Thursday | September 10, 2026 |

ದಿ ಫೈಲ್‌ ಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ; ಪ್ರಕರಣ ದಾಖಲಿಸಲು ದೂರುದಾರರೇ ನ್ಯಾಯಾಲಯದಿಂದ ಅನುಮತಿ ತರಲಿ, ಬೆದರಿಕೆ ಒಡ್ಡಿದವನ ವಿರುದ್ಧ ಎಫ್‌ಐಆರ್ ದಾಖಲಿಸದ ಪೊಲೀಸರಿಂದ ಎನ್‌ಸಿಆರ್‍‌

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಗೊಂಡಿದ್ದ ವರದಿ ಉಲ್ಲೇಖಿಸಿ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್‌ ಕರೆ ಹಾಗೂ ವಾಟ್ಸಾಪ್‌  ಮೂಲಕ ದಿ ಫೈಲ್ ಸಂಪಾದಕ ಜಿ ಮಹಂತೇಶ್‌ ಅವರಿಗೆ  ಜೀವ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣದಲ್ಲಿ  ಆರೋಪಿತನ ವಿರುದ್ಧ  ಪೊಲೀಸರು  ಯಾವುದೇ ಎಫ್‌ಐಆರ್‍‌ ದಾಖಲಿಸಿಲ್ಲ. ಅಲ್ಲದೇ ಪ್ರಕರಣ ದಾಖಲಿಸಲು ನ್ಯಾಯಾಲಯದಿಂದಲೇ ಅನುಮತಿ ಪಡೆದು ತರಬೇಕು ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ.

ನ್ಯೂಸ್‌ ವೆಬ್‌ಸೈಟಿನಲ್ಲಿ ಪ್ರಕಟಿಸಿದ ವರದಿಗಳಿಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್‌ ಕರೆ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಜಿ  ಮಹಂತೇಶ್ ಅವರು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಇಂದು ಬೆಳಿಗ್ಗೆ  ದೂರು ನೀಡಿದ್ದರು.

ಸೆ.8 ಮತ್ತು 9ರಂದು ಪ್ರಕಟಿಸಿದ್ದ ವರದಿಗಳನ್ನು ತಮ್ಮ ಹೆಸರಿನಲ್ಲಿರುವ ‘Mahanthesh Bhadravathi’ ಹಾಗೂ ‘The-File’ ಫೇಸ್‌ಬುಕ್ ಖಾತೆಗಳಲ್ಲಿ ಪೋಸ್ಟ್ ಮಾಡಿರುವುದಾಗಿ ತಿಳಿಸಿರುವ ಅವರು, ಈ ವರದಿಗಳಿಗೆ ಸಂಬಂಧಿಸಿ ವ್ಯಕ್ತಿಯೋರ್ವ 9916706273 ಸಂಖ್ಯೆಯಿಂದ ಮೊಬೈಲ್ ಹಾಗೂ ವಾಟ್ಸ್‌ಆ್ಯಪ್‌ ಕರೆ ಮಾಡಿ, ವರದಿಗಳ ಬಗ್ಗೆ ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ವರದಿಗಳನ್ನು ತೆಗೆದುಹಾಕದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು  ದೂರಿನಲ್ಲಿ ಆರೋಪಿಸಿದ್ದರು.

ತಮ್ಮ ಫೇಸ್‌ಬುಕ್ ಖಾತೆಗಳಲ್ಲಿ ಪ್ರಕಟಿಸಿದ್ದ ಪೋಸ್ಟ್‌ಗಳಿಗೂ ಅವಾಚ್ಯ ಶಬ್ದಗಳಿಂದ ಕಮೆಂಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ರಕ್ಷಿಸುವಂತೆ ಹಾಗೂ ಬೆದರಿಕೆ ಹಾಕಿದ ವ್ಯಕ್ತಿಯನ್ನು ಪತ್ತೆಹಚ್ಚಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಮನವಿ ಮಾಡಿದ್ದರು.

 

 

 

 

 

ಈ ದೂರನ್ನು  ಸ್ವೀಕರಿಸಿದ್ದ ನಂದಿನಿ ಲೇ ಔಟ್‌ ಪೊಲೀಸರು, ನ್ಯಾಯಾಲಯದ ಅನುಮತಿ ಪಡೆದಲ್ಲಿ ಮಾತ್ರ ದೂರು ದಾಖಲಿಸಿ ತನಿಖೆ ಮುಂದುವರೆಸಲಾಗುವುದು ಎಂದು ಹಿಂಬರಹದಲ್ಲಿ ವಿವರಿಸಿದ್ದಾರೆ.

 

 

ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ?

ಈ ಪ್ರಕರಣದ ಕುರಿತು ಪ್ರತಿಪಕ್ಷ ನಾಯಕ ಆರ್‍‌ ಅಶೋಕ್‌ ಅವರು  ‘ಪತ್ರಕರ್ತನಿಗೆ ಜೀವ ಬೆದರಿಕೆ – FIR ದಾಖಲಿಸಲು ನಿರಾಕರಣೆ! ಪ್ರಿಯಾಂಕ್ ಖರ್ಗೆ ಅವರ ಗೃಹ ಇಲಾಖೆ ಯಾರನ್ನು ರಕ್ಷಿಸುತ್ತಿದೆ,’ ಎಂದು ಪ್ರಶ್ನಿಸಿದ್ದಾರೆ. 

 

 

ಭಾಷಣದ ಮೌಲ್ಯಗಳು ಎಲ್ಲಿ ಅಡಗಿ ಕುಳಿತುಕೊಂಡಿವೆ?

ಗೃಹ ಸಚಿವ  ಅವರೇ, ನೀವು ಗೃಹ ಸಚಿವರಾಗಿರೋದು ಜನಸಾಮಾನ್ಯರಿಗೆ ರಕ್ಷಣೆ ಕೊಡಲೋ ಅಥವಾ ನಿಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗಳನ್ನು ಕಾಯಲು ಪೋಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುವುದದಕ್ಕೊ? ಮೈಕು ಸಿಕ್ಕರೆ ಸಾಕು ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು “ಮೊಹಬ್ಬತ್ ಕಿ ದುಕಾನ್” ಬಗ್ಗೆ ಉದ್ದುದ್ದ ಭಾಷಣ ಮಾಡುವ ತಾವು, ಸತ್ಯವನ್ನು ವರದಿ ಮಾಡಿದ ಪತ್ರಕರ್ತನಿಗೆ ಬೆದರಿಕೆ ಹಾಕಿರುವಾಗ ನಿಮ್ಮ ಈ ಭಾಷಣದ ಮೌಲ್ಯಗಳು ಎಲ್ಲಿ ಅಡಗಿ ಕುಳಿತುಕೊಂಡಿವೆ ಎಂದು ಪ್ರಶ್ನಿಸಿದ್ದಾರೆ. 

ಕೈ ತೊಳೆದುಕೊಂಡಿದ್ದೇಕೆ ಪೊಲೀಸರು?

ಸ್ವತಂತ್ರ ಮಾಧ್ಯಮ ಸಂಸ್ಥೆ The File ನ ಪ್ರಧಾನ ಸಂಪಾದಕರಾದ ಜಿ. ಮಹಾಂತೇಶ್ ಅವರು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಂಬಂಧಿಸಿದ ಅಕ್ರಮಗಳ ಕುರಿತು ತನಿಖಾ ವರದಿ ಪ್ರಕಟಿಸಿದ ತಕ್ಷಣವೇ (ಸೆಪ್ಟೆಂಬರ್ 8 ಮತ್ತು 9), ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸಿ, “ಮನೆ ಬಾಗಿಲಿಗೆ ಬಂದು ಹೊಡೆಯುತ್ತೇನೆ” ಬೆದರಿಕೆ ಒಡ್ಡಲಾಗಿದೆ. ಆದರೆ ನಿಮ್ಮ ಪೋಲಿಸರು ಏನು ಮಾಡಿದರು, ಪ್ರಿಯಾಂಕ್ ಖರ್ಗೆ ಅವರೇ? ದೂರು ನೀಡಲು ಹೋದ ಪತ್ರಕರ್ತನ ದೂರು ಸ್ವೀಕರಿಸಿ, ರಕ್ಷಣೆ ಕೊಟ್ಟು, ತನಿಖೆ ನಡೆಸುವ ಬದಲು, ಎಫ್‌ಐಆರ್  ದಾಖಲಿಸಲು ನೇರವಾಗಿ ನಿರಾಕರಿಸಿದ್ದಾರೆ. NCR No. 556/2026 ನೀಡಿ, “ನ್ಯಾಯಾಲಯದಿಂದ ಅನುಮತಿ ತನ್ನಿ” ಎಂದು ಕಳಿಸಿ ತಮ್ಮ ಕೈತೊಳೆದುಕೊಂಡಿದ್ದಾರೆ, ಅಂದರೆ ಪರೋಕ್ಷವಾಗಿ ಬೆದರಿಕೆ ಒಡ್ಡಿದವರ ರಕ್ಷಣೆಗೆ ನಿಂತಿದ್ದಾರೆ.ಇದೇನಾ ನೀವು ಗೌರವಿಸುವ ಸಂವಿಧಾನ ಎಂದೂ ತರಾಟೆಗೆ ತೆಗೆದುಕೊಂಡಿದ್ದಾರೆ. 

 

 

ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೂಂಡಾಗಿರಿಯಿಂದ ಅಡಗಿಸಲು ಯತ್ನಿಸುತ್ತಿದ್ದರೂ ಗೃಹ ಇಲಾಖೆ ಯಾಕೆ ಮೌನ ವಹಿಸಿದೆ. ಇದೇನಾ ನಿಮ್ಮ ಪ್ರಜಾಪ್ರಭುತ್ವ? ಗಂಭೀರ ಜೀವ ಬೆದರಿಕೆಯನ್ನು “ಅಸಂಜ್ಞೆಯ ಅಪರಾಧ” (NCR) ಎಂದು ಪರಿಗಣಿಸಿ, ಬೆದರಿಕೆ ಹಾಕಿದ ಗೂಂಡಾಗಳಿಗೆ ಪೋಲೀಸ್ ರಕ್ಷಣೆ ನೀಡಲಾಗುತ್ತಿದೆ. ಇದೇನಾ ನೀವು ಕರ್ನಾಟಕದಲ್ಲಿ ತೆರೆದಿರುವ ಅವರ ‘ಮೊಹಬ್ಬತ್ ಕಿ ದುಕಾನ್’ ಎಂದು ಸರ್ಕಾರವನ್ನು ಕುಟುಕಿದ್ದಾರೆ. 

 

 

‘ಸತ್ಯ ವರದಿ ಮಾಡುವ ಪತ್ರಕರ್ತರಿಗೆ ಬೆದರಿಕೆ. ದೂರು ಕೊಡಲು ಹೋದರೆ, ರಕ್ಷಣೆ ಕೋರಿದರೆ ಪೋಲೀಸರ ಅಸಹಕಾರ ಮತ್ತು ಅಧಿಕಾರ ದುರ್ಬಳಕೆ! ಪ್ರಿಯಾಂಕ್ ಖರ್ಗೆ ಅವರೇ, ಪತ್ರಕರ್ತರ ಮೇಲೆ ದೌರ್ಜನ್ಯ ಮಾಡುವವರನ್ನು ರಕ್ಷಿಸುವುದನ್ನು ಬಿಟ್ಟು: ತಕ್ಷಣವೇ ಬೆದರಿಕೆ ಹಾಕಿದವರ ವಿರುದ್ಧ FIR ದಾಖಲಿಸಿ. ಪತ್ರಕರ್ತ ಜಿ. ಮಹಾಂತೇಶ್ ಅವರಿಗೆ ತಕ್ಷಣವೇ ಸೂಕ್ತ ಪೋಲೀಸ್ ಭದ್ರತೆ ಒದಗಿಸಿ. ಜೀವ ಬೆದರಿಕೆ ದೂರಿನ ಮೇಲೆ ಕ್ರಮ ಕೈಗೊಳ್ಳದೆ ಜಾರಿಕೊಂಡ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ. ಕರ್ನಾಟಕದ ಜನತೆ ನೋಡುತ್ತಿದ್ದಾರೆ, ನಿಮ್ಮ ಪೋಲೀಸ್ ಇಲಾಖೆ ಇರುವುದು ಪ್ರಾಮಾಣಿಕ ಪತ್ರಕರ್ತನ ರಕ್ಷಣೆಗೆಯೋ ಅಥವಾ ಹೆದರಿಸಿ, ಬೆದರಿಸಿ ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿರುವವರ ರಕ್ಷಣೆಗೋ, ಜನರಿಗೆ ಗೊತ್ತಾಗಲಿ,’ ಎಂದು ಸವಾಲು ಹಾಕಿದ್ದಾರೆ. 

Hot this week

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...
Please Scan to make Your Contribution

Topics

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...

ಲೀಡ್‌ ಮೆಂಬರ್‍‌ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್‌ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ...

Related Articles

Popular Categories

error: Content is protected !!