Sunday | October 25, 2026 |

84.32 ಕೋಟಿ ರು ಮೊತ್ತಕ್ಕೆ ಸಲ್ಲಿಕೆಯಾಗದ ಎನ್‌ಡಿಸಿ ಬಿಲ್‌; ಸಿಎಜಿ ಬರೆದ ಪತ್ರಗಳಿಗೂ ಕಿಮ್ಮತ್ತಿಲ್ಲ, ಮೊತ್ತವೂ ಹೊಂದಾಣಿಕೆಯಾಗಿಲ್ಲ

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮ ಮಂಡಳಿಗಳು, ಇಲಾಖೆಗಳು ಮಾಡಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಎನ್‌ಡಿಸಿ ಬಿಲ್‌ಗಳನ್ನು ರಾಜ್ಯ ಸರ್ಕಾರವು ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರವು ಇದುವರೆಗೆ ಒಟ್ಟಾರೆ ₹84,32,93,530/- ಮೊತ್ತವನ್ನು ಹಲವು ವರ್ಷಗಳಿಂದ ಹೊಂದಾಣಿಕೆ ಮಾಡಿಲ್ಲ.

ಈ ಸಂಬಂಧ ಪ್ರಧಾನ ಮಹಾಲೇಖಪಾಲರು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪತ್ರಗಳನ್ನು ಬರೆದಿದ್ದರೂ ಸಹ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. ಎನ್‌ಡಿಸಿ ಬಿಲ್‌ಗಳನ್ನು ಸಲ್ಲಿಸಬೇಕು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು 2026ರ ಅಕ್ಟೋಬರ್‍‌ 6ರಂದು ಪತ್ರ ಬರೆದು ಕೈತೊಳೆದುಕೊಂಡಿದೆ. ಉಳಿದ ಇಲಾಖೆಗಳಿಂದಲೂ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆಯ ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್‌ ಗೆ ಕೆಲವು ದಾಖಲೆಗಳು ಲಭ್ಯವಾಗಿವೆ.

ಸಿಎಜಿಯ ಪತ್ರದಲ್ಲೇನಿದೆ?

ರಾಜ್ಯ ಸರ್ಕಾರವು ಇದುವರೆಗೆ ಒಟ್ಟಾರೆ ₹84,32,93,530/- ಮೊತ್ತವು ಹಲವು ವರ್ಷಗಳಿಂದ ಹೊಂದಾಣಿಕೆಯಾಗದೆ ಬಾಕಿ ಉಳಿಸಿಕೊಂಡಿರುವ ಸಂಬಂಧಿಸಿದಂತೆ 2026ರ ಮೇ 29ರಂದು ಪತ್ರ ಬರೆದಿದೆ.

ಮಾರ್ಚ್ 2026ರ ವೇಳೆಗೆ, ಒಟ್ಟು 1,587 ಎ ಸಿ ಬಿಲ್‌ಗಳಿಗೆ ಸಂಬಂಧಿಸಿದಂತೆ ₹ 84,32,93,530/- ಮೊತ್ತವು ಹಲವು ವರ್ಷಗಳಿಂದ ಹೊಂದಾಣಿಕೆಯಾಗದೆ ಬಾಕಿ ಉಳಿದಿದೆ ವಿವರವಾದ ವೆಚ್ಚದ ಪ್ರಮಾಣಪತ್ರಗಳಿಲ್ಲದೆ ಸಲ್ಲಿಸಲಾಗುವ (NDC) ಬಿಲ್‌ಗಳನ್ನು ನಿಗದಿತ ಸಮಯಕ್ಕೆ ಸಲ್ಲಿಸಿಲ್ಲ. ಹೀಗಾಗಿ ಗಂಭೀರ ಸಮಸ್ಯೆ ಉಂಟಾಗಿದೆ ಎಂದು ಪತ್ರದಲ್ಲ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಪಿ ಸಿ ಜಾಫರ್ ಅವರ ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

ಈ ಕಚೇರಿಯಲ್ಲಿ ಎನ್‌ಡಿಸಿ ಬಿಲ್‌ಗಳು ಸಲ್ಲಿಕೆಯಾಗಿಲ್ಲ. ಈ ಕಾರಣದಿಂದಾಗಿ ಹಲವು ಎ ಸಿ ಬಿಲ್‌ಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ, ಗೃಹ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಬೇಕು ಎಂದು 2026ರ ಮಾರ್ಚ್‌ 11ರಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಆದರೆ 2026ರ ಮೇ 29ರವರೆಗೂ ಸರ್ಕಾರವು ಯಾವುದೇ ಉತ್ತರವನ್ನೂ ನೀಡಿಲ್ಲ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಮಾರ್ಚ್ 2026ರ ವೇಳೆಗೆ, ಒಟ್ಟು 1,587  ಬಿಲ್‌ಗಳಿಗೆ ಸಂಬಂಧಿಸಿದಂತೆ ₹ 84,32,93,530/- ಮೊತ್ತವು ಹಲವು ವರ್ಷಗಳಿಂದ ಹೊಂದಾಣಿಕೆಯಾಗದೆ ಬಾಕಿ ಉಳಿದಿದೆ ಎಂಬುದು ಈ ಕಚೇರಿಯ ಗಮನಕ್ಕೆ ಬಂದಿದೆ. ಈ ಎ ಸಿ ಬಿಲ್‌ಗಳಲ್ಲಿ ಕೆಲವು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಾಕಿ ಇವೆ,’ ಎಂದು ಸರ್ಕಾರದ ಗಮನಸೆಳೆದಿದೆ.

ಯಾವುದೇ ಹೆಚ್ಚಿನ ವಿಳಂಬವಿಲ್ಲದೆ ಎನ್‌ಡಿಸಿ ಬಿಲ್‌ಗಳನ್ನು ಈ ಕಚೇರಿಗೆ ಸಲ್ಲಿಸಬೇಕು. 1958ರ ಆಕಸ್ಮಿಕ ವೆಚ್ಚಗಳ ಕೈಪಿಡಿಯ (Manual of Contingent Expenditure, 1958) ನಿಯಮಗಳ ನಿಯಮ 17 ತಕ್ಷಣದ ಪಾವತಿಗೆ ಅಗತ್ಯವಿರುವ ಸಂದರ್ಭಗಳನ್ನು ಹೊರತುಪಡಿಸಿ, ಸರ್ಕಾರದ ಖಜಾನೆಯಿಂದ ಯಾವುದೇ ಹಣವನ್ನು ಹಿಂಪಡೆಯಬಾರದು ಎಂದು ಈ ನಿಯಮವು ಸ್ಪಷ್ಟಪಡಿಸುತ್ತದೆ.

ಡಿಸಿ ಬಿಲ್ ಕೈಪಿಡಿಯ ನಿಯಮ 36ರ ಪ್ರಕಾರ ಎ ಸಿ ಬಿಲ್‌ಗಳಿಗೆ ಸಂಬಂಧಿಸಿದ ಎನ್‌ಡಿಸಿ ಬಿಲ್‌ಗಳನ್ನು 30 ದಿನಗಳೊಳಗೆ ಸಲ್ಲಿಸಬೇಕು ಎಂದು ಈ ನಿಯಮದಲ್ಲಿ ಸ್ಪಷ್ಟಪಡಿಸಿದೆ. ನಿಯಮ 37(b)(3) ಪ್ರಕಾರ ಸಂಬಂಧಪಟ್ಟ ತಿಂಗಳ ನಂತರದ ತಿಂಗಳ 15ನೇ ತಾರೀಖಿನೊಳಗೆ ಎಲ್ಲಾ ಎನ್‌ಡಿಸಿ ಬಿಲ್‌ಗಳನ್ನು ಕಡ್ಡಾಯವಾಗಿ ಮಹಾಲೇಖಪಾಲರಿಗೆ ಸಲ್ಲಿಸಬೇಕು ಎಂದು ಹೇಳಿದೆ.

ನಿಯಮ 37(b)(4) ಪ್ರಕಾರ ನಿಗದಿತ ಅವಧಿಯೊಳಗೆ ಎನ್‌ಡಿಸಿ ಬಿಲ್‌ಗಳನ್ನು ಸಲ್ಲಿಸಲು ವಿಫಲವಾಗುವ ಕಚೇರಿಗಳಿಗೆ ಸಂಬಂಧಿಸಿದಂತೆ ಎ ಸಿ ಬಿಲ್‌ಗಳ ಮೂಲಕ ಮುಂದಿನ ಪಾವತಿಗಳನ್ನು ಖಜಾನೆಗಳು ಸ್ಥಗಿತಗೊಳಿಸಬೇಕು ಎಂದು ಹೇಳಿದೆ. ಹಣಕಾಸು ಇಲಾಖೆಯು 2018ರ ಡಿಸೆಂಬರ್‍‌ 31ರಂದು ಹೊರಡಿಸಿದ್ದ ಸುತ್ತೋಲೆ (ಸಂಖ್ಯೆ FD 02 TCE 2018) ಪ್ರಕಾರ ಬಾಕಿ ಬಿಲ್‌ಗಳನ್ನು ಸಲ್ಲಿಸದಿರುವ ಡಿಡಿಒಗಳ (DDO) ವೇತನದ ಬಿಲ್‌ಗಳನ್ನು ಕೆ2 (K2) ವ್ಯವಸ್ಥೆಯಲ್ಲಿ ತಡೆಹಿಡಿಯಬೇಕು. ಹಾಗೂ ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲಾ ಖಜಾನೆಗಳಿಗೆ ಸೂಚನೆಗಳನ್ನು ನೀಡಿದೆ.

ಬಾಕಿ ಉಳಿದಿರುವ ಎಲ್ಲಾ ಎನ್‌ಡಿಸಿ ಬಿಲ್‌ಗಳನ್ನು ಆದಷ್ಟು ಬೇಗ ಮಹಾಲೇಖಪಾಲರ ಕಚೇರಿಗೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕಕು. ನಿಯಮಗಳನ್ನು ಪಾಲಿಸದಿದ್ದಲ್ಲಿ, ಕೈಪಿಡಿಯ ನಿಯಮ 37(b)(4)ರಲ್ಲಿ ಉಲ್ಲೇಖಿಸಿರುವಂತೆ ಮುಂದಿನ ಎ ಸಿ ಬಿಲ್‌ಗಳ ಪಾವತಿಗಳನ್ನು ಸ್ಥಗಿತಗೊಳಿಸಬಹುದು.

 

 

‘ಪ್ರಮುಖ ಲೆಕ್ಕ ಶೀರ್ಷಿಕೆ 2015’ರ ಚುನಾವಣಾ ಇಲಾಖೆಗೆ ಸಂಬಂಧಿಸಿದಂತೆ, ಒಟ್ಟು ₹22,23,43,296/- ಮೊತ್ತದ 150 ಬಾಕಿ ಎನ್‌ಡಿಸಿ ಬಿಲ್‌ಗಳ ಪಟ್ಟಿಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಪ್ರಮುಖ ಲೆಕ್ಕ ಶೀರ್ಷಿಕೆಗಳಾದ (2055, 2204 ಮತ್ತು 2202ಗಳಿಗೆ) ಸಂಬಂಧಿಸಿದ ಪಟ್ಟಿಯನ್ನೂ ಇ-ಮೇಲ್ ಮೂಲಕ ಕಳಿಸಿರುವುದು ಗೊತ್ತಾಗಿದೆ.

ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಮತ್ತು ವಾಣಿಜ್ಯ ಕೈಗಾರಿಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2026ರ ಸೆ.21ರಂದು ಪತ್ರ ಬರೆದಿರುವುದು ತಿಳಿದು ಬಂದಿದೆ.

 

 

‘ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 1,587 ಎ ಸಿ ಬಿಲ್‌ಗಳ ಮೇಲೆ ಸೆಳೆಯಲಾದ ಮೊತ್ತ 84,32,93,530 ರು ಗಳಿಗೆ ಎನ್‌ ಡಿ ಸಿ ಬಿಲ್‌ಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಿಲ್ಲ. ಹೀಗಾಗಿ ಮಹಾಲೇಖಪಾಲರ ಕಚೇರಿಯಲ್ಲಿ ಹೊಂದಾಣಿಕೆಯಾಗದೇ ಬಾಕಿ ಉಳಿದಿದೆ. ಹೀಗಾಗಿ ಬಾಕಿ ಇರುವ ಎ ಸಿ ಬಿಲ್‌ಗಳಿಗೆ ಎನ್‌ಡಿಸಿ ಬಿಲ್‌ಗಳನ್ನು ಕೂಡಲೇ ಮಹಾಲೇಖಪಾಲರ ಕಚೇರಿಗೆ ಸಲ್ಲಿಸಬೇಕು,’ ಎಂದು ಸೂಚಿಸಿರುವುವುದು ಗೊತ್ತಾಗಿದೆ.

ಅದೇ ರೀತಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಸಹ ಎ ಸಿ ಬಿಲ್‌ಗಳನ್ನು ಸಲ್ಲಿಸಬೇಕು ಎಂದು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿರುವುದು ಗೊತ್ತಾಗಿದೆ.

 

 

ಇಲಾಖೆಯ ನಿರ್ದೇಶಕ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕರಿಗೆ 2026ರ ಅಕ್ಟೋಬರ್‍‌ 6ರಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.

Hot this week

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ...
Please Scan to make Your Contribution

Topics

ಸಿಎಂ ಆರ್ಥಿಕ ಸಲಹೆಗಾರರ ಆಪ್ತ ಶಾಖೆಗೆ ಖಾಸಗಿ ವ್ಯಕ್ತಿಗಳ ನೇಮಕ; ಆರ್ಥಿಕ ಇಲಾಖೆ ಅಭಿಪ್ರಾಯವನ್ನೇ ಬದಿಗೊತ್ತಿದ್ದೇಕೆ?

ಬೆಂಗಳೂರು; ಆಪ್ತ ಶಾಖೆಗೆ ಪ್ರತ್ಯೇಕವಾಗಿ ಸಿಬ್ಬಂದಿ ಪ್ರಮಾಣ ನಿಗದಿಯಾಗದೇ ಇರುವುದು ಮತ್ತು...

ಎಲೆಕ್ಟ್ರಿಕ್‌ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗೆ 10 ತಿಂಗಳಾದರೂ ಸಿಗದ ಭೂಮಿ; ವಿಳಂಬದಿಂದ ಕೈ ತಪ್ಪಿ ಹೋಗಲಿದೆಯೇ ಕೇಂದ್ರ?

ಬೆಂಗಳೂರು; ಮಂಡ್ಯ ಜಿಲ್ಲೆಯಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ...

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

Related Articles

Popular Categories

error: Content is protected !!