ಬೆಂಗಳೂರು; ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಸರಿ ಸುಮಾರು 1.00 ಕೋಟಿ ರು. ವೆಚ್ಚ ಮಾಡಲು ಮುಂದಾಗಿರುವ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಒಂದು ಸಾಕ್ಷ್ಯ ಚಿತ್ರಕ್ಕೆ ಪೂರ್ಣ ಮೊತ್ತವನ್ನು ನಿಗಮವು ಖರ್ಚು ಮಾಡುವ ಮುನ್ನ ವಿವರವಾದ ವರದಿಯನ್ನು 48 ಗಂಟೆಯೊಳಗೆ ಸಲ್ಲಿಸಬೇಕು ಎಂದು ಬೋವಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ‘ದಿ ಫೈಲ್’ ವರದಿಯನ್ನು ಪ್ರಸ್ತಾಪಿಸಿರುವ ಮಣಿವಣ್ಣನ್ ಅವರು ಮುಂದಿನ ಆದೇಶ ನೀಡುವವರೆಗೂ ಯಾವುದೇ ರೀತಿಯ ಕ್ರಮ ವಹಿಸಬಾರದು ಎಂದು ನಿರ್ದೇಶನ ನೀಡಿದ್ದಾರೆ.
2025ರ ಫೆ.15ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ಭೋವಿ ಸಮುದಾಯದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಸಾಮಾಜಿಕ ಸುದ್ದಿವಾಹಿನಿಯಲ್ಲಿ ವರದಿ ಪ್ರಕಟಗೊಂಡಿದೆ. ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ 1.00 ಕೋಟಿ ರು ವೆಚ್ಚ ಮಾಡಲಿದೆ ಎಂದು ಪ್ರಕಟಿಸಿರುವ ವರದಿ ನೋಡಿ ಆಶ್ಚರ್ಯವಾಯಿತು. ಭೋವಿ ಅಭಿವೃದ್ದಿ ನಿಗಮದ ಅನುಮೋದಿತ ಕ್ರಿಯಾ ಯೋಜನೆಯ ಉದ್ದೇಶವು ಭೋವಿ ಸಮುದಾಯದ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲು ಹಾಗೂ ನಿಗಮದ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ತಲುಪಿಸುವ ಉದ್‌ದೇಶದಿಂದ ಬಹು ಸಾಕ್ಷ್ಯ ಚಿತ್ರಗಳಿಗಾಗಿ ಅನುದಾನ ಹಂಚಿಕೆಯಾಗಿದೆಯೇ ಹೊರತು ಕೇವಲ ಒಂದು ಸಾಕ್ಷ್ಯಚಿತ್ರಕ್ಕೆ ಪೂರ್ಣ ಮೊತ್ತವನ್ನು ವ್ಯಯ ಮಾಡುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಾಕ್ಷ್ಯಚಿತ್ರದ ನಿರೀಕ್ಷಿತ ಅವಧಿ, ಎಷ್ಟು ನಿಮಿಷಗಳಿಂದ ಕೂಡಿರುತ್ತದೆ, ಈ ಚಲನಚಿತ್ರ ನಿರ್ಮಾಣಕ್ಕೆ ಇಂತಹ ಹೆಚ್ಚಿನ ವೆಚ್ಚವನ್ನು ಸಮರ್ಥಿಸುವಂತಹ ನಿರ್ದಿಷ್ಟ ಷರತ್ತುಗಳನ್ನು ಎಂಸಿಎಗೆ ನೀಡಲಾದ ನಿಗಮದ ಆದೇಶದ ಪ್ರತಿ ಹಾಗೂ ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.
ಈ ಯೋಜನೆಯ ಹೆಚ್ಚಿನ ವೆಚ್ಚದ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಯಾವುದಾದರೂ ಸಮಾಲೋಚನೆ ನಡೆಸಲಾಗಿದೆಯೇ, ವೆಚ್ಚವು ಈ ಇಲಾಖೆಯಲ್ಲಿ ಸಾಮಾನ್ಯವಾಗಿ ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ವೆಚ್ಚಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತದಲ್ಲವೇ ಎಂದು ಮಣಿವಣ್ಣನ್ ಅವರು ಪತ್ರದಲ್ಲಿ ಪ್ರಶ್ನಿಸಿರುವುದು ತಿಳಿದು ಬಂದಿದೆ.
‘ಈ ಮಾಹಿತಿಗಳನ್ನು ಪರಿಶೀಲಿಸಿ ಮುಂದಿನ ಆದೇಶ ನೀಡುವವರೆಗೆ ಯಾವುದೇ ರೀತಿಯ ಮುಂದಿನ ಕ್ರಮ ವಹಿಸಬಾರದು. ಮತ್ತು 48 ಗಂಟೆಯೊಳಗೆ ನೀಡಬೇಕು,’ ಎಂದು ವ್ಯವಸ್ಥಾಪಕ ನಿರ್ದೇಶಕ ಚಂದ್ರಾನಾಯಕ್ ಅವರಿಗೆ ನಿರ್ದೇಶಿಸಿದ್ದಾರೆ.
ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತಿದ್ದರೂ ದಲಿತ ವಿದ್ಯಾರ್ಥಿಗಳಿಗೆ ಇನ್ನೂ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನ ಪಾವತಿಸದೇ ಇರುವ ಸರ್ಕಾರವು ಇದೀಗ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣಕ್ಕೆ ಸರಿ ಸುಮಾರು 1.00 ಕೋಟಿ ರು. ವೆಚ್ಚ ಮಾಡಲು ಮುಂದಾಗಿತ್ತು.
ರಾಜ್ಯಾದ್ಯಂತ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಬೋವಿ ಸಮುದಾಯದವರ ಆಚಾರ, ವಿಚಾರ, ಕಲೆ, ಸಂಸ್ಕೃತಿ, ವೃfತಿ, ನಿಗಮದ ಯೋಜನೆಗಳ ಚಿತ್ರೀಕರಣ, ಆರ್ಥಿಕ, ಸಾಮಾಜಿಕ ಸ್ವಾವಲಂಬಿಗಳಾಗಿರುವ ಫಲಾನುಭವಿಗಳ ಉತ್ಪಾದಕ ಘಟಕಗಳ ಚಿತ್ರೀಕರಣ, ಇತ್ಯಾದಿಗಳ ಕುರಿತು ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲಿದೆ. ಇದಕ್ಕಾಗಿ 2024-25ನೇ ಸಾಲಿಗೆ ನಿಗಮದ ವಾರ್ಷಿಕ ಕ್ರಿಯಾ ಯೋಜನೆಯಲ್ಲಿರುವ ಅನುದಾನವನ್ನು ಬಳಕೆ ಮಾಡಿಕೊಂಡಿತ್ತು.
ವೆಚ್ಚದ ಪಟ್ಟಿಯಲ್ಲೇನಿದೆ?
ಸಮುದಾಯಕ್ಕೆ ಸಂಬಂಧಿಸಿದಂತೆ ಪರಿಕಲ್ಪನೆವಾರು 45 ನಿಮಿಷಗಳ ಅವಧಿಯ ಫಿಲ್ಮ್ ಸಿದ್ಧಪಡಿಸಲು 90,000 ರು., 10-17 ನಿಮಿಷದ ಅಡ್ವೋಕೇಸಿ ಚಿತ್ರೀಕರಣಕ್ಕೆ 50,000 ರು., ನಿಗಮದ ಅವಲೋಕನ ಕುರಿತು 130 ನಿಮಿಷದ ಚಿತ್ರಕ್ಕೆ 10,00,000 ರು., ಅಲ್ಲದೇ ನಿಗಮದ ಅವಲೋಕನ ಕುರಿತು 25 ನಿಮಿಷದ ಚಿತ್ರಕ್ಕೆ 3,00,000 ರು., ಇಂಗ್ಲೀಷ್ ಮತ್ತು ಕನ್ನಡದಲ್ಲಿ ಸ್ಕ್ರಿಪ್ಟ್‌ಗಾಗಿ 5,00,000 ರು., ಚಿತ್ರೀಕರಣಕ್ಕೆ ( ಮೂರು ಕ್ಯಾಮರಾ – ಡ್ರೋಣ್) ಉಪಕರಣಗಳ ಬಾಡಿಗೆ, ಸಾರಿಗೆ, ವಸತಿ ವ್ಯವಸ್ಥೆಗಾಗಿ 17,00,000 ರು., .ರು ವೆಚ್ಚ ಮಾಡಲಿದೆ.
ಚಿತ್ರೀಕರಣಕ್ಕೆ ಮತ್ತೆ 3 ಕ್ಯಾಮರಾ, ಡ್ರೋಣ್, ಕ್ಯಾಮರಾಮನ್ ವೃತ್ತಿ ಶುಲ್ಕಕ್ಕೆ 18,00,000 ರು., 4 ಕ್ಯಾಮರಾ, ಮತ್ತು ಡ್ರೋಣ್, ನಿರ್ದೇಶಕ, ಸಹಾಯಕ ನಿರ್ದೇಶಕರ ವೃತ್ತಿಪರ ಶುಲ್ಕಕ್ಕೆ 20,00,000 ರು., ಹಾರ್ಡ್ ಡಿಸ್ಕ್‌ಗಳಿಗಾಗಿ 50,000 ರು., ಅನಿಮೇಷನ್‌ಗೆ 1,00,000 ರು., ಸಂಗೀತಕ್ಕೆ 60,000 ರು., ವಾಕ್ಸ್ ಹಿ ಹಿನ್ನಲೆ ಧ್ವನಿ ಮತ್ತು ಹಿನ್ನಲೆ ಧ್ವನಿ ಚಿತ್ರೀಕರಣಕ್ಕೆ 1,50,000 ರು., ಸಂಕಲನಕ್ಕೆ ಸ್ಟುಡಿಯೋ ಬಾಡಿಗಾಗಿ 1,45,000 ರು., ವಿಡಿಯೋ ಎಡಿಟರ್‍ಗಳಿಗೆ ಶುಲ್ಕವೆಂದು 2,50,000 ರು., ನಿರ್ದೇಶಕರ ಗೌರವ ಧನಕ್ಕೆಂದು 2,75,000 ರು., ಮತ್ತು ಜಿಎಸ್‌ಟಿ ವೆಚ್ಚ ಸೇರಿ ಒಟ್ಟಾರೆ 99,94, 600 ರು. ವೆಚ್ಚದ ಪಟ್ಟಿಯನ್ನು ಒಳಗೊಂಡಿತ್ತು.
ಬೋವಿ ಅಭಿವೃದ್ದಿ ನಿಗಮದ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ 1 ಕೋಟಿ ರು ವೆಚ್ಚ; ಆಕ್ಷೇಪ
ಈ ವೆಚ್ಚಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದರು.
ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತಿದ್ದರೂ ದಲಿತ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ದೊರೆತಿರಲಿಲ್ಲ.
ದಲಿತ ವಿದ್ಯಾರ್ಥಿಗಳಿಗೆ ಇನ್ನೂ ಮಂಜೂರಾಗದ ವಿದ್ಯಾರ್ಥಿ ವೇತನ; 1.05 ಲಕ್ಷ ಅರ್ಜಿಗಳಿಗಿದೆಯೇ ‘ಗ್ಯಾರಂಟಿ’?
ಸರ್ಕಾರದ ಸಾಧನೆ, ಕಾರ್ಯಕ್ರಮ, ಯೋಜನೆಗಳ ಕುರಿತಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ಈಗಾಗಲೇ ದ ಪಾಲಿಸಿ ಫ್ರಂಟ್ ಗೆ 7.20 ಕೋಟಿ ರು. ನೀಡಿದೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುವ ಹೆಸರಿನಲ್ಲಿ ಸಾಕ್ಷ್ಯ ಚಿತ್ರ, ಕಿರುಚಿತ್ರ, ಜಾಹೀರಾತಿಗಾಗಿ 1.00 ಕೋಟಿ ರು. ಒದಗಿಸಿರುವುದು ದುಂದುವೆಚ್ಚಕ್ಕೆ ದಾರಿ ಮಾಡಿಕೊಟ್ಟಂತಾಗಿತ್ತು.
ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳು ಮತ್ತು ಸೇವೆಗಳ ಪ್ರಚಾರ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ 100 ಕೋಟಿಗೂ ಅಧಿಕ ವೆಚ್ಚ ಮಾಡಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು 1 ಕೋಟಿ ರು. ವೆಚ್ಚ ಮಾಡಿದೆ.
ಪ್ರತಿ ಇಲಾಖೆಯ ಕಾರ್ಯಕ್ರಮ, ಯೋಜನೆಗಳು ಮತ್ತು ಸೇವೆಗಳನ್ನು ನಿರ್ದಿಷ್ಟವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿರುವಾಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಖರ್ಚು ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿತ್ತು.
ಬರಗಾಲದಲ್ಲೂ ಕಿರುಚಿತ್ರ ನಿರ್ಮಾಣಕ್ಕೆ ಕೋಟಿ ರು ಖರ್ಚು; ದುಂದುವೆಚ್ಚಕ್ಕೆ ದಾರಿಯಲ್ಲವೇ?
ಹಿಂದಿನ ಬಿಜೆಪಿ ಸರ್ಕಾರವು ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ರು. ಖರ್ಚು ಮಾಡಿತ್ತು.
ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ಖರ್ಚು?; ಜಿಮ್ ಹೆಸರಿನಲ್ಲಿ ನಡೆದಿದೆ ಲೂಟಿ
ಶಾಲಾ ಮಕ್ಕಳ ಉತ್ತರ ಪತ್ರಿಕೆಗಳಿಗೂ ಹಣವನ್ನು ಭರಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿರುವ ಹೊತ್ತಿನಲ್ಲಿಯೇ ಜಾಹೀರಾತುಗಳಿಗೆ 100 ಕೋಟಿ ರು. ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್’ಗೆ 7.20 ಕೋಟಿ ಕೊಟ್ಟ ಸರ್ಕಾರ
2019-20ರಿಂದ 2023ರ ಜನವರಿವರೆಗೆ ಹಿಂದಿನ ಬಿಜೆಪಿ ಸರ್ಕಾರವು ಒಟ್ಟಾರೆ 4 ವರ್ಷಗಳಲ್ಲಿ ಟಿವಿ, ಮುದ್ರಣ ಮಾಧ್ಯಮ, ಸಾಮಾಜಿಕ ಜಾಲತಾಣಗಳಿಗೆ 173.33 ಕೋಟಿ ರು. ವೆಚ್ಚ ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಕೇವಲ 9 ತಿಂಗಳಲ್ಲಿ 47.73 ಕೋಟಿ ರು. ವೆಚ್ಚ ಮಾಡಿತ್ತು.
ಪತ್ರಿಕೆಗಳಿಗೆ 21.70 ಕೋಟಿ ಸೇರಿ ಇತರೆ ಜಾಹೀರಾತುಗಳಿಗೆ 100 ಕೋಟಿ ವೆಚ್ಚ; ಆರ್ಥಿಕ ಬಿಕ್ಕಟಿನಲ್ಲೂ ಪ್ರಚಾರದ ಗೀಳು
2023-24ನೇ ಸಾಲಿನಲ್ಲಿ ಬಸ್ ಬ್ಯ್ರಾಂಡಿಂಗ್ ಮೂಲಕ ಯೋಜನೆಗಳನ್ನು ಪ್ರಚಾರ ಮಾಡಲು ಪ್ರತ್ಯೇಕ ಅನುದಾನ ಒದಗಿಸಿಲ್ಲ. ಇಲಾಖೆಗೆ ಒದಗಿಸಿದ್ದ ಒಟ್ಟು ಅನುದಾನದಲ್ಲಿಯೇ ಇದಕ್ಕಾಗಿ 9,01,50,676 ರು., ವೆಚ್ಚ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಆರೇ ಆರು ತಿಂಗಳಲ್ಲಿ 18 ಕೋಟಿ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿದ್ದರು.
2019ರಿಂದ 2023ರವರೆಗೆ ಹಿಂದಿನ ಬಿಜೆಪಿ ಸರ್ಕಾರವೂ ಸಹ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಒಟ್ಟಾರೆ 173.33 ಕೋಟಿ ರು.ಗಳನ್ನು ಜಾಹೀರಾತಿಗೆ ವೆಚ್ಚ ಮಾಡಿತ್ತು. 2019-20ರಲ್ಲಿ ಟಿ ವಿ ವಾಹಿನಿಗಳೀಗೆ 15.25 ಕೋಟಿ ರು., 2020-21ರಲ್ಲಿ 17.45 ಕೋಟಿ , 2021-22ರಲ್ಲಿ 36.58 ಕೋಟಿ ರು., 2022-23 (2023 ಜನವರಿ 31ವರೆಗೆ) 42.23 ಕೋಟಿ ರು. ಸೇರಿ 111.51 ಕೋಟಿ ರು. ವೆಚ್ಚ ಮಾಡಿತ್ತು. ಅದೇ ರೀತಿ ಮುದ್ರಣ ಮಾಧ್ಯಮಗಳಿಗೆ 2019-20ರಲ್ಲಿ 6.79 ಕೋಟಿ ರು., 2020-21ರಲ್ಲಿ 9.75 ಕೋಟಿ ರು., 2021-22ರಲ್ಲಿ 13.26 ಕೋಟಿ ರು., 2022-23ರಲ್ಲಿ 26.28 ಕೋಟಿ ರು ಸೇರಿ 56.08 ಕೋಟಿ ರು.,ವೆಚ್ಚ ಮಾಡಿತ್ತು.
ಹಾಗೆಯೇ ಸಾಮಾಜಿಕ ಜಾಲತಾಣಗಳಿಗೆ 2019-20ರಲ್ಲಿ 0.48 ಲಕ್ಷ, 2020-21ರಲ್ಲಿ 0.48 ಲಕ್ಷ ರು., 2021-22ರಲ್ಲಿ 1.18 ಲಕ್ಷ ರು., 2022-23ರಲ್ಲಿ 3.60 ಲಕ್ಷ ರು. ಸಶೇರಿ ಒಟ್ಟಾರೆ 5.70 ಲಕ್ಷ ರು. ವೆಚ್ಚ ಮಾಡಿತ್ತು. ಇನ್ನು 2020-21ರಲ್ಲಿ ವರ್ಣ ಜಾಹೀರಾತುಗಳಿಗೆ 175,66,6,429 ರು., 2021-22ರಲ್ಲಿ 341,073,768 ರು., 2022-23ರಲ್ಲಿ 567,216,692 ರು.ಗಳನ್ನು ವೆಚ್ಚ ಮಾಡಲಾಗಿದೆ.
ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋವಿಡ್ ಜಾಗೃತಿ ಹೆಸರಿನಲ್ಲಿ 11 ಕೋಟಿ ರು. ವೆಚ್ಚ ಮಾಡಿದ್ದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೋದಿ ಹುಟ್ಟುಹಬ್ಬಕ್ಕೂ ಜಾಹೀರಾತು ನೀಡಿದ್ದರು. ಇದಕ್ಕಾಗಿ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು. ವೆಚ್ಚವಾಗಿತ್ತು.
ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?
ಮೋದಿ ಹುಟ್ಟುಹಬ್ಬಕ್ಕೆ ಪ್ರಾಯೋಜಿತ ಪುರವಣಿಗೆಗೆ ಜಾಹೀರಾತು ನೀಡಿದ್ದ 44.85 ಲಕ್ಷ ರು. ಮಾಹಿತಿಗಳನ್ನೂ ಹಿಂದಿನ ಸರ್ಕಾರವು ಮುಚ್ಚಿಟಿತ್ತು.
ಕೋವಿಡ್ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಯಡಿಯೂರಪ್ಪ ಅವರು ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ರು.ಗಳನ್ನು ರಾಜ್ಯ ಸರ್ಕಾರದಿಂದ ಭರಿಸಿದ್ದರು.
ಕೋವಿಡ್ ಪರಿಹಾರ ನೀಡಲು ಚೌಕಾಸಿ, ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ
2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ ಖರ್ಚಾಗಿತ್ತು. ಅಲ್ಲದೇ ಜಾಹೀರಾತಿಗೆ 6.62 ಕೋಟಿ ವೆಚ್ಚವಾಗಿತ್ತು.
2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ, ಜಾಹೀರಾತಿಗೆ 6.62 ಕೋಟಿ ವೆಚ್ಚ
ಕೋವಿಡ್ ಲಸಿಕೆ ಅಭಿಯಾನಕ್ಕಾಗಿ 3 ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಅಭಿಯಾನದ ಗುರಿ ಮುಟ್ಟಿರಲಿಲ್ಲ.
ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ
ಸರ್ಕಾರದ ಸಾಧನೆ ಬಿಂಬಿಸಲು ಬಸವರಾಜ ಬೊಮ್ಮಾಯಿ ಅವರು ತಮ್ಮ ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ ಮಾಡಿದ್ದರು.
ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರಕ್ಕೆ ಜಾಹೀರಾತಿಗೆ 1.02 ಕೋಟಿ ವೆಚ್ಚವಾಗಿತ್ತು.
ಅನುಭವ ಮಂಟಪದಲ್ಲಿ ಸಿ ಎಂ ಭಾಷಣದ ನೇರ ಪ್ರಸಾರಕ್ಕೆ 42.26 ಲಕ್ಷ ವೆಚ್ಚವಾಗಿತ್ತು.
ಕೋವಿಡ್ ಜಾಹೀರಾತು ಪೈಕಿ ನೀಡಿದ್ದ 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು ದೊರೆತಿತ್ತು.
ಕೋವಿಡ್ ಜಾಹೀರಾತು; 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು
ಸಿವಿಲ್ ಗುತ್ತಿಗೆದಾರರಿಗೂ ಬಾಕಿ ವೇತನ ನೀಡಿಲ್ಲ. ಹೀಗಿದ್ದರೂ ಸಹ ದೃಶ್ಯ, ಮುದ್ರಣ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ಬರಗಾಲದಲ್ಲೂ ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸಿ ಉಣಬಡಿಸಿದ್ದ 49,855 ಅಡುಗೆ ಸಿಬ್ಬಂದಿಗಳಿಗೆ 2 ತಿಂಗಳಾದರೂ ವೇತನ ನೀಡಿಲ್ಲ. ಅದೇ ರೀತಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 2024ರ ಜೂನ್ ಮತ್ತು ಜುಲೈ ತಿಂಗಳ ವೇತನವೂ ಬಿಡುಗಡೆ ಆಗಿಲ್ಲ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಸೇರಿದಂತೆ ಒಟ್ಟು 6 ತಾಲೂಕಿನ ಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ಇದಕ್ಕೆ ಅನುದಾನ ಕೊರತೆಯೇ ಕಾರಣ ಎಂದು ಗೊತ್ತಾಗಿದೆ.
ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಬಿಸಿಯೂಟ ತಯಾರಕರ ವಿವಿಧ ಸಮಸ್ಯೆಗಳ ಬಗ್ಗೆ 2024ರ ಅಕ್ಟೋಬರ್ 23ರಂದು ನಡೆದಿದ್ದ ಸಭೆಯಲ್ಲಿ ಈ ಸಂಗತಿಯು ಬಯಲಾಗಿದೆ.
ಅದೇ ರೀತಿ ರಾಜ್ಯದ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ 5ರಿಂದ 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಬಿಸಿಯೂಟ ತಯಾರಕರಿಗೆ ಇಡಗುಂಟು ಹಣ ನೀಡುವ ವಿಚಾರದಲ್ಲೂ ಯಾವುದೇ ಪ್ರಗತಿಯೂ ಆಗಿಲ್ಲ ಎಂದು ಗೊತ್ತಾಗಿದೆ.
2024ರ ಅಕ್ಟೋಬರ್ 23ರಂದು ನಡೆದಿದ್ದ ಸಭೆಯಲ್ಲಿ ಬಿಸಿಯೂಟ ತಯಾರಕರು ವಿವಿಧ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಇವರ್‍ಯಾರಿಗೂ ಸಮಾಧಾನಕರ ಉತ್ತರ ನೀಡದ ಸರ್ಕಾರವು ಬಿಸಿಯೂಟ ತಯಾರಕರ ಆಕ್ರೋಶವನ್ನೂ ಎದುರಿಸಿದೆ ಎಂದು ತಿಳಿದು ಬಂದಿದೆ.
2024ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎದುರಾಗಿದ್ದ ಬರಗಾಲದಲ್ಲೂ 49,855 ಸಂಖ್ಯೆಯ ಅಡುಗೆ ಸಿಬ್ಬಂದಿ ರಾಜ್ಯದ ಶಾಲಾ ಮಕ್ಕಳಿಗೆ ಬಿಸಿಯೂಟ ಉಣಬಡಿಸಿದ್ದರು. ಈ ಸಂಬಂಧ ಗೌರವ ಧನ ಪಾವತಿಸಬೇಕಿತ್ತು. 60;40ರ ಅನುಪಾತದಂತೆ ಒಟ್ಟಾರೆ 12.16 ಕೋಟಿ ಅನುದಾನ ಬಿಡುಗಡೆ ಆಗಬೇಕಿತ್ತು. ಇದರಲ್ಲಿ ಕೇಂದ್ರ ಸರ್ಕಾರದ್ದು 7.29 ಕೋಟಿ ರು ಇದ್ದರೇ ರಾಜ್ಯ ಸರ್ಕಾರದ ಪಾಲು 4.86 ಕೋಟಿ ರು. ಇತ್ತು.
ಈ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು 2024ರ ಏಪ್ರಿಲ್ ಮತ್ತು ಆಗಸ್ಟ್ 26ರಂದು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದುವರೆಗೂ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಬಿಸಿಯೂಟ ತಯಾರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗೊತ್ತಾಗಿದೆ.
ಅಲ್ಲದೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಯೂಟ ತಯಾರಕರಿಗೆ 2024ರ ಜೂನ್ ಮತ್ತು ಜುಲೈ ತಿಂಗಳ ವೇತನವೂ ಬಿಡುಗಡೆ ಆಗಿಲ್ಲ. ಜೂನ್ 2024ರಲ್ಲಿ 1,12953, ಜುಲೈನಲ್ಲಿ 1,12,855, ಆಗಸ್ಟ್ 1,12,988, ಸೆಪ್ಟಂಬರ್ ನಲ್ಲಿ 1,13,098 ಮಂದಿ ಕೆಲಸ ಮಾಡಿದ್ದರು. ಆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವೇತನವೇ ಬಿಡುಗಡೆ ಆಗಿಲ್ಲ ಎಂದು ತಿಳಿದು ಬಂದಿದೆ.
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ತಾಂತ್ರಿಕ ದೋಷ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್‌ನ ಸಮಸ್ಯೆಯಿಂದಾಗಿ ಜೂನ್ ತಿಂಗಳ ವೇತನ ಪಾವತಿಯಾಗಿಲ್ಲ. ಜುಲೈ ತಿಂಗಳಲ್ಲಿ ಕನಕಪುರದ 661, ಕೆ ಆರ್ ಪೇಟೆಯ 148, ಮದ್ದೂರಿನ 26, ಮಂಡ್ಯದ 151, ಚಿತ್ತಾಪುರದ 107, ಸುರಪುರದ 65 ಮಂದಿ ಸೇರಿದಂತೆ ಒಟ್ಟಾರೆ 1,158 ಅಡುಗೆ ಸಿಬ್ಬಂದಿಗೆ ವೇತನ ಪಾವತಿ ಆಗಿಲ್ಲ. ಇದಕ್ಕೆ ಅನುದಾನ ಕೊರತೆಯೇ ಕಾರಣ ಎಂದು ಗೊತ್ತಾಗಿದೆ.
ಉಳಿದ ಸಿಬ್ಬಂದಿಯ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ತಾಂತ್ರಿಕ ದೋಷ, ಆಧಾರ್ ಲಿಂಕ್‌ನ ಸಮಸ್ಯೆಯಿಂದಾಗಿ ವೇತನ ಪಾವತಿಗೆ ತೊಂದರೆ ಆಗಿದೆ. ಅದೇ ರೀತಿ 2024ರ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನಕ್ಕೂ ಅನುದಾನ ಬಿಡುಗಡೆ ಆಗಿಲ್ಲ. ಕೇಂದ್ರ ಸರ್ಕಾರದಿಂದ ಮೊದಲನೇ ಕಂತಿನ ಅನುದಾನವೂ ಬಿಡುಗಡೆ ಆಗಿಲ್ಲ. ಹೀಗಾಗಿ ಈ ಮೂರು ತಿಂಗಳ ವೇತನ ಪಾವತಿ ಆಗಿಲ್ಲ ಎಂದು ತಿಳಿದು ಬಂದಿದೆ.
ಹೀಗಾಗಿ ರಾಜ್ಯ ಯೋಜನೆ ಆಗಿರುವ ಕ್ಷೀರಭಾಗ್ಯ ಯೋಜನೆಯಡಿ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತವನ್ನು (TOP-UP- ಲೆಕ್ಕ ಶೀರ್ಷಿಕೆ – 2202-00-101-18, 2202=01-196-02) ಉಪ ಶೀರ್ಷಿಕೆ 324 ಅಡಿ ನಿಗದಿಯಾಗಿರುವ 303 ಕೋಟಿ ರು ಅನುದಾನ ಪೈಕಿ 123.73 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಕೋರಿದೆ. ಆದರೆ ಇದುವರೆಗೂ ಆರ್ಥಿಕ ಇಲಾಖೆಯ ಬಳಿಯೇ ಈ ಪ್ರಸ್ತಾವನೆ ಬಾಕಿ ಇದೆ. ಆರ್ಥಿಕ ಇಲಾಖೆ ಸಹಮತಿ ದೊರಕದ ಹೊರತು ಅಡುಗೆ ಸಿಬ್ಬಂದಿಗೆ ವೇತನ ಪಾವತಿ ಆಗುವುದಿಲ್ಲ ಎಂದು ತಿಳಿದು ಬಂದಿದೆ.
ಹಾಗೆಯೇ 60 ವರ್ಷ ವಯಸ್ಸು ಪೂರ್ಣಗೊಂಡು ಸೇವೆಯಿಂದ ಬಿಡುಗಡೆ ಆಗಿರುವ ಅಡುಗೆ ಸಿಬ್ಬಂದಿಗೆ ಇಡಿಗಂಟು ಪಾವತಿಸಬೇಕಿತ್ತು. ಈ ಸಂಬಂಧ ಹೊರಡಿಸಬೇಕಿರುವ ಸರ್ಕಾರದ ಆದೇಶಕ್ಕೆ ಸಚಿವರ ಅನುಮೋದನೆ ದೊರೆತಿದೆ. ಆದರೆ ಇದುವರೆಗೂ ಆದೇಶ ಹೊರಡಿಸಿಲ್ಲ. ಉಪ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಮುಕ್ತಾಯವಾದ ನಂತರವಷ್ಟೇ ಇಡಿಗಂಟಿನ ಕುರಿತಾದ ಆದೇಶವು ಹೊರಬೀಳಲಿದೆ ಎಂದು ಗೊತ್ತಾಗಿದೆ.
ಈ ಸಂಬಂಧ ಅಧಿಕಾರಿಗಳು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.