ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣದ ಸುತ್ತ ‘ದಿ ಫೈಲ್‌’ನ 11 ವರದಿಗಳು

ಪ್ರಾತಿನಿಧಿಕ ಚಿತ್ರ

ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಪ್ರಭಾವಿ ಮುರುಘಾ ಮಠದ ಡಾ ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸರು ಕಡೆಗೂ ಬಂಧಿಸಿದ್ದಾರೆ.

 

ಈ ಪ್ರಕರಣವು ರಾಜ್ಯದ ಲಿಂಗಾಯತ ಸಮುದಾಯದ ಮಠಗಳಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ರಾಜಕಾರಣಿಗಳು, ನ್ಯಾಯಾಧೀಶರು, ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು, ಮಾಧ್ಯಮ ದಿಗ್ಗಜರು, ಅಂತರರಾಷ್ಟ್ರೀಯ ಸಾಧಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮುರುಘಾ ಶರಣರು ಲೈಂಗಿಕ ಕಿರುಕುಳದಂತಹ ಗಂಭೀರ ಆರೋಪಕ್ಕೆ ಗುರಿಯಾಗಿದ್ದು ಲಿಂಗಾಯತ ಮಠಗಳ ಪಾಲಿಗೆ ಆಘಾತದಂತೆ ಎರಗಿತ್ತು.

 

ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಮುರುಘಾ ಶರಣರನ್ನು ಬಂಧಿಸಲು ಪೊಲೀಸರು ಮೀನಮೇಷ ಎಣಿಸಿದ್ದರು. ಕಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿ ಮತ್ತಷ್ಟು ಮುಜುಗರಿಂದ ಪಾರಾಗಿದ್ದಾರೆ. ಈ ಪ್ರಕರಣವನ್ನು ಮೊದಲು ಬಹಿರಂಗಗೊಳಿಸಿದ್ದ ‘ದಿ ಫೈಲ್‌’ ಸತತವಾಗಿ ಇದರ ಸುತ್ತ ವರದಿಗಳನ್ನು ಪ್ರಕಟಿಸಿದೆ. ಅದನ್ನಿಲ್ಲಿ ಕ್ರೋಢೀಕರಿಸಿ ಕೊಡಲಾಗಿದೆ.

 

ಮುರುಘಾ ಮಠದ ಶರಣರ ವಿರುದ್ಧ ಪೋಕ್ಸೋ ಅಡಿಯಲ್ಲಿ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಸುದ್ದಿಯನ್ನು ಎಲ್ಲಾ ಮುಖ್ಯವಾಹಿನಿಗಳಿಗಿಂತಲೂ ಮೊದಲೇ  ‘ದಿ ಫೈಲ್‌’ 2022ರ ಆಗಸ್ಟ್‌ 26ರಂದು ರಾತ್ರಿ 11.56ಕ್ಕೆ ವರದಿ ಪ್ರಕಟಿಸಿತ್ತು.

 

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

 

ಪೋಕ್ಸೋ ಅಡಿಯಲ್ಲಿ ಮೊಕದ್ದಮೆ ದಾಖಲಾದ ಸುದ್ದಿಯನ್ನು ‘ದಿ ಫೈಲ್‌’ ಹೊರಗೆಡವುತ್ತಿದ್ದಂತೆ ಪ್ರಕರಣದಿಂದ ಶ್ರೀಗಳನ್ನು ರಕ್ಷಿಸಲು ಇನ್ನಿತರೆ ಮಠಾಧೀಶರು ಮುರುಘಾ ಮಠದತ್ತ ದೌಡಾಯಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸೇರಿದಂತೆ ಬಹುತೇಕರು ಶ್ರೀಗಳ ಪರ ವಕಾಲತ್ತು ವಹಿಸಿದರು.  ಆ ಸಂದರ್ಭದಲ್ಲಿ ನೈಜ ಹೋರಾಟಗಾರರ ವೇದಿಕೆಯು ಈ ಪ್ರಕರಣವನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿತ್ತು.  ಈ ಕುರಿತು ಆಗಸ್ಟ್‌ 28ರಂದು ವರದಿ ಪ್ರಕಟಿಸಿತ್ತು.

ಶರಣರ ವಿರುದ್ಧದ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಮನವಿ; ಪೋಕ್ಸೋ ತನಿಖೆ ಮೇಲೆ ಪ್ರಭಾವ!

ಈ ಪ್ರಕರಣದ ಬೆನ್ನಲ್ಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ, ತನಿಖೆಯ ಸ್ಥಿತಿಗತಿ ಮತ್ತು ಎಷ್ಟು ಪ್ರಕರಣಗಳಲ್ಲಿ ಬಂಧನವಾಗಿವೆ ಎಂದು ಅಂಕಿ ಸಂಖ್ಯೆ ಸಮೇತ ವರದಿಯನ್ನು ಆಗಸ್ಟ್‌ 29ರಂದು ವರದಿ ಪ್ರಕಟಿಸಿತ್ತು.

ಚಿತ್ರದುರ್ಗದಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನ; 3 ವರ್ಷದಲ್ಲಿ 123 ಪ್ರಕರಣ, 146 ಮಂದಿ ಬಂಧನ

ಮುರುಘಾ ಶರಣರ ವಿರುದ್ಧ ಕೇಳಿ ಬಂದಿದ್ದ ಗುರುತರವಾದ ಆರೋಪವನ್ನು ರಾಜಕಾರಣಿಗಳೇ ತಳ್ಳಿ ಹಾಕಿದ್ದರು. ಆರೋಪದಿಂದ ಶ್ರೀಗಳು ಮುಕ್ತಿ ಹೊಂದಲಿದ್ದಾರೆ ಎಂಬ ಮಾತುಗಳನ್ನಾಡುವ ಮೂಲಕ ಪ್ರಕರಣದ ತನಿಖೆಯ ಹಾದಿಯ ಸುಳಿವು ನೀಡಿದ್ದರು. ಆಗ ಬಿಜೆಪಿಯ ರಾಜ್ಯಸಭೆ ಸದಸ್ಯ ಲೆಹರ್‌ಸಿಂಗ್‌ ಅವರು ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಸುದ್ದಿಯನ್ನು ‘ದಿ ಫೈಲ್‌’ 2022ರ ಆಗಸ್ಟ್‌ 29ರಂದೇ ಪ್ರಕಟಿಸಿತ್ತು.

ಪೋಕ್ಸೋ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಹೆಚ್ಚಿದ ಒತ್ತಡ; ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಹೇಳಿಕೆ ಬಿಡುಗಡೆ

ಮೊದಲನೇ ಆರೋಪಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದರೂ ಸಂತ್ರಸ್ತ ಬಾಲಕಿಯರಿಂದ ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿರಲಿಲ್ಲ. ಬದಲಿಗೆ ಚಿತ್ರದುರ್ಗ ಶಿಕ್ಷಕನೊಬ್ಬನ ಪ್ರಕರಣದ ಥಳಕು ಹಾಕಿ ಶರಣರಿಗೆ ನಿರೀಕ್ಷಣಾ ಜಾಮೀನು ಕೊಡಿಸುವ ಎಲ್ಲಾ ತಂತ್ರ ಹೂಡಿದ್ದರು. ಈ ಕುರಿತು ಆಗಸ್ಟ್‌ 30ರಂದು ವರದಿ ಪ್ರಕಟಿಸಿತ್ತು.

ಸೆಕ್ಷನ್‌ 164 ಹೇಳಿಕೆ ವಿಳಂಬ; ಪೊಲೀಸರ ತಂತ್ರಗಾರಿಕೆ ಹಿಂದಿದೆಯೇ ಚಿತ್ರದುರ್ಗ ಶಿಕ್ಷಕನ ಜಾಮೀನು ಪ್ರಕರಣ?

ಈ ಪ್ರಕರಣವು ರಾಜ್ಯಾದ್ಯಂತ ಹೆಚ್ಚು ಚರ್ಚೆಗೊಳಗಾಗಿದ್ದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರೂ ತುಟಿ ಬಿಚ್ಚಿರಲಿಲ್ಲ. ಈ ಕುರಿತು 2022ರ ಆಗಸ್ಟ್‌ 30ರಂದು ವರದಿ ಪ್ರಕಟಿಸಿತ್ತು.

ಶರಣರ ವಿರುದ್ಧ ಪೋಕ್ಸೋ ಮೊಕದ್ದಮೆ; ತುಟಿ ಬಿಚ್ಚದ ಸಿದ್ದರಾಮಯ್ಯ,ಅಂತರ ಕಾಯ್ದುಕೊಂಡ ಕಾಂಗ್ರೆಸ್‌

ಮುರುಘಾ ಶರಣರ ವಿರುದ್ಧ ಇಂತಹದೊಂದು ಗುರುತರ ಆರೋಪ ಕೇಳಿ ಬಂದ ಕೂಡಲೇ ಶರಣರ ಪರ ಹೇಳಿಕೆ ನೀಡುವ ಮೂಲಕ ಮಾದಾರ ಚನ್ನಯ್ಯ ಗುರುಪೀಠವು ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು 2022ರ ಆಗಸ್ಟ್‌ 31ರಂದು ವರದಿ ಪ್ರಕಟಿಸಿತ್ತು.

ದಲಿತ ಸಮುದಾಯದ ಅಪ್ರಾಪ್ತ ಬಾಲಕಿ, ಸಂತ್ರಸ್ತೆ ಎಂಬುದನ್ನೇ ಮರೆತರೇ ಮಾದಾರಾ ಚನ್ನಯ್ಯ ಶ್ರೀ?

ಸಿಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಬಾಲಕಿಯರ ಹೇಳಿಕೆ ಪಡೆಯಲು ವಿಳಂಬ ತಂತ್ರಗಾರಿಕೆ ಅನುಸರಿಸಿದ್ದ ಪೊಲೀಸರು ನ್ಯಾಯವನ್ನೇ ಅವಹೇಳನ ಮಾಡಿದ್ದರು ಎಂದು ಮಹಿಳಾ ವೇದಿಕೆಗಳು ಆಕ್ರೋಶ ವ್ಯಕ್ತಪಡಿಸಿ ಇಲಾಖೆಯ ನಿರ್ದೇಶಕರಿಗೆ ಜಂಟಿ ಮನವಿ ಸಲ್ಲಿಸಿದ್ದವು. ಈ ಕುರಿತು ಆಗಸ್ಟ್‌ 31ರಂದು ವರದಿ ಪ್ರಕಟಿಸಿತ್ತು. ಲ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಮುರುಘಾ ಶರಣರ ಬಂಧಿಸದ ಪೊಲೀಸರಿಂದಲೇ ನ್ಯಾಯದ ಅವಹೇಳನ

ಶರಣರ ವಿರುದ್ಧ ಪೋಕ್ಸೋ ಮೊಕದ್ದಮೆ ದಾಖಲಾಗಿದ್ದರೂ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರೂ ದನಿ ಎತ್ತಿಲ್ಲ ಎಂದು ‘ದಿ ಫೈಲ್‌’ ವರದಿ ಮಾಡುತ್ತಿದ್ದಂತೆಯೇ ಕಾಂಗ್ರೆಸ್‌ನ ಮುಖಂಡ ಮತ್ತು ಮಾಜಿ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರು ಈ ಕುರಿತು ದನಿ ಎತ್ತಿದ್ದರು. ಅಲ್ಲದೆ ಟ್ವೀಟ್‌ ಕೂಡ ಮಾಡಿದ್ದರು. ಈ ಕುರಿತು ಆಗಸ್ಟ್‌ 31ರಂದು ವರದಿ ಪ್ರಕಟಿಸಿತ್ತು.

ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಮೌನ ಮುರಿದ ಎಚ್‌ ಸಿ ಮಹದೇವಪ್ಪ

ಮುರುಘಾ ಮಠದಲ್ಲಿರುವ ವಸತಿ ನಿಲಯವು ನೇರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ವಹಣೆಯಲ್ಲಿತ್ತು. ಇದೇ ವಸತಿ ನಿಲಯದ ಮಕ್ಕಳು ಲೈಂಗಿಕ ದೌರ್ಜನಕ್ಕೆ ಒಳಗಾಗಿದ್ದರು. ಆದರೂ ಸಚಿವ ಹಾಲಪ್ಪ ಆಚಾರ್‌ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಅವರು ತುಟಿ ಬಿಚ್ಚಿರಲಿಲ್ಲ. ಈ ಕುರಿತು ಸೆ.1ರಂದು ವರದಿ ಪ್ರಕಟಿಸಿತ್ತು.

ಶರಣರಿಂದ ಲೈಂಗಿಕ ದೌರ್ಜನ್ಯ ಆರೋಪ; ಮೌನಕ್ಕೆ ಜಾರಿದ ಮಹಿಳಾ-ಮಕ್ಕಳ ಕಲ್ಯಾಣ, ಶಿಕ್ಷಣ ಸಚಿವರು

ಅಷ್ಟೇ ಅಲ್ಲ, ಚಿತ್ರದುರ್ಗ ಪೊಲೀಸರು ಅನುಸರಿಸುತ್ತಿರುವ ವಿಳಂಬದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತಲ್ಲದೇ ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೋಟೀಸ್‌ ಕೂಡ ನೀಡಿತ್ತು. ಈ ಕುರಿತು ಸೆ.1ರಂದು ವರದಿ ಪ್ರಕಟಿಸಿತ್ತು.

ಲೈಂಗಿಕ ದೌರ್ಜನ್ಯ; ಪೊಲೀಸ್‌ ಇಲಾಖೆ ಮೀನಮೇಷ, ಎನ್‌ಸಿಪಿಆರ್‌ನಿಂದ ಸ್ವಯಂ ಪ್ರೇರಿತ ಪ್ರಕರಣ

 

the fil favicon

SUPPORT THE FILE

Latest News

Related Posts