Friday | September 25, 2026 |

ಎಪಿಎಂಸಿ ಕಾಯ್ದೆಗೆ ಮತ್ತೊಂದು ತಿದ್ದುಪಡಿ; ಪ್ರತ್ಯೇಕ ಆಡಳಿತ ಮಂಡಳಿ ರಚನೆ, ಏಕರೀತಿಯ ಮೀಸಲಾತಿ, ಸಮಾನತೆ ಕಲ್ಪಿಸಲಿದೆಯೇ?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿದ್ದ ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು ವಾಪಸ್‌ ಪಡೆಯಲು ಮಸೂದೆ ಮಂಡಿಸಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ-ಅಭಿವೃದ್ಧಿ) ಅಧಿನಿಯಮ 1966ಕ್ಕೆ ತಿದ್ದುಪಡಿ ತರಲು ಮುಂದಾಗಿದೆ.

ರಾಜ್ಯ ಸರ್ಕಾರವು ಮಾರುಕಟ್ಟೆ ಪ್ರಾಂಗಣಗಳ ಹೊರಗಡೆ ಮಾರುಕಟ್ಟೆ ಕ್ಷೇತ್ರದಲ್ಲಿ ನಡೆಯುವ ವ್ಯಾಪಾರ ವಹಿವಾಟಿನ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ 1966ರ ಅಧಿನಿಯಮ ಕಲಂ 8(1), 8(2), 8(3) ಕಲಂ 117ಕ್ಕೆ ತಿದ್ದುಪಡಿ ತರಲು ಮೂರು ವರ್ಷಗಳ ಹಿಂದೆಯೇ ಕಾಂಗ್ರೆಸ್‌ ಸರ್ಕಾರವು ತಿದ್ದುಪಡಿ ತರಲು ಸಚಿವ ಸಂಪುಟವು ಅನುಮೋದನೆ ನೀಡಿತ್ತು.

ಇದರ ಬೆನ್ನಲ್ಲೇ ಇದೀಗ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸುವ ಉದ್ದೇಶದಿಂದ ಅಧಿನಿಯಮಕ್ಕೆ ತಿದ್ದುಪಡಿ ತರಲು ಹೊರಟಿದೆ. ಇದಕ್ಕೆ ಸಂಬಂಧಿಸಿದಂತೆ ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು 2026ರ ಸೆ.22ರಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ಈ ಸಭೆಯ ನಡವಳಿಗಳು ದಿ ಫೈಲ್‌ ಗೆ ಲಭ್ಯವಾಗಿವೆ.

ಜಿಬಿಎ ವ್ಯಾಪ್ತಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸುವ ಸಂಬಂಧ ಸಹಕಾರ ಸಚಿವ ಲಕ್ಷ್ಮಣ ಸವದಿ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಅಧಿಕಾರಿಗಳು ವಿಸ್ತೃತವಾಗಿ ಚರ್ಚಿಸಿದ್ದಾರೆ. ಈ ಚರ್ಚೆ ನಂತರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಅಧಿನಿಯಮ 1966ಕ್ಕೆ ಸೇರ್ಪಡೆ/ತಿದ್ದುಪಡಿ ತರುವ ಕುರಿತು ಸಮಾಲೋಚಿಸಿರುವುದು ಗೊತ್ತಾಗಿದೆ.

ಪ್ರಸ್ತುತ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಕಲಂ 10 ಮತ್ತು 11 ರ ಅಡಿ ಹಾಲಿ ಅವಕಾಶವಿರುವ 02 ರೀತಿಯ ಮಾರುಕಟ್ಟೆ ಸಮಿತಿಗಳ ರಚನೆ ಇದೆ. ಮತ್ತು ಪ್ರಸ್ತುತ ಕಾಯ್ದೆ ಕಲಂ 11ಕ್ಕೆ ಹೊಸದಾಗಿ ಸೇರ್ಪಡೆಗೊಳಿಸಲಿರುವ ಜಿಬಿಎ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ರಚನೆಯಲ್ಲಿ ಏಕ ರೀತಿಯ ಮೀಸಲಾತಿ ಮತ್ತು ಸದಸ್ಯ ಸ್ಥಾನಗಳ ಸಂಖ್ಯೆಯಲ್ಲಿ ಸಮಾನತೆ ಕಲ್ಪಿಸಲು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿನ ಮಾರುಕಟ್ಟೆ ಸಮಿತಿಗಳ ರಚನೆಗೆ ಸಂಬಂಧಿಸಿದಂತೆ ಹೊಸದಾಗಿ ಕಾಯ್ದೆ ಕಲಂ 11-ಎ ಗೆ ತಿದ್ದುಪಡಿ ತರಲು ಹೊರಟಿದೆ. ಇದಕ್ಕೆ ಸಂಬಂಧಿಸಿಂತೆ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಪರಿಷ್ಕರಿಸಲು ಸಭೆಯು ನಿರ್ಣಯಿಸಿರುವುದು ಗೊತ್ತಾಗಿದೆ.

ಸೆಕ್ಷನ್ 11-ಎ-  ಜಿಬಿಎ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಎಪಿಎಂಸಿಗಳಿಗೆ ಮಾರುಕಟ್ಟೆ ಸಮಿತಿಯ ರಚನೆ

ಪ್ರತಿ ಮಾರುಕಟ್ಟೆ ಸಮಿತಿಯು ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ನಾಮನಿರ್ದೇಶನ ಮಾಡುವ ಕೆಳಗಿನ 18 ಸದಸ್ಯರನ್ನು ಒಳಗೊಂಡಿರಬೇಕು. 12 ಮಂದಿ ಕೃಷಿಕರ ಪೈಕಿ ಮೂರು ಮಂದಿ ಮಹಿಳೆಯರು ಇರಬೇಕು. ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು, ಮತ್ತೊಬ್ಬರು ಪರಿಶಿಷ್ಟ ಪಂಗಡಕ್ಕೆ  ಸೇರಿದವರಿರಬೇಕು.  ಒಬ್ಬರು ಪ್ರವರ್ಗ ಎ ಮತ್ತು ಮತ್ತೊಬ್ಬರು ಪ್ರವರ್ಗ ಬಿ ವರ್ಗಕ್ಕೆ ಸೇರಿರಬೇಕು. ಇವರು ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ವಾಸಿಸುವರರಾಗಿರಬೇಕು. ಹಾಗೂ ಸೆಕ್ಷನ್ 16ರ ಉಪವಿಭಾಗ (1)ರ (a) ಉಪಖಂಡ ಅಥವಾ ಉಪವಿಭಾಗ (2)ರ ಅಡಿಯಲ್ಲಿ ಅನರ್ಹರಾಗಿರಬಾರದು ಎಂದಿದೆ. 

ಮಾರುಕಟ್ಟೆ ಸಮಿತಿಗಳಿಂದ ಪರವಾನಗಿ ಪಡೆದ ಕಮಿಷನ್ ಏಜೆಂಟರು ಅಥವಾ ಜಿಲ್ಲಾ ಉಪನಿರ್ದೇಶಕರಿಂದ ಪರವಾನಗಿ ಪಡೆದ ವ್ಯಾಪಾರಿಗಳ ಪೈಕಿ ಒಬ್ಬರನ್ನು ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕು. ಅವರು ಮಾರುಕಟ್ಟೆ ಪ್ರದೇಶದಲ್ಲಿ ಶಾಶ್ವತವಾಗಿ ವಾಸಿಸುವವರಾಗಿರಬೇಕು ಹಾಗೂ ಸೆಕ್ಷನ್ 16ರ ಉಪವಿಭಾಗ (1)ರ ಉಪಖಂಡ (a) ಅಥವಾ ಉಪವಿಭಾಗ (2)ರ ಅಡಿಯಲ್ಲಿ ಅನರ್ಹರಾಗಿರಬಾರದು. ಈ ಉದ್ದೇಶಕ್ಕಾಗಿ, ಕನಿಷ್ಠ ಮೂರು ವರ್ಷಗಳಿಂದ ವ್ಯಾಪಾರ ಚಟುವಟಿಕೆ ನಡೆಸುತ್ತಿರುವ ಪರವಾನಗಿ ಪಡೆದ ಕಮಿಷನ್ ಏಜೆಂಟರು / ವ್ಯಾಪಾರಿಗಳನ್ನು ಮಾತ್ರ ಇಂತಹ ಸಮಿತಿಗಳಿಗೆ ನಾಮನಿರ್ದೇಶನ ಮಾಡಲು ಪರಿಗಣಿಸಬೇಕು.

ಆದರೆ, ಬೆಂಗಳೂರು ಉಪನಿರ್ದೇಶಕರಿಂದ ಪರವಾನಗಿ ಪಡೆದ ವ್ಯಾಪಾರಿಗಳನ್ನು ಮಾರುಕಟ್ಟೆ ಪ್ರದೇಶದಲ್ಲಿರುವ ಕೇವಲ ಒಂದು ಮಾರುಕಟ್ಟೆ ಸಮಿತಿಗೆ ಮಾತ್ರ ನಾಮನಿರ್ದೇಶನ ಮಾಡಲು ಪರಿಗಣಿಸಬೇಕು. ಒಬ್ಬ ಸದಸ್ಯರು ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bangalore Authority) ಅವರ ಪ್ರತಿನಿಧಿಯಾಗಿರಬೇಕು. ಕೃಷಿ/ತೋಟಗಾರಿಕಾ ಉತ್ಪನ್ನಗಳು, ಮಸಾಲೆಗಳು, ಆಹಾರ ಧಾನ್ಯಗಳು, ಎಣ್ಣೆ ಬೀಜಗಳು ಮುಂತಾದವುಗಳ ಉತ್ಪಾದನೆ, ಸಂಸ್ಕರಣೆ ಮತ್ತು ರಫ್ತು ಚಟುವಟಿಕೆಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ತಜ್ಞರನ್ನು ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕು. ಮೇಲ್ಕಂಡ ತಜ್ಞರ ಪೈಕಿ ಒಬ್ಬ ಸದಸ್ಯರನ್ನು FIEO, ಬೆಂಗಳೂರು ನಾಮನಿರ್ದೇಶನ ಮಾಡಬೇಕು.

ಕೃಷಿ ಮಾರುಕಟ್ಟೆ ನಿರ್ದೇಶಕರು ನಾಮನಿರ್ದೇಶನ ಮಾಡುವ ಹೆಚ್ಚುವರಿ ನಿರ್ದೇಶಕರು, ವಿಭಾಗೀಯ ಕಚೇರಿ ಮತ್ತು ಜಾರಿ ಕೋಶ, ಬೆಂಗಳೂರು, ಪದನಿಮಿತ್ತ ಸದಸ್ಯರಾಗಿರುತ್ತಾರೆ. ರಾಜ್ಯದಲ್ಲಿರುವ ಎಪಿಎಂಸಿಗಳ ಚುನಾಯಿತ ಅಧ್ಯಕ್ಷರ ಪೈಕಿ ಒಬ್ಬ ಅಧ್ಯಕ್ಷರನ್ನು ಜಿಬಿಎ  ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಎಪಿಎಂಸಿಗೆ ನಾಮನಿರ್ದೇಶನ ಮಾಡಬೇಕು.

ಸದಸ್ಯರು ಮಾರುಕಟ್ಟೆ ಸಮಿತಿಯ ಕಾರ್ಯಕಲಾಪಗಳಲ್ಲಿ ಭಾಗವಹಿಸಬಹುದು. ಆದರೆ ಅವರಿಗೆ ಮತದಾನದ ಹಕ್ಕು ಇರುವುದಿಲ್ಲ. ರಾಜ್ಯ ಸರ್ಕಾರವು ಉಪವಿಧಿ (1)ರ ಖಂಡ (i)ರ ಅಡಿಯಲ್ಲಿ ಮಾತ್ರ ನಾಮನಿರ್ದೇಶನಗೊಂಡ ಕೃಷಿಕರ ಪ್ರತಿನಿಧಿಗಳ ಪೈಕಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನಾಮನಿರ್ದೇಶನ ಮಾಡಬೇಕು ಎಂದು ಪರಿಷ್ಕರಿಸಲಿದೆ.

ಒಂದು ಮಾರುಕಟ್ಟೆ ಸಮಿತಿಗೆ ನಾಮನಿರ್ದೇಶನಗೊಂಡ ಯಾವುದೇ ಸದಸ್ಯರನ್ನು GBA ವ್ಯಾಪ್ತಿಯಲ್ಲಿರುವ ಇತರ ಯಾವುದೇ ಮಾರುಕಟ್ಟೆ ಸಮಿತಿಗಳಿಗೆ ನಾಮನಿರ್ದೇಶನ ಮಾಡಬಾರದು. ಈ ರೀತಿಯಾಗಿ ರಚಿಸಲಾದ ಸಮಿತಿಯು, ಕಾಯ್ದೆ ಮತ್ತು ನಿಯಮಗಳ ವಿವಿಧ ನಿಬಂಧನೆಗಳ ಅಡಿಯಲ್ಲಿ ನೀಡಲಾಗಿರುವ ಎಲ್ಲಾ ಅಧಿಕಾರಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ.

ಕಾಯ್ದೆ ಮತ್ತು ನಿಯಮಗಳ ಅಳವಡಿಕೆ ಅಥವಾ ಅನುಷ್ಠಾನದಲ್ಲಿ ಯಾವುದೇ ತೊಂದರೆ ಉಂಟಾದಲ್ಲಿ, ಅದನ್ನು ಕೃಷಿ ಮಾರುಕಟ್ಟೆ ನಿರ್ದೇಶಕರು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು. ಈ ಕುರಿತು ಸರ್ಕಾರ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಅದನ್ನು ಸಮಿತಿಯು ಅನುಷ್ಠಾನಗೊಳಿಸಬೇಕು ಎಂದು ಪರಿಷ್ಕರಿಸಲು ನಿರ್ಣಯಿಸಿರುವುದು ತಿಳಿದು ಬಂದಿದೆ.

‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ಕ್ಕೆ ಹೊಸದಾಗಿ ಕಲಂ 11-ಎ ಯನ್ನು ಸೇರ್ಪಡೆಗೊಳಿಸುವ ಕುರಿತು ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಕೃ‍ಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ, ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಸೂಚಿಸಿರುವುದು ಗೊತ್ತಾಗಿದೆ.

ಜುಲೈನಲ್ಲಿ ತಂದಿದ್ದ ತಿದ್ದುಪಡಿಯೇನು?

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ವಿವಿಧ  ಕಲಂಗಳಿಗೆ ಜುಲೈನಲ್ಲೇ  ತಿದ್ದುಪಡಿ ಮಾಡಿದೆ. ಕಲಕಂ 8(1)(ಬಿ)ಕ್ಕೆ ತಿದ್ದುಪಡಿ ಪ್ರಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು ನೀಡುವ ಲೈಸೆನ್ಸ್‌ನ್ನು ಷರತ್ತಿಗೆ ಒಳಪಟ್ಟು ಅಧಿಸೂಚಿತ ಕೃಷಿ ಉತ್ಪನ್ನಗಳಲ್ಲಿ ವ್ಯವಹರಿಸಬೇಕು ಎಂದು ನಿಬಂಧನೆ ಇತ್ತು. ಕಾಯ್ದೆ ಕಲಂ 72(4)ರ ಡಿ ಕೃಷಿ ಮಾರಾಟ ಇಲಾಖೆ ಅಥವಾ ಅವರಿಂದ ಪ್ರಾಧಿಕಾರಿಸಲ್ಪಟ್ಟ ಅಧಿಕಾರಿಗಳು ಖರೀದಿದಾರರು ಲೈಸೆನ್ಸ್‌ ನೀಡಲು ಅಧಿಕಾರ ಹೊಂದಿದ್ದಾರೆ. ಕಲಂ 72(4)ನ್ನು ಪರಿಣಾಮಕಾರಿಗೊಳಿಸಲು ನಿರ್ದೇಶಕರು ಅಥವಾ ಅವರಿಂದ ಪ್ರಾಧಿಕಾರಿಸಲ್ಪಟ್ಟ ಅಧಿಕಾರಿ ಎಂದು ಕಾಯ್ದೆ ಕಲಂ 8(1)(ಬಿ)ಗೆ ಸೇರ್ಪಡೆಗೊಳಿಸಲು ತಿದ್ದುಪಡಿಗೆ ಪ್ರಸ್ತಾವಿಸಿತ್ತು.

ಕಾಯ್ದೆ ಕಲಂ 8(2)ಕ್ಕೆ ತಿದ್ದುಪಡಿ

ಕಲಂ 8(2)ರ ಅಡಿ ಅಧಿಸೂಚಿತ ಕೃಷಿ ಉತ್ಪನ್ನಗಳ ಸಗಟು ವ್ಯಾಪಾರ ವಹಿವಾಟನ್ನು ಮಾರುಕಟ್ಟೆ ಪ್ರಾಂಗಣ, ಮಾರುಕಟ್ಟೆ ಉಪ ಪ್ರಾಂಗಣ, ಉಪ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ, ಪ್ರಾಂಗಣ ಅಥವಾ ರೈತ-ಗ್ರಾಹಕ ಮಾರುಕಟ್ಟೆ ಪ್ರಾಂಗಣಗಳಲ್ಲಿಯೇ ಕಡ್ಡಾಯವಾಗಿ ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ನಡೆಸಬೇಕು. ಹಾಗೆಯೇ ಯಾವುದೇ ಇತರೆ ಸ್ಥಳವನ್ನು ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗಾಗಿ ಉಪಯೋಗಿಸತಕ್ಕದ್ದಲ್ಲ ಎಂದು ತಿದ್ದುಪಡಿಗೆ ಪ್ರಸ್ತಾವಿಸಿದೆ. ಈ ಕ್ರಮವು ಕೃಷಿ ಮಾರುಕಟ್ಟೆ ಪ್ರಾಂಗಣಗಳಲ್ಲಿನ ವರ್ತಕ ಸಮುದಾಯದ ಬೇಡಿಕೆಗಳನ್ನು ಮತ್ತು ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.

ಕಲಂ 8(3)ಕ್ಕೆ ತಿದ್ದುಪಡಿ

ಕಾಯ್ದೆ ಕಲಂ 8(3) ಅಡಿಯಲ್ಇ ಕಾಯ್ದೆ ಕಲಂ 8(2)ರ ಅಡಿಯಲ್ಲಿ ವಿಧಿಸಲಾದ ನಿರ್ಬಂಧಗಳಿಗೆ ಕೆಲವು ವಿನಾಯಿತಿಗಳನ್ನು ನೀಡಿದೆ. ಮಾರುಕಟ್ಟೆ ಪ್ರದೇಶದಲ್ಲಿ  ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ನಿಯಂತ್ರಿಸುವ ಸಮಿತಿಯ ಅಧಿಕಾರವನ್ನು ಮರು ಸ್ಥಾಪಿಸುವ ಪರಿಣಾಮವಾಗಿ ತಿದ್ದುಪಡಿ ಪ್ರಸ್ತಾಪಿಸಿತ್ತು.

ಕಲಂ 117ಕ್ಕೆ ತಿದ್ದುಪಡಿ

ಕಾಯ್ದೆ ಕಲಂ 8(2)ರ ಪ್ರಸ್ತಾವಿಕ ತಿದ್ದುಪಡಿ ಹಿನ್ನೆಲೆಯಲ್ಲಿ ಸಕ್ಷಮ ಅಧಿಕಾರಿಗಳಿಂದ ಅಧಿಸೂಚಿತ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ನಿಯಂತ್ರಿಸಲು ಅಧಿಕಾರವನ್ನು ಜಾರಿಗೊಳಿಸಿದೆ. ಇದಕ್ಕೆ ದಂಡದ ನಿಬಂಧನೆಯು ಅಗತ್ಯವಿದೆ. ಆದ್ದರಿಂದ ತಿದ್ದುಪಡಿಯನ್ನು ಪ್ರಸ್ತಾವಿಸಿದೆ. ಅಲ್ಲದೆ 2023ರ ಜೂನ್‌ 15ರಂದು ಮಾರುಕಟ್ಟೆ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟವು ಅನುಮೋದನೆ ನೀಡಿತ್ತು.

ಅದೇ ರೀತಿ  ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ [ಎಪಿಎಂಸಿ ಕಾಯ್ದೆ ತಿದ್ದುಪಡಿ 2020ನ್ನು ವಾಪಸ್ ಪಡೆಯಲು ಮಸೂದೆ ಮಂಡಿಸಿತ್ತು. 2020ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆ ಹೊರಗೆಯೂ ಮಾರಾಟ ಮಾಡಲು ಅವಕಾಶ ನೀಡಿತ್ತು.

ಎಪಿಎಂಸಿ ಮಾರುಕಟ್ಟೆგೋಳ ಹೊರಗಿನ ವ್ಯಾಪಾರಕ್ಕೆ ಆನ್‌ಲೈನ್ ವ್ಯವಸ್ಥೆ ಹಾಗೂ ವಿವಾದ ಪರಿಹಾರಕ್ಕೆ ಸೂಕ್ತ ಯಂತ್ರವೀಲನವಿಲ್ಲದೆ ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬುದು ಸರ್ಕಾರದ ವಾದವಾಗಿತ್ತು. ಅಲ್ಲದೆ ಎಪಿಎಂಸಿಗಳ ಆದಾಯ ಕೂಡ ಗಣನೀಯವಾಗಿ ಕುಸಿದಿದ್ದನ್ನು ಸ್ಮರಿಸಬಹುದು.

Hot this week

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ...
Please Scan to make Your Contribution

Topics

ಜಿಲ್ಲಾಸ್ಪತ್ರೆಗಳ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಸಲೂ ಕಷ್ಟಕರ ಪರಿಸ್ಥಿತಿ; ಹಿಮ್ಸ್‌ನಲ್ಲೂ ಆರ್ಥಿಕ ಮುಗ್ಗಟ್ಟು

ಬೆಂಗಳೂರು;  ಹೊಸ ಯೋಜನೆಗಳಿಗೆ ಸಂಪನ್ಮೂಲ ಕೊರತೆಯನ್ನು ಅನುಭವಿಸುತ್ತಿದೆ ಎಂದು ಆರ್ಥಿಕ ಇಲಾಖೆಯು...

ರಾಜ್ಯದ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕೆಟ್ಟಿದೆಯೇ?; ಆರ್ಥಿಕ ಇಲಾಖೆ ಟಿಪ್ಪಣಿ ಬೆನ್ನಲ್ಲೇ ಮುನ್ನೆಲೆಗೆ ಬಂದ ದಿ ಫೈಲ್‌ನ 51 ವರದಿಗಳು

ಬೆಂಗಳೂರು; ಹೊಸ ಯೋಜನೆಗಳನ್ನು  ಘೋಷಿಸುವ ಮೊದಲು ಸಂಪನ್ಮೂಲ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು...

ಮೂಲಸೌಕರ್ಯಗಳ ಕೊರತೆ; ಸಂಭಾವ್ಯ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ್ದ ಮಂಡಳಿ, ಬಳಕೆಯಾಗದ 281.34 ಕೋಟಿ

ಬೆಂಗಳೂರು; ದೇವನಹಳ್ಳಿಯಲ್ಲಿರುವ ಏರೋಸ್ಪೇಸ್‌ ಪಾರ್ಕ್ ಸೇರಿದಂತೆ ಇನ್ನಿತರೆ ಕೈಗಾರಿಕೆ ಪ್ರದೇಶಗಳಲ್ಲಿ ಮೂಲಭೂತ...

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಆದೇಶ; ಮುನ್ನೆಲೆಗೆ ಬಂದ ದಿ ಫೈಲ್‌ ನ 10 ವರದಿಗಳು

ಬೆಂಗಳೂರು;  ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ...

Related Articles

Popular Categories

error: Content is protected !!