ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು. ಸಾಲ ಎತ್ತುವಳಿ; ಆರ್‍‌ಬಿಐ ಕದ ತಟ್ಟಿದ ಸರ್ಕಾರ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಎಂಟು ತಿಂಗಳಲ್ಲಿ ಸಾರ್ವಜನಿಕ ಸಾಲವಾಗಿ   32,289 ಕೋಟಿ ರು.ಗಳನ್ನು  ಎತ್ತಿತ್ತು. ಇದರ  ಬೆನ್ನಲ್ಲೇ ಇದೀಗ ಭಾರತೀಯ ರಿಸರ್ವ್‌ ಬ್ಯಾಂಕ್‌ ಮೂಲಕ ಮುಕ್ತ ಮಾರುಕಟ್ಟೆಯಿಂದ ಕೊನೆಯ  ತ್ರೈಮಾಸಿಕದಲ್ಲಿ  58,000 ಕೋಟಿ ರು‌.  ಎತ್ತುವಳಿ ಮಾಡಲು ಹೊರಟಿದೆ.

 

ಕರ್ನಾಟಕ ಸರ್ಕಾರ ಸೇರಿದಂತೆ ಇತರೆ ರಾಜ್ಯಗಳು ಸಹ 2024 ಜನವರಿ ಮತ್ತು ಮಾರ್ಚ್‌ ಅಂತ್ಯಕ್ಕೆ ಒಟ್ಟಾರೆ 4,13,452 ಕೋಟಿ ರು.ಗಳ ಸಾಲವನ್ನು ಎತ್ತುವಳಿ ಮಾಡಲಾಗುವುದು ಎಂದು ಆರ್‍‌ಬಿಐಗೆ ತಿಳಿಸಿವೆ. ಈ ಪೈಕಿ ಕರ್ನಾಟಕ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗಾಗಿ ಮುಕ್ತ ಮಾರುಕಟ್ಟೆಯಿಂದ 58,000 ಕೋಟಿ ರು ಸಾಲ ಪಡೆಯುವುದಾಗಿ  ಆರ್‍‌ಬಿಐಗೆ ತಿಳಿಸಿದೆ. ದಕ್ಷಿಣದ ನೆರೆಯ ರಾಜ್ಯಗಳಿಗಿಂತಲೂ ಕರ್ನಾಟಕವು ಅತೀ ಹೆಚ್ಚಿನ ಮೊತ್ತದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲ ಪಡೆಯಲು ಮುಂದಾಗಿರುವುದು ಗೊತ್ತಾಗಿದೆ.

 

ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ 2023ರ ಡಿಸೆಂಬರ್‍‌ 29ರಂದೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗ್ಯಾರಂಟಿ ಯೋಜನೆಗಳಿಗೆ ಸಾಲದ ಮೂಲಕ ಅನುದಾನ ಒದಗಿಸಲಾಗುವುದು ಎಂದು 2023ರ ಜುಲೈನಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿದ್ದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಉತ್ತರಿಸಿದ್ದರು. ಇದರ ಬೆನ್ನಲ್ಲೇ  ಆರ್ಥಿಕ ವರ್ಷ ಪೂರ್ಣಗೊಳ್ಳುವ ಮುನ್ನವೇ ಮಾರುಕಟ್ಟೆ ಸಾಲದ ರೂಪದಲ್ಲಿ ಆರ್‍‌ಬಿಐನಿಂದ 58,000 ಕೋಟಿ ರು. ಸಾಲ ಎತ್ತಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

2023-24 ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಎತ್ತುವಳಿ ಮಾಡಲು ಮುಂದಾಗಿದೆ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ 78,363 ಕೋಟಿ ರು., ಸಾಲ ಎತ್ತುವಳಿ ಮಾಡಲು ಅಂದಾಜಿಸಿದೆ. ಉಳಿದಂತೆ ಎಲ್ಐಸಿ, ಎನ್ ಎಸ್ಎಸ್ಎಫ್, ಎನ್ ಸಿಡಿಸಿಯಿಂದ 1,201 ಕೋಟಿ ರೂ. ಸಾಲವಾಗಿ ಒಟ್ಟು ಅಂದಾಜು 85,818 ಕೋಟಿ ರೂ. ಸಾಲ ಮಾಡಲು ಅಂದಾಜಿಸಿತ್ತು ಎಂದು ತಿಳಿದು ಬಂದಿದೆ.

 

2024ರ ಜನವರಿ 2ರಿಂದ ಜನವರಿ 30ರ ಅಂತ್ಯಕ್ಕೆ ಒಟ್ಟಾರೆ ಅಂತ್ಯಕ್ಕೆ 26,000 ಕೋಟಿ ರು. ಸಾಲ ಎತ್ತಲು ಆರ್‍‌ಬಿಐನ ಕದ ತಟ್ಟಿತ್ತು. ಜನವರಿ 2ರಂದು 6,000 ಕೋಟಿ ರು., ಜನವರಿ 9ರಂದು 7,000 ಕೋಟಿ ರು., ಜನವರಿ 16ರಂದು 5,000 ಕೋಟಿ ರು., ಜನವರಿ 23ರಂದು 5,000 ಕೋಟಿ ರು, ಜನವರಿ 30ರಂದು 3,000 ಕೋಟಿ ರು. ಸಾಲದ ಮೊತ್ತವನ್ನು ನಮೂದಿಸಿರುವುದು ಪತ್ರಿಕೆ ಹೇಳಿಕೆಯಿದ ತಿಳಿದು ಬಂದಿದೆ.

 

ಫೆಬ್ರುವರಿ 6ರಂದು 5,000 ಕೋಟಿ ರು., ಫೆ.13ರಂದು 5,000 ಕೋಟಿ ರು., ಫೆ.20ರಂದು 5,000 ಕೋಟಿ ರು., ಫೆ.27ರಂದು 5,000 ಕೋಟಿ ರು.,

 

ಮಾರ್ಚ್‌ 5ರಂದು 5,000 ಕೋಟಿ ರು., ಮಾರ್ಚ್‌ 12 ರಂದು 4,000 ಕೋಟಿ ರು., ಮಾರ್ಚ್‌ 19ರಂದು 3,000 ಕೋಟಿ ರು., ಸಾಲ ಎತ್ತಲು ತಿಳಿಸಿದೆ.

 

ವಿಶೇಷವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಕ್ಟೋಬರ್ 17ರಿಂದಲೇ ಆರ್‍‌ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲದ ಎತ್ತುವಳಿ ಆರಂಭಿಸಿತ್ತು.

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ರಾಜ್ಯ ಸರ್ಕಾರವು ಅಕ್ಟೋಬರ್‌ 17ರಿಂದಲೇ  ಆರ್‍‌ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಲ್ಲಿ  1,000 ಕೋಟಿ ರೂ. ಸಾಲ ಎತ್ತುವಳಿ  ಮಾಡಿದೆ. ಅ.23ರಂದು 2,000 ಕೋಟಿ ರೂ., ಅ.31ರಂದು 2,000 ಕೋಟಿ ರೂ., ನ.1ರಂದು 3,000 ಕೋಟಿ ರೂ., ನ.21ರಂದು 1,000 ಕೋಟಿ ರೂ., ಡಿ.5ರಂದು 4,000 ಕೋಟಿ ರೂ., ಡಿ.12ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಡಿ.19ರಂದು 4,000 ಕೋಟಿ ರೂ. ಡಿ.26ರ‌ಂದು 3,000 ಕೋಟಿ ರೂ. ಸೇರಿದಂತೆ 23,000 ಕೋಟಿ ರು. ಸಾಲ ಮಾಡಿರುವುದು ಗೊತ್ತಾಗಿದೆ.

ನಿರಂತರ ಏರಿಕೆ; ಎಂಟೇ ತಿಂಗಳಲ್ಲಿ 32,289.99 ಕೋಟಿ ರು. ಸಾರ್ವಜನಿಕ ಸಾಲ

ಇದೇ ತ್ರೈಮಾಸಿಕದಲ್ಲಿ ಆಂಧ್ರಪ್ರದೇಶ 16,000 ಕೋಟಿ ರು. ಸಾಲ ಎತ್ತುವಳಿ ಮಾಡಿದೆ.ಕೇರಳ ಸರ್ಕಾರವು 7,600 ಕೋಟಿ ರು., ತೆಲಂಗಾಣವು 13,000 ಕೋಟಿ ರು., ತಮಿಳುನಾಡು 37,000 ಕೋಟಿ ರು., ಸಾಲ ಮಾಡಲಿದೆ.

the fil favicon

SUPPORT THE FILE

Latest News

Related Posts