Monday | November 23, 2026 |

ಬಜೆಟ್‌ ಮಂಡನೆಯಾಗಿ 7 ತಿಂಗಳಾದರೂ ಒಟ್ಟು ಅನುದಾನಕ್ಕೆ ಕೇವಲ ಶೇ. 36.25ರಷ್ಟು ಮಾತ್ರ ವೆಚ್ಚ; ಖರ್ಚು ಮಾಡಲು60, 812.56 ಕೋಟಿ ರು ಬಾಕಿ ಉಳಿಸಿಕೊಂಡ ಇಲಾಖೆಗಳು

ಬೆಂಗಳೂರು; 2026-27ನೇ ಸಾಲಿನ ಆಯವ್ಯಯ ಮಂಡನೆಯಾಗಿ 7 ತಿಂಗಳಾಗಿದ್ದರೂ ಸಹ ಇಲಾಖೆಗಳು ಒಟ್ಟು ಅನುದಾನಕ್ಕೆ ಕೇವಲ ಶೇ. 36.25ರಷ್ಟು ಮಾತ್ರ ವೆಚ್ಚ ಮಾಡಿದೆ. ಇದು ಕಳೆದ ಬಾರಿ ಅಂದರೇ 2025-26ನೇ ಸಾಲಿನ ಇದೇ ಹೊತ್ತಿಗೆ ಶೇ. 36.99ರಷ್ಟು ವೆಚ್ಚ ಮಾಡಿತ್ತು. ಇದಕ್ಕೆ ಹೋಲಿಸಿದರೇ ಪ್ರಸಕ್ತ ಸಾಲಿನಲ್ಲಿ ಶೇ.  0.74ರಷ್ಟು  ಕಡಿಮೆ ಪ್ರಗತಿ ಸಾಧಿಸಿದೆ. ಬಿಡುಗಡೆ ಮಾಡಿರುವ  1,95,743.68 ಕೋಟಿ ರು ಅನುದಾನದ ಪೈಕಿ 1,34,931.12 ಕೋಟಿ ರು ಖರ್ಚು ಮಾಡಿರುವ ಇಲಾಖೆಗಳು ವೆಚ್ಚಕ್ಕೆ ಇನ್ನೂ   60, 812.56  ಕೋಟಿಯಷ್ಟು ಬಾಕಿ   ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳಡಿಯಲ್ಲಿ  ಇಲಾಖೆಗಳು ಸಾಧಿಸಿರುವ ಪ್ರಗತಿ ಕುರಿತು 2026ರ ಅಕ್ಟೋಬರ್‍‌ 27ರ ಇಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆಯಿತು. 2026ರ ಅಕ್ಟೋಬರ್‍‌ 19ರ ಅಂತ್ಯಕ್ಕೆ ಸಾಧಿಸಿರುವ ಒಟ್ಟಾರೆ ಆರ್ಥಿಕ ಪ್ರಗತಿ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ, ಎಸ್‌ಸಿಎಸ್‌ಪಿ ಟಿ ಎಸ್‌ ಪಿ ಕಾರ್ಯಕ್ರಮಗಳಲ್ಲಿನ ಪ್ರಗತಿ, ಮತ್ತು 2026-27ನೇ ಸಾಲಿನ ಆಯವ್ಯಯ ಘೋಷಣೆಗಳ ಕುರಿತು ಕಂಡಿಕೆಗಳ ಅನುಷ್ಠಾನದ ವಸ್ತುಸ್ಥಿತಿ ಕುರಿತು ಚರ್ಚಿಸಿತು.

 

 

ವಿವಿಧ ಇಲಾಖೆಗಳು ಈ ಸಭೆಗೆ ಮಂಡಿಸಿರುವ ಸಮಗ್ರ ಅಂಕಿಅಂಶಗಳು ಮತ್ತು ಪ್ರಗತಿಯ ವರದಿಯು ದಿ ಫೈಲ್‌ ಗೆ ಲಭ್ಯವಾಗಿದೆ.

2026-27ನೇ ಸಾಲಿನ ಆಯವ್ಯಯದ ಸಂದರ್ಭದಲ್ಲಿ ಒಟ್ಟಾರೆ 565 ಘೋಷಣೆಗಳನ್ನು ಮಾಡಲಾಗಿತ್ತು. ಈ ಪೈಕಿ ಹೊಸದಾಗಿ 212 ಘೋಷಣೆಗಳಿದ್ದವು. ಈ ಪೈಕಿ 120 ಘೋಷಣೆಗಳಿಗಷ್ಟೇ ಆದೇಶ ಹೊರಡಿಸಿದೆ. 92 ಘೋಷಣೆಗಳಿಗೆ ಸಂಬಂಧಿಸಿದಂತೆ ಇನ್ನೂ ಆದೇಶ ಹೊರಬಿದ್ದಿಲ್ಲ. ಮುಂದುವರೆದ ಮಾರ್ಪಾಡಿತ ವಿಭಾಗದಲ್ಲಿ  ಒಟ್ಟು 55 ಘೋಷಣೆಗಳ ಪೈಕಿ 24 ಘೋಷಣೆಗಳಿಗಷ್ಟೇ ಆದೇಶ ಹೊರಡಿಸಿರುವ ಇಲಾಖೆಗಳು ಇನ್ನೂ 31 ಘೋಷಣೆಗಳಿಗೆ ಆದೇಶ ಹೊರಡಿಸಲು ಬಾಕಿ ಇರಿಸಿರುವುದು ತಿಳಿದು ಬಂದಿದೆ.

ಮುಂದುವರೆದ ಯೋಜನೆಗಳಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಒಟ್ಟು 120 ಘೋಷಣೆಗಳ ಪೈಕಿ 75 ಘೋಷಣೆಗಳಿಗೆ ಆದೇಶ ಹೊರಡಿಸಿದ್ದರೇ ಇನ್ನು 45 ಘೋಷಣೆಗಳಿಗೆ ಆದೇಶ ಹೊರಡಿಸಲು ಬಾಕಿ ಇದೆ. ನೀತಿಗೆ ಸಂಬಂಧಿಸಿದಂತೆ 27 ಘೋಷಣೆಗಳನ್ನು ಹೊರಡಿಸಿತ್ತು. ಈ ಪೈಕಿ 11 ಘೋಷಣೆಗಳಿಗೆ ಆದೇಶ ಹೊರಡಿಸಿದ್ದರೇ ಇನ್ಣು 11 ಘೋಷಣೆಗಳಿಗೆ ಆದೇಶ ಹೊರಡಿಸಬೇಕಿದೆ. ಹೇಳಿಕೆ ವಿಭಾಗದಲ್ಲಿ ಹೊರಡಿಸಿದ್ದ ಒಟ್ಟು 151 ಘೋಷಣೆಗಳಿಗೆ ಸಂಬಂಧಿಸಿದಂತೆ 31 ಕ್ಕೆ ಮಾತ್ರ ಆದೇಶ ಹೊರಡಿಸಿದೆ. ಇನ್ನು 219 ಘೋಷಣೆಗಳಿಗೆ ಆದೇಶ ಹೊರಡಿಸಲು ಬಾಕಿ ಇದೆ.

ಒಟ್ಟು  ಖರ್ಚುವೆಚ್ಚದ ಶೇಕಡವಾರು ಎಷ್ಟು?

2026-27ನೇ ಸಾಲಿನಲ್ಲಿ  ಒಟ್ಟಾರೆ 3,65,186.59 ಕೋಟಿ ರು ಒಟ್ಟು ಅನುದಾನವನ್ನು ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ 2026ರ ಅಕ್ಟೋಬರ್‍‌ 19ರ ಅಂತ್ಯಕ್ಕೆ 1,95,743.68 ಕೋಟಿ ರು ಬಿಡುಗಡೆ ಮಾಡಿದೆ. ಕಳೆದ ವರ್ಷದ ಇದೇ ಹೊತ್ತಿಗೆ 1,66,385.76 ಕೋಟಿ ರು ಅನುದಾನ  ಬಿಡುಗಡೆ ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷದಲ್ಲಿ 28,999.92 ಕೋಟಿ ರು ಹೆಚ್ಚಿಗೆ ಅನುದಾನ ಬಿಡುಗಡೆ ಮಾಡಿತ್ತು. 2026ರ ಅಕ್ಟೋಬರ್‍‌ 19ರ ಅಂತ್ಯಕ್ಕೆ  ಒಟ್ಟಾರೆ 1,34,931.12 ಕೋಟಿ ರು ವೆಚ್ಚ ಮಾಡಿದೆ. ಇದು ಒಟ್ಟು ಅನುದಾನಕ್ಕೆ ಶೇ. 36.25ರಷ್ಟಿದೆ. ಲಭ್ಯ ಅನುದಾನಕ್ಕೆ ಶೇ 66.52ರಷ್ಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ವೆಚ್ಚದ ಪ್ರಮಾಣವು ಇದೇ ಹೊತ್ತಿಗೆ ಶೇ.36.99ರಷ್ಟಿದೆ.  ಲಭ್ಯ ಅನುದಾನಕ್ಕೆ ಶೇ. 73.60ರಷ್ಟಿತ್ತು. ಆರಂಭಿಕ ಶಿಲ್ಕ ಮತ್ತು ವಾಸ್ತವ ವೆಚ್ಚ ಮಾಡಿಯೂ ಇನ್ನೂ ವೆಚ್ಚಕ್ಕೆ 67,921.92 ಕೋಟಿ ರು ಬಾಕಿ ಇರಿಸಿಕೊಂಡಿದೆ. ವೇತನೇತರ ವಿಭಾಗದಲ್ಲಿ 31,504.87 ಕೋಟಿ ರು ವೆಚ್ಚಕ್ಕೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

ಇಲಾಖೆಗಳ ವೆಚ್ಚವೆಷ್ಟು?

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಒಟ್ಟಾರೆ 29,658.78 ಕೋಟಿ ರು ಅನುದಾನದ ಪೈಕಿ ಅಕ್ಟೋಬರ್‍‌ 19ರ ಅಂತ್ಯಕ್ಕೆ 13,197.10 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 6,821.22 ಕೋಟಿ ರು ಮಾತ್ರ ಖರ್ಚಾಗಿದೆ. ಲಭ್ಯ ಅನುದಾನಕ್ಕೆ ಶೇ. 51.69ರಷ್ಟು ಮಾತ್ರ ವೆಚ್ಚ ಮಾಡಿದೆ. ಜಲಸಂಪನ್ಮೂಲ ಇಲಾಖೆಗೆ  19,979.06 ಕೋಟಿ ರು ಮತ್ತು ಆರಂಭಿಕ ಶಿಲ್ಕು 833.61 ಕೋಟಿ ರು ಸೇರಿ 19,812.67 ಕೋಟಿ ರು ಅನುದಾನವಿತ್ತು. ಈ ಪೈಕಿ 7,767.31 ಕೋಟಿ ರು ಬಿಡುಗಡೆ ಮಾಡಿದೆ. ಇದರಲ್ಲಲಿ 4,454.08 ಕೋಟಿ ರು ವೆಚ್ಚ ಮಾಡಿದೆ. ಇದು ಲಭ್ಯ ಅನುದಾನಕ್ಕೆ ಶೇ.51.79ರಷ್ಟಿದೆ. ಕೆಕೆಆರ್‍‌ಡಿ ಇಲಾಖೆಗೆ ಆರಂಭಿಕ ಶಿಲ್ಕು ಸೇರಿ ಒಟ್ಟಾರೆ 5,196.31 ಕೋಟಿ ರು ಅನುದಾನ ಹಂಚಿಕೆಯಾಗಿದೆ. ಈ ಪೈಕಿ 3,000 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 1,083.31 ಕೋಟಿ ರು ವೆಚ್ಚ ಮಾಡಿದೆ. ಇದು ಲಭ್ಯ ಅನುದಾನಕ್ಕೆ ಶೇ. 20.85ರಷ್ಟು ಮಾತ್ರ ವೆಚ್ಚವಾಗಿದೆ.

 

 

ಕಂದಾಯ (ವಿಪತ್ತು ನಿರ್ವಹಣೆ) 13,603.42 ಕೋಟಿ ರು ಅನುದಾನ ನೀಡಿದ್ದರೇ ಅಕ್ಟೋಬರ್ 19ರ ಅಂತ್ಯಕ್ಕೆ  8,717.02 ಕೋಟಿ ರು ಬಿಡುಗಡೆ ಮಾಡಿತ್ತು. ಈ ಪೈಕಿ 5,061.88 ಕೋಟಿ ರು ಖರ್ಚು ಮಾಡಿದೆ. ಇದು ಲಭ್ಯ ಅನುದಾನಕ್ಕೆ ಶೇ. 58.07ರಷ್ಟಿದೆ. ಲೋಕೋಪಯೋಗಿ ಇಲಾಖೆಗೆ ಒದಗಿಸಿದ್ದ 10,847.67 ಕೋಟಿ ರು ಪೈಕಿ  5,706.00 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ  4,006.66 ಕೋಟಿ ರು ವೆಚ್ಚ ಮಾಡಿದೆ. ಇದು ಲಭ್ಯ ಅನುದಾನಕ್ಕೆ  ಶೇ. 70.22ರಷ್ಟಿದೆ. ಯೋಜನೆಗೆ ಇಲಾಖೆಗೆ ಆರಂಭಿಕ ಶಿಲ್ಕು 1,107.60 ಕೋಟಿ ರು ಸೇರಿ ಒಟ್ಟಾರೆ 1,981.65 ಕೋಟಿ ರು ಅನುದಾನದ ಪೈಕಿ  ಕೇವಲ 481.17 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 169.73 ಕೋಟಿ ರು ಖರ್ಚಾಗಿದೆ.  ಇದು ಲಭ್ಯ ಅನುದಾನಕ್ಕೆ ಶೇ. 10.68ರಷ್ಟಿರುವುದು ತಿಳಿದು ಬಂದಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಒಟ್ಟಾರೆ ಹಂಚಿಕೆಯಾಗಿದ್ದ  37,780. 14 ಕೋಟಿ ರು ಅನುದಾನದ  ಪೈಕಿ  27,636.86 ಕೋಟಿ ರು ಬಿಡುಗಡೆಯಾಗಿದೆ.  ಇದರಲ್ಲಿ 18,946. 10 ಕೋಟಿ ರು ಖರ್ಚಾಗಿದೆ.  ಇದು ಲಭ್ಯ ಅನುದಾನಕ್ಕೆ ಶೇ. 66.11ರಷ್ಟಿದೆ. ವಸತಿ ಇಲಾಖೆಗೆ  3,884.49 ಕೋಟಿ (ಆರಂಭಿಕ ಶಿಲ್ಕು ಸೇರಿ) ರು ಅನುದಾನದ ಹಂಚಿಕೆಯಾಗಿತ್ತು. ಈ  ಪೈಕಿ 1,499.37 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ  769.79 ಕೋಟಿ ರು ಮಾತ್ರ ಖರ್ಚಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ.  39.23ರಷ್ಟಿದೆ. ಹಿಂದುಳಿದ ವರ್ಗಗಳ ಇಲಾಖೆಗೆ 4,463.83 ಕೋಟಿ ರು ಅನುದಾನದ ಪೈಕಿ 2,492.15 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 1,390.79 ಕೋಟಿ ರು ಖರ್ಚಾಗಿದೆ. ಇದು ಲಭ್ಯ ಅನುದಾನಕ್ಕೆ  ಶೇ. 55.81ರಷ್ಟಿದೆ.  ಆರೋಗ್ಯ ಇಲಾಖೆಗೆ ಒಟ್ಟಾರೆ 12,339.34 ಕೋಟಿ ರು ಅನುದಾನದ ಪೈಕಿ  6,416.09 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ  5,162.34 ಕೋಟಿ ರು ವೆಚ್ಚವಾಗಿರವುದು ಗೊತ್ತಾಗಿದೆ.

 

 

ನಗರಾಭಿವೃದ್ದಿ ಇಲಾಖೆಗೆ 9,698.08 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ  4,393.79 ಕೋಟಿ ರು ಬಿಡುಗಡೆಯಾಗಿದೆ.  ಇದರಲ್ಲಿ  4,229.31 ಕೋಟಿ ರು ಖರ್ಚಾಗಿದೆ. ಪೌರಾಡಳಿತ ನಿರ್ದೇಶನಾಲಯಕ್ಕೆ ಆರಂಭಿಕ ಶಿಲ್ಕು ಸೇರಿದಂತೆ  12,457.79 ಕೋಟಿ ರು ಅನುದಾನ ಹಂಚಿಕೆಯಾಗಿತ್ತು.  ಈ ಪೈಕಿ 6,124.89 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ  4,621.80 ಕೋಟಿ ರು ವೆಚ್ಚವಾಗಿದೆ. ಆಹಾರ ಇಲಾಖೆಗೆ ಹಂಚಿಕೆಯಾಗಿದ್ದ  7,912.22 ಕೋಟಿ ರು ಅನುದಾನದ ಪೈಕಿ  3,122.96 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  2,455.69 ಕೋಟಿ ರು ಖರ್ಚಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ  34,865.30 ಕೋಟಿ ರು ಅನುದಾನದಲ್ಲಿ  7,262.23 ಕೋಟಿ ರು ಮಾತ್ರ ಬಿಡುಗಡೆಯಾಗಿದೆ.  ಇದರಲ್ಲಿ 6,499.79 ಕೋಟಿ ರು ಖರ್ಚಾಗಿದೆ. ಸಮಾಜ ಕಲ್ಯಾಣಕ್ಕೆ  6,341.18 ಕೋಟಿ ರು ಅನುದಾನ ನೀಡಿದ್ದರ ಪೈಕಿ  2,413.532 ಕೋಟಿ ರು ಬಿಡುಗಡೆಯಾಗಿದೆ.  ಇದರಲ್ಲಿ 1,712.58 ಕೋಟಿ ರು ವೆಚ್ಚವಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಒದಗಿಸಿರುವ  4,557.87 ಕೋಟಿ ರು ಅನುದಾನದ ಪೈಕಿ  1,448.40 ಕೋಟಿ ರು ಬಿಡುಗಡೆಯಾಗಿದೆ.  ಇದರಲ್ಲಿ 849.01 ಕೋಟಿ ರು ವೆಚ್ಚವಾಗಿದೆ.  ಇದು ಲಭ್ಯ ಅನುದಾನಕ್ಕೆ  ಶೇ.58.62ರಷ್ಟಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ  2,459.77 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ  903.65 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  548.10 ಕೋಟಿ ರು ಖರ್ಚಾಗಿದೆ.  ಕೌಶಲ್ಯಾಭಿವೃದ್ಧಿ ಇಲಾಖೆಗೆ  2,381.51 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ   1,820.40 ಕೋಟಿ ರು ಬಿಡುಗಡೆಯಾಗಿದೆ.  1,329.19 ಕೋಟಿ ರು ವೆಚ್ಚವಾಗಿದೆ. ಕೃಷಿ ಇಲಾಖೆಗೆ  5,446.77 ಕೋಟಿ ರು ಅನುದಾನದ ಪೈಕಿ  3,593.14 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  3,023.65 ಕೋಟಿ ರು ವೆಚ್ಚವಾಗಿದೆ.

 

ಸಣ್ಣ ನೀರಾವರಿ ಇಲಾಖೆಗೆ  3,355.99 ಕೋಟಿ ರು ಅನುದಾನದ ಪೈಕಿ  1,396.42 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  1,133.41 ಕೊಟಿ ರು ಖರ್ಚಾಗಿದೆ. ಅರಣ್ಯ ಇಲಾಖೆಗೆ  2,563.221 ಕೋಟಿ ರು ಪೈಕಿ  1,280.55 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ 927.25 ಕೋಟಿ ರು ವೆಚ್ಚವಾಗಿದೆ. ಒಳಾಡಳಿತ ಇಲಾಖೆಗೆ ಹಂಚಿಕೆಯಾಗಿದ್ದ  13,189.01 ಕೋಟಿ ರು ಅನುದಾನದ ಪೈಕಿ  9,269.77 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  6,324.46 ಕೋಟಿ ರು ಖರ್ಚಾಗಿದೆ.  ವಾಣಿಜ್ಯ ಕೈಗಾರಿಕೆ (ಸಣ್ಣ) 1,948.68 ಕೋಟಿ ರು ಅನುದಾನದ ಪೈಕಿ 594.42 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ  443.45 ಕೋಟಿ ರು ಖರ್ಚಾಗಿದೆ.

ಕಂದಾಯ ಇಲಾಖೆಗೆ 3,225.86 ಕೋಟಿ ರು ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ 2,425.66 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,269.26 ಕೊಟಿ ರು ಖರ್ಚಾಗಿದೆ. ಇದು ಲಭ್ಯ ಅನುದಾನಕ್ಕೆ ಶೇ. 52.33ರಷ್ಟಿದೆ. ಪಶು ಸಂಗೋಪನೆಗೆ 3,524.61 ಕೋಟಿ ರು ಅನುದಾನದ ಪೈಕಿ 1,993.32 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 1,614.65 ಕೋಟಿ ರು ಖರ್ಚಾಗಿದೆ. ಯುವ ಸಬಲೀಕರಣಕ್ಕೆ ಒದಗಿಸಿದ್ದ   291.25 ಕೋಟಿ ರು ಪೈಕಿ 218.23 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 122.67 ಕೋಟಿ ರು ವೆಚ್ಚವಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ  5,106.60 ಕೋಟಿ ರು ಅನುದಾನದ ಪೈಕಿ  3,175.81 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 2,252.78 ಕೋಟಿ ರು ವೆಚ್ಚವಾಗಿರುವುದು ಗೊತ್ತಾಗಿದೆ.

ತೋಟಗಾರಿಕೆಗೆ 1,610.67 ಕೋಟಿ ರು ಅನುದಾನದ ಪೈಕಿ 907.37 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  665.55 ಕೋಟಿ ರು ಖರ್ಚಾಗಿದೆ. ಉನ್ನತ ಶಿಕ್ಷಣಕ್ಕೆ  6,353.41 ಕೋಟಿ ರು ನೀಡಲಾಗಿತ್ತು. ಇದರಲ್ಲಿ  3,731.82 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ  2,795.94 ಕೋಟಿ ರು ವೆಚ್ಚವಾಗಿದೆ.  ಸಹಕಾರ ಇಲಾಖೆಗೆ  2,224.63 ಕೋಟಿ ರು ಅನುದಾನದ ಪೈಕಿ  1,561.18 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  1,415.39 ಕೋಟಿ ರು ವೆಚ್ಚವಾಗಿದೆ. ಮೀನುಗಾರಿಕೆಗೆ 400.18 ಕೋಟಿ ರು ಪೈಕಿ  150.85 ಬಿಡುಗಡೆಯಾಗಿದೆ. ಇದರಲ್ಲಿ 111.73 ಕೋಟಿ ರು ವೆಚ್ಚವಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಗೆ ಹಂಚಿಕೆಯಾಗಿದ್ದ 285.66 ಕೋಟಿ ರು ಅನುದಾನದ ಪೈಕಿ 131.68 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 99.42 ಕೋಟಿ ರು ಖರ್ಚಾಗಿದೆ.

 

 

ರೇಷ್ಮೆ ಇಲಾಖೆಗೆ ಹಂಚಿಕೆಯಾಗಿರುವ  393.07 ಕೋಟಿ ರು ಪೈಕಿ  173.54 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ 139.91 ಕೋಟಿ ರು ಖರ್ಚಾಗಿದೆ. ಮೂಲಭೂತ ಸೌಕರ್ಯ ಇಲಾಖೆಗೆ ಒದಗಿಸಿದ್ದ  1,017.51 ಕೋಟಿ ರು ಪೈಕಿ  684.12 ಕೋಟಿ ರು ಬಿಡುಗಡೆಯಾಗಿದೆ. ಇದರಲ್ಲಿ  663.72 ಕೋಟಿ ರು ವೆಚ್ಚವಾಗಿದೆ. ಪ್ರವಾಸೋದ್ಯಮಕ್ಕೆ ನೀಡಿದ್ದ 278.04 ಕೋಟಿ ರು ಪೈಕಿ  90.89 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ  65.54 ಕೋಟಿ ರು ಖರ್ಚು ಮಾಡಿದೆ. ಕಾರ್ಮಿಕ ಇಲಾಖೆಗೆ  353.28 ಕೋಟಿ ರು ಅನುದಾನ ನೀಡಿತ್ತು. ಇದರಲ್ಲಿ  209.83 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ  165.69 ಕೋಟಿ ರು ವೆಚ್ಚ ಮಾಡಿದೆ.

ಇಂಧನ ಇಲಾಖೆಗೆ 29,938.28 ಕೋಟಿ ರು ಅನುದಾನ ಒದಗಿಸಿತ್ತು. ಇದರಲ್ಲಿ 19,337.94 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ  19,314.93 ಕೋಟಿ ವೆಚ್ಚವಾಗಿದೆ. ವಾಣಿಜ್ಯ ಕೈಗಾರಿಕೆ (ಬೃಹತ್‌) ಇಲಾಖೆಗೆ  1,486.04 ಕೋಟಿ ರು ಅನುದಾನದ ಪೈಕಿ 508.14 ಕೋಟಿ ರು ಬಿಡುಗಡೆಯಾಗಿದೆ. ಈ ಪೈಕಿ  484.81 ಕೋಟಿ ರು ಖರ್ಚಾಗಿದೆ. ವಾರ್ತಾ ಇಲಾಖೆಗೆ 216.00 ಕೋಟಿ ರು ಅನುದಾನ ನೀಡಿತ್ತು. ಇದರಲ್ಲಿ 101. 61 ಕೋಟಿ ಬಿಡುಗಡೆಯಾಗಿತ್ತು. ಈ ಪೈಕಿ  92.38 ಕೋಟಿ ರು ಖರ್ಚಾಗಿದೆ. ಮಾಹಿತಿ ತಂತ್ರಜ್ಞಾನಕ್ಕೆ 1,075.16 ಕೋಟಿ ರು ಅನುದಾನ ಒದಗಿಸಿತ್ತು. ಈ ಪೈಕಿ  107.84 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಇದರಲ್ಲಿ 105.85 ಕೋಟಿ ರು ಖರ್ಚಾಗಿರುವುದು ತಿಳಿದು ಬಂದಿದೆ.

Hot this week

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...
Please Scan to make Your Contribution

Topics

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

ಸಾಹುಕಾರ್ ನಿವಾಸದಲ್ಲಿ ಭೇಟಿ, ಹೋಟೆಲ್‌ನಲ್ಲಿ ಮಾತುಕತೆ; ಅಂಗೈ ಗಾತ್ರದ ಚೀಟಿಗಳಲ್ಲಿದ್ದವು ಉತ್ತರಗಳ ಸಾಲು

ಬೆಂಗಳೂರು;  ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆದಿದ್ದ ಕೆಲ ಅಭ್ಯರ್ಥಿಗಳು ಮತ್ತು...

Related Articles

Popular Categories

error: Content is protected !!