Friday | September 18, 2026 |

ಜಂಟಿ ನಿರ್ದೇಶಕ ನಿಶ್ಚಲ್‌ ಗೆ ಐಎಎಸ್‌ ಮುಂಬಡ್ತಿ ನೀಡಲು ಶಿಫಾರಸ್ಸು; ಆರ್ ಟಿ ಐ ಅಡಿ ಕಡತ ಒದಗಿಸಲು ನಿರಾಕರಣೆ, ಅರ್ಜಿ ತಿರಸ್ಕರಿಸಿದ ಸರ್ಕಾರ

ಬೆಂಗಳೂರು; ಐಸಿಡಿಎಸ್‌ ಶಾಖೆಯ ಜಂಟಿ ನಿರ್ದೇಶಕ ನಿಶ್ಚಲ್‌ ಬಿ ಹೆಚ್‌ ಅವರನ್ನು ಐಎಎಸ್‌ ವೃಂದದ ಆಯ್ಕೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಶಿಫಾರಸ್ಸು ಮಾಡಿರುವುದು ಇದೀಗ ಬಹಿರಂಗವಾಗಿದೆ. ಆದರೆ ಇದಕ್ಕೆ ಸಂಬಂಧಿಸಿದ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಒದಗಿಸಲು ಸರ್ಕಾರವು ಅರ್ಜಿಯನ್ನೇ ತಿರಸ್ಕರಿಸಿದೆ.

ಇತರೆ ರಾಜ್ಯ ವೃಂದಗಳಿಂದ ಐಎಎಸ್ ವೃಂದಕ್ಕೆ ಮುಂಬಡ್ತಿ, ಅಸಾಧಾರಣ ಪ್ರತಿಭೆ ಮತ್ತು ಸಾಮರ್ಥ್ಯ ಹೊಂದಿದ ಅಧಿಕಾರಿಗಳ ಸಂಬಂಧದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್‌ ಎಂಬುವರು 2026ರ ಏಪ್ರಿಲ್‌ 30ರಂದು ಅನಧಿಕೃತ ಟಿಪ್ಪಣಿ ಕಳಿಸಿದ್ದರು.

ಇದರ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.

ವಿಶೇಷವೆಂದರೇ ಇದೇ ಅನಧಿಕೃತ ಟಿಪ್ಪಣಿಗೆ ಸಂಬಂಧಿಸಿದಂತೆ  ದಿ ಫೈಲ್‌ ಆರ್‍‌ಟಿಐ ಅಡಿಯಲ್ಲಿ ಕಡತಕ್ಕಾಗಿ ಅರ್ಜಿ ಸಲ್ಲಿಸಿತ್ತು.  ಆದರೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ ಎಸ್‌ ಅವರು ಇದೊಂದು ವೈಯಕ್ತಿಕ ಮಾಹಿತಿ, ಸಾರ್ವಜನಿಕ ಹಿತಾಸಕ್ತಿ ಕಂಡುಬರುವುದಿಲ್ಲ  ಎಂಬ ಕಾರಣವನ್ನು ಮುಂದೊಡ್ಡಿ   ಕಡತ ಒದಗಿಸಲು ನಿರಾಕರಿಸಿದ್ದಾರೆ. ಅಲ್ಲದೇ ಅರ್ಜಿಯನ್ನೂ ಸಹ ತಿರಸ್ಕರಿಸಿದ್ದಾರೆ.

ಅನಧಿಕೃತ ಟಿಪ್ಪಣಿಯಲ್ಲೇನಿದೆ?

ಭಾರತೀಯ ಆಡಳಿತ ಸೇವೆ (ಆಯ್ಕೆ ಮೂಲಕ ನೇಮಕ) ನಿಯಮಗಳು 1997ರಲ್ಲಿ ಇತರೆ ರಾಜ್ಯ ವೃಂದಗಳಿಂದ ಭಾರತೀಯ ಆಡಳಿತ ಸೇವೆಗೆ ಆಯ್ಕೆ ಮೂಲಕ ನೇಮಕಾತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಚಿವಾಲಯದ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಂದ ಪ್ರಸ್ತಾವನೆ ಕೋರಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಐಸಿಡಿಎಸ್‌ ಶಾಖೆಯ ಜಂಟಿ ನಿರ್ದೇಶಕ ನಿಶ್ಚಲ್ ಬಿ ಹೆಚ್‌ ಅವರು ಐಎಎಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸಿರುವುದಾಗಿ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಏಪ್ರಿಲ್‌ 23ರಂದು ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಇಲಾಖೆಯು ಪರಿಶೀಲಿಸಿದೆ.

 

 

‘ನಿಶ್ಚಲ್‌ ಬಿ ಎಚ್‌ ಅವರು ಗ್ರೂಪ್‌ ಎ ವೃಂದದಲ್ಲಿ 2016ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ಯಾವುದೇ ಇಲಾಖೆ ವಿಚಾರಣೆ ಬಾಕಿ ಇರುವುದಿಲ್ಲ ಮತ್ತು ಹೂಡಲು ಉದ್ದೇಶಿಸಿರುವುದಿಲ್ಲ,’ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿರುವುದು ಗೊತ್ತಾಗಿದೆ.

ಅಲ್ಲದೇ ನಿಶ್ಚಲ್‌ ಅವರು 2014-15ರಿಂದ 2025-26ನೇ ಸಾಲಿನವರೆಗೆ ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿರುವ ರಶ್ಮಿ ಅವರು 2014-15ರಿಂದ 2025-26ನೇ ಸಾಲಿನವರೆಗಿನ ವಿಶೇಷ ಕಾರ್ಯನಿರ್ವಹಣಾ ವರದಿಗಳು ಸ್ವೀಕೃತಗೊಂಡಿವೆ.

ಮಹಾಲೇಖಪಾಲರಿಂದ ಇವರ ಸೇವಾ ವಿವರಗಳು ಸ್ವೀಕೃತಗೊಂಡಿವೆ. ಯಾವುದೇ ಬೇಬಾಕಿ ಇರುವುದಿಲ್ಲ ಎಂದು ಸರ್ಕಾರಕ್ಕೆ ಬರೆದಿರುವ ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

‘ಪೂರ್ವಪರ ಚಾರಿತ್ರ್ಯದ ಬಗ್ಗೆ ಪೊಲೀಸ್‌ ಇನ್ಸ್‌ಪೆಕ್ಟರ್‍‌ ಅವರಿಂದ ಮಾಹಿತಿ ಸ್ವೀಕೃತಿಯಾಗಿದೆ. ಅರ್ಜಿದಾರರು ಒಳ್ಳೆಯ ನಡತೆಯುಳ್ಳವರಾಗಿದ್ದು ಯಾವುದೇ ಕೇಸುಗಳು ಕಂಡುಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಇಲಾಖೆ ಸಚಿವರು, ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖೆಯ ನಿರ್ದೇಶಕರು ಸಹ ಇವರ ಕಾರ್ಯವೈಖರಿ ಬಗ್ಗೆ ಪ್ರಶಂಸನಾ ಪತ್ರವನ್ನು ನೀಡಿದ್ದಾರೆ,’ ಎಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಹೀಗಾಗಿ ಜಂಟಿ ನಿರ್ದೇಶಕ ನಿಶ್ಚಲ್ ಬಿ ಎಚ್‌ ಅವರನ್ನು ಕರ್ನಾಟಕ ಕೇಡರ್‍‌ನ ಐಎಎಸ್ ವೃಂದದ ಆಯ್ಕೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಶಿಫಾರಸ್ಸು ಮಾಡಲಾಗಿದೆ ಎಂದು ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಈ ಅನಧಿಕೃತ ಟಿಪ್ಪಣಿಗೆ ಇಲಾಖೆ ಸಚಿವರಾಗಿದ್ದ ಲಕ್ಷ್ಮಿ ಹೆಬ್ಬಾಳಕರ್ ಅವರು ಸಹ ಅನುಮೋದಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಶಿಫಾರಸ್ಸಿನ ಕಡತ ಬಹಿರಂಗಪಡಿಸದ ಸರ್ಕಾರ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಿ ಫೈಲ್ 2026ರ ಆಗಸ್ಟ್‌ 28ರಂದು ಮಾಹಿತಿ ಹಕ್ಕಿನ ಅಡಿಯಲ್ಲಿ ಸಮಗ್ರ ಕಡತವನ್ನು ಕೋರಿತ್ತು.

 

 

ಆದರೆ ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಂಡುಬರುವುದಿಲ್ಲ ಎಂದು ಮಾಹಿತಿ ನೀಡಲು ಅಧೀನ ಕಾರ್ಯದರ್ಶಿ ಹಾಗೂ ಮಾಹಿತಿ ಹಕ್ಕು ಅಧಿಕಾರಿಯಾದ ರಶ್ಮಿ ಎಂ ಎಸ್‌ ಅವರು ಉತ್ತರಿಸಿದ್ದಾರೆ.

‘ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿರುವ ಕಡತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಒಬ್ಬ ಅಧಿಕಾರಿಗೆ ಸಂಬಂಧಿಸಿದ ಸೇವಾ ವಿವರಗಳು, ಆಸ್ತಿ ವಿವರಗಳು, ಇನ್ನಿತರೆ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಈ ಮಾಹಿತಿಯು ಮೂರನೇ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿಯಾಗಿದೆ. ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಕಂಡುಬರುತ್ತಿಲ್ಲ. ಸರ್ವೋಚ್ಛ ನ್ಯಾಯಾಲಯದ ಸಿವಿಲ್ ಅಪೀಲ್‌ (ಸಂಖ್ಯೆ; 22/2009) ಕೆನರಾ ಬ್ಯಾಂಕ್‌ /ಶ್ಯಾಮ್ ಪ್ರಕರಣದಲ್ಲಿ ನ್ಯಾಯಾಲಯವು ನೀಡಿರುವ ತೀರ್ಪಿನ ಅನುಸಾರ ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 8 (1) (ಜಿ) ಅಡಿಯಲ್ಲಿ ತಿರಸ್ಕರಿಸಲಾಗಿದೆ,’ ಎಂದು ರಶ್ಮಿ ಅವರು ಉತ್ತರಿಸಿದ್ದಾರೆ.

 

 

ರಾಜ್ಯ ವೃಂದಗಳಿಂದ (Non-SCS – Non-State Civil Services) ಭಾರತೀಯ ಆಡಳಿತ ಸೇವೆಗೆ (IAS) ಮುಂಬಡ್ತಿ ಅಥವಾ ಆಯ್ಕೆ ಮೂಲಕ ನೇಮಕಾತಿ ಮಾಡಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹಾಗೂ ಕೇಂದ್ರ ಲೋಕಸೇವಾ ಆಯೋಗ (UPSC) ನಿರ್ದಿಷ್ಟ ನಿಯಮಾವಳಿಗಳನ್ನು ರೂಪಿಸಿವೆ.

ಹುದ್ದೆ ಮತ್ತು ದರ್ಜೆ: ಅಭ್ಯರ್ಥಿಯು ರಾಜ್ಯ ಸರ್ಕಾರದ ಅಡಿಯಲ್ಲಿ ಕನಿಷ್ಠ ಪ್ರಥಮ ದರ್ಜೆಯ (Class-I / Group ‘A’) ಗೆಜೆಟೆಡ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.ಸೇವಾವಧಿ: ಆಯಾ ರಾಜ್ಯ ವೃಂದದ ಗ್ರೂಪ್ ‘ಎ’ ಹುದ್ದೆಯಲ್ಲಿ ಕನಿಷ್ಠ 8 ವರ್ಷಗಳ ನಿರಂತರ ಸೇವೆಯನ್ನು ಪೂರೈಸಿರಬೇಕು.ವಯೋಮಿತಿ: ಆಯ್ಕೆಯ ವರ್ಷದ ಜನವರಿ ೧ ರ ಅನ್ವಯ ಅಧಿಕಾರಿಗಳಿಗೆ 56 ೬ ವರ್ಷ ವಯಸ್ಸು ಮೀರಿರಬಾರದು ಎಂದಿದೆ.

ಅತ್ಯುತ್ತಮ ಸೇವಾ ದಾಖಲೆ ಹೊಂದಿರಬೇಕು. ಅಭ್ಯರ್ಥಿಯ ವಾರ್ಷಿಕ ಕಾರ್ಯಕ್ಷಮತೆ ವರದಿ (ACR/APAR) ಅತ್ಯುತ್ತಮವಾಗಿರಬೇಕು. ಆಯ್ಕೆ ಪ್ರಕ್ರಿಯೆ (Selection Process )ಖಾಲಿ ಹುದ್ದೆಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಆಯಾ ರಾಜ್ಯದಲ್ಲಿ ‘Non-SCS’ ಕೋಟಾದಡಿ ಲಭ್ಯವಿರುವ ಐಎಎಸ್ ಹುದ್ದೆಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ.

ನಿಗದಿತ ಅರ್ಹತೆ ಹೊಂದಿರುವ ಅಧಿಕಾರಿಗಳಿಂದ ರಾಜ್ಯ ಸರ್ಕಾರವು ಅರ್ಜಿಗಳನ್ನು ಆಹ್ವಾನಿಸಿ, ಅರ್ಹರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಒಂದು ಹುದ್ದೆಗೆ ಗರಿಷ್ಠ 5 ಅಧಿಕಾರಿಗಳ ಅನುಪಾತದಲ್ಲಿ ಹೆಸರನ್ನು ಯುಪಿಎಸ್‌ಸಿ ಗೆ ಶಿಫಾರಸು ಮಾಡಲಾಗುತ್ತದೆ. ಯುಪಿಎಸ್‌ಸಿ ನೇತೃತ್ವದ ಜಂಟಿ ಸಮಿತಿಯು ಅಭ್ಯರ್ಥಿಗಳ ಸೇವಾ ದಾಖಲೆಗಳನ್ನು (ACR Marks) ಪರಿಶೀಲಿಸಿ, ನಂತರ ವೈಯಕ್ತಿಕ ಸಂದರ್ಶನ (Personal Interview) ನಡೆಸುತ್ತದೆ.

ಸಂದರ್ಶನ ಮತ್ತು ಸೇವಾ ದಾಖಲಾತಿಗಳ ಅಂಕಗಳ ಆಧಾರದ ಮೇಲೆ ಅರ್ಹ ಅಧಿಕಾರಿಗಳನ್ನು ಐಎಎಸ್ ವೃಂದಕ್ಕೆ ಮುಂಬಡ್ತಿ ನೀಡಲಾಗುತ್ತದೆ. ಐಎಎಸ್ ವೃಂದಕ್ಕೆ ಆಯ್ಕೆಯಾದಾಗ ಅಧಿಕಾರಿಯ ರಾಜ್ಯ ಸೇವೆಯ ವೇತನಕ್ಕೆ ರಕ್ಷಣೆ ನೀಡಲಾಗುತ್ತದೆ. ಅವರ ಜೇಷ್ಠತೆಗೆ ಅನುಗುಣವಾಗಿ ಐಎಎಸ್‌ನ ಸೀನಿಯರ್ ಸ್ಕೇಲ್, ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಗ್ರೇಡ್ (JAG) ಅಥವಾ ಸೆಲೆಕ್ಷನ್ ಗ್ರೇಡ್‌ಗಳಲ್ಲಿ ವೇತನ ನಿಗದಿಯಾಗುತ್ತದೆ.

ಇತರ ರಾಜ್ಯ ವೃಂದಗಳಲ್ಲಿ ಸಲ್ಲಿಸಿದ ಸೇವಾವಧಿಯನ್ನು ಪರಿಗಣಿಸಿ ಅವರಿಗೆ ಐಎಎಸ್ ಬ್ಯಾಚ್ (Year of Allotment) ಅನ್ನು ನಿಗದಿಪಡಿಸಲಾಗುತ್ತದೆ.ಈ ಪ್ರಕ್ರಿಯೆಯು ಸಂಪೂರ್ಣವಾಗಿ ಅರ್ಹತೆ ಮತ್ತು ವಿಶೇಷ ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ನಡೆಯುತ್ತದೆ.

Hot this week

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...
Please Scan to make Your Contribution

Topics

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ; ದೇಸೀಯ ಹೆಸರು ಮರು ನಾಮಕರಣಕ್ಕೆ ಎನ್‌ಒಸಿ ಪಡೆಯಲು ಪ್ರಸ್ತಾವ, ಇಂದು ನಿರ್ಧಾರ!

ಬೆಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ರಾಜ್ಯ ಕಾಂಗ್ರೆಸ್‌...

ಅನಂತ್‌ ನಾಗ್‌ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ; 8 ವರ್ಷದ ಹಿಂದಿನ ವಿಸ್ತೃತ ಸಂದರ್ಶನ

ಬೆಂಗಳೂರು;  ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್ ಅವರಿಗೆ 2024ರ...

ಭೂಗತ ಸುರಂಗ ಮಾರ್ಗ; ರಿಯಾಯಿತಿ ಅವಧಿಯಲ್ಲೇ ಗರಿಷ್ಠ ಟೋಲ್‌ ಸಂಗ್ರಹಣೆ, ದರ ಪರಿಷ್ಕರಣೆಯ ಹಿಂದಿನ ರಹಸ್ಯ ಬಯಲು

ಬೆಂಗಳೂರು; ಭೂಗತ ಸುರಂಗ ಮಾರ್ಗದಲ್ಲಿ ರಿಯಾಯಿತಿ ಅವಧಿಯಲ್ಲಿ ಗರಿಷ್ಠ ಟೋಲ್‌ ಸಂಗ್ರಹಣೆ...

ಕೋವಿಡ್ ವೆಚ್ಚದಲ್ಲಿ ಅಕ್ರಮ ಆರೋಪ; ಐಎಎಸ್‌ ಗೌರವ್ ಗುಪ್ತಾ, ರಾಜೇಂದ್ರ ಚೋಳನ್ ಆರೋಪ ಮುಕ್ತ, ಕುನ್ಹಾ ವರದಿಗಿಲ್ಲ ಕಿಮ್ಮತ್ತು

ಬೆಂಗಳೂರು;  ಕೋವಿಡ್‌ 19ರ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಂದ ಅನುಮೋದನೆ ಇಲ್ಲದೆಯೇ,...

ಶಿವಮೊಗ್ಗ ಜಿಲ್ಲೆಯಿಂದ ಅತೀ ಹೆಚ್ಚು, ಕಲ್ಬುರ್ಗಿ ಜಿಲ್ಲೆಯಿಂದ ಅತೀ ಕಡಿಮೆ ಅನುದಾನಕ್ಕೆ ಬೇಡಿಕೆ; ಜಿಲ್ಲಾಡಳಿತ ನಿಷ್ಕ್ರೀಯವಾಯಿತೇ?

ಬೆಂಗಳೂರು;  ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿಯ ಅನುದಾನ ಬೇಡಿಕೆ ಮುಂದಿರಿಸಿರುವ ಇಲಾಖೆಗಳ ...

Related Articles

Popular Categories

error: Content is protected !!