Monday | September 7, 2026 |

ಏಪ್ರಿಲ್‌-ಜೂನ್ ತ್ರೈಮಾಸಿಕದಲ್ಲಿ 10,000 ಕೋಟಿ ಸಾಲ; ಆರ್‍‌ಬಿಐಗೆ ಮಾಹಿತಿ ಒದಗಿಸಿದ ಸರ್ಕಾರ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೇ  ಏಪ್ರಿಲ್‌ನಿಂದ ಜೂನ್‌ವರೆಗಿನ ತ್ರೈಮಾಸಿಕದಲ್ಲಿ 10,000 ಕೋಟಿ ರು. ಸಾಲ ಎತ್ತಲು ಹೊರಟಿದೆ. ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ ಮಾಹಿತಿ ನೀಡಿದೆ.

 

ಈ ಕುರಿತು  ಭಾರತೀಯ ರಿಸರ್ವ್‌ ಬ್ಯಾಂಕ್‌ 2024ರ ಮಾರ್ಚ್‌ 28ರಂದು ಹೇಳಿಕೆ ಬಿಡುಗಡೆ ಮಾಡಿದೆ.

 

ಕಳೆದ ಎಂಟು ತಿಂಗಳಲ್ಲಿ ಸಾರ್ವಜನಿಕ ಸಾಲವಾಗಿ   32,289 ಕೋಟಿ ರು.ಗಳನ್ನು  ಎತ್ತಿತ್ತು. ಅಲ್ಲದೇ  ಭಾರತೀಯ ರಿಸರ್ವ್‌ ಬ್ಯಾಂಕ್‌ ಮೂಲಕ ಮುಕ್ತ ಮಾರುಕಟ್ಟೆಯಿಂದ ಕೊನೆಯ  ತ್ರೈಮಾಸಿಕದಲ್ಲಿ (2023-24)  58,000 ಕೋಟಿ ರು‌.  ಎತ್ತುವಳಿ ಮಾಡಿತ್ತು. ಇದೀಗ  ಇದೇ ತ್ರೈಮಾಸಿಕದಲ್ಲಿ ಒಟ್ಟಾರೆ 10,000 ಕೋಟಿ ರು.ಗಳನ್ನು ಎತ್ತುವಳಿ ಮಾಡಲು ಹೊರಟಿರುವುದು ಮುನ್ನೆಲೆಗೆ ಬಂದಿದೆ. ಆರ್ಥಿಕ ವರ್ಷದ ಆರಂಭದ ಮೂರು ತಿಂಗಳಲ್ಲೇ 10,000 ಕೋಟಿ ರು ಸಾಲ ಎತ್ತಲಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಕರ್ನಾಟಕ ಸರ್ಕಾರ ಸೇರಿದಂತೆ ಇತರೆ ರಾಜ್ಯಗಳು ಸಹ ಇದೇ ತ್ರೈಮಾಸಿಕದಲ್ಲಿ ಒಟ್ಟಾರೆ 2,54,040 ಕೋಟಿ ರು. ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಆರ್‍‌ಬಿಐಗೆ ತಿಳಿಸಿದೆ.

 

2024ರ ಮೇ 7ರಂದು ದೇಶದ ಒಟ್ಟು ರಾಜ್ಯಗಳು 23,400 ಕೋಟಿ ರು ಸಾಲ ಎತ್ತಲಿವೆ. ಈ ಪೈಕಿ ಕರ್ನಾಟಕ ಸರ್ಕಾರವು 2,000 ಕೋಟಿ ರು.  ಎತ್ತುವಳಿ ಮಾಡಲಿದೆ.

 

ಮೇ 28ರಂದು ದೇಶದ ರಾಜ್ಯಗಳು 33,100 ಕೋಟಿ ರು ಎತ್ತಲಿರುವ ಸಾಲದ ಪೈಕಿ ಕರ್ನಾಟಕವು 3,000 ಕೋಟಿ ರು. ಪಡೆಯಲಿದೆ. ಜೂನ್‌ 4ರಂದು 18,600 ಕೋಟಿ ರು. ಸಾಲ ಎತ್ತಲಿರುವ ರಾಜ್ಯಗಳ ಪೈಕಿ ಕರ್ನಾಟಕವು 2,000 ಕೋಟಿ ರು., ಜೂನ್‌ 18ರಂದು 16,150 ಕೋಟಿ ರು ಸಾಲ ಎತ್ತಲಿರುವ ರಾಜ್ಯಗಳ ಪೈಕಿ ಕರ್ನಾಟಕವು   3,000 ಕೋಟಿ ರು. ಸಾಲ ಎತ್ತುವಳಿ ಮಾಡಲಿರುವುದು ಆರ್‍‌ಬಿಐನ ಹೇಳಿಕೆಯಿಂದ ತಿಳಿದು ಬಂದಿದೆ.

 

 

ಇದೇ ತ್ರೈಮಾಸಿಕದಲ್ಲಿ ಆಂಧ್ರ ಪ್ರದೇಶವು 20,000 ಕೋಟಿ ರು., ತಮಿಳುನಾಡು 25,000 ಕೋಟಿ , ತೆಲಂಗಾಣವು 16,000 ಕೋಟಿ, ಮಹಾರಾಷ್ಟ್ರ 60,000 ಕೋಟಿ, ಉತ್ತರ ಪ್ರದೇಶವು 19,000 ಕೋಟಿ, ಗುಜರಾತ್‌ 11,500 ಕೋಟಿ, ಕೇರಳ ಸರ್ಕಾರವು 9,000 ಕೋಟಿ ರು. ಸಾಲ ಎತ್ತಲಿದೆ ಎಂದು ಆರ್‍‌ಬಿಐ ತನ್ನ ಹೇಳಿಕೆಯಲ್ಲಿ ಮಾಹಿತಿ ಒದಗಿಸಿದೆ.

 

2024 ಜನವರಿ ಮತ್ತು ಮಾರ್ಚ್‌ ಅಂತ್ಯಕ್ಕೆ ಒಟ್ಟಾರೆ 4,13,452 ಕೋಟಿ ರು.ಗಳ ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಆರ್‍‌ಬಿಐಗೆ ತಿಳಿಸಿತ್ತು. ಈ ಪೈಕಿ ಕರ್ನಾಟಕ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗಾಗಿ ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು ಸಾಲ ಪಡೆಯುವುದಾಗಿ  ಆರ್‍‌ಬಿಐಗೆ ತಿಳಿಸಿತ್ತು. ದಕ್ಷಿಣದ ನೆರೆಯ ರಾಜ್ಯಗಳಿಗಿಂತಲೂ ಕರ್ನಾಟಕವು ಅತೀ ಹೆಚ್ಚಿನ ಮೊತ್ತದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆದಿತ್ತು.

 

2023-24 ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ 78,363 ಕೋಟಿ ರು., ಸಾಲ ಎತ್ತುವಳಿ ಮಾಡಲು ಅಂದಾಜಿಸಿದೆ. ಉಳಿದಂತೆ ಎಲ್ಐಸಿ, ಎನ್ ಎಸ್ಎಸ್ಎಫ್, ಎನ್ ಸಿಡಿಸಿಯಿಂದ 1,201 ಕೋಟಿ ರೂ. ಸಾಲವಾಗಿ ಒಟ್ಟು ಅಂದಾಜು 85,818 ಕೋಟಿ ರೂ. ಸಾಲ ಮಾಡಲು ಅಂದಾಜಿಸಿದೆ. ಈ ಪೈಕಿ 2024ರ ಫೆಬ್ರುವರಿ ಅಂತ್ಯಕ್ಕೆ 67,367 ಕೋಟಿ ರು ಸಾಲ ಎತ್ತಿರುವುದು ಗೊತ್ತಾಗಿದೆ.

ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು. ಸಾಲ ಎತ್ತುವಳಿ; ಆರ್‍‌ಬಿಐ ಕದ ತಟ್ಟಿದ ಸರ್ಕಾರ

2024ರ ಜನವರಿ 2ರಿಂದ ಜನವರಿ 30ರ ಅಂತ್ಯಕ್ಕೆ ಒಟ್ಟಾರೆ ಅಂತ್ಯಕ್ಕೆ 26,000 ಕೋಟಿ ರು. ಸಾಲ ಎತ್ತಲು ಆರ್‍‌ಬಿಐನ ಕದ ತಟ್ಟಿತ್ತು. ಜನವರಿ 2ರಂದು 6,000 ಕೋಟಿ ರು., ಜನವರಿ 9ರಂದು 7,000 ಕೋಟಿ ರು., ಜನವರಿ 16ರಂದು 5,000 ಕೋಟಿ ರು., ಜನವರಿ 23ರಂದು 5,000 ಕೋಟಿ ರು, ಜನವರಿ 30ರಂದು 3,000 ಕೋಟಿ ರು. ಸಾಲದ ಮೊತ್ತವನ್ನು ನಮೂದಿಸಿತ್ತು.

 

 

ಫೆಬ್ರುವರಿ 6ರಂದು 5,000 ಕೋಟಿ ರು., ಫೆ.13ರಂದು 5,000 ಕೋಟಿ ರು., ಫೆ.20ರಂದು 5,000 ಕೋಟಿ ರು., ಫೆ.27ರಂದು 5,000 ಕೋಟಿ ರು., ಮಾರ್ಚ್‌ 5ರಂದು 5,000 ಕೋಟಿ ರು., ಮಾರ್ಚ್‌ 12 ರಂದು 4,000 ಕೋಟಿ ರು., ಮಾರ್ಚ್‌ 19ರಂದು 3,000 ಕೋಟಿ ರು., ಸಾಲ ಎತ್ತಲು ತಿಳಿಸಿತ್ತು.  ವಿಶೇಷವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಕ್ಟೋಬರ್ 17ರಿಂದಲೇ ಆರ್‍‌ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲದ ಎತ್ತುವಳಿ ಆರಂಭಿಸಿತ್ತು.

 

 

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ರಾಜ್ಯ ಸರ್ಕಾರವು ಅಕ್ಟೋಬರ್‌ 17ರಿಂದಲೇ  ಆರ್‍‌ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಲ್ಲಿ  1,000 ಕೋಟಿ ರೂ. ಸಾಲ ಎತ್ತುವಳಿ  ಮಾಡಿದೆ. ಅ.23ರಂದು 2,000 ಕೋಟಿ ರೂ., ಅ.31ರಂದು 2,000 ಕೋಟಿ ರೂ., ನ.1ರಂದು 3,000 ಕೋಟಿ ರೂ., ನ.21ರಂದು 1,000 ಕೋಟಿ ರೂ., ಡಿ.5ರಂದು 4,000 ಕೋಟಿ ರೂ., ಡಿ.12ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಡಿ.19ರಂದು 4,000 ಕೋಟಿ ರೂ. ಡಿ.26ರ‌ಂದು 3,000 ಕೋಟಿ ರೂ. ಸೇರಿದಂತೆ 23,000 ಕೋಟಿ ರು. ಸಾಲ ಮಾಡಿತ್ತು.

ನಿರಂತರ ಏರಿಕೆ; ಎಂಟೇ ತಿಂಗಳಲ್ಲಿ 32,289.99 ಕೋಟಿ ರು. ಸಾರ್ವಜನಿಕ ಸಾಲ

ಇದೇ ತ್ರೈಮಾಸಿಕದಲ್ಲಿ ಆಂಧ್ರಪ್ರದೇಶ 16,000 ಕೋಟಿ ರು. ಸಾಲ ಎತ್ತುವಳಿ ಮಾಡಿತ್ತು. .ಕೇರಳ ಸರ್ಕಾರವು 7,600 ಕೋಟಿ ರು., ತೆಲಂಗಾಣವು 13,000 ಕೋಟಿ ರು., ತಮಿಳುನಾಡು 37,000 ಕೋಟಿ ರು., ಸಾಲ ಎತ್ತಿರುವುದನ್ನು ಸ್ಮರಿಸಬಹುದು.

Hot this week

ಪ್ರಜಾಸೇವೆ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ 2.86 ಕೋಟಿ ವೆಚ್ಚ ; ಬರದಿಂದ ತತ್ತರಿಸಿದ್ದರೂ ದುಂದುವೆಚ್ಚಗಳಿಗೆ ಬಿದ್ದಿಲ್ಲ ಕಡಿವಾಣ

ಬೆಂಗಳೂರು;  ಬರದಿಂದ ತತ್ತರಿಸಿ ಹೋಗಿರುವ ರಾಜ್ಯದ 101 ತಾಲೂಕುಗಳಿಗೆ ನಷ್ಟದ ಪರಿಹಾರ...

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಬುಕ್ ಬ್ರಹ್ಮ ಸಾಹಿತ್ಯ ಉತ್ಸವಕ್ಕೆ 5 ಲಕ್ಷ ರು ಅನುದಾನ; ನೋಂದಣಿಯಾಗಿ 3 ವ‍ರ್ಷ ಪೂರೈಸದ ಬುಕ್‌ ಬ್ರಹ್ಮ ಫೌಂಡೇಷನ್‌ಗೆ ಒಂದು ಬಾರಿ ವಿನಾಯಿತಿ

ಬೆಂಗಳೂರು;  ಅನುದಾನ ಪಡೆಯುವ ಸಂಘ, ಸಂಸ್ಥೆಗಳು ನೋಂದಣಿಯಾಗಿ  3 ವರ್ಷಗಳನ್ನು ಪೂರೈಸಿರಬೇಕು...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...
Please Scan to make Your Contribution

Topics

2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್‌ಡಬ್ಲ್ಯೂಎಂಎಲ್?

ಬೆಂಗಳೂರು;  ಪ್ರಾಥಮಿಕ ಹಂತದ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯುಎಂಎಲ್‌...

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

Related Articles

Popular Categories

error: Content is protected !!