Monday | October 12, 2026 |

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು ಹೈಕೋರ್ಟ್‌ ವಿವಿಧ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳನ್ನು ಪರಿಗಣಿಸಿದಲ್ಲಿ ರಾಜ್ಯ ಬೊಕ್ಕಸಕ್ಕೆ ಹೊರೆಯಾಗಲಿದೆ. ಅನುದಾನ ರಹಿತ ಅವಧಿಗೂ ಪಿಂಚಣಿ, ವೇತನ ಭತ್ಯೆ ಪಾವತಿಸಲು ಅಂದಾಜು 22,663.81 ಕೋಟಿ ರು ಅಗತ್ಯವಿದೆ. ಇದು ಸರ್ಕಾರಕ್ಕೆ ಹೊರೆಯಾಗಲಿದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯ ನೀಡಿದೆ.

ವೇತಾನುದಾನಕ್ಕೆ ಒಳಪಟ್ಟ ನೌಕರರಿಗೆ ಸಮಾನಾಂತರ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ನೀಡುವ ಸಂಬಂಧ ಉಚ್ಛ ನ್ಯಾಯಾಲಯವು ರಿಟ್‌ ಅಪೀಲು (ಸಂಖ್ಯೆ 2476/2015 ದಿನಾಂಕ 24.07.2026) ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ 2026ರ ಸೆ.10ರಂದು ಸಭೆ ನಡೆಸಿದೆ. ಈ ಸಭೆಗೆ ಆರ್ಥಿಕ ಇಲಾಖೆಯು ಈ ತೀರ್ಪನ್ನು ಅನುಷ್ಠಾನಗೊಳಿಸಿದ್ದಲ್ಲಿ ಆರ್ಥಿಕ ಪರಿಣಾಮಗಳ ಕುರಿತು ಟಿಪ್ಪಣಿ ಒದಗಿಸಿದೆ.

ಈ ಟಿಪ್ಪಣಿ ಪ್ರಕಾರ ರಾಜ್ಯ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪರಿಗಣಿಸಿದಲ್ಲಿ ರಾಜ್ಯ ಬೊಕ್ಕಸಕ್ಕೆ ತುಂಬಾ ಹೊರೆಯಾಗುತ್ತದೆ. ಅಂದಾಜು 22,663.81 ಕೋಟಿಯಷ್ಟು ಅಗತ್ಯವಿದೆ ಎಂದು ಅಭಿಪ್ರಾಯಿಸಿದೆ. ಈ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಚಿವ ಮಧು ಬಂಗಾರಪ್ಪ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಆರ್ಥಿಕ ಇಲಾಖೆಯು ಸಭೆಗೆ ಮಂಡಿಸಿರುವ ಟಿಪ್ಪಣಿಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಟಿಪ್ಪಣಿಯಲ್ಲೇನಿದೆ?

ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ 87ಲ್ಲಿ ಕಲ್ಪಿಸಿರುವ ಅವಕಾಶವನ್ನು ಆರ್ಥಿಕ ಇಲಾಖೆಯು ಗಮನಸೆಳೆದಿದೆ. ಇದರ ಅನ್ವಯ ವೇತಾನುದಾನಕ್ಕೆ  ಒಳಪಟ್ಟ ನೌಕರರಿಗೆ ಸಮಾನಾಂತರ ಹುದ್ದೆಯಲ್ಲಿರುವ ಸರ್ಕಾರಿ ನೌಕರರರಿಗೆ ನೀಡಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕಾಗಿದೆ. ಆದರೆ ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕಾಗಿದೆ ಎಂದು ಹೈಕೋರ್ಟ್‌ ಹಲವಾರು ಪ್ರಕರಣಗಳಳ್ಲಿ ತೀರ್ಪು ನೀಡಿದೆ. ಈ ತರಹ ಪರಿಗಣಿಸಿದ್ದಲ್ಲಿ ರಾಜ್ಯ ಬೊಕ್ಕಸಕ್ಕೆ ತುಂಬಾ ಹೊರೆಯಾಗುತ್ತದೆ ಎಂದು ಅಭಿಪ್ರಾಯಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

ಮತ್ತು ಈ ತರಹ ಅನುದಾನ ರಹಿತ ಅವಧಿಯನ್ನು ಪರಿಗಣಿಸುವುದು ಅವೈಜ್ಞಾನಿಕವಾಗಿದೆ. ಈ ಕಾರಣದ ಹಿನ್ನೆಲೆಯಲ್ಲಿ ಕರ್ನಾಟಕ ಖಾಸಗಿ ಅನುದಾನಿತ ನೌಕರರ ಕಾಯ್ದೆ 2014ನ್ನು ರಚಿಸಿದೆ. ಈ ಕಾಯ್ದೆ ಅನ್ವಯ ವೇತಾನುದಾನಕ್ಕೆ ಒಳಪಡಿಸಿರುವ ದಿನಾಂಕದಿಂದ ಸಲ್ಲಿಸಿರುವ ಸೇವೆಯನ್ನು ಮಾತ್ರ ಪಿಂಚಣಿ ಮತ್ತು ವೇತನ ಸೌಲಭ್ಯಗಳಿಗೆ ಪರಿಗಣಿಸಲಾಗುತ್ತಿದೆ. ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವಾ ಅವಧಿಯನ್ನು ಪರಿಗಣಿಸುವುದಿಲ್ಲ ಎಂದು ಹೇಳಿದೆ.

 

 

ಆಧರೆ ವೇತಾನುದಾನಕ್ಕೆ  ಒಳಪಟ್ಟ ಸಿಬ್ಬಂದಿಯು ಈ ಕಾಯ್ದೆಯನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ದಾವೆ ಹೂಡಿದ್ದಾರೆ. (ರಿಟ್‌ ಅರ್ಜಿ ಸಂಖ್ಯೆ 21216/2014- 10/07/2015) ಈ ತೀರ್ಪಿನ ಪ್ರಕಾರ ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕಾಯ್ದೆ 2014ನ್ನು ರದ್ದುಗೊಳಿಸಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ರಿಟ್‌ ಅಪೀಲ್‌ ದಾಖಲಿಸಿತ್ತು.

 

 

ಈ ರಿಟ್‌ ಅಪೀಲ್‌ ಗೆ ಸಂಬಂಧಿಸಿದಂತೆ ನ್ಯಾಯಾಲಯವು 2026ರ ಜುಲೈ 24ರಂದು ತೀರ್ಪು ನೀಡಿದೆ. ಈ ರಿಟ್‌ ಅಪೀಲ್‌ನಲ್ಲಿ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಿದ್ದಲ್ಲಿ ಹಲವು ಪರಿಣಾಮಗಳು ಉಂಟಾಗಲಿವೆ ಎಂದು ಆರ್ಥಿಕ ಇಲಾಖೆಯು ಸಭೆಯ ಗಮನಕ್ಕೆ ತಂದಿರುವುದು ಗೊತ್ತಾಗಿದೆ.

 

 

ಉಚ್ಛ ನ್ಯಾಯಾಲಯದ ತೀರ್ಪಿನಂತೆ ಅನುದಾನ ರಹಿತ ಅವಧಿಗೂ ನೋಷನಲ್‌ ಫಿಕ್ಷೇಷನ್‌ ಮಾಡಿ ವೇತನ ನಿಗದಿಪಡಿಸಿದ್ದಲ್ಲಿ ರಾಜ್ಯ ಸರ್ಕಾರಕ್ಕೆ ಉಂಟಾಗುವ ಆರ್ಥಿಕ ಹೊರೆ ಬಗ್ಗೆ ಈಗಾಗಲೇ ಆಡಳಿತ ಇಲಾಖೆಯಿಂದ ಪಡೆದಿದೆ. ಇದರ ಅನ್ವಯ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ನಿವೃತ್ತರಾಗಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳ ಅನುದಾನ ರಹಿತ ಸೇವೆಯನ್ನು ಪರಿಗಣಿಸಿದ್ದಲ್ಲಿ ವೇತನ ಭತ್ಯೆಗಳು ಮತ್ತು ಪಿಂಚಣಿ ಸೌಲಭ್ಯ ಪಾವತಿಸಲು ಅಂದಾಜು 22,663.81 ಕೋಟಿ ರು ಅಗತ್ಯವಿದೆ ಎಂದು ಹೇಳಿದೆ.

 

 

2006ರ ಏಪ್ರಿಲ್‌ 1ರ ನಂತರ ವೇತಾನುದಾನಕ್ಕೆ ಒಳಪಟ್ಟ ಸಿಬ್ಬಂದಿಗಳಿಗೆ ಪಿಂಚಣಿ ಸೌಲಭ್ಯವಿಲ್ಲ. ಈ ತೀರ್ಪಿನ ಅನ್ವಯ ವೇತಾನುದಾನಕ್ಎಕ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅಂತಹ ಸಿಬ್ಬಂದಿಗಳಿಗೆ ಹಳೆ ಪಿಂಚಣಿ ಸೌಲಭ್ಯಗಳನ್ನು ವಿಸ್ತರಿಸಬೇಕಾಗಿರುತ್ತದೆ ಎಂದು ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಅನುದಾನ ಸಂಹಿತೆ (Grant-in-Aid Rules) ನಿಯಮಗಳ ಪ್ರಕಾರ, ಒಬ್ಬ ಶಿಕ್ಷಕ ಅಥವಾ ಸಿಬ್ಬಂದಿ ಸಂಸ್ಥೆಯು ಅನುದಾನಕ್ಕೆ ಒಳಪಡುವ ಮುನ್ನ ಸಲ್ಲಿಸಿದ ಸೇವೆ ಅಥವಾ ಅವಧಿಯನ್ನು (Unaided Period) ಅವರ ವೇತನ ನಿಗದಿ (Pay Fixation), ರಜೆ ನಗದೀಕರಣ ಅಥವಾ ನಿವೃತ್ತಿ ವೇತನದ ಲೆಕ್ಕಾಚಾರಕ್ಕೆ ಪರಿಗಣಿಸಲು ಅವಕಾಶವಿರುವುದಿಲ್ಲ.

ಅನುದಾನರಹಿತ ಅವಧಿಯನ್ನೂ ವೇತನ ಹಾಗೂ ನಿವೃತ್ತಿ ಸೌಲಭ್ಯಗಳಿಗೆ ಪರಿಗಣಿಸಿದರೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಭಾರಿ ಆರ್ಥಿಕ ಹೊರೆ ಬೀಳುತ್ತದೆ. ಈ ಕಾರಣದಿಂದಾಗಿ ಸರ್ಕಾರ ಇದನ್ನು ಕಾನೂನುಬದ್ಧವಾಗಿ ಪರಿಗಣಿಸಲು ಒಪ್ಪುತ್ತಿಲ್ಲ. ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು  ಅನುದಾನರಹಿತ ಅವಧಿಯ ಸೇವೆಯನ್ನೂ ಶಿಕ್ಷಕರ ನಿವೃತ್ತಿ ವೇತನ ಮತ್ತು ಇತರ ಸೌಲಭ್ಯಗಳಿಗಾಗಿ ಪರಿಗಣಿಸಬೇಕು ಎಂದು ಆದೇಶಿಸಿತ್ತು

ನ್ಯಾಯಾಲಯದ ಆದೇಶಗಳಿಂದ ಉಂಟಾಗುವ ಆರ್ಥಿಕ ಹೊರೆಯನ್ನು ತಪ್ಪಿಸಲು ಕರ್ನಾಟಕ ಸರ್ಕಾರವು ವಿಶೇಷ ತಿದ್ದುಪಡಿ ಕಾಯ್ದೆಗಳನ್ನು ತಂದು, “ಅನುದಾನರಹಿತ ಅವಧಿಯ ಸೇವೆಯನ್ನು ಯಾವುದೇ ಆರ್ಥಿಕ ಅಥವಾ ಸೇವಾ ಸೌಲಭ್ಯಗಳಿಗೆ ಪರಿಗಣಿಸಬಾರದು” ಎಂಬ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿತ್ತು.

1995ರ ನಂತರ ಪ್ರಾರಂಭವಾದ ನೂರಾರು ಕನ್ನಡ ಮಾಧ್ಯಮ ಮತ್ತು ಇತರ ಅನುದಾನರಹಿತ ಶಾಲೆಗಳ ಶಿಕ್ಷಕರು ತಮಗೂ ವೇತಾನುದಾನ (Salary Grant) ವಿಸ್ತರಿಸಬೇಕು ಹಾಗೂ ಹಳೆಯ ಸೇವಾ ಅವಧಿಯನ್ನು ಮಾನ್ಯ ಮಾಡಬೇಕು ಎಂದು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಶಾಲೆಗೆ ಅನುದಾನ ಮಂಜೂರಾದ ದಿನಾಂಕದಿಂದ ಮಾತ್ರ ಅಧಿಕೃತ ಸೇವೆ ಪ್ರಾರಂಭವಾಗುತ್ತದೆ ಮತ್ತು ಅಂದಿನಿಂದ ಮಾತ್ರ ವೇತಾನುದಾನದ ಸೌಲಭ್ಯಗಳು ಅನ್ವಯಿಸುತ್ತವೆ. ಅದಕ್ಕೂ ಮುಂಚಿನ ಅನುದಾನರಹಿತ ಅವಧಿಗೆ ಸರ್ಕಾರದಿಂದ ಯಾವುದೇ ವೇತನ ಅಥವಾ ನಿವೃತ್ತಿ ಸೌಲಭ್ಯಗಳು ಸಿಗುವುದಿಲ್ಲ.

 

ಅನುದಾನರಹಿತ ಅವಧಿ ಅನುದಾನಕ್ಕೆ ಒಳಪಡಿಸಿದರೆ 1,762.90 ಕೋಟಿ ವೆಚ್ಚ; ಪರಿಗಣನೆಗೆ ಅವಕಾಶವಿಲ್ಲ?

 

ಅನುದಾನ ರಹಿತ ಅವಧಿಯನ್ನು ಅನುದಾನಕ್ಕೆ ಪರಿಗಣಿಸಿದರೇ 1,762.90 ಕೋಟಿ ವೆಚ್ಚವಾಗಲಿದೆ. ಈ ಪರಿಗಣನೆಗೆ ಅವಕಾಶವಿಲ್ಲ ಎಂದು ಸರ್ಕಾರ ಹೇಳಿತ್ತು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...
Please Scan to make Your Contribution

Topics

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

ಜೆಎಸ್‌ಡಬ್ಲ್ಯೂನಿಂದ ಸರ್ಕಾರಿ ಜಮೀನು ಒತ್ತುವರಿ ದೃಢಪಡಿಸಿದ ಪರಿಶೀಲನಾ ತಂಡ; ಅಂದಾಜು ಸಮಿತಿಗೆ ಕಂದಾಯ ಇಲಾಖೆ ವರದಿ, ಒತ್ತುವರಿ ತೆರವುಗೊಂಡಿದೆಯೇ?

ಬೆಂಗಳೂರು; ಜೆಎಸ್‌ಡಬ್ಲ್ಯೂ ಲಿಮಿಟೆಡ್‌ ಬಳ್ಳಾರಿಯ ವಿವಿಧೆಡೆ   ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ...

120 ಎಕರೆ ಅರಣ್ಯ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್‌; ಕಂದಾಯ ಇಲಾಖೆ ನಡೆಸಿರುವ ಸಭೆಯ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ!

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ...

21 ಪ್ಯಾಕೇಜ್‌ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪ; ಅಂಜುಂ ಪರ್ವೇಝ್ ಸಮಿತಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು; ಹಸಿ ತ್ಯಾಜ್ಯ, ಒಣ ತಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ,...

Related Articles

Popular Categories

error: Content is protected !!