Thursday | August 20, 2026 |

ಇತ್ಯರ್ಥವಾಗದ 6,474 ಸಾರ್ವಜನಿಕರ ಮನವಿ; ಗೃಹ ಇಲಾಖೆಯಲ್ಲಿಯೇ ಅತೀ ಹೆಚ್ಚು ಬಾಕಿ

ಬೆಂಗಳೂರು; ಸಾರ್ವಜನಿಕರು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಕುಂದುಕೊರತೆಗಳ ಅರ್ಜಿಗಳು ಸಕಾಲದಲ್ಲಿ ವಿಲೇವಾರಿ ಆಗುತ್ತಿಲ್ಲ. 2026ರ ಜನವರಿ 12ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ 6,474 ಸಾರ್ವಜನಿಕರ ಮನವಿಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ.

 

ಸಾರ್ವಜನಿಕರು ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಸಲ್ಲಿಕೆಯಾಗಿರುವ ಸಾರ್ವಜನಿಕರ ಮನವಿಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸರ್ಕಾರದ ಎಲ್ಲಾ ಇಲಾಖೆಗಳ ಸಾರ್ವಜನಿಕ ಮನವಿಗಳ ನಿರ್ವಾಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

 

2026ರ ಜನವರಿ 14ರಂದು ನೀಡಿರುವ ನಿರ್ದೇಶನದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

 

ಇತ್ಯರ್ಥವಾಗದೇ ಬಾಕಿ ಇರುವ 6,474 ಮನವಿಗಳ ಪೈಕಿ ಗೃಹ ಇಲಾಖೆಯಲ್ಲಿಯೇ ಅತೀ ಹೆಚ್ಚು ಎಂದರೇ 1,729 ಮನವಿಗಳು ಇತ್ಯರ್ಥಕ್ಕಾಗಿ ಬಾಕಿ ಇವೆ. ಅಲ್ಲದೇ ಉಳಿದ ಇಲಾಖೆಗಳಿಗಿಂತಲೂ ಗೃಹ ಇಲಾಖೆಯಲ್ಲಿಯೇ ಅತೀ ಹೆಚ್ಚು ಬಾಕಿ ಇರುವುದು ಪತ್ರದಿಂದ ತಿಳಿದು ಬಂದಿದೆ.

 

 

ಇತ್ಯರ್ಥವಾಗದ ಮನವಿಗಳ ಸಂಖ್ಯೆ

 

ಕಂದಾಯ ಇಲಾಖೆಯಲ್ಲಿ 654, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ 592, ನಗರಾಭಿವೃದ್ಧಿಯಲ್ಲಿ 461, ಆರೋಗ್ಯ ಕುಟುಂಬ ಕಲ್ಯಾಣದಲ್ಲಿ 411, ಸಾರಿಗೆಯಲ್ಲಿ 252, ಕೃಷಿಯಲ್ಲಿ 226, ಶಾಲಾ ಶಿಕ್ಷಣ, ಸಾಕ್ಷರತೆಯಲ್ಲಿ 212, ಉನ್ನತ ಶಿಕ್ಷಣದಲ್ಲಿ 194, ಕಾರ್ಮಿಕ ಇಲಾಖೆಯಲ್ಲಿ 159, ಕೈಗಾರಿಕೆ ವಾಣಿಜ್ಯದಲ್ಲಿ 143, ಲೋಕೋಪಯೋಗಿಯಲ್ಲಿ 140, ಸಹಕಾರದಲ್ಲಿ 121, ಇಂಧನದಲ್ಲಿ 120, ಆರ್ಥಿಕ ಇಲಾಖೆಯಲ್ಲಿ 82 ಮನವಿಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ.

 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿಯಲ್ಲಿ 79, ವಸತಿಯಲ್ಲಿ 75, ಅರಣ್ಯ, ಜೀವಿ ಪರಿಸರದಲ್ಲಿ 55, ಸಮಾಜ ಕಲ್ಯಾಣದಲ್ಲಿ 47, ವೈದ್ಯಕೀಯ ಶಿಕ್ಷಣದಲ್ಲಿ 31, ಕಾನೂನು ಇಲಾಖೆಯಲ್ಲಿ 29, ಕೌಶಲ್ಯ, ಜೀವನೋಪಾಯ ಇಲಾಖೆಯಲ್ಲಿ 28, ಆಹಾರ, ನಾಗರಿಕ ಸರಬರಾಜು ಇಲಾಖೆಯಲ್ಲಿ 24, ಪಶುಸಂಗೋಪನೆ ಇಲಾಖೆಯಲ್ಲಿ 22, ಡಿಪಿಎಆರ್‍‌ನಲ್ಲಿ 14, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 11, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ 11 ಮನವಿಗಳು ಇತ್ಯರ್ಥಕ್ಕೆ ಕಾದು ಕುಳಿತಿವೆ.

 

 

ತೋಟಗಾರಿಕೆಯಲ್ಲಿ 10, ಅಲ್ಪಸಂಖ್ಯಾತರ ಇಲಾಖೆಯಲ್ಲಿ 9, ಕನ್ನಡ ಸಂಸ್ಕೃತಿಯಲ್ಲಿ 8, ಡಿಪಿಎಆರ್ ( ಇ ಆಡಳಿತ) ನಲ್ಲಿ 8, ಡಿಪಿಎಆರ್‍‌ ಆಡಳಿತ ಸುಧಾರಣೆಯಲ್ಲಿ 7, ಯುವ ಸಬಲೀಕರಣ ಕ್ರೀಡಾ ಇಲಾಖೆಯಲ್ಲಿ 6, ಸಾರ್ವಜನಿಕ ಉದ್ದಿಮೆಗಳ ಇಲಾಖೆಯಲ್ಲಿ 5, ಪ್ರವಾಸೋದ್ಯಮದಲ್ಲಿ 4, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ 4, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 3, ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 1, ಸಣ್ಣ ನೀರಾವರಿಯಲ್ಲಿ 3 ಮನವಿಗಳು ಇತ್ಯರ್ಥವಾಗಿಲ್ಲ.

 

ಏನಿದು ಸಿಪಿಗ್ರಾಮ್ಸ್‌?

 

ಸಾರ್ವಜನಿಕರು ಈ ಹಿಂದೆ ಸರ್ಕಾರದ ಸೇವೆಗಳನ್ನು ಪಡೆಯಲು ಸಾಧ್ಯವಾಗದೇ ಇದ್ದಾಗ ಅಥವಾ ಯೋಜನೆಯ ಫಲಾನುಭವ ತಲುಪದೇ ಇದ್ದ ಸಂದರ್ಭದಲ್ಲಿ ಕುಂದುಕೊರತೆಯನ್ನ ಅಧಿಕಾರಿಗಳ ಬಳಿ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯನ್ನು ಕೊನೆಗಾಣಿಸಲು ಆನ್‌ಲೈನ್‌ನಲ್ಲಿಯೇ ದೂರು, ಮನವಿ ಸಲ್ಲಿಸಲು ಸಿಪಿ ಗ್ರಾಮ್ಸ್‌ ಪೋರ್ಟಲ್‌ ಅಭಿವೃದ್ಧಿಪಡಿಸಿದೆ.

 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಸಾರ್ವಜನಿಕರು 24/7 ಸಲ್ಲಿಸಲು ಅನುವು ಮಾಡಿಕೊಡುವ ಆನ್‌ಲೈನ್ ವೇದಿಕೆಯಾಗಿದೆ. ರಸ್ತೆಗಳಲ್ಲಿನ ಗುಂಡಿಗಳನ್ನು ಸರಿಪಡಿಸುವುದು, ವಿದ್ಯುತ್ ಸಮಸ್ಯೆಗಳು, ಪಾಸ್‌ಪೋರ್ಟ್ ವಿಳಂಬಗಳು ಮತ್ತು ಗಮನ ಅಗತ್ಯವಿರುವ ಇತರ ಸರ್ಕಾರಿ ಸಂಬಂಧಿತ ಸೇವೆಗಳಂತಹ ಕುಂದುಕೊರತೆಗಳಿಗಾಗಿ ನಾಗರಿಕರು, ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಬಹುದು.

 

ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಸಂಪರ್ಕಿಸುವ ಏಕೈಕ ವೇದಿಕೆಯಾಗಿದೆ. ನಾಗರಿಕರು ಸೇವೆಗಳ ವಿತರಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು, ಅವುಗಳ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಮತ್ತು ಪರಿಹಾರ ತೃಪ್ತಿದಾಯಕವಾಗಿಲ್ಲದಿದ್ದರೆ ಮೇಲ್ಮನವಿ ಸಲ್ಲಿಸಲು ಸಹ ಅವಕಾಶವಿದೆ. ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳ ಸೇವೆಗಳಿಗೆ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳ/ ದೂರುಗಳ ದಾಖಲಾತಿಗಾಗಿ ನಾಗರಿಕರು ಅಲೆದಾಡುವ ಅವಶ್ಯಕತೆ ಇರುವುದಿಲ್ಲ.

 

ಇದನ್ನು ಸುಲಭಗೊಳಿಸಲು, ಕರ್ನಾಟಕ ಸರ್ಕಾರವು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಅಧೀನ ಸಂಸ್ಥೆಯಾದ ಇ-ಆಡಳಿತ ಕೇಂದ್ರದಡಿಯಲ್ಲಿ ʼಜನಸ್ಪಂದನʼ ಕರ್ನಾಟಕ ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS) ಎಂಬ ಬಹು-ಮುಖಿಯಾದ, ದತ್ತಾಂಶ-ಆಧಾರಿತ ಮತ್ತು ಕಾಗದರಹಿತ ತಂತ್ರಾಂಶ ವ್ಯವಸ್ಥೆಯನ್ನು ರೂಪಿಸಿದೆ. ನಾಗರಿಕರಿಂದ ಕುಂದುಕೊರತೆಗಳನ್ನು / ದೂರುಗಳನ್ನು ಸ್ವೀಕರಿಸಲು 3ನೇ ಸೆಪ್ಟೆಂಬರ್ 2021 ರಿಂದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ ಸಹಾಯವಾಣಿ 1902 ಕಾರ್ಯನಿರ್ವಹಿಸುತ್ತಿದೆ.

 

ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಲ್ಲಿ ತುರ್ತು ಸೇವೆಗಳಾದ ಪೊಲೀಸ್ / ಅಗ್ನಿಶಾಮಕ /ಆಂಬ್ಯುಲೆನ್ಸ್ / ವಿಕೋಪ ಪರಿಹಾರ ಸೇವೆಗಳ ಸಹಾಯವಾಣಿ (ಸಂಖ್ಯೆ: 100, 101, 108, 1912 )ಇತ್ಯಾದಿ ಹಾಗೂ ವಾಣಿಜ್ಯ ಸೇವಾ ಭಾಗವಾಗಿ ನಿರ್ವಹಿಸಲ್ಪಡುತ್ತದೆ. ಸಹಾಯವಾಣಿ / ದೂರು ನಿರ್ವಹಣಾ ವ್ಯವಸ್ಥೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರೀತಿಯ ಸಾರ್ವಜನಿಕರಿಂದ ದಾಖಲಿಸಲಾಗುವ ಸಾಮಾನ್ಯ ಕುಂದುಕೊರತೆ / ದೂರುಗಳನ್ನು ಸ್ವೀಕರಿಸುತ್ತದೆ.

 

ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಶೌಚಾಲಯ, ಸಾರ್ವಜನಿಕ ಸಾರಿಗೆ ಸಂಪರ್ಕ, ವಿದ್ಯುತ್‌ ದೀಪ, ಕಸ ವಿಲೇವಾರಿ, ಒಳ ಚರಂಡಿ ನಿರ್ವಹಣೆ ಹಾಗೂ ಇತರೆ ಸಂಬಂಧಿತ ಸಮಸ್ಯೆಗಳ ಕುರಿತು ದೂರು ನೀಡಬಹುದು. ಕರ್ನಾಟಕ ಸರ್ಕಾರದ 3,000 ಕ್ಕೂ ಹೆಚ್ಚಿನ ಸಂಭವನೀಯ ಕುಂದುಕೊರತೆಗಳನ್ನು ಮತ್ತು ಕ್ಷೇತ್ರದ ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದೆ.

 

45 ಸರ್ಕಾರಿ ಇಲಾಖೆಗಳ ಸುಮಾರು 1300 ಕ್ಕೂ ಹೆಚ್ಚು ವಿವಿಧ ಯೋಜನೆಗಳು ಮತ್ತು ಸೇವೆಗಳನ್ನು ಐಪಿಜಿಎಆರ್‍‌ಸ್‌ ನಲ್ಲಿ ಅಳವಡಿಸಲಾಗಿದೆ. ಇಲ್ಲಿಯವರೆಗೆ 45 ಇಲಾಖೆಗಳ 270 ಉಪ ಇಲಾಖೆಗಳನ್ನು iಐಪಿಜಿಎಆರ್‍‌ಸ್‌ನಲ್ಲಿ ಆನ್‌ಬೋರ್ಡ್ ಮಾಡಿದೆ.

 

ನಾಗರಿಕರು ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಉಪಯೋಗಿಸಿ ಒಮ್ಮೆ ಆತನ/ಆಕೆಯ ಮೊಬೈಲ್ ಗೆ ಒಂದು ಬಾರಿ ಬರುವ ಓ.ಟಿ.ಪಿ ಉಪಯೋಗಿಸಿ ನೋಂದಾಯಿಸಿಕೊಳ್ಳಬಹುದು. ನಂತರ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರು/ಕುಂದುಕೊರತೆಗಳನ್ನು ದಾಖಲಿಸಬಹುದು.

 

ದೂರು/ಕುಂದುಕೊರತೆಗಳ ನಿವಾರಣೆ ನಂತರ ನಾಗರಿಕರಿಗೆ ಕರೆ ಮಾಡುವ ಮೂಲಕ ಪ್ರತಿಕ್ರಿಯೆ ಪಡೆದ ನಂತರವೇ ದೂರನ್ನು ಅಂತಿಮವಾಗಿ ಮುಕ್ತಾಯಗೊಳಿಸಲಾಗುವುದು. ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ನಾಗರಿಕರು ಸಹಾಯವಾಣಿ ಸಂಖ್ಯೆ 1902 ಅನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿದೆ.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

Related Articles

Popular Categories

error: Content is protected !!