Sunday | July 5, 2026 |

ಇಶಾ ಫೌಂಡೇಷನ್‌ ಕೋರಿಕೆ ಪರಿಗಣನೆಗೆ ಅನರ್ಹ; ಅಂತಿಮ ತೀರ್ಮಾನ, ಸರ್ಕಾರದ ಹೆಗಲಿಗೆ

ಬೆಂಗಳೂರು; ಸಾರ್ವಜನಿಕ ಹಿತಾಸಕ್ತಿ ಇಲ್ಲದ್ದಿದ್ದರೂ ಸಹ ರಸ್ತೆ ಉದ್ದೇಶದ ಹೆಸರಿನಲ್ಲಿ ಗೋಮಾಳ, ಗೋ ಕಾಡು ಕಡಿಮೆ ಮಾಡಬೇಕು ಎಂದು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್‌ ಕೋರಿಕೆ ಕುರಿತು ಸರ್ಕಾರದ ಹಂತದಲ್ಲಿ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ವಿಭಾಗದ  ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

 

ಇಶಾ ಫೌಂಡೇ‍ಷನ್‌ ಸಲ್ಲಿಕೆ ಮಾಡಿದ್ದ ಕೋರಿಕೆ ಆಧರಿಸಿ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿಯವರು ಸಲ್ಲಿಸಿದ್ದ ವರದಿಗಳನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪರಿಶೀಲಿಸಿದ್ದಾರೆ. ಆದರೆ ಇಶಾ ಫೌಂಡೇಷನ್‌ ಕೋರಿಕೆಯನ್ನು ತಮ್ಮ ಹಂತದಲ್ಲಿ ತಿರಸ್ಕರಿಸಿಲ್ಲ. ಬದಲಿಗೆ ಈ ಕೋರಿಕೆಯು ಅನರ್ಹವಾಗಿದೆ ಎಂದು ಷರಾ ಬರೆದಿದ್ದಾರೆ.

 

ಇಶಾ ಫೌಂಡೇಷನ್‌ ಕೋರಿಕೆ ಮತ್ತು  ಪ್ರಸ್ತಾವನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಹೊಣೆಗಾರಿಕೆಯನ್ನು  ಸರ್ಕಾರದ ಹೆಗಲಿಗೆ ಹಾಕಿದ್ದಾರೆ. ಈ ಸಂಬಂಧ ‘ದಿ ಫೈಲ್‌’ಗೆ ದಾಖಲೆಗಳು ಲಭ್ಯವಾಗಿವೆ.

 

 

ಹಾಗೆಯೇ ರಸ್ತೆ ಉದ್ದೇಶಕ್ಕಾಗಿ ಕಾಯ್ದರಿಸಲು ಉದ್ದೇಶಿಸಿರುವ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶವನ್ನು ಮೀಸಲು ಅರಣ್ಯ ಎಂದು ತೀರ್ಮಾನಿಸುವ ಅಧಿಕಾರವಿರದಿದ್ದರೂ ಸಹ ಕೋಲಾರ ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿಯು ತೀರ್ಮಾನಿಸಿದ್ದರು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಅದೇ ರೀತಿ ಇಶಾ ಫೌಂಡೇಷನ್‌ನ ಕೋರಿಕೆಯು, ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಸಂಪರ್ಕ ಹೊಂದಲು ದಾರಿ ಮಾಡಿಕೊಡುತ್ತದೆ. ಮತ್ತು ಫೌಂಡೇಷನ್‌ನ ಹಲವು ನಿವೇಶನಗಳನ್ನು ಏಕ ನಿವೇಶನವೆಂದು ಪರಿಗಣಿಸಲು ಸಹ ಅವಕಾಶ ಕಲ್ಪಿಸಲಿತ್ತು ಎಂಬುದು ಸಹ ಗೊತ್ತಾಗಿದೆ.

 

ಹೀಗಾಗಿ ಇಶಾ ಫೌಂಡೇಷನ್‌ನ ಕೋರಿಕೆಯು ಅನರ್ಹವಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಕೋರಿಕೆಯನ್ನು ತಮ್ಮ ಹಂತದಲ್ಲಿ ತಿರಸ್ಕರಿಸಿದ್ದಾರೆ. ಈ ಕುರಿತು ಸರ್ಕಾರಕ್ಕೆ 2024ರ ಅಕ್ಟೋಬರ್‍‌ 10ರಂದು ತಮ್ಮ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಿದ್ದಾರೆ.

 

ಈ ವರದಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಪ್ರಕರಣದ ವಿವರ

 

ಚಿಕ್ಕಬಳ್ಳಾಪುರ ತಾಲೂಕು ಕಸಬಾ ಹೋಬಳಿಯ ಆವಲಗುರ್ಕಿ ಗ್ರಾಮದ ಸರ್ವೆ ನಂಬರ್‍‌ 174 ರಲ್ಲಿ 4.23 ಎಕರೆ, ಸರ್ವೆ ನಂಬರ್‍‌ 175ರಲ್ಲಿ 1.37 ಎಕರೆ, ಕವರ್ನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 137ರಲ್ಲಿ 0-19 ಎಕರೆ, ಸರ್ವೆ ನಂಬರ್‍‌ 123ರಲ್ಲಿ 1-18 ಎಕರೆ ಜಮೀನನ್ನು ಸಾರ್ವಜನಿಕ ರಸ್ತೆಗಾಗಿ ಕಾಯ್ದಿರಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯವರು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

 

 

ಈ ಪ್ರಸ್ತಾವನೆಯ ಕುರಿತು ಪ್ರಾದೇಶಿಕ ಆಯುಕ್ತರು ಹಲವು ಅಂಶಗಳನ್ನು ಗಮನಿಸಿದ್ದರು.

 

ಪಹಣಿಯಂತೆ ಸರ್ವೆ ನಂಬರ್‍‌ 174ರಲ್ಲಿ 125 ಎಕರೆ ಅರಣ್ಯ ಸೇರಿದಂತೆ ಗೋಮಾಳ ಜಮೀನು ಇದೆ. ಇದರಲ್ಲಿ ಗೋಮಾಳ ಮತ್ತು ಅರಣ್ಯ ಜಮೀನಿನ (ಅರಣ್ಯ ಜಮೀನು ಎಂದು ಅಧಿಸೂಚಿದಾಗಿನ ಗಡಿ ವಿವರಣೆಯಂತೆ) ಗಡಿಯನ್ನು ನಕ್ಷೆಯಲ್ಲಿ ಗುರುತಿಸಿಲ್ಲ ಎಂಬ ಅಂಶವನ್ನು ಪ್ರಾದೇಶಿಕ ಆಯುಕ್ತರು ಗಮನಿಸಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ರಸ್ತೆ ಉದ್ದೇಶಕ್ಕಾಗಿ ಕಾಯ್ದಿರಿಸಲು ಉದ್ದೇಶಿಸಿರುವ ಪ್ರದೇಶವನ್ನು ಬಿಟ್ಟು ಉಳಿದ ಪ್ರದೇಶವನ್ನು ಮೀಸಲು ಅರಣ್ಯ ಎಂದು ತೀರ್ಮಾನಿಸಲಾಗಿದೆ ಎಂದು ಕೋಲಾರ ಉಪ ವಿಭಾಗದ ಅರಣ್ಯ ವ್ಯವಸ್ಥಾಪನಾಧಿಕಾರಿ ವರದಿ ಸಲ್ಲಿಸಿದ್ದರು. ಆದರೆ ಸರ್ಕಾರದ ಹೊರತು ಅರಣ್ಯ ವ್ಯವಸ್ಥಾಪನಾಧಿಕಾರಿಯವರಿಗೆ ಇದನ್ನು ತೀರ್ಮಾನಿಸುವ ಅಧಿಕಾರವಿರುವುದಿಲ್ಲ ಎಂದು ಪ್ರಾದೇಶಿಕ ಆಯುಕ್ತರು ಸ್ಪಷ್ಟವಾಗಿ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಪ್ರಸ್ತಾಪಿತ ರಸ್ತೆ ಉದ್ದೇಶಕ್ಕಾಗಿ ಕಾಯ್ದಿರಿಸಲು ಗುರುತಿಸಿರುವ ಸರ್ವೆ ನಂಬರ್‍‌ಗಳು ಮತ್ತು ವಿಸ್ತೀರ್ಣವು ವಿಸ್ತಾರವಾಗಿರುವ ಸರ್ಕಾರಿ ಮತ್ತು ಖಾಸಗಿ ಸರ್ವೆ ನಂಬರ್‍‌ಗಳಿಂದ ಸಮ್ಮಿಶ್ರಿತವಾಗಿದೆ. ಪ್ರಸ್ತಾಪಿತ ರಸ್ತೆಯ ಭಾಗಶಃ ಭಾಗವು ಸಾರ್ವಜನಿಕ ರಸ್ತೆಯಾಗಿದೆಯಲ್ಲದೇ ಅತಿ ಹೆಚ್ಚಿನ ಭಾಗವು ಖಾಸಗಿ ರಸ್ತೆಯಾಗಿದೆ. ಪ್ರಸ್ತಾಪಿತ ರಸ್ತೆಯು ಸಂಪೂರ್ಣವಾಗಿ ಸಾರ್ವಜನಿಕ ರಸ್ತೆಯಾಗಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿರುವುದು ಗೊತ್ತಾಗಿದೆ.

 

ಆದಿ ಯೋಗಿ ಶಿವ ದೇಗುಲಕ್ಕೆ ರಸ್ತೆ; ಆಶ್ರಯ ಜಮೀನು, ಗೋಮಾಳದ ಮೇಲೆ ಕಣ್ಣು ಹಾಕಿದ ಇಶಾ ಫೌಂಡೇಷನ್

 

ಅದೇ ರೀತಿ ಸಾರ್ವಜನಿಕ ಉದ್ದೇಶಕ್ಕಾಗಿ ಮಾತ್ರ ಗೋಮಾಳ ಜಮೀನನ್ನು ಕಡಿಮೆ ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವುದಿಲ್ಲ ಮತ್ತು ವಿಸ್ತಾರವಾದ ಪ್ರದೇಶದಲ್ಲಿ ಸಾರ್ವಜನಿಕ ರಸ್ತೆ ಅಸ್ತಿತ್ವದಲ್ಲಿರುವುದಿಲ್ಲ. ‘ಇದಕ್ಕೆ ವಿರುದ್ಧವಾಗಿ ರಸ್ತೆ ಉದ್ದೇಶಕ್ಕೆ ಗೋಮಾಳ, ಗೋಕಾಡು ಕಡಿಮೆ ಮಾಡಲು ಕೋರಿ ಖಾಸಗಿ ಸಂಸ್ಥೆಯಾದ ಇಶಾ ಫೌಂಡೇಷನ್‌ ಸಲ್ಲಿಸಿರುವ ಕೋರಿಕೆಯು ಅವರು ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಸಂಪರ್ಕ ಹೊಂದುವ ಮೂಲಕ ಅವರ ಹಲವು ನಿವೇಶನಗಳನ್ನು ಒಂದೇ ನಿವೇಶನವೆಂದು ಪರಿಗಣಿಸಲು ಅನುವು ಮಾಡಿಕೊಡುತ್ತದೆ. ಇದು ಸ್ವತಃ ಖಾಸಗಿ ಉದ್ದೇಶವನ್ನಾಗಿ ಮಾಡುತ್ತದೆ. ಮತ್ತು ಕೋರಿಕೆಯು ಪರಿಗಣಿಸಲು ಅನರ್ಹವಾಗುತ್ತದೆ,’ ಎಂದು ಪ್ರಾದೇಶಿಕ ಆಯುಕ್ತರು ವಿವರಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಖಾಸಗಿ ಸರ್ವೇ ನಂಬರ್‍‌ಗಳಲ್ಲಿನ ಜಮೀನಿನಲ್ಲಿ ಪ್ರಸ್ತಾಪಿಸಿರುವ ರಸ್ತೆಯ ಪ್ರದೇಶವನ್ನು ಸರ್ಕಾರಕ್ಕೆ ಪರಿತ್ಯಾಜನೆ (Relinquish) ಮಾಡಬೇಕು. ಆ ನಂತರ ಸರ್ವೇ ನಂಬರ್‍‌ 174ರಲ್ಲಿ ಒಳಗೊಂಡಿರುವ ಗೋಮಾಳ ಮತ್ತು ಅರಣ್ಯ ಜಮೀನಿನ ಗಡಿಯನ್ನು ಜಂಟಿ ಸರ್ವೇ ನಡೆಸಬೇಕು. ನಂತರ ಪ್ರಸ್ತಾವನೆಯನ್ನು ಪರಿಗಣಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಪ್ರಾದೇಶಿಕ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದ್ದಾರೆ.

Hot this week

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಸಿಎಂ, ಡಿಸಿಎಂ ಸೇರಿ ಐವರು ಸಚಿವರ ವಸತಿಗೃಹ ನವೀಕರಣ, ದುರಸ್ತಿ, ಪೀಠೋಪಕರಣ, ಗೃಹಪಯೋಗಿ ವಸ್ತುಗಳ ಖರೀದಿ; 3 ವರ್ಷದಲ್ಲಿ 19.01 ಕೋಟಿ ರು ವೆಚ್ಚ

ಬೆಂಗಳೂರು; ಸರ್ಕಾರಿ ಶಾಲೆ, ಸರ್ಕಾರಿ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ಇರುವ ಕೊಠಡಿಗಳ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...
Please Scan to make Your Contribution

Topics

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ; ವೆಚ್ಚ ಸಾಲದು, ಹೆಚ್ಚಿದ ಸಂಪನ್ಮೂಲ ಅಂತರ, ಬಜೆಟ್‌ನಲ್ಲಿ ಕುಸಿತ, ಖಾಸಗೀಕರಣಕ್ಕೆ ದಾರಿಯಾಗಲಿದೆಯೇ?

ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ...

ರಾಷ್ಟ್ರೀಯ ಪರೀಕ್ಷೆಗಳಿಂದಾಗಿ ಎಸ್‌ ಸಿ, ಎಸ್‌ ಟಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಕುಸಿತ, ನಗರ ವಿಶ್ವವಿದ್ಯಾಲಯಗಳೊಂದಿಗೆ ಗ್ರಾಮೀಣ ಕಾಲೇಜುಗಳ ವಿಲೀನಕ್ಕೆ ಆಯೋಗ ಅಸಮ್ಮತಿ

ಬೆಂಗಳೂರು;  ಸಾಮಾನ್ಯ ಶಿಕ್ಷಣ ಕೋರ್ಸ್‌ಗಳಲ್ಲಿ ರಾಷ್ಟ್ರೀಯ ಪ್ರವೇಶಗಳ ಪರೀಕ್ಷೆಗಳನ್ನು ಪರಿಚಯಿಸಿದ್ದರಿಂದಾಗಿ ಪರಿಶಿಷ್ಟ...

Related Articles

Popular Categories

error: Content is protected !!