Monday | October 5, 2026 |

ಶಾಸಕರಿಗೆ ‘ನಿದ್ರಾ’ ಮಾದರಿ ಹಾಸಿಗೆ, ದಿಂಬು ಖರೀದಿ; ಕಾಯರ್ ಬೋರ್ಡ್‌ ಬದಿಗಿರಿಸಿದ ಸರ್ಕಾರ

ಬೆಂಗಳೂರು; ಶಾಸಕರಿಗೆ  ‘ನಿದ್ರಾ’ ಮಾದರಿಯ ಹಾಸಿಗೆ, ದಿಂಬು, ತಲೆದಿಂಬು, ಸೋಫಾ, ಡೋರ್‍‌ ಫುಟ್‌ ಮ್ಯಾಟ್‌, ಟರ್ಕಿ ಟವಲ್‌, ಉಲ್ಲನ್‌ ಬೆಡ್‌ ಶೀಟ್‌ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು 1.60 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಸರ್ಕಾರವು ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದೆ.

ಶಾಸಕರ ಭವನಕ್ಕೆ 2012ರಿಂದ 2023ರವರೆಗೂ  ಸಿಂಗಲ್‌ ಬೆಡ್‌, ಡಬಲ್‌ ಬೆಡ್‌ , ಸೋಫಾ ಲೂಸ್‌ ಕುಷನ್‌, ತಲೆದಿಂಬು, ಡೋರ್‍‌ ಫುಟ್‌ ಮ್ಯಾಟ್‌ಗಳನ್ನು ಸಾರ್ವಜನಿಕ ಉದ್ದಿಮೆಯಾದ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಿಂದಲೇ ಹಾಸಿಗೆಗಳನ್ನು ಖರೀದಿಸಲಾಗುತ್ತಿತ್ತು.

ಆದರೆ ಇವುಗಳು ಸರಿ ಇಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚರೋಪತಿ ಕ್ಷೇಮ ವನದಲ್ಲಿ ಬಳಸಿದ್ದ ನಿದ್ರಾ ಮಾದರಿಯ ಹಾಸಿಗೆಗಳನ್ನೇ ಕೊಯಮತ್ತೂರಿನ ಖಾಸಗಿ ಕಂಪನಿಯಿಂದ ಖರೀದಿಸಲು ಮುಂದಾಗಿದೆ.

ಶಾಸಕರ ಕೊಠಡಿಗಳಿಗೆ ಅಗತ್ಯವಿರುವ ಸಿಂಗಲ್‌, ಡಬಲ್‌ ಹಾಸಿಗೆ, ದಿಂಬು ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಖರೀದಿಸಲು ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿದೆ. ಈ ಸಂಬಂಧ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ದಾಖಲೆಗಳನ್ನು ಪಡೆದಿದೆ.

ಹಾಸಿಗೆ ಹಾಗೂ ಇನ್ನಿತರೆ ವಸ್ತುಗಳನ್ನು ಕೂಡಲೇ ಬದಲಾಯಿಸಿ ಹೊಸದಾದ ಹಾಸಿಗಗಳನ್ನು ನೀಡಬೇಕು ಎಂದು ಶಾಸಕರ ಒತ್ತಡ ಹೇರಿದ್ದರು.  ಇದಕ್ಕೆ  ಮಣಿದಿರುವ ವಿಧಾನಸಭೆ ಸಚಿವಾಲಯವು, ಆರ್ಥಿಕ ಇಲಾಖೆಗೆ 4(ಜಿ) ವಿನಾಯಿತಿಗಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ತಿಳಿದು ಬಂದಿದೆ.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದನೆ ನೀಡಿದ್ದಾರೆ.

ಮೊದಲ ಬಾರಿಗೆ ಆಯ್ಕೆಯಾದ ಶಾಸಕರುಗಳಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚರೋಪತಿ ಆಯುರ್ವೇದಿಕ್‌ ಕ್ಷೇಮ ವನದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ನೀಡಿದ್ದ ನಿದ್ರಾ ಮಾದರಿ ಹಾಸಿಗೆಗಳನ್ನೇ ಒದಗಿಸಬೇಕು ಎಂದು ಶಾಸಕರು ಬೇಡಿಕೆ ಇರಿಸಿದ್ದರು. ಹೀಗಾಗಿ ನಿದ್ರಾ ಮಾದರಿಯ ಹಾಸಿಗೆಗಳನ್ನೇ ಖರೀದಿಸಲು ವಿಧಾನಸಭೆ ಸಚಿವಾಲಯವು ದರ ಪಟ್ಟಿ ಪಡೆದಿತ್ತು.

‘ಮೊದಲ ಬಾರಿಗೆ ಆಯ್ಕೆಯಾದ ಸದಸ್ಯರುಗಳಿಗೆ ಇತ್ತೀಚೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚೋರಪತಿ ಆಯುರ್ವೇದಿಕ್‌ ಸೆಂಟರ್‍‌ನ ಕ್ಷೇಮ ವನದಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಸಭಾಧ್ಯಕ್ಷ ಯು ಟಿ ಖಾದರ್‌ ಸೇರಿದಂತೆ ಶಾಸಕರು   ಹಾಗೂ ಸಚಿವಾಲಯದ ಅಧಿಕಾರಿಗಳು ಅಲ್ಲಿ ಬಳಕೆ ಮಾಡುತ್ತಿರುವ ಹಾಸಿಗೆಗಳನ್ನು ಪರಿಶೀಲಿಸಿದ್ದರು.

ಈ ಹಾಸಿಗೆಗಳು ದೇಹಾರೋಗ್ಯಕ್ಕೆ ಸೂಕ್ತವಾದಂತಹ ಮತ್ತು ಆರಾಮದಾಯಕವಾಗಿರುವಂತಹ ನಿದ್ರಾ ಮಾದರಿಯ ಹಾಸಿಗೆಗಳೆಂದು ತಿಳಿದು ಬಂದಿರುತ್ತದೆ,’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರಿಗೆ ಪ್ರಸ್ತಾವನೆಯಲ್ಲಿ ವಿವರಿಸಿದ್ದರು.

300 ಸಂಖ್ಯೆಯ ಸಿಂಗಲ್‌ ಹಾಶಿಗೆ, 150 ಸಂಖ್ಯೆಯ ಡಬಲ್‌ ಹಾಸಿಗೆ ಹಾಗೂ 1,250 ಸಂಖ್ಯೆಯ ದಿಂಬು, 50 ಸೆಟ್‌ ಸೋಫಾ ಲೂಸ್‌ ಕುಷನ್‌, 200 ಸಂಖ್ಯೆಯ ಡೋರ್‍‌ ಫುಟ್‌ ಮ್ಯಾಟ್‌, 1,000 ಸಂಖ್ಯೆಯ ರಬ್ಬರ್‍‌ ಫುಟ್‌ ಮ್ಯಾಟ್‌, 1,250 ಸಂಖ್ಯೆಯ ಸಿಂಗಲ್‌ ಬೆಡ್‌ಶೀಟ್‌, 600 ಸಂಖ್ಯೆಯ ಡಬಲ್‌ ಬೆಡ್‌ಶೀಟ್‌, 250 ಸಂಖ್ಯೆ ಟರ್ಕಿ ಟವಲ್‌, 600 ಸಂಖ್ಯೆಯ ಉಲ್ಲನ್‌ ಬೆಡ್‌ ಶೀಟ್‌, ಬ್ಲಾಂಕೇಟ್‌ಗಳನ್ನು ಕೊಯಮತ್ತೂರಿನ ರಿಪೋಸ್‌ ಮ್ಯಾಟ್ರಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ನೇರವಾಗಿ ಖರೀದಿಸಲು ಪ್ರಸ್ತಾವನೆಯಲ್ಲಿ ಕೋರಿದ್ದರು ಎಂಬುದು ತಿಳಿದು ಬಂದಿದೆ.

ರೆಸ್ಟೋಲೆಕ್ಸ್‌, ಬೆಂಗಳೂರಿನ ಸದಾಶಿವನಗರದಲ್ಲಿರುವ ಜತ್ತಿ ಟ್ರಾಕ್ಸ್‌ ಎಲ್ಎಲ್‌ಪಿ ನಿಂದ ದರ ಪಟ್ಟಿ ಪಡೆದಿತ್ತು. ಈ ಪೈಕಿ ರಿಪೋಸ್‌ ಮ್ಯಾಟ್ರಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಿದೆ ಎಂಬುದು ಗೊತ್ತಾಗಿದೆ.

Hot this week

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಮನವಿ; ಸ್ಪಷ್ಟ ಅಭಿಪ್ರಾಯ ಸಲ್ಲಿಸಲು ಡಿಜಿಐಜಿಪಿಗೆ ನಿರ್ದೇಶನ

ಬೆಂಗಳೂರು;   ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧದ ಪ್ರಕರಣದಲ್ಲಿ ಸಿಐಡಿ ವಿಶೇಷ ವಿಚಾರಣೆ...

ಗೋವಿಂದರಾವ್ ವರದಿ ಶಿಫಾರಸ್ಸಿನಂತೆ ನಿಗದಿಯಾಗದ ಅನುದಾನ; ಕೃಷಿ ಇಲಾಖೆಯನ್ನೇ ನಿರ್ಲಕ್ಷ್ಯಿಸಿತೇ ಸರ್ಕಾರ?

ಬೆಂಗಳೂರು; ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಆರ್ಥಿಕ ತಜ್ಞ ಪ್ರೊ ಎಂ...

ಅನ್ನಭಾಗ್ಯ; ಫಲಾನುಭವಿಗಳ ಅರ್ಹತೆ, ಅನರ್ಹತೆ ಪರಿಶೀಲಿಸಲು ಸಿಎಜಿಗೆ ದತ್ತಾಂಶಗಳನ್ನೇ ಒದಗಿಸದ ಸರ್ಕಾರ

ಬೆಂಗಳೂರು; ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ...

100 ಎಕರೆ ಜಮೀನು ಮಾರಾಟ; ಕೋರಮಂಡಲ್ ಷುಗರ್ಸ್‌ ಲಿಮಿಟೆಡ್‌ ಕೋರಿಕೆಗೆ ಮನ್ನಣೆ, ಪರಭಾರೆ ನಿರ್ಬಂಧ ಸಡಿಲಿಸುವುದೇ ಸರ್ಕಾರ?

ಬೆಂಗಳೂರು; ಜಮೀನು ಮಂಜೂರು ಮಾಡಿದ ದಿನಾಂಕದಿಂದ 30 ವರ್ಷಗಳವರೆಗೆ ಮಾರಾಟ ಮಾಡಬಾರದು...
Please Scan to make Your Contribution

Topics

ವಿಮಾ ಕಂಪನಿಯಿಂದ ಹಣ ಬಂದಿದೆ, ಆದರೆ ರೈತರ ಖಾತೆಗಳಿಗೆ ಜಮೆಯೇ ಆಗಿಲ್ಲ; ಬರಗಾಲದ ನಡುವೆಯೇ ರೈತರಿಗೆ ಮತ್ತೊಂದು ಬರೆ

ಬೆಂಗಳೂರು;  ರಾಜ್ಯದಾದ್ಯಂತ ತೀವ್ರ ಬರಗಾಲ ಎದುರಾಗಿರುವ ನಡುವೆಯೇ  2025-26ನೇ ಮುಂಗಾರು ಹಂಗಾಮಿನ...

ಪ್ರಿಂಟರ್, ಸ್ಕ್ಯಾನರ್ ಕೂಡ ಲಭ್ಯವಿಲ್ಲ, ಇ-ಮೇಲ್‌ ಮಾಡಲೂ ಕಷ್ಟಸಾಧ್ಯ; ಸರ್ಕಾರದ ಆರ್ಥಿಕ ಪರಿಸ್ಥಿತಿ ತೆರೆದಿಟ್ಟ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ

ಬೆಂಗಳೂರು; ಚಾಲ್ತಿಯಲ್ಲಿರುವ ಮತ್ತು ಹೊಸ ಯೋಜನೆಗಳಿಗೆ ಅನುದಾನ ಹೊಂದಿಸಲು ಏದುಸಿರು ಬಿಡುತ್ತಿರುವ...

Related Articles

Popular Categories

error: Content is protected !!