Sunday | November 29, 2026 |

ಮಹಿಳೆಯೊಂದಿಗೆ ಅನುಚಿತ ವರ್ತನೆ, ಅವಾಚ್ಯ, ಅಸಂಸದೀಯ ಪದ ಬಳಕೆ ಆರೋಪ; ಸೀಮಂತ್‌ ಕುಮಾರ್ ಸಿಂಗ್ ವಿರುದ್ಧದ ದೂರರ್ಜಿಗೆ ಡಿಜಿಐಜಿಪಿ ವರದಿ ಸಲ್ಲಿಕೆ

ಬೆಂಗಳೂರು; ದೂರು ನೀಡಲು ಬಂದಿದ್ದ ಮಹಿಳೆಯೊಬ್ಬರಿಗೆ ಅವಾಚ್ಯ, ಅನುಚಿತ ವರ್ತನೆ ಮತ್ತು ಅಸಂಸದೀಯ ಪದಗಳನ್ನಾಡಿದ್ದಾರೆ ಎಂದು ಸಲ್ಲಿಕೆಯಾಗಿರುವ ದೂರರ್ಜಿಯಲ್ಲಿ ಮಾಡಿರುವ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ  ಸೀಮಂತ್‌ ಕುಮಾರ್ ಸಿಂಗ್‌ ಅವರು ಡಿಜಿಐಜಿಪಿ ಅವರಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.

ಬೆಂಗಳೂರಿನ ದೇವನಹಳ್ಳಿಯ ಸಮಂತ ಎಂಬುವರು ಸೀಮಾಂತ್ ಕುಮಾರ್‍‌ ಸಿಂಗ್‌ ಅವರ ವಿರುದ್ಧ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಸೀಮಂತ್‌ ಕುಮಾರ್ ಸಿಂಗ್‌ ಅವರು 2026ರ ಆಗಸ್ಟ್‌ 21ರಂದೇ ಡಿಜಿಐಜಿಪಿ ಅವರಿಗೆ ಪತ್ರ ಬರೆದಿದ್ದಾರೆ. ಸಮಂತ ಎಂಬುವರು ದೂರರ್ಜಿಯಲ್ಲಿ ಮಾಡಿರುವ ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿರುವುದು ಪತ್ರದಿಂದ ಗೊತ್ತಾಗಿದೆ.

ಇದೇ ಪತ್ರವನ್ನಾಧರಿಸಿ ಡಿಜಿಐಜಿಪಿ ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ 2026ರ ಸೆ.5ರಂದು ವರದಿ ಸಲ್ಲಿಸಿದ್ದಾರೆ.

ಸೀಮಂತ್‌ ಕುಮಾರ್ ಸಿಂಗ್‌ ಮತ್ತು ಡಿಜಿಐಜಿಪಿ ಅವರು ಬರೆದಿರುವ ಪತ್ರಗಳು ದಿ ಫೈಲ್‌ ಗೆ ಲಭ್ಯವಾಗಿವೆ.

ಡಿಜಿಐಜಿಪಿಗೆ ಸಿಂಗ್‌ ನೀಡಿದ ಉತ್ತರದಲ್ಲೇನಿದೆ?

ಬೆಂಗಳೂರಿನ ದೇವನಹಳ್ಳಿಯ ಸಾಲಾರ್‌ಪುರಿಯಾ ಸತ್ವ ಅಪಾರ್ಟ್‌ಮೆಂಟ್, (T-10, 805ರಲ್ಲಿ) ವಾಸವಾಗಿರುವ ಸಮಂತಾ ಎಂಬುರು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದು, ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಮಾನ್ಯ ರಾಷ್ಟ್ರಪತಿಗಳ ಮುಂದೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ 2026ರ ಮಾರ್ಚ್‌ 5 ರ ಸಂಜೆ ಸುಮಾರು 5:00 ಗಂಟೆಯಿಂದ 6:00 ಗಂಟೆಯವರೆಗೆ ಸಮಂತಾ ಅವರು ನನ್ನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಾನು ಅವರೊಂದಿಗೆ ಅಸಭ್ಯವಾಗಿ ಮಾತನಾಡಿದ್ದೇನೆ ಎಂದು ಆರೋಪಿಸಲಾಗಿದೆ.

ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಜವಾಬ್ದಾರಿಯುತ ಹುದ್ದೆಯನ್ನು ಹೊಂದಿದ್ದೇನೆ. ಸಾರ್ವಜನಿಕರೊಂದಿಗೆ, ವಿಶೇಷವಾಗಿ ಮಹಿಳೆಯರೊಂದಿಗೆ ಗೌರವಯುತವಾಗಿ ವರ್ತಿಸುವುದು ಹಾಗೂ ಅವರ ಅಹವಾಲುಗಳು ಮತ್ತು ಸಮಸ್ಯೆಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನೊಳಗೆ ಸೂಕ್ತ ಪರಿಹಾರಗಳನ್ನು ಒದಗಿಸುವುದು ನನ್ನ ಪ್ರಮುಖ ಕರ್ತವ್ಯವಾಗಿದೆ.

 

 

2026ರ ಮಾರ್ಚ್ 5ರ ಸಂಜೆ ಸುಮಾರು 5:00 ಗಂಟೆಯಿಂದ 6:00 ಗಂಟೆಯವರೆಗೆ ಸಮಂತಾ ಎಂಬ ಮಹಿಳೆಯೊಬ್ಬರು ನನ್ನ ಕಚೇರಿಗೆ ಬಂದು ನನ್ನನ್ನು ಭೇಟಿಯಾಗಿದ್ದರು. ನಾನು ಅವರೊಂದಿಗೆ ಸೌಜನ್ಯಯುತವಾಗಿ ಮಾತನಾಡಿ, ಕ್ರಮಗಳನ್ನು ಕೈಗೊಂಡಿದ್ದೇನೆ. ಕಾನೂನಿನ ಚೌಕಟ್ಟಿನೊಳಗೆ ಅವರ ಅಹವಾಲನ್ನು ಪರಿಹರಿಸುವ ಉದ್ದೇಶದಿಂದ ನಾನು ಮಾತನಾಡಿದೆ.

‘ನಾನು ಅವರೊಂದಿಗೆ ಯಾವುದೇ ರೀತಿಯ ಅವಾಚ್ಯ ಅಥವಾ ಅನುಚಿತ ರೀತಿಯಲ್ಲಿ ಮಾತನಾಡಿಲ್ಲ. ಆದಾಗ್ಯೂ, ಸದರಿ ಮಹಿಳೆಯು ಉದ್ರಿಕ್ತ ಮನಸ್ಥಿತಿಯಲ್ಲಿದ್ದು, ಕಚೇರಿಯಲ್ಲಿ ಜೋರಾಗಿ ಕೂಗಲು ಪ್ರಾರಂಭಿಸಿದರು ಮತ್ತು ನನ್ನ ಕಚೇರಿ ಕೆಲಸಕ್ಕೆ ಅಡಚಣೆಯಾಗುವ ರೀತಿಯಲ್ಲಿ ವರ್ತಿಸಿದರು. ಆದರೂ ಸಹ, ನಾನು ಅವರೊಂದಿಗೆ ಸೌಜನ್ಯದಿಂದ ಮಾತನಾಡಿ, ಅವರ ಅಹವಾಲನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ, ನಾನು ಅವರಿಗೆ ತಿಳಿಸಿದ ವಿಷಯವನ್ನು ಅವರು ಕೇಳದೆ ಕಚೇರಿಯಿಂದ ಹೊರಟುಹೋದರು,’ ಎಂದು ಘಟನೆಯನ್ನು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಆ ಸಮಯದಲ್ಲಿ ಸರವಣನ್ ಬಿ., ಎಎಚ್‌ಸಿ, ಶ್ರೀ ಯತಿರಾಜ್ ಭಟ್, ಎಎಚ್‌ಸಿ ಹಾಗೂ ವುಮೆನ್ ಹೋಮ್ ಗಾರ್ಡ್ ಸಿಬ್ಬಂದಿಗಳಾದ ಶಶಿಕಲಾ ಮತ್ತು ಶ್ರೀಮತಿ ನಂದಿನಿ ಅವರು ನನ್ನ ಕಚೇರಿ ಕೊಠಡಿಯಲ್ಲಿ ಉಪಸ್ಥಿತರಿದ್ದರು. ಇದಲ್ಲದೆ, ಅರ್ಜಿದಾರರಾದ ಸಮಂತಾ ಅವರು ತಮ್ಮ ಅರ್ಜಿಯಲ್ಲಿ, ಅಧಿಕಾರಿಗಳು ತಮ್ಮೊಂದಿಗೆ “leave it” (ಇದನ್ನು ಬಿಟ್ಟುಬಿಡಿ) ಎಂದು ಹೇಳಿದ್ದರು ಹಾಗೂ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರು, ನಾನು ಒತ್ತಡದ ಕಾರಣದಿಂದ ಇಂತಹ ಪದಗಳನ್ನು ಬಳಸಿರಬಹುದು ಎಂದು ತಿಳಿಸಿ, ನನ್ನ ಪರವಾಗಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿದ್ದಾರೆ. ದೂರಿನಲ್ಲಿ ಮಾಡಿರುವ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

ನನ್ನ ಸಂಪೂರ್ಣ ಸೇವಾವಧಿಯಲ್ಲಿ ನಾನು ಯಾವುದೇ ಸಾರ್ವಜನಿಕರೊಂದಿಗೆ ಎಂದಿಗೂ ಅಸಭ್ಯವಾಗಿ ಅಥವಾ ಅನುಚಿತವಾಗಿ ವರ್ತಿಸಿಲ್ಲ. ನನ್ನ ಕಚೇರಿಗೆ ಭೇಟಿ ನೀಡುವ ಪ್ರತಿಯೊಬ್ಬ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ನನ್ನ ಜವಾಬ್ದಾರಿ ಹಾಗೂ ಪ್ರಮುಖ ಕರ್ತವ್ಯವಾಗಿದೆ. ಅದರಂತೆ, ನಾನು ನನ್ನ ಜವಾಬ್ದಾರಿಯುತ ಹುದ್ದೆಯ ಕರ್ತವ್ಯಗಳನ್ನು ಯಾವಾಗಲೂ ಸಮರ್ಪಕವಾಗಿ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.

 

 

ಸಮಂತಾ ಎಂಬ ಮಹಿಳೆಯು ನನ್ನ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರ ವಿರುದ್ಧ ನಾನು ಎಂದಿಗೂ ಯಾವುದೇ ಅವಹೇಳನಕಾರಿ, ಅವಾಚ್ಯ ಅಥವಾ ಸಂಸದೀಯವಲ್ಲದ ಪದಗಳನ್ನು ಬಳಸಿಲ್ಲ ಎಂದು ಸೀಮಂತ್‌ ಕುಮಾರ್‍‌ ಸಿಂಗ್‌ ಅವರು ಸ್ಪಷ್ಟಪಡಿಸಿದ್ದಾರಲ್ಲದೇ ಈ ದೂರರ್ಜಿಯಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ದೂರು ಅರ್ಜಿಯನ್ನು ದಯವಿಟ್ಟು ಮುಕ್ತಾಯಗೊಳಿಸಿ/ವಿಲೇವಾರಿ ಮಾಡಬೇಕು ಎಂದು ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

ಇದೇ ಪತ್ರವನ್ನಾಧರಿಸಿ ಡಿಜಿಐಜಿಪಿ ಅವರೂ 2026ರ ಸೆ.5ರಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ.

ಡಿಜಿಐಜಿಪಿ ವರದಿಯಲ್ಲೇನಿದೆ?

ಸಮಂತ ಎಂಬುವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ವಿರುದ್ಧ ದೂರು ಸಲ್ಲಿಸಿದ್ದರು. ಈ ದೂರರ್ಜಿಯಲ್ಲಿ ಮಾಡಿರುವ ಆರೋಪಗಳ ಕುರಿತು ನಿಯಮಾನುಸಾರ ಪರಿಶೀಲಿಸಿ ವರದಿ ಕಳಿಸಲು ಸೂಚಿಸಲಾಗಿತ್ತು. ಇದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು 2026ರ ಆಗಸ್ಟ್‌ 21ರಂದು ವರದಿ ಸಲ್ಲಿಸಿದ್ದಾರೆ ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ಅವಧಿಯಲ್ಲಿ ಸೀಮಂತ್‌ ಕುಮಾರ್ ಸಿಂಗ್ ಅವರು  ನೀಡಿದ್ದ   ವರದಿಯ ಸಾರಾಂಶದಲ್ಲಿ

‘2026ರ ಮಾರ್ಚ್‌ 5ರಂದು ಸಂಜೆ 5ರಿಂದ 6ರ ಸುಮಾರಿಗೆ ಸಮಂತಾ ಎಂಬ ಮಹಿಳೆ ನನ್ನ ಕಚೇರಿಗೆ ಬಂದು ಸಂಪರ್ಕಿಸಿದಾಗ ಅವರೊಂದಿಗೆ ಸೌಜನ್ಯದೊಂದಿಗೆ ಮಾತನಾಡಿ ಕಾನೂನಿನ ಚೌಕಟ್ಟಿನೊಳಗೆ ಅವರ ದೂರನ್ನು ಪರಿಹರಿಸಿರುತ್ತೇನೆ. ಆದರೂ ಆ ಮಹಿಳೆ ಉದ್ರೇಕಗೊಂಡ ಮಾನಸಿಕ ಸ್ಥಿತಿಯಲ್ಲಿ ಕಚೇರಿಯಲ್ಲಿ ಜೋರಾಗಿ ಕೂಗಲು ಪ್ರಾರಂಭಿಸಿದರು. ಮತ್ತು ನನ್ನಕಚೇರಿ ಕೆಲಸಕ್ಕೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿದರು. ಆದರೂ ನಾನು ಅವರೊಂದಿಗೆ ಸೌಜನ್ಯದೊಂದಿಗೆ ಮಾತನಾಡಿ ಅವರ ದೂರನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನಾನು ಅವರಿಗೆ ಹೇಳಿದ್ದನ್ನು ಕೇಳಲಿಲ್ಲ. ಮತ್ತು ಕಚೇರಿಯಿಂದ ಹೊರಟುಹೋದರು. ಈ ದೂರಿನಲ್ಲಿ ಮಾಡಲಾದ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ,’ ಎಂದು ಹೇಳಿರುವುದನ್ನು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

 

 

ಅಲ್ಲದೇ ತಾನು ಜವಾಬ್ದಾರಿಯುತ ಹುದ್ದೆಯನ್ನು ಹೊಂದಿದ್ದು ಕಚೇರಿಗೆ ಭೇಟಿ ನೀಡುವ ಪ್ರತಿಯೊಬ್ಬ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಹಾಗೂ ವಿಶೇಷವಾಗಿ ಮಹಿಳೆಯರೊಂದಿಗೆ ಗೌರವಯುತವಾಗಿ ಸಂವಹನ ನಡೆಸಿದ್ದೇನೆ. ಮತ್ತು ಅವರ ಕುಂದುಕೊರತೆಗಳನ್ನು ಆಲಿಸುವುದು ಮತ್ತು ಕಾನೂನಿನ ಚೌಕಟ್ಟಿನೊಳಗೆ ಸೂಕ್ತ ಪರಿಹಾರಗಳನ್ನು ಒದಗಿಸುವುದು ನನ್ನ ಪ್ರಾಥಮಿಕ ಕರ್ತವ್ಯವಾಗಿದೆ ಎಂದೂ ಸೀಮಂತ್‌ ಕುಮಾರ್ ಸಿಂಗ್‌ ಅವರು ಹೇಳಿದ್ದಾರೆ ಎಂಬ ಸಂಗತಿಯನ್ನು ಡಿಜಿಐಜಿಪಿ ಅವರು ಸರ್ಕಾರದ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

 

‘ನನ್ನ ಸೇವಾವಧಿಯ ಉದ್ದಕ್ಕೂ ನಾನು ಯಾವುದೇ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ಅಥವಾ ಅನುಚಿತವಾಗಿ ವರ್ತಿಸಿಲ್ಲ. ನಾನು ಯಾವಾಗಲೂ ನನ್ನ ಜವಾಬ್ದಾರಿಯುತ ಹುದ್ದೆಯ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿಯೇ ನಿರ್ವಹಿಸಿದ್ದೇನೆ. ಹೀಗಾಗಿ ಈ ದೂರರ್ಜಿಗಳನ್ನು ಮುಕ್ತಾಯಗೊಳಿಸಬೇಕು,’ ಎಂದು ಕೋರಿದ್ದಾರೆ ಎಂಬುದನ್ನು ಡಿಜಿಐಜಿಪಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ತಿಳಿದು ಬಂದಿದೆ.

 

ಅಧಿಕಾರ ದುರುಪಯೋಗ, ಜೀವ ಬೆದರಿಕೆ, ನಿಯಮ ಉಲ್ಲಂಘನೆ, ಸುಲಿಗೆ, ಒಳಸಂಚು, ಅಕ್ರಮ ಸಂಪಾದನೆ, ಅಕ್ರಮ ಡೇಟಾ ವರ್ಗಾವಣೆ; 30 ಐಪಿಎಸ್‌ ಅಧಿಕಾರಿಗಳ ವಿರುದ್ಧದ ದೂರರ್ಜಿಗಳ ಪಟ್ಟಿ ಬಿಡುಗಡೆ

 

ಅಧಿಕಾರ ದುರುಪಯೋಗ ಸೇರಿದಂತೆ ಇನ್ನಿತರೆ ಆರೋಪ, ಆಪಾದನೆಗಳಿಗೆ ಗುರಿಯಾಗಿರುವ ಐಪಿಎಸ್‌ ಅಧಿಕಾರಿಗಳ ವಿರುದ್ಧದ ಪಟ್ಟಿಯನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸದನಕ್ಕೆ ಒದಗಿಸಿದ್ದರು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಮತಾಂತರ ನಿಷೇಧ, ಜಾನುವಾರು ಹತ್ಯೆ ಪ್ರತಿಬಂಧಕ, ಮುಸ್ಲೀಂರಿಗೆ ಮೀಸಲಾತಿ ವರ್ಗೀಕರಣ, ಒಳ ಮೀಸಲಾತಿ; ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪ ಸಮಿತಿಯಿಂದ ಪರಿಶೀಲನೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ...

ಟಿಪ್ಪಿಂಗ್ ಶುಲ್ಕ ಹಗರಣಕ್ಕೆ ತೇಪೆ; 4 ಪ್ಯಾಕೇಜ್‌ ಬದಲಿಗೆ 2 ಪ್ಯಾಕೇಜ್‌, 30 ವರ್ಷದ ಬದಲಿಗೆ 25 ವರ್ಷಗಳ ರಿಯಾಯಿತಿ, 26,682 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ

ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ...

ಮೂರನೇ ವ್ಯಕ್ತಿ ಮುಂದಿರಿಸಿ 35 ಕೋಟಿ ಮೊತ್ತದ ಹೂಡಿಕೆ ಯೋಜನೆಗೆ ಸಿದ್ಧತೆ; ಅಕ್ರಮ ಆಸ್ತಿಯನ್ನೂ ಕಾನೂನುಬದ್ಧಗೊಳಿಸಲು ಮುಂದಾಗಿದ್ದ ಸಾಹುಕಾರ್

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ...
Please Scan to make Your Contribution

Topics

ಟಿಪ್ಪಿಂಗ್ ಶುಲ್ಕ ಹಗರಣಕ್ಕೆ ತೇಪೆ; 4 ಪ್ಯಾಕೇಜ್‌ ಬದಲಿಗೆ 2 ಪ್ಯಾಕೇಜ್‌, 30 ವರ್ಷದ ಬದಲಿಗೆ 25 ವರ್ಷಗಳ ರಿಯಾಯಿತಿ, 26,682 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ

ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ...

ಮೂರನೇ ವ್ಯಕ್ತಿ ಮುಂದಿರಿಸಿ 35 ಕೋಟಿ ಮೊತ್ತದ ಹೂಡಿಕೆ ಯೋಜನೆಗೆ ಸಿದ್ಧತೆ; ಅಕ್ರಮ ಆಸ್ತಿಯನ್ನೂ ಕಾನೂನುಬದ್ಧಗೊಳಿಸಲು ಮುಂದಾಗಿದ್ದ ಸಾಹುಕಾರ್

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ...

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

Related Articles

Popular Categories

error: Content is protected !!