Tuesday | May 26, 2026 |

ಕೋವಿಡ್‌ ಹೊಡೆತಕ್ಕೆ ಬ್ಯಾಂಕ್‌ಗಳು ತತ್ತರ; ಕೃಷಿ ವಲಯದಲ್ಲಿ 21,773.89 ಕೋಟಿ ಎನ್‌ಪಿಎ

ಬೆಂಗಳೂರು; ಕೋವಿಡ್‌ ಎರಡನೇ ಅಲೆ ಆರಂಭವಾಗಿದ್ದ (2021ರ ಮಾರ್ಚ್‌ ಅಂತ್ಯಕ್ಕೆ) ಹೊತ್ತಿನಲ್ಲೇ ರಾಜ್ಯದಲ್ಲಿ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವು 54,756.47 ಕೋಟಿ ರು. ನಷ್ಟಿತ್ತು ಎಂಬುದು ಇದೀಗ ಬಹಿರಂಗವಾಗಿದೆ. ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ ಲಾಕ್‌ಡೌನ್‌ನಿಂದಾಗಿ ಉದ್ಭವಿಸಿದ ಆರ್ಥಿಕ ವಲಯದಲ್ಲಿನ ಬಿಕ್ಕಟ್ಟು, ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

2020ರ ಡಿಸೆಂಬರ್‌ 31ರ ಅಂತ್ಯಕ್ಕೆ ಅನುತ್ಪಾದಕ ಆಸ್ತಿ ಪ್ರಮಾಣವು 48,722.17 ಕೋಟಿಯಷ್ಟಿತ್ತು. 2021ರ ಮಾರ್ಚ್‌ 31ರ ಅಂತ್ಯಕ್ಕೆ 54,756.47 ಕೋಟಿಯಷ್ಟಾಗಿದೆ. ಕೇವಲ ಮೂರೇ ಮೂರು ತಿಂಗಳಲ್ಲಿ 6,0343.3 ಕೋಟಿಯಷ್ಟು ಹೆಚ್ಚಳ ಕಂಡಿರುವುದು ಕಂಡು ಬಂದಿದೆ.

2020ರ ಡಿಸೆಂಬರ್‌ ಮತ್ತು 2021ರ ಮಾರ್ಚ್‌ 31ರ ಅಂತ್ಯಕ್ಕೆ ಬ್ಯಾಂಕ್‌ಗಳಲ್ಲಿನ ಅನುತ್ಪಾದಕ ಆಸ್ತಿ ಪ್ರಮಾಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿವೆ. ಸಮಿತಿ ಸಭೆಯ ನಡವಳಿ ಮತ್ತು ಬ್ಯಾಂಕ್‌ವಾರು ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಕೃಷಿ, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ವಲಯದ ಕೈಗಾರಿಕೆ, ವಸತಿ, ಶಿಕ್ಷಣ, ಇತರೆ ಆದ್ಯತೆ ಮತ್ತು ಆದ್ಯತೆಯೇತರ ವಲಯದಲ್ಲಿ ಒಟ್ಟು (2948205 ಖಾತೆಗಳು) 54,756.46 ಕೋಟಿಯಷ್ಟು ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ 21,773.89 ಕೋಟಿ ಎನ್‌ಪಿಎ ಇರುವುದು ದಾಖಲೆಯಿಂದ ತಿಳಿದು ಬಂದಿದೆ.

ಅದೇ ರೀತಿ 2021ರ ಮಾರ್ಚ್‌ ಅಂತ್ಯಕ್ಕೆ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ವಲಯದಲ್ಲಿ (ಎಂಎಸ್‌ಎಂಇ) 11,652.59 ಕೋಟಿ ರು., ವಸತಿ ವಲಯದಲ್ಲಿ 1,682.88 ಕೋಟಿ, ಶಿಕ್ಷಣ ವಲಯದಲ್ಲಿ 510.02 ಕೋಟಿ, ಇತರೆ ಆದ್ಯತೆ ವಲಯದಲ್ಲಿ 4,293.99 ಕೋಟಿ, ಆದ್ಯತೆಯೇತರ ವಲಯದಲ್ಲಿ 14,843.1 ಕೋಟಿ ರು.ಗಳಷ್ಟು ಎನ್‌ಪಿಎ ಇರುವುದು ದಾಖಲೆಯಿಂದ ಗೊತ್ತಾಗಿದೆ.

ಕಳೆದ ವರ್ಷಕ್ಕೆ (2020) ಹೋಲಿಸಿದರೆ ಕೃಷಿ ವಲಯದಲ್ಲಿ ಎನ್‌ಪಿಎ ಪ್ರಮಾಣ (18,111.58 ಕೋಟಿ), ಒಂದು ವರ್ಷದಲ್ಲಿ 3,662.31 ಕೋಟಿ ಹೆಚ್ಚಳವಾಗಿದೆ. ಎಂಎಸ್‌ಎಂಇ ವಲಯದಲ್ಲಿ (8,425.96 ಕೋಟಿ), 3,226.63 ಕೋಟಿ, ವಸತಿ ವಲಯದಲ್ಲಿ (1,208.35 ಕೋಟಿ) 474.53 ಕೋಟಿ, ಶಿಕ್ಷಣದಲ್ಲಿ (498.49 ಕೋಟಿ)11.53 ಕೋಟಿ, ಇತರೆ ವಲಯದಲ್ಲಿ (6,351.92 ಕೋಟಿ) 2,057.93 ಕೋಟಿ, ಆದ್ಯತೆಯೇತರ ವಲಯದಲ್ಲಿ (14,125.87 ಕೋಟಿ) 713.23 ಕೋಟಿ ಸೇರಿದಂತೆ ಒಟ್ಟು 6,0304.3 ಕೋಟಿ ರು. ಹೆಚ್ಚಳವಾಗಿರುವುದು ಕಂಡು ಬಂದಿದೆ.

ಕೃಷಿ ವಲಯ (ಬ್ಯಾಂಕ್‌ವಾರು) ಎನ್‌ ಪಿ ಎ ವಿವರ

ಕೆನರಾ ಬ್ಯಾಂಕ್‌ – 6,503.63 ಕೋಟಿ, ಸ್ಟೇಟ್‌ ಬ್ಯಾಂಕ್‌ ಅಫ್ ಇಂಡಿಯಾ 3,223.42 ಕೋಟಿ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ- 895.44 ಕೋಟಿ, ಬ್ಯಾಂಕ್‌ ಆಫ್‌ ಬರೋಡ – 681.90 ಕೋಟಿ, ಬ್ಯಾಂಕ್‌ ಆಫ್‌ ಇಂಡಿಯಾ – 359.38 ಕೋಟಿ, ಬ್ಯಾಂಕ್‌ ಅಫ್‌ ಮಹಾರಾಷ್ಟ್ರ – 76.42 ಕೋಟಿ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ- 95.01 ಕೋಟಿ, ಇಂಡಿಯನ್‌ ಬ್ಯಾಂಕ್‌- 31.54 ಕೋಟಿ,ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌- 170.86 ಕೋಟಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌- 149.72 ಕೋಟಿ, ಪಂಜಾಬ್‌ ಸಿಂಡ್‌ ಬ್ಯಾಂಕ್‌ – 0.85 ಕೋಟಿ. ಯುಕೋ ಬ್ಯಾಂಕ್‌ – 52.90 ಕೋಟಿ ರು. ಎನ್‌ಪಿಎ ಇರುವುದು ದಾಖಲೆಯಿಂದ ತಿಳಿದು ಬಂದಿದೆ.

ಖಾಸಗಿ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ವಿವರ;  ಐಡಿಬಿಐ- 65.43 ಕೋಟಿ, ಕರ್ನಾಟಕ ಬ್ಯಾಂಕ್‌- 303.13 ಕೋಟಿ, ಕೋಟಕ್‌ ಮಹೀಂದ್ರಾ – 17.43 ಕೋಟಿ, ಕ್ಯಾಥರಿಕ್‌ ಸಿರಿಯನ್‌ ಬ್ಯಾಂಕ್‌ – 161.53 ಕೋಟಿ, ಸಿಟಿಯೂನಿಯನ್‌ ಬ್ಯಾಂಕ್‌ – 3.69 ಕೋಟಿ, ಧನಲಕ್ಷ್ಮಿ ಬ್ಯಾಂಕ್‌ – 0.08 ಕೋಟಿ, ಫೆಡರಲ್‌ ಬ್ಯಾಂಕ್‌ – 34.03 ಕೋಟಿ, ಜೆ ಅಂಡ್‌ ಕೆ ಬ್ಯಾಂಕ್- 8.27 ಕೋಟಿ, ಕರೂರ್‌ ವೈಶ್ಯ ಬ್ಯಾಂಕ್ – 17.86 ಕೋಟಿ, ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ – 160.01 ಕೋಟಿ, ರತ್ನಾಕರ್‌ ಬ್ಯಾಂಕ್‌- 232.78 ಕೋಟಿ, ಸೌತ್‌ ಇಂಡಿಯನ್‌ ಬ್ಯಾಂಕ್‌ – 13.58 ಕೋಟಿ, ಇಂಡಸ್‌ಲಡ್‌ ಬ್ಯಾಂಕ್‌- 96.33 ಕೋಟಿ, ಎಚ್‌ಡಿಎಫ್‌ಸಿ – 195.72 ಕೋಟಿ, ಆಕ್ಸಿಸ್‌ – 60.00 ಕೋಟಿ, ಐಸಿಐಸಿಐ – 78 ಕೋಟಿ, ಯೆಸ್‌ ಬ್ಯಾಂಕ್‌ – 488.32 ಕೋಟಿ, ಬಂಧನ್‌ ಬ್ಯಾಂಕ್‌ – 1.97 ಕೋಟಿ, ಡಿಸಿಬಿ ಬ್ಯಾಂಕ್‌ – 8.63 ಕೋಟಿ, ಐಡಿಎಫ್‌ಸಿ – 930.57 ಕೋಟಿ ರು.ಎನ್‌ಪಿಎ ಇರುವುದು ತಿಳಿದು ಬಂದಿದೆ.

ಸಹಕಾರಿ ವಲಯ ಬ್ಯಾಂಕ್‌ ಎನ್‌ಪಿಎ ವಿವರ; ಕಸ್ಕಾರ್ಡ್‌ – 1,840.10 ಕೋಟಿ, ಅಪೆಕ್ಸ್‌ ಬ್ಯಾಂಕ್‌ – 1,480.28 ಕೋಟಿ ರು. ಇದೆ.

ಸಣ್ಣ ಹಣಕಾಸಿನ ಸಂಸ್ಥೆಗಳ ಎನ್‌ಪಿಎ ವಿವರ; ಈಕ್ವಟಾಸ್‌ ಸ್ಮಾಲ್‌ ಫೈನಾನ್ಸ್‌ – 7.49 ಕೋಟಿ, ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ – 10.73 ಕೋಟಿ, ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ – 5.85 ಕೋಟಿ, ಇಎಸ್‌ಎಎಫ್‌ ಸ್ಮಾಲ್‌ ಫೈನಾನ್ಸ್‌ – 11.53 ಕೋಟಿ ರು. ಎನ್‌ಪಿಎ ಇರುವುದು ಗೊತ್ತಾಗಿದೆ.

ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾಗಿರುವುದರಿಂದ ಬ್ಯಾಂಕ್‌ಗಳ ದೈನಂದಿನ ಹಣಕಾಸಿನ ವಹಿವಾಟಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಜಂಟಿಯಾಗಿ ಸಾಲ ವಸೂಲಾತಿ ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ ಎಂದು ತಿಳಿದು ಬಂದಿದೆ. ಬ್ಯಾಂಕ್‌ಗಳು ಹೊಂದಿರುವ ಎನ್‌ಪಿಎ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಮತ್ತು ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರೊಂದಿಗೆ ಸಭೆ  ನಡೆಸಲು ಲೀಡ್‌ ಬ್ಯಾಂಕ್‌ಗಳ ಮುಖ್ಯಸ್ಥರು ಚಿಂತಿಸಿದ್ದಾರೆ ಎಂದು ಗೊತ್ತಾಗಿದೆ.

Hot this week

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...
Please Scan to make Your Contribution

Topics

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

Related Articles

Popular Categories

error: Content is protected !!