Tuesday | October 27, 2026 |

ಜೆರಾಕ್ಸ್‌ ಮಷಿನ್‌ಗಾಗಿ ದುಂಬಾಲು; ದಿ ಫೈಲ್ ವರದಿ ಮುಂದಿರಿಸಿ ರಾಜ್ಯದ ಅಭಿವೃದ್ಧಿ ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಜೆಡಿಎಸ್‌

ಬೆಂಗಳೂರು; ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌) ಮಷಿನ್‌ ಇಲ್ಲದೇ ಒದ್ದಾಡುತ್ತಿದೆ ಎಂದು ದಿ ಫೈಲ್‌ ವರದಿ ಪ್ರಕಟಿಸುತ್ತಿದ್ದಂತೆ ಜಾತ್ಯತೀತ ಜನತಾದಳವು ಗ್ಯಾರಂಟಿ ಎಂಬ ಬಣ್ಣದ ಮಾತುಗಳನ್ನಾಡಿ ರಾಜ್ಯದ ಬೊಕ್ಕಸವನ್ನು ಸಂಪೂರ್ಣವಾಗಿ ಬರಿದು ಮಾಡಿರುವ ಈ ಎಟಿಎಂ ಸರ್ಕಾರಕ್ಕೆ ಆಡಳಿತ ನಡೆಸುವ ಯಾವುದೇ ನೈತಿಕತೆ ಉಳಿದಿಲ್ಲ. ಕನಿಷ್ಠ ಕಚೇರಿ ಉಪಕರಣಗಳನ್ನು ಒದಗಿಸಲಾಗದವರು ರಾಜ್ಯದ ಅಭಿವೃದ್ಧಿಯನ್ನು ಇನ್ನೇನು ಮಾಡುತ್ತಾರೆ ಎಂದು ಪ್ರಶ್ನಿಸಿದೆ. 

ದಿ ಫೈಲ್‌ ವರದಿಯನ್ನು ಎಕ್ಸ್‌ ಜಾಲತಾಣದಲ್ಲಿ ಹಂಚಿಕೊಂಡಿರುವ ಜೆಡಿಎಸ್‌, 46,306ಕೋಟಿ ರೂ. ಅನುದಾನ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್‌ ಸರ್ಕಾರದ ಅಸಲಿ ಬಣ್ಣ ಬಯಲಾಗಿದೆ ಎಂದು ಲೇವಡಿ ಮಾಡಿದೆ. 

ಜೆಡಿಎಸ್‌ ಟ್ವೀಟ್‌ನಲ್ಲೇನಿದೆ?

46,306ಕೋಟಿ ರೂ. ಅನುದಾನ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರದ ಅಸಲಿ ಬಣ್ಣ ಬಯಲಾಗಿದೆ! ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ ಕನಿಷ್ಠ ಒಂದು ಜೆರಾಕ್ಸ್ ಮಿಷನ್ ಕೂಡ ಇಲ್ಲದಂತಹ ದಿವಾಳಿ ಸ್ಥಿತಿಗೆ ಸರ್ಕಾರ ತಲುಪಿದೆ.  ಸಚಿವಾಲಯದಲ್ಲಿ ಹಳೆಯ ಪ್ರಿಂಟರ್ ಕೆಟ್ಟುಹೋಗಿದ್ದು, ದೈನಂದಿನ ಕಚೇರಿಯ ಕೆಲಸಗಳಿಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮುಂದೆ ಸರ್ಕಾರ ಹೊಸ ಪ್ರಿಂಟರ್‌ಗಾಗಿ ಕೈಯೊಡ್ಡಿ ನಿಂತಿದೆ. ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರೇ ಖುದ್ದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಜೆರಾಕ್ಸ್ ಯಂತ್ರ ಒದಗಿಸುವಂತೆ ದುಂಬಾಲು ಬಿದ್ದಿರುವುದು ಡಿ ಕೆ ಶಿವಕುಮಾರ್ ಸರ್ಕಾರದ  ಆರ್ಥಿಕ ದುಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಹೇಳಿದೆ. 

 

 

ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಕೆಲ ದಿನಗಳ‌ ಹಿಂದೆ ಹಣಕಾಸು ಇಲಾಖೆ ಪತ್ರ ಬರೆದಿದ್ದು ನೈಜ ಸ್ಥಿತಿ ತೆರೆದಿಟ್ಟಿತ್ತು. ಗ್ಯಾರಂಟಿ ಎಂಬ ಬಣ್ಣದ ಮಾತುಗಳನ್ನಾಡಿ ರಾಜ್ಯದ ಬೊಕ್ಕಸವನ್ನು ಸಂಪೂರ್ಣವಾಗಿ ಬರಿದು ಮಾಡಿರುವ ಈ ಎಟಿಎಂ ಸರ್ಕಾರಕ್ಕೆ ಆಡಳಿತ ನಡೆಸುವ ಯಾವುದೇ ನೈತಿಕತೆ ಉಳಿದಿಲ್ಲ. ಕನಿಷ್ಠ ಕಚೇರಿ ಉಪಕರಣಗಳನ್ನು ಒದಗಿಸಲಾಗದವರು ರಾಜ್ಯದ ಅಭಿವೃದ್ಧಿಯನ್ನು ಇನ್ನೇನು ಮಾಡುತ್ತಾರೆ ಎಂದು ಜೆಡಿಎಸ್‌ ಪ್ರಶ್ನಿಸಿದೆ. 

 

 

ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306 ಕೋಟಿ ರು ಅನುದಾನ ಹಂಚಿಕೆ ಮಾಡಿದೆ ಎಂದು ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯವು ಕನಿಷ್ಟ ಪ್ರಿಂಟರ್‍‌ (ಜೆರಾಕ್ಸ್‌) ಮಷಿನ್‌ ಇಲ್ಲದೇ ಒದ್ದಾಡುತ್ತಿದೆ ಎಂದು ದಿ ಫೈಲ್ ವರದಿ ಪ್ರಕಟಿಸಿತ್ತು.

 

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

 

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವಾಲಯದ ಶಾಖೆಯೊಂದಕ್ಕೆ ಪ್ರಿಂಟರ್ ಮತ್ತು ಸ್ಕ್ಯಾನರ್‍‌ ಕೂಡ ಲಭ್ಯವಿಲ್ಲದಂತಾಗಿತ್ತು. ಈ ಸಂಗತಿಯು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೂ ಪ್ರಿಂಟರ್‍‌ (ಜೆರಾಕ್ಸ್‌) ಮಿಷನ್‌ ಲಭ್ಯವಿಲ್ಲ ಎಂಬ ಸಂಗತಿಯು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು ನೀಡಿದಂತಾಗಿತ್ತು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಪ್ರಿಂಟರ್‍‌ (ಜೆರಾಕ್ಸ್‌) ಮಿಷನ್‌ಗಾಗಿ  ಕರ್ನಾಟಕ ಮಹಿರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಂದೆ ಕೈಯೊಡ್ಡಿ ನಿಂತಿದೆ. ವಿಶೇಷವೆಂದರೇ ಸಚಿವರ ಕಚೇರಿಯಲ್ಲಿಯೇ 1,50,000 ಪ್ರತಿಗಳಿಗೂ ಹೆಚ್ಚು ಪ್ರಿಂಟ್‌ ನಿರ್ವಹಿಸಿದ್ದ ಜೆರಾಕ್ಸ್‌ ಮಿಷನ್‌ನ್ನು ಇಲಾಖೆಯ ಸಚಿವಾಲಯಕ್ಕೆ ನೀಡಿತ್ತು. ಹೀಗಾಗಿ ಈ ಪ್ರಿಂಟರ್‍‌, ಇಲಾಖೆಯ ಸಚಿವಾಲಯದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಸುಸ್ಥಿತಿಯಲ್ಲಿರುವ ಜೆರಾಕ್ಸ್‌ ಮಿಷನ್‌ ಒದಗಿಸಬೇಕು ಎಂದು ನಿಗಮದ ಮುಂದೆ ಕೈ ಚಾಚಿದೆ.

ಈ ಸಂಬಂಧ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2026ರ ಅಕ್ಟೋಬರ್‍‌ 19ರಂದೇ ಪತ್ರ ಬರೆದಿತ್ತು.  ಈ ಪತ್ರದ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಸರ್ಕಾರದ ಕಾರ್ಯದರ್ಶಿ ಪತ್ರದಲ್ಲೇನಿತ್ತು?

ಪರಿಶಿಷ್ಟ ಪಂಗಡಳ ಕಲ್ಯಾಣ ಇಲಾಖೆಯ ಸಚಿವರ ಕಚೇರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಜೆರಾಕ್ಸ್‌ ಮಿಷನ್‌ನ್ನು ಕಚೇರಿಯ ಕರ್ತವ್ಯಕ್ಕೆ ನೀಡಿತ್ತು. ಸಚಿವರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರಿಂಟರ್‍‌ನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ ಜೆರಾಕ್ಸ್‌ ಪ್ರಿಂಟರ್‍‌ ಇಲ್ಲದ ಕಾರಣ, ಶಾಖೆಗೆ 2024-25ನೇ ಸಾಲಿನಲ್ಲಿ ತರಲಾಗಿತ್ತು. ಈ ಪ್ರಿಂಟರ್‍‌, ಸಚಿವರ ಕಚೇರಿಯಲ್ಲಿಯೇ 1,50,000 ಪ್ರತಿಗಳಿಗೂ ಹೆಚ್ಚು ಪ್ರಿಂಟ್‌ಗಳನ್ನು ನಿರ್ವಹಿಸಿತ್ತು ಎಂದು ಪತ್ರದಲ್ಲಿ ವಿವರಿಸಿತ್ತು.

 

 

 

ಇಲಾಖೆಯಲ್ಲಿ ಈ ಪ್ರಿಂಟರ್‍‌ ಸ್ವೀಕೃತವಾದ ನಂತರ 3,00,000 ಸಂಖ್ಯೆಯ ಪ್ರಿಂಟ್‌ಗಳನ್ನು ತೆಗೆದಿದೆ. ಹೀಗಾಗಿ ಈ  ಪ್ರಿಂಟರ್ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಯಂತ್ರವನ್ನು ದುರಸ್ತಿ ಮಾಡಿಸಿ ನವೀನವಾದ ಬಿಡಿ ಭಾಗಗಳನ್ನು ಅಳವಡಿಸಿದ್ದರೂ ಸಹ ಪ್ರಿಂಟರ್‍‌  ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ಹೀಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ದೈನಂದಿನ ಕೆಲಸಕ್ಕೆ ತೊಡಕಾಗಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್‌ ಅಧಿವೇಶನದ ಸಮಯದಲ್ಲಿ ಸೂಕ್ತ ಸಮಯಕ್ಕೆ  ದಿನದ ಕಾರ್ಯಕಲಾಪಗಳ ಪಟ್ಟಿಯ ಜೊತೆಗೆ ಗಮನಸೆಳೆಯುವ ಸೂಚನೆಗಳು, ನಿಯಮ 351, 330 ನಿಯಮ 73, 72 ಇನ್ನಿತರೆ ಕಾರ್ಯಕಲಾಪಗಳ ವಿಧಾನಸಭೆ, ವಿಧಾನ ಪರಿಷತ್‌ ಸಚಿವಾಲಯಕ್ಕೆ ಸಕಾಲದಲ್ಲಿ ಉತ್ತರಗಳನ್ನು ಕಳಿಸುವ ಹೊಣೆಗಾರಿಕೆ ಇದೆ. ಹಾಗೂ ಕ್ರೋಢಿಕೃತ ಉತ್ತರಗಳನ್ನು ಒದಗಿಸುವ ಪ್ರಕರಣಗಳಲ್ಲಿ ಜೆರಾಕ್ಸ್‌ ಮಿಷನ್‌ ಅವಶ್ಯಕವಾಗಿದೆ ಎಂದು ನಿಗಮದ ವ್ಯವಸ್ಥಾಪಕ  ನಿರ್ದೇಶಕರ ಗಮನ ಸೆಳೆದಿತ್ತು.

ಸರ್ಕಾರದ ಕಾರ್ಯದರ್ಶಿಯು ಈ ಪತ್ರ ಬರೆಯುವ ಮುನ್ನ  ಸಚಿವ ಟಿ ರಘುಮೂರ್ತಿ ಅವರೊಂದಿಗೆ ಚರ್ಚಿಸಿದ್ದರು.

 

 

 

‘ಪ್ರಸ್ತುತ ಶಾಖೆಯಲ್ಲಿ ದುರಸ್ತಿಯಲ್ಲಿರುವ  ಕ್ಯನಾನ್‌ ಡಿಎಕ್ಸ್‌ 2825ನ್ನು ನಿಗಮಕ್ಕೆ ಮರಳಿ ಹಿಂಪಡೆಯಬೇಕು. ಹೊಸದಾದ ಕ್ಯನಾನ್ ರನ್ನರ್‍‌ ಡಿಎಕ್ಸ್‌ 2925 ಜೆರಾಕ್ಸ್‌ ಮಿಷನ್‌ನ್ನು ಜರೂರಾಗಿ ಸಚಿವಾಲಯದ ಇಲಾಖೆಗೆ ಒದಗಿಸಬೇಕು,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಿತ್ತು.

ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ ಆರ್ಥಿಕ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ನಡುವೆಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವಾಲಯದ ಶಾಖೆಯೊಂದಕ್ಕೆ ಪ್ರಿಂಟರ್ ಮತ್ತು ಸ್ಕ್ಯಾನರ್‍‌ ಕೂಡ ಲಭ್ಯವಿಲ್ಲ ಎಂಬ ಸಂಗತಿ ಚರ್ಚೆಗೆ ಕಾರಣವಾಗಿತ್ತು.

Hot this week

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಅಕ್ರಮ ಆರೋಪ; ಅಭಿವೃದ್ದಿ ನಿಗಮಗಳಿಂದ ಬಾರದ ವರದಿ, ಲೋಕಾಯುಕ್ತರಿಗೆ ಬರೆದ ಪತ್ರ ಬಹಿರಂಗ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ   ಗಂಗಾ ಕಲ್ಯಾಣ ಯೋಜನೆಯಡಿ...

84.32 ಕೋಟಿ ರು ಮೊತ್ತಕ್ಕೆ ಸಲ್ಲಿಕೆಯಾಗದ ಎನ್‌ಡಿಸಿ ಬಿಲ್‌; ಸಿಎಜಿ ಬರೆದ ಪತ್ರಗಳಿಗೂ ಕಿಮ್ಮತ್ತಿಲ್ಲ, ಮೊತ್ತವೂ ಹೊಂದಾಣಿಕೆಯಾಗಿಲ್ಲ

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮ...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...
Please Scan to make Your Contribution

Topics

ಜೆರಾಕ್ಸ್‌ ಮಷಿನ್‌ಗಾಗಿ ಮಹರ್ಷಿ ವಾಲ್ಮೀಕಿ ನಿಗಮದ ಬಳಿ ಕೈಯೊಡ್ಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

ಬೆಂಗಳೂರು; ಪರಿಶಿಷ್ಟ  ಸಮುದಾಯದ ಕಲ್ಯಾಣಕ್ಕಾಗಿ 2023-24ನೇ ಆರ್ಥಿಕ ವರ್ಷದಿಂದ ಇಲ್ಲಿಯವರೆಗೆ 46,306...

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

Related Articles

Popular Categories

error: Content is protected !!