Friday | September 25, 2026 |

ಎಡಿಜಿಪಿ ಚಂದ್ರಶೇಖರ್ ವಿರುದ್ಧ ಆರೋಪ ಪ್ರಕರಣ; ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಿಧಾನಪರಿಷತ್ ಸದಸ್ಯರ ಪತ್ರ , ಸಿಐಡಿ ವಿಚಾರಣೆ ವಿಭಾಗವು ಸಾಕ್ಷ್ಯಾಧಾರಗಳನ್ನು ಮರೆಮಾಚಿತೇ?

ಬೆಂಗಳೂರು; ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ  ಅವಾಚ್ಯ ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ  ಯಾವುದೇ ಸಾಕ್ಷ್ಯ ಮತ್ತು ಪುರಾವೆಗಳಿಲ್ಲ ಎಂದು ಸಿಐಡಿ ವಿಚಾರಣೆ ವಿಭಾಗವು ನೀಡಿದ್ದ ವರದಿಯನ್ನು ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯರು ಪ್ರಶ್ನಿಸಿದ್ದಾರೆ. ಅಲ್ಲದೇ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಕಾರಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ದೃ‍ಶ್ಯವಾಹಿನಿಗಳಲ್ಲಿ ಪ್ರಸಾರವಾಗಿದ್ದ ವಿಡಿಯೋ ತುಣುಕು ಮತ್ತು ಛಾಯಾಚಿತ್ರಗಳನ್ನು ಮತ್ತೊಮ್ಮೆ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ್ದಾರೆ.

ವಿಧಾನ ಪರಿಷತ್‌ ಸದಸ್ಯರಾದ ಎಸ್‌ ಎಲ್ ಬೋಜೇಗೌಡ, ಟಿ ಎ ಶರವಣ, ಟಿ ಎನ್ ಜವರಾಯಿಗೌಡ, ಸಿ ಎನ್ ಮಂಜೇಗೌಡ ಮತ್ತು ಕೆ ವಿವೇಕಾನಂದ ಅವರು 2026ರ ಸೆ.10ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನ ಬರೆದಿದ್ದಾರೆ. ಈ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಸಿಐಡಿ ವಿಶೇಷ ವಿಚಾರಣೆ ವಿಭಾಗವು ಸಿಐಡಿಯ ಎಸ್‌ಪಿ ಗೆ ಸಲ್ಲಿಸಿದ್ದ ವರದಿ ಆಧರಿಸಿ ದಿ ಫೈಲ್‌ ಕೂಡ ವರದಿ ಪ್ರಕಟಿಸಿತ್ತು. ವಿಧಾನ ಪರಿಷತ್‌ನ ಸದಸ್ಯರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ದಿ ಫೈಲ್‌ ಪ್ರಕಟಿಸಿರುವ ವರದಿಯನ್ನೂ ಸಹ ಉಲ್ಲೇಖಿಸಿದ್ದಾರೆ.

ಎಡಿಜಿಪಿ ಚಂದ್ರಶೇಖರ್‍‌ ಅವರು 2024ರಲ್ಲಿಯೇ ಮಾಧ್ಯಮಗಳಲ್ಲಿ  ನೀಡಿದ್ದ ಅನಪೇಕ್ಷಿತ ಹೇಳಿಕೆಗಳು ಪ್ರಸಾರವಾಗಿವೆ. ಇದಕ್ಕೆ ಸಂಬಂಧಿಸಿದಂತೆ ದೂರುಗಳು ಸಹ ಸ್ವೀಕೃತಿಯಾಗಿವೆ. ಈ ದೂರುಗಳ ಕುರಿತು ಒಳಾಡಳಿತ ಇಲಾಖೆಯೂ ಸಹ ಪರಿಶೀಲಿಸುತ್ತಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಮಾರ್ಚ್‌ 17ರಂದು ಮಾಹಿತಿ ನೀಡಿತ್ತು. ಇದೇ ಮಾಹಿತಿಯನ್ನು ಮುಖ್ಯಮಂತ್ರಿಗಳೂ ಸಹ ಸದನಕ್ಕೆ ಉತ್ತರವನ್ನು ಮಂಡಿಸಿದ್ದಾರೆ. ಹಾಗೆಯೇ ಇದೇ ಮಾಹಿತಿಯನ್ನು ಗೃಹ ಸಚಿವರೂ ಸಹ ಉತ್ತರ ನೀಡಿದ್ದಾರೆ  ಎಂದು ವಿಧಾನ ಪರಿಷತ್‌ನ ಸದಸ್ಯರು ಮುಖ್ಯ ಕಾರ್ಯದರ್ಶಿಯ ಗಮನವನ್ನು ಮತ್ತೊಮ್ಮೆ ಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ವಿಚಾರಣೆ ಮಾಡಿ ವರದಿ ಸಲ್ಲಿಸಬೇಕು ಎಂದು ಡಿಜಿಪಿಯೂ ಸಹ ಸೂಚಿಸಿದ್ದರು. ಈ ಬಗ್ಗೆಯೂ ಗೃಹ ಸಚಿವರು ಲಿಖಿತ ಉತ್ತರದ ಮೂಲಕ ಸದನಕ್ಕೆ ಮಾಹಿತಿ ನೀಡಿದ್ದಾರೆ ಎಂದಿರುವ ವಿಧಾನ ಪರಿಷತ್‌ ಸದಸ್ಯರು, 2024 ಮತ್ತು 2025ರಲ್ಲಿ ವಿವಿಧ ದಿನಾಂಕಗಳಲ್ಲಿ ದೂರರ್ಜಿಗಳನ್ನು ಒಳಾಡಳಿತ ಇಲಾಖೆಗೆ ಕಳಿಸಲಾಗಿತ್ತು. 2026ರ ಜೂನ್‌ನಲ್ಲಿಯೂ ಸಹ ಮೂಲ  ಸಾಕ್ಷ್ಯಾಧಾರಗಳ ಸಮೇತ ದೂರನ್ನು ನೀಡಲಾಗಿತ್ತು ಎಂದು ವಿವರಿಸಿರುವುದು ಗೊತ್ತಾಗಿದೆ.

ಈ ಮಧ್ಯೆ ಸಿಐಡಿ ವಿಶೇಷ ವಿಚಾರಣೆ ವಿಭಾಗವು 2 ವರ್ಷಗಳ ಬಳಿಕ ಸರ್ಕಾರಕ್ಕೆ ವರದಿ ನೀಡಿದೆ. ಈ ಬಗ್ಗೆ ದಿ ಫೈಲ್‌ ನಲ್ಲಿ ವರದಿ ಪ್ರಕಟವಾಗಿದೆ. ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಯಾವುದೇ ಅವಾಚ್ಯ ಮತ್ತು ಅಸಭ್ಯ ಪದವನ್ನು ಬಳಸಿಲ್ಲ. ಆದರೆ ಅವರು  ತಮ್ಮ ಅಧೀನ ಅಧಿಕಾರಿ ಮತ್ತು ಸಿಬ್ಬಂದಿಗಳ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ಆಂತರಿಕವಾಗಿ ಪತ್ರ ಬರೆದಿದ್ದರು. ಯಾವುದೇ ಟಿ ವಿ ಚಾನಲ್‌ಗಳಿಗೆ ಮತ್ತು ಪತ್ರಿಕಾ ಮಾಧ್ಯಮಗಳಿಗೆ ಮಾಹಿತಿ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ. ದೂರಿನಲ್ಲಿ ಮಾಡಿರುವ ಆರೋಪ, ಆಂತರಿಕ ಇಲಾಖೆ ಟಿಪ್ಪಣಿ ಹೊರಡಿಸಿರುವುದ ಬಗ್ಗೆ ಎಡಿಜಿಪಿ ಚಂದ್ರಶೇಖರ್ ಅವರು ಒಪ್ಪಿಕೊಂಡಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣವನ್ನು ಮುಂದಿಟ್ಟುಕೊಂಡು ಪ್ರಕರಣದ ವಿಚಾರಣೆಯನ್ನು ಮುಕ್ತಾಯ ಮಾಡಲು ಹೊರಟಿರುವುದು ದಿ ಫೈಲ್‌ ವರದಿಯಿಂದ ತಿಳಿದು ಬಂದಿದೆ ಎಂದು ವಿಧಾನ ಪರಿಷತ್‌ ಸದಸ್ಯರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಸಿಐಡಿ ವಿಶೇಷ ವಿಚಾರಣೆ ವಿಭಾಗವು ನೀಡಿರುವ ವರದಿಯಲ್ಲಿ ಹಲವು ಸಾಕ್ಷ್ಯಗಳನ್ನು ಪರಿಗಣಿಸಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಸಾಕ್ಷ್ಯಧಾರಗಳನ್ನು ಮುಖ್ಯ ಕಾರ್ಯದರ್ಶಿಗಳಿಗೆ ಪಟ್ಟಿ ಮಾಡಿ ನೀಡಿರುವುದು ಗೊತ್ತಾಗಿದೆ.

 

 

 

 

 

‘ಈ ಎಲ್ಲಾ ಸತ್ಯ ಸಾಕ್ಷ್ಯಾಧಾರಗಳನ್ನು ಮರೆಮಾಚಿ, ಅಧಿಕಾರಿಯ ಅಸತ್ಯದ ಹೇಳಿಕೆಯನ್ನು ಪರಿಗಣಿಸಿ ಅಧಿಕಾರಿಯನ್ನು ರಕ್ಷಿಸುವ ದೃಷ್ಟಿಯಿಂದ ಪ್ರಕರಣಕ್ಕೆ ತಪ್ಪು ವರದಿ ನೀಡಲಾಗಿದೆ. ಅಲ್ಲದೇ ಈ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪರಾಮರ್ಶೆಗೆ ಅವಕಾಶ ನೀಡದಂತೆ ತಮ್ಮ ಅಧಿಕಾರ ವ್ಯಾಪ್ತಿಯನ್ನೂ ಮೀರಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿಗೆ ಬರದೇ ಇದ್ದರೀಊ ಸಹ ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯ ಮಾಡಿ ಎಂದು ಹೇಳುವ ಮೂಲಕ ಅಧಿಕಾರಿಯನ್ನು ರಕ್ಷಣೆ ಮಾಡಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ನಿವೃತ್ತ ನ್ಯಾಯಾಧೀಶರ  ಮೂಲಕ ವಿಚಾರಣೆ ನಡೆಸಬೇಕು,’ ಕೋರಿರುವುದು ತಿಳಿದು ಬಂದಿದೆ.

 

ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಕುಟುಂಬ ಸದಸ್ಯರ ಉದ್ಯಮ, ಹಣಕಾಸಿನ ವ್ಯವಹಾರ; ಸದನಕ್ಕೆ ಒದಗಿಸಬಹುದೇ?

 

ಚಂದ್ರಶೇಖರ್‍‌ ಅವರ ಪ್ರಕರಣದಲ್ಲಿ ಆಸ್ತಿ ವಿವರಗಳನ್ನು ಸದನಕ್ಕೆ  ಮಂಡಿಸಬಹುದೇ ಅಥವಾ ಇಲ್ಲವೇ ಎಂಬ ಕುರಿತು ವಿಧಾನಸಭೆ ಸಚಿವಾಲಯವನ್ನು ಕೋರಿತ್ತು. ಈ ಬಗ್ಗೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಮಾಹಿತಿ ನೀಡಿದ್ದರು.

 

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

 

ಎಡಿಜಿಪಿ ಚಂದ್ರಶೇಖರ್‍‌ ಅವರು 2 ಕಂಪನಿಗಳಿಂದ 400 ಕೋಟಿ ರುಪಾಯಿ ವಹಿವಾಟು ನಡೆಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದರು.

 

10 ಕಂಪನಿಗಳಲ್ಲಿ ಕುಟುಂಬ ಸದಸ್ಯರು ನಿರ್ದೇಶಕರು, 2 ಕಂಪನಿಗಳಿಂದ 400 ಕೋಟಿ ವಹಿವಾಟು ಆರೋಪ ಪ್ರಕರಣ; ಎಡಿಜಿಪಿ ಚಂದ್ರಶೇಖರ್ ವಿರುದ್ಧ ತನಿಖೆಗೆ ನಿರ್ದೇಶನ

 

ಈ ಪ್ರಕರಣದಲ್ಲಿ ಚಂದ್ರಶೇಖರ್‍‌ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದನ್ನಾಧರಿಸಿ ತನಿಖೆಗೆ ನಿರ್ದೇಶನ ನೀಡಲಾಗಿತ್ತು.

 

ಹೆಚ್‌ಡಿಕೆ ವಿರುದ್ಧ ಅಸಭ್ಯ, ಅವಾಚ್ಯ, ಅವಹೇಳನಕಾರಿ ಶಬ್ದಗಳಿಂದ ನಿಂದನೆ ಆರೋಪ; ಎಡಿಜಿಪಿ ಚಂದ್ರಶೇಖರ್ ವಿರುದ್ಧದ ದೂರರ್ಜಿ ವಿಚಾರಣೆಗೆ ಹಾಜರಾಗದ ಸುರೇಶ್‌ ಬಾಬು, ಪ್ರಕರಣ ಮುಕ್ತಾಯಕ್ಕೆ ಸಿಐಡಿ ವರದಿ ಸಲ್ಲಿಕೆ

 

ಈ ಬೆಳವಣಿಗೆ ಮಧ್ಯೆಯೇ ಚಂದ್ರಶೇಖರ್ ಅವರ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ ವಿಭಾಗವು ತನ್ನ ವರದಿಯನ್ನು ನೀಡಿತ್ತು. ಈ ಕುರಿತು ದಿ ಫೈಲ್‌ ಸರಣಿ ವರದಿಗಳನ್ನು ಪ್ರಕಟಿಸಿತ್ತು.

Hot this week

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...
Please Scan to make Your Contribution

Topics

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು...

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ...

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

Related Articles

Popular Categories

error: Content is protected !!