Friday | August 21, 2026 |

ರಾಮ್ ಲಲ್ಲಾನ ವಿಡಿಯೋ ಪ್ರಸ್ತುತಿಪಡಿಸಿದ್ದ ಶೀಟೇಲ್ಸ್‌ಗೆ 4(ಜಿ) ವಿನಾಯಿತಿ; ಮತದಾರರ ಜಾಗೃತಿಗೆ 49 ಲಕ್ಷ ವೆಚ್ಚ

ಬೆಂಗಳೂರು; ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತದಾರರ ಜಾಗೃತಿ, ಮತದಾರರನ್ನು ಸೆಳೆಯಲು ಶೀತಲ್‌ ಶೆಟ್ಟಿ ಅವರ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಸೇವೆ ಪಡೆಯಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಂದಾಗಿದೆ.

ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಮೂರು ತಿಂಗಳವರೆಗೆ ಸೇವೆ ಪಡೆಯಲಿರುವ ಸರ್ಕಾರವು ಇದಕ್ಕಾಗಿ 49.00 ಲಕ್ಷ ರು. ವೆಚ್ಚ ಮಾಡುತ್ತಿದೆ. ಈ ಸಂಬಂಧ 2024ರ ಫೆ.28ರಂದು ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಧಿಸೂಚನೆಯಲ್ಲೇನಿದೆ?

ಸಾರ್ವತ್ರಿಕ ಲೋಕಸಭೆ ಚುನಾವಣೆ 2024ರ ಸಂದರ್ಭದಲ್ಲಿ ಮತದಾರರ ಜಾಗೃತಿಗಾಗಿ ಹಾಗೂ ಮತದಾರರನ್ನು ಹಾಗೂ ನಗರವಾಸಿಗಳನ್ನು ಸೆಳೆಯಲು ಇನ್‌ಸ್ಟಾಗ್ರಾಂ, ಫೇಸ್‌ ಬುಕ್‌, ಟ್ವಿಟರ್‌, ಯೂಟ್ಯೂಬ್‌, ಸೋಷಿಯಲ್ ಮೀಡಿಯಾ ಜಾಲತಾಣ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲು ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಸಂಸ್ಥೆಯ ಸೇವೆಯನ್ನು ಪಡೆಯಲು 49,00,540 ರು. ವೆಚ್ಚದಲ್ಲಿ ಮೂರು ತಿಂಗಳ ಅವಧಿಗೆ 2024ರ ಮಾರ್ಚ್‌ 1ರಿಂದ 2024ರ ಮೇ 31ರವರೆಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಿನಾಯಿತಿ ನೀಡಿದೆ.

ಇದೇ ಏಪ್ರಿಲ್‌ ಮತ್ತು ಜೂನ್‌ನಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿವೆ ಎಂದು ಗೊತ್ತಿದ್ದರೂ ಸಹ ಸರ್ಕಾರವು ಈ ಸಂಬಂಧ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಅಲ್ಲದೇ ಯಾವುದೇ ಟೆಂಡರ್‌ ಆಗಲೀ, ಅಲ್ಪಾವಧಿ ಟೆಂಡರ್‌, ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ)ಯನ್ನೂ ಆಹ್ವಾನಿಸಿರಲಿಲ್ಲ ಎಂದು ಗೊತ್ತಾಗಿದೆ.

ಮೂಲತಃ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌, ಸಿನಿಮಾ ಸೇರಿದಂತೆ ಮನರಂಜನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಮತದಾರರ ಜಾಗೃತಿ ಕುರಿತು ಸರ್ಕಾರದ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿಲ್ಲ. ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ, ವಿವರಗಳಿಲ್ಲ.

ಶೀತಲ್‌ ಶ್ರೀಧರ್‌ ಶೆಟ್ಟಿ ಎಂಬುವರು ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷವೆಂದರೇ ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಅಯೋಧ್ಯೆಯ ರಾಮ ಲಲ್ಲಾನ ಕುರಿತು ವಿಡಿಯೋವನ್ನು ಜನವರಿ 2024ರಲ್ಲಿ ಪ್ರಸ್ತುತಿ ಪಡಿಸಿತ್ತು.

‘ಪ್ರತಿ ಸ್ವರದಲ್ಲಿ ಸಂಭ್ರಮ, ಆಲಾಪದಲ್ಲಿ ಜೋಗುಳ, ನೂರಾರು ಕಾಲ ಕಾದು ಕುಳಿತ ಜನರಿಗೆ ಎದ್ದು ಕುಣಿದು ಜೈ ಶ್ರೀ ರಾಮ್ ಎನ್ನುತ್ತಾ ಅದ್ಧೂರಿಯಾಗಿ ಆಯೋಧ್ಯೆಗೆ ರಾಮ ಲಲ್ಲಾನನ್ನು ಈ ಹಾಡಿನೊಂದಿಗೆ ಬರ ಮಾಡಿಕೊಳ್ಳುವ ಸಮಯ. ಘರ್ಜಿಸಿ ಹೇಳಿ, ಜೈ ಶ್ರೀ ರಾಮ್!!,’ ಎಂದು ಪ್ರಚುರಪಡಿಸಿರುವುದು ಕಂಪನಿಯ ಸಾಮಾಜಿಕ ಜಾಲತಾಣಗಳಿಂದ ಕಂಡು ಬಂದಿದೆ.

Hot this week

2 ಕಂಪನಿಗಳಿಂದ 400 ಕೋಟಿ ರು ವಹಿವಾಟು ಆರೋಪ; ಐಜಿಪಿ ಚಂದ್ರಶೇಖರ್ ಪ್ರಕರಣದಲ್ಲಿ ವರದಿ ನೀಡಲು ಸರ್ಕಾರದ ನಿರ್ದೇಶನ

ಬೆಂಗಳೂರು; ಸರ್ಕಾರದ ಪೂರ್ವಾನುಮತಿ ಪಡೆಯದೇ ಹಾಗೂ ಸರ್ಕಾರಕ್ಕೆ ವರದಿಯನ್ನು ಸಲ್ಲಿಸದೇ ಕುಟುಂಬ...

ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ; ಹಲವು ಟೆಂಡರ್‍‌ಗಳಿಗೆ ಬಿಡ್ಡರ್‍‌ಗಳೇ ಇಲ್ಲ, ಮರು ಟೆಂಡರ್‍ ಹಿಂದಿದೆಯೇ ಲಂಚಾವತಾರ?

ಬೆಂಗಳೂರು; ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ತೀವ್ರ ಕೊರತೆ ಕಾಣಿಸಿಕೊಂಡಿದೆ....

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...
Please Scan to make Your Contribution

Topics

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

Related Articles

Popular Categories

error: Content is protected !!