Wednesday | October 14, 2026 |

ಲಸಿಕೆ ಸೇವಾ ಶುಲ್ಕ ಪರಿಷ್ಕರಣೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಸಿದ್ದರಾಮಯ್ಯ ತರಾಟೆ

ಬೆಂಗಳೂರು; ಲಸಿಕೆಯ ಡೋಸ್‌ವೊಂದಕ್ಕೆ ವಿಧಿಸಿದ್ದ ಸೇವಾ ಶುಲ್ಕ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರವು ಕಾರ್ಪೋರೇಟ್‌ ವಲಯದ ಮತ್ತು ಖಾಸಗಿ ಆಸ್ಪತ್ರೆಗಳ ಮುಂದೆ ಮಂಡಿಯೂರಿದೆ ಎಂದು ‘ದಿ ಫೈಲ್‌’ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದನಿ ಎತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಹಿತಾಸಕ್ತಿ ಕಾಪಾಡಲು ಮುಂದಾದ ರಾಜ್ಯ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೇವಾ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡುವ ಸಂಬಂಧ ಫನಾ ಅಧ್ಯಕ್ಷ ಡಾ ಎಚ್‌ ಎಂ ಪ್ರಸನ್ನ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ 2021ರ ಮೇ 23ರಂದು ಪತ್ರ ಬರೆದಿದ್ದರು.

‘ಸರಬರಾಜುದಾರರಿಂದ 4-5 ಪಟ್ಟು ಹೆಚ್ಚಳ ದರದಲ್ಲಿ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ. ಲಸಿಕೆಗಳ ಸುರಕ್ಷತೆ ಮತ್ತು ಸಾಗಾಣಿಕೆಗೆ ಹೆಚ್ಚಿನ ವೆಚ್ಚವಾಗಲಿದೆ. ಅಲ್ಲದೆ ಇತರೆ ವೆಚ್ಚಗಳನ್ನೂ ಭರಿಸಬೇಕಿರುವ ಕಾರಣ ಸೇವಾ ಶುಲ್ಕವನ್ನು ಪರಿಷ್ಕರಿಸಿ 300 ರು.ಗಳಿಗೆ ಹೆಚ್ಚಿಸಬೇಕು,’ ಎಂದು ಫನಾ ಅಧ್ಯಕ್ಷ ಡಾ ಎಚ್‌ ಎಂ ಪ್ರಸನ್ನ ಅವರು ಕೋರಿದ್ದರು. ಈ ಕುರಿತು ‘ದಿ ಫೈಲ್‌’ ಮೇ 26ರಂದು ವರದಿ ಪ್ರಕಟಿಸಿತ್ತು.

ಲಸಿಕೆ ದರ ಏರಿಕೆ!; ಸೇವಾ ಶುಲ್ಕ ಪರಿಷ್ಕರಿಸಿ 300 ರು. ಹೆಚ್ಚಳಕ್ಕೆ ಒತ್ತಡ

ಫನಾ ಕೋರಿಕೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತಳೆಯದಿದ್ದರೂ ಬಹುತೇಕ ಕಾರ್ಪೋರೇಟ್‌ ಆಸ್ಪತ್ರೆಗಳು ಡೋಸ್‌ವೊಂದಕ್ಕೆ 1,250 ರು. ಶುಲ್ಕ ವಸೂಲು ಮಾಡಿದ್ದವು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಒತ್ತಡಕ್ಕೆ ಮಣಿದಿತ್ತು. ಈ ಸಂಬಂಧ ಸೇವಾ ಶುಲ್ಕವನ್ನು 100 ರು.ಗೆ ಹೆಚ್ಚಳ ಮಾಡಿ ಮೇ 27ರಂದು ಆದೇಶ ಹೊರಡಿಸಿತ್ತು. ಈ ಕುರಿತೂ ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಲಸಿಕೆ ಸೇವಾ ಶುಲ್ಕ ಹೆಚ್ಚಳ; ಕಾರ್ಪೋರೇಟ್‌ ಆಸ್ಪತ್ರೆಗಳ ಮುಂದೆ ಮಂಡಿಯೂರಿದ ಸರ್ಕಾರ

ವರದಿ ಪ್ರಕಟವಾದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ. ‘ಖಾಸಗಿ ಆಸ್ಪತ್ರೆಗಳು ನೀಡುವ ಲಸಿಕೆಗೆ ಸೇವಾ ಶುಲ್ಕವನ್ನು 100 ರು.ಗಳಿಂದ 200ಕ್ಕೆ ಹೆಚ್ಚಿಸಿರುವ ರಾಜ್ಯದ ಬಿಜೆಪಿ ಸರ್ಕಾರ ಯಾರ ಹಿತರಕ್ಷಣೆ ಮಾಡುತ್ತಿದೆ, ರಾಜ್ಯದ ಜನರದ್ದೋ ಖಾಸಗಿ ಆಸ್ಪತ್ರೆಗಳದ್ದೋ ಎಂದು ಪ್ರಶ್ನಿಸಿದ್ದಾರೆ.

ಲಸಿಕಾಕರಣ ಬೂತ್‌ಗಳನ್ನು ತೆರೆಯಬೇಕು. ಲಸಿಕಾಕರಣದ ಸ್ಥಳದಲ್ಲಿ ಸಾಕಷ್ಟು ಅಂತರ ಕಾಪಾಡಲು ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವುದು, ಲಸಿಕೆ ಖರೀದಿಸಲು ಮುಂಚಿತವಾಗಿ ಮೊತ್ತ ಪಾವತಿಸುವುದು ಮತ್ತು ಹಲವು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕಾಗಿರುತ್ತದೆ. ಅಲ್ಲದೆ ಇನ್ನು ಹಲವು ಕಾರ್ಯಗಳಿಗೆ ಹೆಚ್ಚಿನ ಮೊತ್ತ ವ್ಯಯವಾಗುತ್ತದೆ. ಹೀಗಾಗಿ ಸೇವಾ ಶುಲ್ಕವನ್ನು ಕನಿಷ್ಠ 300 ರು.ಗಳಿಗೆ ಹೆಚ್ಚಿಸಲು ಮನವಿ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಸಂಘವು ಮನವಿ ಮಾಡಿತ್ತು.

ಲಸಿಕಾಕರಣಕ್ಕೆ ಚಾಲನೆ ನೀಡಿದ್ದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಯಂತೆ ಪ್ರತಿ ಡೋಸ್‌ಗೆ 100 ರು.ನಂತೆ ಮಾತ್ರ ಸೇವಾ ಶುಲ್ಕ ಪಡೆಯಬೇಕು ಎಂದು 2021ರ ಮೇ 3ರಂದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿತ್ತು. ಆದರೆ ಬಹುತೇಕ ಆಸ್ಪತ್ರೆಗಳು ಈ ಸುತ್ತೋಲೆಯನ್ನು ಪಾಲಿಸಿರಲಿಲ್ಲ. ಬದಲಿಗೆ ಸೇವಾ ಶುಲ್ಕ ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿದಿದ್ದವು.

Hot this week

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

ಸ್ಟಿಂಗ್ ಆಪರೇಷನ್‌; ಅಸಲು ದಾವೆ ಬೆನ್ನಲ್ಲೇ ಪೊಲೀಸ್‌ ಆಯುಕ್ತರಿಗೂ ದೂರು ಸಲ್ಲಿಸಿ ಯಾವ ಭಯವೂ ನನಗಿಲ್ಲವೆಂದ ಸಿದ್ದರಾಮಯ್ಯ

ಬೆಂಗಳೂರು; ಯೂ ಟ್ಯೂಬ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು...

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ...

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...
Please Scan to make Your Contribution

Topics

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು...

Related Articles

Popular Categories

error: Content is protected !!