Tuesday | October 20, 2026 |

ವಕ್ಫ್‌ ಆಸ್ತಿಗಳ ನಿರ್ವಹಣೆ, ನೋಂದಣಿ, ಡಿಜಿಟಿಲೀಕರಣ; ರಾಜ್ಯದಲ್ಲಿ 58,902 ವಕ್ಫ್‌ ಆಸ್ತಿಗಳ ದತ್ತಾಂಶ ಪೂರ್ಣ, ದೇಶದಲ್ಲಿ 88,108 ವಕ್ಫ್‌ ಆಸ್ತಿಗಳ ತಿರಸ್ಕರಿಸಲು ಪ್ರಸ್ತಾವ ಬಾಕಿ

ಬೆಂಗಳೂರು; ಭಾರತದಲ್ಲಿನ ವಕ್ಫ್‌ ಆಸ್ತಿಗಳ ನಿರ್ವಹಣೆ, ನೋಂದಣಿ, ದಾಖಲೆಗಳ ಡಿಜಿಟಲೀಕರಣ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ 2025ರಲ್ಲಿ ತಿದ್ದುಪಡಿ ತರಲಾಗಿರುವ ಉಮೀದ್‌ ಕಾನೂನು ಪ್ರಕಾರ ಕರ್ನಾಟಕ ರಾಜ್ಯ ಸೇರಿದಂತೆ ದೇಶದ 23 ರಾಜ್ಯಗಳು 2026ರ ಜೂನ್‌ 23ರ ಅಂತ್ಯಕ್ಕೆ  7,87,787 ವಕ್ಫ್‌ ಆಸ್ತಿಗಳ ವಿವರಗಳ ದತ್ತಾಂಶಗಳನ್ನು   ಪೂರ್ಣಗೊಳಿಸಿದೆ. ಅದೇ ರೀತಿ 88,108 ವಕ್ಫ್‌ ಆಸ್ತಿಗಳನ್ನು ತಿರಸ್ಕರಿಸುವ ಸಂಬಂಧ ದತ್ತಾಂಶ ನಮೂದಿಸುವ ಬಳಿ ಪ್ರಸ್ತಾವನೆಗಳು ಬಾಕಿ ಇರುವುದು  ಬಹಿರಂಗವಾಗಿದೆ.

ಅದೇ ರೀತಿ  ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿಗಳ ವಿವರಗಳನ್ನು ಉಮೀದ್‌ ಕೇಂದ್ರ ಪೋರ್ಟಲ್–2025ರಲ್ಲಿ ಅಪ್‌ಲೋಡ್ ಮಾಡಲು ಸಂಬಂಧಪಟ್ಟ  ವಕ್ಫ್ ನ್ಯಾಯಮಂಡಳಿ/ನ್ಯಾಯಾಲಯದಿಂದ ಯಾವುದೇ ಕಾಲಾವಕಾಶ ವಿಸ್ತರಣೆ ನೀಡಿರುವ ಕುರಿತು ಭಾರತ ಸರ್ಕಾರದ  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ  ಯಾವುದೇ ಮಾಹಿತಿಯೂ ಇಲ್ಲ.

ಉಮೀದ್‌ ಕಾಯ್ದೆ ಅನ್ವಯ   ಕೇಂದ್ರ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಕಾಲಾವಕಾಶ ವಿಸ್ತರಣೆ ಹಾಗೂ ಕಾಯ್ದೆಯ ಸೆಕ್ಷನ್ 3B(1) ಮತ್ತು ಸೆಕ್ಷನ್ 109 ಹಾಗೂ ಸೆಕ್ಷನ್ 3(r) ಅಡಿಯಲ್ಲಿ ಮಾದರಿ ವಕ್ಫ್ ನಿಯಮಗಳನ್ನು ಅಳವಡಿಸಿಕೊಳ್ಳುವ ಕುರಿತು ಸಮಗ್ರ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಭಾರತ ಸರ್ಕಾರದ  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೇಂದ್ರ ಸರ್ಕಾರದ ಕಾರ್ಯದರ್ಶಿ ಡಾ. ಶ್ರೀವತ್ಸ ಕೃಷ್ಣ, ಐ.ಎ.ಎಸ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಈ ಮಾಹಿತಿ ಇದೆ.

UMEED ಕಾಯ್ದೆ, 1995ರ ಸೆಕ್ಷನ್ 3B(1)ರ ನಿಬಂಧನೆಗಳಿಗೆ ಸಂಬಂಧಿಸಿವೆ. ಅಲ್ಲದೆ, ಸದರಿ ಕಾಯ್ದೆಯ ಸೆಕ್ಷನ್ 109 ಮತ್ತು ಸೆಕ್ಷನ್ 3(r)ರ ಅಡಿಯಲ್ಲಿ ಮಾದರಿ ವಕ್ಫ್ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು 2026ರ ಜೂನ್‌ 10ರಂದು ಕೋರಿತ್ತು. ದೇಶದ ಬಹುತೇಕ ರಾಜ್ಯಗಳು ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ. ಹೀಗಾಗಿ 2026ರ ಜೂನ್‌ 23ರಂದು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಭಾರತ ಸರ್ಕಾರದ  ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೇಂದ್ರ ಸರ್ಕಾರದ ಕಾರ್ಯದರ್ಶಿ ಡಾ. ಶ್ರೀವತ್ಸ ಕೃಷ್ಣ,  ಅವರು 2026ರ ಜೂನ್‌ 23ರಂದು  ಬರೆದಿರುವ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಈ ಪತ್ರದ ಕುರಿತು ಕ್ರಮ ಕೈಗೊಳ್ಳಲು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು ಟಿ ಖಾದರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

ಪತ್ರದಲ್ಲೇನಿದೆ?

ಕೇಂದ್ರ ಪೋರ್ಟಲ್‌ನಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡುವುದಕ್ಕೆ ಸಂಬಂಧಿಸಿದಂತೆ ಕಾಲಾವಕಾಶ ವಿಸ್ತರಣೆ ಮತ್ತು ಸಮಗ್ರ ಸ್ಥಿತಿಗತಿ ವರದಿ ಸಲ್ಲಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು  ಕೋರಲಾಗಿತ್ತು. ಈ ಕ್ರಮಗಳು ಉಮೀದ್ ಕಾಯ್ದೆ, 1995ರ ಸೆಕ್ಷನ್ 3B(1)ರ ನಿಬಂಧನೆಗಳಿಗೆ ಸಂಬಂಧಿಸಿವೆ. ಅಲ್ಲದೆ, ಸದರಿ ಕಾಯ್ದೆಯ ಸೆಕ್ಷನ್ 109 ಮತ್ತು ಸೆಕ್ಷನ್ 3(r)ರ ಅಡಿಯಲ್ಲಿ ಮಾದರಿ ವಕ್ಫ್ ನಿಯಮಗಳನ್ನು ಅಳವಡಿಸಿಕೊಳ್ಳುವಂತೆಯೂ ಕೋರಲಾಗಿತ್ತು. ಉಮೀದ್  ಕಾಯ್ದೆ, 1995ರ ಸೆಕ್ಷನ್ 3B(1)ರಲ್ಲಿ ಹೊಸದಾಗಿ ಸೇರಿಸಲಾದ ನಿಬಂಧನೆಗಳ ಪ್ರಕಾರ, ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಕ್ಕೂ ಮೊದಲು ನೋಂದಾಯಿಸಲಾದ ಎಲ್ಲಾ ಅಸ್ತಿತ್ವದಲ್ಲಿರುವ ವಕ್ಫ್‌ಗಳು ಹಾಗೂ ವಕ್ಫ್‌ಗೆ ಮೀಸಲಾದ ಆಸ್ತಿಗಳ ವಿವರಗಳನ್ನು ಆರು ತಿಂಗಳ ಅವಧಿಯೊಳಗೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಲಾಗಿತ್ತು ಎಂದು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದಿರುವುದು ಪತ್ರದಿಂದ ಗೊತ್ತಾಗಿದೆ.

 

 

ಸಮರ್ಪಕ ಕಾರಣವನ್ನು ಮುತವಲ್ಲಿ (ವಕ್ಫ್ ಆಸ್ತಿಯ ನಿರ್ವಹಣಾಧಿಕಾರಿ) ತೋರಿಸಿದಲ್ಲಿ, ವಕ್ಫ್ ನ್ಯಾಯಮಂಡಳಿಯು (Waqf Tribunal) ಹೆಚ್ಚುವರಿಯಾಗಿ ಗರಿಷ್ಠ ಆರು ತಿಂಗಳವರೆಗೆ ಕಾಲಾವಕಾಶ ವಿಸ್ತರಿಸಲು ಅವಕಾಶವಿದೆ. ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡುವ ಪ್ರಗತಿಯನ್ನು ಸಚಿವಾಲಯವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಈವರೆಗೆ 32 ವಕ್ಫ್ ಮಂಡಳಿಗಳಲ್ಲಿ (SWBs) 23 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳಿಗೆ, ಸಂಬಂಧಪಟ್ಟ ವಕ್ಫ್‌ ಕಾರ್ಯನಿರ್ವಹಣಾ  ಮಂಡಳಿಗಳು/ನ್ಯಾಯಾಲಯಗಳು, ಉಳಿದಿರುವ ವಕ್ಫ್ ಆಸ್ತಿಗಳ ವಿವರಗಳನ್ನು ಉಮೀದ್  ಕೇಂದ್ರ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಕಾಲಾವಕಾಶ ವಿಸ್ತರಣೆ ನೀಡಿರುವುದು ಗಮನಕ್ಕೆ ಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳಿಗೆ ಸಂಬಂಧಿಸಿದಂತೆ, ಉಳಿದಿರುವ ವಕ್ಫ್ ಆಸ್ತಿಗಳ ವಿವರಗಳನ್ನು ಸಂಬಂಧಪಟ್ಟ ಮಾನ್ಯ ನ್ಯಾಯಮಂಡಳಿ/ನ್ಯಾಯಾಲಯವು ಅನುಮತಿಸಿರುವ ಅವಧಿಯೊಳಗೆ ಆದ್ಯತೆಯ ಮೇರೆಗೆ ಅಪ್‌ಲೋಡ್ ಮಾಡುವ ಕಾರ್ಯವನ್ನು ಪೂರ್ಣಗೊಳಿಸಬೇಕು.  ಈ ಕಾರ್ಯವನ್ನು ನಿರ್ವಹಿಸುವಾಗ, ಉಮೀದ್‌ ಪೋರ್ಟಲ್‌ನ ಎಲ್ಲಾ ಹಂತಗಳಲ್ಲಿ ತಪ್ಪಾಗಿ, ನಿಖರತೆಯಿಲ್ಲದೆ, ಅಪೂರ್ಣವಾಗಿ ಅಥವಾ ನಕಲು ಮಾಹಿತಿಯನ್ನು ದಾಖಲಿಸುವುದನ್ನು ತಪ್ಪಿಸಲು ಸೂಕ್ತ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಪೋರ್ಟಲ್‌ನಲ್ಲಿ ನಿಗದಿಪಡಿಸಿರುವ ಮೂರು ಹಂತಗಳ ಪರಿಶೀಲನಾ ವ್ಯವಸ್ಥೆಯಾದ ಡೇಟಾ ನಮೂದಿಸುವವರು (Maker) – ಪರಿಶೀಲಿಸುವವರು (Checker) – ಅನುಮೋದಿಸುವವರು (Approver) ಎಂಬ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

‘ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳಿಗೆ ಸಂಬಂಧಿಸಿದಂತೆ, ಅಸ್ತಿತ್ವದಲ್ಲಿರುವ ವಕ್ಫ್ ಆಸ್ತಿಗಳ ವಿವರಗಳನ್ನು ಉಮೀದ್‌ ಕೇಂದ್ರ ಪೋರ್ಟಲ್–2025ರಲ್ಲಿ ಅಪ್‌ಲೋಡ್ ಮಾಡಲು ಸಂಬಂಧಪಟ್ಟ  ವಕ್ಫ್ ನ್ಯಾಯಮಂಡಳಿ/ನ್ಯಾಯಾಲಯದಿಂದ ಯಾವುದೇ ಕಾಲಾವಕಾಶ ವಿಸ್ತರಣೆ ನೀಡಿರುವ ಕುರಿತು ಈ ಸಚಿವಾಲಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂಬುದು ಗಮನಕ್ಕೆ ಬಂದಿದೆ,’ ಎಂದು ಶ್ರೀ ವತ್ಸ ಕೃಷ್ಣ ಅವರು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದಿರುವುದು ತಿಳಿದು ಬಂದಿದೆ.

 

 

ಇದಲ್ಲದೆ 2026ರ ಮೇ 8ರಂದು ಬರೆದಿದ್ದ ಪತ್ರದತ್ತಲೂ ಭಾರತ ಸರ್ಕಾರವು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆದಿದೆ.  ಉಮೀದ್ ಕೇಂದ್ರ ಪೋರ್ಟಲ್–2025ರಲ್ಲಿ ಅಪ್‌ಲೋಡ್ ಮಾಡಲಾದ ಅನುಮೋದಿತ ಮಾಹಿತಿಯ ಮರುಪರಿಶೀಲನೆ ಮತ್ತು ತಿದ್ದುಪಡಿಗಾಗಿ ನೀಡಲಾಗಿದ್ದ ಕಾಲಾವಕಾಶವನ್ನು 2026ರ ಜೂನ್‌ 30ರವರೆಗೆ  ವಿಸ್ತರಿಸಲಾಗಿತ್ತು. ಆದ್ದರಿಂದ, ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳು ಪೋರ್ಟಲ್‌ನಲ್ಲಿ ಲಭ್ಯವಿರುವ ತಿದ್ದುಪಡಿ/ಸಂಪಾದನೆ ಸೌಲಭ್ಯವನ್ನು 2026ರ ಜೂನ್‌ 30ರವರೆಗೆ  ಬಳಸಿಕೊಳ್ಳುವಂತೆ ನಿರ್ದೇಶಿಸಬಹುದು ಎಂದು ಹೇಳಿತ್ತು.

ಅಪ್‌ಲೋಡ್ ಮಾಡುವ ಮತ್ತು/ಅಥವಾ ತಿದ್ದುಪಡಿ ಮಾಡುವ ಈ ಕಾರ್ಯವನ್ನು ಕೈಗೊಳ್ಳುವಾಗ, ಪರಿಶೀಲನಾ ಪ್ರಕ್ರಿಯೆಯಲ್ಲಿ ಗುರುತಿಸಲಾದ ಯಾವುದೇ ಆಕಸ್ಮಿಕ ಅಥವಾ ವಾಸ್ತವಿಕ ದೋಷಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಬೇಕು. ಅಲ್ಲದೇ ಈ  ಸಚಿವಾಲಯದ 2026ರ ಮೇ 8ರ  ಪತ್ರದ ಪ್ರಕಾರ , ಉಮೀದ್‌  ಕೇಂದ್ರ ಪೋರ್ಟಲ್–2025ರಲ್ಲಿ ನಿರ್ವಹಿಸಲಾಗುವ ದಾಖಲೆಗಳ ನಿಖರತೆ, ಸಂಪೂರ್ಣತೆ, ವಿಶ್ವಾಸಾರ್ಹತೆ ಮತ್ತು ಕಾನೂನುಬದ್ಧ ಸಿಂಧುತ್ವವನ್ನು ಖಚಿತಪಡಿಸಿಕೊಳ್ಳಬೇಕು.  ಎಲೆಕ್ಟ್ರಾನಿಕ್ ವಕ್ಫ್ ದಾಖಲೆಗಳು ಮತ್ತು ಉಮೀದ್‌  ಕೇಂದ್ರ ಪೋರ್ಟಲ್‌ನಲ್ಲಿರುವ ಮಾಹಿತಿಯ ನಿಖರತೆ ಹಾಗೂ ಕಾನೂನುಬದ್ಧ ಹೊಂದಾಣಿಕೆಯನ್ನು ಖಚಿತಪಡಿಸುವ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರಗಳಿಗೆ ಸೇರಿದೆ ಎಂದು ಭಾರತ ಸರ್ಕಾರವು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ರಾಜ್ಯಗಳ ವಕ್ಫ್ ಮಂಡಳಿಗಳು ಉಮೀದ್‌  ಕೇಂದ್ರ ಪೋರ್ಟಲ್‌ನಲ್ಲಿ ಮಾಹಿತಿಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ರಾಜ್ಯ ಸರ್ಕಾರಗಳು ಸದರಿ ಮಾಹಿತಿಯನ್ನು ಪ್ರಮಾಣೀಕರಿಸಿ ಭಾರತ ಸರ್ಕಾರಕ್ಕೆ ಸಲ್ಲಿಸಬೇಕು. ಇದಲ್ಲದೆ ಉಮೀದ್ ಕಾಯ್ದೆ, 1995ರ ಸೆಕ್ಷನ್ 109ರ ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಮಗಳನ್ನು ರೂಪಿಸುವ ಪ್ರಕ್ರಿಯೆಗೆ ಅನುಕೂಲವಾಗುವಂತೆ, ಈ ಸಚಿವಾಲಯವು ಈಗಾಗಲೇ ಮಾದರಿ ವಕ್ಫ್ ನಿಯಮಗಳನ್ನು ಸುತ್ತೋಲೆಯ ಮೂಲಕ ಕಳುಹಿಸಿದೆ.  ಅವುಗಳನ್ನು ಯಥಾವತ್ತಾಗಿ ಅಥವಾ ಅಗತ್ಯವಿದ್ದಲ್ಲಿ ಮಾರ್ಪಾಡುಗಳೊಂದಿಗೆ ಅಳವಡಿಸಿಕೊಳ್ಳಲು ಸೂಚಿಸಬೇಕು ಎಂದು ನಿರ್ದೇಶಿಸಿದೆ.

‘ಆದಾಗ್ಯೂ, ಈವರೆಗೆ ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶವು ತನ್ನ ನಿಯಮಗಳನ್ನು ಅಧಿಸೂಚಿಸಿಲ್ಲ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈ ನಿಯಮಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ, ಸಚಿವಾಲಯವು ಸಂಸತ್ತಿನ ಅಧೀನ ಶಾಸನಗಳ ಸಮಿತಿಯಿಂದ ಪದೇಪದೇ ಕಾಲಾವಕಾಶ ವಿಸ್ತರಣೆಯನ್ನು ಕೋರಬೇಕಾಗಿದೆ,’ ಎಂದು ಗಮನಸೆಳೆದಿರುವುದು ತಿಳಿದು ಬಂದಿದೆ.

ಉಮೀದ್‌ ಕೇಂದ್ರ ಪೋರ್ಟಲ್–2025ರ ಶಾಸನಬದ್ಧ ಮಹತ್ವ ಮತ್ತು ಉಮೀದ್‌   ಕಾಯ್ದೆ, 1995ರ ಅಡಿಯಲ್ಲಿ ನಿಗದಿಪಡಿಸಲಾದ ಕಾಲಮಿತಿಗಳ ನಿರ್ಣಾಯಕ ಪ್ರಾಮುಖ್ಯತೆಯನ್ನು ಪರಿಗಣಿಸಿ, ಈ  ವಿಷಯಗಳಿಗೆ ದಯವಿಟ್ಟು ಅತ್ಯುನ್ನತ ಆದ್ಯತೆ ನೀಡಬೇಕು. ಈ ಕುರಿತು ಸಮಗ್ರ ಸ್ಥಿತಿಗತಿ ವರದಿಗಳನ್ನು ಆದಷ್ಟು ಶೀಘ್ರವಾಗಿ ಈ ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.

ಪತ್ರದಲ್ಲಿ ಒದಗಿಸಿರುವ ಅಂಕಿ ಅಂಶಗಳ ಪ್ರಕಾರ   ಕರ್ನಾಟಕ ರಾಜ್ಯದಲ್ಲಿ  ಒಟ್ಟಾರೆ 58,902 ವಕ್ಫ್‌ ಆಸ್ತಿಗಳ ದತ್ತಾಂಶವನ್ನು ನಮೂದಿಸಲಾಗಿದೆ. ಅಲ್ಲದೇ ಡೇಟಾ ನಮೂದಿಸುವವರು (Maker)   1,171 ವಕ್ಫ್‌ ಆಸ್ತಿಗಳನ್ನು ತಿರಸ್ಕರಿಸುವ ಕುರಿತು ಪ್ರಸ್ತಾವನೆಗಳು  ಬಾಕಿ ಇರುವುದು ಗೊತ್ತಾಗಿದೆ.

ಆಂಧ್ರ ಪ್ರದೇಶದಲ್ಲಿ 15,581, ಅಸ್ಸಾಂನಲ್ಲಿ 700, ಬಿಹಾರ ಶಿಯಾ 6,312,  ಬಿಹಾರ ಸುನ್ನಿ 11,412, ಛತ್ತೀಸ್‌ಗಡ್‌  2,424, ದೆಹಲಿ 3,184, ಗುಜಾತ್‌ 30,779, ಹರ್ಯಾಣ 13,444, ಜಮ್ಮು ಕಾಶ್ಮೀರ 25,562, ಜಾರ್ಖಂಡ್‌ 1,106, ಕೇರಳ 80,279, ಮಧ್ಯ ಪ್ರದೇಶ  32,373, ಮಹಾರಾಷ್ಟ್ರ 66,109, ಒಡಿಶಾ 6,132, ಪಂಜಾಬ್‌  26,339, ರಾಜಸ್ಥಾನ  32,057, ತಮಿಳುನಾಡು  15,103, ತೆಲಂಗಾಣ  63,942, ಉತ್ತರಾಕಾಂಡ್‌ 2,626, ಉತ್ತರ ಪ್ರದೇಶ ಶಿಯಾ 1,52,724, ಉತ್ತರ ಪ್ರದೇಶ ಸುನ್ನಿ 1,32,585, ಪಶ್ಚಿಮ ಬಂಗಾಳ 1,32,585 ವಕ್ಫ್‌ ಆಸ್ತಿಗಳ ದತ್ತಾಂಶಗಳು ಪೂರ್ಣಗೊಂಡಿದೆ. ಈ ಪೈಕಿ 48,927 ವಕ್ಫ್‌ ಆಸ್ತಿಗಳ ಕುರಿತಾಗಿ ದತ್ತಾಂಶ ನಮೂದಕರು ಅಪ್‌ ಲೋಡ್‌ ಮಾಡಿರುವುದು  ತಿಳಿದು ಬಂದಿದೆ.

 

 

ಹಾಗೆಯೇ ಅಂಡಮಾನ್‌ ನಿಕೋಬಾರ್ 213, ಚಂಡೀಗಡ್‌ 23, ಹಿಮಾಚಲ ಪ್ರದೇಶ 915, ಲಕ್ಷದ್ವೀಪ 479, ಮಣಿಪುರ 392, ಮೇಘಾಲಯ 13, ಪುದುಚೇರಿ 624, ದಾದ್ರಾ ಹವೇಲಿ 2, ತ್ರಿಪುರ 2,780 ಆಸ್ತಿಗಳ ದತ್ತಾಂಶಗಳನ್ನು ಅಪ್‌ಲೋಡ್‌ ಮಾಡುವ ಕಾರ್ಯವು ಪೂರ್ಣಗೊಂಡಿರುವುದು ಗೊತ್ತಾಗಿದೆ.

 

 

ಉಮೀದ್  ಕೇಂದ್ರ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡಲು ಕಾಲಾವಕಾಶ ವಿಸ್ತರಣೆ ಹಾಗೂ UMEED ಕಾಯ್ದೆಯ ಸೆಕ್ಷನ್ 3B(1) ಮತ್ತು ಸೆಕ್ಷನ್ 109 ಹಾಗೂ ಸೆಕ್ಷನ್ 3(r) ಅಡಿಯಲ್ಲಿ ಮಾದರಿ ವಕ್ಫ್ ನಿಯಮಗಳನ್ನು ಅಳವಡಿಸಿಕೊಳ್ಳುವ ಕುರಿತು ಸಮಗ್ರ ಸ್ಥಿತಿಗತಿ ವರದಿ ಸಲ್ಲಿಸಬೇಕಿದೆ. ಇದರ ಪ್ರಕಾರ  ವಕ್ಫ್‌ ಆಸ್ತಿಗಳ ನೋಂದಣಿ ಮತ್ತು ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ನಿರ್ವಹಿಸುವುದು, ವಕ್ಫ್‌ ಆಸ್ತಿಗಳ ವಿವರಗಳನ್ನು ಕೇಂದ್ರ ಪೋರ್ಟಲ್‌ನಲ್ಲಿ ದಾಖಲಿಸುವುದು, ಆಸ್ತಿ ನಿರ್ವಹಣೆ, ಲೆಕ್ಕಪರಿಶೋಧನೆ ಮತ್ತು ಆಡಳಿತದ ಪ್ರಕ್ರಿಯೆಗಳನ್ನು ವ್ಯವಸ್ಥಿತಗೊಳಿಸುವುದು, ವಕ್ಫ್‌ ಆಸ್ತಿಗಳ ಕುರಿತ ದಾಖಲೆಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆಗೆ ವ್ಯವಸ್ಥೆ ಕಲ್ಪಿಸುವುದು, ಕುಟುಂಬ ವಕ್ಫ್‌ಗಳಿಗೆ ಸಂಬಂಧಿಸಿದ ಕೆಲವು ಫಲಾನುಭವಿಗಳ ಹಕ್ಕುಗಳಿಗೆ ನಿಯಮಗಳನ್ನು ರೂಪಿಸಲಿದೆ.

ಈ ನಿಬಂಧನೆಯ ಪ್ರಕಾರ 2025ರ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಕ್ಕೂ ಮೊದಲು ನೋಂದಾಯಿಸಲಾದ ವಕ್ಫ್‌ಗಳ ವಿವರಗಳು ಮತ್ತು ವಕ್ಫ್‌ಗೆ ಮೀಸಲಾದ ಆಸ್ತಿಗಳ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಸಲ್ಲಿಸಬೇಕು. ಆಸ್ತಿ ವಿವರಗಳನ್ನು ಅಪ್‌ಲೋಡ್ ಮಾಡುವುದು ಅಸ್ತಿತ್ವದಲ್ಲಿರುವ ವಕ್ಫ್‌ ಆಸ್ತಿಗಳ ಅಗತ್ಯ ವಿವರಗಳನ್ನು UMEED ಪೋರ್ಟಲ್‌ನಲ್ಲಿ ದಾಖಲಿಸಬೇಕು.

ದಾಖಲೆಗಳನ್ನು ಪರಿಶೀಲಿಸುವುದು, ತಪ್ಪಾದ, ಅಪೂರ್ಣ ಅಥವಾ ನಕಲು ಮಾಹಿತಿಯನ್ನು ಗುರುತಿಸಿ ತಿದ್ದುಪಡಿ ಮಾಡಬೇಕು, ಮಾಹಿತಿಯ ನಿಖರತೆಯನ್ನು ಪ್ರಮಾಣೀಕರಿಸುವುದು ದಾಖಲೆಗಳ ನಿಖರತೆ ಮತ್ತು ಕಾನೂನುಬದ್ಧ ಹೊಂದಾಣಿಕೆಯ ಜವಾಬ್ದಾರಿ ರಾಜ್ಯ ಸರ್ಕಾರಗಳ ಮೇಲಿದೆ ಎಂದು ಸಚಿವಾಲಯ ತಿಳಿಸಿತ್ತು.
ರಾಜ್ಯ ನಿಯಮಗಳನ್ನು ರೂಪಿಸುವುದು ಸೇರಿದಂತೆ ಕಾಯ್ದೆಯ ಸೆಕ್ಷನ್‌ 109ರ ಅಡಿಯಲ್ಲಿ ರಾಜ್ಯಗಳು ನಿಯಮಗಳನ್ನು ರೂಪಿಸುವ ವಿಷಯವನ್ನೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಕಾಲಮಿತಿ ಮತ್ತು ವಿಸ್ತರಣೆ ಕುರಿತು ವಕ್ಫ್‌ ಆಸ್ತಿಗಳ ವಿವರಗಳನ್ನು ಸಲ್ಲಿಸುವ ಕಾನೂನುಬದ್ಧ ಅವಧಿ ಮತ್ತು ನ್ಯಾಯಮಂಡಳಿ ನೀಡಿರುವ ವಿಸ್ತರಣೆಯನ್ನು ಪರಿಶೀಲಿಸಬೇಕು. ಆಸ್ತಿಯ ಹಕ್ಕು: ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಆಗದಿರುವುದರಿಂದ ಮಾತ್ರ ಆಸ್ತಿಯ ಮಾಲೀಕತ್ವದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಮತ್ತು ಅನ್ವಯಿಸುವ ಕಾನೂನು ನಿಬಂಧನೆಗಳನ್ನು ಪರಿಶೀಲಿಸಬೇಕು. ಆದ್ದರಿಂದ, ನಿರ್ದಿಷ್ಟ ಆಸ್ತಿಯ ನೋಂದಣಿ, ಮಾಲೀಕತ್ವ, ವಕ್ಫ್‌ ಸ್ಥಾನಮಾನ ಅಥವಾ ನ್ಯಾಯಾಂಗ ವಿವಾದದ ಕುರಿತು ತೀರ್ಮಾನಿಸಲು ಪೋರ್ಟಲ್‌ನ ಸ್ಥಿತಿಯೊಂದನ್ನೇ ಆಧಾರವಾಗಿಸಬಾರದು ಎಂದು ಹೇಳಿದೆ.

 

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಉಮೀದ್‌ ಪೋರ್ಟಲ್‌ ವರದಿ, ಅಪ್‌ಲೋಡ್ ಮಾಡಲಾದ, ಅನುಮೋದಿತ ಮತ್ತು ತಿರಸ್ಕೃತ ಆಸ್ತಿಗಳ ಸಂಖ್ಯೆ,  ಕರ್ನಾಟಕ ವಕ್ಫ್‌ ಮಂಡಳಿಗೆ ಸಂಬಂಧಪಟ್ಟ ವಕ್ಫ್‌ ನ್ಯಾಯಮಂಡಳಿ ಅಥವಾ ನ್ಯಾಯಾಲಯ ನೀಡಿರುವ ಕಾಲಾವಕಾಶ ವಿಸ್ತರಣೆಯ ಆದೇಶ, ರಾಜ್ಯ ಸರ್ಕಾರವು ಉಮೀದ್‌  ಕಾಯ್ದೆಯ ಸೆಕ್ಷನ್‌ 109ರ ಅಡಿಯಲ್ಲಿ ಹೊರಡಿಸಿರುವ ನಿಯಮಗಳ ಅಧಿಸೂಚನೆ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸ್ಥಿತಿಗತಿ ವರದಿ ಸಲ್ಲಿಸಬೇಕಿದೆ.

Hot this week

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ; 9 ಕೋಟಿ ಮೊತ್ತದ ಟೆಂಡರ್ ಸಲ್ಲಿಕೆಗೆ 9 ದಿನವಷ್ಟೇ ಕಾಲಾವಕಾಶ ನೀಡಿದ್ದೇಕೆ?

ಬೆಂಗಳೂರು; ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾರ್ಥಿ ಸಹಾಯ ಹಸ್ತ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...
Please Scan to make Your Contribution

Topics

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

Related Articles

Popular Categories

error: Content is protected !!