ಬರಗಾಲದಲ್ಲೂ ಕಿರುಚಿತ್ರ ನಿರ್ಮಾಣಕ್ಕೆ ಕೋಟಿ ರು ಖರ್ಚು; ದುಂದುವೆಚ್ಚಕ್ಕೆ ದಾರಿಯಲ್ಲವೇ?

ಬೆಂಗಳೂರು; ಬರ ಪರಿಹಾರಕ್ಕೆ ಸೂಕ್ತ ನೆರವು ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಬರಗಾಲದ ಹೊತ್ತಿನಲ್ಲೇ  ಇಲಾಖೆಗಳ ಕಾರ್ಯಕ್ರಮಗಳನ್ನು ಕಿರುಚಿತ್ರ, ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಲು ಹೊರಟಿದೆ. ಸಾಕ್ಷ್ಯ ಚಿತ್ರ, ಕಿರುಚಿತ್ರಗಳಿಗಾಗಿ ಕೋಟಿ ರು ವೆಚ್ಚ ಮಾಡುತ್ತಿದೆ.

 

ಸರ್ಕಾರದ ಸಾಧನೆ, ಕಾರ್ಯಕ್ರಮ, ಯೋಜನೆಗಳ ಕುರಿತಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ಈಗಾಗಲೇ ದ ಪಾಲಿಸಿ ಫ್ರಂಟ್‌ ಗೆ 7.20 ಕೋಟಿ ರು. ನೀಡಿದೆ. ಈ ಮಧ್ಯೆ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುವ ಹೆಸರಿನಲ್ಲಿ  ಸಾಕ್ಷ್ಯ ಚಿತ್ರ, ಕಿರುಚಿತ್ರ, ಜಾಹೀರಾತಿಗಾಗಿ 1.00 ಕೋಟಿ ರು. ಒದಗಿಸಿರುವುದು ದುಂದುವೆಚ್ಚಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

 

ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.

 

ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳು ಮತ್ತು ಸೇವೆಗಳ ಪ್ರಚಾರ ಮಾಡಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಈಗಾಗಲೇ 100 ಕೋಟಿ ರು. ವೆಚ್ಚ ಮಾಡಿರುವ ಬೆನ್ನಲ್ಲೇ ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೇವೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು 1 ಕೋಟಿ ರು. ವೆಚ್ಚ ಮಾಡುತ್ತಿರುವುದು ಮುನ್ನೆಲೆಗೆ ಬಂದಿದೆ.

 

ಪ್ರತಿ ಇಲಾಖೆಯ ಕಾರ್ಯಕ್ರಮ, ಯೋಜನೆಗಳು ಮತ್ತು ಸೇವೆಗಳನ್ನು ನಿರ್ದಿಷ್ಟವಾಗಿ  ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿರುವಾಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಖರ್ಚು ಮಾಡುವುದು ದುಂದು ವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿದೆ.

 

ಕಂದಾಯ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿ 2023ರ ಡಿಸೆಂಬರ್‍‌ 21ರಂದೇ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಒದಗಿಸುತ್ತಿರುವ ದಸ್ತಾವೇಸಜುಗಳ ನೋಂದಣಿ, ಸ್ಥಿರಾಸ್ತಿಗಳ ಮಾರ್ಗಸೂಚಿಗಳ ದರಗಳ ನಿರ್ಧರಣೆ, ಕಾವೇರಿ ಆನ್‌ಲೈನ್‌ ಸೇವೆಗಳು, ನೋಂದಾಯಿಸಲಾಗದ ಸಾಧನ ಮತ್ತು ಇತರೆ ಜನಸ್ನೇಹಿ ಕಾರ್ಯಕ್ರಮಗಳ ಕುರಿತಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೈಗೊಳ್ಳಲಿದೆ. ಅಲ್ಲದೇ ಈ ಮೂಲಕ ಜನರಲ್ಲಿ ಇಲಾಖೆಯ ಬಗ್ಗೆ ಅರಿವು ಮೂಡಿಸಲು ಸಾಕ್ಷ್ಯಚಿತ್ರ, ಕಿರುಚಿತ್ರ, ಜಾಹೀರಾತಿಗಾಗಿ 1.00 ಕೋಟಿ ರು. ವೆಚ್ಚ ಮಾಡಲು ಸಹಮತಿ ವ್ಯಕ್ತಪಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಹಿಂದಿನ ಬಿಜೆಪಿ ಸರ್ಕಾರವು ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ರು. ಖರ್ಚು ಮಾಡಿತ್ತು.

ಐದು ನಿಮಿಷದ ಕಿರುಚಿತ್ರ ನಿರ್ಮಾಣಕ್ಕೆ 4.50 ಕೋಟಿ ಖರ್ಚು?; ಜಿಮ್‌ ಹೆಸರಿನಲ್ಲಿ ನಡೆದಿದೆ ಲೂಟಿ

 

ಶಾಲಾ ಮಕ್ಕಳ ಉತ್ತರ ಪತ್ರಿಕೆಗಳಿಗೂ ಹಣವನ್ನು ಭರಿಸದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿರುವ ಹೊತ್ತಿನಲ್ಲಿಯೇ ಜಾಹೀರಾತುಗಳಿಗೆ 100 ಕೋಟಿ ರು. ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

 

2019-20ರಿಂದ 2023ರ ಜನವರಿವರೆಗೆ ಹಿಂದಿನ ಬಿಜೆಪಿ ಸರ್ಕಾರವು ಒಟ್ಟಾರೆ 4 ವರ್ಷಗಳಲ್ಲಿ ಟಿವಿ, ಮುದ್ರಣ ಮಾಧ್ಯಮ, ಸಾಮಾಜಿಕ ಜಾಲತಾಣಗಳಿಗೆ 173.33 ಕೋಟಿ ರು. ವೆಚ್ಚ ಮಾಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರವು ಟಿವಿ ಮತ್ತು ಮುದ್ರಣ ಮಾಧ್ಯಮಗಳಿಗೆ ಕೇವಲ 9 ತಿಂಗಳಲ್ಲಿ 47.73 ಕೋಟಿ ರು. ವೆಚ್ಚ ಮಾಡಿದೆ.

ಪತ್ರಿಕೆಗಳಿಗೆ 21.70 ಕೋಟಿ ಸೇರಿ ಇತರೆ ಜಾಹೀರಾತುಗಳಿಗೆ 100 ಕೋಟಿ ವೆಚ್ಚ; ಆರ್ಥಿಕ ಬಿಕ್ಕಟಿನಲ್ಲೂ ಪ್ರಚಾರದ ಗೀಳು

 

2023-24ನೇ ಸಾಲಿನಲ್ಲಿ ಬಸ್‌ ಬ್ಯ್ರಾಂಡಿಂಗ್‌ ಮೂಲಕ ಯೋಜನೆಗಳನ್ನು ಪ್ರಚಾರ ಮಾಡಲು ಪ್ರತ್ಯೇಕ ಅನುದಾನ ಒದಗಿಸಿಲ್ಲ. ಇಲಾಖೆಗೆ ಒದಗಿಸಿದ್ದ ಒಟ್ಟು ಅನುದಾನದಲ್ಲಿಯೇ ಇದಕ್ಕಾಗಿ 9,01,50,676 ರು., ವೆಚ್ಚ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಆರೇ ಆರು ತಿಂಗಳಲ್ಲಿ 18 ಕೋಟಿ ರು.ಗಳನ್ನು ಜಾಹೀರಾತಿಗಾಗಿ ವೆಚ್ಚ ಮಾಡಿದ್ದರು.

 

ಬರಗಾಲದಲ್ಲೂ ಆರೇ ಆರು ತಿಂಗಳಲ್ಲಿ ಜಾಹೀರಾತುಗಳಿಗೆ 18.50 ಕೋಟಿ ವೆಚ್ಚ

 

2019ರಿಂದ 2023ರವರೆಗೆ ಹಿಂದಿನ ಬಿಜೆಪಿ ಸರ್ಕಾರವೂ ಸಹ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಒಟ್ಟಾರೆ 173.33 ಕೋಟಿ ರು.ಗಳನ್ನು ಜಾಹೀರಾತಿಗೆ ವೆಚ್ಚ ಮಾಡಿತ್ತು. 2019-20ರಲ್ಲಿ ಟಿ ವಿ ವಾಹಿನಿಗಳೀಗೆ 15.25 ಕೋಟಿ ರು., 2020-21ರಲ್ಲಿ 17.45 ಕೋಟಿ , 2021-22ರಲ್ಲಿ 36.58 ಕೋಟಿ ರು., 2022-23 (2023 ಜನವರಿ 31ವರೆಗೆ) 42.23 ಕೋಟಿ ರು. ಸೇರಿ 111.51 ಕೋಟಿ ರು. ವೆಚ್ಚ ಮಾಡಿತ್ತು. ಅದೇ ರೀತಿ ಮುದ್ರಣ ಮಾಧ್ಯಮಗಳಿಗೆ 2019-20ರಲ್ಲಿ 6.79 ಕೋಟಿ ರು., 2020-21ರಲ್ಲಿ 9.75 ಕೋಟಿ ರು., 2021-22ರಲ್ಲಿ 13.26 ಕೋಟಿ ರು., 2022-23ರಲ್ಲಿ 26.28 ಕೋಟಿ ರು ಸೇರಿ 56.08 ಕೋಟಿ ರು.,ವೆಚ್ಚ ಮಾಡಿತ್ತು.

 

 

 

ಹಾಗೆಯೇ ಸಾಮಾಜಿಕ ಜಾಲತಾಣಗಳಿಗೆ 2019-20ರಲ್ಲಿ 0.48 ಲಕ್ಷ, 2020-21ರಲ್ಲಿ 0.48 ಲಕ್ಷ ರು., 2021-22ರಲ್ಲಿ 1.18 ಲಕ್ಷ ರು., 2022-23ರಲ್ಲಿ 3.60 ಲಕ್ಷ ರು. ಸಶೇರಿ ಒಟ್ಟಾರೆ 5.70 ಲಕ್ಷ ರು. ವೆಚ್ಚ ಮಾಡಿತ್ತು. ಇನ್ನು 2020-21ರಲ್ಲಿ    ವರ್ಣ ಜಾಹೀರಾತುಗಳಿಗೆ 175,66,6,429 ರು., 2021-22ರಲ್ಲಿ 341,073,768 ರು., 2022-23ರಲ್ಲಿ 567,216,692 ರು.ಗಳನ್ನು ವೆಚ್ಚ ಮಾಡಲಾಗಿದೆ.

 

 

ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೋವಿಡ್‌ ಜಾಗೃತಿ ಹೆಸರಿನಲ್ಲಿ 11 ಕೋಟಿ ರು. ವೆಚ್ಚ ಮಾಡಿದ್ದರು.

ಕೋವಿಡ್‌-19 ಜಾಹೀರಾತಿನ ಜಾಲ; 3 ತಿಂಗಳಲ್ಲಿ 11 ಕೋಟಿ ವೆಚ್ಚ

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೋದಿ ಹುಟ್ಟುಹಬ್ಬಕ್ಕೂ ಜಾಹೀರಾತು ನೀಡಿದ್ದರು. ಇದಕ್ಕಾಗಿ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು. ವೆಚ್ಚವಾಗಿತ್ತು.

 

 

ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?

 

ಮೋದಿ ಹುಟ್ಟುಹಬ್ಬಕ್ಕೆ ಪ್ರಾಯೋಜಿತ ಪುರವಣಿಗೆಗೆ ಜಾಹೀರಾತು ನೀಡಿದ್ದ 44.85 ಲಕ್ಷ ರು. ಮಾಹಿತಿಗಳನ್ನೂ ಹಿಂದಿನ ಸರ್ಕಾರವು ಮುಚ್ಚಿಟಿತ್ತು.

 

 

ಕೋವಿಡ್‌ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಯಡಿಯೂರಪ್ಪ ಅವರು  ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ರು.ಗಳನ್ನು ರಾಜ್ಯ ಸರ್ಕಾರದಿಂದ ಭರಿಸಿದ್ದರು.

 

ಕೋವಿಡ್‌ ಪರಿಹಾರ ನೀಡಲು ಚೌಕಾಸಿ, ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ

 

2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ ಖರ್ಚಾಗಿತ್ತು. ಅಲ್ಲದೇ ಜಾಹೀರಾತಿಗೆ 6.62 ಕೋಟಿ ವೆಚ್ಚವಾಗಿತ್ತು.

 

2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ, ಜಾಹೀರಾತಿಗೆ 6.62 ಕೋಟಿ ವೆಚ್ಚ

 

ಕೋವಿಡ್ ಲಸಿಕೆ ಅಭಿಯಾನಕ್ಕಾಗಿ   3 ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಅಭಿಯಾನದ  ಗುರಿ ಮುಟ್ಟಿರಲಿಲ್ಲ.

 

ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಮುಟ್ಟದ ಗುರಿ

 

ಸರ್ಕಾರದ ಸಾಧನೆ ಬಿಂಬಿಸಲು ಬಸವರಾಜ ಬೊಮ್ಮಾಯಿ ಅವರು ತಮ್ಮ  ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ ಮಾಡಿದ್ದರು.

 

ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ

 

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರಕ್ಕೆ ಜಾಹೀರಾತಿಗೆ 1.02 ಕೋಟಿ ವೆಚ್ಚವಾಗಿತ್ತು.

 

ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರದ ಜಾಹೀರಾತಿಗೆ 1.02 ಕೋಟಿ ವೆಚ್ಚ

 

ಅನುಭವ ಮಂಟಪದಲ್ಲಿ   ಸಿ ಎಂ ಭಾಷಣದ ನೇರ ಪ್ರಸಾರಕ್ಕೆ 42.26 ಲಕ್ಷ ವೆಚ್ಚವಾಗಿತ್ತು.

 

ಅನುಭವಮಂಟಪ ; ಸಿಎಂ ಭಾಷಣದ ನೇರಪ್ರಸಾರಕ್ಕೆ 42.26 ಲಕ್ಷ ರು. ವೆಚ್ಚ

 

ಕೋವಿಡ್‌ ಜಾಹೀರಾತು ಪೈಕಿ ನೀಡಿದ್ದ  1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು ದೊರೆತಿತ್ತು.

 

ಕೋವಿಡ್‌ ಜಾಹೀರಾತು; 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು

ಸಿವಿಲ್‌ ಗುತ್ತಿಗೆದಾರರಿಗೂ ಬಾಕಿ ವೇತನ ನೀಡಿಲ್ಲ. ಹೀಗಿದ್ದರೂ ಸಹ ದೃಶ್ಯ, ಮುದ್ರಣ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಕ್ಕೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

SUPPORT THE FILE

Latest News

Related Posts