Wednesday | August 26, 2026 |

ಟೆಂಡರ್ ಇಲ್ಲದೆಯೇ 3.11 ಕೋಟಿ ನೇರ ಹೂಡಿಕೆ, ಮುಂಗಡ ಹಣ ಹೊಂದಾಣಿಕೆಯಲ್ಲೂ ವಿಳಂಬ, ಲಕ್ಷಾಂತರ ರು ನಷ್ಟ; ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಅಕ್ರಮ!

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಯಾವುದೇ ಟೆಂಡರ್‍‌ ಕರೆಯದೇ ನೇರವಾಗಿ 3.11 ಕೋಟಿಯಷ್ಟು ಹಣವನ್ನು ಹೂಡಿಕೆ ಮಾಡಿರುವ ಪ್ರಕರಣವನ್ನು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಹೊರಗೆಡವಿದೆ.

2020ರಿಂದ 2024ನೇ ಸಾಲಿನವರೆಗೆ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯು ಬಿಡುಗಡೆ ಮಾಡಿರುವ ವರದಿಯು ವಿಶ್ವವಿದ್ಯಾಲಯದ ಹಣಕಾಸಿನ ಆಡಳಿತದಲ್ಲಿನ ಗಂಭೀರ ಲೋಪಗಳನ್ನು ಪತ್ತೆ ಹಚ್ಚಿದೆ. ಲೆಕ್ಕ ಪರಿಶೋಧಕರು ನೀಡಿರುವ ವರದಿಯತ್ತ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇನ್ನಷ್ಟೇ ಪರಿಶೀಲಿಸಬೇಕಿದೆ.

ಈ ವರದಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

 

 

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು 2022-23ರಲ್ಲಿ ನಿರ್ದಿಷ್ಟ ಮೊತ್ತವನ್ನು  ಒಂದೇ ಬಾರಿಗೆ ಹೂಡಿಕೆ ಮಾಡುವ 2  ಅವಧಿ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (FD) ಹೊಂದಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೊಂದಿದ್ದ   ಒಂದು ಠೇವಣಿಯಲ್ಲಿ 50,00,000 ರು ಮತ್ತು ಇನ್ನೊಂದು ಠೇವಣಿಯಲ್ಲಿ 50,00,000 ಸೇರಿ ಒಟ್ಟು 1 ಕೋಟಿ ರು ಹೊಂದಿತ್ತು. ಇದಕ್ಕೆ ಕ್ರಮವಾಗಿ ಶೇ. 5.45ರಷ್ಟು ಬಡ್ಡಿ ದರವಿತ್ತು. ಇದನ್ನು ಒಂದು ವರ್ಷದ ಅವಧಿಗೆ ಇಟ್ಟಿತ್ತು.

ಅದೇ ರೀತಿ 2023-24ನೇ ಸಾಲಿನಲ್ಲಿಯೂ ಯೂನಿಯನ್ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಒಟ್ಟು 4 ಅವಧಿ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (FD) ಹೊಂದಿತ್ತು. 52,50,573 ರು., 53.27,466 ರು., 52,50,573 ರು., 53,27,447 ರು ಗಳನ್ನಿರಿಸಿತ್ತು. ಇದಕ್ಕೆ ಕ್ರಮವಾಗಿ ಶೇ. 6.3, ಶೇ.4.4ರಷ್ಟು ಬಡ್ಡಿ ದರವಿತ್ತು. ಇದನ್ನೂ ಸಹ ಒಂದು ವರ್ಷದ ಅವಧಿಗೆ ಇಟ್ಟಿತ್ತು.  ಆದರೆ ಇದನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಇಟ್ಟಿರಲಿಲ್ಲ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿದೆ.

 

 

ಒಂದು ಕೋಟಿಗೂ ಮೀರಿದ ಮೊತ್ತವನ್ನು ಅವಧಿ ಠೇವಣಿ ಅಥವಾ ಫಿಕ್ಸೆಡ್‌ ಡಿಫಾಸಿಟ್‌ ಇಡಬೇಕಾದರೇ ಇ ಪ್ರೋಕ್ಯೂರ್‍‌ಮೆಂಟ್‌ ಅಥವಾ ಟೆಂಡರ್‍‌ ಕರೆಯಬೇಕು ಎಂದು 2018ರಲ್ಲಿ ಸರ್ಕಾರವು ಆದೇಶ ಹೊರಡಿಸಿತ್ತು. ಆದರೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಟೆಂಡರ್‍‌ ಕರೆಯದೇ 2022-23 ಮತ್ತು 2023-24ರಲ್ಲಿ  3.11 ಕೋಟಿ ಮೊತ್ತದ ಠೇವಣಿಗಳನ್ನು ನೇರವಾಗಿ ಹೂಡಿಕೆ ಮಾಡಿತ್ತು ಎಂದು ಲೆಕ್ಕ ಪರಿಶೋಧಕರು ಪರಿಶೀಲನೆ ವೇಳೆ ಬಯಲು ಮಾಡಿದ್ದಾರೆ.

2022-23ನೇ ಸಾಲಿನಲ್ಲಿ ಒಂದೇ ಅವಧಿಯಲ್ಲಿ ನಿಶ್ಚಿತ ಠೇವಣಿ ಮಾಡಿದ್ದರೂ ಸಹ ಬೇರೆ ಬೇರೆ ಬಡ್ಡಿ ದರಗಳಲ್ಲಿ ಠೇವಣಿ ಮಾಡಿರುವುದು ಕಂಡು ಬಂದಿದೆ. ಶೇ. 6.3 ಮತ್ತು ಶೇ. 4.4 ಬಡ್ಡಿ ದರದಲ್ಲಿ ಹೂಡಿಕೆ ಮಾಡಿದೆ. ಇದು ಶೇ. 1.9ರಷ್ಟು ವ್ಯತ್ಯಾಸವಿದೆ. ಇದರಿಂದ ವಿಶ್ವವಿದ್ಯಾಲಯಕ್ಕೆ  2,62,184 ರು.ಗಳಷ್ಟು ನಷ್ಟವಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿದೆ. ಇದಕ್ಕೆ ವಿಶ್ವವಿದ್ಯಾಲಯವು ಲೆಕ್ಕ ಪರಿಶೋಧಕರಿಗೆ ಉತ್ತರ ನೀಡಿದೆ.

 

 

ವಿ ವಿ ನೀಡಿರುವ ಉತ್ತರದಲ್ಲೇನಿದೆ?

ಸಾಮಾನ್ಯವಾಗಿ ವಿಶ್ವವಿದ್ಯಾಲಯದ ಅನುದಾನವು ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಕೈಗೊಳ್ಳಲು ಇದೆ. ವಿಶ್ವವಿದ್ಯಾಲಯವು ವಿಶೇಷವಾಗಿ ಯಾವುದೇ ರೀತಿಯ ಮುದ್ದತ್‌ ಠೇವಣಿಗಳಲ್ಲಿ ಹೂಡಿಕೆ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅನುದಾನವು ನಿಗದಿತ ಅವಧಿಯಲ್ಲಿ ಖರ್ಚಾಗದ ಸಂದರ್ಭದಲ್ಲಿ ಮದ್ದತ್‌ ಠೇವಣಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅಲ್ಲದೇ ಮುದ್ದತ್‌ ಠೇವಣಿಯಲ್ಲಿ ಹೂಡಿಕೆ ತಿಳಿಸಿರುವ ಲೋಪಗಳು ಆಗದಂತೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಅನುಪಾಲನೆ ವರದಿಯಲ್ಲಿ ವಿವರಿಸಿದೆ.

ವಿಶ್ವವಿದ್ಯಾಲಯವು ನೀಡಿರುವ ಈ ಉತ್ತರವನ್ನು ಲೆಕ್ಕ ಪರಿಶೋಧಕರು ಒಪ್ಪಿಲ್ಲ. ‘ ಈ ಉತ್ತರವು ಸಮಂಜಸವಿಲ್ಲದ ಪ್ರಯುಕ್ತ ಕಂಡಿಕೆಯನ್ನು ಮುಂದುವರೆಸಿದೆ. 2022-23 ಮತ್ತು 2023-24ನೇ ಸಾಲಿನಲ್ಲಿ ಮುದ್ದತ್ ಠೇವಣಿ ಮಾಡಲಾದ ಮೊತ್ತ ಒಟ್ಟು 3.11 ಕೋಟಿಯಷ್ಟು ರುಪಾಯಿಗಳನ್ನು ಆಕ್ಷೇಪಣೆಯಲ್ಲಿಡಲಾಇದೆ. ಹಾಗೂ ವ್ಯತ್ಯಾಸದ ಮೊತ್ತವಾದ 2.62 ಲಕ್ಷ ರು ಗಳನ್ನ ವಸೂಲಾತಿಯಲ್ಲಿಡಲಾಗಿದೆ,’ ಎಂದು ಹೇಳಿದೆ.

 

 

ಮುಂಗಡ ಮೊತ್ತವನ್ನೂ ವಿಳಂಬವಾಗಿ ಹೊಂದಾಣಿಕೆ

ಇದಷ್ಟೇ ಅಲ್ಲ , ವಿಶ್ವವಿದ್ಯಾಲಯವು ಮುಂಗಡ ಮೊತ್ತವನ್ನೂ ವಿಳಂಬವಾಗಿ ಹೊಂದಾಣಿಕೆ ಮಾಡಿಕೊಂಡಿದೆ. 2022-23ನೇ ಸಾಲಿನಲ್ಲಿ ಯರ್‍ರಿಸ್ವಾಮಿ ಎಂಬುವರಿಗೆ ಎನ್‌ ಇ ಪಿ 2020ರ ಕಾರ್ಯಕ್ರಮಕ್ಕೆ  1,00,000 ರು .ಗಳನ್ನು ಮುಂಗಡವಾಗಿ  ನೀಡಿತ್ತು. ಅದೇ ರೀತಿ ಕುಲಪತಿಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ಇದೇ ಯರ್‍ರಿಸ್ವಾಮಿ ಅವರಿಗೆ 2,00,000 ರು ಗಳನ್ನು ಮುಂಗಡವಾಗಿ ನೀಡಿತ್ತು. ಹಾಗೆಯೇ ಇದೇ ಯರ್‍ರಿಸ್ವಾಮಿ ಅವರಿಗೆ ಸ್ನಾತಕ ಪದವಿ ಪರೀಕ್ಷೇಯೇತರ ಮೌಲ್ಯಮಾಪನ ಸಿದ್ಧತೆಗಾಗಿ 1,00,000 ರು ಗಳನ್ನು ಮುಂಗಡವಾಗಿ ನೀಡಿತ್ತು.

ಅದೇ ರೀತಿ ಫತೇಪುರ ಅವರಿಗೆ ಎಲ್‌ಐಸಿಯ ವೆಚ್ಚಗಳಿಗಾಗಿ 2.00 ಲಕ್ಷ, ಸ್ನಾತಕ ಪರೀಕ್ಷೆಗಳ ಪೂರ್ವ ಸಿದ್ಧತೆಗಾಗಿ ಯರ್‍ರಿಸ್ವಾಮಿ ಅವರಿಗೆ 1 ಲಕ್ಷ, ಮಹರ್ಷಿ ವಾಲ್ಮೀಕಿ ಜಯಂತೋತ್ಸವಕ್ಕೆ ಯರ್‍ರಿಸ್ವಾಮಿ ಅವರಿಗೆ 1 ಲಕ್ಷ, ಕರ್ನಾಟಕ ರಾಜ್ಯೋತ್ಸವಕ್ಕೆ ಜಿ ಎಸ್ ಬಿರಾದಾರ ಅವರಿಗೆ 50,000 ರು ಸೇರಿ ಒಟ್ಟಾರೆ 8.50 ಲಕ್ಷ ರು ಗಳನ್ನು ಮುಂಗಡವಾಗಿ ನೀಡಿತ್ತು. ಆದರೆ ಈ ಮುಂಗಡ ಹಣವನ್ನು ವಿಳಂಬವಾಗಿ ಹೊಂದಾಣಿಕೆ ಮಾಡಿದೆ.

 

 

ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇಧ 243 ರ ಪ್ರಕಾರ ಎಲ್ಲಾ ಮುಂಗಡಗಳು ಮತ್ತು ಅವುಗಳನ್ನು ಪಡೆಯುವ ಸರ್ಕಾರಿ ನೌಕರರಿಂದ ಪ್ರತಿಯೊಂದು ಸಂದರ್ಭಕ್ಕೂ ಅನ್ವಯವಾಗುವ ನಿಯಮಗಳಿಗೆ ಅನುಸಾರವಾಗಿ ತೀರಿಸಬೇಕು. ಆದೇಶದಲ್ಲಿ ಯಾವ ದಿನಾಂಕದೊಳಗಾಗಿ ಅದು ತೀರಿಸಲ್ಪಡಬೇಕು ಎಂಬುದನ್ನು ಗೊತ್ತುಪಡಿಸದೇ ಇರುವ ಸಂದರ್ಭದಲ್ಲಿ ಪ್ರತಿಯೊಂದು ಮುಂಗಡವು ಅದನ್ನು ತೆಗೆದ ತರುವಾಯದಲ್ಲಿ ಬರುವ ತಿಂಗಳ ಕೊನೆಯಲ್ಲಿ ತೀರಿಸಬೇಕು ಎಂದು ಹೇಳಿದೆ.

ಅದೇ ರೀತಿ ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇದ 238ರ(ಸಿ) ಪ್ರಕಾರ ಸರ್ಕಾರಿ ನೌಕರನಿಗೆ ಮಂಜೂರು ಮಾಡಿದ ಬಡ್ಡಿ ಸಹಿತವಾದ ಮುಂಗಡದ  ಮೇಲೆ ಆಗಿದ್ದಾಂಗೆ ಸರ್ಕಾರದಿಂದ ಗೊತ್ತು ಮಾಡಬಹುದಾದಂತಹ ದರಗಳಲ್ಲಿ ಸರಳ ಬಡ್ಡಿ ವಿಧಿಸಬೇಕು. ಅಂಗತಹ ಬಡ್ಡಿಯ ಮುಂಗಡವನ್ನು ಪಡೆದ ದಿನಾಂಕದಿಂದ ಮತ್ತು ಪ್ರತಿ ತಿಂಗಳಿನ ಕಡೆಯ ದಿನಾಂಕದಂದು ಬಾಕಿ ಇರುವ ಹಣದ ಮೇಲೆ ಲೆಕ್ಕ ಹಾಕಬೇಕು ಎಂದು ಹೇಳಿದೆ.

ಆದರೆ ಈ ಪ್ರಕರಣಗಳಲ್ಲಿ ನೀಡಿದ್ದ ಮುಂಗಡ ಹಣವು ವಿಳಂಬವಾಗಿ ಹೊಂದಾಣಿಕೆ ಆಗಿರುವ ಕಾರಣ ಕರ್ನಾಟಕ ಆರ್ಥಿಕ ಸಂಹಿತೆ ಉಲ್ಲಂಘನೆಯಾಗಿದೆ. ನಿಗದಿತ ಅವಧಿಗಿಂತಲೂ ವಿಳಂಬವಾಗಿ ಹೊಂದಾಣಿಕೆಯಾದ ಮುಂಗಡಗಳ ಮೊತ್ತಕ್ಕೆ ವಿಳಂಬದ ದಿನಗಳಿಗೆ ಕರ್ನಾಟಕ ಆರ್ಥಿಕ ಸಂಹಿತೆ  1958ರ ಅನುಚ್ಛೇಧ 238 (ಸಿ) ಅನ್ವಯ ಶೇ. 11ರಂತೆ ಬಡ್ಡಿ ಲೆಕ್ಕಚಾರ ಮಾಡಲಾಗಿದೆ. ಈ ಬಡ್ಡಿ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲು ಮಾಡಿ ವಿಶ್ವವಿದ್ಯಾಲಯಕ್ಕೆ ಭರಿಸಬೇಕು ಎಂದು ಲೆಕ್ಕ ಪರಿಶೋಧಕರು ಸೂಚಿಸಿರುವುದು ಗೊತ್ತಾಗಿದೆ.

ಮುಂಗಡವನ್ನು ವಿಳಂಬವಾಗಿ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ವಿಶ್ವವಿದ್ಯಾಲಯವು ತನ್ನ ಸಮಜಾಯಿಷಿ ನೀಡಿದೆ.

ವಿ ವಿ ನೀಡಿರುವ ಸಮಜಾಯಿಷಿಯಲ್ಲೇನಿದೆ?

ವಿಶ್ವವಿದ್ಯಾಲಯದ ತುರ್ತು ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ಮುಂಗಡ ಹಣ ನೀಡಿದೆ. ವಿಶ್ವವಿದ್ಯಾಲಯದಲ್ಲಿ ಖಾಯಂ ಸಿಬ್ಬಂದಿಗಳ ಕೊರತೆಯಿಂದ ಕೆಲಸದ ಒತ್ತಡದಲ್ಲಿ ಮುಂಗಡ ಹಣದ ಲೆಕ್ಕ ಹೊಂದಾಣಿಕೆ ಮಾಡುವುದರಲ್ಲಿ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕೆಎಫ್‌ಸಿ 238 ಮತ್ತು 243 ಅನ್ವಯ ಮುಂಗಡಗಳನ್ನು ಪಡೆದ ಒಂದು ತಿಂಗಳ ಒಳಗಾಗಿ ಹೊಂದಾಣಿಕೆ ಮಾಡಲಾಗುವುದು ಎಂದು ಅನುಪಾಲನೆ ಸಲ್ಲಿಸಿದ್ದರು. ಆದರೆ ಈ ಸಮಜಾಯಿಷಿಯನ್ನು ಲೆಕ್ಕ ಪರಿಶೋಧಕರು ಒಪ್ಪಿಲ್ಲ.

 

 

‘ವಿವಿಧ ಉದ್ದೇಶಗಳಿಗೆ ನೀಡಿರುವ ಮುಂಗಡ ಹಣವು ವಿಳಂಬವಾಗಿ ಹೊಂದಾಣಿಕೆ ಆಗಿರುವುದರಿಂದ ಹಾಗೂ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇಧ 243ರ ಉಲ್ಲಂಘನೆಯಾಗಿದೆ. ಹೀಗಾಗಿ ಈ ಕಂಡಿಕೆಯನ್ನು ಮುಂದುವರೆಸಿದೆ. ವಿಳಂಬವಾಗಿ ಹೊಂದಾಣಿಕೆಯಾದ ಮುಂಗಡದ ಮೊತ್ತ 8.50 ಲಕ್ಷ ರು ಗಳಿಗೆ ವಿಳಂಬದ ದಿನಗಳಿಗೆ ಶೇ.11ರಷ್ಟು ಬಡ್ಡಿ ಮೊತ್ತವಾದ 97,433 ರು.ಗಳನ್ನು ಸಂಬಂಧಪಟ್ಟವರಿಂದ ವಸೂಲು ಮಾಡಬೇಕು. ಹಾಗೂ ವಿಳಂಬವಾಗಿ ಹೊಂದಾಣಿಕೆಯಾದ ಮುಂಗಡದ ಮೊತ್ತ 8.50 ರು.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ,’ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

Hot this week

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...
Please Scan to make Your Contribution

Topics

ವಾಲ್ಮೀಕಿ ವಿವಿಯಲ್ಲಿ ಮತ್ತೊಂದು ಲೋಪ; ಹಣ ಪಾವತಿಯಲ್ಲಿ ಸರ್ಕಾರದ ಆದೇಶಗಳ ಉಲ್ಲಂಘನೆ, 51.21 ಕೋಟಿ ಮೊತ್ತದ ವಹಿವಾಟು ಪಾರದರ್ಶಕವಾಗಿವೆಯೇ?

ಬೆಂಗಳೂರು; ರಾಯಚೂರಿನಲ್ಲಿರುವ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು ಹಣ ಪಾವತಿ ಸಂದರ್ಭಗಳಲ್ಲಿ ಸರ್ಕಾರದ...

ಮಹರ್ಷಿ ವಾಲ್ಮೀಕಿ ವಿ.ವಿ.ಯಲ್ಲಿ 38.98 ಕೋಟಿ ರು ಗೆ ಆಕ್ಷೇಪಣೆ; ವಾರ್ಷಿಕ ಲೆಕ್ಕಪತ್ರಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಒದಗಿಸಿಲ್ಲವೇಕೆ?

ಬೆಂಗಳೂರು;  ರಾಯಚೂರಿನಲ್ಲಿರುವ  ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವು  ಟೆಂಡರ್ ಕರೆಯದೇ ನೇರವಾಗಿ ಏಜೆನ್ಸಿ...

ರಾಷ್ಟ್ರೋತ್ಥಾನ, ಜನಸೇವಾ ವಿಶ್ವಸ್ಥ, ಜನಸೇವಾ ಟ್ರಸ್ಟ್‌ಗೆ 121 ಎಕರೆ ಜಮೀನು ಮಂಜೂರು; ಸದನಕ್ಕೆ ಪಟ್ಟಿ ಒದಗಿಸಿದ ಸರ್ಕಾರ

ಬೆಂಗಳೂರು; ಕಳೆದ 16 ವರ್ಷಗಳಲ್ಲಿ  ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ...

ಸಿಎಂ ಮಾಧ್ಯಮ ಕಾರ್ಯದರ್ಶಿಗಳಿಗೆ ಮಾಸಿಕ 3 ಲಕ್ಷ ರು ವೇತನ; ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು, ಅಧಿಕಾರಿವರ್ಗದಲ್ಲಿ ಚರ್ಚೆ

ಬೆಂಗಳೂರು;  ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಮತ್ತು ಹೊಸದಾಗಿ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಲು ಅನುದಾನ...

ನೀಟ್‌ ಪರೀಕ್ಷೆಯಿಂದ ವಿನಾಯಿತಿ; ತಮಿಳುನಾಡು ಮಾದರಿಯಲ್ಲಿ ನಿರ್ಣಯ ಮಂಡಿಸಲು ರಾಜ್ಯ ಸಜ್ಜು, ಕಾನೂನುಬದ್ಧ ವಿನಾಯಿತಿಗೆ ಪ್ರಸ್ತಾವ

ಬೆಂಗಳೂರು; ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶ ವ್ಯವಸ್ಥೆಯು ರಾಜ್ಯದ ಶೈಕ್ಷಣಿಕ...

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

Related Articles

Popular Categories

error: Content is protected !!