. ನಾವು ದೊಡ್ಡ ಶಕ್ತಿಶಾಲಿ ವ್ಯಕ್ತಿಗಳ ವಿರುದ್ಧ ಹೋಗುತ್ತಿದ್ದೇವೆ. ಆದ್ದರಿಂದ ನಿಮ್ಮ ಸಹೋದರನಂತೆ ನಾನು ನಿಮ್ಮಿಂದ ಕೇಳಲು ಬಯಸುತ್ತೇನೆ. ನಾನು ಈಕೆಯ ಸಹೋದರನೇ. ನಮಗೆ ನಿಮ್ಮಿಂದ ಏನೂ ಬೇಡ. ಆ ಸಮಯದಲ್ಲಿ ನಿಮ್ಮ ವಯಸ್ಸು ಎಷ್ಟಿತ್ತು? ನೀವು ಇದಕ್ಕೆ ಹೇಗೆ ಸಿಲುಕಿಕೊಂಡಿರಿ ಹೇಳಿ?
ಸಂತ್ರಸ್ತೆ; 14 ವರ್ಷ. ನಾನು 9ನೇ ತರಗತಿಯಲ್ಲಿದ್ದೆ.
ರಾಕೇಶ್; ಸರಿ, ನೀವು ಆ ಅಪಾರ್ಟ್‌ಮೆಂಟ್‌ಗೆ ಬಂದಿರಿ, ಅದು ಎಷ್ಟನೇ ಮಹಡಿ? ೪ನೇ ಮಹಡಿ. ಯಾರೋ ನಿಮ್ಮನ್ನು ಪರಿಚಯಿಸಿರಬೇಕಲ್ಲ, ಯಾರು ಪರಿಚಯಿಸಿದ್ದು?
ಸಂತ್ರಸ್ತೆ; ಅವರು ನಮ್ಮ ಅಮ್ಮನ ಗೆಳೆಯ/ಗೆಳೆತಿ. ನಿಮ್ಮ ಅಮ್ಮನಿಗೆ ಈ ವಿಷಯ ಗೊತ್ತಿತ್ತಾ? ಹೌದು, ಗೊತ್ತಿತ್ತು.
ರಾಕೇಶ್; ಸರಿ, ನನ್ನನ್ನು ನಿಮ್ಮ ಸಹೋದರ ಅಂದುಕೊಳ್ಳಿ, ಹಿಂಜರಿಯಬೇಡಿ. ಅವರು ನಿಮ್ಮನ್ನು ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋದರು, ಅಲ್ಲಿ ಯಾರಿದ್ದರು?
ಸಂತ್ರಸ್ತೆ; ಅವರೂ ಸೇರಿ ನಾಲ್ಕು ಜನರಿದ್ದರು.
ರಾಕೇಶ್; ಅವರೂ ಅಂದರೆ ಯಾರು? ಸಿದ್ಧರಾಮಯ್ಯ ಅವರೇ ಅಲ್ಲಿದ್ದರಾ?
ಸಂತ್ರಸ್ತೆ; ಆ ಸಮಯದಲ್ಲಿ ಆತ ಯಾರೆಂದು ನನಗೆ ಗೊತ್ತಿರಲಿಲ್ಲ, ನಂತರ ನಾನು ಅವರನ್ನು ಗುರುತಿಸಿದೆ. ಆತನ ಮುಖ ನನಗೆ ನೆನಪಿತ್ತು.
ರಾಕೇಶ್; ನೀವು ರೂಮಿಗೆ ಹೋದ್ರಿ, ಆಮೇಲೆ ಯಾರು ಬಂದ್ರು?
ಸಂತ್ರಸ್ತೆ; ಸಿದ್ಧರಾಮಯ್ಯ ಬಂದರು, ಅವರು ಕರ್ನಾಟಕದ ನಾಯಕ. ಆಮೇಲೆ ಅವರು ತಮ್ಮ ಹೆಸರು ಸಿದ್ಧರಾಮಯ್ಯ ಎಂದು ಹೇಳಿಕೊಂಡರು.
ರಾಕೇಶ್; ಅವರು ಅಲ್ಲಿ ತುಂಬಾ ಸಮಯ ಇದ್ದರಾ?
ಸಂತ್ರಸ್ತೆ; ಹೌದು, ಸುಮಾರು 1 ರಿಂದ 2 ಗಂಟೆಗಳ ಕಾಲ ಇದ್ದರು.
ರಾಕೇಶ್; ಅವರು ನಿಮಗೆ ಏನಾದರೂ ನೀಡಿದರಾ?
ಸಂತ್ರಸ್ತೆ; ಇಲ್ಲ, ಅವರು ಮಧ್ಯವರ್ತಿಗೆ ಹಣ ಕೊಟ್ಟರು. ಎಷ್ಟು ಕೊಟ್ಟರು ಎಂದು ನನಗೆ ಗೊತ್ತಿಲ್ಲ.
ರಾಕೇಶ್; ಆ ಸಮಯದಲ್ಲಿ ನೀವು ಅವರ ಬಳಿ ವಿನಂತಿಸಿಕೊಂಡಿರಾ?
ಸಂತ್ರಸ್ತೆ; ಆ ಸಮಯದಲ್ಲಿ ನನಗೆ ತುಂಬಾ ಭಯವಾಗಿತ್ತು, ಮಾನಸಿಕವಾಗಿ ಕುಗ್ಗಿಹೋಗಿದ್ದೆ.
ರಾಕೇಶ್; ಆತ ನಿಮ್ಮನ್ನು ಸಮಾಧಾನಪಡಿಸಲಿಲ್ಲವೇ?
ಸಂತ್ರಸ್ತೆ; ಇಲ್ಲ
ರಾಕೇಶ್; ಆತ ನಿಮಗೂ ಹಣ ಕೊಡಲಿಲ್ಲ, ನೇರವಾಗಿ ನಿಮ್ಮ ಮಧ್ಯವರ್ತಿಗೆ ಕೊಟ್ಟ. ಇಷ್ಟೆಲ್ಲಾ ವರ್ಷಗಳ ಕಾಲ ನೀವೇಕೆ ಸುಮ್ಮನಿದ್ದಿರಿ?
ಸಂತ್ರಸ್ತೆ; ನಾನು ಖಿನ್ನತೆಯಲ್ಲಿದ್ದೆ.
ರಾಕೇಶ್; ನಿಮ್ಮ ಬಳಿ ಏನಾದರೂ ಸಾಕ್ಷಿ ಇದೆಯಾ? ನಾನು ಆಕೆಗೆ ಸಾಕ್ಷಿ ನೀಡಿದ್ದೇನೆ.
ಆ ಸಾಕ್ಷಿಯನ್ನು ನೀವೇಕೆ ಇಟ್ಟುಕೊಂಡಿದ್ದೀರಿ?
ಸಂತ್ರಸ್ತೆ; ಏಕೆಂದರೆ ಅದು ನನ್ನ ಜೀವನದ ಮೊದಲ ಅನುಭವ, ನಾನು ತುಂಬಾ ನೊಂದಿದ್ದೆ ಮತ್ತು ತೊಂದರೆಯಲ್ಲಿದ್ದೆ.
ರಾಕೇಶ್; ಯಾರಾದರೂ ನಿಮ್ಮನ್ನು ಸಂಪರ್ಕಿಸಿದರಾ?
ಸಂತ್ರಸ್ತೆ; ಇಲ್ಲ, ನನ್ನ ತಾಯಿಗೆ ವಿಷಯ ಗೊತ್ತು.
ರಾಕೇಶ್; ಈಗ ನಿಮಗೆ ಮದುವೆಯಾಗಿದೆಯಾ?
ಸಂತ್ರಸ್ತೆ; ಹೌದು, ಇಬ್ಬರು ಮಕ್ಕಳಿದ್ದಾರೆ
ರಾಕೇಶ್; ನಿಮ್ಮ ಪತಿ ಏನು ಕೆಲಸ ಮಾಡುತ್ತಾರೆ? ಸಿದ್ಧರಾಮಯ್ಯ ಅವರ ಯಾವುದೇ ಗುರುತು ನಿಮಗಿದೆಯಾ?
ಸಂತ್ರಸ್ತೆ; ಅವರ ಮುಖ ನನಗೆ ಗೊತ್ತಿದೆ, ಆ ಕಟ್ಟಡವನ್ನು ಕೂಡ ಗುರುತಿಸಬಲ್ಲೆ.
ರಾಕೇಶ್; ಈಗ ನಿಮಗೆ ಹೋರಾಟ ಮಾಡಬೇಕಾ ಅಥವಾ ಏನು ಬೇಕು?
ಸಂತ್ರಸ್ತೆ; ನನಗೇನು ಹೋರಾಟ ಬೇಡ
ರಾಕೇಶ್; ಆಕೆ ನನಗೆ ಹೇಳಿದಳು. ನಿಮಗೆ ನಮ್ಮಿಂದ ಸಹಾಯ ಬೇಕೇ?
ಸಂತ್ರಸ್ತೆ; ಹೌದು
ರಾಕೇಶ್; ಈಗ ಚುನಾವಣೆಯ ಸಮಯ.
ನೀವು ಆ ಕಟ್ಟಡವನ್ನು ಗುರುತಿಸಬಲ್ಲಿರಿ ಅಲ್ಲವೇ?
ಸಂತ್ರಸ್ತೆ; ಹೌದು, ಅದು ಮಣಿಪಾಲ್ ಆಸ್ಪತ್ರೆಯ ಎದುರುಗಡೆ ಇದೆ. ಈಗ ಆ ಕಟ್ಟಡ ಇದೆಯೋ ಅಥವಾ ಕೆಡವಿಹಾಕಿದ್ದಾರೋ ಯಾರಿಗೆ ಗೊತ್ತು.
ರಾಕೇಶ್; ಸಿದ್ಧರಾಮಯ್ಯ ನಿಮ್ಮನ್ನು ಹಾಳುಮಾಡಿದರು ಎಂದು ನೀವು ಬೇರೆಯವರಿಗೆ ಹೇಳಿದ್ದೀರಿ. ಆಕೆಗೆ ಸೇಡು ತೀರಿಸಿಕೊಳ್ಳುವ ಆಸೆ ಇದೆ. ನೀವು ಮಾಧ್ಯಮಗಳ ಮುಂದೆ ಹೋಗಲು ಸಿದ್ಧರಿದ್ದೀರಾ?
ಸಂತ್ರಸ್ತೆ; ಇಲ್ಲ, ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ರಾಕೇಶ್; ಯಾರಾದರೂ ನಿಮಗೆ ಆರ್ಥಿಕವಾಗಿ ಸಹಾಯ ಮಾಡಿದರೆ ನೀವು ಮಾಧ್ಯಮಗಳ ಮುಂದೆ ಹೋಗಲು ಸಿದ್ಧರಿದ್ದೀರಾ? ನಿಮಗೆ ಏನು ಬೇಕು ಎಂದು ಮುಕ್ತವಾಗಿ ಹೇಳಿ.
ರಾಕೇಶ್; ಒಂದು ವೇಳೆ ನಾನು ಸಿದ್ಧರಾಮಯ್ಯ ಅವರ ಮುಂದೆ ನಿಮ್ಮನ್ನು ಕರೆಸಿದರೆ ನೀವು ಬರುತ್ತೀರಾ?
ಸಂತ್ರಸ್ತೆ; ಅವಕಾಶ ಸಿಕ್ಕರೆ ಬರುತ್ತೇನೆ. ಏಕೆಂದರೆ ನನಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ.
ರಾಕೇಶ್; ಚಿಂತಿಸಬೇಡಿ, ನಾನು ಗೌಪ್ಯ ಸಭೆ ಏರ್ಪಡಿಸುತ್ತೇನೆ, 3-4 ಜನರಷ್ಟೇ ಇರುತ್ತೇವೆ. ನೀವು ಬೆಳಿಗ್ಗೆ ಫ್ಲೈಟ್‌ನಲ್ಲಿ ಬಂದು ಸಂಜೆ ಹಿಂತಿರುಗಬಹುದು.
ಸಂತ್ರಸ್ತೆ; ನನ್ನ ಅತ್ತೆ-ಮಾವಂದಿರು ಮನೆಯಲ್ಲಿದ್ದಾರೆ.
ರಾಕೇಶ್; ನಾನು ಅವರನ್ನು ಇಲ್ಲಿಗೇ ಕರೆಸಿದರೆ ನೀವು ಭೇಟಿಯಾಗುತ್ತೀರಾ? ಆತ ಇಲ್ಲಿಗೆಲ್ಲಾ ಬರಲು ಸಾಧ್ಯವಿಲ್ಲ. ನಾನು ಯಾವುದಾದರೂ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ನಾಲ್ಕೇ ಜನರ ಸಭೆ ಏರ್ಪಡಿಸುತ್ತೇನೆ.
ಆಕೆ ತುಂಬಾ ಮುಗ್ಧೆ ಮತ್ತು ಸ್ಪಷ್ಟವಾಗಿದ್ದಾಳೆ. ಅವರದ್ದು ಯಾವುದಾದರೂ ರಹಸ್ಯ ಗುರುತು ನಿಮಗೊತ್ತಿದೆಯಾ? ಇದು ಯಾವ ವರ್ಷದಲ್ಲಿ ನಡೆದಿದ್ದು? 2011 ರಲ್ಲಿ.
ರಾಕೇಶ್; ಅವರು ಎದುರಿಗೆ ಬಂದರೆ ನೀವು ಏನು ಹೇಳುತ್ತೀರಾ? ಮುಕ್ತವಾಗಿ ಹೇಳಿ. ಅವರನ್ನು ಹೊಡೆಯುತ್ತೀರಾ ಅಥವಾ ಏನು? “ನಾನು ನಿಮಗೆ ನೆನಪಿದ್ದೇನೆಯೇ?” ಎಂದು ಕೇಳುತ್ತೇನೆ. ಆದರೆ ಈಗ ನಿಮಗೆ ಅವರ ಮೇಲೆ ಸೇಡು ತೀರಿಸಿಕೊಳ್ಳುವ ಆಸೆ ಇಲ್ಲ ಅಲ್ಲವೇ?
ಸಂತ್ರಸ್ತೆ; ಇಲ್ಲ.
ರಾಕೇಶ್; ಈ ವಿಷಯ ನಿಮ್ಮ ಪತಿಗೆ ಗೊತ್ತಿದೆಯಾ?
ಸಂತ್ರಸ್ತೆ; ಹೌದು, ಅವರಿಗೆ ಗೊತ್ತಿದೆ.
ರಾಕೇಶ್; ನೀವು ಮತ್ತು ನಿಮ್ಮ ಪತಿ ಹೋರಾಡಲು ಬಯಸುತ್ತೀರಾ?
ಸಂತ್ರಸ್ತೆ; ಹೌದು.
ಈಗ ಅವರು ಕಾಂಗ್ರೆಸ್‌ನಲ್ಲಿದ್ದಾರೆ. ನಾವು ಕಮ್ಯುನಿಸ್ಟ್ ನಾಯಕರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು, ಅವರು ಇದನ್ನು ದೊಡ್ಡ ವಿಷಯ ಮಾಡುತ್ತಾರೆ. ಆದರೆ ಕಮ್ಯುನಿಸ್ಟರು ಇದರಿಂದ ರಾಜಕೀಯ ಲಾಭ ಪಡೆಯಲು ನೋಡುತ್ತಾರೆ.
ಆಕೆ ಕನ್ಯೆಯಾಗಿದ್ದಾಗ ಆಕೆಯನ್ನು ಮತ್ತು ಆಕೆಯ ಕುಟುಂಬವನ್ನು ಕ್ರೂರವಾಗಿ ಶೋಷಿಸಲಾಯಿತು.
ರಾಕೇಶ್; ನಾನು ಸಿದ್ಧರಾಮಯ್ಯ ಅವರನ್ನು ಇಲ್ಲಿಗೆ ಕರೆಸಿದರೆ ನೀವು ಅವರನ್ನು ಭೇಟಿಯಾಗುತ್ತೀರಲ್ಲವೇ?
ಸಂತ್ರಸ್ತೆ; ಹೌದು.
ರಾಕೇಶ್; ಅವರು ನಿಮಗೆ ಕ್ಷಮೆ ಕೇಳಿದರೆ ಏನು ಹೇಳುತ್ತೀರಾ? ಆದರೂ ನಿಮಗೆ ಸೇಡು ತೀರಿಸಿಕೊಳ್ಳಬೇಕೇ?
ಸಂತ್ರಸ್ತೆ; ಇಲ್ಲ.
ರಾಕೇಶ್; ನಾನು ನಿಮ್ಮ ಫೋಟೋವನ್ನು ಅವರಿಗೆ ತೋರಿಸಬಹುದೇ? ತೋರಿಸಿದರೆ ನಾನು ಅವರಿಗೆ ಹೇಗೆ ತಿಳಿಸಲಿ? ನಾನು ನಿಮ್ಮ ಅನುಮತಿ ಕೇಳುತ್ತಿದ್ದೇನೆ. ನಿಮ್ಮ ಹಳೆಯ ಫೋಟೋವನ್ನು ತೋರಿಸಬಹುದು.

ನಾನು ಯಾರೊಂದಿಗೂ ಫೋಟೋ ಹಂಚಿಕೊಳ್ಳುವುದಿಲ್ಲ, ಅವರಿಗೆ ಮಾತ್ರ ತೋರಿಸಿ “ಈ ರೀತಿ ನಡೆದಿದೆ, ಆ ಹುಡುಗಿ ನಿಮ್ಮನ್ನು ಭೇಟಿಯಾಗಲು ಬಯಸುತ್ತಿದ್ದಾಳೆ” ಎಂದು ಹೇಳುತ್ತೇನೆ. ನಂತರ ಅವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ನಾನು ಜಾಗ ಹೇಳಿದಾಗ ನೀವು ಒಂದೆರಡು ಜನರ ಜೊತೆ ಬರಬೇಕು.
ನಾನು ನಿಮಗಾಗಿಯೇ ಬಂದಿದ್ದೇನೆ. ಆಕೆ ಮುಂಜಾನೆ ೩ ಗಂಟೆಗೆ ಎದ್ದು ನಿಮಗಾಗಿಯೇ ಪ್ರಯಾಣ ಬೆಳೆಸಿ ಬಂದಿದ್ದಾಳೆ. ನನಗೂ ಒಬ್ಬಳೇ ಮಗಳಿದ್ದಾಳೆ, ಆಕೆಗೂ ಒಬ್ಬ ಮಗಳಿದ್ದಾಳೆ. ಇಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ಸಾಮಾನ್ಯನಲ್ಲ, ದೊಡ್ಡ ವ್ಯಕ್ತಿ. ಆತ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವ ಹಾದಿಯಲ್ಲಿದ್ದಾನೆ.




