Saturday | April 4, 2026 |

1.16 ಕೋಟಿ ನಿಷ್ಕ್ರೀಯ ಖಾತೆಗಳಲ್ಲಿದೆ 3,403 ಕೋಟಿ; ಪರಿಣಾಮ ಬೀರದ ಆರ್‍‌ಬಿಐ ಮೇಲ್ವಿಚಾರಣೆ

ಬೆಂಗಳೂರು; ಸರ್ಕಾರಿ ಸೌಲಭ್ಯ ಪಡೆಯಲು ರಾಜ್ಯದ ರಾಷ್ಟ್ರೀಕೃತ ಮತ್ತಿತರೆ ಖಾಸಗಿ ಬ್ಯಾಂಕ್‌ಗಳಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ತೆರೆದಿದ್ದ ಖಾತೆಗಳು ವಾರಸುದಾರರಿಲ್ಲದೇ 1.16 ಕೋಟಿಯಷ್ಟು ಖಾತೆಗಳು ಅನಾಥವಾಗಿ ನಿಷ್ಕ್ರೀಯವಾಗಿವೆ.

ಈ ಖಾತೆಗಳಲ್ಲಿ 2025ರ ಅಕ್ಟೋಬರ್ ಅಂತ್ಯಕ್ಕೆ 3,403 ಕೋಟಿ ಹಣವಿತ್ತು. ಈ ಹಣವನ್ನು ಮರಳಿಸದ ಕಾರಣ ನಿಷ್ಕ್ರೀಯ ಖಾತೆಗಳಲ್ಲಿ ಉಳಿದಿದೆ.

2025ರ ನವೆಂಬರ್‍‌ನಲ್ಲಿ ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್‍‌ಗಳ ಸಮಾಲೋಚನ ಸಭೆಯ ನಡವಳಿಯಲ್ಲಿ ಈ ಮಾಹಿತಿ ಇದೆ. ಈ ಸಭೆಯ ನಡವಳಿಗಳು ದಿ ಫೈಲ್ ಗೆ ಲಭ್ಯವಾಗಿವೆ.

ನಿಷ್ಕ್ರೀಯ ಖಾತೆಗಳಲ್ಲಿರುವ 3,403 ಕೋಟಿ ರು ಬಗೆಗಿನ ಮಾಹಿತಿ ಕುರಿತು ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ.

 

 

ಹೀಗಾಗಿ ಇಂತಹ ಖಾತೆಗಳ ಕುರಿತು ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಈ ಅವಧಿಯಲ್ಲಿ ಗರಿಷ್ಠ ಕ್ಲೈಮ್ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಬೇಕು. ವಾರಸುದಾರರಿಲ್ಲದೇ ನಿಷ್ಕ್ರೀಯವಾಗಿರುವ ಠೇವಣಿಗಳನ್ನು ಠೇವಣಿದಾರರು ಮತ್ತು ಹಕ್ಕುದಾರರಿಗೆ ವರ್ಗಾಯಿಸಲು ಬ್ಯಾಂಕ್‌ಗಳು ಪೂರ್ವಭಾವಿಯಾಗಿ ಸಂಪರ್ಕ ಕಲ್ಪಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದು ತಿಳಿದು ಬಂದಿದೆ.

ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಹದಿನೈದು ದಿನಗಳ ಆಧಾರದ ಮೇಲೆ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಹೀಗಾಗಿ ಇಂತಹ ನಿಷ್ಕ್ರೀಯ ಖಾತೆಗಳ ಕುರಿತು ಎಲ್ಲಾ ಬ್ಯಾಂಕುಗಳು ತಮ್ಮ ಪ್ರಗತಿ ಅಂಕಿ ಅಂಶಗಳನ್ನು ಎಸ್‌ಎಲ್‌ಬಿಸಿಗೆ ತಕ್ಷಣವೇ ಸಲ್ಲಿಸಬೇಕು ಎಂದು ಸೂಚಿಸಿದೆ.

ಬ್ಯಾಂಕುಗಳು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ನಿಷ್ಕ್ರೀಯ ಖಾತೆಗಳ ವಿವರಗಳನ್ನು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳೊಂದಿಗೆ ನೇರವಾಗಿ ಹಂಚಿಕೊಳ್ಳಬೇಕು. ಮತ್ತು ಅಂತಹ ಪ್ರಕರಣಗಳ ಸುಗಮ ಇತ್ಯರ್ಥಕ್ಕಾಗಿ ಅವರೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡಬೇಕು. ಶಾಖೆ ಮಟ್ಟದ ಸೂಚನೆಗಳು, ಔಟ್‌ರೀಚ್ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಚಾನೆಲ್‌ಗಳ ಮೂಲಕ ಬ್ಯಾಂಕುಗಳು ಕ್ಲೈಮ್ ಮಾಡದ ಠೇವಣಿಗಳ ಲಭ್ಯತೆ ಮತ್ತು ಇತ್ಯರ್ಥ ಪ್ರಕ್ರಿಯೆಯ ಬಗ್ಗೆ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸಬೇಕು ಎಂದು ಸಭೆಯು ಸಲಹೆ ನೀಡಿದೆ.

ಬ್ಯಾಂಕ್‌ಗಳು ಕ್ಲೈಮ್ ಮಾಡದ ಠೇವಣಿಗಳ ಇತ್ಯರ್ಥಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP) ಎಲ್ಲಾ ಶಾಖೆ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಮತ್ತು ಶಾಖೆ ಮಟ್ಟದಲ್ಲಿ ಸುಗಮ ಮತ್ತು ಗ್ರಾಹಕ ಸ್ನೇಹಿ ಕ್ಲೈಮ್ ಇತ್ಯರ್ಥವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದಯಲು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದಾರೆ. ಇಂತಹ ಖಾತೆಗಳಿಗೆ ವಿವಿಧ ಸೌಲಭ್ಯಗಳ ಹಣವು ಜಮೆಯಾಗುತ್ತದೆ. ಆದರೆ ಬಹುತೇಕರು ಈ ಹಣವನ್ನು ಪಡೆಯದೇ ಅಲ್ಲಿಯೇ ಇಟ್ಟಿರುತ್ತಾರೆ. ಹಲವು ಫಲಾನುಭವಿಗಳು ಮರಣ ಹೊಂದಿರುತ್ತಾರೆ. ಹೀಗಾಗಿ ಕೆಲವು ಖಾತೆಗಳಲ್ಲಿ ಅವಲಂಬಿತರ ಹೆಸರು ಕೂಡ ಇರುವುದಿಲ್ಲ. ಹೀಗಾಗಿ ಸರ್ಕಾರದ ಹಣವು ಅನೇಕ ವರ್ಷಗಳಿಂದ ಅಲ್ಲಿಯೇ ಕೊಳೆಯುತ್ತಿದೆ.

ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ, ಶಿಷ್ಯ ವೇತನ ಸೇರಿ ಇತರ ಸೌಲಭ್ಯಗಳಿಗೆ ತೆರೆದಿರುವ ಖಾತೆಗಳ ಪಟ್ಟಿಯನ್ನು 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನಿಷ್ಕ್ರೀಯಗೊಳಿಸಿದ ಪಟ್ಟಿಯನ್ನು ಬ್ಯಾಂಕ್‌ಗಳು ವೆಬ್‌ಸೈಟ್‌ಗಳಲ್ಲಿ ಪ್ರದರ್ಶಿಸಲು ಅಥವಾ ನವೀಕರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಎಲ್ಲಾ ಬ್ಯಾಂಕ್‌ಗಳಿಗೆ ಸಲಹೆ ನೀಡುತ್ತದೆ.

2025ರ ಫೆಬ್ರುವರಿ ಅಂತ್ಯಕ್ಕೆ 3,305 ನಿಷ್ಕ್ರೀಯ ಖಾತೆಗಳಿದ್ದವು. ಇದರಲ್ಲಿ 55.78 ಕೋಟಿ ರು ಇತ್ತು. ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 45.14 ಕೋಟಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ 7.03 ಕೋಟಿ ರು ರಾಜ್ಯ ಸರ್ಕಾರವು ಠೇವಣಿ ಇರಿಸಿತ್ತು. ಈ ಹಣವು ಯಾರ ಬಳಕೆಗೂ ಬಾರದೇ ಅಲ್ಲಿಯೇ ಉಳಿದುಕೊಂಡಿತ್ತು. ಆದರೆ 2025ರ ನವೆಂಬರ್ ಅಂತ್ಯಕ್ಕೆ ಇಂತಹ ನಿಷ್ಕ್ರೀಯ ಖಾತೆಗಳ ಸಂಖ್ಯೆಯು 1.13 ಕೋಟಿಯಷ್ಟಾಗಿವೆ. ಮೊತ್ತವೂ ಸಹ 3,403 ಕೋಟಿಯಷ್ಟಿದೆ.

 

 

 

ತುಮಕೂರು ಜಿಲ್ಲೆಯಲ್ಲಿ ಡಿಸೆಂಬರ್ 2025ರ ಅಂತ್ಯಕ್ಕೆ 26 ಬ್ಯಾಂಕ್‌ಗಳ 373 ಶಾಖೆಗಳಲ್ಲಿ ಒಟ್ಟಾರೆ 4,11,477 ಖಾತೆಗಳು ನಿಷ್ಕ್ರೀಯಗೊಂಡಿದ್ದವು. ಈ ಖಾತೆಗಳಲ್ಲಿ ಒಟ್ಟು 110.45 ಕೋಟಿ ಹಣವಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2025ರ ಡಿಸೆಂಬರ್ ಅಂತ್ಯಕ್ಕೆ ಒಟ್ಟಾರೆ 2,15,344 ಸಂಖ್ಯೆಯ ನಿಷ್ಕ್ರೀಯ ಖಾತೆಗಳಿದ್ದವು. ಈ ಖಾತೆಗಳಲ್ಲಿ 46.79 ಕೋಟಿ ಹಣವಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್‌ ಮತ್ತು ಎಸ್‌ಬಿಐನಲ್ಲಿಯೇ ಅತೀ ಹೆಚ್ಚು ನಿಷ್ಕ್ರೀಯ ಖಾತೆಗಳಿದ್ದವು. ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ 83,727 ನಿಷ್ಕ್ರೀಯ ಖಾತೆಗಳಲ್ಲಿ 16.77 ಕೋಟಿ ಇತ್ತು.

ಮೈಸೂರು ಜಿಲ್ಲೆಯಲ್ಲಿ ವಾರಸುದಾರರಿಲ್ಲದ ಇಂತಹ ಖಾತೆಗಳಲ್ಲಿ 5.17 ಕೋಟಿ ಠೇವಣಿ ಸಂಗ್ರಹವಾಗಿತ್ತು. ಬೆಂಗಳೂರು ನಗರ ಜಿಲ್ಲೆಯಲ್ಲಿ 120 ಖಾತೆಗಳಿದ್ದವು. ಇದರಲ್ಲಿ 6.38 ಕೋಟಿ ಇತ್ತು. ಅತೀ ಕಡಿಮೆ ಖಾತೆಗಳು ಬಾಗಲಕೋಟೆ ಜಿಲ್ಲೆಯಲ್ಲಿದ್ದವು. ಇದರಲ್ಲಿ 1.04 ಕೋಟಿ ಇತ್ತು. ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ ಎಂದರೇ 99 ಖಾತೆಗಳಲ್ಲಿ 3.37 ಲಕ್ಷ ಠೇವಣಿ ಇತ್ತು.

ಉಳಿದಂತೆ ಬಳ್ಳಾರಿಯಲ್ಲಿ 41 ಖಾತೆಗಳಲ್ಲಿ 2.68 ಕೋಟಿ, ಕಲ್ಬುರ್ಗಿಯಲ್ಲಿ 122 ಖಾತೆಗಳಲ್ಲಿ 2.57 ಕೋಟಿ, ರಾಯಚೂರಿನಲ್ಲಿ 171 ಖಾತೆಗಳಲ್ಲಿ 2.31 ಕೋಟಿ, ಕೋಲಾರದಲ್ಲಿ 135 ಖಾತೆಗಳಲ್ಲಿ 2.19 ಕೋಟಿ, ಚಿತ್ರದುರ್ಗದಲ್ಲಿ 130 ಖಾತೆಗಳಲ್ಲಿ 2.10 ಕೋಟಿ, ಹಾಸನದಲ್ಲಿ 157 ಖಾತೆಗಳಲ್ಲಿ 1.93 ಕೋಟಿ ಇತ್ತು.ಗದಗ್‌ನಲ್ಲಿ  80 ಖಾತೆಗಳಲ್ಲಿ  1.71 ಕೋಟಿ ಇತ್ತು.

ಎರಡು ವರ್ಷ ಯಾವುದೇ ವಹಿವಾಟು ನಡೆಸದೇ ಇದ್ದರೆ ಆ ಖಾತೆಯುಕ ನಿಷ್ಕ್ರೀಯವಾಗುತ್ತದೆ. ಇಂತಹ ಖಾತೆಗಳು ಆ ಬ್ಯಾಂಕ್‌ನಲ್ಲಿಯೇ ಇರುತ್ತವೆ. ಆದರೆ 10 ವರ್ಷ ವಹಿವಾಟು ನಡೆಸದೇ ಇದ್ದಲ್ಲಿ ಅಂತಹ ನಿಷ್ಕ್ರೀಯ ಖಾತೆಗಳನ್ನು ಆರ್‍‌ಬಿಐ ಗೆ ವರದಿ ಮಾಡಲಾಗುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆ ಪ್ರಕಾರ ದೇಶದಲ್ಲಿ ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಬಳಿ ವಾರಸುದಾರರಿಲ್ಲದೇ 1.84 ಲಕ್ಷ ಕೋಟಿ ಮೊತ್ತದಷ್ಟು ಅಸ್ತಿ ಇತ್ತು.

ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ತೆರೆಯಲಾಘಿದ್ದ ಖಾತೆಗಳಲ್ಲಿ ಶೇ. 20ರಷ್ಟು ಖಾತೆಗಳು ನಿಷ್ಕ್ರಿಯವಾಗಿದ್ದವು ಎಂದು ಕೇಂದ್ರ ಹಣಕಾಸು ಸಚಿವಾಲಯವು ರಾಜ್ಯಸಭೆಗೆ ಮಾಹಿತಿ ಒದಗಿಸಿತ್ತು. 10 ವರ್ಷಗಳೀಗೂ ಹೆಚ್ಚು ಅವಧಿ ನಿಷ್ಕ್ರೀಯವಾಗಿರುವ ಖಾತೆಗಳಲ್ಲಿ ಇರುವ ಠೇವಣಿಯನ್ನು ಆಯಾ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್‌ನ ಠೇವಣಿದಾರರಿಗೆ ಬ್ಯಾಂಕಿಂಗ್ ಸಾಕ್ಷರತೆ ಮತ್ತು ಜಾಗೃತಿ ನಿಧಿ ಡಿಐಎ ನಿಧಿಗೆ ವರ್ಗಾಯಿಸಬೇಕು.

2022-23ರನೇ ಆರ್ಥಿಕ ವರ್ಷದ ಅಂತ್ಯಕ್ಕೆ ಬ್ಯಾಂಕ್‌ಗಳು ಹೀಗೆ ಡಿಇಎ ಇಧಿಗೆ ವರ್ಗಾಯಿಸಿದ ಠೇವಣಿ ಮೊತ್ತವೇ 42 ಸಾವಿರ ಕೋಟಿಗೂ ಹೆಚ್ಚಿತ್ತು. ಈ ಠೇವಣೀಗಳಿಗೆ ಲಭ್ಯವಾಗಿದ್ದ ಬಡ್ಡಿ ಮತ್ತು ಆದಾಯದ ಮೊತ್ತವೂ 20 ಸಾವಿರ ಕೋಟಿ ದಾಟಿತ್ತು. ಹೀಗೆ 10 ವರ್ಷಗಳ ಅವಧಿಯವರೆಗೆ ವಾರಸುದಾರರಿಲ್ಲದ ಮತ್ತು ನಿಷ್ಕ್ರೀಯ ಖಾತೆಗಳಲ್ಲಿನ ಠೇವಣಿಗಳ ಮೊತ್ತವೇ 62 ಸಾವಿರ ಕೋಟಿಗೂ ಹೆಚ್ಚಿತ್ತು.

2018-19ನೇ ಆರ್ಥಿಕ ವರ್ಷದಿಂಧ 2022-23ನೇ ಆರ್ಥಿಕ ವರ್ಷದಲ್ಲಿ ಡಿಇಎ ನಿಧಿಯಿಂದ 5,279 ಕೋಟಿ ರುಗಳನ್ನಷ್ಟೇ ವಾಪಸ್ ಪಡೆದಿತ್ತು. ನಿಷ್ಕ್ರೀಯ ಖಾತೆಗಳ ವಾರಸುದಾರರನ್ನು ಹುಡುಕಿ ಠೇವಣಿಯನ್ನು ಹಿಂತಿರುಗಿಸುವ ಕೆಲಸವನ್ನು ಬ್ಯಾಂಕ್‌ಗಳು ಮಾಡುತ್ತಿವೆಯಾದರೂ ಆ ಅವಧಿಯಲ್ಲಿ 62 ಸಾವಿರ ಕೋಟಿಗೂ ಅಧಿಕ ಮೊತ್ತ ಡಿಇಎ ನಿಧಿಯಲ್ಲಿಯೇ ಉಳಿದಿತ್ತು.

Hot this week

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನ 850 ಕೋಟಿ ಬಾಕಿ ಪ್ರಕರಣ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೆ ನಿಯಮಬಾಹಿರವಾಗಿ ಲೆಟರ್ ಆಫ್‌...

ಪ್ರಧಾನಮಂತ್ರಿ ಜೀವನ ಜ್ಯೋತಿ, ಸುರಕ್ಷಾ ವಿಮೆ ಯೋಜನೆ; ಕಲ್ಬುರ್ಗಿ ಸೇರಿ 12 ಜಿಲ್ಲೆಗಳಲ್ಲಿ ಕಳಪೆ ಪ್ರದರ್ಶನ

ಬೆಂಗಳೂರು; ಜೀವ ವಿಮೆ ರಕ್ಷಣೆ ನೀಡುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ...

ಕೆಎಎಸ್ 2011ರ ನೇಮಕಾತಿ ಅಕ್ರಮದ ತನಿಖಾ ವರದಿಗೆ ಕೊನೆ ಮೊಳೆ; ವಿಚಾರಣೆಯಿಲ್ಲದೇ ಪ್ರಕರಣ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು; 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ...

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು...

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ...

Topics

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ನ 850 ಕೋಟಿ ಬಾಕಿ ಪ್ರಕರಣ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟೀಸ್‌

ಬೆಂಗಳೂರು; ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಲಿಮಿಟೆಡ್‌ಗೆ ನಿಯಮಬಾಹಿರವಾಗಿ ಲೆಟರ್ ಆಫ್‌...

ಕೆಎಎಸ್ 2011ರ ನೇಮಕಾತಿ ಅಕ್ರಮದ ತನಿಖಾ ವರದಿಗೆ ಕೊನೆ ಮೊಳೆ; ವಿಚಾರಣೆಯಿಲ್ಲದೇ ಪ್ರಕರಣ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು; 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ...

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು...

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ...

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174...

Related Articles

Popular Categories

error: Content is protected !!