Friday | November 6, 2026 |

ಕ್ಯಾಂಟೀನ್‌ ಗುತ್ತಿಗೆದಾರರಿಂದ ಲಂಚ ವಸೂಲಿ; ಡಿಜಿಟಲ್ ಲಂಚಾವತಾರ, ಫೋನ್‌ ಪೇ ಸಿಎಂ, ದಿ ಫೈಲ್‌ ವರದಿ ಉಲ್ಲೇಖಿಸಿ ಸರ್ಕಾರವನ್ನು ತರಾಟೆ ತೆಗೆದುಕೊಂಡ ಜೆಡಿಎಸ್, ಬಿಜೆಪಿ

ಬೆಂಗಳೂರು; ವಿಕಾಸ ಸೌಧ, ಬಹುಮಹಡಿ ಕಟ್ಟಡದಲ್ಲಿರುವ ಕ್ಯಾಂಟೀನ್‌ ಗುತ್ತಿಗೆದಾರರಿಂದ ಲಂಚದ ಹಣ ವಸೂಲು ಮಾಡಲಾಗಿದೆ ಎಂದು ಆರೋಪಿಸಿ ಸರ್ಕಾರಕ್ಕೆ ಗುತ್ತಿಗೆದಾರರು ವಕೀಲರ ಮೂಲಕ ನೋಟೀಸ್ ನೀಡಿರುವ ಕುರಿತು ದಿ ಫೈಲ್‌ ವರದಿ ಪ್ರಕಟಿಸುತ್ತಿದ್ದಂತೆ ಜಾತ್ಯತೀತ ಜನತಾದಳ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್‌ ಅವರು  ಕಾಂಗ್ರೆಸ್‌ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೊಂದು ‘ಡಿಜಿಟಲ್ ಲಂಚಾವತಾರ’ ಎಂದು ಜೆಡಿಎಸ್‌ ಆರೋಪಿಸಿದರೆ , ಪೇ ಸಿಎಂ ಎಂದು ಆರೋಪ ಮಾಡಿದವರು ಈಗ ಫೋನ್ ಪೇ ಸಿಎಂ! ‘PayCM’ ಎಂದವರ ಹಣೆಬರಹವೀಗ ‘PhonePe ಕಮಿಷನ್’ ನಲ್ಲಿ ಬಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು  ಟ್ವೀಟ್‌ ಮಾಡುವ ಮೂಲಕ ಲೇವಡಿ ಮಾಡಿದ್ದಾರೆ.

ಜಾತ್ಯತೀತ ಜನತಾದಳ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಎಕ್ಸ್‌ ಜಾಲತಾಣದಲ್ಲಿ ದಿ ಫೈಲ್‌ ಪ್ರಕಟಿಸಿದ್ದ ವರದಿಯನ್ನು ಹಂಚಿಕೊಂಡಿದ್ದಾರೆ.

ಡಿಜಿಟಲ್ ಭ್ರಷ್ಟಾಚಾರ ಎಂದು ಆರೋಪಿಸಿದ ಜೆಡಿಎಸ್

ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ಕ್ಯಾಂಟೀನ್ ಗುತ್ತಿಗೆದಾರರನ್ನೂ ಬಿಡದ ಈ ಸರ್ಕಾರದ ಲಂಚದ ದಾಹ ಮಿತಿಮೀರಿದೆ! ವಿಕಾಸಸೌಧ ಮತ್ತು ಎಂ.ಎಸ್ ಬಿಲ್ಡಿಂಗ್ ಕ್ಯಾಂಟೀನ್ ಗುತ್ತಿಗೆದಾರನಿಗೆ ಟೆಂಡರ್ ರದ್ದು ಮಾಡುವ ಬೆದರಿಕೆ ಹಾಕಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧೀನ ಕಾರ್ಯದರ್ಶಿಗಳು ಹಣ ಸುಲಿಗೆ ಮಾಡಿದ್ದಾರೆ. ನಗದು ಹಾಗೂ ‘ಫೋನ್ ಪೇ’ ಮೂಲಕ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣವನ್ನು ಅಧಿಕಾರಿಗಳು ತಮ್ಮ ಮತ್ತು ತಮ್ಮ ಮಗನ ಖಾತೆಗೆ ಹಾಕಿಸಿಕೊಂಡಿರುವ ‘ಡಿಜಿಟಲ್ ಲಂಚಾವತಾರ’ ಬಯಲಾಗಿದೆ ಎಂದು ಎಕ್ಸ್‌ನಲ್ಲಿ ಹೇಳಿದೆ.

 

 

‘ಲೀಗಲ್ ನೋಟಿಸ್ ಜೊತೆಗೆ ವಾಟ್ಸಾಪ್ ಮತ್ತು ಫೋನ್ ಪೇ ಸ್ಕ್ರೀನ್ ಶಾಟ್ ಸಾಕ್ಷ್ಯಗಳಿದ್ದರೂ ಸರ್ಕಾರ ಮೌನವಾಗಿರುವುದೇಕೆ? ಮುಖ್ಯಮಂತ್ರಿಗಳೇ, ನಿಮ್ಮ ಮೂಗಿನ ನೇರದಲ್ಲೇ ನಡೆಯುತ್ತಿರುವ ಈ ಸುಲಿಗೆಗೆ ನಿಮ್ಮ ಉತ್ತರವೇನು? ಗುತ್ತಿಗೆದಾರರನ್ನು ಬೆದರಿಸಿ ಲಂಚ ವಸೂಲಿ ಮಾಡುವುದು ಬಿಟ್ಟರೆ ನಿಮ್ಮ ಸರ್ಕಾರಕ್ಕೆ ಬೇರೆ ಕೆಲಸವಿಲ್ಲವೇ? ಪಾರದರ್ಶಕ ಆಡಳಿತ ಎಂದರೆ ಇದೇನಾ? ಈ ಭ್ರಷ್ಟಾಚಾರದ ಬಗ್ಗೆ ತಕ್ಷಣವೇ ತನಿಖೆಯಾಗಲಿ,’ ಎಂದು ಆಗ್ರಹಿಸಿದೆ.

 

 

ಪೇ ಸಿಎಂ ಎಂದವರೇ ಈಗ ಫೋನ್‌ ಪೇ ಸಿಎಂ ಎಂದ ಅಶೋಕ್

ಈ ಪ್ರಕರಣದ ಕುರಿತು ಜೆಡಿಎಸ್‌ ತೀವ್ರವಾಗಿ ಟೀಕಿಸಿರುವ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್ ಅಶೋಕ್‌ ಅವರೂ ಸಹ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೇ ಸಿಎಂ ಎಂದು ಆರೋಪ ಮಾಡಿದವರು ಈಗ ಫೋನ್ ಪೇ ಸಿಎಂ! ‘PayCM’ ಎಂದವರ ಹಣೆಬರಹವೀಗ ‘PhonePe ಕಮಿಷನ್’ ನಲ್ಲಿ ಬಯಲಾಗಿದೆ. ಬಿಜೆಪಿ ಅವಧಿಯಲ್ಲಿ ಪೇಸಿಎಂ ಅಭಿಯಾನ ನಡೆಸಿ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ಪಕ್ಷ ಈಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ಅವರ ಸರ್ಕಾರದಲ್ಲಿ ಫೋನ್ ಪೇ ಕಮಿಶನ್ ವ್ಯವಹಾರ ನಡೆಸುತ್ತಿದೆ. ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್‌ಗಳಂತಹ ಆಡಳಿತದ ಶಕ್ತಿಕೇಂದ್ರಗಳಲ್ಲೇ ಕಮಿಷನ್ ದಂಧೆ ತಾಂಡವವಾಡುತ್ತಿದೆ. ಡಿಬಿಟಿ  (DBT) ಯಂತೆಯೇ ಡಿಸಿಟಿ ( DCT- Direct Commission Transfer)  ಎಂಬ ಹೊಸ ಡಿಜಿಟಲ್ ಭ್ರಷ್ಟಾಚಾರ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ ಎಂದು ಹೇಳಿದ್ದಾರೆ.

 

 

‘ಕ್ಯಾಂಟೀನ್ ಗುತ್ತಿಗೆದಾರರ ಬಳಿಯೂ ‘PhonePe’ ಮೂಲಕ ₹10 ಲಕ್ಷ ಲಂಚ ವಸೂಲಿ ಮಾಡುವ ಮಟ್ಟಕ್ಕೆ ಈ ಭ್ರಷ್ಟ ಸರ್ಕಾರದ ಹಗಲು ದರೋಡೆ ತಲುಪಿದೆ ಎಂದರೆ ಇನ್ನು ದೊಡ್ಡ ದೊಡ್ಡ ತಿಮಿಂಗಿಲಗಳು ಹೇಗೆ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿವೆ ಎಂದು ನೀವೇ ಊಹಿಸಿಕೊಳ್ಳಬಹುದು. ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಹಣವಿಲ್ಲ, ಗೃಹಲಕ್ಷ್ಮಿಯರಿಗೆ ನೀಡಲು ಹಣವಿಲ್ಲ, ಡೀಸೆಲ್ ಹಾಕಲು ದುಡ್ಡಿಲ್ಲ ಎನ್ನುವ ಗತಿಗೆಟ್ಟ ಕಾಂಗ್ರೆಸ್‌ ಸರ್ಕಾರ, ನಾಚಿಕೆ ಮಾನ ಬಿಟ್ಟು ಕಷ್ಟಪಟ್ಟು ದುಡಿಯುವ ಗುತ್ತಿಗೆದಾರರಿಂದ ಕಮಿಶನ್ ವಸೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದೆ,’ ಎಂದು ಲೇವಡಿ ಮಾಡಿದೆ.

ಪದೇ ಪದೇ ಲಂಚ ಪಡೆಯುವುದರ ಜೊತೆಗೆ ಬೆದರಿಕೆ ಒಡ್ಡಿದ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿರುವ ಗುತ್ತಿಗೆದಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ವಿಧಾನಪರಿಷತ್ ಸಭಾಪತಿಗಳ ಆಪ್ತ ಕಾರ್ಯದರ್ಶಿಗೆ ವಕೀಲರ‌ ಮೂಲಕ ನೋಟಿಸ್ ಕೊಡಿಸಿದ್ದಾರೆ.

 

 

ಮುಖ್ಯಮಂತ್ರಿಗಳೇ, ಲಂಚ ಕೇಳಿದರೆ ನನಗೆ ನೇರವಾಗಿ ಕರೆ ಮಾಡಿ ಎಂದು ನೀವು ಹೇಳುತ್ತೀರಿ. ಆದರೆ ನಿಮ್ಮ ಅಧಿಕಾರಿಗಳು ನೇರವಾಗಿ ಫೋನ್ ಪೇ ಮಾಡಿ ಎನ್ನುತ್ತಿದ್ದಾರೆ. ನೀವೇ ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಕಮಿಶನ್ ದಂಧೆ ನಡೆಯುತ್ತಿರುವುದು ನಿಮಗೆ ತಿಳಿಯದೇ ಹೋಯಿತೇ? ಅಥವಾ ಇದಕ್ಕೂ ನಿಮ್ಮ ಅನುಮತಿ ಸಿಕ್ಕಿದೆಯೇ ಎಂದು ಅಶೋಕ್‌ ಅವರು ಪ್ರಶ್ನಿಸಿದ್ದಾರೆ.

 

 

‘ಬೊಕ್ಕಸದಲ್ಲಿ ಹಣವಿಲ್ಲ ಎಂದು ರೈತರ ಮುಂದೆ ಮುಲಾಜಿಲ್ಲದೆ ಹೇಳುವ ನಿಮಗೆ, ಕಮಿಶನ್ ಪಡೆಯಬಾರದು ಎಂದು ಸೂಚನೆ ಕೊಡುವಷ್ಟು ತಾಕತ್ತಿಲ್ಲ ಎಂದಮೇಲೆ ಅಧಿಕಾರದಲ್ಲಾದರೂ ಯಾಕಿರಬೇಕು? ಕೂಡಲೇ ಎಲ್ಲ ಇಲಾಖೆಗಳಲ್ಲಿ ನಡೆಯುತ್ತಿರುವ ಕಮಿಶನ್ ದಂಧೆಯನ್ನು ನಿಲ್ಲಿಸಿ, ಜನಸಾಮಾನ್ಯರ ಸಂಕಷ್ಟಕ್ಕೆ ಮಿಡಿಯುವ ಪ್ರಯತ್ನ ಮಾಡಿ. ಇಲ್ಲವಾದರೆ ನೀವು ‘ಫೋನ್ ಪೇ ಸಿಎಂ’ ಎಂದು ಘೋಷಿಸಿಕೊಳ್ಳಿ,’ ಎಂದು ಅಶೋಕ್‌ ಅವರು ಸಲಹೆ ನೀಡಿದ್ದಾರೆ.

 

ಎಂ ಎಸ್‌ ಬಿಲ್ಡಿಂಗ್‌, ವಿಕಾಸಸೌಧ ಕ್ಯಾಂಟೀನ್‌ ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ, ಫೋನ್‌ ಪೇ ಮೂಲಕ 10 ಲಕ್ಷ ವಸೂಲು ಮಾಡಿದ ಅಧಿಕಾರಿ; ಸರ್ಕಾರಕ್ಕೆ ಲೀಗಲ್‌ ನೋಟೀಸ್‌ ಜಾರಿ

 

ಎಂ ಎಸ್‌ ಬಿಲ್ಡಿಂಗ್ ಮತ್ತು ವಿಕಾಸ ಸೌಧದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಗುತ್ತಿಗೆದಾರರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡಿದ್ದನ್ನು ಗುತ್ತಿಗೆದಾರರೇ ವಕೀಲರ ಮೂಲಕ ನೋಟೀಸ್‌ ನೀಡಿದ್ದನ್ನು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಗೆಜೆಟೆಡ್ ಪ್ರೊಬೇಷನರ್ಸ್‌ಗಳಿಗೆ ಅದೇಶ ಪತ್ರ ನೀಡಲು ಮುರುಘಾ, ಸಿದ್ದಗಂಗಾ ಮಠ ಶ್ರೀಗಳ ಮಧ್ಯ ಪ್ರವೇಶ; ಪತ್ರಗಳು ಬಹಿರಂಗ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಮಸೂದೆ...

54,059.8 ಕೋಟಿ ರು ಮೊತ್ತದ 1,962 ಯೋಜನೆ; ಮುಖ್ಯಮಂತ್ರಿ ಸಚಿವಾಲಯಕ್ಕೇ ಮಾಹಿತಿ ಒದಗಿಸದ 23 ಇಲಾಖೆಗಳು

ಬೆಂಗಳೂರು; ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಒಟ್ಟು 78,490.4 ಕೋಟಿ ರು ಮೊತ್ತದ  2,867...
Please Scan to make Your Contribution

Topics

ಗೆಜೆಟೆಡ್ ಪ್ರೊಬೇಷನರ್ಸ್‌ಗಳಿಗೆ ಅದೇಶ ಪತ್ರ ನೀಡಲು ಮುರುಘಾ, ಸಿದ್ದಗಂಗಾ ಮಠ ಶ್ರೀಗಳ ಮಧ್ಯ ಪ್ರವೇಶ; ಪತ್ರಗಳು ಬಹಿರಂಗ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಮಸೂದೆ...

54,059.8 ಕೋಟಿ ರು ಮೊತ್ತದ 1,962 ಯೋಜನೆ; ಮುಖ್ಯಮಂತ್ರಿ ಸಚಿವಾಲಯಕ್ಕೇ ಮಾಹಿತಿ ಒದಗಿಸದ 23 ಇಲಾಖೆಗಳು

ಬೆಂಗಳೂರು; ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಒಟ್ಟು 78,490.4 ಕೋಟಿ ರು ಮೊತ್ತದ  2,867...

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಚ್‌ಡಿಡಿ, ಎಚ್‌ಡಿಕೆ ಟಿಪ್ಪಣಿ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು...

Related Articles

Popular Categories

error: Content is protected !!