Thursday | July 16, 2026 |

‘ದಿ ಫೈಲ್‌’ ವರದಿ ಪರಿಣಾಮ; ತಪಾಸಣೆಗೆ ಸಂಚಾರಿ ಘಟಕಗಳನ್ನು ತೆರೆದ ಸರ್ಕಾರ

ಬೆಂಗಳೂರು; ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 313ಕ್ಕೆ ಏರಿಕೆಯಾಗಿರುವ ಬೆನ್ನಲ್ಲೇ ತಪಾಸಣೆ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕಡೆಗೂ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ. ಪ್ರತಿ ವಾರ್ಡ್‌ನಲ್ಲಿಯೂ ಇದೀಗ ಮೊಬೈಲ್‌ ಟೆಸ್ಟಿಂಗ್‌ ಬೂತ್‌ ಆರಂಭಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದ್ದಾರೆ.

ಮಾದರಿ ಸಂಗ್ರಹಣೆಗೆ ಸಂಚಾರಿ ಘಟಕಗಳನ್ನು ಆರಂಭಿಸಲು ಸರ್ಕಾರ ಮುಂದಾಗಿಲ್ಲ ಎಂದು ‘ದಿ ಫೈಲ್‌’ 2020ರ ಏಪ್ರಿಲ್‌ 10ರಂದೇ ವರದಿ ಮಾಡಿತ್ತು. ಇದೀಗ ಪ್ರತಿ ವಾರ್ಡ್‌ನಲ್ಲಿಯೂ ಟೆಸ್ಟಿಂಗ್‌ ಬೂತ್‌ನ್ನು ಆರಂಭಿಸಿದೆ. 

ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಘಟಕಗಳನ್ನು ತೆರೆದಿರುವ ನೆರೆಯ ಕೇರಳ ರಾಜ್ಯ, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿದೆ. ಇದೇ  ಮಾದರಿಯನ್ನೇ ಪಂಜಾಬ್‌ನ ಸಂಗ್ರೂರ್‌ ಜಿಲ್ಲೆ ಅನುಸರಿಸುತ್ತಿದೆ. ಇದೀಗ ಕರ್ನಾಟಕವೂ ಈ ಸಾಲಿಗೆ ಸೇರಿದೆ. 

ಇದೇ ಏಪ್ರಿಲ್‌ ಅಂತ್ಯಕ್ಕೆ ರಾಜ್ಯದಲ್ಲಿ 10 ಸಾವಿರ  ಕೊರೊನಾ ಸೋಂಕಿತ ಪ್ರಕರಣಗಳಾದರೂ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದ ರಾಜ್ಯ ಸರ್ಕಾರ, ಸೋಂಕಿನ  ಮಾದರಿ  ಸಂಗ್ರಹಣೆ ಮತ್ತು ತಪಾಸಣೆ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ  ಸಂಚಾರಿ ಘಟಕಗಳನ್ನು ತೆರೆಯಲು ಆಸಕ್ತಿ ವಹಿಸಿರಲಿಲ್ಲ.

ಆರೋಗ್ಯ ಇಲಾಖೆ 2020ರ ಏಪ್ರಿಲ್‌ 15 ರ ಸಂಜೆ ಬಿಡುಗಡೆಗೊಳಿಸಿದ್ದ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆವಿಗೆ ಪರೀಕ್ಷೆಗಾಗಿ 15,444 ಮಾದರಿಗಳನ್ನು ಸಂಗ್ರಹಿಸಿದ್ದರೆ, ಈ ಪೈಕಿ 12,483 ಮಾದರಿಗಳನ್ನು ಪರೀಕ್ಷಿಸಿತ್ತು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸಲು ರಾಜ್ಯ ಸರ್ಕಾರ  ಆಸ್ಥೆ ವಹಿಸದೇ ನಿರ್ಲಕ್ಷ್ಯ ವಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲಿದೆ ಎಂದು ‘ದಿ ಫೈಲ್‌’ 2020ರ ಏಪ್ರಿಲ್‌ 10ರಂದೇ ಸರ್ಕಾರದ ಗಮನಸೆಳೆದಿತ್ತು. 

ಪ್ರಾಥಮಿಕ ಅರೋಗ್ಯ ಕೇಂದ್ರಗಳಿಂದಲೂ ಪಿಪಿಇ ಕಿಟ್‌ಗಳಿಗೆ  ಸಾಕಷ್ಟು ಬೇಡಿಕೆ  ಇದ್ದರೂ ಪೂರೈಕೆ ಮಾಡುವಲ್ಲಿ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ, ಇದರ ಬೇಡಿಕೆ ಮತ್ತು ಅಗತ್ಯತೆಯನ್ನು ಕಡಿಮೆಗೊಳಿಸುವ ಸಂಚಾರ ಘಟಕಗಳನ್ನೇಕೆ ತೆರೆಯಬಾರದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. 

ಆದರೂ ರಾಜ್ಯ ಸರ್ಕಾರದ ವಿಶೇಷವಾಗಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಟಾಸ್ಕ್‌ಪೋರ್ಸ್‌ನಲ್ಲಿರುವ ತಜ್ಞರು  ಇದರ ಬಗ್ಗೆ ಗಮನ ಹರಿಸಿಲ್ಲವೇಕೆ, ಗಮನಹರಿಸಿದ್ದರೆ ಸಂಚಾರಿ ಘಟಕಗಳನ್ನು ತೆರೆಯುವ ಮೂಲಕ ಮಾದರಿಗಳ  ಸಂಗ್ರಹಣೆ ಮತ್ತು  ಪರೀಕ್ಷೆ  ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲವೇಕೆ ಎಂಬ ಪ್ರಶ್ನೆಗಳು ಸಹಜವಾಗಿ ಕೇಳಿ ಬಂದಿದ್ದವು. 

ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಇದೇ ಮಾದರಿಯ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸೋಂಕಿನ ಮಾದರಿ ಸಂಗ್ರಹಣೆಗೆ ಸಂಚಾರಿ ಘಟಕಗಳನ್ನು ಕೇರಳ ರಾಜ್ಯವೇ ಅಭಿವೃದ್ಧಿಪಡಿಸಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾದರಿ  ಸಂಗ್ರಹಣಾ ಘಟಕಗಳನ್ನು ಅಭಿವೃದ್ಧಿಪಡಿಸಿರುವ ಕೇರಳ  ಸರ್ಕಾರ, ಎರ್ನಾಕುಲಂನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ ಆವರಣದಲ್ಲಿ 2 ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸುತ್ತಿದೆ. 

ಕೇವಲ 40 ಸಾವಿರ ರೂ. ವೆಚ್ಚದಲ್ಲಿ ಅದೂ ಕೇವಲ 2 ದಿನದಲ್ಲಿ ಈ ಸಂಚಾರಿ ಮಾದರಿ ಸಂಗ್ರಹಣಾ ಘಟಕವನ್ನು ಸ್ಥಾಪಿಸಬಹುದು. ಈ ಘಟಕದ ಒಳಗೆ ಕುಳಿತು ಆರೋಗ್ಯ ಇಲಾಖೆ ತಜ್ಞರು ಮಾದರಿಗಳನ್ನು ಸಂಗ್ರಹಿಸುತ್ತಾರೆ. ವೈದ್ಯರಿಗೂ ಇದು  ಅನುಕೂಲಕರ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದವು. 

ವೈದ್ಯಕೀಯ ಸಿಬ್ಬಂದಿ ಗಾಜಿನಿಂದ ಆವೃತವಾಗಿರುವ ಘಟಕದ ಒಳಗೆ ಕುಳಿತುಕೊಳ್ಳುವುದರಿಂದ ಅವರಿಗೆ ಸೋಂಕು ತಗುಲುವ ಆತಂಕ ಇರುವುದಿಲ್ಲ. ಗ್ಲೌಸ್‌ ಮೂಲಕ ಕಾರ್ಯನಿರ್ವಹಿಸುವ ಕಾರಣ, ಕೈ ಆಡಿಸೋದಕ್ಕೂ ಸೂಕ್ತ ಸ್ಥಳಾವಕಾಶ ಲಭ್ಯ ಇರುತ್ತೆ. ಹೊರಗಡೆಯೇ ಇರುವ ಕಂಟೇನರ್‌ನಲ್ಲಿ ಪ್ರತಿಯೊಬ್ಬರ ಸ್ಯಾಂಪಲ್‌ ಹಾಕಲು ಸ್ಥಳಾವಕಾಶವಿದೆ. 

ಇನ್ನು, ಪಂಜಾಬ್‌ನ ಸಂಗ್ರೂರ್ ಜಿಲ್ಲಾಡಳಿತವೂ ಸಂಚಾರಿ ಘಟಕಗಳನ್ನು ತೆರೆದಿದೆ. ಶಂಕಿತ ರೋಗಿಗಳ ಮಾದರಿಗಳನ್ನು ತೆಗೆದುಕೊಳ್ಳುವ  ಅರೋಗ್ಯ ಸಿಬ್ಬಂದಿಯ ಸುರಕ್ಷತೆಯೂ ಈ ಸಂಚಾರಿ ಘಟಕದಲ್ಲಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ಥೋರಿ ಸುದ್ದಿಸಂಸ್ಥೆಯೊಂದಿಗೆ ಮಾಹಿತಿ  ಹಂಚಿಕೊಂಡಿದ್ದರು. 

ಜಾಗತಿಕ ಮಾನದಂಡಗಳ ಪ್ರಕಾರವೇ ಸಂಚಾರಿ ಘಟಕವನ್ನು ತೆರೆಯಲಾಗಿದೆ. 25,000 ರು.ಗಳಿಂದ 30,000 ರು.ಗಳ ವೆಚ್ಚದಲ್ಲಿ ಘಟಕವನ್ನು ಆರಂಭಿಸಬಹುದು.  ಉಪಕರಣವನ್ನು ವಾಹನದ ಮೇಲೂ ಅಳವಡಿಸಬಹುದು. ಅಲ್ಲದೆ  ಮಾದರಿಗಳನ್ನು ತೆಗೆದುಕೊಳ್ಳಲು  ಯಾವುದೇ ಸ್ಥಳಕ್ಕೆ ಬೇಕಾದರೂ ಸ್ಥಳಾಂತರಿಸಬಹುದು. ಜಿಲ್ಲಾ ಆಸ್ಪತ್ರೆ ಮತ್ತು ಅಗತ್ಯ ಸ್ಥಳಗಳಲ್ಲಿ ಘಟಕಗಳನ್ನು ತೆರೆಯಬಹುದು ಎಂದು ಸಂಗ್ರೂರ್‌ನ ಜಿಲ್ಲಾಧಿಕಾರಿ ಘನಶ್ಯಾಮ್‌  ಥೋರಿ  ಸುದ್ದಿ ಸಂಸ್ಥೆಯೊಂದಕ್ಕೆ ವಿವರಿಸಿದ್ದರು.

ಸಂಚಾರಿ ಘಟಕಗಳನ್ನು ತೆರೆಯುವುದರಿಂದ ಪಿಪಿಇ ಕಿಟ್‌,  ಕೈಗವಸುಗಳು, ಮುಖಗವಸುಗಳ ಬೇಡಿಕೆಯನ್ನು ಕಡಿಮೆಗೊಳಿಸುತ್ತವೆ. ಶಂಕಿತ ಹಾಗೂ ರೋಗಿ ನೇರವಾಗಿ ವೈದ್ಯಕೀಯ ಸಿಬ್ಬಂದಿ ಜತೆ ನೇರ ಸಂಪರ್ಕದಲ್ಲಿರುವುದಿಲ್ಲ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ಸಂಚಾರಿ ಘಟಕಗಳು ಸರಳವಾಗಿದೆಯಲ್ಲದೆ, ಸಾಮಾಜಿಕ  ಅಂತರವನ್ನು ಕಾಯ್ದುಕೊಂಡು ಮಾದರಿ  ಸಂಗ್ರಹವನ್ನು ಸುಲಭಗೊಳಿಸುತ್ತವೆ ಎಂದೂ ವಿವರಿಸಿದ್ದರು. 

ದೇಶದಲ್ಲಿ ಸಾಕಷ್ಟು ಪರೀಕ್ಷೆಗಳು ನಡೆಯುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಏಪ್ರಿಲ್‌ 14ರೊಳಗೆ ಇಡೀ ದೇಶಾದ್ಯಂತ ಕನಿಷ್ಠ 2.5 ಲಕ್ಷ  ಮಂದಿಯನ್ನು ಪರೀಕ್ಷಿಸಲು ಕೇಂದ್ರ  ಸರ್ಕಾರ ಉದ್ದೇಶಿಸಿದೆ. ಈ ಕುರಿತು 2020ರ ಏಪ್ರಿಲ್‌ 9ರಂದು ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ  ನಡೆದ ವಿಡಿಯೋ ಕಾನ್ಫರೆನ್ಸಿಂಗ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ನಡೆಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. 

Hot this week

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!