Thursday | October 29, 2026 |

ಪೆಟ್ರೋಲ್ ಬಂಕ್ ತಪಾಸಣೆ: ಇನ್‌ಸ್ಪೆಕ್ಟರ್ ಗಳಿಗೆ ಯಾವುದೇ ಅಧಿಕಾರವಿಲ್ಲ, ಸಚಿವ ರಿಜ್ವಾನ್ ಅರ್ಷದ್ ರನ್ನೂ ದಾರಿ ತಪ್ಪಿಸಿದ್ದಾರೆಯೇ ಉನ್ನತ ಅಧಿಕಾರಿಗಳು?

ಬೆಂಗಳೂರು; ರಾಜ್ಯದ ಪೆಟ್ರೋಲ್ ಬಂಕ್ ಗಳಲ್ಲಿ ತೈಲದ ಅಳತೆಯಲ್ಲಿ ಗ್ರಾಹಕರಿಗೆ ಭಾರೀ ಮೋಸವಾಗುತ್ತಿರುವುದನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಅದಕ್ಕಾಗಿ ಅನುಸರಿಸುತ್ತಿರುವ ಕಾರ್ಯವಿಧಾನದ ಬಗ್ಗೆ ಇಲಾಖೆಯಲ್ಲೇ ತೀವ್ರ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ.

ಸಚಿವರು ಇಲಾಖೆಯ ನಿರೀಕ್ಷಕರನ್ನು (ಇನ್ ಸ್ಪೆಕ್ಟರ್ ಗಳು) ಈ ಕಾರ್ಯಾಚರಣೆಯಲ್ಲಿ ಒಳಗೊಳ್ಳಿಸಿಕೊಳ್ಳದೆ, ಕೇವಲ ಉನ್ನತ ಅಧಿಕಾರಿಗಳ ಮೂಲಕ ಕಾರ್ಯಾಚರಣೆ ಮಾಡಲು ಹೊರಟಿರುವುದು ವಾಸ್ತವದಲ್ಲಿ ಅಸಾಧ್ಯ ಎನ್ನಲಾಗುತ್ತಿದೆ.

ರಾಜ್ಯದ ಪೆಟ್ರೋಲ್ ಬಂಕ್ ಗಳಲ್ಲಿ ತೈಲದ ಅಳತೆಯಲ್ಲಿ ಗ್ರಾಹಕರಿಗೆ ಭಾರೀ ಮೋಸವಾಗುತ್ತಿರುವುದು ತಪಾಸಣೆಯಿಂದ ದೃಢಪಟ್ಟಿದ್ದು, 101 ಬಂಕ್ ಗಳ ವಿರುದ್ಧ ಈಗಾಗಲೇ ಕಾನೂನಿನ ಪ್ರಕಾರ ಕೈಗೊಳ್ಳಲಾಗಿದೆ ಎಂದು ಸಚಿವ ರಿಜ್ವಾನ್ ಕೆಲದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದರು. ಅಲ್ಲದೇ, ಪೆಟ್ರೋಲ್ ಬಂಕ್ ಗಳ ಮೇಲೆ ಹಠಾತ್ ದಾಳಿ ನಡೆಸಿ ತಪಾಸಣೆ ತೀವ್ರಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಅವರು ಹೇಳಿದ್ದರು.

ಆದರೆ ಇದು ಎಷ್ಟರಮಟ್ಟಿಗೆ ಪ್ರಾಯೋಗಿಕವಾಗಿ ಸಾಧ್ಯ ಎಂಬ ಪ್ರಶ್ನೆ ಇಲಾಖೆಯಲ್ಲಿಯೇ ಕೇಳಿಬರುತ್ತಿದೆ. ಏಕೆಂದರೆ, ಈ ತಪಾಸಣಾ ಕಾರ್ಯಾಚರಣೆಯ ಅಧಿಕಾರದಿಂದ ಇನ್ಸ್‌ಪೆಕ್ಟರ್ ಗಳನ್ನು ಹೊರಗಿಟ್ಟು, ಅದಕ್ಕಿಂತ ಮೇಲಿನ ಅಸಿಸ್ಟೆಂಟ್ ಕಂಟ್ರೋಲರ್, ಡಿವಿಷನಲ್ ಕಂಟ್ರೋಲರ್, ಜಾಯಿಂಟ್ ಕಂಟ್ರೋಲರ್ ಹೀಗೆ ಉನ್ನತ ಅಧಿಕಾರಿಗಳಿಗೆ ಮಾತ್ರ ಈ ಅಧಿಕಾರಿಗಳಿಗೆ ನೀಡಲಾಗಿದೆ. ಬೆರಳಿಕೆಯಷ್ಟು ಸಂಖ್ಯೆಯಲ್ಲಿರುವ ಉನ್ನತ ಅಧಿಕಾರಿಗಳು ರಾಜ್ಯದಲ್ಲಿರುವ 5,946 ಪೆಟ್ರೋಲ್ ಬಂಕ್ ಗಳಿಗೆ ಖುದ್ದು ಭೇಟಿ ನೀಡಿ ತಪಾಸಣೆ ನಡೆಸುವುದು ಪ್ರಾಯೋಗಿಕವಾಗಿ ಸಾಧ್ಯವೇ ಎಂಬ ಪ್ರಶ್ನೆ ಕೇಳಿಬಂದಿದೆ.

ಉದಾಹರಣೆಗೆ, ತುಮಕೂರು ಜಿಲ್ಲೆಯಲ್ಲಿ ಸುಮಾರು 300 ಪೆಟ್ರೋಲ್ ಬಂಕ್ ಗಳಿವೆ. ಒಂದು ಬಂಕ್ ಗೆ ಭೇಟಿ ನೀಡಿ ತಪಾಸಣೆ ನಡೆಸಲು ಕನಿಷ್ಠ ಅರ್ಧ ದಿನ ಬೇಕಾಗುತ್ತದೆ. ಹೀಗಾದರೆ, 300 ಪೆಟ್ರೋಲ್ ಬಂಕ್ ಗಳ ತಪಾಸಣೆ ನಡೆಸಲು ಎಷ್ಟು ಸಮಯ ಹಿಡಿಯುತ್ತದೆ?- ಇದು ಇಲಾಖೆಯ ನಿರೀಕ್ಷಕರೇ ಮುಂದಿಡುವ ಪ್ರಶ್ನೆಯಾಗಿದೆ.

ಈ ಸಂಬಂಧ ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟವು ಸಚಿವ ರಿಜ್ವಾನ್ ಅರ್ಷದ್‌ ಅವರಿಗೆ ಪತ್ರವನ್ನೂ ಸಹ ಬರೆದಿದೆ. ಈ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ನಿಯಮದ ಪ್ರಕಾರ, ಇಲಾಖೆಯ ಇನ್ ಸ್ಪೆಕ್ಟರ್ ಗಳಿಗೆ ಪೆಟ್ರೋಲ್ ಬಂಕ್, ವೇ ಬ್ರಿಜ್ ಗಳ ತಪಾಸಣೆ ನಡೆಸುವ ಅಧಿಕಾರ ಇದೆ. ಅಳತೆ ಮಾಪಕಗಳನ್ನು ತಯಾರಿಸುವ ಕಂಪನಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುವ ಅಧಿಕಾರವೂ ಇದೆ. ಆದರೆ, ಇಲಾಖೆಯ ವಿಷಯದಲ್ಲಿ ಇದು ಕೇವಲ ಕಾಗದದ ಮೇಲಿನ ನಿಯಮವಷ್ಟೇ ಆಗಿದೆ. ಇಲ್ಲಿ, ಅಸಿಸ್ಟೆಂಟ್ ಕಂಟ್ರೋಲರ್ ಹಾಗೂ ನಂತರದ ಹಂತದ ಅಧಿಕಾರಿಗಳು ಈ ಅಧಿಕಾರವನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿದ್ದಾರೆ. ಕೇವಲ ಚಿಲ್ಲರೆ ಅಂಗಡಿ ಮುಂಗಟ್ಟುಗಳಿಗೆ (ರೀಟೈಲ್ ಶಾಪ್ಸ್) ಭೇಟಿ ನೀಡಿ ತಪಾಸಣೆ ನಡೆಸುವ ಅಧಿಕಾರವನ್ಷಷ್ಟೇ ನಿರೀಕ್ಷಕರಿಗೆ ನೀಡಿ, ಅವರುಗಳ ಕೈ ಕಟ್ಟಿ ಹಾಕಿದ್ದಾರೆ.

ಮಂಜೂರಾದ ಹುದ್ದೆಗಳ ಪ್ರಕಾರ, ಇಲಾಖೆಯಲ್ಲಿ ರಾಜ್ಯದಾದ್ಯಂತ ಇರಬೇಕಾದ ನಿರೀಕ್ಷಕರ ಸಂಖ್ಯೆ 107 ಆಗಿದೆ. ಈ ಪೈಕಿ, ಈಗ ಸುಮಾರು 45 ಇನ್ ಸ್ಪೆಕ್ಟರ್ ಗಳು ಇದ್ದು, ಉಳಿದ ಹುದ್ದೆಗಳು ಖಾಲಿ ಇವೆ. ಇನ್ನು ಅಸಿಸ್ಟೆಂಟ್ ಕಂಟ್ರೋಲರ್ ಜಿಲ್ಲೆಗೊಬ್ಬರಂತೆ ಇರುತ್ತಾರೆ. ಇನ್ ಸ್ಪೆಕ್ಟರ್ ಗಳು ತಪಾಸಣೆ ನಡೆಸಿ ನೀಡುವ ವರದಿಗಳನ್ನು ಉನ್ನತ ಹಂತದ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿದರೆ ಕಾರ್ಯಾಚರಣೆ ಪ್ರಕ್ರಿಯೆ ಕ್ರಮಬದ್ಧವಾಗಿರುತ್ತದೆ. ಅದರೆ, ಇಲಾಖೆಯಲ್ಲಿ ಈಗ ಉನ್ನತ ಹಂತದ ಅಧಿಕಾರಿಗಳೇ ತಪಾಸಣಾ ವರದಿ ನೀಡುತ್ತಿರುವುದರಿಂದ ಇನ್ ಸ್ಪೆಕ್ಟರ್ ಗಳಿಗೆ ಬೇರೆ ಇನ್ನೇನು ಕೆಲಸವಿರುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ.

 

 

ಆಗಸ್ಟ್ 3ರಂದು ನಡೆದ ಸಂಪುಟ ವಿಸ್ತರಣೆ ವೇಳೆ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಆಹಾರ, ನಾಗರಿಕ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ರಿಜ್ವಾನ್ ಅರ್ಷದ್ ಅವರು, ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಅಳತೆಯಲ್ಲಿ ಭಾರೀ ಮೋಸವಾಗುತ್ತಿರುವುದು ದೃಢಪಟ್ಟಿದೆ ಎಂದು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದರು.

ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 5,946 ಪೆಟ್ರೋಲ್ ಬಂಕ್ ಗಳ ಪೈಕಿ ಮೊದಲ ಹಂತದಲ್ಲಿ 805 ಬಂಕ್ ಗಳಲ್ಲಿ ತಪಾಸಣೆ ನಡೆಸಲಾಗಿದ್ದು, 768 ಬಂಕ್ ಗಳಲ್ಲಿ (ಶೇಕಡಾ 95ರಷ್ಟು) ತೈಲದ ಅಳತೆ ನಿಖರವಾಗಿಲ್ಲ (ಕಡಿಮೆ ಅಳತೆ). ಇದೇ ವೇಳೆ, ಪರಿಶೀಲನೆಗೆ ಒಳಪಟ್ಟ 3,071 ಪೆಟ್ರೋಲ್ ಪೂರೈಕೆ ಗನ್ ಗಳ ಪೈಕಿ 2,618 ಗನ್ ಗಳಲ್ಲಿ (ಶೇಕಡಾ 85ರಷ್ಟು) ಅಳತೆಯ ದೋಷಗಳು ಕಂಡುಬಂದಿವೆ. ನಿಯಮ 4 (12ಇ) ಪ್ರಕಾರ, ಇಂತಹ ವ್ಯತ್ಯಾಸ ಕಂಡುಬಂದಾಗ ದೂರು ನೀಡಬೇಕಾಗಿದ್ದರೂ ಯಾರೂ ಗಮನಹರಿಸಿಲ್ಲ ಎಂದೂ ಸಚಿವರು ಹೇಳಿದ್ದಾರೆ.

ಶೇಕಡಾ 95ರಷ್ಟು ಬಂಕ್ ಗಳಲ್ಲಿ ಅಳತೆಯಲ್ಲಿ ಮೋಸ, ಶೇಕಡಾ 85ರಷ್ಟು ಪೆಟ್ರೋಲ್ ಗನ್ ಗಳಲ್ಲಿ ಅಳತೆಯ ದೋಷ ಕಂಡುಬಂದಿದೆ ಎಂದರೆ ಇಷ್ಟು ದಿನ ಗ್ರಾಹಕರಿಗೆ ಅನ್ಯಾಯವಾಗಿದೆ ಎಂದೇ ಅರ್ಥವಲ್ಲವೇ? ಉನ್ನತ ಅಧಿಕಾರಿಗಳು ನಿರೀಕ್ಷಕರಿಗೂ ತಪಾಸಣೆ ಅಧಿಕಾರ ನೀಡದೆ, ತಾವೂ ಆ ಕಾರ್ಯವನ್ನು ಮಾಡದೆ ಇಲಾಖೆ ಕಾರ್ಯದಕ್ಷತೆ ಕಳೆದುಕೊಳ್ಳಲು ಕಾರಣರಾಗಿದ್ದಾರೆ ಎಂಬುದನ್ನು ಇದು ಸೂಚಿಸುವುದಿಲ್ಲವೇ?- ಎಂಬ ಪ್ರಶ್ನೆಗಳು ಈಗ ತಲೆದೋರಿವೆ.

ವಾಹನಗಳ ಮಾಲಿನ್ಯ ತಪಾಸಣೆ ನಡೆಸಲು ಖಾಸಗಿಯವರಿಗೆ ಅನುಮತಿ ನೀಡಿರುವ ರೀತಿಯಲ್ಲೇ ಪೆಟ್ರೋಲ್ ಬಂಕ್ ಗಳ ತಪಾಸಣೆಗೆ ಖಾಸಗಿಯವರಿಗೂ ಅವಕಾಶ ನೀಡಬಹುದು. ವಿದ್ಯಾರ್ಹತೆಯುಳ್ಳ ಪ್ರತಿಭಾವಂತರು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಗಮನದಲ್ಲಿರಿಸಿಕೊಂಡು ಖಾಸಗಿಯವರಿಗೆ ಲೈಸೆನ್ಸ್ ನೀಡಿದರೆ ಉದ್ಯೋಗಾವಕಾಶಗಳನ್ನೂ ಕಲ್ಪಿಸಿದಂತಾಗುತ್ತದೆ. ಇದರಿಂದ, ಹೆಚ್ಚಿನ ಸಂಖ್ಯೆಯಲ್ಲಿರುವ ಪೆಟ್ರೋಲ್ ಬಂಕ್ ಗಳನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸುವುದಕ್ಕೂ ಸಾಧ್ಯವಾಗುತ್ತದೆ.

ಕಾರ್ಯಭಾರ ಹಂಚಿಕೆಯಾಗುವುದರಿಂದ ಮೇಲ್ಮಟ್ಟದ ಅಧಿಕಾರಿಗಳಿಗೆ ಪರಿಶೀಲನೆ ಹಾಗೂ ಮೇಲ್ವಿಚಾರಣೆಗೆ ಗಮನ ನೀಡಲು ಸಮಯ ಸಿಗುತ್ತದೆ. ಇದೇ ವೇಳೆ, ಬಂಕ್ ನವರಿಗೆ ಮೇಲಿಂದ ಮೇಲೆ ಕ್ಯಾಲಿಬ್ರೇಷನ್ ಹೊರೆಯನ್ನು ತಪ್ಪಿಸುವ ಬಗ್ಗೆಯೂ ಚಿಂತನೆ ನಡೆಸಬೇಕಿದೆ ಎಂಬ ಅಭಿಪ್ರಾಯಗಳು ಕೂಡ ಕೇಳಿಬಂದಿವೆ.

ಈ ಸಂಬಂಧ ನಿರೀಕ್ಷಕರು ಸಚಿವ ರಿಜ್ವಾನ್ ಅರ್ಷದ್ ಅವರಿಗೆ ಮನವಿ ಪತ್ರವನ್ನೂ ಸಲ್ಲಿಸಿದ್ದು, ತಕ್ಷಣವೇ ಸೂಕ್ತ ಕ್ರಮ ವಹಿಸುವಂತೆ ಕೋರಿದ್ದಾರೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

Hot this week

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ...

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌)...

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...
Please Scan to make Your Contribution

Topics

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ...

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌)...

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

Related Articles

Popular Categories

error: Content is protected !!