Sunday | October 18, 2026 |

ಕೋವಿಡ್‌ ಚಿಕಿತ್ಸೆ ವೆಚ್ಚ; ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ 115 ಕೋಟಿ ಪಾವತಿ

ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಭಾರೀ ಪ್ರಮಾಣದಲ್ಲಿ ಆದಾಯ ಕುಂಠಿತಗೊಂಡಿದೆ ಎಂದು ಬೊಬ್ಬೆ ಹೊಡೆದಿದ್ದ ರಾಜ್ಯದ ಖಾಸಗಿ ಆಸ್ಪತ್ರೆಗಳು ಖಜಾನೆಯನ್ನು ತುಂಬಿಸಿಕೊಂಡಿವೆ. ರೋಗಿಗಳಿಗೆ ಚಿಕಿತ್ಸೆ ನೀಡಿರುವ ಕಾರ್ಪೋರೇಟ್‌ ಸೇರಿದಂತೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 145 ಕೋಟಿ ರು. ಈಗಾಗಲೇ ಪಾವತಿ ಆಗಿದೆ. ಈ ಪೈಕಿ ಬೆಂಗಳೂರು ನಗರದಲ್ಲಿರುವ ಖಾಸಗಿ ಅಸ್ಪತ್ರೆಗಳು ಸಿಂಹಪಾಲು ಪಡೆದಿವೆ. ನವೆಂಬರ್‌ 23ರ ಅಂತ್ಯಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ 115.79 ಕೋಟಿ ರು.ಬಿಡುಗಡೆಯಾಗಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ವಿವರ ‘ದಿ ಫೈಲ್‌’ಗೆ ಲಭ್ಯವಾಗಿದೆ. ಇದರ ಪ್ರಕಾರ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸುವ ಸಂಬಂಧ 26.30 ಕೋಟಿ ರು. ಮೊತ್ತದ ಬಿಲ್‌ಗಳು ಸರ್ಕಾರದ ಅನುಮತಿ ಪಡೆಯುವ ಹಂತದಲ್ಲಿವೆ. ಅದೇ ರೀತಿ 115.97 ಕೋಟಿ ರು. ಮೊತ್ತದ ಬಿಲ್‌ಗಳು ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಒಟ್ಟಾರೆ 288 ಕೋಟಿ ರುಪಾಯಿ ರಾಜ್ಯದ ಖಾಸಗಿ ಆಸ್ಪತ್ರೆಗಳ ತಿಜೋರಿ ಸೇರಲಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನವೆಂಬರ್‌ 23 ಅಂತ್ಯಕ್ಕೆ 62,458 ಪ್ರಕರಣಗಳಿಗೆ 203.24 ಕೋಟಿ ರು. ಪಾವತಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ 49,751 ಪ್ರಕರಣಗಳಿಗೆ 166.42 ಕೋಟಿ ರು.ಗಳನ್ನು ಭರಿಸಿರುವ ಸರ್ಕಾರ 12,707 ಪ್ರಕರಣಗಳಿಗೆ ವೆಚ್ಚ ಪಾವತಿಸಲು ಅನುಮೋದಿಸಿದೆ. ಹಾಗೆಯೇ 36.82 ಕೋಟಿ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 30 ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿನ ಒಟ್ಟು 26,692 ಪ್ರಕರಣಗಳಿಗೆ 139.89 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕಿದೆ ಎಂದು ದಾಖಲೆಯಿಂದ ತಿಳಿದು ಬಂದಿದೆ.

ಮಾಜಿ ಸಚಿವ ಎಂ ಆರ್‌ ಸೀತಾರಾಮ್‌ ಕುಟುಂಬ ಒಡೆತನದ ಆಸ್ಪತ್ರೆ, ಡಾ ದೇವಿಶೆಟ್ಟಿ ಅವರ ನಾರಾಯಣ ಹೃದಯಾಲಯ, ಡಾ ಶರಣ್‌ ಪಾಟೀಲ್‌ ಅವರ ಸ್ಪರ್ಶ್, ಭಗವಾನ್‌ ಮಹಾವೀರ್‌ ಜೈನ್‌, ಕೊಲಂಬಿಯಾ ಏಷ್ಯಾ, ಫೋರ್ಟೀಸ್‌ ಸಮೂಹ ಸೇರಿದಂತೆ ಹಲವು ಆಸ್ಪತ್ರೆಗಳಿಗೆ ಒಟ್ಟಾರೆ 115.79 ಕೋಟಿ ರು. ಪಾವತಿಯಾಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಪಾವತಿ ಆಗಲು ಅನುಮತಿಗೆ 2,183.34 ಲಕ್ಷ ಬಾಕಿ ಇದ್ದರೆ, ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿ 7,581.09 ಲಕ್ಷ ರು. ಮೊತ್ತದ ಬಿಲ್‌ಗಳಿವೆ. ಇದೆಲ್ಲ ಸೇರಿದಂತೆ ಒಟ್ಟಾರೆ 21,343.87 ಲಕ್ಷ ರು. ಖಾಸಗಿ ಆಸ್ಪತ್ರೆಗಳ ತಿಜೋರಿ ತುಂಬಲಿದೆ.

ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ಪಾವತಿಸಿರುವ ವಿವರ
(ನವೆಂಬರ್‌ 23ರ ಅಂತ್ಯಕ್ಕೆ)

1. ವೈದೇಹಿ ಆಸ್ಪತ್ರೆ – 480.10 ಲಕ್ಷ
2. ಸಪ್ತಗಿರಿ ಸೂಪರ್‌ ಸ್ಪೆಷಾಲಿಟಿ- 409.06 ಲಕ್ಷ
3. ಎಂ ಎಸ್‌ ರಾಮಯ್ಯ ಆಸ್ಪತ್ರೆ – 847.64 ಲಕ್ಷ
4. ಭಗವಾನ್‌ ಮಹಾವೀರ್‌ ಜೈನ್‌ – 255.43 ಲಕ್ಷ
5. ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜು – 338.34 ಲಕ್ಷ
6. ಆಸ್ತರ್‌ ಸಿಎಂಐ ಆಸ್ಪತ್ರೆ – 317.04 ಲಕ್ಷ
7. ಈಸ್ಟ್‌ ಪಾಯಿಂಟ್‌ ಆಸ್ಪತ್ರೆ – 572.83 ಲಕ್ಷ
8. ಕಿಮ್ಸ್‌ ಆಸ್ಪತ್ರೆ – 149.17 ಲಕ್ಷ
9. ಫೋರ್ಟೀಸ್‌ ಆಸ್ಪತ್ರೆ ಬನ್ನೇರುಘಟ್ಟ – 58.11 ಲಕ್ಷ
10. ಫೋರ್ಟೀಸ್‌ ಆಸ್ಪತ್ರೆ, ಕನ್ನಿಂಗ್‌ಹ್ಯಾಂ ರಸ್ತೆ – 18.17 ಲಕ್ಷ
11. ಅಪೋಲೋ ಆಸ್ಪತ್ರೆ – 149.32 ಲಕ್ಷ
12. ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ – 517.28 ಲಕ್ಷ
13. ಸ್ಪರ್ಶ ಆಸ್ಪತ್ರೆ – 324.23 ಲಕ್ಷ
14. ಸೇಂಟ್‌ ತೆರೇಸಾ ಆಸ್ಪತ್ರೆ – 129.74 ಲಕ್ಷ
15. ಬಿಜಿಎಸ್‌ ಗ್ಲೋಬಲ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್ಸ್‌ – 325.27 ಲಕ್ಷ
16. ಅಪೊಲೋ ಆಸ್ಪತ್ರೆ ಎಂಟರ್‌ಪ್ರೈಸ್‌ ಲಿಮಿಟೆಡ್‌ – 45.67 ಲಕ್ಷ
17. ನಾಗಪ್ಪ ಹಾಡ್ಲಿ ಆಸ್ಪತ್ರೆ – 143.83 ಲಕ್ಷ
18. ಪ್ರಶಾಂತ್‌ ಆಸ್ಪತ್ರೆ – 120.35 ಲಕ್ಷ
19. ಸೇಂಟ್‌ ಫಿಲೋಮಿನಾ ಆಸ್ಪತ್ರೆ- 211.57 ಲಕ್ಷ
20. ಮಣಿಪಾಲ್‌ ನಾರ್ತ್‌ ಆಸ್ಪತ್ರೆ- 251.35 ಲಕ್ಷ
21. ಭಗವಾನ್‌ ಮಹಾವೀರ್‌ ಜೈನ್‌- 58.67 ಲಕ್ಷ
22. ಸೇಂಟ್‌ ಮಾರ್ಥಾಸ್‌ -141.59 ಲಕ್ಷ
23. ಮಣಿಪಾಲ್‌ ಆಸ್ಪತ್ರೆಗಳು – 133.37 ಲಕ್ಷ
24. ಚಿನ್ಮಯ ಮಿಷನ್‌ ಆಸ್ಪತ್ರೆ – 274.31 ಲಕ್ಷ
25. ಆಸ್ತರ್‌ ಆರ್‌ ವಿ ಆಸ್ಪತ್ರೆ – 118.64 ಲಕ್ಷ
26. ಬೆಂಗಳೂರ್‌ ಬ್ಯಾಪಿಸ್ಟ್‌ – 278.24 ಲಕ್ಷ
27. ಸಕ್ರಾ ಆಸ್ಪತ್ರೆ – 177.07 ಲಕ್ಷ
28. ಕೊಲಂಬಿಯಾ ಏಷ್ಯಾ (ವೈಟ್‌ಫೀಲ್ಡ್‌) – 31.49 ಲಕ್ಷ
29. ಅಗಡಿ ಆಸ್ಪತ್ರೆ- 58.90 ಲಕ್ಷ
30. ಅತ್ರೇಯ ಅಸ್ಪತ್ರೆ – 94.05 ಲಕ್ಷ
31. ಸತ್ಯ ಸಾಯಿ ಆರ್ಥೋಪೆಡಿಕ್‌ – 86.75 ಲಕ್ಷ
32. ಕೊಲಂಬಿಯಾ ಏಷ್ಯಾ ರೆಫರಲ್‌ (ಯಶವಂತಪುರ) – 186.35 ಲಕ್ಷ
33. ಕೊಲಂಬಿಯಾ ಏಷ್ಯಾ (ಹೆಬ್ಬಾಳ) 23.93 ಲಕ್ಷ
34. ಕೊಲಂಬಿಯಾ ಎಷ್ಯಾ – 27.95 ಲಕ್ಷ
35. ಅನನ್ಯ ಆಸ್ಪತ್ರೆ ಪ್ರೈವೈಟ್‌ ಲಿಮಿಟೆಡ್‌ ರಾಜಾಜಿನಗರ- 61.04 ಲಕ್ಷ
36. ಶ್ರೀ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ- 45.85 ಲಕ್ಷ
37. ಅಸ್ತ್ರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ – 85.01 ಲಕ್ಷ
38. ಗಂಗಾ ಸ್ಪೆಷಾಲಿಟಿ ಆಸ್ಪತ್ರೆ – 234.57 ಲಕ್ಷ
39. ನಾರಾಯಣ ಹೃದಯಾಲಯ ಪ್ರೈವೈಟ್‌ ಲಿಮಿಟೆಡ್‌- 511.26 ಲಕ್ಷ
40. ಆಕಾಶ್‌ ಆಸ್ಪತ್ರೆ- 1,006.01 ಲಕ್ಷ
41. ದಿ ಆಕ್ಸ್‌ಫರ್ಡ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ- 557.54 ಲಕ್ಷ
42. ರಾಮಯ್ಯ ಹರ್ಷ ಆಸ್ಪತ್ರೆ- 19.71 ಲಕ್ಷ

ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಲ್ಲಿ ದಾಖಲಾಗಿದ್ದ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿರಲಿಲ್ಲ. ಕೇವಲ ಕೋವಿಡ್ ಚಿಕಿತ್ಸೆ ನೀಡುತ್ತಾರೆ ಇತರೆ ಅನಾರೋಗ್ಯ ಸಮಸ್ಯೆಗಳು (ಹೃದ್ರೋಗ, ಮೂತ್ರಪಿಂಡ ಸಮಸ್ಯೆ) ಇದ್ದರೆ ಮತ್ತೆ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿಕೊಳ್ಳಬೇಕು ಅಥವಾ ಹೆಚ್ಚುವರಿ ಹಣ ನೀಡಬೇಕಿದೆ. ಜತೆಗೆ ಆಹಾರ ಪೂರೈಕೆ, ಸಿಬ್ಬಂದಿ ನೆರವು, ಮಾನಸಿಕ ಆರೋಗ್ಯ ಕಾಪಾಡುವ ಕೌನ್ಸೆಲಿಂಗ್, ಸೋಂಕಿತರ ಆರೋಗ್ಯ ಸ್ಥಿತಿ ಕುರಿತು ಸಂಬಂಧಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದನ್ನು ಸ್ಮರಿಸಬಹುದು.

Hot this week

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...
Please Scan to make Your Contribution

Topics

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

Related Articles

Popular Categories

error: Content is protected !!